ಕಥೆ ಶಾರದ ಭಾಗ-3 ಅನಸೂಯ ಎಂ.ಆರ್ ವಾಣಿ ಕೆಲಸಕ್ಕೆ ಸೇರಿ ವರ್ಷವಾದ ಮೇಲೆ ಶಾರದ ತಮ್ಮಮಂಜುನಾಥನಿಗೆ ವಾಣಿಗೆ ಮದುವೆ ಮಾಡಲು ಗಂಡುಹುಡುಕುವಂತೆ ಹೇಳಿದ್ದನ್ನು ಕೇಳಿಸಿಕೊಂಡ ವಾಣಿ “ಅತ್ತೆಒಂದೆರಡು ವರ್ಷ ನಾನು ಆರಾಮಾಗಿ ಕೆಲಸ ಮಾಡ್ಬೇಕುಅಂತ ಆಸೆ. ಆಮೇಲೆ ಮದ್ವೆ ಆಗೋದು ಇದ್ದೆ ಇದೆಯಲ್ಲ’ಎಂದು ಎಲ್ಲರ ಬಾಯಿ ಮುಚ್ಚಿಸಿದಳು.” ಇವತ್ತು ನಾವುಶುರು ಮಾಡಿದ ತಕ್ಷಣ ಸಿಗಲ್ಲ. ಒಳ್ಳೆ ಹುಡುಗ ಸಿಗೋದುಅಷ್ಟು ಸುಲಭ ಅಲ್ಲ.ನಾವು ಹುಡುಕಿ ಮಾಡೊ ಹೊತ್ತಿಗೆಒಂದು ವರ್ಷವಾದ್ರು ಆಗ್ಬಹುದು, ಎರಡು ವರ್ಷ ಆದ್ರುಆಗ್ಬಹುದು.ನಿಧಾನವಾಗಿ ಹುಡುಕುತ್ತಿರಬೇಕು” ಎಂದನು ಮಂಗಳನ ತಾಯಿಯ ದೂರದ ಸಂಬಂಧಿಕರಿಂದ ಒಂದುಗಂಡಿನ ಪ್ರಸ್ತಾಪ ಬಂದಿತು.ಎಲ್ಲವು ಅನುಕೂಲವಾಗಿಯೆಕಂಡು ಬಂದಿದ್ದರಿಂದ ಗಂಡಿನವರು ಹೆಣ್ಣನ್ನು ನೋಡಲುಬಂದರು. ಗಂಡಿನ ದೊಡ್ಡಪ್ಪ ದೊಡ್ಡಮ್ಮ, ಅವರ ಮಗಳುಮತ್ತು ಗಂಡು ಬಂದರು. ವಾಣಿಯನ್ನು ನೋಡಿ ಒಪ್ಪಿದ ಗಂಡಿನ ಕಡೆಯವರು ತಮ್ಮ ಒಪ್ಪಿಗೆಯನ್ನು ತಿಳಿಸಿದರು “ನಮ್ಮ ಮೋಹನ 8 ನೇ ತರಗತಿ ಓದುವಾಗ ಅವನಪ್ಪಅಮ್ಮಇಬ್ಬರೂ ಬಸ್ ಅಪಘಾತದಲ್ಲಿ ತೀರಿಕೊಂಡರು. ನಂತರ ನಮ್ಮಆಶ್ರಯದಲ್ಲೇ ಬೆಳೆದು ವಿದ್ಯಾವಂತನಾಗಿ ಉಪನ್ಯಾಸಕನಾಗಿರುವುದು ನಮಗೆಲ್ಲ ನೆಮ್ಮದಿಯನ್ನು ತಂದಿದೆ. ಅವರಪ್ಪನ ಆಸ್ತಿಯಿಂದ ಬಂದ ಹಣದಿಂದಲೇಅವನ ವಿದ್ಯಾಭ್ಯಾಸವೂ ಮುಗಿಯಿತು. ನಾವೂ ಅವನ ಕಡೆಯಿಂದ ಏನನ್ನು ನಿರೀಕ್ಷಣೆ ಮಾಡಲ್ಲ. ಅವನ ಸುಖ ಮತ್ತು ನೆಮ್ಮದಿಯಷ್ಟೆ ನಮಗೆ ಮುಖ್ಯ. ನಮ್ಮಿಂದ್ಯಾವುದೆ ಬೇಡಿಕೆಗಳಿಲ್ಲ. ಅವರಮ್ಮನ ಒಡವೆಗಳನ್ನೇ ಹುಡುಗಿಗೆ ಕೊಡುತ್ತೇವೆ.ನಿಮ್ಮಅನುಕೂಲವಿದ್ದಂತೆ ಮದುವೆ ಮಾಡಿ ಕೊಡಿರಿ” ಎಂದು ನೇರವಾಗಿಯೆ ಹೇಳಿದರು.ಅವರ ನೇರ ಮಾತುಗಳು ಎಲ್ಲರಿಗೂ ಇಷ್ಟವಾಯ್ತು. ಎರಡು ಕಡೆಯ ಹಿರಿಯರಿಗೂ ಒಪ್ಪಿಗೆಯಾದ್ದರಿಂದ ವಿವಾಹದ ಮಾತು ಕತೆಗಳು ಹೂವೆತ್ತಿದಷ್ಟು ಸಲೀಸಾಗಿ ಯಶಸ್ವಿಯಾಯಿತು ವಾಣಿಯೊಡನೆ ಮಾತಾಡಬೇಕೆಂದು ಮೋಹನ ತನ್ನಕ್ಕನ ಮೂಲಕ ಹೇಳಿಸಿದಾಗ ಎಲ್ಲರೂ ಒಪ್ಪಿದರು. ಮನೆಯ ಮುಂದಿನ ಕೈ ತೋಟಕ್ಕೆ ಬಂದಾಗ ಮೋಹನ್ “ನಿಮ್ಮ ಸರಳತೆ ನನಗೆ ಇಷ್ಟವಾಯ್ತು. ಮದ್ವೆ ಆದ ಮೇಲೆ ನಾನು ದಾವಣಗೆರೆಯಲ್ಲಿ ಮನೆ ಮಾಡುವೆ. ನಮ್ಮಮ್ಮನ ಒಡವೆ ಹಳೆಕಾಲದ್ದೆಂದು ಕರಗಿಸಿ ಹೊಸ ರೀತಿ ಮಾಡಿಸುವುದು ನನಗಿಷ್ಟವಿಲ್ಲ. ನಮ್ಮಮ್ಮನ ನೆನಪಾಗಿ ಹಾಗೇ ಇರಲೆಂದು ನನ್ನಾಸೆ.ಇದಕ್ಕೆನಿನ್ನ ಒಪ್ಪಿಗೆ ಇದೆಯೇ”ಎಂದಾಗ ವಾಣಿ “ಹಳೆ ವಿನ್ಯಾಸದ ಒಡವೆಗಳು ನನಗೂ ಇಷ್ಟ’ ಎಂದಳು “ನೀವೇನಾದರು ಕೇಳುವುದಿದ್ದರೆ ಕೇಳಿರಿ” ಮೋಹನ್ ಕೇಳಿದಾಗ ‘ನಮ್ಮಿಬ್ಬರ ವೃತ್ತಿ ಒಂದೇ ಆಗಿರುವುದರಿಂದ ಸಮಾನ ಮನಸ್ಕರಾಗಿ ನಮ್ಮ ಜೀವನ ನೆಮ್ಮದಿಯಿಂದ ಕೂಡಿರುತ್ತದೆಂದು ತಿಳಿದಿದ್ದೇನೆ”ಎಂದು ಹೇಳಿದಾಗ “ನನ್ನಆಸೆಯೂ ಅದೇ” ಎಂದು “ಬನ್ನಿ ಒಳಗೆ ಹೋಗೋಣ” ಎನ್ನುತ್ತ ಒಳನಡೆದ ಅವನನ್ನು ವಾಣಿ ಅನುಸರಿಸಿದಳು.ಮದುವೆ ದಿನಾಂಕ ಹಾಗೂ ಛತ್ರದ ಹೊಂದಾಣಿಕೆಯನ್ನುನೋಡಿಕೊಂಡು ಮದುವೆ ದಿನಾಂಕ ನಿರ್ಧಾರ ಮಾಡಲುಮಂಜುನಾಥನಿಗೆ ಹೇಳಿ ಹೊರಟರು. ವರುಣ್ ಮೂಲಕಮೋಹನ್ ವಾಣಿಯ ಮೊ. ನಂ.ಅನ್ನು ಪಡೆದನು.ಎಲ್ಲಾಹೊಂದಾಣಿಕೆಯಾಗುವ ದಿನ ಎರಡು ತಿಂಗಳಾದ ಮೇಲೆಇದ್ದಿದ್ದರಿಂದ ಮದುವೆ ಸಿದ್ಧತೆಗಳು ಚುರುಕಾಗಿ ನಡೆಯತೊಡಗಿದವು. ವಾಣಿ ಮತ್ತು ಮೋಹನ್ ಮೊಬೈಲ್ ನಲ್ಲಿಮಾತಾಡಿಕೊಂಡು ಭವಿಷ್ಯದ ಹೊಂಗನಸು ಕಾಣುತ್ತಲೇಹೊಸ ಸಂಸಾರಕ್ಕೆ ಅಚ್ಚುಕಟ್ಟಾದ ಬಾಡಿಗೆ ಮನೆಯನ್ನುವ್ಯವಸ್ಥೆ ಮಾಡಿದರು. ವಾಣಿ ಕೆಲಸ ಮಾಡುತ್ತಿದ್ದ ಜಿಲ್ಲಾಕೇಂದ್ರಕ್ಕೆ ದಾವಣಗೆರೆ ಹತ್ತಿರವಿರುವುದರಿಂದ ಮೋಹನ್ದಾವಣಗೆರೆಗೆ ಹೋಗಿ ಬರಬಹುದೆಂದು ತೀರ್ಮಾನಿಸಿವಾಣಿ ಕೆಲಸ ಮಾಡುತ್ತಿದ್ದ ಊರಿನಲ್ಲೆ ಮನೆ ಮಾಡಿದರು.ಮುಂದೆ ಮೋಹನ್ ವಾಣಿ ಕೆಲಸ ಮಾಡುತ್ತಿರುವ ಸ್ಥಳಕ್ಕೆವರ್ಗಾವಣೆ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.ಮೋಹನನ ಇಷ್ಟದಂತೆ ಮದುವೆಯು ಸರಳವಾಗಿ ಮತ್ತುಸಾಂಗವಾಗಿ ನೆರವೇರಿತು. ಗಂಡನ ಮನೆಗೆ ಹೋಗುವ ಹಿಂದಿನ ದಿನ “ಅತ್ತೆ. ನೀನುಯಾಕೆ ನಮ್ಮ ಮನೆಗೆ ಬರಬಾರದು. ನಿನ್ನ ಸರ್ವಿಸ್ ಎಲ್ಲಇದೇ ಊರಲ್ಲಿ ಕಳೆದಿದೀಯಾ. ನಾವಿರೋ ಜಾಗದಲ್ಲೇವರ್ಗಾವಣೆ ಮಾಡಿಸಿದರಾಯ್ತು”ಎಂದಳು. “ಏ ಹುಡುಗಿ ಸುಮ್ಮನಿರೆ. ಗಂಡನ ಜೊತೆ ಆರಾಮಾಗಿರು. ಎಲ್ಲದಕ್ಕುತಲೆ ಕೆಡಿಸಿಕೊಳ್ಳ ಬೇಡ” ” ಹೋಗತ್ತೆ ನೀನು ಯಾವಾಗ್ಲು ಹಿಂಗೆ ” ಅಲ್ಲಿಗೆ ಬಂದ ಮಂಗಳ ” ಅತ್ತೆ ಎಲ್ಲೂ ಹೋಗಲ್ಲ ಹೋಗ್ತಿರೋಳು ನೀನು ಗಂಡನ ಮನೆಗೆ “ಆಗ ಮೂವರು ನಕ್ಕರು. ವಾಣಿ ಗಂಡನ ಮನೆಗೆ ಹೋದ ಮೇಲೆ ಇಡೀ ಮನೆಯೇ ಬಿಕೋ ಅನ್ನಿಸತೊಡಗಿತು.ಚುರುಕು ಮಾತುಗಳನ್ನಾಡುತ್ತಪ್ರಶ್ನಿಸುತ್ತ ಸದಾ ಚಟುವಟಿಕೆಯಿಂದಿರುತ್ತಿದ್ದ ವಾಣಿಯು ಮನೆಯ ಕೇಂದ್ರ ಬಿಂದುವಾಗಿದ್ದಳು.ಮಲಗುವಾಗ ನಿದ್ದೆಬರುವ ತನಕ ತನ್ನ ಗೆಳತಿಯರ, ವಿದ್ಯಾರ್ಥಿಗಳ ಹಾಗೂಸಹೋದ್ಯೋಗಿಗಳ ಕುರಿತು ಮಾತನಾಡುತ್ತಿದ್ದ ವಾಣಿಯ ಒಡನಾಟವಿಲ್ಲದೆ ಶಾರದಳಿಗೆ ಬೇಸರವಾಗುತ್ತಿತ್ತು. ಈಗ ಶಾರದ ಹತ್ತನೆ ತರಗತಿಯಲ್ಲಿ ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗಾಗಿ ಶಾಲೆ ಮುಗಿದ ಮೇಲೆ ಒಂದು ಗಂಟೆ ಪಾಠಮಾಡಿ ಮನೆಗೆ ಬರುತ್ತಿದ್ದಳು.ಮೊದಲಿಗಿಂತ ಹೆಚ್ಚಾಗಿಯೆ ಅವಳನ್ನು ಒಂಟಿತನ ಕಾಡತೊಡಗಿತ್ತು.ಅವಳು ನಿವೃತ್ತಿಹೊಂದಲು ಇನ್ನು ಒಂದು ವರ್ಷವಷ್ಟೆ ಬಾಕಿ. ಈ ನಡುವೆ ವಾಣಿ ತಾನು ತಾಯಿಯಾಗಲಿರುವ ಶುಭ ಸಮಾಚಾರತಿಳಿಸಿದಳು. ಒಂದು ವಾರ ರಜೆ ಹಾಕಿ ತವರಿಗೆ ಬಂದಳು.ಬಂದ ದಿನವೆ ರಾತ್ರಿ ಮಲಗುವಾಗ “ಅತ್ತೆ, ನೀನು ರಿಟೈರ್ಆದ ಮೇಲೆ ನಮ್ಮ ಮನೆಗೆ ಬಂದು ಬಿಡು. ನಮ್ಮ ಮನೆಗೆಹಿರಿಯಳಾಗಿ ನೀನಿರುವುದು ನಮ್ಮಿಬ್ರುಗೂ’ಇಷ್ಟ’ ಎಂದುಹೇಳಿದಾಗ ಆ ಪ್ರಸ್ತಾಪ ಶಾರದಳಿಗೆ ಇಷ್ಟವಾದರೂ ಸಹಅದನ್ನು ತೋರಗೊಡದೆ ನೋಡೋಣ”ಎಂದಳು.ವಾರದನಂತರ ವಾಣಿ ಊರಿಗೆ ಹೊರಟಳು.ಅಂದು ಶಾರದಾಳಿಗೆ ತುಂಬ ತಲೆನೋವಿದ್ದುದರ ಕಾರಣಮಧ್ಯಾಹ್ನ ಶಾಲೆಗೆ ರಜೆ ಹಾಕಿ ಮನೆಗೆ ಬಂದವಳೇ ಕಾಫಿಕುಡಿದು ಮಲಗಿದಳು. ವರುಣ್ ಅಂಗಡಿ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದ.ಸಂಜೆಯ ವೇಳೆಗೆ ಜ್ವರ ಸಹಾ ಬಂದಿತು.ಮಂಜುನಾಥನಿಗೆ ಫೋನ್ ಮಾಡಿ ಬೇಕಾಗಿದ್ದ ಮಾತ್ರೆಗಳನ್ನು ತರಿಸಿಕೊಂಡಳು. ರಾತ್ರಿ ಹಾಲು ಕುಡಿದುಮಾತ್ರೆ ನುಂಗಿದ್ದಷ್ಟೆ ಗೊತ್ತು.ಚೆನ್ನಾಗಿ ಬೆವರು ಬಂದು ಜ್ವರಬಿಟ್ಟಿತ್ತು. ಒಂದು ಹೊತ್ತಿನಲ್ಲಿ ಎಚ್ಚರವಾಗಿ ಟಾಯ್ಲೆಟ್ ಗೆಹೋಗಲು ಎದ್ದು ನಿಂತಾಗ ರೂಮಿನಿಂದ ಮಂಜುನಾಥಮಂಗಳ ಮಾತನಾಡುವ ಧ್ವನಿ ಕೇಳಿಸಿತು.‘ಶಾರದಕ್ಕನ್ನ ವಾಣಿ ಕರ್ಕೊಂಡು ಹೋಗ್ತಾಳಂತೆ. ನೀನೂಅತ್ತೆಯನ್ನು ಒಪ್ಪಿಸಮ್ಮ ಅಂತ ನನಗು ಹೇಳಿ ಹೋದಳು” ಎಂದಳು. ಆಗ ಮಂಜು ‘ ಅಕ್ಕ ಎಲ್ಲೂ ಹೋಗೋದಿಲ್ಲ ನಮ್ಮನೆಯಲ್ಲೆ ಇರಬೇಕು’‘ನಮ್ಮ ವಾಣಿ ಮನೆ ಏನು ಬೇರೆಯವರ ಮನೆ ಅಲ್ಲವಲ್ಲ ಅದ್ಯಾಕೆ ಹಿಂಗೆ ಮಾತಾಡ್ತೀರಾ.ಅಕ್ಕನಿಗೆ ವಾಣಿ ಮಗಳಿದ್ದಹಾಗೆ. ಅವಳನ್ನು ಕಂಡ್ರೆ ಜೀವಬಿಡ್ತಾರೆ’“ಇಷ್ಟ ಇರೋದಕ್ಕೆ ಹೇಳ್ತೀರೋದು. ಅಕ್ಕ ಅವ್ರು ಮನೇಲಿಇದ್ಕಂಡು ಈ ಮನೆ ಎಲ್ಲ ಅವಳ ಹೆಸರಿಗೆ ಬರೆದು ಬಿಟ್ರೆಆಮೇಲೆ ಏನ್ಮಾಡ್ತೀಯ. ಅಕ್ಕ ನಮ್ಮ ಮನೆ ಬಿಟ್ಟು ಬೇರೆಕಡೆ ಎಲ್ಲೂ ಹೋಗ್ಬಾರದು’‘ನಂ ಶಾರದಕ್ಕ ಯಾವತ್ತೂ ಹಂಗ್ಮಾಡಕ್ಕೆ ಸಾಧ್ಯನೇ ಇಲ್ಲ ಅಕ್ಕನ ಬುದ್ಧಿ ನನಗೆ ಚೆನ್ನಾಗಿ ಗೊತ್ತು.ಸುಮ್ಮನೆ ಇಲ್ಲದ್ದೆಲ್ಲ ಹೇಳಬೇಡ್ರಿ.’‘ನಮ್ಮಕ್ಕ ನಮ್ಮನೆಗಿರ್ತಾಳೆ ಅಷ್ಟೆ. ಮುಂದಕ್ಕೆ ಮಾತ್ಬೇಡ’ಒಂದು ನಿಮಿಷ ನಿಂತ ನೆಲವೇ ಕುಸಿದ ಅನುಭವ.ಹಾಗೇಕತ್ತಲಲ್ಲೇ ಹಾಸಿಗೆ ಮೇಲೆ ಕೂತಳು. ಸಾವರಿಸಿಕೊಳ್ಳುತ್ತಲೆಎದ್ದು ಲೈಟ್ ಹಾಕಿದಳು. ಎದ್ದು ಬಂದ ಮಂಗಳ ” ಜ್ವರಕಡಿಮೆಯಾಯ್ತೇನಕ್ಕ’‘ಹೂಂ ಕಣೆ ಮಾತ್ರೆ ನುಂಗಿದ ಮಲಗಿದ್ದಷ್ಟೇಗೊತ್ತು. ಈಗಎಚ್ಚರ ಆಯ್ತು. ನೀನ್ಯಾಕೆ ಎದ್ದು ಬಂದೆ.