ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸತೀಶ್ ಬಿಳಿಯೂರು “ನನ್ನೊಲವಿನ ಪಯಣ”

ಕಾವ್ಯ ಸಂಗಾತಿ ಸತೀಶ್ ಬಿಳಿಯೂರು “ನನ್ನೊಲವಿನ ಪಯಣ” ಸನಿಹ ಬಾ ಮೌನವೆಲ್ಲ ತೊರೆದುಭಾವಗಳ ಪಥವನ್ನು ತುಳಿದುಒಲವಲ್ಲಿ ನಗುವನ್ನು ಕರೆದುಒಡಲನ್ನು ಸೇರು ಬಂಧ ಬೆಸೆದು ಬದುಕೊಳಗೆ ನೀನಿರಬೇಕು ಒಲವೆಹೃದಯದ ಕದ ತಟ್ಟು ಬೇಗ ಚೆಲುವೆತವಕಿಸುತಿಹುದು ಈ ನನ್ನ ಮನವೆಬಾಗಿಲಲ್ಲಿ ಕಾದು ನಿಂತಿಹೆನು ನೀ ನನ್ನ ಜಗವೆ ಕಣ್ಣ ಅಪ್ಪುವ ಕನಸುಗಳು ಬಳಿಯಿರಲುಆಸೆ ಬಯಕೆ ನಿತ್ಯ ಜೊತೆಯಿರಲುಇನ್ನೂ ಎಷ್ಟು ದಿನ ನೀನೊಂದು ತೀರದೇವರೇ ಗೀಚಿದ ಸಂಬಂಧವೇ ಸುಮಧುರ ನಮ್ಮಿಬ್ಬರ ಬಾಳ ಪಯಣ ಹೊರಡಲಿಸಂತೋಷ ತುಂಬಿರೋ ದಾರಿಯಲಿನನಸಿನ ರಥ ಮುಂದೆ ಮುಂದೆ ಸಾಗಲಿಎಡವದಿರುವ ಜೀವನದ ಪಥದಲಿ ಸತೀಶ್ ಬಿಳಿಯೂರು

ಸತೀಶ್ ಬಿಳಿಯೂರು “ನನ್ನೊಲವಿನ ಪಯಣ” Read Post »

ಕಾವ್ಯಯಾನ

ಪೂರ್ಣಿಮಾ ಸಾಲೆತ್ತೂರು ಅವರಕವಿತೆ ” ದೀಪ”

ಕಾವ್ಯ ಸಂಗಾತಿ ಪೂರ್ಣಿಮಾ ಸಾಲೆತ್ತೂರು ” ದೀಪ”  ಹಬ್ಬದಲಿ ಹಚ್ಚೋಣ ಸಾಲು ದೀಪವ ಕವಿದ ಕತ್ತಲೆಯ ಓಡಿಸುವ ಜಗದ ರೂಪವ ದ್ವೇಷ ಅಸೂಯೆಯ ಉರಿಸುತ ತೋರಿಸೋಣ ಸಹಸ್ಪಂದನದ ಸಹಮತ  ಆಗಲಿ ನಿರಾಸೆಯ ಬಾಳಿಗೆ ಆಶಾದೀಪ ಬೆಳಗಿಸೋಣ ಬಾಳಲಿ ಸದ್ಗುಣಗಳ ಹೊಳಪ ಬಾಳ ಬಾಂದಳದಿ ಬೆಸೆಯಲಿ ಸೌಹಾರ್ದ ಭಾವ ಹೆಗಲಿಗೆ ಹೆಗಲು ಕೊಟ್ಟು ಮರೆಯೋಣ ನೋವ  ಅಜ್ಞಾನದ ಕತ್ತಲು ಕಳೆಯಲಿ ಮನದ ಕೊಳೆಯು ತೊಳೆದು ಹೋಗಲಿ ದೀಪವಾಗಿ ಹೊಳೆವ ಬೆಳಕಿನ ರೂಪ ಪ್ರತಿದಿನ ಹಚ್ಚೋಣ ನಂದಾದೀಪ ಪೂರ್ಣಿಮಾ ಸಾಲೆತ್ತೂರು

