ಮಾಜಾನ್ ಮಸ್ಕಿಯವರ ಗಜಲ್

ಕಾವ್ಯಸಂಗಾತಿ

ಮಾಜಾನ್ ಮಸ್ಕಿಯವರ ಗಜಲ್

ಕಡಲಾಚೆಯ ಜೀವಕ್ಕೆ ಭೇಟಿಯಾಗಬೇಕೆಂದು ಬಯಸುತ್ತಿದೆ ಜೀವ
ಹಿಮಾಲಯ ಪರ್ವತ ಹತ್ತಿ ನೋಡಬೇಕೆಂದು ತವಕಿಸುತ್ತಿದೆ ಜೀವ

ನೋಟಕ್ಕೆ ನಿಲುಕದ ನಿನ್ನ ರೂಪ ಕಣ್ಣೆದೆಯಲ್ಲಿ ಅಚ್ಚಾಗಿ ಉಳಿದಿದೆ
ನೆನಪಾದಾಗಲೆಲ್ಲ ನಿನ್ನೊಳು ಸೇರಬೇಕೆಂದು ಹವಣಿಸುತ್ತಿದೆ ಜೀವ

ಕಣ್ಣೆದೆಯ ಭಾಷೆಯೊಂದೇ ಮಾತಿನ ವಾಹಿನಿ ಅಲ್ಲವೇ ಅಲ್ಲ ಇನಿಯಾ
ತರಂಗಗಳಲ್ಲಿ ತೇಲಿ ನಿನ್ನಲ್ಲಿ ಕರಗಬೇಕೆಂದು ಹಂಬಲಿಸುತ್ತಿದೆ ಜೀವ

ಅಮಾವಾಸ್ಯೆಯ ಕತ್ತಲೆಯನ್ನು ಬೆಳದಿಂಗಳಾಗಿಸುವ ಹುಚ್ಚಾಸೆ ನನಗೆ
ಮನದೋಟದ ತಂಬೆಳಕಲ್ಲಿ ಸುತ್ತಾಡಬೇಕೆಂದು ಪ್ರೇರೆಪಿಸುತ್ತಿದೆ ಜೀವ

ನನಸಾಗದ ಮನಸಿನ ಕನಸುಗಳೆಂದು ಏಕೆ ಹಳಹಳಿಸುತ್ತಿರುವೆ “ಮಾಜಾ”
ನಂಬಿಕೆಯು ಕಾಲ ಕಳೆದಂತೆ ಪ್ರೀತಿ ಪಕ್ವವಾಗಬೇಕೆಂದು ಹೇಳುತ್ತಿದೆ ಜೀ


About The Author


Comments

Leave a Reply

You cannot copy content of this page