ಗಜಲ್
ಕಷ್ಟ ಕೋಟಲೆಗಳ ದಾಟಿ ಬಂದಿದ್ದೇನೆಂದು ತಿಳಿದಿರುವೆ
ರಪ್ ಎಂದು ಸಗ್ಗದ ತೆರೆದಿಟ್ಟ ಕದವು ಮುಚ್ಚುತ್ತದೆ
ತರಹಿ ಗಜಲ್ (ಮಿಶ್ರ: ಹೃದಯವನ್ನು ಓದಲು ಬರುವುದಿಲ್ಲ ನಿನಗೆ, ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ) ಅಭಿಷೇಕ ಬಳೆ ಮಸರಕಲ್ ಹೃದಯವನ್ನು ಓದಲು ಬರುವುದಿಲ್ಲ ನಿನಗೆಮನದ ಮಾತು ಕೇಳುವುದಿಲ್ಲ ನಿನಗೆ ಹೃದಯ ಅಗಣಿತ ನೋವುಗಳ ಕಣಜನೋವಿಗೆ ಕಣ್ಣೀರಾಗುವುದು ತಿಳಿದಿಲ್ಲ ನಿನಗೆ ಮೊದಲ ಕವಿತೆಗೆ ಕಿವಿಯಾಗದೆ ಹೋದೆಅಗಲಿಕೆಯ ವಿರಹ ಕಾಡುವುದಿಲ್ಲ ನಿನಗೆ ಕಣ್ಣಿನಲ್ಲೇ ಕನುಸಗಳ ಕಟ್ಟುತ್ತಲೇ ಇದ್ದೆನಾಳಿನ ಕನಸುಗಳು ಕಾಣುವುದಿಲ್ಲ ನಿನಗೆ ಎದೆಯ ಬಾಗಿಲಲ್ಲೇ ನಿಂತಿರುವೆ ಒಳಬರದೇಅಭಿಯ ಮನದ ನೋವು ಕೇಳಿಸುವುದಿಲ್ಲ ನಿನಗೆ
ಗಜಲ್ ಅರುಣಾ ನರೇಂದ್ರ ನಿನ್ನ ಕಿರು ನಗೆ ನನ್ನೊಂದಿಗೆ ಮುನಿಸಿಕೊಂಡಾಗ ನಾ ಯಾರಿಗೆ ಹೇಳಲಿತೋಳ ತಲೆದಿಂಬು ಸರಿಸಿ ಹೊರಳಿ ಮಲಗಿಕೊಂಡಾಗ ನಾ ಯಾರಿಗೆ ಹೇಳಲಿ ಮುತ್ತಿನಲಿ ಸಿಂಗರಿಸಿ ಮುಖ ನೋಡಿ ಹಿಗ್ಗುತ್ತಿದ್ದವನು ನೀನುಪ್ರೀತಿಯ ಕರೆ ಧ್ವನಿ ಕಳೆದುಕೊಂಡಾಗ ನಾ ಯಾರಿಗೆ ಹೇಳಲಿ ಹೂವಾಗುವ ಮೊಗ್ಗಿನ ನಿದ್ರೆಯಲಿ ಬರಿ ಚಿಟ್ಟೆಯದೇ ಕನಸುಸತ್ಯ ಮುಸುಕು ಹಾಕಿಕೊಂಡಾಗ ನಾ ಯಾರಿಗೆ ಹೇಳಲಿ ನದಿಯಾಗಿ ನಿನ್ನೆದೆಯೊಳಗೆ ಹರಿದ ಧನ್ಯತೆ ಇದೆ ಸಾಜನ್ಬೆಳಕನೆ ಕುಡಿದು ಮತ್ತೇರಿಸಿಕೊಂಡಾಗ ನಾ ಯಾರಿಗೆ ಹೇಳಲಿ ಮತ್ತೆ ಮತ್ತೆ ಸೋಲುತ್ತಾಳೆ ಅರುಣಾ ಸಹನೆ ಪರಕಿಸುವ ನಿನ್ನ ಸಾಹಸಕ್ಕೆಒಲವು ಮಿಡಿವ ಹೃದಯದಿ ಸೂತಕ ಆವರಿಸಿಕೊಂಡಾಗ ಯಾರಿಗೆ ಹೇಳಲಿ
