ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಸುಕನಸು-ಗಜಲ್

ಕಾವ್ಯ ಸಂಗಾತಿ ಗಜಲ್ ಸುಕನಸು ಅಕ್ಕರೆಯ ಸಕ್ಕರೆ ಬೊಂಬೆಯವನುಮುದ್ದಿನ ಮುತ್ತಿನ ಕಣ್ಮಣಿಯವನು ಜೊತೆಯಲಿರೆ ಸಗ್ಗಕೆ ದಾರಿಯವನುಜೀವಕೆ ಜೀವ ಸಂಜೀವಿನಿಯವನು ಕೋಪದಲಿ ಪುಟಾಣಿ ಕಂದನವನುನಕಲಿ ನಟರ ನಂಬುವ ಮುಗ್ಧನವನು ಸಂಬಂಧದಲಿ ತ್ಯಾಗಿ ಕರ್ಣನವನುಪ್ರಣಯದಲಿ ಮನ್ಮಥ ರಸಿಕನವನು ಬರಹದಲಿ ಸರಸ್ವತಿಯ ಪುತ್ರನವನುಸುಮಾಳ ಬಾಳಿಗೆ ಭಗವಂತನವನು

ಸುಕನಸು-ಗಜಲ್ Read Post »

ಕಾವ್ಯ ದರ್ಪಣ, ಗಝಲ್

ಗಜಲ್ ಜುಗಲ್ ಬಂದಿ

ತರಹೀ ಗಜಲ್ : ನಯನ. ಜಿ. ಎಸ್ ಅವರ ಊಲಾ ಮಿಸ್ರಾ”

ಅವರಿವರನ್ನು ಜರೆಯುತ್ತಾ ನಾಳೆಗಳ ಭವ್ಯ ಸಾರವನ್ನು ಹಿಂಡುತ್ತಿದ್ದೇನೆ
ಅಗಮ್ಯವನ್ನು ನೆನೆಯುತ್ತಾ ಈ ಕ್ಷಣದ ನಲಿವನ್ನು ಕಳೆದುಕೊಳ್ಳುತ್ತಿದ್ದೇನೆ

ಅಲಕ್ಷಿಸುತ ಮುನ್ನಡೆಯಬೇಕು ಅನ್ಯರ ದೋಷಗಳನ್ನು ನಾವಿಲ್ಲಿ
ಅರಿವಿರದ ವ್ಯಾಜ್ಯಗಳ ಕಟಕಟೆಯಲ್ಲಿರಿಸಿ ಕಾಲವನ್ನು ವ್ಯಯಿಸುತ್ತಿದ್ದೇನೆ

ಅಂತರವನ್ನು ಬಯಸಿದವರ ಮನದಲ್ಲಿ ಆತ್ಮೀಯತೆಗೆಲ್ಲಿರುವುದು ಸ್ಥಾನ
ಎಳೆದು ಮುಚ್ಚಿದ ಕದದ ಬಳಿ ಕುಳಿತು ಭವಿಷ್ಯವನ್ನು ನಿರ್ಲಕ್ಷಿಸುತ್ತಿದ್ದೇನೆ

ಪ್ರಬುದ್ಧ ಮನದಲ್ಲಷ್ಟೇ ನಡೆಯುವುದು ನಿರ್ಲಿಪ್ತತೆಯಿಂದ ನಿದಿಧ್ಯಾಸನ
ಪ್ರಕ್ಷುಬ್ಧತೆಯ ಪರಾಕಾಷ್ಠೆಯಲ್ಲಿ ತಪಿಸುತ ಚಿತ್ತಸ್ವಾಸ್ಥ್ಯವನ್ನು ಸುಡುತ್ತಿದ್ದೇನೆ

ಉಡಿಯೊಳಗೆ ಇರಿಸಿದ ಇಂಗಳವದು ದಹಿಸದಿರುವುದೇ ಒಳಗೊಳಗೆ
ಹುಚ್ಚು ಮನಸ್ಸಿನ ಹೊಯ್ದಾಟದಲ್ಲಿ ‘ವಿಜಯ’ವನ್ನು ವರ್ಜಿಸುತ್ತಿದ್ದೇನೆ.
ವಿಜಯಪ್ರಕಾಶ್. ಕೆ

ಗಜಲ್ ಜುಗಲ್ ಬಂದಿ Read Post »

You cannot copy content of this page

Scroll to Top