ಪೂರ್ಣಿಮಾ ಸಾಲೆತ್ತೂರು ಅವರಕವಿತೆ ” ದೀಪ” Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಗಜಲ್ (ಮಧುಸೂದನ್ ಸರ್ ಅವರ “ಖಾಲಿ ಮಾತಿನ ಜೋಳಿಗೆ” ಸಾಲಿನಿಂದ ಪ್ರೇರಿತ)ಭಾವನೆಗಳಿಲ್ಲದ ಮಾತಿನ ಜೋಳಿಗೆಜೊಳ್ಳಾದ ನಿನ್ನ ಮನಸಿನ ಜೋಳಿಗೆ ಪ್ರೀತಿಯೂ ನೀಡದ ಬಡತನ ನಿನಗೆಕರಗದೆದೆಯು ಕಡುಗಪ್ಪಿನ ಜೋಳಿಗೆ ಸಿರಿತನವಿಲ್ಲದ ಮನೆಗೆ ನೀ ಒಡೆಯನಗುವೂ ನೀಡದ ನಿನ್ನೆನಪಿನ ಜೋಳಿಗೆ ಅದೆಂತಹ ಬರಡು ಭೂಮಿ ನೀನುತೃಷೆಗೂ ಬರಗಾಲ ನಿನ್ನಿಲುವಿನ ಜೋಳಿಗೆ  ಬಾಳು ಬರಿದಾಗಿಸಿಕೊಂಡಳು ನಿನಗಾಗಿ ವಾಣಿಆದರೂ ಜಿನುಗದ ನಿನ್ನೊಲವಿನ ಜೋಳಿಗೆ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ಸುಮಾ ಗಾಜರೆ ಅವರ ಕವಿತೆ “ತಿಳಿಯಬೇಕಿದೆ  ಇನ್ನೂನು!”

ಕಾವ್ಯ ಸಂಗಾತಿ ಸುಮಾ ಗಾಜರೆ “ತಿಳಿಯಬೇಕಿದೆ  ಇನ್ನೂನು!”     ಹೇಳಬೇಕಿದೆ ಮನಕೆ ಇನ್ನೇನೋ ತಿಳಿಯಬೇಕಿದೆ ನನಗೆ ಇನ್ನೂನು ll ಕಾಪಿಟ್ಟ ಕನಸುಗಳಲಿಕರಗಿ ಹೋಗುವ ಮುನ್ನಬರುವ ನಾಳೆಗಳಲಿಕಳೆದು ಜಾರುವ ಮುನ್ನಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಉಸಿರಿಗೆ ಹಸಿರಾಗಿಹಚ್ಚ ಹಸಿರಾಗುವಂತೆಜೀವಕ್ಕೆ ಸೆಲೆಯಾಗಿಒಲವ ಒರತೆಯಂತೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಎಲ್ಲ ಇಲ್ಲಗಳ ಸರಿಸಿಇರುವುದನ್ನೇ ಸಂಭ್ರಮಿಸಿನೋವು ನೀಗಿಸಿ ನಲಿವ ಸುರಿಸಿಅಡಿಗಡಿಗು ದುಡಿವ ಮನಗಳಿಗೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಬೇಕುಗಳ ಬೆನ್ನೇರಿ ಭ್ರಮೆಯಲಿಬಂಧಿಯಾಗಿ ಇರುವನ್ನೆ ಮರೆತುನೆಮ್ಮದಿಗಾಗಿ ನಗುವ ತೊರೆದುಹೆಜ್ಜೆಗುರುತು ಹುಡುಕುವ ಹೃದಯಗಳಿಗೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಆಂತರ್ಯವರಿತ ಮನಕೆ ಗೊತ್ತುಪ್ರೀತಿಯೊಂದು ಹವಳದಾ ಮುತ್ತುಹೊಕ್ಕು ತಿಳಿದವರಿಗಷ್ಟೇ ಸಿಕ್ಕೀತುಒಲವೆಂದು ಪೂಜಿಸಿದವರಿಗದು ದಕ್ಕೀತುಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll      ಸುಮಾ ಗಾಜರೆ     

ಸುಮಾ ಗಾಜರೆ ಅವರ ಕವಿತೆ “ತಿಳಿಯಬೇಕಿದೆ  ಇನ್ನೂನು!” Read Post »

