ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲೇಖನ ಗೃಹಿಣಿ ಮತ್ತು ಸಾಹಿತ್ಯ ಜ್ಯೋತಿ  ಡಿ.ಬೊಮ್ಮಾ ಪ್ರಾಚೀನಕಾಲದಿಂದಲೂ ಸ್ತ್ರೀ ಎರಡನೆ ದರ್ಜೆಯ ಪ್ರಜೆ ಎಂದು ಗುರುತಿಸಲ್ಪಟ್ಟವಳು. ಪುರುಷ ಮೇಲು ಸ್ತ್ರೀ ಕೀಳು ಎಂಬ ಭಾವನೆಯಿಂದ  ಸ್ತ್ರೀ ಯು ಶಿಕ್ಷಣದಿಂದ ವಂಚಿತಳಾಗಿದ್ದಳು. ಹಾಗಾಗಿ ಸ್ತ್ರೀ ಯು ಸಾಹಿತ್ಯ ರಚನೆಯಲ್ಲಿ ಹಿಂದೆ ಬಿದ್ದಳು.  ಮೊಟ್ಟಮೊದಲ ಸಾಹಿತ್ಯ ರಚಿಸಿರುವದು ಹನ್ನೆರಡನೆ ಶತಮಾನದ ವಚನಗಾರ್ತಿಯರು . ಎರಡನೆಯ ಹಂತ ದೇಶದ ಸ್ವತಂತ್ರ ಚಳುವಳಿಗಳ ಸಂದರ್ಭದಲ್ಲಿ. ಹನ್ನೆರಡನೆಯ ಶತಮಾನದ ವಚನಗಾರ್ತಿಯರು ತಮ್ಮ ವಚನಗಳ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನಿಸಿದರು.ಸಾಮಾಜಿಕ ಸ್ವಾತಂತ್ರ್ಯ ಅಂದೋಲನ ರಚಿಸಿದರು. ಸ್ವಾತಂತ್ರ್ಯ ದ ಸಂದರ್ಭದಲ್ಲಿ ದೇಶಭಕ್ತಿ ಯ ಪರ ಪದ್ಯ ರಚಿಸಿ ರಾಷ್ಟ್ರ ಪ್ರೇಮ ಸಾರಿದರು. ಹಾಗೆ ನೋಡಿದರೆ ೨೦ ನೆಯ ಶತಮಾನದ ವರೆಗೂ ಮಹಿಳೆಯರು ರಚಿಸಿದ ಮಹಿಳಾ ಸಾಹಿತ್ಯದಲ್ಲಿ ವಿಶೇಷ ವೇನು ಕಂಡು ಬಂದಿಲ್ಲ. ೨೦ ನೇ ಶತಮಾನದ ವರೆಗೆ ಮಹಿಳೆ ತನ್ನ ಮನದ ತುಮಲವನ್ನು ಸಾಹಿತ್ಯದ ಮೂಲಕ ಹಂಚಿಕೊಂಡಿರುವ ಉದಾಹರಣೆಗಳಿಲ್ಲ. ಹದಿಬದೆಯ ಧರ್ಮ ದ ಸಂಚಿಯ ಹೊನ್ನಮ್ಮನ್ನೆ ಇರಲಿ ,ಹೆಳವನ ಕಟ್ಟೆಯ ಗಿರಿಯಮ್ಮನೆ ಇರಲಿ ,ಜಾನಪದ ಲೋಕದ ಗರತಿಯರೆ ಇರಲಿ ಇವರೆಲ್ಲರೂ ಬರೆದಿರುವದು ತ್ಯಾಗದ ಉಪದೇಶಗಳೆ. ಹನ್ನೆರಡನೆ ಶತಮಾನದ ವಚನಗಾರ್ತಿಯರಲ್ಲಿ ಅಕ್ಕಮಹದೇವಿ ಮಾತ್ರ ಸ್ತ್ರೀ ಜಗತ್ತಿನ ತಲ್ಲಣಗಳಿಗೆ  ದ್ವನಿಯಾಗಿ ನಿಲ್ಲುತ್ತಾಳೆ. ಮೊಟ್ಟಮೊದಲ ಬಾರಿಗೆ ಲಿಂಗ ತಾರತಮ್ಯ ದ ಬಗ್ಗೆ ದ್ವನಿ ಎತ್ತುತ್ತಾಳೆ . ಆಕೆ  ಹೆಣ್ತನಕ್ಕೆ  ಲೋಕ ಹೋರಿಸಿರುವ  ಮಿತಿಯನ್ನು ಮೀರುವ , ಮೀರಿದ್ದನ್ನು ಹೇಳುವ ಪ್ರಯತ್ನ ಮಾಡುತ್ತಾಳೆ. ನಂತರ ಸಂಚಿಯ ಹೊನ್ನಮ್ಮ ಪುರುಷ ಪ್ರಧಾನ್ಯತೆಯನ್ನು ಸಂಪೂರ್ಣ ಒಪ್ಪಿಕೊಂಡರು ಹೆಣ್ಣಿನ ಮೇಲಾಗುತ್ತಿರುವ ಅನ್ಯಾಯಕ್ಕೆ ವಿರುದ್ದವಾಗಿ  ಒಂದು ಸಣ್ಣ ಪ್ರತಿಭಟನೆ ಸೂಚಿಸುತ್ತಾಳೆ. ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು ,ಎಂದು ದ್ವನಿ ಎತ್ತುತ್ತಾಳೆ. ಜನಪದ ಗೀತೆಯ ಗರತಿಯರು ತಮ್ಮ ಗೀತೆಗಳಲ್ಲಿ ಹೆಚ್ಚಾಗಿ ಯಾವದೇ ಪ್ರತಿರೋಧ ಒಡ್ಡದೆ ,ಪತಿಯ ಅನ್ಯಾಯಗಳಿಗೆ ಪ್ರತಿಯಾಗಿ ಕ್ಷಮಾಗುಣ ರೂಢಿಸಿಕೊಂಡು  ಬಾಳಿದರೆ ಬಾಳು ಹಸನು ಎಂಬ ಮಾತಿಗೆ ಹೆಚ್ಚು ಒತ್ತು ಕೊಟ್ಟಿರುವರು. ೧೯ ನೆ ಮತ್ತು ೨೦ ಶತಮಾನದಲ್ಲಿ ಮತ್ತೆ ಸ್ತ್ರೀ ಪರ ಆಲೋಚನೆಗಳು ಕಾಣತೊಡಗಿದವು. ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಮಹಿಳೆಯರು ಬರೆಯತೊಡಗಿದರು. ಇಲ್ಲಿವರೆಗೆ ಮಹಿಳೆಯರ ಪರವಾಗಿ ಪುರುಷರೆ ಬರೆಯಬೇಕಾದ  ಸಂದರ್ಬವಿತ್ತು. ಅವನು ಬರೆಯುವದು ಸ್ತ್ರೀ ಲೋಕದ ಅರಿವಿಲ್ಲದ ಸಾಹಿತ್ಯ. ಮುಂದೆ ೨೦ ನೆ ಶತಮಾನದಲ್ಲಿ ಮಹಿಳೆಗೆ ಶಿಕ್ಷಣದ ಬಾಗಿಲು ತೆರೆಯಿತು.ತಮ್ಮ ಮನದ ಅಭಿವ್ಯಕ್ತಿ ಯನ್ನು ಮುಕ್ತವಾಗಿ ಹರಿಬಿಡುವ ಧೈರ್ಯ ಲೇಖಕಿಯರು ಮೈಗೂಡಿಸಿಕೊಂಡರು. ಸ್ತ್ರೀ ಯರು ಬರವಣಿಗೆಗೆ ತೊಡಗಿದಾಗ ಅಡುಗೆ ಮನೆ ಸಾಹಿತ್ಯವೆಂದರು.ಪ್ರಗತಿಪರವಾಗಿ ಬರೆದಾಗ ಸ್ತ್ರೀ ವಾದಿ ಎಂಬ ಹಣೆಪಟ್ಟಿ ಅಂಟಿಸಿದರು.ವೈಚಾರಿಕ ನೆಲೆಗಟ್ಟಿನಲ್ಲಿ ಬರೆದಾಗ ಬಂಡಾಯಗಾರ್ತಿ ಎಂದು ಸಾರಿದರು. ಇಂತಹ ಹಣೆಪಟ್ಟಿಗಳಿಲ್ಲದೆ ಮಹಿಳೆಯರ ಬರಹವನ್ನು ಸಾಹಿತ್ಯದೊಳಗೆ  ಮುಕ್ತ ವಾಗಿ ಸ್ವಾಗತಿಸುವ ದಿನಗಳು ಬರಬಹುದೇ.ಎಂಬುವದೆ ಒಂದು ಪ್ರಶ್ನೆ. ವಚನಗಾರ್ತಿರು ಮತ್ತು ಜನಪದ ಸಾಹಿತ್ಯ ರಚಿಸಿರುವ ಮಹಿಳೆಯರೆಲ್ಲ ಗೃಹಿಣಿಯರೆ. ಅವರು ತಮ್ಮ ದೈನಂದಿನ ಕಾರ್ಯದೊಂದಿಗೆ , ವಚನಗಳು ,ಗಾದೆಗಳು ,ಒಗಟುಗಳು ರಚಿಸಿದರು. ಜನಪದ ಸಾಹಿತ್ಯವನ್ನು ಬಿ.ಎಂ ಶ್ರೀಕಂಠಯ್ಯ ಅವರು  ಜನವಾಣಿ ಬೇರು , ಕವಿವಾಣಿ ಹೂ ಎಂದು ಕರೆದಿದ್ದಾರೆ. ಕುಟ್ಟುವ ಬೀಸುವ ಪದಗಳು. ಕಂದನನ್ನು ಮಲಗಿಸುವ ಜೋಗುಳ ಪದಗಳು , ದೇವರ ನಾಮಗಳು , ಆರತಿ ಪದಗಳು ಇವೆಲ್ಲವೂ ಗೃಹಿಣಿಯರಿಂದ ಹೊಮ್ಮಿದ ಸಾಹಿತ್ಯವೆ. ಮುಂದೆ ನವ್ಯಸಾಹಿತ್ಯ ಯುಗ ಆರಂಭವಾಯಿತು.ನಂತರ ಅಧುನಿಕ ಸಾಹಿತ್ಯ ಯುಗ.ಇಷ್ಟರಲ್ಲಿ ಎಲ್ಲರೂ ಅಕ್ಷರಸ್ಥರಾಗುತಿದ್ದರು. ಅನೇಕ ಮಹಿಳಾ ಕಾದಂಬರಿಗಾರರು ಮುನ್ನಲೆಗೆ ಬಂದರು.ತಮ್ಮ ಕಲ್ಪನೆ ಗೆ ಅಕ್ಷರ ರೂಪ ಕೊಟ್ಟು ಕಥೆ ಕಾದಂಬರಿ ಕವನ ರಚಿಸತೊಡಗಿದರು.  ಸ್ತ್ರೀ ಯ ತವಕ ತಲ್ಲಣಗಳು , ಸಾಮಾಜಿ ಮತ್ತು ರಾಜಕೀಯ ಸ್ಥಿತಿ ಗತಿಗಳು ,ಪ್ರೀತಿ ಪ್ರೇಮ ಗಳ ನವಿರುತನ ಮುಂತಾದ ವಿಷಯಗಳ ಬರವಣಿಗೆಯಲ್ಲಿ ಮಹಿಳಾ ಸಾಹಿತಿಗಳು ಮೇಲುಗೈ ಸಾಧಿಸಿದರು. ಇಷ್ಟಾಗಿಯೂ ಮಹಿಳಾ ಸಾಹಿತಿಗಳು ಪುರುಷ ಸಾಹಿತಿಗಳೊಡನೆ ಸಮಾನವಾಗಿ ಗುರುತಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿರಲು ಕಾರಣವೇನು..!  ಯಾವುದೇ ಒಂದು ವಿಷಯ ಸಾಮಾಜೀಕ , ಧಾರ್ಮಿಕ , ರಾಜಕೀಯ , ಶಿಕ್ಷಣ  ,  ಇತಿಹಾಸ ಲೈಂಗಿಕತೆ , ಕಾಮ ಮತ್ತು ಪ್ರೇಮ ದ ವಿಷಯಗಳ ಬಗ್ಗೆ ಪುರುಷರು ಬರೆದ ಸಾಹಿತ್ಯ ವನ್ನು ಸಾಮಾನ್ಯವಾಗಿ ಸ್ವೀಕರಿಸುವ ಈ ಸಮಾಜ  ಅದೇ ಬರಹ ಮಹಿಳೆ ಬರೆದರೆ ತರ್ಕಿಸುತ್ತದೆ.  ಲೈಂಗಿಕತೆ ಕಾಮ ಪ್ರೇಮದ ವಿಷಯಗಳು ಮುಕ್ತವಾಗಿ ಬರೆಯುವದಕ್ಕೆ ಮಹಿಳಾ ಸಾಹಿತಿಗಳು ಸಂಕೋಚಪಡುತ್ತಾರೆ. ಬರೆದವರ ವ್ಯಕ್ತಿತ್ವ ದೊಂದಿಗೆ ತಳಕು ಹಾಕಿ ಓದುವ ಓದುಗರು ಇದು ನಿಮ್ಮ ಸ್ವಂತ ಅನುಭವವೇ ಎಂದು ಕೇಳಿದಾಗ ಮುಜುಗರ ಅನುಭವಿಸಬೇಕಾಗುತ್ತದೆ. ಆದರೆ ಪುರುಷರು ಏನು ಬರೆದರು ನಡೆಯುತ್ತದೆ.  ಮಹಿಳಾ ಬರಹಗಾರರು ನಿರಂತರ ಈ ತರತಮ ಅನುಭವಿಸುತ್ತಿದ್ದಾರೆ. ಪುರುಷರ ದಬ್ಬಾಳಿಕೆ ಖಂಡಿಸಿ ಬರೆದರೆ  ‘ ಫೇಮಿನಿಷ್ಟ ‘ ಎಂಬ ಹಣೆಪಟ್ಟಿ ಅಂಟಿಸಿಬಿಡುತ್ತಾರೆ. ಎಷ್ಟೋ ಬರಹಗಾರ್ತಿಯರು ಈ ಹಣೆಪಟ್ಟಿಗೆ ಹೆದರೆ ತಮ್ಮ ಆಲೋಚನೆಗಳನ್ನು ಮುಕ್ತ ವಾಗಿ ಹೇಳಲಾಗದೆ ಬರೆಯಲಾಗದೆ ಇಬ್ಬಂದಿತನದಲ್ಲಿ ತೊಳಲಾಡುತ್ತಾರೆ. ವೈಚಾರಿಕ ನಿಲುವನ್ನು ತಳೆದ ಸ್ತ್ರೀ ಯು ಸಮಾಜದಲ್ಲಿ ಒಂಟಿತನ ಅನುಭವಿಸಬೇಕಾಗುತ್ತದೆ.ಮೂಢ ನಂಬಿಕೆಗಳನ್ನು ವೀರೋಧಿಸಿದರೆ , ದೇವರ ಅಸ್ಥಿತ್ವ ಅಲ್ಲಗಳೆದರೆ ,ಪ್ರಖರ ವೈಚಾರಿಕ ಚಿಂತನೆಗಳನ್ನು ಮಂಡಿಸಿದರೆ ಸಮಾಜ ಅವಳನ್ನು ನೋಡುವ ದೃಷ್ಟಿಕೋನವೆ ಬೇರೆಯಾಗುತ್ತದೆ. ಆದರೆ ಯಾವಾಗಲೂ ಒಂದೇ ಸಿದ್ದಾಂತಕ್ಕೆ  ಜೋತುಬಿದ್ದು ಒಂದು ಸಮುದಾಯವನ್ನು ಓಲೈಸುವ ಬರಹಗಾರ ಅಥವಾ ಸಾಹಿತಿ ತಮ್ಮ ಆತ್ಮವಂಚನೆ ಮಾಡಿಕೊಂಡಂತೆ. ಸಾಹಿತಿ ಯಾದವರು ಯಾರನ್ನು ಓಲೈಸದೆ ತಮ್ಮ ಅಭಿವ್ಯಕ್ತಿಯನ್ನು ಮುಕ್ತವಾಗಿ ಹರಿಯಬಿಡಬೇಕು. ನಮ್ಮ ಸಮಾಜ ಗೃಹಿಣಿಯರನ್ನು ನೋಡುವ ದೃಷ್ಟಿಕೋನವೆಂದರೆ , ಅವಳು ಕೇವಲ ಗಂಡ , ಮನೆ ,ಮಕ್ಕಳು ಎಂಬ ಪರಿಧಿಯಲ್ಲಿಯೆ ಇರಬೇಕು.