ಹೋಗಿ ಮಲಗು’ಲೈಟ್ ಆಫ್ ಮಾಡಿ ಮಲಗಲು ಎಂದೂ ಇಲ್ಲದ ಅನಾಥಭಾವ ಆವರಿಸಿ ವರ್ತುಲದಲ್ಲಿ ಒಂಟಿಯಾಗಿ ಸಿಲುಕಿದಂತೆಹೊರಬರಲಾಗದ ಅನುಭವ. ಮಂಜುನಾಥನಿಗ್ಯಾಕೆ ಈ ಅನುಮಾನ ಬಂತು. ವಾಣಿ ಮೇಲೆ ನನಗೆ ಪ್ರೀತಿಯಿದ್ದರುಸಹ ಮಂಜುವನ್ನು ಬಿಟ್ಟು ಬಿಡುತ್ತೀನಾ? ಮಂಗಳನಿಗೇಅರ್ಥವಾಗಿದ್ದು ತನ್ನ ತಮ್ಮನಿಗೇಕೆ ಅರ್ಥವಾಗಲಿಲ್ಲ.ಎಲ್ಲಸಂಬಂಧಗಳು ಹಣ,ಆಸ್ತಿಯ ಮೇಲೆ ನಿಂತಿದ್ಯಾ? ನನಗೆತಮ್ಮನನ್ನು ಬಿಟ್ಟರೆ ಇನ್ಯಾರಿದ್ದಾರೆ? ತನಗರಿವಿಲ್ಲದೆಯೇಒಂದು ರೀತಿ ಬಿಡಿಸಿಕೊಳ್ಳಲಾರದ ವ್ಯೂಹದಲ್ಲಿ ಸಿಲುಕಿಬಿಟ್ಟೆನಾ? ಇದನ್ನು ಬಿಟ್ಟರೆ ಗತ್ಯಂತರವಿಲ್ಲದಾಗಿದೆ.ತಾನು ಮಂಜುನಾಥನ ಜಾಗದಲ್ಲಿ ನಿಂತು ನೋಡಿದರೂ ಅವನಮಾತುಗಳಿಗೆ ಸಮರ್ಥನೆ ದೊರಕುತ್ತಿಲ್ಲ.ಅವನಿಗಿರುವ ಕಡಿಮೆ ಆದಾಯ ಹೀಗೆ ಮಾತನಾಡಿಸಿತ? ಜೀವನವೆಲ್ಲಾಒಡಹುಟ್ಟಿದ ತಮ್ಮನೊಂದಿಗೆ ಬದುಕಿ ಅವನನ್ನು ಬಿಟ್ಟು ಬೇರೆಯವರಿಗೇ ಮನೆಯನ್ನು ಕೊಡಲು ಹೇಗೆ ಸಾಧ್ಯ.ವಾಣಿಯ ಮೇಲೆ ನನಗೆ ಹೆಚ್ಚು ಪ್ರೀತಿಯಿರುವುದರಿಂದ ಅವಳಿಗೂ ಸಹಾ ನನ್ನ ದುಡಿಮೆಯ ಪಾಲಲ್ಲಿ ಒಂದಿಷ್ಟು ಕೊಟ್ಟರೆ ಏನು ತಪ್ಪು? ಅವಳೂ ಅವನ ಮಗಳಲ್ಲವೇ ?ಅಕ್ಕನದೆಲ್ಲಾ ತನ್ನ ಮಗನಿಗೆ ಮಾತ್ರ ಸೇರಬೇಕೆಂಬ ಆಸೆಇರಬಹುದೇ? ಅವನ ಜಾಗದಲ್ಲಿ ನಿಂತು ನೋಡಿದಾಗಅದು ಸರಿಯಿರಬಹುದು. ಒಂದು ದಿನವಾದರೂ ನನಗೆಅಗೌರವ ತೋರದೆ ಮನೆಯ ಹಿರಿಯಳೆಂಬ ಸ್ಥಾನವನ್ನುಕೊಟ್ಟಿಲ್ಲವೇ ? ನನಗಾದರೂ ತಮ್ಮನ ಕುಟುಂಬ ಬಿಟ್ಟರೆ ಇನ್ಯಾರಿದ್ದಾರೆ ? ಈ ಸಮಸ್ಯೆಗೆ ಪರಿಹಾರವೇನು ಎಂದುಚಿಂತಿಸುತ್ತಲೇ ಶಾರದಳಿಗೆ ಯಾವ ಮಾಯದಲ್ಲಿ ನಿದ್ದೆ ಆವರಿಸಿತೆಂಬುದೆ ಅರಿವಾಗಿಲ್ಲ.‘ಅಕ್ಕ,ಅಕ್ಕ”ಎನ್ನುತ್ತ ಮಂಗಳ ಮುಟ್ಟಿದಾಗಲೇ ಎಚ್ಚರ‘ಯಾಕಕ್ಕ,ರಾತ್ರಿ ನಿದ್ದೆ ಬರಲಿಲ್ವೆ’‘ಚೆನ್ನಾಗೇ ನಿದ್ದೆ ಬಂತು” ಎಂದು ಸುಳ್ಳು ಹೇಳಿದಳು.‘ಶಾರದಕ್ಕ ಇವತ್ತು ರಜಾ ಹಾಕಿ ರೆಸ್ಟ್ ತಗೊಳ್ರಿ’‘ರಜಾ ಹಾಕುವಂತದ್ದೇನೂ ಆಗಿಲ್ಲ. ಹೋಗಿ ಬರ್ತೀನಿ’. ಕಾಫಿ ಕುಡಿದು ಸ್ನಾನಕ್ಕೆ ಹೋದಳು. ತನಗೆ ಗಂಡ ಹೆಂಡತಿಮಾತಾಡಿದ ಮಾತುಗಳು ಕೇಳಿಸಿವೆಯೆಂಬುದು ಅವರಿಗೆಗೊತ್ತಾಗದಂತೆ ಎಚ್ಚರ ವಹಿಸಬೇಕೆಂದು ಕೊಂಡಳು. ಎಂದಿನಂತೆ ಮಾಮೂಲಿಯಾಗಿದ್ದು ಶಾಲೆಗೆ ಹೊರಟಳು.ಸ್ಟಾಫ್ ರೂಂಗೆ ಬಂದು ತನ್ನ ಜಾಗದಲ್ಲಿ ಕೂತಾಗ ಪಕ್ಕದ ಚೇರ್ ನಲ್ಲಿದ್ದ ಗೀತಾ ಮೇಡಂ ‘ ಶಾರದ, ಮಲ್ಲಪ್ಪ ಸರ್ ಗೆಹಾರ್ಟ್ ಅಟ್ಯಾಕ್ ಆಗಿ ದಾವಣಗೆರೆಯ ಹಾಸ್ಪಿಟಲ್ ಗೆಸೇರಿಸಿದ್ದಾರೆ. ಐಸಿಯು ನಲ್ಲಿದಾರಂತೆ ‘” ಹೌದಾ,ಎಂಥಾ ಕೆಲ್ಸ ಆಯ್ತು.ಮಗಳಿಗೆ ಮದುವೆ ಮಾಡಬೇಕೆಂದು ಗಂಡು ನೋಡುತ್ತಿದ್ದರು ಅಲ್ವಾ”.ಎಲ್ಲರಲ್ಲೂ ಅದೇ ಮಾತು. ಸೆಕೆಂಡ್ ಪಿರಿಯಡ್ ಮುಗಿಸಿಬಂದಾಗ ಸಾವಿನ ಸುದ್ದಿ ಕೇಳಿ ಬಂತು. ಶಾಲಾ ಮಕ್ಕಳನ್ನು ಸೇರಿಸಿ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿಶಾಲೆಗೆ ರಜೆ ಘೋಷಿಸಲಾಯಿತು. ಮನೆಗೆ ಬಂದು ಅದೇಬೇಸರದಲ್ಲಿ ಏನನ್ನೋ ಯೋಚಿಸುತ್ತಾ ಸುಮ್ಮನೆ ಮಲಗಿ ಬಿಟ್ಟಳು. ಎದ್ದ ಮೇಲೆ ನಿರಾಳವಾಗಿ ಟಿ.ವಿ.ಯಲ್ಲಿ ಫಿಲಂನೋಡುತ್ತಾ ಕುಳಿತಳು.ಊಟದ ನಂತರ ಮಂಜುನಾಥಹಾಗೂ ಮಂಗಳ ಇಬ್ಬರನ್ನು ಕರೆದಳು.‘ಮಂಜು,ನಾಳೆ ಸಂಜೆ ಲಾಯರ್ ನ ಮನೆಗೆ ಕರ್ಕೊಂಡುಬಾ. ನಾನು ವಿಲ್ ಬರೆಸಬೇಕು’‘ಅದೇನಕ್ಕ ಇದ್ದಕ್ಕಿದ್ದಂತೆ’ ಎಂದು ಮಂಜು ಹೆಂಡತಿಯ ಮುಖ ನೋಡುತ್ತ. ರಾತ್ರಿ ಆಡಿದ ಮಾತುಗಳನ್ನು ಕೇಳಿಸಿಕೊಂಡಳಾ ಎಂಬಂತೆ.“ಇಲ್ಲ ಕಣೋ ನನಗ್ಯಾಕೋ ಮಧ್ಯಾಹ್ನದಿಂದ ಮನಸ್ಸಿಗೆಬಂದಿದೆ. ನೋಡು ಮಲ್ಲಪ್ಪ ಮೇಷ್ಟ್ರುಗೆ ಹೆಂಗಾಯ್ತು. ಈ ಕೆಲಸ ಆಗ್ಲೇಬೇಕು”‘ ನೋಡು ಮಂಜು, ನನ್ನ ಮನಸ್ನಲ್ಲಿರೋದನ್ನ ಹೇಳ್ತೀನಿ.ನನ್ನ ನಂತರ ಈ ಮನೆ ನಿನಗೆ ಸೇರುತ್ತೆ. ಮಂಗಳ , ವಾಣಿ ಇಬ್ಬರೂ ನನ್ನ ಒಡವೆಗಳನ್ನು ಸಮನಾಗಿ ಹಂಚಿಕೊಳ್ಳಲಿನನ್ನ ಹೆಸರಿನಲ್ಲಿರೋ ಹಣವನ್ನು ವಾಣಿ ಮತ್ತು ವರುಣ್ ಇಬ್ಬರೂ ಸಮನಾಗಿ ಹಂಚಿಕೊಳ್ಳಲಿ. ಏನಾದರೂ ನೀನುಹೇಳದಿದ್ದರೆ ಹೇಳು’ ಎಂದು ಹೇಳಿದಾಗ ಒಂದು ರೀತಿಯಸಮಾಧಾನ ಭಾವದಿಂದ ‘ ನಿನ್ನಿಷ್ಟ. ನಿನಗೆ ತಿಳಿದ ಹಾಗೆಮಾಡಕ್ಕ. ನನ್ನದೇನೂ ಇಲ್ಲ’‘ಸರಿ, ನನಗೆ ನಿದ್ದೆ ಬರ್ತಿದೆ. ಮಲಗಬೇಕು ‘ಎನ್ನುತ್ತ ರೂಂಕಡೆ ಹೊರಟಳು.
ಕಥೆ ಶಾರದ ಭಾಗ-2 ಅನಸೂಯ ಎಂ.ಆರ್ ವಾಣಿ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದಾಗ ಶಾರದ” ವಾಣಿ ಇಂಜಿನೀಯರಿಂಗ್ ಅಥವಾ ಮೆಡಿಕಲ್ ಸೇರು. ನಾನು ಓದಿಸ್ತೇನೆ” ಎಂದಳು “ನನಗಿಷ್ಟವಿಲ್ಲ ಅತ್ತೆ. ನಾನು ನಿನ್ನ ಹಾಗೆ ಟೀಚರ್ ಅಥವ ಲೆಕ್ಚರರ್ ಆಗ್ತೀನಿ”ಎಂದು ಹೇಳಿ B.SC ಗೆ ಸೇರಿ ಪದವಿ ಪಡೆದಳು ಮುಂದೆ ಸ್ನಾತಕೋತ್ತರ ಪದವಿಯಲ್ಲೂ ಅಧಿಕ ಅಂಕಗಳನ್ನು ಪಡೆದಿದ್ದರಿಂದ ಸುಲಭವಾಗಿ ಸರ್ಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕಿಯಾದಳು. ಊರಿನಿಂದ ನಲ್ವತ್ತು ಕಿ. ಮೀ. ದೂರವಿದ್ದ ಜಿಲ್ಲಾ ಕೇಂದ್ರದ ಸರ್ಕಾರಿ ಕಾಲೇಜಿನಲ್ಲೆ ಸಿಕ್ಕಿದ್ದರಿಂದ ಬಸ್ ಪಾಸ್ ಮಾಡಿಸಿ ಮನೆ ಯಿಂದಲೆ ದಿನವೂ ಹೋಗಿ ಬರುತ್ತಿದ್ದಳು. ಅಂದು ವಾಣಿ ಕಾಲೇಜಿನಿಂದ ಬಂದವಳೆ”ಅತ್ತೆ, ಅಮ್ಮ ಎಲ್ಲರು ಇವತ್ತು ಹೊರಗಡೆ ಹೋಗಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಬರೋಣ. ಅಪ್ಪಂಗೂ,ವರುಣ್ಗೂ ಪೋನ್ ಮಾಡಿದೀನಿ ಸೀದಾ ಅಲ್ಲಿಗೆ ಬರೋಕೆ. ನೀವಿಬ್ಬರೂ ಬೇಗ ರೆಡಿ ಆಗ್ರಿ” ಆಗ ಮಂಗಳಾ”ಯಾಕೆ? ಏನು ಇವತ್ತು”ಎಂದಾಗ “ಅಮ್ಮ ಅಲ್ಲೇ ಹೇಳ್ತೀನಿ” ಎಂದಳು. ಆಟೋ ಹತ್ತಿ ಕುಳಿತ ಮೇಲೆ “ಶ್ರೀ ಜ್ಯುಯಲರಿ” ಶಾಪ್ ಎಂದಳು. ಒಳಗೆ ಹೋದಾಗ “ಓಲೆಗಳನ್ನು ತೋರಿಸಿ ಎಂದಳು. ಇಬ್ಬರಿಗೂ ನನಗೆರಡು ಜೊತೆ ಮುತ್ತಿನ ಓಲೆಗಳನ್ನು ಆಯ್ಕೆ ಮಾಡಿರಿ “ಎಂದಳು. ಇಬ್ಬರೂ ಸೇರಿ ಆಯ್ಕೆ ಮಾಡಿದ ದೊಡ್ಡ ಮುತ್ತಿನ ಹಸಿರು ಮತ್ತು ಬಿಳಿಯ ಬಣ್ಣದ ಮುತ್ತಿನೋಲೆಗಳನ್ನು ಕೊಂಡು ಕೊಂಡಳು. ಅಲ್ಲಿಂದ ಸಾಗರ್ ಹೋಟೆಲ್ ಬಳಿ ಕಾದಿದ್ದ ಮಂಜುನಾಥ ಮತ್ತು ವರುಣ್ ಅವರನ್ನು ಸೇರಿಕೊಂಡ ಮೇಲೆ ಎಲ್ಲರೂ ಊಟ ಮಾಡಿ ಮನೆ ಸೇರಿದರು.ಆಗ ವಾಣಿ “ಅತ್ತೆ,ಅಮ್ಮ ಇಬ್ರೂ ಬನ್ರಿ ಇಲ್ಲಿ”ಎಂದು ಕರೆದಳು ಬಂದಾಗ ಓಲೆಗಳ ಬಾಕ್ಸ್ ತೆಗೆದು “ಇದರಲ್ಲಿ ಯಾವುದು ನಿಮಗಿಷ್ಟ ಆಗುತ್ತೊ ಅದನ್ನು ತಗೊಳ್ರಿ. ಇದು ನನ್ನ ಸ್ವಂತ ದುಡಿಮೆಯ ಮೊದಲ ಸಂಬಳದಿಂದ ತಂದಿದೀನಿ. ಬೇಡ ಅನ್ನಬಾರದು”ಅಂದಾಗ ಶಾರದ ಬಿಳಿಯ ಮುತ್ತಿನೋಲೆ, ಹಸಿರು ಮುತ್ತಿನೋಲೆ ತೆಗೆದುಕೊಂಡ ಮಂಗಳ ಮಗಳ ತಲೆಯನ್ನು ನೇವರಿಸಿದರೆ, ಶಾರದ”ಅಂತೂ ನಮ್ಮ ವಾಣಿ ದುಡಿದು ಸಂಬಳ ತರೋ ಹಂಗಾದ್ಲು. ಯಾವಾಗ್ಲೂ ಹೀಗೆ ಖುಷಿ ಖುಷಿಯಾಗಿ ಇರಮ್ಮ”ಎಂದಾಗ ವರುಣ್ “ಅಪ್ಪನ್ನ ನನ್ನನ್ನ ಮರೆತ್ಬಿಟ್ಟೇನಕ್ಕ” “ಹಂಗನ್ಬೇಡಪ್ಪ, ತಡ್ಕೋ ಸ್ವಲ್ಪ” ಅನ್ನುತ್ತ ಇಬ್ಬರಿಗೂ ಎರಡೆರಡು ಸಾವಿರ ಕೊಟ್ಟು ನಿಮಗೆ ಇಷ್ಟವಾದ ಬಟ್ಟೆ ತಗೊಳ್ರಿ” ಎಂದು ಕೊಟ್ಟಳು.”ಇಷ್ಟುದಿನ ನಾವು ನಿನಗೆ ಬಟ್ಟೆ ಕೊಡಿಸಿದ್ರೆ ಈಗ ನೀನು ನಮಗೆ ಬಟ್ಟೆ ಕೊಡಿಸಂಗಾಯ್ತು. ಆಯ್ತಮ್ಮ ಇನ್ಮುಂದೆ ನಿನ್ನ ಸಂಬಳದ ಹಣವನ್ನೆಲ್ಲ ಬ್ಯಾಂಕ್ನಲ್ಲಿ ಕೂಡಿಡು”ಎಂದು ಮಂಜುನಾಥ ಹೇಳಲು ಶಾರದ ಮತ್ತು ಮಂಗಳ ಇಬ್ಬರೂ ಆ ಮಾತಿಗೆ ಧ್ವನಿಗೂಡಿಸಿದರು. ಯಾಕೋ ಏನೋ ನಮ್ಮ ಮನೆ ಗಂಡು ಮಕ್ಕಳಿಗೆ ವಿದ್ಯೆ ಅಷ್ಟಾಗಿ ಒಲಿಯಲಿಲ್ಲ. ವರುಣ್ SSLC ಪರೀಕ್ಷೆಯಲ್ಲಿ ಸಾಧಾರಣ ಅಂಕಗಳನ್ನು ಪಡೆದು ಉತ್ತೀರ್ಣನಾದನು “ಅತ್ತೆ, ನಾನು ಎಲೆಕ್ಟ್ರಿಕಲ್ ಡಿಪ್ಲೋಮೊಗೆ ಸೇರ್ಕಂತಿನಿ” ಎಂದು ಹೇಳಿದಾಗ “ಆಯ್ತು ಅದಕ್ಕೇ ಸೇರಪ್ಪ. ಒಂದು ವೇಳೆ ಕೆಲಸ ಸಿಗದಿದ್ರು ಸ್ವಂತವಾಗಿ ವ್ಯವಹಾರ ಮಾಡ್ಕ ಬಹುದು”ಎಂದು ಮಂಜುನಾಥನು ಒಪ್ಪಿಗೆ ಸೂಚಿಸಿದ. ವಾಣಿ M.SC.ಗೆ ಸೇರಿದಾಗ ವರುಣ್ ಮೂರು ವರ್ಷದ ಡಿಪ್ಲಮೋ ಮುಗಿಸಿದ ನಂತರ ಒಂದು ವರ್ಷ ಕೆಲಸಕ್ಕಾಗಿ ಪ್ರಯತ್ನಿಸಿದರೂ ಸಫಲವಾಗದಿದ್ದಾಗ ಮಂಜುನಾಥ ತನ್ನ ಸ್ನೇಹಿತನ ಸಹಾಯದಿಂದ ತುಮಕೂರಿನಲ್ಲಿದ್ದ ಖಾಸಗಿ ಎಲಕ್ಟ್ರಿಕಲ್ ಕಂಟ್ರಾಕ್ಟ್ ದಾರರೊಬ್ಬರ ಹತ್ತಿರ ಅನುಭವ ಪಡೆಯಲೆಂದೇ ಒಂದೆರಡು ವರ್ಷ ಕೆಲಸಕ್ಕೆ ಸೇರಿಸಿದ್ದನು ತನ್ನ ಚುರುಕಾದ ವ್ಯವಹಾರ ಜ್ಞಾನ ಹಾಗೂ ಕೆಲಸದಲ್ಲಿನ ಆಸಕ್ತಿಯ ಮೂಲಕವೇ ಮಾಲೀಕರ ಮೆಚ್ಚುಗೆ ಹಾಗೂ ನಂಬಿಕೆಗೆ ಪಾತ್ರನಾಗಿದ್ದನು.ಇದರಿಂದ ಅವನ ಭವಿಷ್ಯದ ಕುರಿತಾಗಿ ಯಾರಿಗೂ ಆತಂಕವಿರಲಿಲ್ಲ. ಆ ದಿನ ಶಾರದ ಶಾಲೆಯಿಂದ ಬಂದು ಕಾಫಿ ಕುಡಿಯುವಾವಾಗ ಮಂಗಳ “ಅಕ್ಕ ನಮ್ಮವರುಣನಿಗೆ ಸ್ವಂತ ಬಿಸಿನೆಸ್ ಮಾಡೋ ಆಸೆ ಈಗ ಹೇಗಿದ್ರೂ ನಮ್ಮ ಅಂಗಡಿ ಪಕ್ಕದ ಮಳಿಗೆ ಖಾಲೀನೆ ಇದೆ. ಬಾಡಿಗೆಗೆ ಕೊಡದೆ ಎಲೆಕ್ಟ್ರಿಕಲ್ ಶಾಪ್ ಇಡೋಣ. ಅತ್ತೇನ ಕೇಳ್ತೀನಿ ಅಂತಿದ್ದ.ನಿಮಗೇನು ಅನ್ಸುತ್ತೆ”ಎಂದಳು “ಮಂಜುನು ಬರಲಿ ರಾತ್ರಿ ಮಾತಾಡೋಣ. ವಾಣಿದೇನು ಲೈಫ್ ಸೆಟ್ಲಾಗಿ ಬಿಡ್ತು.ಇವನಿಗೂಂದು ವ್ಯವಸ್ಥೆಯಾಗ್ಬೇಕು “ಇವನು ವಾಣಿಯಂಗೆ ಓದ್ಲಿಲ್ಲನೋಡಕ್ಕ ಇವನಿಗೊಂದು ಉದ್ಯೋಗ ಅಂತ ಆಗ್ಬಿಟ್ರೆ ನನಗಿನ್ಯಾವ ಚಿಂತೆಯಿರಲ್ಲ” “ಅದಕ್ಯಾಕೆ ಚಿಂತೆ ಮಾಡ್ಬೇಕು.ಎಲ್ಲರು ಓದೀನೇ ಉದ್ಧಾರ ಆಗ್ಬಿಟ್ಟಿದಾರಾ? ಬುದ್ಧಿ ಮತ್ತು ಶ್ರಮಗಳಿದ್ದರೆ ಸಾಕು ಈಗ ಮುಂದುವರಿಬಹುದು.ನೀನೇನು ಚಿಂತೆ ಮಾಡ್ಬೇಡ” ಅಂದು ರಾತ್ರಿ ಎಲ್ಲರ ಊಟವಾದ ನಂತರ ಶಾರದಳೇ “ವರುಣ್, ಎಲೆಕ್ಟ್ರಿಕಲ್ ಶಾಪ್ ಇಡೋಕ್ಕೆ ಬಂಡವಾಳನ ಎಲ್ಲಿಂದ ಹೇಗೆ ವ್ಯವಸ್ಥೆ ಮಾಡ್ಬೇಕು ಅಂತ ಪ್ಲಾನ್ ಏನು ಮಾಡಿದೀಯಾ?”ಎಂದು ಕೇಳಿದಳು”ಅತ್ತೆ ಅಪ್ಪ ಒಂದು ಸ್ಟಲ್ಪ ಬಂಡವಾಳ ಕೊಡಲಿ.ಅಂಗಡಿಗೆ ಹೇಗೂ ಬಾಡಿಗೆನ ಕೊಡಬೇಕಾಗಿಲ್ಲ ಆದ್ದರಿಂದ ಬ್ಯಾಂಕ್ ನಲ್ಲಿ ಸಾಲವನ್ನು ಕೊಡಿಸಲಿ. ಸಾಲ ತೀರಿಸೊ ಜವಾಬ್ದಾರಿನೂ ನಂದೆ” ಆಗ ಮಂಜುನಾಥ “ಅಕ್ಕ ಇನ್ನು ವಾಣಿದು ಮದ್ವೆ ಆಗಿಲ್ಲ. ಇನ್ನ ಒಂದೆರಡು ವರ್ಷ ಅವರತ್ರನೇ ಕೆಲ್ಸ ಮಾಡಿ ಅನುಭವ ಆಗಲಿ ವಾಣಿ ಮದ್ವೆ ಆದ ಮೇಲೆ ಅವನು ಹೇಳಿದಂಗೆ ಮಾಡಿಕೊಡ್ತೀನಿ”ಎಂದು ಹೇಳಿದ.”ಈಗಾಗಲೇ ಮೂರು ವರ್ಷದ ಅನುಭವ ಆಯ್ತು ಕಣಪ್ಪ ನಾನೇ ಸ್ವಂತ ಶಾಪ್ ಇಟ್ಟು ನಡಿಸೋ ಅಷ್ಟು ಜವಾಬ್ದಾರಿ ಬಂದಿದೆ. ನಾನೇನೂ ಇನ್ನು ಚಿಕ್ಕಹುಡುಗ ಅಲ್ಲ. ಎಲ್ಲರೂ ಸಪೋರ್ಟ್ ಮಾಡ್ರಿ” ಎಂದನು. “ಆಯ್ತು ಮಂಜು, ನೀನು ನಿನ್ನ ಕೈಲಾದಷ್ಟು ಕೊಡು ನನ್ನ ಕೈಲಾದಷ್ಟು ನಾನು ಕೊಡ್ತೀನಿ. ಉಳಿದಿದ್ದಕ್ಕೆ ಬ್ಯಾಂಕ್ ಲ್ಲಿ ಸಾಲ ತೆಗೆದುಕೊಡು. ಸಾಲದ ಹಣ ಅವನೇ ಕಟ್ಟಬೇಕು”ಎಂದು ತೀರ್ಮಾನವಾದ ಖುಷಿಯಲ್ಲಿ ತಮ್ಮ ವರುಣನ ಮುಖ ಅರಳಿದಾಗ ವಾಣಿ “ಅಂಗಡಿಗೆ ಏನಂತ ಹೆಸರಿಡ್ತೀಯಾ ವರುಣ” ಮಂಜು ತಕ್ಷಣವೇ “ಶಾರದಾ ಎಲೆಕ್ಟ್ರಿಕಲ್ಸ್”ಎನ್ನುತ್ತಿದ್ದಂತೆ ಎಲ್ಲರು ಚಪ್ಪಾಳೆ ಹಾಕಿದರು. ಎರಡು ತಿಂಗಳೊಳಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ತಿರುಗಾಡುತ್ತ ವರುಣ್ ಎಲ್ಲ ಕೆಲಸಗಳನ್ನು ಮುಗಿಸಿದನು ಶುಭ ಮುಹೂರ್ತದಲ್ಲಿ ಅಂಗಡಿಯನ್ನು ಪ್ರಾರಂಭಿಸಿದನು ಕೆಲವು ದಿನಗಳಾದ ಮೇಲೆ “ಅತ್ತೆ,ಇದು ನನ್ನ ಮೊದಲನೆ ಲಾಭ. ನೀನು ಅಮ್ಮ ನಿಮಗೇನು ಇಷ್ಟಾನೋ ತಗೊಳ್ಳಿ” ಹಣವನ್ನು ಕೊಡುತ್ತ ಹೇಳಿದ.” ನಮಗೇನು ಬೇಡ ಕಣಪ್ಪ ಮೊದಲು ಬ್ಯಾಂಕ್ ಸಾಲ ತೀರ್ಸು.ಆಮೇಲೆ ಕೊಡೋದು ಇದ್ದೇ ಇದೆ” ಶಾರದ ಹೇಳಿದಳು.ಆಗ ಮಂಗಳ ” ಹೌದು ಬ್ಯಾಂಕಿಗೆ ಕಟ್ಟಪ್ಪ”ಎಂದಳು. ಎಲ್ಲರೂ ಆ ರಾತ್ರಿ ಊಟಕ್ಕೆ ಕುಳಿತಾಗ ಶಾರದ ವರುಣ್ ಹಣ ತಂದುಕೊಟ್ಟ ವಿಷಯ ಹೇಳಿ ಬ್ಯಾಂಕ್ ಸಾಲ ತೀರ್ಸಲು ತಿಳಿಸಿದೆ ಎಂದಳು. ಆಗ ಮಂಜುನಾಥ ಹೆಮ್ಮೆಯಿಂದ “ನಮ್ಮ ಮನೇಲಿರೊ ಐದು ಜನ ಇದೀವಿ ಅದ್ರಲ್ಲಿ ನಾಲ್ಕು ಜನ ದುಡಿತೀವಿ” ಹೇಳಿದ ಕೂಡಲೆ ವಾಣಿ ” ಅಪ್ಪ, ನಾವು ಐದು ಜನರು ದುಡೀತಾ ಇದೀವಿ ಕಣಪ್ಪ. ನಾವು ನಾಲ್ಕು ಜನ ಹೊರಗಡೆ ದುಡಿದ್ರೆ ಅಮ್ಮ ಮನೆಯೊಳಗೆ ದುಡೀತಾಳೆ.”ತಕ್ಷಣವೇ ಶಾರದ “ಸರ್ಯಾಗಿ ಹೇಳಿದೆ ಕಣೆ”ಎಂದು ಅವಳ ಬೆನ್ನು ತಟ್ಟಲು “ಆಯ್ತು ಮಗಳೆ ಒಪ್ಕಂಡೆ. ಅದಕ್ಕೆ ಹೇಳೋದು ನಾನು ನನ್ನ ಮಗಳು ಜಾಣೆ ಅಂತ” ಎಂದು ಹೇಳಿದವನು ತಕ್ಷಣ ಹೆಂಡತಿ ಕಡೆ ನೋಡುತ್ತಾ” ತಪ್ಪಾಯ್ತು ನಮ್ಮ ಮಗಳು” ಎನ್ನಲು ಎಲ್ಲರೂ ನಕ್ಕು ಬಿಟ್ಟರು. ವಾಣಿ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದಾಗ ಶಾರದ” ವಾಣಿ ಇಂಜಿನೀಯರಿಂಗ್ ಅಥವಾ ಮೆಡಿಕಲ್ ಸೇರು. ನಾನು ಓದಿಸ್ತೇನೆ” ಎಂದಳು “ನನಗಿಷ್ಟವಿಲ್ಲ ಅತ್ತೆ. ನಾನು ನಿನ್ನ ಹಾಗೆ ಟೀಚರ್ ಅಥವ ಲೆಕ್ಚರರ್ ಆಗ್ತೀನಿ”ಎಂದು ಹೇಳಿ B.SC ಗೆ ಸೇರಿ ಪದವಿ ಪಡೆದಳು ಮುಂದೆ ಸ್ನಾತಕೋತ್ತರ ಪದವಿಯಲ್ಲೂ ಅಧಿಕ ಅಂಕಗಳನ್ನು ಪಡೆದಿದ್ದರಿಂದ ಸುಲಭವಾಗಿ ಸರ್ಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕಿಯಾದಳು. ಊರಿನಿಂದ ನಲ್ವತ್ತು ಕಿ. ಮೀ. ದೂರವಿದ್ದ ಜಿಲ್ಲಾ ಕೇಂದ್ರದ ಸರ್ಕಾರಿ ಕಾಲೇಜಿನಲ್ಲೆ ಸಿಕ್ಕಿದ್ದರಿಂದ ಬಸ್ ಪಾಸ್ ಮಾಡಿಸಿ ಮನೆ ಯಿಂದಲೆ ದಿನವೂ ಹೋಗಿ ಬರುತ್ತಿದ್ದಳು. ಅಂದು ವಾಣಿ ಕಾಲೇಜಿನಿಂದ ಬಂದವಳೆ”ಅತ್ತೆ, ಅಮ್ಮ ಎಲ್ಲರು ಇವತ್ತು ಹೊರಗಡೆ ಹೋಗಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಬರೋಣ. ಅಪ್ಪಂಗೂ,ವರುಣ್ಗೂ ಪೋನ್ ಮಾಡಿದೀನಿ ಸೀದಾ ಅಲ್ಲಿಗೆ ಬರೋಕೆ. ನೀವಿಬ್ಬರೂ ಬೇಗ ರೆಡಿ ಆಗ್ರಿ” ಆಗ ಮಂಗಳಾ”ಯಾಕೆ? ಏನು ಇವತ್ತು”ಎಂದಾಗ “ಅಮ್ಮ ಅಲ್ಲೇ ಹೇಳ್ತೀನಿ” ಎಂದಳು. ಆಟೋ ಹತ್ತಿ ಕುಳಿತ ಮೇಲೆ “ಶ್ರೀ ಜ್ಯುಯಲರಿ” ಶಾಪ್ ಎಂದಳು. ಒಳಗೆ ಹೋದಾಗ “ಓಲೆಗಳನ್ನು ತೋರಿಸಿ ಎಂದಳು. ಇಬ್ಬರಿಗೂ ನನಗೆರಡು ಜೊತೆ ಮುತ್ತಿನ ಓಲೆಗಳನ್ನು ಆಯ್ಕೆ ಮಾಡಿರಿ “ಎಂದಳು. ಇಬ್ಬರೂ ಸೇರಿ ಆಯ್ಕೆ ಮಾಡಿದ ದೊಡ್ಡ ಮುತ್ತಿನ ಹಸಿರು ಮತ್ತು ಬಿಳಿಯ ಬಣ್ಣದ ಮುತ್ತಿನೋಲೆಗಳನ್ನು ಕೊಂಡು ಕೊಂಡಳು. ಅಲ್ಲಿಂದ ಸಾಗರ್ ಹೋಟೆಲ್ ಬಳಿ ಕಾದಿದ್ದ ಮಂಜುನಾಥ ಮತ್ತು ವರುಣ್ ಅವರನ್ನು ಸೇರಿಕೊಂಡ ಮೇಲೆ ಎಲ್ಲರೂ ಊಟ ಮಾಡಿ ಮನೆ ಸೇರಿದರು.ಆಗ ವಾಣಿ “ಅತ್ತೆ,ಅಮ್ಮ ಇಬ್ರೂ ಬನ್ರಿ ಇಲ್ಲಿ”ಎಂದು ಕರೆದಳು ಬಂದಾಗ ಓಲೆಗಳ ಬಾಕ್ಸ್ ತೆಗೆದು “ಇದರಲ್ಲಿ ಯಾವುದು ನಿಮಗಿಷ್ಟ ಆಗುತ್ತೊ ಅದನ್ನು ತಗೊಳ್ರಿ. ಇದು ನನ್ನ ಸ್ವಂತ ದುಡಿಮೆಯ ಮೊದಲ ಸಂಬಳದಿಂದ ತಂದಿದೀನಿ. ಬೇಡ ಅನ್ನಬಾರದು”ಅಂದಾಗ ಶಾರದ ಬಿಳಿಯ ಮುತ್ತಿನೋಲೆ, ಹಸಿರು ಮುತ್ತಿನೋಲೆ ತೆಗೆದುಕೊಂಡ ಮಂಗಳ ಮಗಳ ತಲೆಯನ್ನು ನೇವರಿಸಿದರೆ, ಶಾರದ”ಅಂತೂ ನಮ್ಮ ವಾಣಿ ದುಡಿದು ಸಂಬಳ ತರೋ ಹಂಗಾದ್ಲು. ಯಾವಾಗ್ಲೂ ಹೀಗೆ ಖುಷಿ ಖುಷಿಯಾಗಿ ಇರಮ್ಮ”ಎಂದಾಗ ವರುಣ್ “ಅಪ್ಪನ್ನ ನನ್ನನ್ನ ಮರೆತ್ಬಿಟ್ಟೇನಕ್ಕ” “ಹಂಗನ್ಬೇಡಪ್ಪ, ತಡ್ಕೋ ಸ್ವಲ್ಪ” ಅನ್ನುತ್ತ ಇಬ್ಬರಿಗೂ ಎರಡೆರಡು ಸಾವಿರ ಕೊಟ್ಟು ನಿಮಗೆ ಇಷ್ಟವಾದ ಬಟ್ಟೆ ತಗೊಳ್ರಿ” ಎಂದು ಕೊಟ್ಟಳು.”ಇಷ್ಟುದಿನ ನಾವು ನಿನಗೆ ಬಟ್ಟೆ ಕೊಡಿಸಿದ್ರೆ ಈಗ ನೀನು ನಮಗೆ ಬಟ್ಟೆ ಕೊಡಿಸಂಗಾಯ್ತು. ಆಯ್ತಮ್ಮ ಇನ್ಮುಂದೆ ನಿನ್ನ ಸಂಬಳದ ಹಣವನ್ನೆಲ್ಲ ಬ್ಯಾಂಕ್ನಲ್ಲಿ ಕೂಡಿಡು”ಎಂದು ಮಂಜುನಾಥ ಹೇಳಲು ಶಾರದ ಮತ್ತು ಮಂಗಳ ಇಬ್ಬರೂ ಆ ಮಾತಿಗೆ ಧ್ವನಿಗೂಡಿಸಿದರು. ಯಾಕೋ ಏನೋ ನಮ್ಮ ಮನೆ ಗಂಡು ಮಕ್ಕಳಿಗೆ ವಿದ್ಯೆ ಅಷ್ಟಾಗಿ ಒಲಿಯಲಿಲ್ಲ. ವರುಣ್ SSLC ಪರೀಕ್ಷೆಯಲ್ಲಿ ಸಾಧಾರಣ ಅಂಕಗಳನ್ನು ಪಡೆದು ಉತ್ತೀರ್ಣನಾದನು “ಅತ್ತೆ, ನಾನು ಎಲೆಕ್ಟ್ರಿಕಲ್ ಡಿಪ್ಲೋಮೊಗೆ ಸೇರ್ಕಂತಿನಿ” ಎಂದು ಹೇಳಿದಾಗ “ಆಯ್ತು ಅದಕ್ಕೇ ಸೇರಪ್ಪ. ಒಂದು ವೇಳೆ ಕೆಲಸ ಸಿಗದಿದ್ರು ಸ್ವಂತವಾಗಿ ವ್ಯವಹಾರ ಮಾಡ್ಕ ಬಹುದು”ಎಂದು ಮಂಜುನಾಥನು ಒಪ್ಪಿಗೆ ಸೂಚಿಸಿದ. ವಾಣಿ M.SC.ಗೆ ಸೇರಿದಾಗ ವರುಣ್ ಮೂರು ವರ್ಷದ ಡಿಪ್ಲಮೋ ಮುಗಿಸಿದ ನಂತರ ಒಂದು ವರ್ಷ ಕೆಲಸಕ್ಕಾಗಿ ಪ್ರಯತ್ನಿಸಿದರೂ ಸಫಲವಾಗದಿದ್ದಾಗ ಮಂಜುನಾಥ ತನ್ನ ಸ್ನೇಹಿತನ ಸಹಾಯದಿಂದ ತುಮಕೂರಿನಲ್ಲಿದ್ದ ಖಾಸಗಿ ಎಲಕ್ಟ್ರಿಕಲ್ ಕಂಟ್ರಾಕ್ಟ್ ದಾರರೊಬ್ಬರ ಹತ್ತಿರ ಅನುಭವ ಪಡೆಯಲೆಂದೇ ಒಂದೆರಡು ವರ್ಷ ಕೆಲಸಕ್ಕೆ ಸೇರಿಸಿದ್ದನು ತನ್ನ ಚುರುಕಾದ ವ್ಯವಹಾರ ಜ್ಞಾನ ಹಾಗೂ ಕೆಲಸದಲ್ಲಿನ ಆಸಕ್ತಿಯ ಮೂಲಕವೇ ಮಾಲೀಕರ ಮೆಚ್ಚುಗೆ ಹಾಗೂ ನಂಬಿಕೆಗೆ ಪಾತ್ರನಾಗಿದ್ದನು.ಇದರಿಂದ ಅವನ ಭವಿಷ್ಯದ ಕುರಿತಾಗಿ ಯಾರಿಗೂ ಆತಂಕವಿರಲಿಲ್ಲ. ಆ ದಿನ ಶಾರದ ಶಾಲೆಯಿಂದ ಬಂದು ಕಾಫಿ ಕುಡಿಯುವಾವಾಗ ಮಂಗಳ “ಅಕ್ಕ ನಮ್ಮವರುಣನಿಗೆ ಸ್ವಂತ ಬಿಸಿನೆಸ್ ಮಾಡೋ ಆಸೆ ಈಗ ಹೇಗಿದ್ರೂ ನಮ್ಮ ಅಂಗಡಿ ಪಕ್ಕದ ಮಳಿಗೆ ಖಾಲೀನೆ ಇದೆ. ಬಾಡಿಗೆಗೆ ಕೊಡದೆ ಎಲೆಕ್ಟ್ರಿಕಲ್ ಶಾಪ್ ಇಡೋಣ. ಅತ್ತೇನ ಕೇಳ್ತೀನಿ ಅಂತಿದ್ದ.ನಿಮಗೇನು ಅನ್ಸುತ್ತೆ”ಎಂದಳು “ಮಂಜುನು ಬರಲಿ ರಾತ್ರಿ ಮಾತಾಡೋಣ. ವಾಣಿದೇನು ಲೈಫ್ ಸೆಟ್ಲಾಗಿ ಬಿಡ್ತು.ಇವನಿಗೂಂದು ವ್ಯವಸ್ಥೆಯಾಗ್ಬೇಕು “ಇವನು ವಾಣಿಯಂಗೆ ಓದ್ಲಿಲ್ಲನೋಡಕ್ಕ ಇವನಿಗೊಂದು ಉದ್ಯೋಗ ಅಂತ ಆಗ್ಬಿಟ್ರೆ ನನಗಿನ್ಯಾವ ಚಿಂತೆಯಿರಲ್ಲ” “ಅದಕ್ಯಾಕೆ ಚಿಂತೆ ಮಾಡ್ಬೇಕು.ಎಲ್ಲರು ಓದೀನೇ ಉದ್ಧಾರ ಆಗ್ಬಿಟ್ಟಿದಾರಾ? ಬುದ್ಧಿ ಮತ್ತು