ಕಾವ್ಯಯಾನ

ರಾಶೇ ಬೆಂಗಳೂರು-“ಹಕ್ಕಿ ಹಾಡುತಿದೆ”

ಕಾವ್ಯ ಸಂಗಾತಿ ರಾಶೇ ಬೆಂಗಳೂರು- “ಹಕ್ಕಿ ಹಾಡುತಿದೆ” ಅದೇನು ಜಾನಪದವೋಗೀಗಿ ಪದಗಳ ಪುಂಜವೋಸರ್ವಜ್ಞನ ತತ್ವ ಪದವೋನಾ ಹಕ್ಕಿ ಹಾಡುತಿರುವೆ.. ಅಲ್ಲೊಂದು ಗ್ರಾಸವಿದೆಸುಜ್ಞಾನದ ಸೋಜಿಗವಿದೆಅಜ್ಞಾನದ ವಿಷಾದವಿದೆ ಆದರು ನಾ  ಹಾಡುತಿರುವೆ.. ನನ್ನ ಮೇಲೆ ದ್ವೇಷವಿದೆಮನುಜ ಸ್ವಾರ್ಥಕ್ಕೆ ಕೋಪವಿದೆನನ್ನ ಗೂಡ ರಕ್ಷಿಸಕೊಳ್ಳಬೇಕಿದೆಆದರು ಹಾಡಲೇನಿದೆ.. ಆಶ್ರಯಕಾಗಿ ಅಲೆವ ಗುಬ್ಬಿ ನಾಸ್ವಾರ್ಥವಿಲ್ಲದ ಜೀವ ನಾಭುವಿ ಮೇಲಿನ ಸಣ್ಣ ಹನಿ ನಾಆದರೂ ಹಾಡುತಲೇ ಇರುವೆ.. ————- ರಾಶೇಬೆಂಗಳೂರು

ರಾಶೇ ಬೆಂಗಳೂರು-“ಹಕ್ಕಿ ಹಾಡುತಿದೆ” Read Post »

ಕಾವ್ಯಯಾನ, ಗಝಲ್

ಸುಧಾ ಪಾಟೀಲ್‌ ಅವರ ಗಜಲ್

ಕಾವ್ಯ ಸಂಗಾತಿ ಸುಧಾ ಪಾಟೀಲ್‌ ಗಜಲ್ ಬದಲಾವಣೆಯ ದಾರಿಯನ್ನು ಹುಡುಕಾಡಿದೆ ನಾನುನನ್ನಲ್ಲಿನ  ಬೆಳಕನ್ನು ಹುಡುಕಾಡಿದೆ ನಾನು ಯಶಸ್ಸು  ಸಿಗುವುದು ಅಷ್ಟು ಸುಲಭವಲ್ಲ  ನೋಡು ಅವಿರತವಾಗಿ ಶ್ರದ್ಧೆಯ  ಏಣಿಯನ್ನು ಹುಡುಕಾಡಿದೆ ನಾನು ಏರಿಳಿತಗಳ ಜೀವನದಲ್ಲಿ  ನೆಮ್ಮದಿಯ  ಅರಸಿದೆಭಾವ ಭಕ್ತಿಯ ನೆಲೆಯನ್ನು ಹುಡುಕಾಡಿದೆ ನಾನು ಗೊತ್ತಿದ್ದೂ  ತಪ್ಪು ಮಾಡುವವವರ  ಕಂಡು ಮರುಗಿದೆನನ್ನಲ್ಲಿನ ಅವಗುಣಗಳ ಸುಧಾರಿಸುವ ಮಾರ್ಗವನ್ನು ಹುಡುಕಾಡಿದೆ ನಾನು ಭಾವಗಳ ಜೊತೆ ಈಜುವುದ ತೊರೆದೆಸುಧೆಯ ಅಸ್ತಿತ್ವದ ಗಟ್ಟಿತನವನ್ನು  ಹುಡುಕಾಡಿದೆ ನಾನು ———-ಸುಧಾ  ಪಾಟೀಲ

ಸುಧಾ ಪಾಟೀಲ್‌ ಅವರ ಗಜಲ್ Read Post »