ಇದಕ್ಕೂ ಮೀರಿದ ಪ್ರಪಂಚ ಅನ್ಯರದು. ಈಗ ಬರಹಗಾರರಲ್ಲಿ ಸ್ತ್ರೀ ಯರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತಿದ್ದಾರೆ.ಗೃಹಿಣಿಯರು ತಮ್ಮ ಗೃಹ ಕರ್ತವ್ಯ ದ ನಡುವೆಯೆ ಸಾಹಿತ್ಯದೆಡೆ ಹೆಚ ಒಲವು ತೋರುತಿದ್ದಾರೆ. ಓದುವ ಹವ್ಯಾಸ ಬೆಳೆಸಿಕೊಳ್ಳುತಿದ್ದಾರೆ. ಸುಧಾ ತರಂಗ ಮಯೂರ ಕರಮವೀರ ಪತ್ರಿಕೆಗಳೆಲ್ಲ ಗೃಹಿಣಿಯರ ಅಚ್ಚುಮೆಚ್ಚಿನ ಪತ್ರಿಕೆಗಳಾಗಿವೆ.ಮಕ್ಕಳ ಪಠ್ಯ ಪುಸ್ತಕ ಓದಿ ಅವರಿಗೆ ತಿಳಿಸುವ ಮತ್ತು ತಾವು ತಿಳಿದುಕೊಳ್ಳುವ ಆಸಕ್ತಿ ಗೃಹಿಣಿಯರಿಗೆ ಇದೆ. ನಾನು ಒಬ್ಬ ಗೃಹಿಣಿ , ನನ್ನ ಬರಹ ಓದಿದವರು ತಾವು ಶಿಕ್ಷಕಿಯೆ ಎಂದು ಕೇಳುತ್ತಾರೆ. ನನ್ನನ್ನು ಸಾಹಿತ್ಯ ಸಂಬಂಧಿ ಕಾರ್ಯಕ್ರಮಕ್ಕೆ ಅಹ್ವಾನಿಸುವರು ನನ್ನ ಹೆಸರಿನ ಕೆಳಗೆ ಸಾಹಿತಿ ಎಂದೋ ಲೇಖಕಿ ಎಂದೋ ಬರೆಯುತ್ತಾರೆ. ಗೃಹಿಣಿ ಎಂದೆ ಬರೆಯಬಹುದಲ್ಲ. ಗೃಹಿಣಿ ಎಂದರೆ ಕೇವಲ ಗೃಹ ಕರ್ತವ್ಯ ಕ್ಕೆ ಮಾತ್ರ ಸೀಮಿತಳು ಎಂಬ ಧೋರಣೆ ಬದಲಾಗಬೇಕಿದೆ. ಈಗ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಒಂದು ಕೋಟಿ ದಾಟಿದೆಯಂತೆ.ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸ್ವೀಕರಿಸುವ ಗುರಿ ಇದೆ.ಆದರೆ ಎಷ್ಟು ಜನರು ಸಾಹಿತ್ಯಿಕವಾಗಿ ಸಕ್ರಿಯರಾಗಿದ್ದಾರೆ ಅವಲೋಕನ ಮಾಡಿಕೊಳ್ಳಬೇಕಿದೆ.ಒಟ್ಟು ಪ್ರಮಾಣದ ಸದಸ್ಯರಲ್ಲಿ ಸ್ತ್ರೀ ಯರ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ.ಅದರಲ್ಲೂ ಗೃಹಿಣಿಯರು ಬೆರಳೆಣಿಯಷ್ಟು ಮಾತ್ರ ಇರುವರು. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇರುವ ಗೃಹಿಣಿಯರು ಸಾಹಿತ್ಯ ಕ್ಷೇತ್ರದಿಂದ ದೂರ ಇರುವದೇಕೆ..? ಒಬ್ಬ ಗೃಹಿಣಿ ಬರೆಯುತ್ತಾಳೆ ಎಂದರೆ ಅವಳೆನು ಬರೆಯಬಲ್ಲಳು ಎಂಬ ಧೋರಣೆ. ಬರಹಗಾರರು ಶಿಕ್ಷಣ ಕ್ಷೇತ್ರದವರೆ ಆಗಿರುತ್ತಾರೆಂಬ ಭಾವನೆ ಇದೆ. ಪೂರ್ಣಚಂದ್ರ ತೇಜಸ್ವಿ ಯವರು ಒಂದು ಕಡೆ ಉಲ್ಲೆಖಿಸಿದ್ದರೆ. ಇಡಿಯ ಒಂದು ಭಾಷಾ ಸಮೂದಾಯದ ಅಭಿವ್ಯಕ್ತಿ ಯಾಗಬೇಕಾದ ಸಾಹಿತ್ಯ  ಕೇವಲ ಪಾಠ ಹೇಳುವರ ಕುಲಕಸುಬಿನಂತಾದರೆ ಅದು ಎಷ್ಟೆ ಸಹಜವಾಗಿ ಸಂಭವಿಸಿದರು ಆ ನಾಗರೀಕತೆ ರೋಗಗ್ರಸ್ತ ವಾದುದು ಎಂದು. ಸಾಹಿತ್ಯ ಪರಿಷತ್ತು ಬೇರೆ ಕ್ಷೇತ್ರದವರನ್ನು ಗುರುತಿಸಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ಒದಗಿಸಬೇಕು.ಸಾಹಿತ್ಯ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಹೋರಾಡುತ್ತಿರುವ ಮಹಿಳೆಯರಿಗೆ ಬೆಂಬಲಿಸಲಿ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರ್ಪಡೆ ಮಾಡಲು ಆಸಕ್ತಿ ಹೊಂದಿದ್ದ ಪರಿಷತ್ತು ಅನ್ಯ ಕ್ಷೇತ್ರದ ಸಾಹಿತ್ತಾಸಕ್ತರನ್ನು , ಮಹಿಳೆಯರನ್ನು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗೃಹಿಣಿಯರನ್ನು ಪರಿಷತ್ತಿನ ಸದಸ್ಯರನ್ನಾಗಿ ಸ್ವಿಕರಿಸಲಿ.

Read Post »

ಇತರೆ

೨೦೨೦ ರಲ್ಲಿ ಪ್ರಕಟವಾದ ಸಿದ್ದರಾಮಹೊನ್ಕಲ್ ವಿರಚಿತ ಹೊನ್ನಮಹಲ್ ಗಜಲ್ ಸಂಕಲನಕ್ಕೆ ಕಲ್ಯಾಣ ಕರ್ನಾಟಕದ ಕನ್ನಡನಾಡು ಲೇಖಕ ಓದುಗರ ಸಹಕಾರ ಸಂಘ ಕೊಡಮಾಡುವ ಸಹಸ್ರಾರು ವಿದ್ಯಾರ್ಥಿಗಳ ನೆಚ್ಚಿನ ಪ್ರಾಂಶುಪಾಲರಾಗಿ ಕಲಬುರ್ಗಿ ಭಾಗದಲ್ಲಿ ಜನಜನಿತರಾಗಿದ್ದ ಪ್ರೊ.ಎಸ್.ವಿ. ಮೇಳಕುಂದಿ ಸ್ಮಾರಕ ಕಾವ್ಯ ಪ್ರಶಸ್ತಿ

Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-47 ತಂಗವೇಲುವಿನೊಂದಿಗೆ ಬಂಡೆಯ ಸಮೂಹವನ್ನು ನೋಡುತ್ತ ಕೊರಕಲು ದಾರಿಯಲ್ಲಿ ಫರ್ಲಾಂಗು ಮುಂದೆ ಸಾಗಿದ ಶಂಕರನಿಗೆ ಆ ರಸ್ತೆಯ ಅಂತ್ಯದಿಂದ ಸುಮಾರು ನೂರು ಗಜ ದೂರದಲ್ಲಿ ಎರಡು, ಮೂರು ಶತಮಾನಗಳಷ್ಟು ಹಳೆಯದಾದ ತುಂಡುಪ್ಪರಿಗೆಯ ಮನೆಯೊಂದು ಕಾಣಿಸಿತು. ಅದನ್ನು ಕಂಡ ತಂಗವೇಲು, ‘ಸಂಗರಣ್ಣ ಅದೇ ಮನೆ ಸುಘೇಂದ್ರಯ್ಯನವರ್ದು…!’ ಎಂದು ಗೆಲುವಿನಿಂದ ತೋರಿಸಿದ. ಆದ್ದರಿಂದ ಶಂಕರ ಅಲ್ಲೇ ಒಂದು ಕಡೆ ಕಾರು ನಿಲ್ಲಿಸಿ ಇಳಿದವನು ಕಾರನ್ನೊಮ್ಮೆ ಬೇಸರದಿಂದ ದಿಟ್ಟಸಿದ. ತನ್ನ ಹೊಚ್ಚ ಹೊಸ ಕಾರು ಆ ಕೊರಕಲು ರಸ್ತೆಯ ಒರಟು ಕಲ್ಲುಗಳ ಮೇಲೆ ಹರಿದು ಓಲಾಡುತ್ತ ನಿಮಿಷಕ್ಕೊಮ್ಮೆ ಎಗರಿ ಬೀಳುತ್ತ ಬರುತ್ತಿದ್ದಾಗಲೇ ಅವನ ಹೊಟ್ಟೆಯೊಳಗೆ ಅವಲಕ್ಕಿ ಕುಟ್ಟಿದಂಥ ಹಿಂಸೆಯಾಗುತ್ತಿತ್ತು. ಈಗ ಅದಕ್ಕೆ ಮೆತ್ತಿಕೊಂಡಿದ್ದ ಧೂಳನ್ನೂ ಕಂಡವನು, ‘ಥೂ! ಥೂ! ಎಂಥ ಸಾವು ಮಾರಾಯ ಇದು. ಹೊಸ ಕಾರಿಡೀ ಧೂಳುಮಯವಾಗಿಬಿಟ್ಟಿದೆ ನೋಡು…!’ ಎಂದು ತಂಗವೇಲುವೇ ಅದಕ್ಕೆ ಕಾರಣ ಎಂಬಂತೆ ಸಿಡುಕಿದ. ಅದಕ್ಕವನು ‘ಹ್ಹಿಹ್ಹಿಹ್ಹಿಹ್ಹಿ…! ಊರಿಗೆ ಹೋಗಿ ಗ್ಯಾರೇಜಿಗೆ ಬಿಟ್ಟರಾಯ್ತು ಸಂಗರಣ್ಣಾ…!’ ಎಂದು ಹಲ್ಲು ಗಿಂಜಿ ಮುಂದೆ ನಡೆದ. ಆಗ ಶಂಕರನಿಗೆ ಮತ್ತಷ್ಟು ಉರಿಯಿತು. ಆದರೂ ವಿಧಿಯಿಲ್ಲದೆ ಅವನನ್ನು ಹಿಂಬಾಲಿಸಿದ.    ಇಬ್ಬರೂ ಸುರೇಂದ್ರಯ್ಯನ ಮನೆಯಂಗಳಕ್ಕೆ ಬಂದು ನಿಂತರು. ‘ಸಾವುಗಾರ್ರೇ… ಸಾವುಗಾರ್ರೇ…!’ ಎಂದು ತಂಗವೇಲು ಧ್ವನಿಯೆತ್ತಿ ಕೂಗಿದ. ಶಂಕರ ಆ ಮನೆಯನ್ನೂ ಸುತ್ತಲಿನ ವಠಾರವನ್ನೂ ಗಮನಿಸತೊಡಗಿದ. ಒಂದುಕಾಲದಲ್ಲಿ ನೂರಾರು ಮಂದಿ ಅವಿಭಕ್ತವಾಗಿ ಬಾಳಿ ಬದುಕಿದ ಮನೆಯದು ಎಂಬುದು ಅದನ್ನು ಕಟ್ಟಿದ ಶ್ರೀಮಂತ ಕಲಾತ್ಮಕತೆಯಿಂದಲೇ ತಿಳಿಯುತ್ತಿತ್ತು. ಆದರೆ ಈಗ ಆ ಮನೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಬದುಕಿದ್ದು, ಅದರ ಹೆಚ್ಚಿನ ಭಾಗಗಳು ಶಿಥಿಲಗೊಂಡು ಒಂದೆರಡು ಭಾಗದ ಗೋಡೆಗಳು ಕುಸಿದುಬಿದ್ದಿದ್ದವು. ಸುತ್ತಲಿನ ತೆಂಗು, ಅಡಿಕೆ ತೋಟ ಮತ್ತು ಹೊಲಗದ್ದೆಗಳು ದುಡಿಯುವವರಿಲ್ಲದೆ ಹಡಿಲು ಬಿದ್ದು ದಶಕಗಳೇ ಕಳೆದಂತಿದ್ದವು. ನೆಟ್ಟಗೆ ನಿಲ್ಲಲಾಗದ ಮುದಿ ನಾಯಿಗಳೆರಡು ತಮ್ಮ ದುರ್ಬಲ ದೊಂಡೆಗಳಿಂದ ಊಳಿಡುವಂತೆ ಕರ್ಕಶವಾಗಿ ಬೊಗಳಿದವು, ಅಪರಿಚಿತರ ಸುಳಿವನ್ನು ಮನೆಯವರಿಗೆ ತಿಳಿಸಿ ತಮ್ಮ ಕೆಲಸವಾಯಿತೆಂಬಂತೆ ಮರಳಿ ಕಣ್ಣುಮುಚ್ಚಿ ಮುದುಡಿಕೊಂಡವು.  ಸ್ವಲ್ಪಹೊತ್ತಿನಲ್ಲಿ ಬಣ್ಣ ಮಾಸಿದ ಕಾವಿ ಲುಂಗಿಯುಟ್ಟಿದ್ದ, ಐವತ್ತೈದರ ಆಸುಪಾಸಿನ ಡೊಳ್ಳು ಹೊಟ್ಟೆಯ ಕಂದು ಮೈಬಣ್ಣದ ದಢೂತಿ ವ್ಯಕ್ತಿಯೊಬ್ಬರು ಹಳೆಯ ಬೈರಾಸೊಂದನ್ನು ಹೆಗಲಿಗೇರಿಸಿಕೊಂಡು ಬಾಯಿ ತುಂಬ ಎಲೆಯಡಿಕೆ ಜಗಿಯುತ್ತ ಪಡಸಾಲೆಗೆ ಬಂದರು. ಅಂಗಳದಲ್ಲಿ ನಿಂತಿದ್ದ ಇಬ್ಬರನ್ನೂ ಆಪಾದಮಸ್ತಕ ದಿಟ್ಟಿಸಿದವರು ಅಲ್ಲೇ ಗೋಡೆಯ ಹೊರ ಮೂಲೆಗೆ ವೀಳ್ಯದೆಂಜಲನ್ನು ಪಿಚಕ್ಕನೇ ಉಗುಳುತ್ತ ತಂಗವೇಲುವಿನ ಗುರುತು ಹಿಡಿದರು. ‘ಓಹೋ, ತಂಗವೇಲುವಾ ಮಾರಾಯಾ…ಬನ್ನಿ ಬನ್ನಿ ಒಳಗೆ ಬನ್ನಿ. ಎಷ್ಟು ಕಾಲವಾಯ್ತಾ ನಿನ್ನನ್ನು ನೋಡಿ…! ಆವತ್ತೊಮ್ಮೆ ಬಂದು ಹೋದವನದ್ದು ಮತ್ತೆ ಪತ್ತೆಯೇ ಇಲ್ಲ ನೋಡು…!’ ಎಂದು ನಗುತ್ತ ಅಂದವರು, ‘ಹೌದೂ ಇವರು ಯಾರು ಸಾಹುಕಾರ್ರು…?’ ಎಂದು ಶಂಕರನೆಡೆಗೆ ದಿಟ್ಟಿಸುತ್ತ ಗತ್ತಿನಿಂದ ಕೇಳಿದರು. ಅವರು, ‘ಸಾಹುಕಾರ್ರು…!’ ಎಂದಾಕ್ಷಣ ಶಂಕರನ ದೇಹವು ತಾನಿದ್ದುದಕ್ಕಿಂತಲೂ ಕೆಲವಿಂಚು ಎತ್ತರಕ್ಕೆ ಸೆಟೆದುನಿಂತಿತು. ‘ಹ್ಹೆಹ್ಹೆಹ್ಹೆ… ಏನು ಮಾಡುವುದು ಸಾವುಗಾರ್ರೇ ಗಿರಾಕಿ ಸಿಗಬೇಕಲ್ಲ…!’ ಎಂದ ತಂಗವೇಲು ಶಂಕರನತ್ತ ತಿರುಗಿ, ‘ಇವರು ನಮ್ಮ ಧಣಿ ಸಂಗರಣ್ಣ ಅಂತ. ದೊಡ್ಡ ಬಿಲ್ಡರ್ರು ಮತ್ತು ಭಾರೀ ದೊಡ್ಡ ಗುಳ (ಕುಳ) ಸಾವುಗಾರ್ರೇ!’ ಎಂದು ನಗುತ್ತ ಹೇಳಿ ತಾನೂ ಅವನನ್ನು ಉಬ್ಬಿಸಿದ. ಶಂಕರ ತಂಗವೇಲುವಿನೆಡೆಗೂ ಮೆಚ್ಚುಗೆಯ ನಗು ಹರಿಸಿದ. ಅಷ್ಟು ತಿಳಿದ ಸುರೇಂದ್ರಯ್ಯ ಶಂಕರನಿಗೆ ಗೌರವದಿಂದ ನಮಸ್ಕರಿಸಿ ಕುಳಿತುಕೊಳ್ಳಲು ಹಳೆಯ ಕುಸುರಿ ಚಿತ್ತಾರವಿದ್ದ ಕುರ್ಚಿಯನ್ನು ತೋರಿಸಿದವರು, ಕೆಲಸದವಳನ್ನು ಕೂಗಿ ಕರೆದು ಕಾಫಿ ತರಲು ಸೂಚಿಸಿ ಅವರೊಂದಿಗೆ ಮಾತುಕತೆಗಿಳಿದರು. ತಂಗವೇಲುವೇ ಮೊದಲು ಮಾತಾಡಿದ. ‘ಸಾವುಗಾರ್ರೇ, ನಮ್ಮ ಶರವಣನ ದಯೆಯಿಂದ ನಿಮ್ಮ ಹಿರಿಯರಾಸೆ ಕೈಗೂಡುವ ಕಾಲ ಬಂದೇಬಿಟ್ಟಿತು ನೋಡಿ. ಸಂಗರಣ್ಣನಿಗೆ ನಿಮ್ಮ ಬಂಡಿಗಲ್ಲು ಬೇಕಂತೆ!’ ಎಂದವನು, ‘ಮುಂದಿನದ್ದನ್ನು ನೀವೇ ಮಾತಾಡಿಕೊಳ್ಳಿ!’ ಎಂಬಂತೆ ಶಂಕರನ ಮುಖ ನೋಡಿದ. ಆದ್ದರಿಂದ ಶಂಕರ ಮೊದಲು ಏಕನಾಥ ಗುರೂಜಿಯವರನ್ನೂ ಮತ್ತವರ ಜ್ಯೋತಿಷ್ಯದ ಶಕ್ತಿಯನ್ನೂ ಹೊಗಳುತ್ತ ಅವರನ್ನು ಪರಿಚಯಿಸಿದ. ಬಳಿಕ ಅವರೀಗ ನಿರ್ಮಿಸಲು ಹೊರಟಿರುವ ದೇವಸ್ಥಾನದ ವಿಚಾರವನ್ನು ಅವರಿಗೆ ವಿವರಿಸಿ, ‘ಗುರೂಜಿಯವರದ್ದು ಇದೊಂದು ದೊಡ್ಡ ಸಾಧನೆಯಾಗಲಿದೆ ಸುರೇಂದ್ರಯ್ಯನವರೇ. ಅದರಿಂದ ನಮ್ಮೂರಿಗೂ ಬಹಳ ಒಳ್ಳೆಯದಾಗಲಿದೆ. ಹಾಗಾಗಿ ಆವೊಂದು ಉತ್ತಮ ಕೆಲಸಕ್ಕೆ ನಿಮ್ಮ ಬಂಡೆಗಳು ನಮಗೆ ಬೇಕು. ಕೊಡಬಹುದಾ…?’ ಎಂದು ಗಂಭೀರವಾಗಿ ಕೇಳಿದ. ಅವನ ಮಾತು ಕೇಳಿದ ಸುರೇಂದ್ರಯ್ಯನಿಗೆ ತಾವು ಕುಳಿತ ನೆಲದಡಿಯಲ್ಲೇ ಕೊಪ್ಪರಿಗೆಯೆದ್ದಷ್ಟು ಸಂತೋಷವಾಯಿತು. ಆದರೂ ತೋರಿಸಿಕೊಳ್ಳದೆ ಕೆಲವು ಕ್ಷಣ ಗಂಭೀರವಾಗಿ ಯೋಚಿಸುವಂತೆ ನಟಿಸಿದರು. ಬಳಿಕ, ‘ಬಂಡೆಯನ್ನೇನೋ ಕೊಡಬಹುದು ಸಾವುಕಾರ್ರೇ…, ಆದರೆ ನಮ್ಮ ಹಿರಿಯರದ್ದೊಂದು ಸಣ್ಣ ಆಸೆಯಿದೆ. ಏನೆಂದರೆ ನಮ್ಮ ಬಂಡೆಯಿಂದ ಕಟ್ಟುವ ದೇವಸ್ಥಾನದಲ್ಲಿ ಯಾವುದಾದರೂ ಒಂದು ದೈವದ ಅಥವಾ ದೇವರ ಮೂರ್ತಿಯು ಇದೇ ಶಿಲೆಯಿಂದ ಕೆತ್ತನೆಯಾಗಿ ಅಲ್ಲಿ ಪೂಜೆಗೊಳ್ಳಬೇಕು ಎಂಬುದು. ನಿಮ್ಮ ಗುರೂಜಿಯವರು ಇದಕ್ಕೆ ಒಪ್ಪುತ್ತಾರಾ…?’ ಎಂದು ಅನುಮಾನದಿಂದ ಪ್ರಶ್ನಿಸಿದರು.    ಅಷ್ಟು ಕೇಳಿದ ಶಂಕರನಿಗೆ ಪಕ್ಕನೆ ಏನೂ ತೋಚಲಿಲ್ಲ. ಆದ್ದರಿಂದ, ‘ಈ ವಿಷಯವನ್ನು ಮಾತ್ರ ನಾನು ಗುರೂಜಿಯವರೊಡನೆ ಕೇಳಿಯೇ ಹೇಳಬೇಕಾಗುತ್ತದೆ ಸುರೇಂದ್ರಯ್ಯ!’ ಎಂದವನು, ‘ಹೌದು, ನಿಮ್ಮ ಹಿರಿಯ ಆ ಆಸೆಗೆ ಕಾರಣವೇನು?’ ಎಂದ ಕುತೂಹಲದಿಂದ. ಅದನ್ನೇ ನಿರೀಕ್ಷಿಸುತ್ತಿದ್ದ ಸುರೇಂದ್ರಯ್ಯ, ‘ಆ ಕಥೆಯನ್ನು ನಿಮಗೆ ಸ್ವಲ್ಪ ಹೇಳಬೇಕು ನೋಡಿ. ಆದರೆ ಅದಕ್ಕಿಂತ ಮೊದಲು ಆ ಬಂಡೆಗಳ ವಿಶೇಷವನ್ನೂ ಹೇಳುತ್ತೇವೆ ಕೇಳಿ. ನಮ್ಮ ಮುತ್ತಜ್ಜನ ಕಾಲದಿಂದಲೋ ಅಥವಾ ಅವರ ಮುತ್ತಜ್ಜದಿಂದಿರ ಕಾಲದಿಂದಲೋ ಎಂಬುದು ಸರಿಯಾಗಿ ಗೊತ್ತಿಲ್ಲ, ಒಟ್ಟಾರೆ ಅಷ್ಟೊಂದು ಪ್ರಾಕಿನಿಂದಲೂ ಆ ಬಂಡೆಕಲ್ಲು ನಮ್ಮ ಜಾಗದಲ್ಲಿತ್ತಂತೆ. ಆದರೆ ಆವಾಗ ಕೇವಲ ಒಂದೇ ಬಂಡೆಯಿದ್ದದ್ದು ಕಾಲಕ್ರಮೇಣ ಬೆಳೆಯುತ್ತ ಹೋಯಿತಂತೆ. ಒಮ್ಮೆ ರಾತ್ರೋರಾತ್ರಿ ಎರಡು ಭಾಗವಾಗಿಬಿಟ್ಟಿತಂತೆ! ಅಷ್ಟಾಗಿ ಕೆಲವು ವರ್ಷಗಳ ನಂತರ ಮತ್ತೆ ಮೂರು ಭಾಗವಾಗಿದ್ದು ಬರಬರುತ್ತ ಮತ್ತಷ್ಟು ಸೀಳಿ, ಒಡೆದುಕೊಳ್ಳುತ್ತ ಬಂದದ್ದು ಒಂದೊಂದು ಬಂಡೆಗೂ ಒಂದೊಂದು ಪ್ರಾಣಶಕ್ತಿ ಬಂದು ಬಂಡೆಗಳ ದೊಡ್ಡದೊಂದು ಸಂಸಾರವೇ ಆಗಿಬಿಟ್ಟಿತಂತೆ. ಹೀಗಾಗಿ ಆ ಬಂಡೆಗಳ ನಡುವೆ ಪಿಲಿಚೌಂಡಿ ಮತ್ತು ಪಂಜುರ್ಲಿ ದೈವಗಳು ಬಂದು ನೆಲೆಸಿದ್ದಾವೆ ಎಂದೊಮ್ಮೆ ನಮ್ಮ ಹಿರಿಯರಿಗೆ ‘ದೈವದರ್ಶನ’ ಸೇವೆಯಲ್ಲಿ ತಿಳಿದು ಬಂದಿತಂತೆ. ಅಷ್ಟು ತಿಳಿದ ಅವರು ಆ ಶಕ್ತಿಗಳನ್ನು ಭಯಭಕ್ತಿಯಿಂದ ಈ ಮನೆಗೆ ಕರೆದುಕೊಂಡು ಬಂದು ನೆಲೆಗೊಳಿಸಿ ಕಾಲಕಾಲಕ್ಕೆ ಅವುಗಳನ್ನು ವೈಭವದಿಂದ ಪೂಜಿಸಿಕೊಂಡು ಬಂದರು. ಆ ಶಕ್ತಿಗಳು ನೆಲೆಯಾಗಿದ್ದಂಥ ಆ ಬಂಡೆಗಳಿಗೂ ದೈವಶಕ್ತಿ ಇರುತ್ತದೆ. ಹಾಗಾಗಿ ಅದರದ್ದೊಂದು ತುಂಡು ಕಲ್ಲಾದರೂ ದೈವ, ದೇವರ ಮೂರ್ತಿಯಾಗಿ ಪೂಜೆಯಾಗಬೇಕೆನ್ನುವುದು ನಮ್ಮ ಹಿರಿಯರ ಸಂಕಲ್ಪ!’ ಎಂದು ಸುರೇಂದ್ರಯ್ಯ ವಿವರಿಸಿದರು. ‘ಓಹೋ ಹೀಗಾ ವಿಷಯ…? ಹಾಗಾದರೆ ಅವರು ಸರಿಯಾಗಿಯೇ ಯೋಚಿಸಿದ್ದಾರೆ ಬಿಡಿ!’ ಎಂದು ಶಂಕರ ಅವರ ಮಾತನ್ನು ಸಮರ್ಥಿಸಿದ. ‘ಆ ಬಂಡೆಗಳಿಗೆ ನಾವು ಹೇಳುತ್ತಿದ್ದ ರೇಟಿಗಿಂತಲೂ ಎರಡರಷ್ಟು ಹೆಚ್ಚು ಕೊಟ್ಟು ಅದನ್ನು ಕೊಳ್ಳಲು ಇಲ್ಲಿನ ತುಂಬಾ ಜನ ಕ್ರಷರ್ ಮಾಲಿಕರು ಬಹಳ ವರ್ಷಗಳಿಂದ ಬಂದು ಹೋಗುತ್ತಲೇ ಇದ್ದಾರೆ ಸಾಹುಕಾರ್ರೇ. ಮೊನ್ನೆ ಮೊನ್ನೆಯಷ್ಟೇ ನಮಗೆ ಬಹಳ ಪರಿಚಯವಿದ್ದ ಇಲ್ಲಿನೊಬ್ಬ ದೊಡ್ಡ ಉದ್ಯಮಿ ರವೀಂದ್ರಯ್ಯ ಅಂತ ಬಂದಿದ್ದರು. ಆದರೆ ನಾವು ಅವರಿಗೂ ‘ಸದ್ಯ ಮಾರುವ ಯೋಚನೆಯಿಲ್ಲ. ಇದ್ದರೆ ಹೇಳುತ್ತೇವೆ!’ ಎಂದು ಕಳುಹಿಸಿದ್ದೆವು. ಈ ಸಲ ಬಹುಶಃ ನಿಮ್ಮ ಮೂಲಕವೇ ನಮ್ಮ ಹಿರಿಯರ ನಂಬಿಕೆಯು ಈಡೇರುವ ಕಾಲ ಬಂದಿದೆ ಅಂತ ತೋರುತ್ತದೆ!’ ಎಂದು ಸುರೇಂದ್ರಯ್ಯ ನಗುತ್ತ ಹೇಳಿದರು. ‘ಆಯ್ತು ಸುರೇಂದ್ರಯ್ಯನವರೇ, ಈ ವಿಷಯ ಗುರೂಜಿಯವರಲ್ಲಿ ಮಾತಾಡಿ ಒಪ್ಪಿಸುವ ಜವಾಬ್ದಾರಿ ನನ್ನದು. ಈಗ ವ್ಯವಹಾರದ ಮಾತಾಡುವ. ನೀವು ಸರಿಯಾದ ಒಂದು ರೇಟು ಹೇಳಿದರೆ ಒಳ್ಳೆಯದಿತ್ತು!’ ಎಂದ ಶಂಕರ. ಆಗ ಸುರೇಂದ್ರಯ್ಯ ಮತ್ತೆ ಗಂಭೀರವಾದವರು ಕೆಲವು ಕ್ಷಣದ ಬಳಿಕ, ‘ನೋಡಿ ಸಾಹುಕಾರ್ರೇ, ನಾವು ಬಂಡೆ ಮಾರಿ ಅದರಿಂದಲೇ ಬದುಕಲು ಹೊರಟವರೇನಲ್ಲ. ಅದನ್ನೀಗಲೇ ಹೇಳಿ ಬಿಡುತ್ತೇವೆ. ಯಾಕೆಂದರೆ ನಮ್ಮ ಹಿರಿಯರು ಬಿಟ್ಟು ಹೋದ ಆಸ್ತಿಯೇ ನಮ್ಮ ಇನ್ನೆರಡು, ಮೂರು ತಲೆಮಾರಿಗಾಗುವಷ್ಟಿದೆ. ಆದರೂ ಆ ಬಂಡೆಗಳನ್ನು ಮಾರಲು ಒಂದು ಮುಖ್ಯ ಕಾರಣವಿದೆ. ನಮ್ಮ ಈ ಮನೆಯನ್ನೂ ಇದರ ಅವಸ್ಥೆಯನ್ನೂ ನೀವು ಗಮನಿಸಿರಬಹುದು. ಅರಮನೆಯಂಥ ಇದನ್ನು ರಿಪೇರಿ ಮಾಡಿಸುವುದೆಂದರೆ ಸಣ್ಣ ಮಾತೇನಲ್ಲ. ಆ ಬಂಡೆಗಳನ್ನು ಮಾರಿ ಈ ಮನೆಯನ್ನು ಈಗ ಇರುವ ರೀತಿಯಲ್ಲೇ ಚಂದ ಮಾಡಿ ರಿಪೇರಿ ಮಾಡಿಸಿ ಇನ್ನೊಂದಷ್ಟು ವರ್ಷ ಇದರ ವೈಭವವನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ತಂದೆಯವರ ಮತ್ತು ನಮ್ಮಿಚ್ಛೆಯೂ ಹೌದು! ಅದಕ್ಕೆ ಒಂದು ಅಂದಾಜಿನ ಪ್ರಕಾರ ಒಂದು ಕೋಟಿಯತನಕ ಖರ್ಚು ಬೀಳಬಹುದು. ನಮ್ಮ ಬಂಡೆಗೂ ನೀವು ಅಷ್ಟೇ ಕೊಟ್ಟರೆ ಸಾಕು!’ ಎಂದು ಸಲೀಸಾಗಿ ಅಂದರು. ಆದರೆ ಶಂಕರನಿಗೆ ಅದೇನೂ ಅಷ್ಟೊಂದು ದೊಡ್ಡ ಮೊತ್ತವೆಂದು ಅನ್ನಿಸಲಿಲ್ಲ. ಆದರೆ ಅವನು ಒಂದು ಹುಲ್ಲು ಕಡ್ಡಿಯನ್ನು ಕೂಡಾ ಹತ್ತು ಬಾರಿ ಚೌಕಾಶಿ ಮಾಡದೆ ಕೊಂಡುಕೊಳ್ಳುವ ಜಾಯಮಾನದವನಲ್ಲ. ಆದ್ದರಿಂದ, ‘ಓ ದೇವರೇ…! ನೀವೆಂಥದು ಮಾರಾಯ್ರೇ ಒಟ್ಟಾರೆ ಒಂದು ರೇಟು ಹೇಳಿ ಬಿಡುವುದಾ…? ಛೇ! ಛೇ! ಅದು ಸಿಕ್ಕಾಪಟ್ಟೆ ಜಾಸ್ತಿಯಾಯಿತು ಬಿಡಿ. ಅಷ್ಟೆಲ್ಲ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ಆ ದೇವಸ್ಥಾನವನ್ನು ಕಟ್ಟುವುದಕ್ಕೆ ನಾವು ಕೂಡಾ ನಾಗದೇವರ ಭಕ್ತಾದಿಗಳಿಂದಲೇ ಹಣವನ್ನು ಒಟ್ಟು ಮಾಡುವವರು ಸುರೇಂದ್ರಯ್ಯ! ಅಂಥ ಪವಿತ್ರವಾದ ದುಡ್ಡನ್ನು ನಮಗೆ ಖುಷಿ ಬಂದ ಹಾಗೆ ಖರ್ಚು ಮಾಡಲಿಕ್ಕಾಗುತ್ತದಾ ಹೇಳಿ…? ನೀವು ಕೂಡಾ ಅದೇ ದೃಷ್ಟಿಯಿಂದ ಒಂದಷ್ಟು ಕಡಿಮೆ ಮಾಡಿ ಹೇಳಬೇಕು ನೋಡಿ!’ ಎಂದು ಖಡಕ್ಕಾಗಿ ಹೇಳಿದ. ಅವನ ಮಾತಿನ ವರಸೆಯನ್ನು ಕೇಳಿದ ಸುರೇಂದ್ರಯ್ಯ ಒಳಗೊಳಗೇ ಬೆಚ್ಚಿದವರು, ಛೇ, ಛೇ!…ವ್ಯಾಪಾರವೆಲ್ಲಿ ಕೈತಪ್ಪುತ್ತದೋ…? ಎಂದುಕೊಂಡು ಮತ್ತಷ್ಟು ಯೋಚಿಸುವಂತೆ ನಟಿಸಿದರು. ಕೊನೆಯಲ್ಲಿ, ‘ಆಯ್ತು ಸಾಹುಕಾರ್ರೇ, ನೀವು ಆ ನಾಗನ ಹೆಸರು ಹೇಳಿದ ಮೇಲೂ ನಾವು ನಮ್ಮ ಹಿಡಿದ ಮುಷ್ಟಿ ಬಿಚ್ಚದಿದ್ದರೆ ಅರ್ಥ ಉಂಟಾ ಹೇಳಿ? ಇಬ್ಬರಿಗೂ ಚರ್ಚೆ ಬೇಡ. ಒಂದೇ ಮಾತು, ನಾವು ಹೇಳಿದ ಮೊತ್ತದಲ್ಲಿ ಐದು ಲಕ್ಷ ಕಡಿಮೆ ಮಾಡುತ್ತೇವಷ್ಟೇ. ತೊಂಬತ್ತೈದಕ್ಕೆ ವ್ಯಾಪಾರ ಮುಗಿಸಿಬಿಡುವ ಏನಂತೀರಾ…?’ ಎಂದು ನಗುತ್ತ ಅಂದರು.    ಅಷ್ಟಕ್ಕೆ ಶಂಕರನ ಮುಖದಲ್ಲೂ ನಗು ಮೂಡಿತು. ಅಲ್ಲಿಗೆ ವ್ಯವಹಾರದ ಮಾತುಕಥೆಯೂ ಮುಗಿಯಿತು. ತಂಗವೇಲುವೂ ಖುಷಿಯಾದ. ಆದರೆ ಅವನು, ವ್ಯಾಪಾರ ಹೇಗೂ ಕುದುರಿತು. ಆದರೆ ಇನ್ನು ಇವರಿಬ್ಬರ ಕಡೆಯಿಂದ ತನಗೆಷ್ಟೆಷ್ಟು ಕಮಿಷನ್ ಸಿಗುತ್ತದೋ…? ಎಂಬ ಆತಂಕದಿಂದ ಚಡಪಡಿಸಿದ. ಅದನ್ನು ಗಮನಿಸಿದ ಸುರೇಂದ್ರಯ್ಯ, ‘ತಂಗವೇಲು, ನೀನು ಮಂಡೆಬಿಸಿ ಮಾಡಬೇಡ ಮಾರಾಯ. ನಿಮ್ಮ ಕಡೆಯಿಂದ ಹಣ ನಮಗೆ ಸಂದಾಯವಾಗುತ್ತಲೇ ನಿನ್ನ ಕಮಿಷನ್ನೂ ನಿನ್ನ ಕೈ ಸೇರುತ್ತದೆ!’ ಎಂದಾಗ ತಂಗವೇಲು ಗೆಲುವಾದವನು, ‘ಹಾಗಾದರೆ ನಿಮ್ಮದು ಯಾವಾಗ ಶಂಗರಣ್ಣಾ…?’ ಎಂಬಂತೆ ಅವನನ್ನು ದಿಟ್ಟಿಸಿದ. ಆದರೆ ಅಷ್ಟರಲ್ಲಿ ಶಂಕರ ತಟ್ಟನೆ ಅವನಿಂದ ಮುಖ ತಿರುಗಿಸಿ ಎದ್ದು ಕಾರಿನತ್ತ ಹೋದವನು ಗುರೂಜಿಯವರ ಪ್ರಸಾದವನ್ನೂ ಮತ್ತು ಒಂದು ಲಕ್ಷ ರೂಪಾಯಿಯನ್ನೂ ತಂದು, ‘ತಗೊಳ್ಳಿ ಸುರೇಂದ್ರಯ್ಯ, ಇದು ಗುರೂಜಿಯವರು ಕೊಟ್ಟ ಪ್ರಸಾದ. ಮತ್ತಿದು ಅಡ್ವಾನ್ಸು. ಉಳಿದ ಹಣವನ್ನು ಬಂಡೆ ಕಡಿದು ಮುಗಿದ ಕೂಡಲೇ ಚುಕ್ತಾ ಮಾಡುತ್ತೇವೆ. ಅದಕ್ಕೊಂದು ಅಗ್ರಿಮೆಂಟು ಕೂಡಾ ಮಾಡಿಕೊಳ್ಳುವ!’ ಎಂದು ಗತ್ತಿನಿಂದ ಅಂದವನು, ಠಸ್ಸೆ ಪೇಪರನ್ನು ಅವರ ಮುಂದಿಟ್ಟ. ಒಂದು ಲಕ್ಷವನ್ನು ನೋಡಿದ ಸುರೇಂದ್ರಯ್ಯ ತಾವು ಕಾಣುತ್ತಿರುವುದು ಕನಸೋ ನನಸೋ…? ಎಂಬ ಅನುಮಾನಕ್ಕೆ ಬಿದ್ದು ನೋಟಿನ ಕಂತೆಯನ್ನೊಮ್ಮೆ ನಯವಾಗಿ ಮುಟ್ಟಿ ನೋಡಿದವರು, ಶಂಕರನ ಪತ್ರಕ್ಕೆ ಅವನು ತೋರಿಸಿದಲ್ಲಿ ಸಹಿ ಎಳೆದು ಅವರನ್ನು

Read Post »

ಇತರೆ

ಸರಣಿ ಬರಹ ಅಂಬೇಡ್ಕರ್ ಓದು ಎಡ್ವಿನ್ ಆರ್.ಎ.ಸೆಲಿಗ್ಮನ್ ಶಿಷ್ಯ ಅಂಬೇಡ್ಕರ್        ಎಡ್ವಿನ್ ಆರ್.ಎ.ಸೆಲಿಗ್ಮನ್ ರವರು ಅಂದಿನ ಕಾಲದ ವಿಶ್ವವಿಖ್ಯಾತ ಆರ್ಥಿಕ ತಜ್ಞರಾಗಿದ್ದರು. ಅಂಬೇಡ್ಕರರು ಅವರ ಅಚ್ಚುಮೆಚ್ಚಿನ ಶಿಷ್ಯರಾದರು. ಎಷ್ಟು ಅಚ್ಚುಮೆಚ್ಚಿನ ಶಿಷ್ಯರೆಂದರೆ ಪ್ರೊ. ಸೆಲಿಗ್ಮನರು ಯಾವುದೆ ವರ್ಗದ ಕೊಠಡಿಯಲ್ಲಿ ಬೋಧಿಸುತ್ತಿರಲಿ ಅಲ್ಲಿ ಅವರ ಬೊಧನೆ ಆಲಿಸಲು ಅಂಬೇಡ್ಕರರು ಹಾಜರಿರುತ್ತಿದ್ದರು. ಒಂದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿ ಅದರ ಬಗ್ಗೆ ಚಿಂತನೆ ಮಾಡಿದಾಗ ಸಂಶೋದನೆಯ ಸರಳ ವಿಧಾನ ಯಾವುದೆಂಬುದು ತಿಳಿಯುವುದು ಎಂದು ಅಂಬೇಡ್ಕರರಿಗೆ  ಸಂಶೋದನೆಯ ಸರಳ ವಿಧಾನ ತಿಳಿಸಿ ಕೊಟ್ಟರು. ಅದರಂತೆ ಅಂಬೇಡ್ಕರರು ಅರ್ಥಶಾಸ್ತ್ರ,ರಾಜ್ಯಶಾಸ್ತ್ರ, ಸಮಾಜಶಾಸ್ತ್ರ,ತತ್ವಶಾಸ್ತ್ರ ಮತ್ತು ಮಾನವಶಾಸ್ತ್ರ ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದರು. ಆಳವಾದ ಅಧ್ಯಯನದ ಫಲವಾಗಿ ಅಂಬೇಡ್ಕರರು 1916 ರಲ್ಲಿ ಪ್ರೊ.ಗೋಲ್ಡನ್ ವೈಜರ್ ಅವರ ನೇತೃತ್ವದಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ “ಭಾರತದಲ್ಲಿ ಜಾತಿಗಳ ಉಗಮ ಮತ್ತು ಅವುಗಳ ವಿಕಾಸ “ (Castes in India; Their mechanism, Genesis and development) ಎಂಬ ಎರಡನೆಯ ಪ್ರಬಂಧವನ್ನು ಮಂಡಿಸಿದರು. ಸ್ವ ಗೋತ್ರ ವಿವಾಹವೇ ಜಾತಿಗೆ ಮೂಲ ಮತ್ತು ಅವುಗಳ ವಿಕಾಸದ ಸೂಕ್ಷ್ಮತೆಯನ್ನು ಅಲ್ಲದೆ ಜಾತಿಗೆ ಧಾರ್ಮಿಕ ಸ್ಪರ್ಶವಿದ್ದಲ್ಲಿ ಮಾತ್ರ ಮಾಲಿನ್ಯದ ಪರಿಕಲ್ಪನೆ ಅಂದರೆ ಮಾಲಿನ್ಯ ,ಮೈಲಿಗೆ, ಮಡಿ, ಪರಿಕಲ್ಪನೆಯೊಂದಿಗೆ ಜಾತಿಯ ಹೊರಗಿನವರೊಂದಿಗೆ ಕುಳಿತು ಊಟ ಮಾಡದಿರುವುದು, ಪ್ರತ್ಯೇಕತೆ,ಅಂತರ್ಜಾತೀಯ ವಿವಾಹ ನಿಷೇದ ಮತ್ತು ಸ್ವಕುಲಜನರಿಗೆ ಮಾತ್ರ ತನ್ನೊಂದಿಗೆ ಸದಸ್ಯತ್ವ ಇವು ಜಾತಿಯ ಲಕ್ಷಣಗಳೆಂದು ವಿವರಿಸಿರುವರು.              ಭಾರತದ ಹಿಂದು ಧರ್ಮವು ಮೂಲಭೂತವಾಗಿ ಪುರಾತನವಾದದ್ದು ಎಂದು ನಾಗರಿಕತೆ ಬದಲಾವನೆಯಾಗಿದ್ದರೂ ಸನಾತನ ನಿಯಮಗಳು ಶ್ರೇಷ್ಠವೆಂದು ಇಂದಿಗೂ ಬಲಯುತವಾಗಿ ಜಾರಿಯಲ್ಲಿವೆ. ಅಂತರ್ಜಾತಿ ವಿವಾಹ ಪದ್ಧತಿ ಇದ್ದಲ್ಲಿ ಜಾತಿ ಪದ್ದತಿ ಇರಲು ಸಾಧ್ಯವಿಲ್ಲ. ಅಂತರ್ಜಾತಿ ವಿವಾಹವೆಂದರೆ ಜಾತಿಗಳ ಬೆಸುಗೆ ಎಂದರ್ಥ. ಭಾರತಕ್ಕೆ ಸಂಬಂಧಿಸಿದಂತೆ ಹಿಂದೂ ಧರ್ಮದಲ್ಲಿ ಸ್ವಜಾತಿ ವಿವಾಹವು ಜಾತಿಯ ಉತ್ಪತ್ತಿಗೆ ಕಾರಣವೆಂದು, ಜಾತಿ ಉತ್ಪತ್ತಿ ನಂತರ ಅದನ್ನು ನಿರಂತರ ಹೇಗೆ ಕಾಪಾಡಿಕೊಂಡು ಬರಲಾಯಿತೆಂಬುವುದನ್ನು ಅಂಬೇಡ್ಕರರು ತಮ್ಮ ಈ ಪ್ರಬಂಧದಲ್ಲಿ ಸ್ವಾರಸ್ಯಕರ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.ನೈಸರ್ಗಿಕ ವಿಕೋಪಗಳನ್ನು ಹೊರತುಪಡಿಸಿ ಗಂಡ ಹೆಂಡತಿ ಒಟ್ಟಿಗೆ ಸತ್ತಾಗ ಮಾತ್ರ ಒಂದು ಗುಂಪಿನ ಜಾತಿ ಸಂಖ್ಯೆಯಲ್ಲಿ ಗಂಡು ಹೆಣ್ಣು ಅನುರೂಪತೆ ಕಾಣಲು ಸಾಧ್ಯ ಆದರೆ ಸ್ವಜಾತಿ ವಿವಾಹ ಪದ್ಧತಿ ಮೂಲಕ ಸಮನಾದ ಸಂಖ್ಯೆ ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳುವುದು ಇಲ್ಲಿ ಆಶ್ಚರ್ಯ ಚಕಿತ ಗೊಳಿಸುವಂತದೆಂದರೆ ಗಂಡ ಸತ್ತಾಗ ಆತನ ಚಿತೆಯಲ್ಲಿ ಹೆಂಡತಿಯನ್ನು ಜೀವಂತ ಸುಡುವುದು. ಇಲ್ಲದಿದ್ದಲ್ಲಿ ಹೆಚ್ಚುವರಿಯಾಗಿ ಉಳಿದ ಹೆಣ್ಣು ಅಂತರ್ಜಾತಿ ವಿವಾಹವಾದಲ್ಲಿ ಅವಳು ಸ್ವಜಾತಿ ವಿವಾಹ ಪದ್ಧತಿಯನ್ನು ಮುರಿದು ಜಾತಿ ಪದ್ಧತಿಯನ್ನು ನಾಶಮಾಡುತ್ತಾಳೆ. ಹಾಗಾಗಿ ಗಂಡ ಹೆಂಡತಿಯ ದೇಹ ಮತ್ತು ಆತ್ಮಗಳ ಪರಿಪೂರ್ಣ ಮಿಲನದ ಸಾಕ್ಷವೆಂದು, ಸಮಾಧಿಯ ಆಚೆಗೆ ಇರುವ ಭಕ್ತಿ ಎಂದು, ಸತಿ ಪದ್ಧತಿಯನ್ನು ಪುರಸ್ಕರಿಸಲಾಗಿದೆ ಎಂಬುದಾಗಿ ಸಾಂಪ್ರದಾಯಿಕ ಸಮರ್ಥನೆ ನೀಡಲಾಗಿದೆ. ಇದೆ ನಿಯಮ ಹೆಂಡತಿ ಸತ್ತ ಗಂಡನಿಗೆ ಕಟ್ಟು ನಿಟ್ಟಾಗಿ ಅಳವಡಿಸಿಲ್ಲ. ಇನ್ನು ಸತಿ ಪದ್ಧತಿಯಿಂದ ಪಾರಾಗಿದ್ದಲ್ಲಿ ಜೀವನ ಪೂರ್ತಿ ಅವಳು ವಿಧವೆಯಾಗಿ ಜೀವಿಸಬೇಕು. ಹೆಂಡತಿಸತ್ತು ಗಂಡ ಉಳಿದಲ್ಲಿ ಅವನು ವಿದುರನಾಗಬೇಕು. ಆದರೆ ಹೆಣ್ಣಿಗೆ ವಿಧಿಸಿದಷ್ಟು ಕಠೋರ ನಿಯಮ ಗಂಡಸಿಗೆ ಇಲ್ಲ. ಅವನು ಮರುಮದುವೆಯಾಗಬಹುದು. ಗಂಡ ಸತ್ತ ಹೆಣ್ಣು ಸತಿ-ಪದ್ಧತಿ ಅನುಸರಿಲ್ಲವಾದರೆ ವಿದವಾ ಪದ್ಧತಿ ಅನುಸರಿಸಲೇಬೇಕು.                 