ಗಜಲ್ ಡಾ.ಯ.ಮಾ.ಯಾಕೊಳ್ಳಿ ನನ್ನ ಮಾತುಗಳು ಇಲ್ಲಿ ಅರಿಯದೆ ಹೊಗುತ್ತಿರುವದಕ್ಕೆ ವಿಷಾದವಿದೆಪದದೊಳಗಿನ ಅರ್ಥವೇ ಅಪಾರ್ಥವಾಗಿ ತಿರುಗಿ ಬೀಳುತ್ತಿರುವದಕ್ಕೆ ವಿಷಾದವಿದೆ ಪುಸ್ತಕದ ಸಾಲುಗಳು ವೇದಿಕೆಯ ತುಣುಕುಗಳು ವ್ಯರ್ಥ ಹರಡುತ್ತಿವೆಯಾರ ಎದೆಗೂ ತಟ್ಟದೆ ಅಂತರವುಂಟಾದುದಕ್ಕೆ ವಿಷಾದವಿದೆ ಕಾಲಕಾಲಕ್ಕೂ ಜನಿಸಿದ ಸಂತ ಮಹಂತರ ಜೀವ ತತ್ವಗಾಳಿಗೆ ತೂರಿವೆತೋರಿಕೆಯ ಆಚರಣೆಗಳು ಅವರವರ ಪ್ರತಿಷ್ಟೆಯೆನಿಸಿದ್ದಕ್ಕೆ ವಿಷಾದವಿದೆ ಎದೆಯ ದನಿ ಯಾರಿಗೂ ಕೇಳದೆ ಗಡಚಿಕ್ಕುವ ಅಬ್ಬರದಲ್ಲಿ ಅನಾಥವಾಗಿದೆಕೋಗಿಲೆಯ ಮಧುರ ಹಾಡು ಮೆರವಣಿಗೆಯಲ್ಲಿ ಮೌನವಾದುದಕ್ಕೆ ವಿಷಾದವಿದೆ ಸಾವಿರ ಸಾವಿರ ಪುಸ್ತಕಗಳು ನಾಗೊಂದಿಯ ಮೇಲೆ ಮೌನವಾಗಿ ಅಳುತ್ತಿವೆಯಯಾ ನಿನ್ನ ಲಾಲಿಹಾಡು ನೊಂದ ಎದೆಗೆ ಸಾಂತ್ವನ ನೀಡ ದುದಕ್ಕೆ ವಿಷಾದವಿದೆ
ಗಝಲ್ ಶಂಕರಾನಂದ ಹೆಬ್ಬಾಳ ಗುಡಿಯೊಳಗೆ ಕಲ್ಲಾಗಿರುವೆ ದೇವಬತ್ತಳಿಕೆಯಲಿ ಬಿಲ್ಲಾಗಿರುವೆ ದೇವ ಅರಿವಿರದ ಜನ್ಮಕ್ಕೆ ಅನುಭವ ತಂದೆಹಸಿರ ಸೂಸುವ ಹುಲ್ಲಾಗಿರುವೆ ದೇವ ಆತ್ಮಸ್ತೈರ್ಯವ ತುಂಬುತಿರುವೆಯಲ್ಲಅಳುವ ಕಂದನ ಜೊಲ್ಲಾಗಿರುವೆ ದೇವ ಮಡುವಿನ ಮಂಡೂಕವ ಸಲಹಿರುವೆಹಸಿದ ಉದರಕೆ ನೆಲ್ಲಾಗಿರುವೆ ದೇವ ಕಷ್ಟಕಾಲದಿ ಕೈಹಿಡಿಯುವ ಮೃಡಹರನೇಅಭಿನವ ಕವಿಗೆ ಸೊಲ್ಲಾಗಿರುವೆ ದೇವ
You cannot copy content of this page