ಕಾವ್ಯಯಾನ

“ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಕಾವ್ಯ ಸಂಗಾತಿ “ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಒಬ್ಬ ಬಡವನ ಮನೆ ಮುಂದೆನಾನು-ಕಿರಿ ಕಿರಿ ಮಾಡಿದೆಅವನ ಹಸಿವಿನ ಶಾಪವುಲಂಚದ ರೂಪವುನನ್ನ ಕೈಸೇರಿತು ಯಾರದೋಬೆವರಿನ ಹಣಬೇಕರಿಯ ಮುಂದೆ ಕುಳಿತುಬನ್ನು ತಿನ್ನುತ್ತಿದ್ದೆಹಸಿದ ನಾಯಿಯೊಂದುಜೊಲ್ಲು ಸುರಿಸಿನೋಡುತ್ತಿತ್ತುಒಂದು ತುಂಡು ಬನ್ನು ಎಸೆದೆಗಬಕ್ಕನೆ ನುಂಗಿಬಾಲ ಅಲ್ಲಾಡಿಸಿತುಮತ್ತೊಂದು ತುಣುಕು ಹಾಕಿದೆಅದು-ಚಿರಪರಿಚಿತನಂತೆ ಹತ್ತಿರಬಂದುನನ್ನ ಕಾಲು ಮೂಸಿತುನನಗನಿಸಿತು….ನಾಯಿ ಪ್ರಾಣಿ ಹಸಿದುಮೂಕ ಭಾಷೆಯಲಿಬೇಡುತಿದೆಅದರ ತಪ್ಪಲ್ಲನಾನು ಮಾತ್ರ ಎಲ್ಲವೂಇದ್ದೂಕಸಿದುಕೊಳ್ಳುವಒಬ್ಬ ಭಿಕ್ಷುಕನೆ! ಯಾರಿಂದಲೋ ಪಡೆದೆಅವರ ದುಡಿಮೆಯ  ಹಂಗುಯಾರಿಗೂ ನೀಡದೆಮನೆಗೆ ನಡೆದೆ ಹಿಂದೆ ತಿರುಗಿದೆಅದೇ ನಾಯಿ ಬೆನ್ನ ಹಿಂದೆಎಂತಹ ಕಕ್ಕುಲಾತಿ ಅದಕೆ?ಮತ್ತೆ ಬಾಲ ಅಲ್ಲಾಡಿಸಿತುಮೈಯ ಸವರಿದೆ ಅಂದಿನಿಂದ ಇಂದಿಗೂಎನ್ನ ಮನೆಯ ಕಾಯುತಿದೆತಿಂದ ಒಂದೇ ಅಗುಳಿಗೆತುತ್ತಿನ ಋಣ ತೀರಿಸಲು ಆದರೆ…….?ಈ ನರ ಪ್ರಾಣಿಯಾದ ನಾನುಯಾವ ಋಣವೂತೀರಿಸದೆಮಹಾ ಭಿಕ್ಷುಕ! ಆ ನಾಯಿಗಿರುವ ನಿಯತ್ತು ನನಗಿಲ್ಲಬಿಸಾಡಿದ ಬನ್ನುನನ್ನಲ್ಲದಿದ್ದರೂಅದು ಸಲ್ಲಿಸಿದಕೃತಜ್ಞತೆ ಮಾತ್ರಪರಮ ಸತ್ಯ ಕೊಟ್ಟವನು ಬಡವನಾದರೂಅವನೇ ಸಹೃದಯಿಶ್ರೀಮಂತತಿಂದವನು ನಾನಾದರೂನಾನಿಲ್ಲಿ ಬೇಡಿದವ ಅಯ್ಯೋವಿಪರ್ಯಾಸವೆ……ನಾಯಿಯೇ ಮೇಲುನರನಾಗಿನಾನೇ ಮಹಾ ಬಿಕ್ಷುಕ ————-ಶರಣಪ್ಪ ತಳ್ಳಿ ಕುಪ್ಪಿಗುಡ್ಡ

“ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ Read Post »

ಕಾವ್ಯಯಾನ

ಸರಸ್ವತಿ ಕೆ ನಾಗರಾಜ್ ಕವಿತೆ “ನಗುವವನು”