ಬಾಲ್ಯವಿವಾಹ ಪದ್ಧಿತಿಯು, ಸತಿ ಪದ್ದತಿ, ವಿಧವಾ ಪದ್ದತಿಯಂತೆ ಜಾರಿಗೆ ಬಂದಿದ್ದು, ಹೆಣ್ಣುಮಕ್ಕಳಿಗೆ ಬಾಲ್ಯದಲ್ಲಿಯೆ ಮದುವೆ ಮಾಡುವುದು. ತಾನು ಮದುವೆಯಾಗಲಿರುವ ಗಂಡಸಿನ ಹೊರತು ಬೇರೆ ಪುರುಷನಲ್ಲಿ ಪ್ರೀತಿ ಪಡುವಂತಿಲ್ಲ. ಆದರ್ಶ ಶೀಲವಂತಿಕೆ ಕಾಯ್ದುಕೊಳ್ಳಬೇಕು. ಮದುವೆಗೆ ಮೊದಲು ಆಕೆ ಯಾವ ವ್ಯಕ್ತಿಯಲ್ಲೂ ಅನುರಕ್ತಳಾಗಕುಡದು. ಹಾಗೆ ಮಾಡಿದ್ದೆ ಆದರೆ ಅದೊಂದು ಪಾಪ. ಆದ್ದರಿಂದ ಕನ್ಯೆಯು ಲೈಂಗಿಕಪ್ರಜ್ಞೆ ಜಾಗೃತಗೊಳ್ಳುವ ಮೊದಲೆ ಅವಳ ಮದುವೆ ಮಾಡುವುದು ಒಂದು ವೇಳೆ ಕನ್ಯೆಯು ಪ್ರಜ್ಞಾವಂತಳಾದ ಮೇಲೆ ಬೇರೆ ಜಾತಿಯ ವ್ಯಕ್ತಿಯಲ್ಲಿ ಅನುರಕ್ತಳಾಗಿ ವಿವಾಹವಾದಲ್ಲಿ ಜಾತಿ ಪದ್ಧತಿಗೆ ಕಳಂಕ ತರುವಳು ಅದಕ್ಕೆಂದೆ ಬಾಲ್ಯ ವಿವಾಹ.      ಸ್ವಜಾತಿ ವಿವಾಹದಿಂದ ಜಾತಿಯ ಸೃಷ್ಟಿಯಾಗುತ್ತದೆ. ಸತಿಪದ್ಧತಿ, ವಿದವೆ ಅಥವಾ ವಿಧೂರತನ ಮತ್ತು ಬಾಲ್ಯವಿವಾಹ ಈ ರೀತಿ ಸ್ತ್ರೀ ಪುರುಷರ ನಡುವೆ ತಾರತಮ್ಯವನ್ನು ಅನುಕೂಲಕರವಾಗಿ ಉಪಯೋಗಿಸುತ್ತಾ ಬಂದುದ್ದು, ಹಿಂದೂ ಸಮಾಜದಲ್ಲಿ ತನ್ನ ನಡವಳಿಕೆಯಲ್ಲಿ ಸಂಕೀರ್ಣವೆನಿಸಿದರೂ ಮೇಲುನೋಟಕ್ಕೆ ಅತೀರೇಕ ಸಂಪ್ರದಾಯಗಳಾಗಿ ಎದ್ದು ಕಾಣುತ್ತವೆ. ಈ ಮೂರು ಸಂಪ್ರದಾಯಗಳು ಜಾತಿಯ ಸಂರಕ್ಷಣೆಯ ವಿಧಾನಗಳಾಗಿವೆ. ಈಮೂರು ವಿದಾನಗಳಿಂದಲೆ ಜಾತಿ ಶಾಶ್ವತವಾಗಿ ಉಳಿದುಕೊಂಡು ಬರಲು ಸಾಧ್ಯವಾಗಿದೆ. ಈ ಮೂರು ಸಂಪ್ರದಾಯಗಳ ಕರಾಳತೆಯನ್ನು  ಅಂಬೇಡ್ಕರರು ಇಲ್ಲಿ ಅಲ್ಲಗಳೆಯಲಾಗದಂತೆ ವಿಶ್ಲೇಷಿಸಿರುವರು. ಅಂಬೇಡ್ಕರರು ಎರಡು ವರ್ಷಗಳ ಅವಧಿಯಲ್ಲಿ ಎರಡು ಮಹಾ ಪ್ರಬಂಧಗಳನ್ನು ಬರೆದು ಒಪ್ಪಿಸಿದ್ದರಿಂದ ಕೊಲಂಬಿಯಾ ವಿಶ್ವವಿಧ್ಯಾಲಯವು ಅವರಿಗೆ ಎರಡು ಎಂ.ಎ. ಪದವಿಗಳನ್ನು ಅನುಗ್ರಹಿಸುತ್ತದೆ. ಅಮೇರಿಕದಲ್ಲಿ ಅವರಿಗೆ ಅಲ್ಲಿನ ಸಂವಿಧಾನ ಅದರಲ್ಲೂ 14 ನೇ ತಿದ್ದುಪಡಿ,ನೀಗ್ರೋ ಜನಾಂಗಕ್ಕೆ ಕೊಡಮಾಡಿದ ಸ್ವಾತಂತ್ರ್ಯ ಮತ್ತು ಅಬ್ರಾಹಂ ಲಿಂಕನ್ರ ಹೋರಾಟ ನೀಗ್ರೋಗಳಿಗೆ ಅವರು ತಂದುಕೊಟ್ಟ ಸ್ವಾತಂತ್ರ್ಯ,ಅಲ್ಲದೆ ಭೂಕರ ಟಿ ವಾಷಿಂಗಟನ್ ಜೀವನ ಮತ್ತು ಸಾಧನೆ ಅವರು ನೀಗ್ರೋ ಜನಾಂಗಕ್ಕೆ ಕೊಡಿಸಿದ ಸಮಾನತೆ ಅಂಬೇಡ್ಕರರ ಮೇಲೆ ಬಹಳ ಪ್ರಭಾವ ಬೀರುತ್ತದೆ. ಭಾರತದಲ್ಲಿ ತುಳಿತಕೊಳಪಟ್ಟ ನಿಮ್ನ ವರ್ಗದ ಜನರ ಜೀವನ ಸುಧಾರಣೆ, ಕಲ್ಯಾಣ ಸಮಾಜ ಸ್ಥಾಪನೆ ಅವರ ಏಕೈಕ ಗುರಿಯಾಗುತ್ತದೆ. ಬರೋಡಾ ಸಂಸ್ಥಾನದಿಂದ ಬರುತ್ತಿದ್ದ ಶಿಷ್ಯವೇತನದ ಹಣದಲ್ಲಿ ದುಂದು ವೆಚ್ಚಮಾಡದೆ ಮಿತವ್ಯೆಯಮಾಡಿ, ಅರೆ ಹೊಟ್ಟೆಯಲ್ಲಿದ್ದುಕೊಂಡು ದುಡ್ಡು ಉಳಿತಾಯ ಮಾಡಿ ಸಾವಿರಾರು ಪುಸ್ತಕ ಖರೀದಿ ಮಾಡುತ್ತಾರೆ, ಛಲದಿಂದ ಕಠೋರ ಅಧ್ಯಯನ  ಮಾಡುತ್ತಾರೆ, ಪಿ.ಎಚ್.ಡಿ ಪದವಿಗಾಗಿ ಮಹಾಪ್ರಬಂಧ ಬರೆಯಲು ಆರಂಭಿಸುತ್ತಾರೆ. ಕಠಿಣ ಪರಿಶ್ರಮ, ಆಳವಾದ ಅಧ್ಯಯನದಫಲವಾಗಿ 1917 ರಲ್ಲಿ “ರಾಷ್ಟ್ರೀಯ ಡಿವಿಡೆಂಟ್: ಒಂದು ಐತಿಹಾಸಿಕ ಮತ್ತು ವಿಶ್ಲೇಷನಾತ್ಮಕ ಅಧ್ಯಯನ “(National Dividend of India- A Historical and Analytical study) ಎಂಬ ಮಹಾ ಪ್ರಬಂಧವನ್ನು ಬರೆದು ಮಂಡಿಸುವರು. ಈ ಕೃತಿಗೆ “ಬ್ರಿಟಿಷ ಇಂಡಿಯಾದಲ್ಲಿ ಪ್ರಾಂತೀಯ ಹಣಕಾಸು ವ್ಯವಸ್ಥೆಯ, ವಿಕಾಸ” ಎಂಬ ಮೂಲ ತಲೆಬರಹ ಮತ್ತು ಬ್ರಿಟಿಷ ಸಾಮ್ರಾಜ್ಯದ ಹಣಕಾಸು ವ್ಯವಸ್ಥೆ, ವಿಕೇಂದ್ರಿಕರಣ “ ಎಂಬುದಾಗಿ ಎರಡನೆ ತಲೆಬರಹದೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಮಹಾಪ್ರಬಂಧವನ್ನು ತಮಗೆ ಉನ್ನತ ವ್ಯಾಸಂಗಕ್ಕಾಗಿ ಶಿಷ್ಯವೇತನ ಮಂಜೂರಿಸಿದ ಬರೋಡಾ ಮಹಾರಾಜರಾದ ಸಯ್ಯಾಜೀ ಗಾಯಕವಾಡ ರವರಿಗೆ ಅರ್ಪಿಸಿರುವರು. ವಿಶ್ವಪ್ರಸಿದ್ಧಅರ್ಥಶಾಸ್ತ್ರಜ್ಞ ಮತ್ತು ಅಂಬೇಡ್ಕರರ ಅಚ್ಚುಮೆಚ್ಚಿನ ಉಪನ್ಯಾಸಕರಾದ ಪ್ರೋ.ಎಡ್ವಿನ್ ಸೆಲಿಗ್ಮನ್ ರವರು ಪುಸ್ತಕಕ್ಕೆ ಮುನ್ನುಡಿ ಬರೆದಿರುವರು. ಹಣಕಾಸಿನ ಕುರಿತು ಇಷ್ಟೊಂದು ಆಳವಾಗಿ ಅಧ್ಯಯನ ಮಾಡಿ ವಿಶ್ಲೇಷನೆಮಾಡಿ ಬರೆದಂತ ಇಂತಹ ಪ್ರಬಂಧವನ್ನು ಇಲ್ಲಿಯವರೆಗೆ ನೋಡಿಲ್ಲವೆಂದು ಪ್ರೋ. ಸೆಲಿಗ್ಮನ್ ರವರು ಮುಕ್ತಕಂಠದಿಂದ ಹೊಗಳಿರುವರು. ಈ ಮಹಾ ಪ್ರಬಂಧದಲ್ಲಿ ಅಂಬೇಡ್ಕರರು ಭಾರತದ ಅರ್ಥವ್ಯವಸ್ತೆ ಮತ್ತು ಹಣಕಾಸು ವ್ಯವಸ್ಥೆಯನ್ನು ವೈಜ್ಞಾನಿಕ ಮತ್ತು ವಸ್ತುನಿಷ್ಠ ಅಂಕಿ ಅಂಶಗಳೊಂದಿಗೆ ವಿಶ್ಲೇಷಣೆ ಮಾಡಿದ್ದಾರೆ. ಒಳ್ಳೆಯ ಆಡಳಿತ –ಒಳ್ಳೆಹಣಕಾಸಿನ ಮೇಲೆ ಅವಲಂಬಿಸಿರುತ್ತದೆ. ಆಡಳಿತ ಎಂಬ ಇಂಜಿನ್ನಿಗೆ ಹಣಕಾಸು ಎಂಬುದು, ಇಂಧನವಾಗಿದೆ ಎಂದು ಹಣಕಾಸು ಆಡಳಿತವನ್ನು ವಿಮರ್ಶೆ ಮಾಡಿರುವರು. ಭಾರತಕ್ಕೆ ಇಂಗ್ಲೆಂಡ ಕೊಟ್ಟ ಕೊಡುಗೆ ಏನು ಎಂಬುದಕಿಂತಲೂ ಇಂಗ್ಲೆಂಡಗೆ ಭಾರತ ಕೊಟ್ಟ ಕೊಡುಗೆ ಆರ್ಥಿಕವಾಗಿ ಅಪಾರವಾಗಿದೆ. ಅಧಿಕ ತೆರಿಗೆಯಿಂದ ಇಂಗ್ಲೆಂಡ ಭಾರತವನ್ನು ಎಷ್ಟು ಲೂಟಿ ಮಾಡಿತು ಎಂದರೆ ಪ್ರಪಂಚದಲ್ಲಿಯೆಭಾರತವು ಒಂದು ಬತ್ತಿಹೋದ ಸ್ಥಳವಾಗಿದೆ ಎಂಬುದಾಗಿ ಹೇಳುತ್ತಾರೆ. ಬ್ರಿಟಿಷರಿಂದ ಶಾಂತಿಯುತ ಆಡಳಿತ ಪದ್ದತಿ, ನ್ಯಾಯಾಂಗ ಪದ್ದತಿ, ಕೊಡುಗೆಗಳಾದರೂ ಭಾರತವನ್ನು ಬಡತನ, ದಾರಿದ್ರ್ಯ ಕೂಪಕ್ಕೆ ತಳ್ಳಿದ್ದು ಘೋರ ಅನ್ಯಾಯವಾಗಿದೆ ಎಂಬುದಾಗಿ ಬ್ರಿಟಿಷರ ಆಡಳಿತವನ್ನು, ಆರ್ಥಿಕ ನೀತಿಯನ್ನು ಕಟುವಾಗಿ ಟೀಕಿಸುತ್ತಾ ಜಗತ್ತಿಗೆ ಬಹಿರಂಗ ಗೊಳಿಸಿದ್ದಾರೆ. ಬ್ರಿಟಿಷರ ಮುಖಕ್ಕೆ ಹೊಡೆದಂತೆ ಅಂಕಿ ಅಂಶ ಪ್ರಸ್ತೂತ ಪಡೆಸಿದ್ದಾರೆ. ಈ ಕೃತಿ –ಅಂದು ಎಷ್ಟು ಪ್ರಸಿದ್ದಿ ಹೊಂದಿತ್ತು ಎಂಬುದಕ್ಕೆ, ಅಂದಿನ ಸಂಸದರು, ಶಾಸಕರು ಬ್ರಿಟಿಷ ಆಡಳಿತದ ಬಜೆಟ್ ಮಂಡನೆಯ ಸಮಯದಲ್ಲಿ ಆಕರ ಗ್ರಂಥವಾಗಿ ಬಳಸಲಾಗುತಿತ್ತು. ಅಂಬೇಡ್ಕರರುಒಬ್ಬ ಶ್ರೇಷ್ಠ ಆರ್ಥಿಕ ತಜ್ಞರೆಂಬುದು, ಒಬ್ಬ ಅಪ್ಪಟ ದೇಶಪ್ರೇಮಿ ಎಂಬುದನ್ನು ಲೇಖನಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ಬೇಜವಾಬ್ದಾರಿ ಬ್ರಿಟಿಷರ ಆಡಳಿತ ಪದ್ಧತಿಯನ್ನು ನೇರವಾಗಿ, ದಿಟ್ಟವಾಗಿ ಖಂಡಿಸಿದ್ದು ಯಾವ ಸ್ವಾತಂತ್ರ್ಯ ಹೊರಾಟಗಾರನಿಗಿಂತಲೂ ಕಡಿಮೆಯಾದುದಲ್ಲ ಎಂಬುದನ್ನು ಕೃತಿಯು ಸಾಬೀತು ಪಡಿಸುತ್ತದೆ. ಈ ಕೃತಿಗೆ ಕೊಲಂಬಿಯಾ ವಿಶ್ವವಿದ್ಯಾಲಯವು ಅಂಬೇಡ್ಕರ್ ಅವರಿಗೆ ಪಿಎಚ್ ಡಿ ಪದವಿಯನ್ನು ನೀಡಿತು.                                                  (ಮುಂದುವರೆಯುವುದು)                                          ಸೋಮಲಿಂಗ ಗೆಣ್ಣೂರ        