ಶಾರದ
ಕಥೆ ಶಾರದ ಭಾಗ-1 ಅನಸೂಯ ಎಂ.ಆರ್ “ವಾಣಿ ಪುಟ್ಟಿ” ಎಂದು ಕರೆಯುತ್ತಲೇ ಮನೆಯೊಳಗೆ ಬಂದಳು ಶಾರದ.”ಅಕ್ಕ, ವಾಣಿಗೆ ಇನ್ನೂ ಜ್ವರ ಬಿಟ್ಟಿಲ್ಲ. ನೀವು ಸ್ಕೂಲಿಗೆ ಹೋದ ಮೇಲೆ ಅವರಪ್ಪ ಡಾಕ್ಟರ್ ಹತ್ರ ಹೋಗಿ ತೋರಿಸ್ಕಂಡು ಬರೋಣ ಅಂತ ಎಷ್ಟು ಕರೆದ್ರೂ ಹೋಗಿಲ್ಲ ನಾನು ಅತ್ತೆ ಜೊತೆಗೆ ಹೋಗ್ತೀನಿ ಅಂತ ಹೇಳಿ ಹೋಗಲೇ ಇಲ್ಲ ಹಠ ಮಾಡ್ತಿದಾಳೆ ನೋಡಕ್ಕಾ” ಎಂದು ತಮ್ಮನ ಹೆಂಡತಿ ಮಂಗಳಾ ಹೇಳಿದಾಗ ” ಹೌದ” ಎನ್ನುತ್ತ ವಾಣಿಯ ಹತ್ತಿರ ಹೋಗಿ ಹಣೆ ಮುಟ್ಟಿದಾಗ ಸುಡುತ್ತಿತ್ತು. “ಯಾಕೋ ಪುಟ್ಟ ಹಠ ಮಾಡ್ತೀಯಾ? ಅಪ್ಪನ ಜೊತೆಗೇ ಹೋಗಿದ್ರೆ ಏನಾಗ್ತಿತ್ತು ಸರಿ ಬಾ ಹೋಗೋಣ “ಮಂಗಳಾ “ಇರಿ ಅಕ್ಕಾ ಕಾಫಿ ಮಾಡ್ತೀನಿ ಕುಡಿದು ಹೋಗ್ರಿ ಅತ್ತೇನೇ ಬೇಕು ಈ ಹುಡ್ಗಿಗೆ ಎಲ್ಲದಕ್ಕೂ” ಎನ್ನುತ್ತ ಕಾಫಿ ಮಾಡಲು ಹೋದಳು. ಮುಖ ತೊಳೆದು ಸಿದ್ಧಳಾದ ಶಾರದ ಕಾಫಿ ಕುಡಿದು ವಾಣಿಯನ್ನು ಕರೆದುಕೊಂಡು ಆಟೋದಲ್ಲಿಯೆ ಹೊರಟಳು.ಡಾಕ್ಟರ್ ಗೆ ತೋರಿಸಿ ಅವರು ಬರೆದು ಕೊಟ್ಟ ಔಷದಿ.ಬ್ರೆಡ್,ಹಣ್ಣನ್ನು ತೆಗೆದುಕೊಂಡು ಮನೆಗೆ ಬಂದರು ಅವಳನ್ನು ಮಲಗಿಸಿ ಶಾರದ ಟಿ.ವಿ.ನೋಡುತ್ತ ಕುಳಿತಳು ಆಗ “ಅತ್ತೈ ಅಕ್ಕ ಅಬ್ಬು” ಎಂದು ತೊದಲು ಮಾತಾಡುತ್ತ ಪುಟ್ಟ ವರುಣ್ ಬಂದಾಗ ಪಕ್ಕದಲ್ಲಿ ಕುಳ್ಳಿರಿಸುತ್ತ ಬ್ರೆಡ್ ಹಣ್ಣನ್ನು ತಿನ್ನಿಸಿ ಅವನನ್ನು ಕರೆದುಕೊಂಡು ರೂಂ ನಲ್ಲಿ ಆಟವಾಡಲು ಆಟಿಗೆಗಳನ್ನು ಹಾಕಿ,ಟೆಸ್ಟ್ ಪೇಪರಗಳನ್ನು ಮೌಲ್ಯಮಾಪನದಲ್ಲಿ ತೊಡಗಿದಳು.ಆಗ ರೂಂಗೆ ಬಂದ ಮಂಗಳ “ವಾಣಿ ಗಂಜಿ ಮಾಡ್ತೀನಿ ಕುಡಿದುಬಿಡು ಪುಟ್ಟ” “ಬೇಡ ಕಣಮ್ಮ” ಹೋಗ್ಲಿ ಸ್ವಲ್ಪ ಬ್ರೆಡ್ ತಿಂದು ಹಾರ್ಲಿಕ್ಸ್ ಆದರೂ ಕುಡಿತೀಯ” ಶಾರದ ಕೇಳಿದಳು.”ಆಯ್ತು ಅತ್ತೆ” ಮಾತ್ರೆ ನುಂಗುತ್ತಿರುವಾಗ ಬಂದ ಮಂಜುನಾಥ “ಡಾಕ್ಟತ್ರ ಹೋಗ್ಬರೋಣ ಬಾರಮ್ಮ ಅಂತ ಎಷ್ಟು ಕರೆದ್ರು ಬರಲಿಲ್ಲ ಕಣಕ್ಕ. ಅತ್ತೆ ಒಬ್ಬಳಿದ್ರೆ ಸಾಕು ಇನ್ಯಾರು ಬೇಡ.”ಎನ್ನುತ್ತಾ ಮಗಳ ತಲೆ ಸವರಿದ. ಮಂಗಳ,ಮಂಜುನಾಥ, ಶಾರದ ಒಟ್ಟಿಗೆ ಕುಳಿತು ಊಟ ಮಾಡಿದರು ಬೆಳಿಗ್ಗೆ ತಿಂಡಿಗಾಗಿ ತರಕಾರಿಗಳನ್ನು ಹೆಚ್ಚಿಟ್ಟಳು. ರೂಂಗೆ ಬಂದು ಉಳಿದಿದ್ದ ಟೆಸ್ಟ್ ಪೇಪರ್ ಗಳ ಮೌಲ್ಯಮಾಪನ ಮಾಡುತ್ತಿರುವಾಗ ಮಂಗಳ “ಅಕ್ಕ ಸ್ಕೂಲಿನ ಕೆಲ್ಸ ಅಲ್ಲೇ ಮಾಡದೆ ಮನೆಗೆ ಬಂದು ಮೇಲೂ ಮಾಡ್ತೀರಾ.ಈಗ ಆರಾಮಾಗಿ ಮಲಗ್ರಿ” ಎಂದಳು.”ಈ ಕೆಲ್ಸ ಮುಗಿಸಿದರೇನೇ ನಿದ್ದೆ ಆರಾಮಾಗಿ ಬರುತ್ತೆ. ಅದೇನೋ ಗೊತ್ತಿಲ್ಲ ಕಣೆ ಸ್ಕೂಲಿಗೆ ಹೋಗ್ಬಿಟ್ರೆ ಅಲ್ಲಿರತನಕ ಮನೆಯ ಜ್ಞಾಪಕನೇ ಬರಲ್ಲ.ಆದ್ರೆ ಮನೆಗೆ ಬಂದ್ರೂ ಶಾಲೆಯ ಕೆಲಸ ಮಾತ್ರ ಮನಸ್ಸಿನಲ್ಲೇ ಇರುತ್ತೆ.” ಆಗ ಮಂಗಳ ” ನಿಮಗೆ ಎಲ್ಲಾ ಕೆಲ್ಸನೂ ಅಚ್ಚುಕಟ್ಟಾಗಿ ಮುಗಿಸಬೇಕು.”ಎಂದಳು.”ನೀನೇನೇ ಹೇಳು ಮಂಗಳ. ಈ ಮನೆ ಕೆಲ್ಸ, ಅಡುಗೆ ಎಲ್ಲಾನೂ ನೀನು ನಿಭಾಯಿಸ್ತಾ ಇದೀಯ ನೋಡು ಅದಕ್ಕೆನಾನುನಿರಾಳವಾಗಿರೋದು” ಶಾರದಾ ಹೇಳಿದಾಗ “ನೀವು ತಾನೇ ಇನ್ನೇನಕ್ಕ. ನೀವು ದುಡಿದಿದ್ದೆಲ್ಲನೂ ನಮಗೋಸ್ಕರ ಖರ್ಚು ಮಾಡ್ತಿಲ್ವಾ” ಎಂದು ಮನತುಂಬಿ ಹೇಳಲು” ನೀವು ಬೇರೆ ನಾನು ಬೇರೆ ಅಂತ ನನ್ನ ಮನಸ್ಸಿಗೆ ಯಾವತ್ತೂ ಬಂದಿಲ್ಲ ಮಂಗಳ” “ಅದನ್ನು ನೀನು ಬಾಯ್ಬಿಟ್ಟು ಹೇಳಬೇಕೇ ನಂಗೆ ಅರ್ಥ ಆಗಲ್ಪೇನಕ್ಕ ನೀವಿನ್ನು ಮಲಗ್ರಿ” ಎಂದವಳ ಮಾತನ್ನು ಕೇಳಿ ನೆಮ್ಮದಿಯೆನಿಸಿತು. ನಿದ್ದೆ ಮಾಡುತ್ತಿದ್ದ ವಾಣಿಯ ತಲೆಯನ್ನು ನೇವರಿಸುವಾಗ ಮಂಜುನಾಥ ಹೇಳಿದಂತೆ ವಾಣಿ ತನ್ನನ್ನು ಬಹಳ ಹಚ್ಚಿಕೊಂಡಿರುವುದು ನಿಜವೇ. ನನಗೂ ಆಷ್ಟೆ ವಾಣಿ ಅಂದ್ರೆ ಒಂದು ರೀತಿಯ ಮೋಹ ಮಮಕಾರ ಅಪ್ಪ ಅಮ್ಮನ ಏಕಮಾತ್ರ ಪುತ್ರಿಯಾದ ಶಾರದಾ ಹುಟ್ಟು ಅಂಗವಿಕಲೆ. ಕಾಲು ಊನವಾಗಿಯೇ ಹುಟ್ಟಿದ್ದ ಶಾರದ ನಡೆಯುವಾಗ ಕುಂಟುತ್ತಿದ್ದಳು ಮಗಳ ಅಂಗವೈಕಲ್ಯವು ಅವಳ ತಂದೆತಾಯಿಗಳನ್ನು ಚಿಂತೆಗೀಡು ಮಾಡಿದ್ದು ನಿಜ ಹೆಸರಿಗೆ ತಕ್ಕಂತೆ ಅವಳು ವಿದ್ಯೆಯಲ್ಲಿ ಶಾರದಾ ದೇವಿಯ ವರಪುತ್ರಿಯೇ ಆಗಿ ಓದಿನಲ್ಲಿ ಜಾಣೆಯಾಗಿದ್ದಳು.ಇದು ತಂದೆತಾಯಿಗಳಿಗೆ ಒಂದಿಷ್ಟು ನೆಮ್ಮದಿಗೆ ಕಾರಣವಾಗಿತ್ತು ಮುಂದೆ B.sc.ಹಾಗೂ B.Ed. ನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡಿದ್ದಳು. ನೋಡಲು ಲಕ್ಷಣವಾಗಿದ್ದು ಶಿಕ್ಷಕ ವೃತ್ತಿಯಲ್ಲಿದ್ದರೂ ಅಂಗವಿಕಲತೆಯಿಂದ ಅವಳ ವಿವಾಹ ಪ್ರಸ್ತಾಪಗಳು ನಿಂತು ಹೋಗುತ್ತಿದ್ದವು. ಹಲವಾರು ಬಾರಿ ಇದು ಪುನರಾವರ್ತನೆಯಾದಾಗ ಶಾರದ ಮನನೊಂದು ಅಪ್ಪ ಅಮ್ಮನ ಹತ್ತಿರ ಗಟ್ಟಿ ನಿರ್ಧಾರ ಮಾಡಿ ಹೇಳಿದ್ದಳು “ಇನ್ನು ಮುಂದೆ ನನ್ನ ಮದುವೆಯ ಪ್ರಯತ್ನ ಮಾಡಬೇಡ್ರಿ ನಾನು ಯಾರ ಹಂಗೂ ಇಲ್ಲದೆ ಜೀವನ ಮಾಡಲು ನನಗೆ ಉದ್ಯೋಗವಿದೆ. ನಾನು ನನ್ನ ತಮ್ಮಇಬ್ರು ಒಬ್ಬರಿಗೊಬ್ರು ಆಸರೆಯಾಗಿ ಬದುಕುತ್ತೇವೆ. ನನ್ನ ಬಗ್ಗೆ ಚಿಂತೆ ಮಾಡದೆ ನೀವು ಧೈರ್ಯವಾಗಿರಿ” ಅಲ್ಲಿಗೆ ಅವಳ ಮದ್ವೆ ವಿಷಯಕ್ಕೆ ಪೂರ್ಣವಿರಾಮ ಬಿತ್ತು. ಅಮ್ಮ ತನ್ನ ತವರೂರಿನಲ್ಲಿ ತನ್ನ ಪಾಲಿನ ನಿವೇಶನವನ್ನು ಮಾರಿ ಆ ಹಣದಲ್ಲಿ ತಾವಿರುವ ಮನೆ ಪಕ್ಕದಲ್ಲೆ ಮಾರಾಟಕ್ಕಿದ್ದ ನಿವೇಶನವನ್ನು ಕೊಂಡು ಕೊಂಡು ಶಾರದೆಯ ಹೆಸರಿಗೆ ಬರೆದಿದ್ದರು. ಅದರ ಜೊತೆ ಅವಳ ಮದುವೆಗೆ ಕೂಡಿಟ್ಟ ಹಣವನ್ನು ಅವಳ ಹೆಸರಲ್ಲಿ ಬ್ಯಾಂಕ್ ನಲ್ಲಿಟ್ಟರು.ತಮ್ಮಮಂಜುನಾಥ ಪಿ.ಯು.ಸಿ.ನಲ್ಲಿ ಫೇಲಾದ ಮೇಲೆ ಅಪ್ಪನ ಜೊತೆಯಲ್ಲಿ ಕಿರಾಣಿ ಅಂಗಡಿ ನೋಡಿಕೊಳ್ಳ ತೊಡಗಿದ. ಅಮ್ಮ ತನ್ನ ತಮ್ಮನ ಮಗಳು ಮಂಗಳಳನ್ನು ಸೊಸೆಯನ್ನಾಗಿ ಮಾಡಿಕೊಂಡಳು.ಇದೆಲ್ಲ ಆಗಿ ಎರಡು ವರ್ಷಗಳು ಆಗುವಷ್ಟರಲ್ಲಿ ಅಪ್ಪ ಪ್ರಯಾಣ ಮಾಡುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಅಸು ನೀಗಿದ್ದರು. ಅಪ್ಪನ ಸಾವಿನಿಂದಾಗಿ ಮಂಕಾಗಿದ್ದ ಅಮ್ಮಮೊಮ್ಮಗಳು ಹುಟ್ಟಿದ ಮೇಲೆ ಮಗುವಿನ ಪಾಲನೆಯಲ್ಲಿ ತೊಡಗುತ್ತಾ ದುಃಖದಿಂದ ಹೊರ ಬಂದಳು. ಮಂಗಳಾ ಎಲ್ಲರೊಂದಿಗೆ ಹೊಂದಿಕೊಳ್ಳುವ ಸ್ವಭಾವದಿಂದಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಳು. ಆಗಲೇ ಶಾರದಾ ಅಮ್ಮನ ಒಪ್ಪಿಗೆಯೊಂದಿಗೆ ತನ್ನ ಹೆಸರಿನಲ್ಲಿದ್ದ ನಿವೇಶನದಲ್ಲಿ ತನ್ನ ಮದುವೆಯ ಹಣ ಮತ್ತು ಬ್ಯಾಂಕ್ ನಲ್ಲಿ ಸಾಲ ತೆಗೆದು ತಾವೆಲ್ಲರೂ ಇರಲು ಕೆಳಗಿನ ಮನೆ ಹಾಗೂ ಬಾಡಿಗೆ ಕೊಡಲು ಮೇಲೊಂದು ಮನೆಯನ್ನು ಕಟ್ಟಿಸಿದಳು. ಹಳೆಯ ಮನೆಯನ್ನು ಬಾಡಿಗೆ ಕೊಟ್ಟು ಹೊಸ ಮನೆಯಲ್ಲಿದ್ದರು. ಎಲ್ಲವೂ ಸರಾಗವಾಗಿ ನಡೆಯುತ್ತಿರುವಾಗಲೇ ಅಮ್ಮನು ಹೃದಯಾಘಾತದಿಂದ ಎಲ್ಲರನ್ನು ಅಗಲಿದ್ದಳು. ಆಗ ವರುಣನಿಗೆ ಇನ್ನೂ ಒಂದು ವರ್ಷವೂ ಆಗಿರಲಿಲ್ಲ. ಈಗ ಮಂಜುನಾಥ, ಮಂಗಳಾ ಇಬ್ಬರೂ ಅಕ್ಕನಾದ ಶಾರದಳಿಗೆ ಮನೆಯ ಹಿರಿಯಳೆಂಬ ಗೌರವದೊಂದಿಗೆ ಪ್ರೀತಿಯಿಂದ ನೋಡುತ್ತಿದ್ದರು.