ಕಾವ್ಯ ಸಂಗಾತಿ ಸರಸ್ವತಿ ಕೆ ನಾಗರಾಜ್ “ನಗುವವನು” ಮೌನದಲ್ಲೇ ಅನೇಕಯುದ್ಧಗಳನ್ನು ಸೋಲಿಸಿ,ತನ್ನೊಳಗಿನ ಭರವಸೆಯನ್ನು ಕಾಪಾಡಿಕೊಂಡು,ವಿಫಲತೆಯ ನೆರಳಲ್ಲೂಬೆಳಕನ್ನು ಹುಡುಕಿ ನಗುವನ್ನೇಆಯುಧವನ್ನಾಗಿಸಿಕೊಂಡವನು. ಬದುಕು ಎಷ್ಟೇ ಪರೀಕ್ಷಿಸಿದರೂಅವನ ಮನಸ್ಸು ಸೋಲನ್ನು ಒಪ್ಪಲಿಲ್ಲ.ನಗುವಿನ ಹಿಂದೆ ಇರುವ ಸ್ಥೈರ್ಯವೇಅವನ ಅಸ್ತಿತ್ವದ ನಿಜವಾದ ಶಕ್ತಿ. ಪರಿಸ್ಥಿತಿಗಳು ಎಷ್ಟೇಬಿರುಗಾಳಿಯಾಗಿ ಬೀಸಿದರೂಅವನು ತನ್ನ ಆತ್ಮದ ದಿಕ್ಕು ತಪ್ಪಿಸಲಿಲ್ಲ.ಬಿದ್ದ ಜಾಗದಲ್ಲೇ ಪಾಠ ಕಲಿತುಮತ್ತೆ ನಿಂತು ನಡೆಯುವ ಧೈರ್ಯ ಅವನದು.ಅವನ ನಗು ಮೋಸವಲ್ಲ,ಅದು ಬದುಕಿಗೆ ನೀಡಿದ ಸವಾಲು. ನೋವನ್ನೇ ನೆಲೆಯಾಗಿ ಮಾಡಿಕೊಂಡುಆಸೆಯನ್ನು ಅರಳಿಸಿದ ಕಡಲು ಅವನು.ಅಲೆಗಳು ಎಷ್ಟೇ ಅಪ್ಪಳಿಸಿದರೂಆಳದಲ್ಲಿ ಶಾಂತಿಯನ್ನು ಕಾಪಾಡುವವನು. ——— ಸರಸ್ವತಿ ಕೆ ನಾಗರಾಜ್

ಸರಸ್ವತಿ ಕೆ ನಾಗರಾಜ್ ಕವಿತೆ “ನಗುವವನು” Read Post »