Read Post »

ಇತರೆ

ಧಾರಾವಾಹಿ ಆವರ್ತನ ಅದ್ಯಾಯ-46 .ಆವತ್ತು ದೇವರಕಾಡಿನಲ್ಲಿ ನೆರೆದ ಭಕ್ತಾದಿಗಳೆದುರು ತಮ್ಮ ಚಮತ್ಕಾರವನ್ನು ಪ್ರದರ್ಶಿಸಿ ಜೀರ್ಣೋದ್ಧಾರಕ್ಕೆ ನಾಂದಿ ಹಾಡಿ ಬಂದಿದ್ದ ಗುರೂಜಿಯವರು ಅಲ್ಲಿನ ನಾಗ ಭವನ ನಿರ್ಮಾಣದ ಕಾಮಗಾರಿಯನ್ನು ಶಂಕರನಿಗೆ ಒಪ್ಪಿಸಲು ಇಚ್ಛಿದರು. ಆದ್ದರಿಂದ ಅಂದು ಬೆಳಿಗ್ಗೆ ಅವನನ್ನು ತಮ್ಮ ಬಂಗಲೆಗೆ ಬರಹೇಳಿದರು. ಗುರೂಜಿಯವರು ದೇವರಕಾಡಿನ ದೊಡ್ಡ ಪ್ರಾಜೆಕ್ಟ್‍ನ್ನು ಕೈಗೆತ್ತಿಕೊಂಡಿರುವುದು ಶಂಕರನಿಗೂ ಗೊತ್ತಿತ್ತು. ಅಲ್ಲದೇ ಅದರ ಕೆಲಸವನ್ನು ಅವರು ತನಗೇ ಕೊಡುತ್ತಾರೆಂಬುದೂ ಅವನಿಗೆ ಖಚಿತವಿತ್ತು. ಹಾಗಾಗಿ,‘ಶಂಕರಾ ನಿನ್ನ ಹತ್ತಿರ ಒಂದು ಮುಖ್ಯ ವಿಷಯ ಮಾತಾಡಲಿಕ್ಕಿದೆ ಮಾರಾಯಾ, ಬೇಗ ಬಂದುಬಿಡು!’ ಎಂದು ಗುರೂಜಿಯವರು ಆಪ್ತವಾಗಿ ಕರೆದಾಗ ಅವನೂ ಅಷ್ಟೇ ನಮ್ರತೆಯಿಂದ, ‘ಆಯ್ತು ಗುರೂಜಿ. ಇನ್ನೊಂದು ಅರ್ಧ ಗಂಟೆಯಲ್ಲಿ ನಿಮ್ಮ ಮುಂದಿರುತ್ತೇನೆ!’ ಎಂದವನು ಕೂಡಲೇ ಸ್ನಾನ ಮಾಡಿ ಬಿಳಿಯ ಮಡಿಯುಟ್ಟು ಅವರ ಬಂಗಲೆಗೆ ಹೊರಟು ಬಂದಿದ್ದ. ಶಂಕರ ತಮ್ಮನ್ನು ಕಂಡಾಗಲೆಲ್ಲ ತೋರಿಸುತ್ತಿದ್ದ ವಿಶೇಷ ಗೌರವವನ್ನೂ ಮತ್ತವನ ಈ ಹೊತ್ತಿನ ವೇಷಭೂಷಣನ್ನೂ ಕಂಡ ಗುರೂಜಿಯವರಿಗೆ ಅವನ ಬಗ್ಗೆ ಹೆಮ್ಮೆಯೆನಿಸಿತು. ಅಷ್ಟೊತ್ತಿಗೆ ಕೆಲಸದವಳು ತಂದಿಟ್ಟ ಕಾಫಿಯನ್ನು ಶಂಕರನಿಗೆ ಕುಡಿಯಲು ಹೇಳುತ್ತ ಮಾತಿಗಾರಂಭಿಸಿದರು. ‘ಶಂಕರ, ಆ ನಾಗದೇವನ ದಯೆಯಿಂದ ನಿನ್ನ ಭಾಗೀವನದ ಸಮೀಪದ ದೇವರಕಾಡನ್ನು ಜೀರ್ಣೋದ್ಧಾರ ಮಾಡುವ ದೊಡ್ಡ ಜವಾಬ್ದಾರಿಯೊಂದು ನಮ್ಮ ಮೇಲೆ ಬಿದ್ದಿದೆ ಮಾರಾಯಾ. ಈ ಪ್ರಾಜೆಕ್ಟು ಕಡಿಮೆಯೆಂದರೂ ಮೂವತ್ತು ಕೋಟಿಗೂ ಮೀರಿದ್ದು ಮಾತ್ರವಲ್ಲದೇ ನಮ್ಮ ಜೀವಮಾನದಲ್ಲೇ ಅದು ಬಹಳ ದೊಡ್ಡ ವ್ಯವಹಾರ ಮಾರಾಯಾ! ಹಾಗಾಗಿ ನಮಗೆ ನಿನ್ನ ಸಂಪೂರ್ಣ ಸಹಕಾರ ಬೇಕು. ಅದರ ಕೆಲಸಕಾರ್ಯಗಳು ನಾಳೆಯಿಂದಲೇ ಶುರುವಾಗುತ್ತವೆ! ಎಂದು ಹೆಮ್ಮೆಯಿಂದ ಹೇಳಿದರು. ಗುರೂಜಿಯವರು ತಮ್ಮ ಬುದ್ಧಿಶಕ್ತಿ ಮತ್ತು ಚಾಣಾಕ್ಷತೆಯಿಂದ ತನಗಿಂತಲೂ ವೇಗವಾಗಿ ಮೇಲೇರಿದುದನ್ನು ಕಾಣುತ್ತ ಬಂದಿದ್ದ ಶಂಕರ ಮೊದಮೊದಲು ಅವರ ಮೇಲೆ ತೀವ್ರ ಮಸ್ಸರಗೊಂಡಿದ್ದನಾದರೂ ಕೊನೆಕೊನೆಗೆ ಅವರ ಸಾಮಥ್ರ್ಯಕ್ಕೆ ವಿಧಿಯಿಲ್ಲದೆ ಶರಣಾಗಿಬಿಟ್ಟಿದ್ದ. ಹಾಗಾಗಿ ಅವರು ತನ್ನ ಶಾಲಾ ಸಹಪಾಠಿ ಎಂಬುದೂ ಅವನಲ್ಲಿ ಗೌಣವಾಗಿ ಅವರ ಮೇಲೆ ಎಲ್ಲರಂತೆ ಭಯಮಿಶ್ರಿತ ಗೌರವಾದರಗಳು ಮೂಡಿದ್ದವು. ಆದ್ದರಿಂದ ಇವತ್ತು ಅವರೆದುರು ನಮ್ರನಾಗಿ ಕುಳಿತಿದ್ದವನು, ‘ಅಲ್ಲ, ಗುರೂಜಿ ನಿಮ್ಮ ಶಕ್ತಿ, ಸಾಮಥ್ರ್ಯದ ಬಗ್ಗೆ ಯಾರಾದರೂ ಮಾತಾಡಲಿಕ್ಕುಂಟಾ ಹೇಳಿ? ನೀವು ಮನಸ್ಸು ಮಾಡಿದರೆ ಯಾವ ಕಾರ್ಯವನ್ನಾದರೂ ಚಿಟಿಕೆ ಹೊಡೆದಂತೆ ಸಾಧಿಸಬಲ್ಲಿರಿ ಅಂತ ಇಡೀ ಊರಿಗೇ ಗೊತ್ತಿರುವ ಸಂಗತಿಯವಲ್ಲವಾ! ಬಹುಶಃ ಆ ಗುಣ ನಿಮ್ಮ ರಕ್ತದಲ್ಲೇ ಬಂದಿರಬೇಕು. ಹಾಗಾಗಿಯೇ ಅಲ್ಲವಾ ನೀವು ನನ್ನ ಹಳೆಯ ದೋಸ್ತಿ ಎನ್ನುವುದನ್ನೂ ಮರೆತು ನಾನು ನಿಮ್ಮ ಭಕ್ತನಾಗಿರುವುದು…!’ ಎಂದು ನಗುತ್ತ ಹೊಗಳಿದ. ಅವನ ಆ ಮಟ್ಟದ ಪ್ರಶಂಸೆಗೆ ಗುರೂಜಿಯವರು ಉಬ್ಬಿದರು. ಆದರೂ ಗಂಭೀರವಾಗಿ,‘ಅದೆಲ್ಲ ಸರಿ ಮಾರಾಯಾ. ಈಗ ಮುಖ್ಯ ವಿಷಯಕ್ಕೆ ಬರುವ. ಏನೆಂದರೆ, ಆ ನಾಗ ಪರಿವಾರ ದೈವಗಳ ದೇವಸ್ಥಾನ ನಿಮಾರ್ಣದ ಕೆಲಸವನ್ನು ನಿನಗೇ ಒಪ್ಪಿಸಬೇಕೆಂದಿದ್ದೇವೆ. ಅದು ನಿನ್ನಿಂದ ಸಾಧ್ಯವಾಗುತ್ತದಾ ಹೇಳು…?’ ಎಂದು ಸಂಶಯದಿಂದ ಪ್ರಶ್ನಿಸಿದರು. ಅಷ್ಟು ಕೇಳಿದ ಶಂಕರನಿಗೆ ಅವರು ರಪ್ಪನೆ ತನ್ನ ಕೆನ್ನೆಗೆ ಹೊಡೆದಂತಾಯಿತು. ಸ್ವಲ್ಪಹೊತ್ತು ಮಂಕಾಗಿ ಕುಳಿತುಬಿಟ್ಟ. ಏಕೆಂದರೆ ಕಟ್ಟಡ ಕಾಮಗಾರಿಯ ವಿಷಯದಲ್ಲಿ ಶಂಕರನಷ್ಟು ನಿಪುಣರೂ, ಅನುಭವಸ್ಥರೂ ಆವಾಗ ಈಶ್ವರಪುರದ ಸುತ್ತಮುತ್ತ ಯಾರೂ ಇರಲಿಲ್ಲ. ಆದರೂ ಅವನು ಈವರೆಗೆ ಸಣ್ಣಪಟ್ಟ ಮನೆಗಳನ್ನು ಮತ್ತು ಕೆಲವು ಬಂಗಲೆಗಳನ್ನು ಹೆಚ್ಚೆಂದರೆ ಐದಾರು ಅಂತಸ್ತಿನ ಕಟ್ಟಡಗಳನ್ನೂ ಕಟ್ಟುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದನಾದರೂ ಅವೆಲ್ಲಕ್ಕಿಂತ ಭಿನ್ನವಾದ ಹಾಗೂ ಬೃಹತ್ತಾದ ಕಾಮಗಾರಿಯನ್ನೆಂದೂ ಮಾಡುವ ಅವಕಾಶ ಅವನಿಗೆ ದೊರಕಿರಲಿಲ್ಲ. ಆದ್ದರಿಂದ ಎಂದಾದರೊಂದು ದಿನ ತನ್ನೂರಿನ ಕಟ್ಟಡ ಕಾಮಗಾರಿ ಕ್ಷೇತ್ರವೇ ತನ್ನನ್ನು ಕಂಡು ಹುಬ್ಬೇರಿಸುವಂಥ ದೊಡ್ಡ ನಿರ್ಮಾಣವೊಂದನ್ನು ತಾನು ಮಾಡಿ ತೋರಿಸಬೇಕು! ಎಂಬ ಹೆಬ್ಬಯಕೆಯೊಂದೂ ಅವನನ್ನು ಸದಾ ಕಾಡುತ್ತಿತ್ತು. ಹೀಗಿರುವಾಗ ಇಂದು ಗುರೂಜಿಯವರು ಅವನ ಸಾಮಥ್ರ್ಯದ ಮೇಲೆಯೇ ಅಪನಂಬಿಕೆ ತೋರಿಸಿದ್ದು ಅವನಿಗೆ ಬೇಸರವನ್ನು ತರಿಸಿತ್ತು. ‘ಇದೇನೀದು ಗುರೂಜಿ… ನಿಮ್ಮಿಂದ ಇಂಥ ಮಾತಾ? ಕಟ್ಟಡದ ಕೆಲಸದಲ್ಲಿ ನನ್ನ ಅನುಭವ ಯಾವ ಮಟ್ಟದ್ದು ಅಂತ ನಿಮಗಿನ್ನೂ ತಿಳಿದಿಲ್ಲವಾ!’ ಎಂದು ಅಸಹನೆಯಿಂದ ಕೇಳಿದ. ಆಗ ಗುರೂಜಿಯವರಿಗೆ ತಮ್ಮ ತಪ್ಪಿನರಿವಾಯಿತು. ‘ಛೇ,ಛೇ! ಹಾಗಲ್ಲ ಮಾರಾಯಾ ನಾವು ಹೇಳಿದ್ದು. ನಿನ್ನ ಕೆಲಸದ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಆದರೆ ಇದು ಬಹಳ ದೊಡ್ಡ ಕೆಲಸ ಮತ್ತು ನಾವಿಬ್ಬರು ಈತನಕ ಮಾಡಿ ಅನುಭವವೇ ಇಲ್ಲದ ವ್ಯವಹಾರವಲ್ಲವಾ? ಹಾಗಾಗಿ ನಮ್ಮ ಬಾಯಿಂದ ಹಾಗೆ ಬಂತಷ್ಟೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡ. ಈ ಪ್ರಾಜೆಕ್ಟನ್ನು ನೀನೇ ಯಶಸ್ವಿಯಾಗಿ ನಡೆಸಿಕೊಡುತ್ತಿ ಅಂತ ಭರವಸೆಯಿದೆ ನಮಗೆ! ನಾಳೆ ಪುಷ್ಯ ನಕ್ಷತ್ರ, ಮಕರಸಂಕ್ರಮಣ. ಶುಭಕಾರ್ಯಕ್ಕೆ ಪ್ರಶಸ್ತವಾದ ದಿನ. ಬೆಳಿಗ್ಗೆ ಬೇಗನೇ ಬಂದು ಬಿಡು. ದೇವರ ಪೂಜೆ ಮುಗಿಸಿ ನಿನಗೆ ಪ್ರಸಾದವನ್ನೂ ಸ್ವಲ್ಪ ಮುಂಗಡವನ್ನೂ ಕೊಡುತ್ತೇವೆ. ಕೂಡಲೇ ಕೆಲಸ ಆರಂಭಿಸು. ಹ್ಞಾಂ! ಇನ್ನೊಂದು ಮಾತು. ಆ ಪ್ರದೇಶದ ಕಾಡು ಕಡಿಸುವ ಕೆಲಸವನ್ನೂ ನೀನೇ ವಹಿಸಿಕೊಳ್ಳಬೇಕು ಮಾರಾಯಾ. ಆ ದರಿದ್ರ ಹಾಡಿಯೊಳಗೆ ಸಿಕ್ಕಾಪಟ್ಟೆ ಮೃಗಗಳಿವೆ ಅಂತ ಮೊನ್ನೆ ಬನ ಜೀರ್ಣೋದ್ಧಾರದ ನಾಂದಿ ಮಾಡಲು ಹೋದಾಗ ತಿಳಿಯಿತು. ಆವತ್ತು ಶೀಂಬ್ರಗುಡ್ಡೆಯ ನಿನ್ನ ಲೇಔಟು ಮಾಡುವಾಗ ಅದ್ಯಾರೋ ನಿನ್ನ ಪುರಂದರಣ್ಣನ ತಂಡದ ಕಾಡು ಮನುಷ್ಯರು ಬಂದಿದ್ದರು ಅಂತ ಹೇಳಿದ್ದೆಯಲ್ಲ, ಅವರನ್ನೇ ಕರೆಯಿಸಿ ಅವರ ಹೊಟ್ಟೆಯನ್ನು ಚೆನ್ನಾಗಿ ತುಂಬಿಸಿಬಿಡು…!’ ಎಂದು ಜೋರಾಗಿ ನಕ್ಕಾಗ ಶಂಕರನೂ ಧ್ವನಿಗೂಡಿದ. ‘ಅಂದಹಾಗೆ ಕಾಡು ಕಡಿಸುವ ಕೆಲಸವನ್ನು ಇವತ್ತಿಗೆ ಸರಿಯಾಗಿ ಒಂದು ತಿಂಗಳು ಬಿಟ್ಟು ಶುರು ಮಾಡು. ಅದಕ್ಕೂ ಒಂದು ಒಳ್ಳೆಯ ದಿನವನ್ನು ಗೊತ್ತುಪಡಿಸಿದ್ದೇವೆ!’ ಎಂದ ಗುರೂಜಿಯವರು ತಟ್ಟನೆ ಗಂಭೀರವಾದರು. ಬಳಿಕ, ‘ಶಂಕರಾ, ಈಗ ಬಹಳ ಮುಖ್ಯವಾಗಿ ದೇವಸ್ಥಾನದ ಕಟ್ಟಡಕ್ಕೆ ಬೇಕಾಗುವ ಉತ್ತಮವಾದೊಂದು ದೊಡ್ಡ ಬಂಡೆಯನ್ನು ಹುಡುಕುವುದು ನಮ್ಮ ಮೊದಲ ಕೆಲಸ ನೋಡು! ಯಾಕೆಂದರೆ ನಾವು ಹಮ್ಮಿಕೊಂಡಿರುವ ಆ ದೇವಸ್ಥಾನದ ನಿರ್ಮಾಣವು ಏಕಶಿಲೆಯಿಂದಲೇ ಆಗಬೇಕೆಂಬ ನಿಯಮವಿದೆ. ಹಾಗಾಗಿ ಮೊದಲು ನೀನು ಅದನ್ನು ಹುಡುಕಬೇಕು! ಆನಂತರ ದೇವಸ್ಥಾನದೊಳಗಿನ ಕಾಷ್ಠಶಿಲ್ಪಕ್ಕೆ ಉತ್ತಮವಾದ ಮರಮುಟ್ಟುಗಳೂ ಬೇಕಾಗುತ್ತವೆ. ಅದಕ್ಕೆ ಸ್ವಲ್ಪ ಮಟ್ಟದ ಮರಗಳು ಆ ಕಾಡಿನಲ್ಲಿಯೇ ಸಿಗುತ್ತವೆ. ಉಳಿದದ್ದನ್ನು ಬೇರೆಡೆಯಿಂದ ಹೊಂದಿಸಿಕೊಂಡರಾಯ್ತು’ ಎಂದರು. ಗುರೂಜಿಯವರ ಮಾತು ಕೇಳಿದ ಶಂಕರನಲ್ಲಿ ಉತ್ಸಾಹ ಚಿಮ್ಮಿತು. ‘ಆಯ್ತು, ಆಯ್ತು ಗುರೂಜಿ. ನೀವು ಹೇಗೆ ಹೇಳುತ್ತೀರೋ ಹಾಗೆ. ನಾಳೆ ಬರುತ್ತೇನೆ. ಕೆಲಸ ಆದಷ್ಟು ಬೇಗ ಶುರು ಮಾಡುವ!’ ಎಂದವನು ಉಗುರುಸುತ್ತಿನಿಂದ ಊದಿಕೊಂಡಿದ್ದ ಅವರ ಬಲಗಾಲ ದಪ್ಪ ಹೆಬ್ಬೆರಳನ್ನು ಭಕ್ತಿಯಿಂದ ಮುಟ್ಟಿ ಕಣ್ಣಿಗೊತ್ತಿಕೊಂಡು ಹಿಂದಿರುಗಿದ. ಆಗ ಗುರೂಜಿಯವರ ತುಟಿಯಂಚಿನಲ್ಲಿ ಹೆಮ್ಮೆಯ ನಗುವೊಂದು ಹೊಮ್ಮಿತು. ಮರುದಿನ ಮುಂಜಾನೆ ಶಂಕರ ಸಮಯಕ್ಕೆ ಸರಿಯಾಗಿ ಗುರೂಜಿಯವರ ಬಂಗಲೆಗೆ ಬಂದ. ಅವರು ಅವನನ್ನು ವರಾಂಡದಲ್ಲಿ ಕುಳ್ಳಿರಿಸಿ ತಮ್ಮ ಮನೆ ದೇವರ ಪೂಜೆಗೆ ಕುಳಿತವರು, ಬರೋಬ್ಬರಿ ಅರ್ಧ ಗಂಟೆಯ ವಿಶೇಷ ಪೂಜೆಯೊಂದನ್ನು ನೆರವೇರಿಸಿದ ಬಳಿಕ ಬೆಳ್ಳಿಯ ಹರಿವಾಣದಲ್ಲಿ ಗಂಧಪ್ರಸಾದವನ್ನೂ ಎರಡು ಸಾವಿರ ಮುಖಬೆಲೆಯ ನೋಟಿನ ಐದು ಕಟ್ಟುಗಳನ್ನೂ ಇರಿಸಿ ತಂದು ನಗುತ್ತ ಶಂಕರನಿಗೆ ನೀಡಿದರು. ಅದನ್ನವನು ಭಕ್ತಿಯಿಂದ ಸ್ವೀಕರಿಸಿ, ಅವರಿಗೆ ಡೊಗ್ಗಾಲು ಬಿದ್ದು ನಮಸ್ಕರಿಸಿ ಹಿಂದಿರುಗಿ ತನ್ನ ಕಾರು ಹತ್ತಿದ. ತಮ್ಮಿಂದ ನಿರ್ಮಾಣಗೊಳ್ಳಲಿರುವ ನಾಗನ ಇಡೀ ದೇವಸ್ಥಾನವು ಏಕಶಿಲೆಯಿಂದಲೇ ಅರಳಬೇಕು. ಆ ಶಿಲೆಗಳಲ್ಲಿ ಮತ್ತು ಒಳಗಿನ ಕಾಷ್ಠಶಿಲ್ಪಗಳಲ್ಲಿ ನಾಗಪುರಾಣಕ್ಕೆ ಸಂಬಂಧಿಸಿದ ಮತ್ತು ನಾಗಾರಾಧನೆಯ ಪ್ರಾಚೀನತೆಯನ್ನು ಸಾರುವಂಥ ಸಹಸ್ರಾರು ಬಗೆಯ ಕಲಾಕೃತಿಗಳು ಅದ್ಭುತವಾಗಿ ಕೆತ್ತನೆಗೊಂಡು ದೇವಸ್ಥಾನಕ್ಕೆ ಬರುವ ಭಕ್ತಾದಿಗಳಲ್ಲಿ ವಿಶೇಷ ಭಯಭಕ್ತಿಯನ್ನು ಮೂಡಿಸುವಂತಿರಬೇಕು. ಆ ಮಟ್ಟದ ತಮ್ಮ ಸಾಧನೆಯನ್ನು ಕಂಡು ಊರಿನ ಇನ್ನಿತರ ದೇವಸ್ಥಾನಗಳ ಮುಖ್ಯಸ್ಥರೆಲ್ಲರೂ ವಿಸ್ಮಯದಿಂದ ಮೂಗಿನ ಮೇಲೆ ಬೆರಳಿಡುವಂತಾಗಬೇಕು! ಎಂಬುದು ಗುರೂಜಿಯವರ ಹೆಬ್ಬಯಕೆಯಾಗಿತ್ತು. ಆದ್ದರಿಂದ ಶಂಕರನೂ ಅವರ ಮಹದಾಸೆಯನ್ನು ನೆರವೇರಿಸಲು ಹೊರಟವನು, ಮೊದಲನೆಯದಾಗಿ ದೊಡ್ಡ ಬಂಡೆಯೊಂದರ ಹುಡುಕಾಟಕ್ಕಿಳಿದ. ತನ್ನ ಕಟ್ಟಡಗಳ ಅಡಿಪಾಯ ಕೆಲಸದ ತಂಡದ ಹಲವರಲ್ಲಿ ಆ ಕುರಿತು ವಿಚಾರಿಸುತ್ತ ಬಂದ. ಆದ್ದರಿಂದ ಅವರಲ್ಲಿ ತಮಿಳುನಾಡಿನ ತಂಗವೇಲು ಎಂಬವನು ಈಶ್ವರಪುರದ ಅಂಚಿನಲ್ಲಿರುವ ಕಾರ್ಗಲ್ಲು ಎಂಬ ಗ್ರಾಮದ ಒಂದು ಕಡೆ ಅಂಥದ್ದೊಂದು ಬೃಹತ್ತ್ ಬಂಡೆ ಇರುವುದು ತನಗೆ ಗೊತ್ತಿದೆ ಎಂದು ಶಂಕರನಿಗೆ ತಿಳಿಸಿದ. ಹಾಗಾಗಿ ಶಂಕರ ಮರುದಿನ ಬೆಳಿಗ್ಗೆಯೇ ಗುರೂಜಿಯವರ ಪ್ರಸಾದವನ್ನು ತನ್ನ ಹೊಸ ಇನ್ನೋವಾ ಕಾರಿನಲ್ಲಿಟ್ಟುಕೊಂಡು ತಂಗವೇಲುವಿನೊಂದಿಗೆ ಅತ್ತ ಹೊರಟ. ತಂಗವೇಲು ಬಹಳ ವರ್ಷಗಳ ಹಿಂದೊಮ್ಮೆ ತನ್ನ ಮೊದಲಿನ ಮಾಲಿಕನೊಡನೆ ಕಾರ್ಗಲ್ಲಿನ ಯಾವುದೋ ಒಂದು ಸಣ್ಣ ಊರಿನಲ್ಲಿದ್ದ ಆ ಬಂಡೆಯನ್ನು ನೋಡಲು ಹೋಗಿದ್ದ. ಆದರೆ ಈಗ ಅವನು ಅಲ್ಲಿನ ದಾರಿಯನ್ನು ಮರೆತಿದ್ದ. ಊರು ಕಾರ್ಗಲ್ಲು ಮತ್ತು ಬಂಡೆಯ ಮಾಲಿಕ ಸುರೇಂದ್ರಯ್ಯ ಎಂಬುದು ಮಾತ್ರ ಗೊತ್ತಿತ್ತು. ಹಾಗಾಗಿ ಧೈರ್ಯ ಮಾಡಿ ಶಂಕರನನ್ನು ಕರೆದುಕೊಂಡು ಹೊರಟ. ಆದರೆ ಕಾರ್ಗಲ್ಲು ಸಮೀಪಿಸುತ್ತಲೇ ಮತ್ತೆ ಮುಂದೆ ಹೋಗಲು ಅವನಿಗೆ ದಿಕ್ಕು ಹೊಳೆಯಲಿಲ್ಲ. ಆದ್ದರಿಂದ, ‘ಇನ್ನು ಸ್ವಲ್ಪ ಮುಂದೆ ಹೋಗುವ ಸಂಗರಣ್ಣ. ಇನ್ನು, ಇನ್ನೂ ಸ್ವಲ್ಪ ಹೋಗುವ…!’ ಎನ್ನುತ್ತ ತನಗೆ ತಿಳಿಯದ ದಾರಿಯನ್ನೇ ಅವನಿಗೂ ತೋರಿಸುತ್ತ ಕೊನೆಯಲ್ಲಿ ಅವನ ದಾರಿಯನ್ನೂ ತಪ್ಪಿಸಿಬಿಟ್ಟ. ಅಷ್ಟೊತ್ತಿಗೆ ಶಂಕರ ಅಳಂದೂರು ಚರ್ಚಿನ ರಸ್ತೆ ಹಿಡಿದಿದ್ದವನು ಇನ್ನು ಇವನನ್ನು ನಂಬಿದರಾಗದು ಎಂದುಕೊಂಡು ಅಲ್ಲೇ ಎದುರಿಗೆ ಸಿಕ್ಕಿದ ಗೂಡಂಗಡಿಯೊಂದರ ಮುಂದೆ ಕಾರು ನಿಲ್ಲಿಸಿದ ಹಾಗೂ ಕಾರಿನೊಳಗೆ ಕುಳಿತುಕೊಂಡೇ ತಾನು ಹೋಗಬೇಕಾದ ಬಂಡೆಯ ವಿಳಾಸವನ್ನು ಗತ್ತಿನಿಂದ ಅಂಗಡಿಯವನಲ್ಲಿ ವಿಚಾರಿದ. ಆದರೆ ಅಂಗಡಿಯವನು ಇವನ ಅಹಂಕಾರವನ್ನು ಕಂಡು ತಾನೂ ಎದ್ದು ಬಾರದೆ, ‘ಅಯ್ಯಯ್ಯಾ… ನೀವು ಎಂಥದು ಮಾರಾಯ್ರೇ ತುಂಬಾ ಮುಂದೆ ಬಂದು ಬಿಟ್ಟಿದ್ದೀರಲ್ಲಾ…! ಆ ಊರಿನ ಹೆಸರು ಗೋಳಿಬೆಟ್ಟು ಅಂತ. ಒಂದು ಕೆಲ್ಸ ಮಾಡಿ. ಈಗ ಬಂದ ದಾರಿಯಲ್ಲೇ ಸುಮಾರು ಹಿಂದೆ ಹೋಗಿ. ಆಗ ಕುಂಟಲಪಾಡಿ ಅಂತ ಸಿಗುತ್ತದೆ. ಅಲ್ಲಿ ಒಂದುಕಡೆ ಮಣ್ಣಿನ ರಸ್ತೆಯಲ್ಲಿ ಬಲಕ್ಕೆ ತಿರುಗಿ ಸ್ವಲ್ಪ ದೂರ ಹೋದರೆ ಆ ವಿಳಾಸ ಸಿಗುತ್ತದೆ ನೋಡಿ…’ ಎಂದು ತನ್ನ ಹಲ್ಲಿಲ್ಲದ ಬೊಚ್ಚು ಬಾಯಿಬಿಟ್ಟು ನಗುತ್ತ ವಿವರಿಸಿದ. ಅವನ ನಗುವನ್ನು ಕಂಡ ಶಂಕರನಿಗೆ ಅವನು ತನ್ನನ್ನು ಗೇಲಿ ಮಾಡಿದನೆಂದೇ ಅನ್ನಿಸಿ ಮೈಯೆಲ್ಲ ಉರಿಯಿತು. ಆದ್ದರಿಂದ ಅವನನ್ನು ತಿರಸ್ಕಾರದಿಂದ ದಿಟ್ಟಿಸುತ್ತ ಸರ್ರನೆ ಕಾರು ತಿರುಗಿಸಿದ. ಶಂಕರನ ಕೊಬ್ಬು ಕಂಡು ಅಂಗಡಿಯವನಿಗೂ ಸಿಟ್ಟು ಬಂತು. ಅವನು ಥೂ! ಬೇವರ್ಸಿ ನಿನ್ನ ಚರ್ಬಿಯೇ…! ಎಂದು ಉಗಿಕೊಂಡ. ಆದರೆ ಶಂಕರನ ಕೋಪ ಹಾಗೆಯೇ ಕೊರೆಯುತ್ತಿದ್ದುದು ತಟ್ಟನೇ ತಂಗವೇಲುವಿನ ಮೇಲೆ ತಿರುಗಿತು.‘ಹೇ, ತಂಗವೇಲು ಇದೆಂಥದನಾ ನಿನ್ನ ಕರ್ಮ? ಎಡ್ರಸ್ ಗೊತ್ತಿಲ್ಲದಿದ್ದರೆ ಇಲ್ಲ ಅಂತ ಹೇಳಬೇಕು. ಅದನ್ನು ಬಿಟ್ಟು, ‘ಸ್ವಲ್ಪ ಹೋಗುವ, ಸ್ವಲ್ಪ ಹೋಗುವ ಅಂತ ಎಲ್ಲಿಗೆ ನಿನ್ನ ಅಪ್ಪನ ಮನೆಗೆ ಕರ್ಕೊಂಡು ಹೋದದ್ದಾ…? ಸುಮ್ಮನೆ ನಾಯಿ ಸುತ್ತಿದ ಹಾಗೆ ಸುತ್ತಿಸಿದೆಯಲ್ಲ ಮಂಡೆ ಸಮ ಉಂಟಾ ನಿಂಗೆ…? ಎಂದು ಕೆಟ್ಟದಾಗಿ ಬೈದುಬಿಟ್ಟ. ಅದನ್ನು ಕೇಳಿದ ತಂಗವೇಲು ಪೆಚ್ಚಾಗಿ ಹಲ್ಲುಗಿಂಜುತ್ತ ಕುಳಿತ. ಅಷ್ಟರಲ್ಲಿ ಕುಂಟಲಪಾಡಿ ಎದುರಾಯಿತು. ಅಲ್ಲಿ ಸುಮಾರು ದೂರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಕುಂಟಾಲ ಹಣ್ಣಿನ ಮರಗಳಿಂದ ತುಂಬಿದ ದಟ್ಟ ಹಾಡಿಗಳಿದ್ದವು. ಅಲ್ಲೇ ಬಲಕ್ಕೊಂದು ಮಣ್ಣಿನ ಒಳದಾರಿ ಕಾಣಿಸಿತು. ಆ ಪ್ರದೇಶವನ್ನು ನೋಡಿದ ತಂಗವೇಲುವಿಗೆ ಹಿಂದೆ ತಾನು ಬಂದಿದ್ದ ನೆನಪು ಈಗ ತಟ್ಟನೆ ಮರುಕಳಿಸಿತು. ‘ಓಹೋ… ಸಂಗರಣ್ಣಾ ಇದೇ ದಾರಿ, ಇದೇ ದಾರಿ. ಈಗ ತಿಳೀತು ಬಿಡಿ!’ ಎಂದು ತನ್ನ ಎಣ್ಣೆಗಪ್ಪಿನ ಮೂತಿಯನ್ನು ಊರಗಲ ಮಾಡಿಕೊಂಡು ಸಂಜೆಯ ಮಬ್ಬು ಬಾನಿನಲ್ಲಿ ಮಿಂಚುವ ಶುಕ್ರಗ್ರಹದಂಥ ನಗುವಿನಿಂದ ಹೇಳಿದ. ಆಗ

Read Post »

ಇತರೆ

‘ಅಂಬಿಕಾತನಯದತ್ತ’ಮುಂಬೈಯಲ್ಲೊಂದುಅಪರೂಪದರಂಗರೂಪಕ.