ಅವಳ ಒಪ್ಪಿಗೆಯಿಲ್ಲದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ ಶಾರದ ಸಹ ತಮ್ಮನ ಸಂಸಾರವೇ ತನ್ನ ಸರ್ವಸ್ವವೆಂದು ತಿಳಿದಿದ್ದಳು. ಎರಡನೆ ಮಗು ವರುಣನ ಪಾಲನೆಯಲ್ಲೇ ಮಂಗಳಾಳ ಬಹುಪಾಲು ಸಮಯ ಕಳೆದುಹೋಗುತ್ತಿದ್ದ ಕಾರಣ ಸಹಜವಾಗಿಯೇ ಶಾರದ ವಾಣಿಯ ಜವಾಬ್ದಾರಿ ಹೊತ್ತುಕೊಂಡಳು. ವಾಣಿಯ ತುಂಟಾಟದ ಮಾತುಗಳು ಶಾರದಾಳ ಒಂಟಿತನದ ಬೇಸರವನ್ನು ಮರೆಸಿ ಬಿಟ್ಟಿದ್ದವು ವಾಣಿಯಂತೂ ಊಟ ತಿಂಡಿಗೆ ಮಾತ್ರ ಅವಳಮ್ಮನನ್ನು ಕೇಳುತ್ತಿದ್ದಳು. ಉಳಿದ ಎಲ್ಲದಕ್ಕು ಅತ್ತೆಯ ಹಿಂದೆ ಸುತ್ತು ಹೊಡೆಯುತ್ತಿದ್ದಳು. ವಾಣಿಯನ್ನು ಶಾಲೆಗೆ ಕಳಿಸುವುದು. ಊಟದ ಬಾಕ್ಸ್ ರೆಡಿ ಮಾಡುವುದು, ಶಾಲೆಗೆ ಹೋಗಲು ತಾನೂ ರೆಡಿಯಾಗುವುದು, ಸಂಜೆಯ ವೇಳೆ ಅವಳನ್ನು ಓದಿಸುವುದು ಹಾಗೂ ಶಾಲೆಯ ಕೆಲಸಗಳಲ್ಲಿ ಸಮಯ ಕಳೆದುಹೋಗುತ್ತಿದ್ದುದೇ ಅರಿವಾಗುತ್ತಿರಲಿಲ್ಲ. ಆಗೆಲ್ಲಾ ಮಂಗಳ “ಶಾರದಕ್ಕ, ವಾಣಿನ ನೀವು, ವರುಣನ ನಾನು ಹಂಚಿಕೊಂಡಂಗಾಯ್ತು ಅಲ್ವಾ” ಎನ್ನುತ್ತಿರುತ್ತಾಳೆ. ತನ್ನೆಲ್ಲ ಪ್ರೀತಿ ಮಮತೆಯನ್ನು ಹಂಚಲು ದೇವರು ಕೊಟ್ಟ ವರವೆ ವಾಣಿಯ ರೂಪದಲ್ಲಿ ಬಂದಿದೆಯೇನೋ ಅನ್ನಿಸುತ್ತಿತ್ತು ಶಾರದಳಿಗೆ. ವಾಣಿಯ ಮೇಲೊಂದು ರೀತಿ ವ್ಯಾಮೋಹ ಆವರಿಸಿಬಿಟ್ಟಿತ್ತು. ಒಮ್ಮೊಮ್ಮೆ ಮಂಜು ” ಅಕ್ಕ, ವಾಣಿಗೆ ನೀನೊಬ್ಬಳಿದ್ರೆ ಸಾಕು. ನಾವ್ಯಾರೂ ಬೇಡ. ನಿನ್ನನ್ನು ಬಲು ಹಚ್ಕಂಡು ಬಿಟ್ಟಿದಾಳೆ” ಎಂದಾಗ ಶಾರದ “ಇರ್ಲಿ ಬಿಡು ನಿಮ್ಮನ್ನಲ್ಲದೆ ಇನ್ಯಾರನ್ನ ಹಚ್ಕೋಣಲಿ ಹೇಳು. ನಾವೆಲ್ಲ ಒಂದೇ ತಾನೆ” ಎಂದಾಗ ಓಡಿಬಂದ ವಾಣಿ “ಹೌದು ನಂಗೆ ಅತ್ತೇನೇ ಬೇಕು”ಎನ್ನುತ್ತಾ ಶಾರದಳನ್ನು ಅಪ್ಪಿಕೊಂಡರೆ ಶಾರದಳಿಗೆ ಖುಷಿ.ಎಲ್ಲದಕ್ಕಿಂತ ಹೆಚ್ಚಾಗಿ ಶಾರದಳಿಗಿಷ್ಟ ಆದದ್ದು ವಾಣಿಯ ದಿಟ್ಟತನ ಮತ್ತು ಪ್ರಶ್ನೆಯನ್ನು ಕೇಳದೆ ಸರಿಯಾಗಿ ತಿಳಿಯದೆ ಯಾವುದನ್ನೂ ಒಪ್ಪುವ ಪ್ರಶ್ನೆಯೇ ಇಲ್ಲ.ಹಬ್ಬದ ದಿನ ಮಂಜುನಾಥ ಮಾವಿನೆಲೆ ತೋರಣ ಕಟ್ಟುತ್ತಿರುವಾಗ “ಅಪ್ಪಾ ತೋರಣ ಕಟ್ಟಕ್ಕೆ ಈ ಮಾವಿನ ಎಲೆಯೇ ಯಾಕೆ ಬೇಕು” ಅವರಪ್ಪ ನಿರುತ್ತರನಾಗಿ” ಬರೀ ಇಂಥ ತರ್ಲೆ ಪ್ರಶ್ನೆಗಳನ್ನೆ ಕೇಳೋದು ನೀನು”ಎನ್ನುತ್ತಲೇ ಗದರಿದಾಗ ಮುಖ ಉದಿಸಿ ಕೊಂಡು ಶಾರದೆಯ ಬಳಿ ಬಂದು “ನಿನಗೆ ಗೊತ್ತಾ ಅತ್ತೆ” “ಮಾವಿನ ಎಲೆಗಳು ಬೇರೆ ಗಿಡದ ಎಲೆಗಳಿಗಿಂತ ಹೆಚ್ಚು ಅಮ್ಲಜನಕ ಕೊಡುವುದೇ ಇದಕ್ಕೆ ಕಾರಣ” ಎಂದು ಶಾರದ ಹೇಳಲು ಮತ್ತೇ ಅವಳ ಅಪ್ಪನ ಬಳಿ ಹೋಗಿ ಮಾವಿನಲೆಗಳ ತೋರಣ ಕಟ್ಟುವ ಕಾರಣವನ್ನು ತಿಳಿಸುತ್ತಿದ್ದಳು. ವಾಣಿಯಿನ್ನು ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಅವಳ ನೇರ ದಿಟ್ಟತನ ಎದ್ದು ಕಾಣುತ್ತಿತ್ತು. ಒಮ್ಮೆ”ನಮ್ಮಲ್ಲಿ ಮದುವೆ ಆಗುವಾಗ ಬರೀ ಹೆಣ್ಣಿಗೆ ಮಾತ್ರ ತಾಳಿ ಕಟ್ತಾರೆ ಗಂಡಿಗೆ ಮಾತ್ರ ಏನನ್ನೂ ಕಟ್ಟಲ್ಲ ಯಾಕೆ” ಎಂದು ಕೇಳಿದಳು.ಮಂಗಳ”ಹಿಂದಿನಿಂದ ಬಂದಿರುವ ಸಂಪ್ರದಾಯ ಕಣೆ”ಎಂದರೆ ತಕ್ಷಣ” ಅದನ್ನೇ ಯಾಕೆ” ಅಂತ ಕೇಳಿದರೆ ಏನೇನೋ ಹೇಳ್ತೀಯ ಕಣಮ್ಮ” “ಅತ್ತೆ ನೀನಾದ್ರು ಹೇಳು. ಹೆಣ್ಣಿಗಿದ್ದ ಹಾಗೆಯೆ ಗಂಡಿಗೂ ಮದುವೆ ಆಗಿರೊ ಗುರುತು ಇರಬೇಕಿತ್ತು ಅಲ್ಲವೇನತ್ತೆ” ಎನ್ನುವಳು. ಆಗ ಶಾರದ “ಹೌದು ನೀನು ಕೇಳ್ತಿರೋದು ಸರಿ ಆದ್ರೆ ನಮ್ಮ ಸಮಾಜದಲ್ಲಿ ಎಲ್ಲಾ ನಿಯಮಗಳು ಕೇವಲ ಹೆಣ್ಣಿಗೆ ಮಾತ್ರ ಇದಾವೆ ಹೊರತು ಗಂಡಿಗಂತು ಇಲ್ಲಮ್ಮ”ಎಂದಳು “ಹೌದತ್ತೆ ನೀನು ಹೇಳಿದ್ದನ್ನು ಒಪ್ಕಳ್ಳ ಬಹುದು “.ಓದಿನಲ್ಲಿ ತನ್ನಂತೆಯೆ ಕಡುಜಾಣೆಯಾಗಿರುವ ವಾಣಿಯು ಶಾರದಳ ಹೆಮ್ಮೆಯ ಸೊಸೆ. ಅವಳ ಊಟ ತಿಂಡಿ, ಬಟ್ಟೆಗಳಿಂದ ಹಿಡಿದು ಓದಿಸುವವರೆಗೂ ಎಲ್ಲಾ ಕೆಲಸಗಳಲ್ಲು ಮುತುವರ್ಜಿ ಮತ್ತು ಕಾಳಜಿ ಮಾಡದಿದ್ದರೆ ಶಾರದಳಿಗೆ ನೆಮ್ಮದಿಯಿರುತ್ತಿರಲಿಲ್ಲ.ವಾಣಿ ನೋಡಲು ತನ್ನ ತಾಯಿಯನ್ನೆ ಹೋಲುತ್ತಿದ್ದುದು ಶಾರದಳಿಗೊಂದು ವಿಶೇಷವಾಗಿತ್ತು. ವಾಣಿಗಂತೂ ಅತ್ತೆ ಎಲ್ಲದಕ್ಕೂ ಬೇಕು. ಅತ್ತೆಯಿದ್ದರೆ ಸಾಕು ಅಮ್ಮನೂ ಬೇಡ ವರುಣ ಹುಟ್ಟಿದ ಮೇಲೆ ಅತ್ತೆಯ ಜೊತೆಯೆ ಮಲಗುವುದು ರೂಢಿಯಾಗಿ ಈಗಲೂ ಮುಂದುವರಿದಿದೆ. ಅತ್ತೆಯ ರೂಂನಲ್ಲೇ ಅವಳ ಕಾರುಬಾರು. ಮನೆ ಕಟ್ಟಿಸುವಾಗ ಬ್ಯಾಂಕ್ ನಲ್ಲಿ ತೆಗೆದ ಸಾಲವೆಲ್ಲ ತೀರಿದ ಮೇಲೆ ಮಹಡಿ ಮನೆ ಬಾಡಿಗೆಯನ್ನು ಸಹ ಶಾರದ ಮಂಗಳನ ಕೈಗೆ ಮನೆ ಖರ್ಚಿಗೆಂದು ಕೊಟ್ಟು ಬಿಡುತ್ತಿದ್ದಳು.ತಮ್ಮನ ವ್ಯಾಪಾರದ ಸ್ಥಿತಿಯು ಆರಕ್ಕೇರದ ಮೂರಕ್ಕಿಳಿಯದ ರೀತಿಯಲ್ಲಿತ್ತು ತಮ್ಮನ ಮಕ್ಕಳಿಬ್ಬರ ವಿದ್ಯಾಭ್ಯಾಸದ ಜವಾಬ್ಧಾರಿಯನ್ನೆಲ್ಲ ಶಾರದಳೇ ವಹಿಸಿ ಕೊಂಡಿದ್ದಳು. ಅಪ್ಪಿತಪ್ಪಿ ಒಂದು ದಿನವಾದರೂ ಮಂಗಳ ಶಾರದಳ ಮನ ನೋಯುವಂಥ ಮಾತನ್ನಾಡಿಲ್ಲ. ಒಂದು ರೀತಿಯಲ್ಲಿ ಶಾರದ ತಮ್ಮನ ಸಂಸಾರಕ್ಕೆ ಆಧಾರ ಸ್ತಂಭ. (ಮುಂದಿನ ಭಾಗ ಶನಿವಾರದಂದು)
ವಿಮೋಚನಾ ದಿನ – ನನ್ನ ಪತಾಕೆ
ನಮ್ಮ ಬಾಳಿನ ಕೆಟ್ಟ ದಿನಗಳ ನಂತರ “ಜವಾನ್ ಬಂದ ಜೀವನ ಪ್ರೀತಿ ತಂದ ಎಂದು ಹರ್ಷ ಪಟ್ಟಿದ್ವಿ”.ಆಮ್ಯಾಲ ನಮಗ ಹರ್ಷದ ಹೊನಲು,ಎಂದು ಅಜ್ಜ ತನ್ನ ಜೀವನದ ಕಥೆ ಹೇಳಿ ಮುಗಿಸಿದ್ದ. ಆ ಅಜ್ಜನ ಕಣ್ಣಲ್ಲಿ ಜಿನುಗಿದ ನೀರು,ದೇಶದ ಹೆಮ್ಮೆಯ ಭಾವ ನಮ್ಮಲ್ಲಿ ಇಂದು ಯಾವ ಮಟ್ಟದಲ್ಲಿದೆ ಎಂದು ಪ್ರಶ್ನೆ ಮೂಡಿತು
ವಿಮೋಚನಾ ದಿನ – ನನ್ನ ಪತಾಕೆ Read Post »
ನೀನಾರಿಗಾದೆಯೋ
ಸಣ್ಣ ಕಥೆ ನೀನಾರಿಗಾದೆಯೋ ನಾಗರತ್ನ ಎಂ.ಜಿ. ಕಾವ್ ಕಾವ್ ಕಾವ್ ಒಂದೇ ಸಮನೇ ಅರಚುತ್ತಿದ್ದ ಕಾಗೆಗಳ ಕರ್ಕಶ ಕೂಗಿಗೆ ಬೆಳಗಿನ ಝಾವದ ನನ್ನ ಸಕ್ಕರೆ ನಿದ್ದೆಗೆ ಭಂಗ ಬಂತು. ಹೊದಿಕೆಯನ್ನು ಮತ್ತಷ್ಟು ಬಿಗಿಯಾಗಿ ಹೊದ್ದು ಕಿವಿ ಮುಚ್ಚಿ ಮಲಗಲು ಪ್ರಯತ್ನಿಸಿದೆ. ಕಾವ್.. ಕಾವ್…ಇಲ್ಲ ಮಲಗಲು ಬಿಡಲಿಲ್ಲ. ಛೇ ಏನು ಬಂತು ಈ ದರಿದ್ರ ಕಾಗೆಗಳಿಗೆ ಬೆಳ್ಳಂಬೆಳಿಗ್ಗೆ ರೋಗ..ಭಾನುವಾರದ ನಿದ್ದೆ ಹಾಳಾದ ಸಿಟ್ಟಿಗೆ ಹೊದಿಕೆ ಕಿತ್ತು ಬಿಸುಟು ಬಿರ ಬಿರ ಬಾಗಿಲಿಗೆ ಬಂದು ಚಿಲಕ ತೆಗೆದು ಅಂಗಳದಲ್ಲಿ ಕತ್ತು ಉದ್ದ ಮಾಡಿ ಇಣುಕಿದೆ.ಗಾಯಗೊಂಡ ಕಾಗೆಯೊಂದು ರೆಕ್ಕೆ ಬಡಿಯಲೂ ಶಕ್ತಿಯಿಲ್ಲದೇ ರಸ್ತೆಯಲ್ಲಿ ಬಿದ್ದಿತ್ತು. ಅದರ ಸುತ್ತ ನಿಂತ ಹತ್ತಾರು ಕಾಗೆಗಳು ಒಂದೇ ಸಮನೇ ಅರಚುತ್ತಿದ್ದವು. ಓ ಸರಿ ಇನ್ನು ಈ ಕಾಗೆ ಮತ್ತೆ ಏಳುವ ಹಾಗಾಗುವವರೆಗೂ ಇವುಗಳೆಲ್ಲ ಹೀಗೇ ಕಿರುಚುತ್ತವೆ. ಅತೀವ ಬೇಸರದಿಂದ ಕಾಲು ಝಾಡಿಸಿದೆ. ಇನ್ನು ಮಲಗಿದ ಹಾಗೇ..ಛೇ..ಒಂದು ಕಾಗೆಗಾಗಿ ಇಷ್ಟು ಅರಚಾಟವೇ? ಕೂದಲು ಕಿತ್ತುಕೊಳ್ಳುತ್ತ ಹಿಂದಿರುಗಿ ಹೋಗಲು ಹೊರಟವನಿಗೆ ಯಾಕೋ ಹಿಂದಿನ ರಾತ್ರಿ ನಡೆದ ಘಟನೆ ಕಣ್ಮುಂದೆ ಬಂದಂತಾಗಿ ಯಾರೋ ಕಪಾಳಕ್ಕೆ ಬೀಸಿ ಹೊಡೆದಂತಾಯಿತು. ಇದ್ದಕ್ಕಿದ್ದಂತೆ ಅವುಗಳ ಅರಚಾಟ ಆರ್ತನಾದದಂತೆ ಕೇಳಿಸಿತು. ಯಾರಾದರೂ ನಮ್ಮ ಮಿತ್ರನನ್ನು ಉಳಿಸಿ ಎಂದು ಬೇಡುತ್ತಿರುವಂತೆ…. ನನ್ನ ಮೇಲೆ ನನಗೇ ಅಸಹ್ಯ ಹುಟ್ಟಿ.. ಪಾಪ ಪ್ರಜ್ಞೆ ಕಾಡಿತು.ತಡ ರಾತ್ರಿ ಬೈಕ್ನಲ್ಲಿ ಮನೆಗೆ ಹಿಂದಿರುಗುವಾಗ ನಡು ರಸ್ತೆಯಲ್ಲಿ ಅತೀವವಾಗಿ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯ ಕಡೆ ಕಣ್ಣು ಹೊರಳಿದರೂ ಕಂಡರೂ ಕಾಣದಂತೆ ಮತ್ತಷ್ತು ವೇಗವಾಗಿ ಗಾಡಿ ಓಡಿಸಿಕೊಂಡು ಬಂದು ಮನೆ ಸೇರಿದ್ದೆ..ನನಗೇಕೆ ಬೇಕು ಇಲ್ಲದ ಉಸಾಬರಿ ಎಂದು ಸಮರ್ಥಿಸಿಕೊಳ್ಳುತ್ತ…ನೆಮ್ಮದಿಯಾಗಿ ಮಲಗಿದ್ದೆ. ನನ್ನಂತೆಯೇ ಉಳಿದವರೂ ಒಮ್ಮೆ ನೋಡಿ ಚು ಚು ಎಂದು ಪೇಚಾಡಿಕೊಳ್ಳುತ್ತ ಮುಂದೆ ಸಾಗಿದರೇ ಹೊರತು ಯಾರೂ ಆ ವ್ಯಕ್ತಿಗೆ ಸಹಾಯ ಮಾಡುವ ಸೌಹಾರ್ದತೆ ತೋರಿಸಲಿಲ್ಲ. ಇದು ನಮ್ಮ ಇಂದಿನ ನಾಗರೀಕತೆ…ಯಾರನ್ನೂ ಅಂಟಿಸಿಕೊಳ್ಳದ ಮಾನವೀಯತೆ.ಇನ್ನೂ ಅರಚುತ್ತಲೇ ಇದ್ದ ಕಾಗೆಗಳು..ನಿಮಗಿಂತ ನಾವೇ ವಾಸಿ.. ಹೇ ಮನುಜ..ನೀನಾರಿಗಾದೆಯೋ…ಎಂದು ತಿವಿದಂತಾಯಿತು.