ಕಾವ್ಯಯಾನ

“ಸ್ನೇಹದ ಕಡಲು”  ವಿಜಯಲಕ್ಷ್ಮಿ ಹಂಗರಗಿ

ಕಾವ್ಯ ಸಂಗಾತಿ  ವಿಜಯಲಕ್ಷ್ಮಿ ಹಂಗರಗಿ ಸ್ನೇಹದ ಕಡಲು ಹಲವು ನದಿಗಳು ನಿನ್ನೊಂದಿಗೆ ಬೆರೆತಿವೆವೈವಿಧ್ಯಮಯ ಜೀವರಾಶಿ ಒಡಲೊಳಗೆ ಅಚ್ಚರಿಯಜೀವ ರಾಶಿ ಅಡಗಿದೆನೀನಲ್ಲವೇ ಸ್ನೇಹ ಕಡಲು ಒಲವಿನ ಒಡಲು // ಮನುಷ್ಯನೊಂದಿಗೆ ಅವಿನಾಭಾವ ಸಂಬಂಧನೀನಿಲ್ಲದೆ ಬದುಕಿಲ್ಲ ವೈವಿಧ್ಯಮಯ ಮೀನುಗಳುನಿನ್ನ ಉದರದಲ್ಲಿ ಅಡಗಿವೆ ನೀನೊಂದು ಅದ್ಭುತಅವಿಸ್ಮರಣೀಯತಾಣ!ಜನಮಾನಸದಲ್ಲಿಉಳಿಯುವ ಸಂಭ್ರಮದ ಕ್ಷಣ… ಬಣ್ಣ ಬಣ್ಣದ ಸುಂದರ ಮೀನುಗಳು, ಸಸ್ತನಿಚಿಕ್ಕ- ದೊಡ್ಡ , ಉದ್ದಗಲ ಬೃಹಕಾರದ ಜಲಚರಗಳುಹವಳ ಮುತ್ತುಗಳರಾಶಿ ಸುರಿದಿದೆ ಅಂಗಳದಲ್ಲಿ ಆಡಿನಲಿವ ಹೂ… ಮೊಸಳೆ ತಿಮಿಂಗಿಲಗಲಿಗಿಲ್ಲ ಭಯ!ನಿನ್ನ ಹೃದಯದಲ್ಲಿ ಆಡುವ ಅಪೂರ್ವ ಜೀವರಾಶಿಗಳು ಆಳಕ್ಕೆ ಹೋದಂತೆಲ್ಲ ಕುತೂಹಲ ಅಗೋಚರ ಜಲಚರಗಳು ಅವುಗಳ ಅಡಿಯಲ್ಲಿ ಅನೇಕ ಬಗೆಯ ಸಸ್ತನಿಗಳು ಕಣ್ಮನ ಸೆಳೆಯುವ ಅಂದಮಾನವ ಸ್ನೇಹಿ ಕಡಲು… ನಿನ್ನ ಏರಿಳಿತ ಕುಣಿತ ನೋಡಲೇಷ್ಟು ಚಂದ ಸುಂದರ ಸಂಜೆ ಸಮಯ ನಿನ್ನ ಅಬ್ಬರ ಹೇಳತಿರದು, ಹುಣ್ಣಿಮೆಯ ದಿನವಂತೂ ನಿನ್ನ ನೋಡಲು ಸಾಗರೋಪಾದಿಯಲ್ಲಿ ಬರುವರು ಜನಅನತಿ ದೂರದಿಂದ ಬರುವ ನಿನ್ನ ಅಲೆಗಳೊಂದಿಗೆ ಚೆಲ್ಲಾಟ… ಆಡುವ ಮಕ್ಕಳು ಯುವ ಪ್ರೇಮಿಗಳು ವೃದ್ಧರು ಕೈ ಕಾಲು ಬಡಿಯುತ್ತಾಬಡಿತದ ರಬಸಕ್ಕೆ ನೀರು ಮುತ್ತಿನಂತೆ ಮುತ್ತನ್ನು ಚೆಲ್ಲಿದಂತೆ ಸಾಗರಕ್ಕೆ ಬೀಳುವ ಆ ಮನೋಹರ ದೃಶ್ಯ ಕಣ್ಮನ ತುಂಬಲು ಹರುಷ …. ಸೂರ್ಯೋದಯ, ಸೂರ್ಯಾಸ್ತದಿ ಕೆಂಪು ದೀಪ ಉರಿದಂತೆ ಬಂಗಾರದ ನೇಸರ ಹರಡಿದಂತೆ ಚೆಲುವಿನ ಚಿತ್ತಾರ ನಯನ ಮನೋಹರ ನೋಟ ಪ್ರೇಮಿಗಳ ಸ್ನೇಹ ಕಡಲು ನೀನು… ಎತ್ತ ನೋಡಿದತ್ತ ನೀರೇ ನೀರು ಮುಗಿಲು ಭೂಮಿ ಕೂಡಿದಂತೆ ನೋಟ ಅಲ್ಲಲ್ಲಿ ಗಿಡಗಳಿಂದ ಆವರಿಸಿದ ದ್ವೀಪಗಳು ಹಡಗು ಬೊಟಿನಲ್ಲಿ ರಮ್ಯ ಸ್ಥಾನಗಳ ವೀಕ್ಷಿಸಲು ಪಯಣ… ಕಡಲ ತಟದಿ ಎತ್ತರದ ತೆಂಗಿನ ಮರ, ವಿಲ್ಲಾಗಳು ಸುಂದರ ಸೊಬಗುಸಾಗರ ತಟದಲ್ಲಿ ಹರಡಿರುವ ಮರಳು ಅಲ್ಲಲ್ಲಿ ಶಂಖ ಚಿಪ್ಪುಗಳ ಬಣ್ಣ ಬಣ್ಣದ ಸುಂದರ ಕಲ್ಲುಗಳ ಮಧ್ಯೆ ಬರಿಗಾಲಿನದಿ ನಡೆದಾಡುವ ಹೆಜ್ಜೆಯ ಗುರುತು ಅಬ್ಬ ಎಂಥಹ ಸುಂದರ ನೋಟ … ಮೀನುಗಾರರಿಗೆ ಅಲ್ಲಿಯ ನಿವಾಸಿಗಳಿಗೆ ನೀನು ಕೊಟ್ಟಿರುವ ಈ ಬದುಕುನೀನಿರದಿದ್ದರೆ ಅವರದು ಬವಣೆ ಊಹಿಸಲು ಅಸಾಧ್ಯ!ಜೀವನಕ್ಕೆ ಜೀವ ಕೊಟ್ಟ ನಿಧಿ ನೀನುಸ್ನೇಹದ ಕಡಲು ನೀನು… ನೀ ಮುನಿಯಲು ಸುನಾಮಿ ಸಂಕಟ ಮುಗಿಲೆತ್ತರಕ್ಕೆ ಆರ್ಭಟ ಊರಿಗೆ ಊರು ಜಲ ಸಮಾಧಿ ಅರ್ಭಟಿಸುವೆಆರ್ಭಟಿಸಿ ಹುಟ್ಟಿಸದಿರು ದ್ವೇಷ ಕಳೆದು ಸ್ನೇಹ ಪ್ರೀತಿ ನೀಡು ಸಕಲ ಜೀವಕೆ ಜೀವಾತ್ಮ ನೀನೇ ಸ್ನೇಹದ ಕಡಲು… ಬಸವಾದೀಶರಣರಂತೆ ಶಾಂತ ಸಾಗರ ಜಗದ ನೋವನ್ನುಂಡು ಪ್ರಶಾಂತ ಮೆರೆದ ಕಡಲು, ಒಡಲು ನೀಏಕ ಚಿತ್ತದಿ, ಪ್ರಸನ್ನತೆಯಿಂದ ಕೂಡಿದ ಮಡಿಲು ನಿನ್ನದುನಿನ್ನಂತೆ ನಾನಾಗುವೆ ಸ್ನೇಹದ ಕಡಲು… ————- ವಿಜಯಲಕ್ಷ್ಮಿ ಹಂಗರಗಿ

