ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ”
ಕಾವ್ಯ ಸಂಗಾತಿ ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ” ಒಮ್ಮೆ ಎಳ್ಳು ಒಮ್ಮೆ ಬೆಲ್ಲಬದುಕಿದು ನೋವು ನಲಿವುಗಳ ಸಂಕ್ರಮಣ ಇಲ್ಲಿ ಬೇಲಿ ಅಲ್ಲಿ ಹಾದಿಬದುಕಿದು ಪಥ ಬದಲಿಸುವ ರಥಸಪ್ತಮಿ ನಿನ್ನೆ ಶಿಶಿರ ಎಂದು ವಸಂತಬದುಕಿದು ಹಲವು ಋತುಗಳಲ್ಲಿ ಪರಿಭ್ರಮಣ ಮುಳುಗುವ ಸೂರ್ಯ ಹೊತ್ತುವ ದೀಪಬದುಕಿದು ಕತ್ತಲೆ ಬೆಳಕಿನ ನಡುವಿನ ಆವರ್ತನ ಅಲ್ಪ ಸುಖ ಸಾಕಷ್ಟು ಕಷ್ಟಬದುಕಿದು ಸಮ್ಮಿಶ್ರ ನಗರ ಸಂಕಲನ ಸಾಸಿವೆಯಷ್ಟು ನಗು ಸಾಗರದಷ್ಟು ಅಳು ಬದುಕಿದು ಪ್ರತಿಪಕ್ಷ ಹೊಂದಾಣಿಕೆಯ ಹೂರಣ ಆ ಕಣಿವೆ ಈ ಬೆಟ್ಟಬದುಕಿದು ದಿನನಿತ್ಯ ಇಳಿದೇರುವ ಚಾರಣ ಒಮ್ಮೆ ಜನನ ಒಮ್ಮೆ ಮರಣಬದುಕಿದು ವಿಧಿ ವಿಲಾಸದ ಸಂಕೀರ್ತನ ದಾಕ್ಷಾಯಣಿ ಶಂಕರ ಹುಣಶ್ಯಾಳ
ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ” Read Post »