ನಿರಾಕರಣ
ಕಥೆ ನಿರಾಕರಣ ಎಸ್.ನಾಗಶ್ರೀ ರಾಮಕ್ಕನವರು ಅವರ ರೇಷ್ಮೆಸೀರೆಗಳನ್ನೆಲ್ಲಾ ನೆಂಟರಿಷ್ಟರಿಗೆ, ಆಪ್ತರಿಗೆ ಹಂಚಿ ಇನ್ನು ಮೇಲೇನಿದ್ದರೂ ಹತ್ತಿ ಸೀರೆಯಷ್ಟೇ ಉಡುವುದೆಂಬ ನಿರ್ಧಾರ ಪ್ರಕಟಿಸಿದಾಗ ಅವರಿಗೆ ಎಪ್ಪತ್ತೈದಾಗಿತ್ತು. ಹಾಲಿಗೆ ಅರಿಶಿನ ಬೆರೆಸಿದಂತಹ ಮೈಬಣ್ಣ, ಕಡುಗಪ್ಪು ಕಣ್ಣು, ತುಸು ಉದ್ದವಾದ ಮೂಗು, ತುಂಬುದುಟಿ, ಪುಟ್ಟ ಚೆಂಡಿನ ಗಾತ್ರದ ತುರುಬಿನ ರಾಮಕ್ಕ ನೋಡಿದರೆ, ಮತ್ತೆ ತಿರುಗಿ ನೋಡಬೇಕೆನ್ನಿಸುವ ಲಕ್ಷಣವಂತೆ. ಮುತ್ತೈದೆಯಾಗಿದ್ದಾಗಿನ ಕಾಲದಲ್ಲಿ ಮಹಾಲಕ್ಷ್ಮಿಯೇ ಎಂದು ಜನ ಕೈಯೆತ್ತಿ ಮುಗಿಯುತ್ತಿದ್ದರಂತೆ. ಕರಿಮಣಿ ಸರ, ಕಾಲುಂಗುರ ತೆಗೆದರೂ ಚಿನ್ನದ ಸರ, ವಜ್ರದ ಮೂಗುತಿ, ಚಿನ್ನದ ಎರಡೆರಡು ಬಳೆ ಧರಿಸಿದ ರಾಮಕ್ಕನವರ ಪ್ರಭೆ ಇದ್ದ ಹಾಗೇ ಇತ್ತು. ಐವತ್ತನೆಯ ವಯಸ್ಸಿನಲ್ಲಿ ಗಂಡ ತೀರಿಕೊಂಡಾಗ ಬೆಳೆದ ಮಕ್ಕಳಿದ್ದರು. ಹೆಣ್ಣುಮಕ್ಕಳ ಮದುವೆಯಾಗಿತ್ತು. ಮೂರು ಗಂಡುಮಕ್ಕಳಿಗೆ ಮುತುವರ್ಜಿಯಿಂದ ಒಳ್ಳೆ ಕಡೆ ಹೆಣ್ಣು ತಂದು ಮದುವೆ ಮಾಡಿ, ಮೊಮ್ಮಕ್ಕಳನ್ನು ಲಾಲಿಸಿ, ಹೆಮ್ಮೆಯಿಂದ ಹರಸುವುದರಲ್ಲಿ ಕಾಲ ಮುಂದಕ್ಕೆ ಓಡಿದ್ದು ಸುಳ್ಳೆನಿಸುತ್ತಿತ್ತು. ತನಗಿಂತ ಇಪ್ಪತ್ತು ವರ್ಷ ಹಿರಿಯನಾದ ಹುಡುಗನಿಗೆ ಮೂರನೆ ಹೆಂಡತಿಯಾಗಿ ರಮಾ ಮದುವೆಯಾಗಿ ಬಂದಾಗ, ಮನೆ ತುಂಬಾ ಅತ್ತೆ, ಮಾವ, ಓರಗಿತ್ತಿ, ಭಾವಂದಿರು, ಮೈದುನರು ಮತ್ತು ಅವರ ಮಕ್ಕಳು. ಇವರಿಗೆ ಮದುವೆಯಾಗಿ ಬಂದ ಹೆಂಡಿರಿಬ್ಬರೂ ಚೊಚ್ಚಲ ಹೆರಿಗೆಯಲ್ಲಿ ತೀರಿಕೊಂಡಿದ್ದರು. ತಾಯಿ ದಿಕ್ಕಿಲ್ಲದ ಮನೆಯ ಹಿರಿ ಹುಡುಗಿ ಅಂತ ಮಾವನವರು ಸ್ವಲ್ಪ ಹೆಚ್ಚೇ ಪ್ರೀತಿ ತೋರಿಸುತ್ತಿದ್ದರು. ಗಂಡನಿಗೆ ಹದಿನಾಲ್ಕರ ಎಳೆ ಹುಡುಗಿ ತನ್ನನ್ನು ನಂಬಿ ಬಂದಿದ್ದಾಳಲ್ಲ ಎಂಬ ಕನಿಕರ. ದುಡ್ಡಿಗೆ ಬಡತನವಿಲ್ಲದ ಮನೆ. ರೂಪವತಿ ಹೆಂಡತಿ. ಹೆಂಡತಿಗೆ ಇಷ್ಟವಾಗಬಹುದೆಂದು ತರತರದ ಸೀರೆ, ಕುಪ್ಪುಸದ ಬಟ್ಟೆ ತಂದು ತಂದು ಹಾಕುತ್ತಿದ್ದರು. ಮೈಮೇಲೆ ಒಂದು ಜೊತೆ , ದಂಡದ ಮೇಲೆ ಒಂದು ಜೊತೆ ಎಂದು ಎಣಿಸಿದಂತೆ ಬಟ್ಟೆಯಿದ್ದ ಅಮ್ಮನ ಮನೆಗಿಂತ ಈ ಮನೆ ಖುಷಿ ಕೊಡುತ್ತಿತ್ತು. ಅದೇ ಖುಷಿಯಲ್ಲೇ ಹದಿನಾರನೇ ವಯಸ್ಸಿನಲ್ಲಿ ಚೊಚ್ಚಲ ಬಸುರಿಯೆಂದು ತಿಳಿದಾಗ, ಅಪ್ಪನಿಗೆ ಆನಂದ. ಅತ್ತೆ ಮನೆಯಲ್ಲಿ ಆತಂಕ. ಪ್ರತಿದಿನ ಪೂಜೆ, ಹರಕೆಗಳ ಬಾಬತ್ತು. ಬಹಳ ಮುಗ್ಧ ಮನಸ್ಸಿನ ರಮಾಗೆ ಆನಂದ, ಆತಂಕಗಳಾವುದೂ ಅಷ್ಟಾಗಿ ತಟ್ಟದಿದ್ದರೂ, ಒಂದೊಮ್ಮೆ ತಾನೂ ಹೆರಿಗೆಯಲ್ಲಿ ಸತ್ತರೆ ಎಂಬ ಭಯ ಆಗಾಗ ಆವರಿಸುತ್ತಿತ್ತು. ಆದರೆ ಜೋತಿಷಿಯಾದ ಅಪ್ಪನೇ ಹೇಳುತ್ತಿದ್ದಂತೆ ದೀರ್ಘಾಯುಷ್ಯ ದ ಜಾತಕ ನನ್ನದು ಎಂಬ ಧೈರ್ಯ ಸಾಂತ್ವನ ನೀಡುತ್ತಿತ್ತು. ಅಂತೂ ಹೆರಿಗೆ ಸುಸೂತ್ರವಾಗಿ ಮಗು ಬಾಣಂತಿ ಮನೆಗೆ ಬಂದಾಗ ಎಲ್ಲರಿಗೂ ನೆಮ್ಮದಿಯ ನಿಟ್ಟುಸಿರು. ಬಹಳ ಮುದ್ದಿನಿಂದ ಮಗಳಿಗೆ ‘ಆನಂದಿ’ ಎಂದು ಕರೆದರು. ಹಿರಿಮಗಳಾದ್ದರಿಂದ ತಮ್ಮ, ತಂಗಿಯರ ಜವಾಬ್ದಾರಿಯೂ ಹೆಗಲೇರಿ ರಮಾ , ಎಲ್ಲರ ಬಾಯಲ್ಲೂ ರಮಕ್ಕ, ರಮಕ್ಕ ಅಂತ ಕರೆಸಿಕೊಳ್ತಾ ಕಡೆಗೆ ನಾಲಿಗೆ ಹೊರಳಿದಂತೆ ರಾಮಕ್ಕನಾದಳು. ರಮಾದೇವಿಯೆಂಬ ಹೆಸರು ಹದಿನಾರನೇ ವಯಸ್ಸಿಗೇ ಕಳಚಿಕೊಂಡಿತು. ಗಂಡ ಮಾತ್ರ ಆಗಾಗ ದೇವಿ…ದೇವಿ…ಎಂದುಸುರುತ್ತಾ ಹತ್ತಿರವಾದ ಕ್ಷಣಗಳು ಆಗೀಗ ನೆನಪಾಗಿ ಕಣ್ತುಂಬುವುದು.ತುಂಬಿದ ಸಂಸಾರದ ಕಟ್ಟುಪಾಡು, ತವರಿಗೆ ಆಸರೆಯಾಗಬೇಕಾದ ಅನಿವಾರ್ಯ, ತನ್ನ ಆರು ಮಕ್ಕಳ ಜವಾಬ್ದಾರಿ, ವಯಸ್ಸಿನಲ್ಲಿ ತುಂಬಾ ಹಿರಿಯನೆನನ್ನಿಸುವ ಗಂಡ ಇವುಗಳಲ್ಲಿ ಮುಳುಗೇಳುತ್ತಾ ರಾಮಕ್ಕ ವಯಸ್ಸಿಗೆ ಮೀರಿದ ಪ್ರಬುದ್ಧತೆ ಸಂಪಾದಿಸಿಕೊಂಡಿದ್ದಳು. ತೆರೆದ ಕಣ್ಣು, ಕಿವಿಗಳಿಂದ ಜಗತ್ತನ್ನು ನೋಡುತ್ತಲಿದ್ದರೆ ಸಾಕು. ಯಾವ ವಿದ್ಯಾಭ್ಯಾಸವೂ ನೀಡದಷ್ಟು ವಿವೇಕವನ್ನು ಜಗತ್ತು ಕಲಿಸುತ್ತದೆಂದು ನಂಬಿದ್ದಳು. ಅದರಂತೆಯೇ ರಕ್ತಗತವಾಗಿದ್ದ ಧೈರ್ಯ, ಏನಾದರೂ ಸಾಧಿಸಿಬಿಡುವ ಛಾತಿಯಿಂದಲೂ ಮನೆಯಲ್ಲಿ ಗೌರವ, ಪ್ರತ್ಯೇಕ ಸ್ಥಾನವನ್ನು ಗಳಿಸಿದ್ದ ಆಕೆಯ ಮಾತಿಗೆ ಎದುರಾಡುವರೇ ಇರಲಿಲ್ಲ. ಈಗಲೂ ಒಂದು ಬೀರು ಭರ್ತಿಯಿದ್ದ ಕಂಚಿ, ಬನಾರಸಿ, ಇಳಕಲ್, ಮೊಳಕಾಲ್ಮೂರು, ಮೈಸೂರ್ ಸಿಲ್ಕ್ ಸೀರೆಗಳನ್ನು ಎಲ್ಲರಿಗೂ ಹಂಚುತ್ತಿದ್ದರೂ ಯಾರೊಬ್ಬರೂ ಪ್ರಶ್ನಿಸಲಾಗಲಿಲ್ಲ. ಎಪ್ಪತ್ತು ಎಂಭತ್ತು ಸೀರೆಗಳು ಒಂದೊಂದೂ ಐದಾರು ಸಾವಿರಕ್ಕೆ ಕಮ್ಮಿ ಹೇಗಾದೀತು? ಅದರಲ್ಲೂ ಹಳೆ ಸೀರೆಗಳ ಅಂಚಿನಲ್ಲಿ ಬೆಳ್ಳಿ, ಬಂಗಾರವಿರದೆ ಇರುತ್ತದೆಯೇ? ಮನುಷ್ಯನಿಗೆ ಎಷ್ಟು ಆಸ್ತಿಪಾಸ್ತಿಯಿದ್ದರೂ ಹೆತ್ತವರ ಸ್ವತ್ತು ಪರರ ಪಾಲಾಗುವುದನ್ನು ನೋಡಿ ಸಹಿಸಲು ಸಾಧ್ಯವೇ? ರಾಮಕ್ಕನವರ ಈ ದಿಢೀರ್ ಬದಲಾವಣೆ ಅಷ್ಟು ಸುಲಭಕ್ಕೆ ಯಾರಿಗೂ ನಿಲುಕಲಿಲ್ಲ. ನಿನ್ನೆ ಮೊನ್ನೆಯವರೆಗೂ ಕುಟುಂಬದ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಕಡೆಗೆ ಒಂದು ಹೋಟೆಲ್ಗೆ ಹೋಗುವಾಗಲೂ ರೇಷ್ಮೆ ಸೀರೆ, ಅದಕ್ಕೊಪ್ಪುವ ರವಿಕೆ, ಎರಡೆಳೆ ಚಿನ್ನದ ಸರದ ಜೊತೆಗೆ ಮುತ್ತಿನ ಸರ, ಅಥವಾ ಹವಳದ ಸರ ತೊಟ್ಟು ಒಂದು ಬಗೆಯ ಗಾಂಭೀರ್ಯದಿಂದ ನಡೆದು ಬರುತ್ತಿದ್ದ ತಮ್ಮ ತಾಯಿ ಈಗ ಸಾದಾ ಸೀರೆ ಬಿಟ್ಟು ಮತ್ಯಾವುದೂ ಬೇಡವೆಂದಿದ್ದು ಗುಲ್ಲಾಗಿತ್ತು. ಮೂವರು ಸೊಸೆಯರು ತಮ್ಮಲ್ಲೂ ಸೀರೆಗಳ ರಾಶಿ ಹೊಂದಿದ್ದರೂ, ಅವರು ತಮ್ಮ ಮಕ್ಕಳ ಚೌಲ, ಉಪನಯನ, ಮದುವೆ, ಗೃಹಪ್ರವೇಶ ಇತ್ಯಾದಿಗಳಲ್ಲಿ ಪಾದಪೂಜೆಗೆಂದು ನಾಲ್ಕಾರು ಅಂಗಡಿ ಸುತ್ತಿ, ಸಾವಿರಾರು ರುಪಾಯಿ ಖರ್ಚು ಮಾಡಿ ತಂದ ಸೀರೆಗಳನ್ನು ಬೇಕೆಂದವರಿಗೆ ಕೊಟ್ಟುಬಿಡುತ್ತಿರುವುದು ಸರಿ ಕಂಡಿರಲಿಲ್ಲ. ಇನ್ನು ಕೆಲವು ಸೀರೆಗಳು ಕೊಡುವುದಾದರೆ ತಮಗೇ ಕೊಡಲಿ ಎನ್ನಿಸುವಷ್ಟು ಚೆಂದಿದ್ದವು. ಗಿಣಿಹಸುರಿಗೆ ಗಾಢನೀಲಿ ಅಂಚಿದ್ದ ಕಂಚಿ ಸೀರೆ, ನೇರಳೆ ಬಣ್ಣದ ಬನಾರಸಿ ಸೀರೆ, ಹತ್ತಾರು ಬಣ್ಣದ ಮೈಸೂರ್ ಸಿಲ್ಕ್ ಗಳ ಮೇಲೆ ಆಸೆಯಿಟ್ಟುಕೊಂಡಿದ್ದ ಸೊಸೆಯರು ಆಡಲೂ ಆಗದೆ , ಸುಮ್ಮನಿರಲೂ ಆಗದೆ ತಳಮಳಿಸುವಾಗಲೇ ರಾಮಕ್ಕನವರು ಸೊಸೆಯರು, ಹೆಣ್ಣುಮಕ್ಕಳು, ಮೊಮ್ಮಕ್ಕಳು ಎಲ್ಲರೂ ಒಂದು ಶನಿವಾರ ತಾವಿರುವಲ್ಲಿಗೆ ಬನ್ನಿರೆಂದು ಕರೆದರು. ಏನಿದ್ದರೂ ಫೋನಿನಲ್ಲಿ ವಾರಕ್ಕೊಂದೆರಡು ಸಲ ತಮ್ಮತಮ್ಮಲ್ಲೇ ಮಾತಾಡಿಕೊಂಡಿರುತ್ತಿದ್ದ ಸೊಸೆಯರು, ಹೆಣ್ಣು ಮಕ್ಕಳು ಒಟ್ಟಾಗಿ ಸೇರಿ ಆರುತಿಂಗಳ ಮೇಲೇ ಆಗಿತ್ತು. ಆನಂದಿ ತೀರಿಕೊಂಡಾಗ ತಿಥಿ, ವೈಕುಂಠ ಅಂತ ಹೋದ ಹದಿನೈದು ದಿನಗಳೊಳಗೆ ಜೊತೆಯಾಗಿ ಹೋಗಿ ಬಂದಿದ್ದಷ್ಟೇ. ಆಮೇಲೆ ಸಿಗುವ ಸಂದರ್ಭ ಒದಗಿಬರಲಿಲ್ಲ. ಮಾತು ಹೇಗೆ ತಿರುಗಿದರೂ ಆನಂದಿಯ ವಿಷಯಕ್ಕೇ ಬಂದು ನಿಂತು ನಿರ್ವಾತ ಕವಿಯುತ್ತಿತ್ತು. ಆ ಮುಜುಗರದಿಂದ ಪಾರಾಗಲೋ ಎಂಬಂತೆ ಮೇಲೆಮೇಲೆ ಕುಶಲ ಸಂಭಾಷಣೆ ನಡೆಸಿ ಫೋನಿಟ್ಟುಬಿಡುವ ದಾರಿ ಹಿತವಾಗಿತ್ತು. ಈಗ ಶುರುವಾದ ಸೀರೆ ವಿವಾದ ಮತ್ತು ರಾಮಕ್ಕನ ಕರೆ ಗಮನವನ್ನು ಬೇರೆಡೆಗೆ ಹೊರಳಿಸಿದ್ದು ಕೂಡ ಒಳಿತೇ ಆಯಿತು. ರಾಮಕ್ಕರ ಆರು ಮಕ್ಕಳ ಪೈಕಿ ಆನಂದಿಯೇ ವಿಭಿನ್ನ. ಮೌನಿ. ಧಾರಾಳಿ. ಆದರೆ ಸದಾ ಕೊರಗನ್ನು ಹಚ್ಚಿಕೊಂಡೇ ಬಾಳಿದ ಹೆಣ್ಣು. ಒಳ್ಳೆಯ ಗಂಡ, ಮುದ್ದಾದ ಮಕ್ಕಳು, ಸ್ವಂತ ಮನೆ, ಸ್ವಾತಂತ್ರ್ಯ ಎಲ್ಲ ಇದ್ದೂ ತಾನು ಕನಸಿದ್ದ ಬಾಳು ಇದಲ್ಲ ಎಂದು ನಿರಾಕರಣೆಯಲ್ಲೇ ದಿನದೂಡಿದಳು. ಅಮ್ಮನೊಂದಿಗೆ ಆಡಿದ ಕೆಲವೇ ಮಾತುಗಳಲ್ಲೂ ಅತೃಪ್ತಿಯ ಅಂಶಗಳಿದ್ದವೇ ಹೊರತು ಜೀವನಪ್ರೀತಿಯಲ್ಲ. ಆನಂದಿಯ ಮುಖದಲ್ಲಿ ನಗುವನ್ನು ಮೂಡಿಸಲು ರಾಮಕ್ಕ ಪಟ್ಟಪಾಡು ಒಂದೆರಡಲ್ಲ. ಅವಳಿಗಿಷ್ಟದ ತಿಂಡಿ, ಬಟ್ಟೆ, ಪ್ರವಾಸ, ನೆಮ್ಮದಿ ತರಬಹುದಾದ ಮಾತು, ಸಂಗೀತ, ಬೆಚ್ಚನೆ ತವರು ಎಲ್ಲವನ್ನೂ ಪ್ರಯತ್ನಿಸಿ ಕಡೆಗೆ ಮಾನಸಿಕ ವೈದ್ಯರ ಹತ್ತಿರವೂ ತೋರಿಸಿ , ಚಿಕಿತ್ಸೆಯಾಯಿತು. ಔಷಧಿಯ ಪ್ರಭಾವದಿಂದ ಸ್ವಲ್ಪ ಚೇತರಿಕೆ ಕಂಡಂತಾದರೂ ಮತ್ತೆ ಯಥಾಸ್ಥಿತಿಗೆ ಮರಳುತ್ತಿದ್ದ ಮಗಳು ಜೀವನದ ಸವಾಲಾಗಿದ್ದಳು.