“ಸ್ನೇಹದ ಕಡಲು”  ವಿಜಯಲಕ್ಷ್ಮಿ ಹಂಗರಗಿ Read Post »

ಕಾವ್ಯಯಾನ

“ನನ್ನವನ ಸ್ವಗತ, ನೀನಿಲ್ಲದೆ” ಡಾ.ಮೀನಾಕ್ಷಿ ಪಾಟೀಲ್

ಕಾವ್ಯ ಸಂಗಾತಿ “ನನ್ನವನ ಸ್ವಗತ, ನೀನಿಲ್ಲದೆ” ಡಾ.ಮೀನಾಕ್ಷಿ ಪಾಟೀಲ್ ನನ್ನವನ ಸ್ವಗತ ನೀನಿಲ್ಲದೆ….. ಏಳಬೇಕು ಎಬ್ಬಿಸಲು ನೀನಿಲ್ಲಅಲಾರಾಂ ಹೊಡೆದುಕೊಳ್ಳುತ್ತದೆಈಗ ನಿನಗೆ ನಾನೇ ಗತಿ ಏಳುತ್ತೇನೆ ಅಡುಗೆ ಮನೆ ಕಡೆ ನೋಡುತ್ತೇನೆ.ಬಳೆಗಳ ಸದ್ದಿಲ್ಲದೆ ಸುಮ್ಮನಾಗುತ್ತೇನೆಪೆದ್ದನಂತೆ ಬಿಸಿ ನೀರು ಕಷಾಯ ಕಾಫಿ ಕುದಿಸುವವರಿಲ್ಲನಾನೇ ಕುದಿಯುತ್ತೇನೆ ಒಮ್ಮೊಮ್ಮೆಎದುರಾಳಿ ನೀನಿಲ್ಲದೆ ಕಸಗುಡಿಸಿ ನೀರು ಚಿಮುಕಿಸುತ್ತೇನೆತಳಿವುಂಡ ಅಂಗಳ ಅಣಕಿಸುತ್ತದೆರಂಗೋಲಿ ಎಳೆಯುವ ನೀನಿಲ್ಲದೆ ಅಡುಗೆ ಮನೆಯೊಳಗೆ ಬರುತ್ತೇನೆಏನಾದರೊಂದನ್ನು ಬೇಯಿಸಿಕೊಳ್ಳಲೇಬೇಕುಹೊರಗಡೆ ಏನನ್ನು ತಿನ್ನುವ ಹಾಗಿಲ್ಲ ಮೂರು ಗೆರೆ ದಾಟಲಾರದ ಸಂಕಟಕೈಸುಟ್ಟುಕೊಳ್ಳುವುದುಅನಿವಾರ್ಯ ನಾನು ನಳನಂತೆ ಅಲ್ಲದಿದ್ದರೂ ಒಲೆಯ ಮೇಲಿಟ್ಟ ಹಾಲು ಉಕ್ಕದಂತೆಮಾಡಲಿಟ್ಟ ಉಪ್ಪಿಟ್ಟು ತಳ ಹತ್ತದಂತೆನೋಡಿಕೊಳ್ಳಬೇಕು ಮೈ ತುಂಬಾ ಕಣ್ಣಾಗಿ ಸ್ನಾನಕ್ಕೆ ಬಿಟ್ಟುಕೊಂಡ ಬಿಸಿನೀರುತುಂಬಿ ಹೊರ ಚೆಲ್ಲುತ್ತದೆಗ್ಯಾಸ್ ವೇಸ್ಟ್ ಆಗುತ್ತೆ ಎಂದು ಮಕ್ಕಳಿಗೆ ಬಯ್ಯುವನಾನು ಈಗ ಅವಳಿಲ್ಲದೆ ನಾನೇ ಮಗುವಾಗಿದ್ದೇನೆ ಏನೊಂದು ತೋಚದು ಅವಸರದಲ್ಲಿಟಿಫಿನ್ ಬಾಕ್ಸ್ ಸಿದ್ಧಗೊಳಿಸಿಕೊಳ್ಳುವುದುದೊಡ್ಡ ಯುದ್ದದಿನವೂ ಅವಳ ಮೆನು ಮೆಸೇಜ್ನೋಡಿ ಸಾಕಾಗಿ ಬಿಟ್ಟಿದೆ ಸ್ವೀಟ್ ಅಂತೆ ಹಣ್ಣಂತೆ ಕಾಳುಗಳಂತೆಮತ್ತೆ ಮೇಲೆ ಟಿಫನ್ ಅಂತೆಅಯ್ಯೋ…. ಯಾಕಾದರೂಹೋದಳೊ ಇವಳು ಊರಿಗೆ ಏನಾದರೊಂದು  ಮರೆಯುತ್ತೇನೆಗಡಿಬಿಡಿಯಲ್ಲಿ ಪುಸ್ತಕ ಪೆನ್ನು ಡೈರಿಒಮ್ಮೊಮ್ಮೆ ಮೊಬೈಲ್ ಬೈಕ್ ಕೀ ಮತ್ತೆ ಒಳಗೆ ಬರುತ್ತೇನೆಹಿಂಬಾಗಿಲು ಮುಂಭಾಗಲುಲಾಕ್ ಮಾಡಿದ್ದೇನೊ ಇಲ್ಲವೋಎನ್ನುವ ಸಂಶಯ ಹೀಗೆ …. ಅವಳು ಹೋದಾಗಿನಿಂದದಿನಚರಿಯ ದಿಕ್ಕು ತಪ್ಪಿದೆ ————– ಡಾ. ಮೀನಾಕ್ಷಿ ಪಾಟೀಲ್

“ನನ್ನವನ ಸ್ವಗತ, ನೀನಿಲ್ಲದೆ” ಡಾ.ಮೀನಾಕ್ಷಿ ಪಾಟೀಲ್ Read Post »

You cannot copy content of this page

Scroll to Top