ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಕಾವ್ಯ ಸಂಗಾತಿ ಗಜಲ್ ಪ್ರಕಾಶಸಿಂಗ್ ರಜಪೂತ್ ಜೀವಿಗೆ ನೋವಿನಾ ಅಭ್ಯಾಸ ಬೇಕುಜೀವನಕ್ಕೆ ತನ್ನದೇ ಇತಿಹಾಸ ಬೇಕು ಊಟದಾ ಅತಿರೇಕ ರೋಗಕ್ಕೆ ಮೂಲವೋದೇಹಕ್ಕೆ ಅದಕ್ಕಾಗಿ ಉಪವಾಸ ಬೇಕು ಕಣ್ಣಲ್ಲಿ ಹೊಸತನದ ಬಯಕೆ ನಿತ್ಯವಿಲ್ಲಿದೇಹಕ್ಕೆ ಆಕರ್ಷಿಸುವ ವಿನ್ಯಾಸ ಬೇಕು ನಿತ್ಯವೆ ಜಗದಿ ಬದಲಾವಣೆಯ ಬಯಕೆಅರಳಲು ಮನ ಹೂವಿಗೆ ಮಧುಮಾಸ ಬೇಕು ಬಿಸಿಲುಗಾಳಿಯ ಮಧ್ಯೆ ತೃಷೆಯು ತಣಿಸಲುಮಳೆಯಲಿ ಮನ ನೆನೆಯುವ ಉಲ್ಲಾಸ ಬೇಕು ಆಶಾ ಚಕ್ರದಿ ತಿರುಗಿ ಸೋತಿದ ಚಾಂಚಲ್ಯಕೆ“ಪ್ರಕಾಶ”ಕೊನೆಯ ಘಟ್ಟಲಿ ಸನ್ಯಾಸ ಬೇಕು

Read Post »

ಕಾವ್ಯಯಾನ, ಗಝಲ್

ಕಾವ್ಯ ಸಂಗಾತಿ ಗಜಲ್ ಕನವರಿಸುತಿದೆ ಕಳೆದ ಬಾಲ್ಯವು ಹೃದಯದಲಿ ಮರೆಯಲಾದೀತೆ ಹೇಳಿ ಒಮ್ಮೆರಿಂಗಣಿಸುತಿದೆ ಸವಿ ನೆನಪುಗಳು ಬಾಳ ಪಥದಲಿ ಅಳಿಸಲಾದೀತೆ ಹೇಳಿ ಒಮ್ಮೆ ! ಸವೆದ ಹೆಜ್ಜೆ ಹೆಜ್ಜೆಗಳಲೂ ಹಸನಾಗುತಿದೆ ಮಧುರ ಗುರುತುಗಳು ತುಂಟತನದಿಕೂಡಿ ಕಳೆದ ಆಟಗಳವು ಹೆಚ್ಚು ಗೆಳೆತನದಲಿ ತೊರೆಯಲಾದೀತೆ ಹೇಳಿ ಒಮ್ಮೆ ! ಶೃಂಗರಿಸಲೇ ಮನದ ಹೊತ್ತಗೆಯನು ಬಿತ್ತುತ ಸವಿಭಾವಗಳ ಚಿತ್ತಾರವ ಲಾಸ್ಯದಿಆಪ್ತಭಾವಗಳ ಮೆರೆಸಲೇ ನೆನಹುಗಳ ದಿಬ್ಬಣದಲಿ ಬಿಡಲಾದೀತೆ ಹೇಳಿ ಒಮ್ಮೆ ! ಆಡಿ ಓಡುತ ಬಿದ್ದು ಏಳುತ ಕಲಿತ ಪಾಠಗಳವು ಹಸಿರು ಕಂಗಳಲಿ ಅರಳಿ ಚೆಲ್ವಲಿಸ್ವಪ್ನಗಳ ಕಾಣುತಲಿ ನಲಿದಿದೆ ಬಾಳ ಯಾಣದಲಿ ಕಳಚಲಾದೀತೆ ಹೇಳಿ ಒಮ್ಮೆ ! ನವ್ಯತೆಯ ಬಿನ್ನಾಣ ಬರಲಿ ನೂರೆಂಟು ಬಾಲ್ಯವು ಸದಾ ಚೊಕ್ಕ ‘ನಯನಾ’ ಳಿಗೆಬಾಳ ಕಣ್ಮಣಿಯಾಗಿ ಬಾಲ್ಯ ಹಸಿರು ಮನದಲಿ ಎಸೆಯಲಾದೀತೆ ಹೇಳಿ ಒಮ್ಮೆ !! ನಯನ. ಜಿ. ಎಸ್

Read Post »

ಕಾವ್ಯಯಾನ, ಗಝಲ್

ಗಜಲ್ ಎಂದರೇ

ಕಾವ್ಯ ಸಂಗಾತಿ ಗಜಲ್ ಎಂದರೇ ಶ್ರೀನಿವಾಸ ಜಾಲವಾದಿ ಒಲವ ತುಂಬಿದ ಹೃದಯದ ಮಾತುಪ್ರೀತಿ ಪ್ರೇಮದ ಸುಂದರ ಕನಸು ಕಾವ್ಯಾರಾಧಕರ ಪ್ರೀತಿಯ ನಲಿವುಮದಿರೆಯ ಮತ್ತಿನಲಿರುವ ದುಂಬಿ ಹೃದಯದ ಮಾತು ಪಿಸುಗುಟ್ಟುವಿಕೆಕಣ್ಣ ಸನ್ನೆಯ ತುಂಟಾಟದ ಮಜಲು ಪ್ರೇಮಿಯೊಡನಾಟದ ಯಕ್ಷಗಾನದುಂಬಿ ಝೇಂಕಾರ ದಿನ ಅನುದಿನ ನಿಸರ್ಗದ ಚೆಲುವಿಗೆ ಮುಂಗುರುಳುಸೂರ್ಯದೇವನ ಬೆಳ್ಳಿ ರಥಯಾತ್ರೆ ಗಜಲ್ ಎಂದರೆ ಪ್ರೀತಿ ಪ್ರೇಮದ ಜೇನುಹರುಷದ ಹೊನಲು ಬೆಳಕಿನ ಅಮಲು

ಗಜಲ್ ಎಂದರೇ Read Post »

ಕಾವ್ಯಯಾನ, ಗಝಲ್

ಗಝಲ್

ಕಾವ್ಯ ಸಂಗಾತಿ ಗಝಲ್ ಶಂಕರಾನಂದ ಹೆಬ್ಬಾಳ ಅನ್ಯಾಯವ ದಿಕ್ಕರಿಸಿ ಎದೆಗೊಟ್ಟವರುಕೋಟಿ ಚನ್ನಯ್ಯಬಡವರ ನೋವುಗಳಿಗೆ ದನಿಯಾದವರುಕೋಟಿ ಚನ್ನಯ್ಯ ಮಲ್ಲಯ್ಯ ಬುದ್ಯಂತನ ಯಮಪುರಿಗೆಅಟ್ಟಿದರೇಕೆಕಿನ್ನಿದಾರುವಿನ ಆಶ್ರಯವ ಪಡೆದವರುಕೋಟಿ ಚನ್ನಯ್ಯ ತುಳುನಾಡಿನಲಿ ದಂತಕಥೆಯಾಗಿ ಉಳಿದಮಹಾಚೇತನರಿವರುಸಾಯಿನ ಬೈದ್ಯನ ಮಮಕಾರದಿ ಬೆಳೆದವರುಕೋಟಿ ಚನ್ನಯ್ಯ ಚಂದುಗಿಡಿಯ ಕುತಂತ್ರಕ್ಕೆ ಬಲಿಯಾಗಿಬಂಧಿತರಾದವರುಎಣ್ಮೂರಿನ ದೇವಬಲ್ಲಾಳನಲಿ ಇರುವವರುಕೋಟಿ ಚನ್ನಯ್ಯ ಪಂಜದ ಗಡಿಯಲ್ಲಿ ವಾಸಸ್ಥಳವನುಮಾಡಿಕೊಂಡರೇಕೆಸುಂಕದ ಕಟ್ಟೆಯ ಜೋಯಿಸರ ಕೇಳಿದವರುಕೋಟಿ ಚನ್ನಯ್ಯ ಪಡುಮಲೆಯ ಬಲ್ಲಾಳರ ಆಕ್ರಮಣಕೆತುತ್ತಾದವರುಹೋರಾಡುತ್ತ ವೀರಮರಣ ಅಪ್ಪಿದವರುಕೋಟಿಚನ್ನಯ್ಯ ಜನಪರ ಕಾರ್ಯದಿಂದಲೆ ದೈವತ್ವವನುಏರಿದವರಿವರುಅಭಿನವನ ಗಝಲಿನಲಿ ಮೆರೆದವರುಕೋಟಿ ಚನ್ನಯ್ಯ

ಗಝಲ್ Read Post »

You cannot copy content of this page

Scroll to Top