ಅವಳಿಗೆಂದು ಆಸೆಯಿಂದ ಕೊಂಡುಹೋದ ತಿಂಡಿ, ಹಣ್ಣು, ಬಟ್ಟೆ, ಒಡವೆ ಯಾವುದನ್ನೂ ಆಕೆ ತನಗಾಗಿ ಉಳಿಸಿಕೊಳ್ಳುತ್ತಲೇ ಇರಲಿಲ್ಲ. ಎಲ್ಲವನ್ನೂ ಹಂಚಿ, ತಾನು ಮಾತ್ರ ಹಿಡಿಯನ್ನ, ನಾಲ್ಕಾರು ಸಾದಾ ಸೀರೆ, ಮಂಕಾದ ರವಿಕೆಯಲ್ಲೇ ಜೀವನ ಸವೆಸಿಬಿಟ್ಟಳು. ಏಕೆಂದು ಘಟ್ಟಿಸಿ ಕೇಳುವಂತಿಲ್ಲ. ನನಗೇನು ರೂಪ, ವಿದ್ಯೆ, ಅಧಿಕಾರ ಇದೆಯೇ? ನಿನ್ನಂತೆ ಮೆರೆಯಲು… ಕೊಟ್ಟ ಮೇಲೆ ಅದು ನನ್ನದೆನ್ನುವ ಹಾಗಿದ್ರೆ ಕೊಡು. ಇಲ್ಲದಿದ್ದರೆ ತರುವ ಉಸಾಬರಿಯೇ ನಿನಗೆ ಬೇಡವೆನ್ನುತ್ತಿದ್ದಳು. ಸಮಾರಂಭಗಳಲ್ಲಿ ಉಳಿದವರೆಲ್ಲಾ ಮಿಂಚುತ್ತಿದ್ದರೆ, ತಾನೊಂದು ಮೂಲೆಯಲ್ಲಿ ಇವರಾರಿಗೂ ಸಂಬಂಧಿಸಿಯೇ ಇಲ್ಲವೆಂಬ ನಿರ್ಲಿಪ್ತ ಭಾವದಲ್ಲಿ ಕುಳಿತಿರುತ್ತಿದ್ದಳು. ನಾನು ಹಳೆಸೀರೆಯುಟ್ಟು ಬರುವುದು ನಿಮಗೆ ಇರುಸುಮುರುಸಾದೀತೆಂದು ಜನ ಸೇರುವಲ್ಲಿಗೆ ಬರುವುದನ್ನೇ ಬಿಟ್ಟಳು. ಒಂಟಿಯಾಗಿರುತ್ತ ಅದೇನನ್ನು ಧೇನಿಸುತ್ತಿದ್ದಳೋ? ಮಗಳೇ ಆದರೂ ರಾಮಕ್ಕನಿಗೆ ಅವಳ ಅಂತರಂಗವನ್ನು ಅರಿಯುವುದು ಅಸಾಧ್ಯ. ಉಳಿದೈದು ಮಕ್ಕಳಿಗೆ ಸೇರಿ ತೋರುವ ಕಾಳಜಿಗಿಂತ ಎರಡು ಪಟ್ಟು ಹೆಚ್ಚೇ ಕಾಳಜಿ ತೋರಿದರೂ, ಆನಂದಿಗೆ ಪ್ರಸನ್ನತೆಯಿರಲಿಲ್ಲ. ಇದ್ದಕ್ಕಿದ್ದಂತೆ ಹೃದಯ ಸ್ತಂಭನವುಂಟಾಗಿ ತೀರಿಕೊಂಡ ಆಕೆಯ ಸಾವು ರಾಮಕ್ಕನನ್ನು ಬಲವಾಗಿ ತಟ್ಟಿತ್ತು. ಐವತ್ತೊಂಭತ್ತು ಸಾಯುವ ವಯಸ್ಸೇ? ಎಪ್ಪತ್ತೈದರ ತನಗೇ ಈ ಬದುಕಿನ ಸವಿಯನ್ನು ಇನ್ನಷ್ಟು ಸವಿಯಬೇಕೆನ್ನಿಸುವಾಗ ನಿರಾಕರಣೆಯಲ್ಲೇ ಬದುಕು ದೂಡಿದ ಆಕೆ ಅನುಭವಿಸಿದ್ದಾದರೂ ಏನನ್ನು? ಬದುಕಿನ ಹಂಬಲ ಅಪರೂಪವೇ? ತನ್ನನ್ನು ಈ ಬದುಕಿಗೆ ಕಟ್ಟಿಹಾಕಿರುವುದಾದರೂ ಏನು? ವಯಸ್ಸಾದಂತೆ ಮೋಹ ಕಳಚಿಕೊಳ್ಳಬೇಕೆನ್ನುತ್ತಾರೆ. ತನಗೇಕೆ ವೈರಾಗ್ಯ ಸೋಕಿಲ್ಲ? ಹೀಗೆ ನೂರಾರು ಪ್ರಶ್ನೆಗಳು ತಲೆತಿನ್ನುತ್ತಿತ್ತು. ಇದುವರೆಗೂ ಕೂಡಿಟ್ಟುಕೊಳ್ಳುವುದರಲ್ಲಿ, ಉಂಡುಟ್ಟು ಸಂಭ್ರಮಿಸುವುದರಲ್ಲಿ ಕಳೆದ ಕಾಲದ ಬಗ್ಗೆ ವಿಷಾದವಿಟ್ಟುಕೊಳ್ಳದೆ, ಮುಂದೆ ಸರಳವಾಗುತ್ತಾ ಸಾಗಲು ಪ್ರಯತ್ನಿಸಬೇಕೆನ್ನಿಸಿತು. ಆನಂದಿಯ ಸಾವು , ತನ್ನ ಮೊದಲ ಕರುಳಕೂಸಿನ ಅಗಲುವಿಕೆ ತನ್ನ ಬದುಕಿನ ಮತ್ತೊಂದು ತಿರುವು. ಉದಾರವಾಗಿ ಕೊಡುವುದರಲ್ಲಿ ತೃಪ್ತಿಯನ್ನು ಕಂಡಿದ್ದ, ಮೌನವಾಗಿ ಕಾರ್ಯ ಸಾಧಿಸುತ್ತಿದ್ದ ಮಗಳು ಬದುಕಿನ ಸವಾಲಾಗಿರಲಿಲ್ಲ. ಗುರುವಾಗಿದ್ದಳೆನ್ನಿಸಿ ಗಂಟಲುಬ್ಬಿ ಬಂದಿತು. ಅವಳಿದ್ದಷ್ಟು ದಿನವೂ ಅವಳಿಗೆ ಹೊರಗಿನಿಂದ ನೆಮ್ಮದಿಯನ್ನು ಹುಡುಕಿಕೊಡುವ ಸಕಲ ಸಾಹಸಗಳನ್ನು ಮಾಡಿದೆನೇ ಹೊರತು, ಅವಳಾಗಿಯೇ ಬದುಕನ್ನು ಅರ್ಥೈಸಿಕೊಳ್ಳಲು ಬಿಡಲೇ ಇಲ್ಲವೆನಿಸಿತು. ಅಥವಾ ಅವಳು ಕಂಡುಕೊಂಡಿದ್ದ ಅರ್ಥವನ್ನು ತನಗೆ ದಾಟಿಸದೆ ಹೊರಟಳೇನೋ ಎಂದು ವ್ಯಥೆಯಾಯಿತು. ತನಗೆಂದು ಏನನ್ನೂ ಶೇಖರಿಸದೆ, ಇರುವಾಗಲೇ ಎಲ್ಲವನ್ನೂ ಕೊಟ್ಟು ಹಾಯಾಗಿ ಹೊರಟುಬಿಟ್ಟ ಮಗಳು ಬಾಳಿ ಹೋದ ಪಾಠವನ್ನು ಕಲಿಯಲು ರಾಮಕ್ಕ ಮನಸ್ಸು ಮಾಡಿದ್ದಳು. ಮಕ್ಕಳು , ಸೊಸೆ, ಮೊಮ್ಮಕ್ಕಳೆಲ್ಲಾ ಸೇರಿ ಅಂದು ಹಬ್ಬದ ವಾತಾವರಣ ಮೂಡಿತ್ತು. ಹತ್ತು ಹದಿನೈದು ಸೀರೆಗಳನ್ನು ಅವರಿವರಿಗೆ ಕೊಟ್ಟಿದ್ದರು ಬಿಟ್ಟರೆ ಬಹುಪಾಲು ಸೀರೆಗಳು ಬೀರುವಿನಲ್ಲಿ ಭದ್ರವಾಗಿ ಕೂತಿದ್ದವು. ಬಂದವರಿಗೆಲ್ಲಾ ಅವರಿಗಿಷ್ಟದ ಸೀರೆ ಆಯ್ದುಕೊಳ್ಳುವಂತೆ ಸೂಚಿಸಿ, ಅವರ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಾ ಹೋದಂತೆ ಅತ್ಯಂತ ಸಂತೃಪ್ತ ಭಾವ ಮೈದುಂಬಿತ್ತು. ಬದುಕು ಮಗ್ಗುಲು ಬದಲಿಸುತ್ತಿತ್ತು. ……..
ಶಾಂಭವಿ, ಬಣ್ಣ, ಜಾತಿ ಮುಂತಾಗಿ..
ಸಣ್ಣಕಥೆ ಶಾಂಭವಿ, ಬಣ್ಣ, ಜಾತಿ ಮುಂತಾಗಿ.. ಡಾ. ಅರಕಲಗೂಡು ನೀಲಕಂಠ ಮೂರ್ತಿ –01– ಮೊಬೈಲ್ ವಾಟ್ಸ್ಯಾಪ್ ರಿಂಗಾದಾಗ ಸುಮಾರು ರಾತ್ರಿ ಹತ್ತು ಗಂಟೆಯ ಸಮಯ. ಊಟ ಮುಗಿಸಿ, ಪಾತ್ರೆ ತೊಳೆಯುವುದು ಇನ್ನೂ ಬಾಕಿ. ಅಷ್ಟರಲ್ಲಿ ಫೋನ್. ಉದ್ದ ರಿಂಗ್ ಆದಾಗಲೇ ಬಹುಶಃ ಇದು ಭಾರತದ್ದಲ್ಲ ಅನ್ನಿಸಿತು. ನಿರಂಜನ್ ತಮ್ಮ ಆಫೀಸಿನ ಫೈಲ್ ಹಿಡಿದು ಮಗ್ನರಾಗಿದ್ದರು. ಇಂತಹ ಫೋನ್ ಕಾಲ್ ಗಳು ಬರುವುದೇ ಅವರಿಗೆ. ಹಾಗಿದ್ದರೂ ಸುಮ್ಮನೆ ಫೈಲೊಳಗೇ ಇಳಿದಿದ್ದಾರೆ. ನಾನು ಕಿಚನ್ನಿನಲ್ಲಿದ್ದೇನೆ, ಹಾಲ್ನಲ್ಲಲ್ಲ, ಅಂತ ಅರಿತೂ ಸಹ. ಪಾಪು ಗಾಢ ನಿದ್ದೆಯಲ್ಲಿದ್ದಳು. ಯಾರಿರಬಹುದು? ಉದ್ದವಾದ ರಿಂಗ್ ಬೇರೆ. ವಿದೇಶದ್ದೇ ಅನ್ನಿಸಿತು. “ತಮ್ಮದೇ ಕಾಲ್, ಅವರೇ ಎದ್ದು ನೋಡಬಹುದು, ಆದರೂ ನೋಡು,ಅವರನ್ನ”, ಅನ್ನಿಸಿತು. ಕೊನೆಗೆ ನಾನೇ ಓಡಿದೆ. ನನ್ನದೇ ಫೋನ್. ನನಗೆ ಈ ಫೋನಿನ, ಆ ಫೋನಿನ ಅಂತ ‘ಕರೆಯ ರಿಂಗ್’ ಗಳನ್ನು ಕೇಳಿ ಗುರುತು ಹೀಡಿಯೋದು ಸ್ವಲ್ಪ ಕಷ್ಟವೇ. ಆದರೆ, ಈಗ ಆಶ್ಚರ್ಯ ಕಾದಿತ್ತು. ನನಗೆ ವಾಸ್ತವವಾಗಿ ವಿದೇಶೀ ಫೋನ್ ಬಂದದ್ದೇ ಇಲ್ಲ – ಶಾಂಭವಿ ಹೋದ ಹೊಸದರಲ್ಲಿ ಮಾಡಿದ್ದು ಬಿಟ್ಟು. ಅವಳಲ್ಲದೆ ನನ್ನವರು ಅಂತ ವಿದೇಶದಲ್ಲಿ ಯಾರಿದ್ದಾರೆ? ಶಾಂಭವಿ! ಹೌದು, ಶಾಂಭವಿಯ ಫೋನ್, ಅಮೇರಿಕಾದಿಂದ! ನನ್ನ ಖುಷಿ ನಾನೇ ಅಮೇರಿಕಕ್ಕೆ ಒಮ್ಮೆಲೇ ಹಾರಿದಂತೆ. ನನ್ನ ಆತ್ಮೀಯ ಗೆಳತಿಯಿಂದ. ಅವಳೂ ಅರ್ಜೆಂಟ್ನಲ್ಲಿದ್ದಳು, ಅನ್ನಿಸಿತು; ಆತುರಾತುರವಾಗೇ ಮಾತು ಮುಗಿಸಿಬಿಟ್ಟಳು. ಮೂರ್ನಾಲ್ಕು ನಿಮಿಷಗಳು ಅಷ್ಟೇ. ಆದರೆ, ಮುಖ್ಯ ಸುದ್ದಿಯೆಂದರೆ, ಅವಳು ನಾಳೆಯೇ ಅಲ್ಲಿಂದ ಹೊರಟು ರಜೆಗೆ ಬರುವವಳಿದ್ದಾಳೆ! ಇಷ್ಟು ತಿರುಳು…ಶಾಂಭವಿ ನನ್ನ ಆಪ್ತ ಗೆಳತಿ. ಅವಳು ಮತ್ತು ವೈಶಾಲಿ ಇಬ್ಬರೇ ನನ್ನ ಆತ್ಮೀಯ ಗೆಳತಿಯರು . ಶಾಂಭವಿ ನಿಜಕ್ಕೂ ಗಿಣಿಯೇ. ಅದೂ ಬಿಳೀ ಗಿಣಿ! ನಮ್ಮ ಕಾಲೇಜಿನಲ್ಲಿ ಅವಳಷ್ಟು ಬೆಳ್ಳಗಿದ್ದವರು, ಎಲ್ಲ ಕ್ಲಾಸ್ ನವರನ್ನೂ ಸೇರಿಸಿ ಹುಡುಕಿದರೂ, ಸಿಗುವುದೇ, ಬಹುಶಃ ಒಂದಿಬ್ಬರು. ಹಾಗಾಗಿ ಅವಳು ನಮ್ಮ ಬಿಳಿ ಗಿಣಿ. ಅಂದಾಕ್ಷಣ, ಖಂಡಿತ ಗಿಣಿ ಮೂತಿಯವಳಂತೂ ಅಲ್ಲ!ಶಾಂಭವಿ ನನ್ನ ಆಪ್ತ ಗೆಳತಿ, ಆದುದರಿಂದ, ಈ ಹೊಗಳಿಕೆ, ಅಂತೇನೂ ಅಲ್ಲ. ಅವಳು ನೈಜ ಶ್ವೇತದ ಗೊಂಬೆ. ಕೇವಲ ಬಿಳಿ ಬಣ್ಣ ಮಾತ್ರವಲ್ಲ, ಸುಂದರಿಯೂ ಹೌದು! ಸಿನಿಮಾ ನಟಿಯರೂ ನಾಚುವಷ್ಟು! ಇಡೀ ಕಾಲೇಜೇನು, ಕಾಲೇಜಿನ ಪ್ರತಿ ಇಟ್ಟಿಗೆಯೂ, ಬಹುಶಃ ಅವಳ ಮೇಲೆ ಕಣ್ಣಿಟ್ಟಿತ್ತು ಅಂದರೆ ಅತಿಶಯವಲ್ಲ! ಹೌದು, ಇದೂ ವಾಸ್ತವ – ಸುಂದರಿಯರೆಲ್ಲರೂ ನಟಿಯರಾಗಿಲ್ಲ; ನಟನೆಯಲ್ಲಿ ಸಾಕಷ್ಟು ನುರಿತಿದ್ದರೂ ಸಹ! ಹಲ್ಲು ಮತ್ತು ಕಡ್ಲೆ ಕಥೆ…ಬದುಕಿನ ಕಟು ಸತ್ಯ! ಅಷ್ಟೇ ಅಲ್ಲ; ಶಾಂಭವಿ ಇಂಟೆಲಿಜಂಟ್ ಕೂಡ. ವೆರಿ ಮಚ್! ಬ್ರಹ್ಮದೇವ ಎಲ್ಲರಿಗೂ ಇಂಥ ತಥಾಸ್ತು ಹೇಳುವುದು ಅಸಾಮಾನ್ಯ.ವೈಶಾಲಿ ಕೂಡ ಬಹಳ ಬುದ್ಧಿವಂತೆ. ಅವಳೂ ಸಹ ನನಗಿಂತ ಚೆನ್ನಾಗಿದ್ದಳು. ಹಾಗಾದರೆ, ನಾನು? ಅದನ್ನ ಅವರಿಬ್ಬರಲ್ಲಿ ಯಾರೋ ಒಬ್ಬರಾದರೂ ಹೇಳಬೇಕು ಅಲ್ಲವೇ-“ಲೇ,ನೀರಜ, ನೀನೂ ಚೆನ್ನಾಗಿದ್ದೀಯ” ಅಂತ… ನಾವು ಮೂವರು ಕೂಡ ಈಗ, ನಮ್ಮ ನಮ್ಮ ಮದುವೆಯ ನಂತರ ಬೇರೆ ಬೇರೆ ದಿಕ್ಕು. ವೈಶಾಲಿ ಬೆಳಗಾವಿಯಲ್ಲಿ, ಶಾಂಭವಿ ಅಮೆರಿಕದ ಫ್ಲಾರಿಡದಲ್ಲಿ ಮತ್ತು ನಾನು ಬೆಂಗಳೂರಿನ ಮಲ್ಲೇಶ್ವರದ ಹತ್ತಿರ. ಶಾಂಭವಿಯ ಪತಿ ಬೆಂಗಳೂರಲ್ಲೇ ಸೆಟ್ಲಾಗುವ ಐಡಿಯಾದಿಂದ ಅಲ್ಲೇ ಕೋರಮಂಗಲದ ಹತ್ತಿರ ಮನೆ ಮತ್ತು ಸಾಕಷ್ಟು ಇತರ ಆಸ್ತಿ ಮಾಡಿಟ್ಟಿದ್ದಾರೆ. ನಾವು ಮೂವರು ಇಷ್ಟೊಂದು ಗಾಢ ಸ್ನೇಹಿತರು, ನಿಜ. ಆದರೂ ಸಹ, ‘ಎಲ್ಲರ ಬಗ್ಗೆ ಯಾರಿಗೂ ಅಥವಾ ಎಲ್ಲರಿಗೂ, ಒಬ್ಬೊಬ್ಬರ ವೈಯಕ್ತಿಕವಾದ ಸಂಪೂರ್ಣ ಅರಿವಿರುವುದಿಲ್ಲ’ ಅನ್ನುವುದೂ ಅಷ್ಟೇ ಸತ್ಯ! ಹಾಗೆಯೇ ಶಾಂಭವಿಯ ವಿಷಯದಲ್ಲೂ, ಅವಳ ಆತ್ಮೀಯ ಗೆಳೆತಿಯಾದ ನೀರಜ, ಅಂದರೆ ನನಗೂ ಸಹ ಸಂಪೂರ್ಣ ಮಾಹಿತಿ ಇರಲಿಲ್ಲ ಅಂತ ಅನ್ನಿಸುತ್ತೆ…ಅದೂ ಸಹ ಶಾಂಭವಿಯ ಮದುವೆಯ ನಂತರದ ಬದುಕಿನ ಬಗ್ಗೆ. ಕಾರಣ ಮದುವೆಯ ಹೊಸ್ತಿಲಿನಿಂದಲೇ ಅನ್ನಿಸುವಂತೆ, ಅವಳು ತರಾತುರಿಯಿಂದ ಗಂಡನ ಜೊತೆ ಅಮೆರಿಕದ ವಿಮಾನ ಏರಿಬಿಟ್ಟಿದ್ದಳು. ಆಮೇಲೆ ಕಷ್ಟ-ಸುಖ ಅಂತಿರಲಿ, ಹೆಚ್ಚು ಫೋನ್ ಕೂಡ ಇಲ್ಲ. ವಾಟ್ಸ್ಯಾಪ್ ಇನ್ನೂ ಉಗಮ ಆಗದಿದ್ದ ಕಾಲದಲ್ಲಿ, ಫೋನಿನಲ್ಲಿ, ಅದೂ ಅಷ್ಟು ದೂರದ ಕರೆಗಳಲ್ಲಿ ಏನೇನು ಅಂತ ಮಾತಾಡಲು ಸಾಧ್ಯ? ಅವಳ ಅಪ್ಪ ಅಮ್ಮ ನನ್ನ ಜೊತೆ ಸಲಿಗೆಯಿಂದ ಇದ್ದರೂ, ಸುಮಾರು ಬಾರಿ ಫೋನ್ ಮಾಡಿದ್ದರೂ ಸಹ, ಎಲ್ಲ ರೀತಿಯ ವಿಚಾರ ವಿನಿಮಯ ಅವರೊಂದಿಗೆ ನನಗೆ ಸಾಧ್ಯವೇ? ಅವರೇನು ನನ್ನ ಓರಗೆಯವರೇ? ಶಾಂಭವಿಯ ಮದುವೆ, ನನ್ನ ಮತ್ತು ವೈಶಾಲಿಯ ಮದುವೆಯಾಗಿ ಬರೋಬ್ಬರಿ ಎರಡೂವರೆ ವರ್ಷದ ನಂತರ, ಆದದ್ದು. ಅದಕ್ಕೆ ಕಾರಣವೂ, ಇಲ್ಲದಿಲ್ಲ. ನನಗೆ ಗೊತ್ತಿರುವುದು ಅಷ್ಟಿಷ್ಟು ಮಾತ್ರ; ಶಾಂಭವಿ ಮಧ್ಯೆಮಧ್ಯೆ ಹೇಳುತ್ತಿದ್ದಷ್ಟು. ನಮ್ಮ ಎಜುಕೇಷನ್ ಮುಗಿದ ಮೇಲಂತೂ, ನಾನು ಮಲ್ಲೇಶ್ವರದಲ್ಲಿ, ಅವಳು ಕೆಂಗೇರಿಯಲ್ಲಿ; ಆಗಾಗ ಫೋನ್ ಕರೆ ಬಿಟ್ಟು, ಪರಸ್ಪರ ಹೋಗೋದು ಬರೋದು ಅಂತಲೂ ಇರಲಿಲ್ಲ. ಇನ್ನೆಲ್ಲಿಯ ವಿಚಾರ ವಿನಿಮಯ? ಮದುವೆಯ ನಂತರ ಅಂತೂ ಏನೇನು ಗೊತ್ತಿಲ್ಲ. ಪೂರ್ತಿ ಮಾಹಿತಿಯಂತೂ ಇಲ್ಲವೇ ಇಲ್ಲ. ಹಾಗಾಗಿ, ಅದರ ಬಗೆಗೆ….. –02– ನಾವೀಗ ಬೆಂಗಳೂರು ನಗರದ ಹೊರವಲಯದಲ್ಲಿ ವಾಸವಿದ್ದೇವೆ – ಕೆಂಗೇರಿಯಲ್ಲಿ. ನಾನು ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ರಿಟೈರ್ ಆಗಿ, ಸರಿ ಸುಮಾರು ಹತ್ತು ವರ್ಷಗಳೇ ಸಂದಿವೆ. ನನ್ನದು ಅಂತರ್ಜಾತೀಯ ವಿವಾಹ. ನಾನಾಗ ಲೆಕ್ಚರರ್ ಆಗಿದ್ದಾಗಿನಿಂದ ನನ್ನ ಪ್ರೇಮಕಥಾ ಪ್ರಸಂಗ ಆರಂಭ. ನನಗೆ ಡೆಪ್ಯೂಟೇಶನ್ ಮೇಲೆ ಚಿತ್ರದುರ್ಗಕ್ಕೆ ಎರಡು ತಿಂಗಳ ಕಾಲ ಕಳಿಸಿದ್ದರು. ಆಗ ಒಂದು ದಿನ ಲೈಬ್ರರಿಯಲ್ಲಿ ಯಾವುದೋ ಪುಸ್ತಕದ ಶಿಕಾರಿಯಲ್ಲಿ ಬಿಜಿಯಾಗಿದ್ದಾಗ, ಬಹುಶಃ ನನ್ನ ಕಷ್ಟ ನೋಡಲಾರದೆ ಇವಳು, ಪ್ರಭ – (ಹೌದು, ಈಗಿನ ಈ ಇವಳು, ಪ್ರಭ; ಆಗ ಇವಳಾಗಿರಲಿಲ್ಲ ಅಥವಾ ಪ್ರಭ ಕೂಡ ಆಗಿರಲಿಲ್ಲ; ಬದಲಿಗೆ, ಅವಳು ಮತ್ತು ಪ್ರಭಾಮಣಿ ಆಗಿದ್ದಾಗಿನ ಕಾಲ), – ತಾನೆ ಖುದ್ದು ಬಂದು, “ಎನಿ ಹೆಲ್ಪ್ ನೀಡೆಡ್” ಅಂತ ಕೇಳಿದ್ದಳು, ಕೇಳಿ ಒಂದು ಹೊಸ ಅಧ್ಯಾಯದ ಆರಂಭಕ್ಕೆ ಕಾರಣವಾಗಿ ಆಶ್ಚರ್ಯ ಮೂಡಿಸಿದ್ದಳು! ಹಾಗೆ ಪರಿಚಯವಾಗಿ, ಅಲ್ಲಿದ್ದ ಆ ಎರಡು ತಿಂಗಳ ಅವಧಿಯಲ್ಲಿ, ಅದು ಪ್ರೀತಿ- ಪ್ರೇಮ ಅಂತಲೂ ತಿರುವು ಪಡೆದು, ‘ನಮ್ಮ ಕಥೆ ನಾವೇ ದಿಗ್ಧರ್ಶಿಸಿಕೊಂಡ ಹಾಗೆ’ ಡೆಪ್ಯೂಟೇಶನ್ ಮುಗಿಸಿ ವಾಪಸ್ ಆದ ಎರಡು ವರ್ಷಗಳ ನಂತರ ತಾಳಿ ಅಂತ ಭದ್ರ ಬಿಗಿದದ್ದು! ನಮ್ಮ ಆ ಬೆಚ್ಚನೆಯ ಭಾವನಾ ಬದುಕಿನ, ಕೆಚ್ಚಿನ ಸಮಯದಲ್ಲಿ, (ಮತ್ತು ಆಮೇಲೆ ಹಾಗೂ ಈಗ ಕೂಡ, ಅಥವ ಎಂದೆಂದಿಗೂ-ಬಹುಶಃ ನಾವು ಬದುಕಿರುವವರೆಗೂ) ನಮ್ಮ ಬಗ್ಗೆ ಯಾರು ಯಾರು ಏನೇನು ಕಥೆ ಹೆಣೆದಿದ್ದಾರೆ, ಏನೇನು ಹಿಂದೆಮುಂದೆ, ಸುತ್ತ ಮುತ್ತ ತಿವಿದು ತಿವಿದು ಅಣಕಿಸಿದ್ದಾರೆ, ಅದೆಲ್ಲ ಆಗಲೂ ನಮಗೆ ಮುಖ್ಯವಾಗಿರಲಿಲ್ಲ, ಹಾಗೂ ಈಗಲೂ ಇಲ್ಲ! ಆದರೆ…ನನ್ನ ಪ್ರೀತಿಯ ಅಪ್ಪ ಅಮ್ಮ? ಅವರಾದರೂ, ನನ್ನ ‘ಭುಜದೊಡನೆ ಭುಜವಾಗಿ’ ನಿಂತಿದ್ದರೆ, ಆ ದಿನಗಳಲ್ಲಿ, ಆನಂದ ಹಾಗೂ ಹಿಂಸೆಗಳ ದ್ವಂದ್ವ ಪರಿಸ್ಥಿತಿಯ ಆ ದಿನಗಳಲ್ಲಿ, ಮುಖ್ಯವಾಗಿ ಮದುವೆಯಾದ ತಕ್ಷಣದ ಕಾಲದಲ್ಲಿ, “ನಾವಿರುವೆವು ನಿಮ್ಮೊಂದಿಗೆ” ಅಂದಿದ್ದರೆ, ಅಷ್ಟಕ್ಕೇ ನಾನು ‘ಕೆಚ್ಚೆದೆಯಾಗಿರುತ್ತಿದ್ದೆ’! … ಆದರದು ಹಾಗಾಗಲೇ ಇಲ್ಲ. ಎಣಿಕೆಯೇ ಬೇರೆ, ನಡೆಯುವುದೇ ಬೇರೆ…! ಹಾಗಂತ ನಾನು ಹೇಡಿಯಾದೆ ಅಂತಲೂ ಅಲ್ಲ. ಹಾಗಾದರೆ ನನ್ನ ಹೆತ್ತವರನ್ನು ನಾನು ದೂಷಿಸಬಹುದೇ? ಅಕಸ್ಮಾತ್ ನಾನೇ ಅವರ ಸ್ಥಾನದಲ್ಲಿ ಇದ್ದಿದ್ದರೆ; ಆಗ ನನ್ನ ಯೋಚನೆಗಳು ಯಾವ ಕೋನದತ್ತ ತಿರುಗುತ್ತಿದ್ದವು? ಮೇಲಾಗಿ, ಮನೆಗೆ ನಾನೇ ಹಿರಿಯನಾಗಿದ್ದೆ; ಆದರೆ ನನ್ನ ನಂತರ ಹೆಣ್ಣು ಮಕ್ಕಳು ಅಂತಲೂ ಇರಲಿಲ್ಲ. ಇದ್ದವರಿಬ್ಬರೂ ಅವಳಿ ತಮ್ಮಂದಿರು. ಈ ದಿಕ್ಕಿನಲ್ಲಿ ಯೋಚಿಸುವುದೂ ಸಹ ತಪ್ಪಾಗಿ, ನನ್ನ ಮೂತಿ ನೇರಕ್ಕೆ ನನ್ನದೇ ಮಾತಾದಂತೆ, ಆಗಬಿಡಬಹುದು ಅಲ್ಲವೇ? ಹೌದು, ಜಾತಿ! ಹ್ಞೂ, ಜಾತಿ ಅನ್ನುವುದು ಎಷ್ಟು ಕಠೋರ. ಇದು ಯಾವ ಬೇತಾಳ-ಸೃಷ್ಟಿ ಅನ್ನಿಸಿಬಿಡುತ್ತದೆ! ಕನಿಷ್ಠ ವಿಷಮ ಘಳಿಗೆಗಳಲ್ಲಿ… ನನ್ನ ಮೊದಲ ಮಗಳು, ಶಕುಂತಲ ಹುಟ್ಟಿದ ನಂತರ, ಏಳು ವರ್ಷಗಳು ಮಕ್ಕಳೇ ಆಗಿರಲಿಲ್ಲ. ವಾಸ್ತವವಾಗಿ, ನಮ್ಮಿಬ್ಬರಿಗೇ ಬೇಡ ಅನ್ನಿಸಿ, ಒಂದೇ ಸಾಕು, ಅವಳನ್ನೇ ಚೆನ್ನಾಗಿ ಸಾಕಿ ಸಲಹಿ, ಉತ್ತಮ ವಿದ್ಯಾವಂತಳನ್ನಾಗಿ ಬೆಳೆಸಿದರಾಯಿತು, ಅಂದುಕೊಂಡು ಸುಮ್ಮನಿದ್ದೆವು. ಶಕ್ಕುವಿನ (ಶಕುಂತಲೆಯನ್ನು ನಾವು ಕರೆಯುವ ಹ್ರಸ್ವ ಹೆಸರು), ಆರನೇ ಹುಟ್ಟು ಹಬ್ಬದ ನಂತರ, ಅಥವಾ ಅಷ್ಟರಲ್ಲಿ, ಇದ್ದಕ್ಕಿದ್ದಂತೆ ಪ್ರಭಾಳಿಗೆ, ಇನ್ನೊಂದು ಮಗು, ಗಂಡುಮಗು, ಬೇಕೆಂಬ ಹೆಬ್ಬಯಕೆ ಉಂಟಾಗಿ, ಮತ್ತು ತನ್ನ ಮೊದಲ ಮಗಳು ಮದುವೆಯಾಗಿ ಗಂಡನ ಮನೆ ಸೇರಿದ ಮೇಲೆ, ಈ ನಮ್ಮ ಮನೆ ಭಣಗುಡುವುದಲ್ಲ, ಅನ್ನುವ ಭ್ರಮೆ ಅಥವಾ ಭಯ ಕಾಡಲು ಆರಂಭಿಸಿ, ಹಠ ಹಿಡಿದ ಕಾರಣ ಬಂದವಳೇ ಈ ನಮ್ಮ ಶಾಂಭವಿ! ಪ್ರಭಾಳ ದುರದೃಷ್ಟ, ಗಂಡಾಗಲೇ ಇಲ್ಲ! ನಮ್ಮ ಶಕುಂತಲೆಯ ಮದುವೆ ಬಹಳವೇ ಕೆಟ್ಟಕಾಲದಂತೆ ಕಾಡಿ, ನಮ್ಮನ್ನು ಹಿಂಸಿಸಿ ಹಿಂಡಿಬಿಟ್ಟಿತ್ತು. ಯಾರು ಬಂದರೂ, ಹುಡುಗಿ ಒಪ್ಪಿಗೆಯಾಗಿದೆ, ತೀರ್ಮಾನ ಮಾಡಿ ತಿಳಿಸುವೆವು ಅಂತ ಹೇಳಿ ಹೋಗುತ್ತಿದ್ದರು; ಕ್ರಮೇಣ ಬ್ರೋಕರ್ ಮೂಲಕವೋ, ಇನ್ನಾರದೋ, ಅಥವ ಇನ್ನಾವುದೋ ಮುಖಾಂತರವೋ, ಈಗಲೇ ಮದುವೆ ಮಾಡಲ್ಲ ಅಂತಲೋ, ಬೇರೊಂದು ಕಾರಣವನ್ನೋ, ಅಥವಾ ಕಾರಣವೇ ಇಲ್ಲದ ಕಾರಣವೊಂದನ್ನು ತೂರಿ, ನಿರ್ಗಮಿಸುತ್ತಿದ್ದರು. ಸತ್ಯ ಅಂದರೆ ನಮ್ಮಿಬ್ಬರ ಅಂತರ್ಜಾತಿ ಅಡ್ಡಲಾಗಿ ನಿಂತ ಮುಳ್ಳು ಅಂತ ನಮಗೆ ಅರಿವಂತೂ ಆಗಿಬಿಡುತ್ತಿತ್ತು; ಈ ತೆರನಾದ ಅನುಭವಗಳು ವಿಪುಲವಾಗಿ ನಮ್ಮಿಬ್ಬರನ್ನೂ ಹೈರಾಣಾಗಿಸಿದ್ದವು.. ಅಂತಹ ಸಂದರ್ಭಗಳಲ್ಲಿ ಪ್ರಭ ಬೆಡ್ ರೂಮಿನಲ್ಲಿ ಬಳ್ಳಗಟ್ಟಲೆ ಕಣ್ಣೀರು ಹರಿಸಿದ್ದಳು. ಕೊನೆಗೆ, “ಯಾವುದೇ ಕಾರ್ಯ ಆಗುವ ಹಾಗಿದ್ದರೆ, ಯಾವ ಪ್ರಚೋದನೆ ಇಲ್ಲದೆಯೂ, ಆಗಿಯೇ ತೀರುತ್ತದೆ, ಆ ಸುವರ್ಣ ಸಮಯಕ್ಕೆ ಸರಿಯಾಗಿ”, ಅನ್ನುವಂತೆ ನಮ್ಮ ಪಾಲಿನ ಭಗವಂತ ಒಮ್ಮೆ ಕಣ್ತೆರೆದೇಬಿಟ್ಟ! ನನ್ನ ಹಳೆಯ ಕೊಲೀಗ್ ಒಬ್ಬರ ಮೂಲಕ…ಅವರ ಆಪ್ತರ ಮಗ, ಫಿಸಿಕ್ಸ್ ಲೆಕ್ಚರರ್, ಶಶಾಂಕ್ ಎಂಬೊಬ್ಬರು ಒಪ್ಪಿ ಮದುವೆ ಅಂತ ಆಯಿತು! ಶಕುಂತಲೆಯ ರೂಪ ಕೂಡ ತೆಗೆದುಹಾಕುವ ಹಾಗೇನಿರಲಿಲ್ಲ. ಶಾಂಭವಿಯಷ್ಟು ಬಣ್ಣ ಮತ್ತು ಸೌಂದರ್ಯ ಇಲ್ಲದಿದ್ದರೂ ಸಹ. ಆದರೂ ಸಹ, ನಮ್ಮ ಶಾಂಭವಿ ಬಹಳವೇ ರೂಪವಂತೆ ಆಗಿದ್ದುದರಿಂದ, ಯಾರೇ ಶಕುಂತಲೆಯನ್ನು ನೋಡಲು ಬಂದಾಗ, ಶಾಂಭವಿಯನ್ನು ಹೊರಗೆ ಏಲ್ಲಾದರೂ ಕಳಿಸಿ, ಅವಳು ಕಾಲೇಜಿಗೆ ಹೋಗಿದ್ದಾಳೆ, ಎಂದು ಕೇಳಿದವರಿಗೆ ಸುಳ್ಳು ಹೇಳುತ್ತಿದ್ದೆವು. ಇಷ್ಟಕ್ಕೂ ಈ ಜಾತಿ! ಜಾತಿ ಯಾರ ಅಪ್ಪನ ಮನೆ ಸ್ವತ್ತು, ಅಲ್ಲವೇ…! ನನ್ನ ಅಳಿಯ, ಶಶಾಂಕ್ ಕೂಡ, ಅಂತರ್ಜಾತೀಯ ತಾಯಿತಂದೆಯ ಮಗನೇ ಆಗಿದ್ದರು. ಅದೇ ನಮಗೆ ವರಪ್ರದಾಯವಾದದ್ದು! ಆಗ ನನಗೆ ಅನಿಸಿದ್ದು ಹೀಗೆ ಮತ್ತು ಇಷ್ಟು: ನಾನು ಮತ್ತು ಪ್ರಭಾಮಣಿ ಮಾತ್ರ ಈ ಪರಿಸ್ಥಿತಿಯ “ಯಜ್ಞಪಶು”ಗಳಾಗಿರಲಿಲ್ಲ”, ಬದಲಿಗೆ ನಮ್ಮಂಥಹವರು ಈ ಜಗತ್ತಿನಲ್ಲಿ, ಕನಿಷ್ಠ ನನ್ನ ಸುತ್ತಮುತ್ತಲಿನ ಜಗತ್ತಿನಲ್ಲಿ, ಅನೇಕ- ರಿದ್ದಾರೆ ಅನ್ನಿಸಿ ಸಮಾಧಾನ ಆಗಿತ್ತು! “ಅಯ್ಯಾ, ಗೆದ್ದುಬಿಟ್ಟೆಕಣೋ, ಮನೋಹರ!” ಅಂದುಕೊಂಡು ಸಮಾಧಾನ ಪಟ್ಟಿಕೊಂಡು , ಪ್ರಭಾಳಿಗೂ ಬೆನ್ನು ತಟ್ಟಿದ್ದೆ…ಆದರೆ, ಇನ್ನೂ ಮುಂದೆ ಮುಂದೆ ಬೃಹತ್ತಾಗಿ, ಬೆನ್ನುಫಣಿಯ ಹಾಗೆ ಅದೇ ಸಾಂಕ್ರಾಮಿಕ, ಅವಳ ತಂಗಿಯ ಮೂಲಕ, ಶಾಂಭವಿಯ ಮದುವೆ ಮೂಲಕ, ಕಾಡಬಹುದು ಅನ್ನಿಸಿರಲಿಲ್ಲ… ನಮ್ಮಪ್ಪ ಅಮ್ಮನಿಗೆ ನನ್ನ ನಂತರ ಹುಟ್ಟಿದ್ದು ನನ್ನ ಇಬ್ಬರು ತಮ್ಮಂದಿರು, ಅವಳಿ ಎಂದು ಆಗಲೇ ಹೇಳಿದ್ದೇನೆ. ಆದರೂ, ಅಷ್ಟಕ್ಕೇ ಅವರಿಗೆ ನನ್ನ ಅಂತರ್ಜಾತಿ ವಿವಾಹದ ‘ಭಯಂಕರ ಭೂತ’ ಹೊಕ್ಕಂತೆ ಜಿಗುಪ್ಸೆ ಕಾಡತೊಡಗಿ, ನನ್ನನ್ನು ದೂರ
ಶಾಂಭವಿ, ಬಣ್ಣ, ಜಾತಿ ಮುಂತಾಗಿ.. Read Post »
ಜೂನಿಯರ್ಸ್
ತಾಯಿಯ ಅನಾರೋಗ್ಯದ ಆತಂಕ, ಅನುಭವೀ ಗುಮಾಸ್ತರ ಅಮಾನುಷ ವರ್ತನೆಯಿ೦ದ ರೋಷಗೊಂಡ ನಾನು ಬದಲು ಮಾತನಾಡದೆ ಅರ್ಜಿಯನ್ನು ಅವರ ಮುಂದಿಟ್ಟು ನಿರ್ಗಮಿಸಬೇಕೆನ್ನುವಾಗ ಇಲಾಖೆಯಲ್ಲಿ ೧೫ ವರ್ಷ ಹಳಬರಾದ ಮಹಿಳೆಯೊಬ್ಬರು ರಜಾ ಅರ್ಜಿಯೊಂದಿಗೆ ಹಾಜರಾದರು. ಅವರನ್ನು ಕಂಡ ಕೂಡಲೇ ನಾಟಕೀಯ ವಾಗಿ ನಗುತ್ತ “ಏನ್ ಮೇಡಂ ಏನಾಗಬೇಕಿತ್ತು’ ಎಂದು ವಿನೀತನಾಗಿ ಕೇಳಿದ ಅವರನ್ನು ನೋಡಿ ಈಗ ತಾನೇ ಮಾನವೀಯತೆ ಇಲ್ಲದ ಗುರುಗುಟ್ಟಿದ ಮನುಷ್ಯ ಈತನೇನ ಅನ್ನಿಸಿತು.