‘ಅಂಬಿಕಾತನಯದತ್ತ’ ಮುಂಬೈಯಲ್ಲೊಂದು ಅಪರೂಪದರಂಗರೂಪಕ. ‘ಅಂಬಿಕಾತನಯದತ್ತ’ ಮುಂಬೈಯಲ್ಲೊಂದು ಅಪರೂಪದರಂಗರೂಪಕ. ರಚನೆ: ಡಾ. ವರದರಾಜಚಂದ್ರಗಿರಿಮತ್ತುಸಾ.ದಯಾ ಪ್ರಸ್ತುತಿ : ಕನ್ನಡಕಲಾಕೇಂದ್ರ, ಮುಂಬೈ. ಸಮಯ- ಸಂರ‍್ಭ, ನವಿಮುಂಬಯಿಕನ್ನಡಸಂಘ, ವಾಶಿ, ನವಿಮುಂಬಯಿ , ಮೊನ್ನೆದಿನಆಯೋಜಿಸಿದರ‍್ನಾಟಕರಾಜ್ಯೋತ್ಸವಕರ‍್ಯಕ್ರಮದಂದು ರೂಪಕದಲ್ಲಿ ನೃತ್ಯರೂಪಕ, ಸಂಗೀತರೂಪಕ ಇರುವಂತೆ, ಕಾವ್ಯವಾಚನ-ಗಾಯನ- ನಟನೆಯ ಮೂಲಕ ‘ರಂಗರೂಪಕ’ವನ್ನು ಸಾಧ್ಯವಾಗಿಸಿ ಸಾದರಪಡಿಸಿದವರು ಕಳೆದ ಮೂರು ದಶಕಗಳಿಂದ ಮುಂಬಯಿನ ಕನ್ನಡ ತುಳು ರಂಗಭೂಮಿಯಲ್ಲಿ ಗಂಭೀರವಾಗಿ ತಮ್ಮನ್ನು ತೊಡಗಿಸಿಕೊಂಡಿರುವಸೃಜನಶೀಲ ನಾಟಕಕಾರ, ನಟ, ನಿರ‍್ದೇಶಕ, ಕವಿಮಿತ್ರ ಸಾ.ದಯಾ ಎಂಬ ಸರಳ ವಿರಳ ಸಹೃದಯಿ. ಹಿನ್ನೆಲೆ ಸಂಗೀತ ಸರ್ವ   ಹೊಣೆ ಹೊತ್ತು ತಮ್ಮ ಮಧುರಕಂಠದಿಂದ ಬೇಂದ್ರೆಯವರ ಗೇಯಗೀತೆಗಳ ಭಾವಲಹರಿಯ ನಾದತರಂಗಗಳನ್ನು ಸಭಾಂಗಣದಲಿ ಪಸರಿಸಿದವರು ವಾಸು.ಜೆ.ಮೊಯಿಲಿ.ಸಂಕೋಚದ ಸ್ವಭಾವದ ಈತ ರಾತ್ರಿಶಾಲಾ ದಿನಗಳಿಂದಲೇ ಹಾಡನ್ನು ಗೀಳಾಗಿಸಿಕೊಂಡವರು.ಗೆಳೆಯರಿಂದ ಅಂದಿನಿಂದಲೂ ಮುಂಬೈನ ಪಿ.ಬಿ.ಶ್ರಿನಿವಾಸ್ ಅಂತಲೇ ಕರೆಯಿಸಿಕೊಂಡು,ಎಲೆಮರೆಯಲ್ಲೇ ಇರುವ ಇವರನ್ನು ಮುಂಬೈಯಲ್ಲಿ(ಪರಿಚಿತರೇ), ಮುಖ್ಯ ಕಾರ‍್ಯಕ್ರಮಗಳನಡುವಿನಸಮಯದಲ್ಲಿ ‘ಫಿಲ್ಲರ್‘ ತರಹ ಹಾಡನ್ನು ಹಾಡಲು ಉಪಯೋಗಿಸಿಕೊಂಡವರೇಹೆಚ್ಚು !!! ಹೇಳಲೇಬೇಕಾದುದುಅಂದು ರೂಪಕದಲ್ಲಿ ಪಾಲುಗೊಂಡ ಪುಟ್ಟ ಪುಟ್ಟ ಮಕ್ಕಳಾದ ಪ್ರತೀಕ್ಷಾ, ಸುನಿಧಿ, ಸಾಕ್ಷೀ, ಸನಾತನ್, ಪ್ರಥ್ವಿ.ಅದರಲ್ಲೂ ಆಂಗ್ಲ ಮಾಧ್ಯಮ ಶಾಲೆಯ ಇವರಲ್ಲಿ ಹೆಚ್ಚಿನವರ ಮಾತೃಭಾಷೆ ಕನ್ನಡ ಅಲ್ಲ.ಬೆರಳೆಣಿಕೆಯ ತಾಲೀಮಿನಲ್ಲಿ ತಮ್ಮ ತಮ್ಮ ಪಾಲಿನದನ್ನು ಶ್ರದ್ದೆಯಿಂದ     ನಿರ‍್ವಹಿಸಿದ ಮಕ್ಕಳ ಹುರುಪು, ಉತ್ಸಾಹ ಚೇತೋಹಾರಿಯಾಗಿತ್ತು.ತಾಲೀಮಿಗೆ ದೂರ ದೂರದಿಂದ ಅವರನ್ನು ಕರೆತರುವ ಹೆತ್ತವರ ಸಹನೆ,ಕೊಡುಗೆಯೂಮಹತ್ತರವಾದುದ್ದೇ. ಸಾ.ದಯಾ. ಅವರ ಐದು ವರ್ಷದ  ಮಗ ಮೊಹಿನೀಷ್, ತಬಲದಲ್ಲಿ ಸಾಥ್   ನೀಡಿದ ಅವರ ಹಿರಿಯ ಮಗ ರಾಘವೇಂದ್ರ ದೂರದ ದೊಂಬಿವಲಿಯಿಂದ ಬರುವ ಪಾಡು; ಸಂಘದ ಕಾರ್ಯದರ್ಶಿ ಆಗಿದ್ದು ಗುರುತರ ಜವಾಬ್ದಾರಿಯ ಹೊರೆ ಹೊತ್ತ ಜಗದೀಶ್ ರೈಯವರು ತಮ್ಮ ಪೂರ‍್ಣ ಪರಿವಾರದ(ಮಡದಿ ಬಬಿತಾ ರೈ, ಮಗಳು ಸಾನ್ವಿ, ಮಗ ಸಾತ್ವಿಕ್) ಜೊತೆ ರೂಪಕದಲ್ಲಿ ತೊಡಗಿಸಿಕೊಂಡದ್ದು ಅವರ ಬದ್ಧತೆ ಬಗ್ಗೆ ಶರಣೆನ್ನದೆ ಬೇರೆ ಮಾತಿಲ್ಲ. ಮಕ್ಕಳ ನೃತ್ಯವಿನ್ಯಾಸ ಮಾಡಿ, ಕೆಲವೊಂದು ಹಾಡಿಗೆ ತಮ್ಮ ಲಾಲಿತ್ಯಪೂರ‍್ಣ ಭಾವಾಭಿನಯ ನೃತ್ಯದ ಮೂಲಕ ರೂಪಕದ ಸೊಬಗಿಗೆ ರಂಗೇರಿಸಿದ ಕಲಾವಿದೆ ಸಹನಾ ಭಾರದ್ವಾಜ್,ಹಾರ‍್ಮೋನಿಯಂನಲ್ಲಿ ಶಿವಾನಂದ ಶೆಣೈ, ತಬಲಾದಲ್ಲಿ ಮರಾಠಿಗ ಶುಭಂ, ಕಲಾವಿದರಾದ ಗಣೇಶ್ಕುಮಾರ, ಮಧುಸೂದನ ಟಿ.(ಕನ್ನಡಕಲಾ ಕೇಂದ್ರದ ಅಧ್ಯಕ್ಷರು), ಬೆಳಕಿನಲ್ಲಿ ಸಹಕರಿಸಿದವರು ವೆಂಕಟ, ಪ್ರಸಾಧನದಲ್ಲಿ ಮಂಜುನಾಥ ೧ ಶೆಟ್ಟಿಗಾರ ಬಳಗ, ಇವರೆಲ್ಲರ ಸೃಜನಶೀಲ ಕೊಡುಗೆ ಮುಖ್ಯವಾದದ್ದು. ನೇಪಥ್ಯದಲ್ಲಿ  ಸುಚೇತಾ ಶೆಟ್ಟಿ, ವೀಣಾ ಭಟ್  ಇವರ ನೆರವು ನೆನೆಸುವಂತಹದ್ದೇ. ಪಶ್ಚಿಮೋತ್ತರ ಮುಂಬೈನ ದೂರದ ಕಾಂದವಲಿಯಿಂದ ವಾಶಿನವಿ ಮುಂಬೈಗೆ ಸುಮಾರು ೪೫ ಕಿ.ಮಿ. ದಾರಿಯನ್ನು ಕ್ರಮಿಸಲು ಏನೆಂದರೂ ಎರಡು ತಾಸು ಬೇಕೇಬೇಕು. ತಾಲೀಮಿಗೆ ನಾಲ್ಕಾರು ಬಾರಿ ತಮ್ಮ ಕಾರಿನಲಿ ಡ್ರೈವ್ಮಾಡಿಕೊಂಡೊಯ್ದು ಕರೆತರುತಿದ್ದ ಕಲಾವಿದ ಗೆಳೆಯ ಗಣೇಶ್ಕುಮಾರರ ತಾಳ್ಮೆ ಅಪಾರವಾದುದು. ಅವರ ಸಹನೆ ಸಹಕಾರಕ್ಕೊಂದು ಸಲಾಮ್. ……………….. ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’ ಹೌದಲ್ಲ, ಭಾವ ಅದೊಂದು ಭೃಂಗದಂತೆ, ಮಿಂಚಿ ಮಾಯವಾಗುವಂತಹದ್ದು.ಆದರೆ ಕವಿ ಅಂತಹ ಮಿಂಚನ್ನೂ ಹಿಡಿದಿರಿಸಬಲ್ಲ! ಕಾವ್ಯ ಭಾವ ಕನ್ನಡಿಯ ಮೂಲಕ‘ ಅರ‍್ಥವಿಲ್ಲ ಸ್ವರ‍್ಥವಿಲ್ಲ ಬರಿಯ ಭಾವಗೀತ’ ಎಂಬ ಜೀವನ ದರ್ಶನವನ್ನು   ಮಾಡಿಸಬಲ್ಲ ದಾರ‍್ಶನಿಕನೂ ಹೌದು.  ‘ರಸವೆ ಜನನ ವಿರಸ ಮರಣ ಸಮರಸವೇ ಜೀವನ’ ಎಂಬ ಸುಸೂತ್ರ ಸಂಸಾರಕೆ ಮೂಲಬೀಜ ಮಂತ್ರದ ಸೂತ್ರದಾರಿಯೂ ಹೌದು. ‘ಇದ್ದದ್ದು ಮರೆಯೋಣ, ಇಲ್ಲದ್ದು ತೆರೆಯೋಣ ಹಾಲ್ಜೇನು ಸುರಿಯೋಣ, ಕುಣಿಯೋಣು ಬಾರಾ, ಕುಣಿಯೋಣು ಬಾ ಎಂದು ಬದುಕಿನ ಸಂತಸವನ್ನು ಕುಣಿಕುಣಿದು ಅನುಭವಿಸಲು ಹಾರೈಸುವಂತೆ,ಸಂಸಾರಸಾಗರದಾಗ ಕವಿ ಪಟ್ಟ ದು:ಖ ದುಮ್ಮಾನಗಳ ಹೊರೆ ಭಾರವೇನು ಕಡಿಮೆಯದಲ್ಲ. ‘ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೆ ನಿನ್ನ ?’ ಆಗ ತಾನೆ ಹುಟ್ಟಿದ ಇನ್ನೊಂದು ಮಗುವೂ ಕಣ್ಣು ಮುಚ್ಚಿದಾಗ, ಮಡದಿಯ ಆ ಕರುಳು ಹಿಂಡುವ ನೋಟವನ್ನು ನೋಡಲಾರದ ಕವಿಕರುಳು ಮಿಡಿವ ಬಗೆಯದು. ‘ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೋಯ್ದಾ, ನುಣ್ಣನೆ ಎರಕಾವ ಹೋಯ್ದಾ” ಸುಮಾರು ನೂರಾ ಎರಡು ವರ‍್ಷಗಳ ಹಿಂದೆ ಸಾಧನಕೇರಿಯ ಮನೆ ಅಂಗಳದಿಂದ ಕವಿ ಕಂಡ, ಕಾಣಿಸುವ, ಸೂರ‍್ಯೋದಯ ವರ‍್ಣನೆಯಲ್ಲಿ ತೇಲಿಸುವ, ಇದು ಬರಿ ಬೆಳಗಲ್ಲೋ ಅಣ್ಣಾ ಎಂಬ ಅನೂಹ್ಯ ಅದ್ಭುತಕೆ ಸರಿಸಾಟಿಯಾದ ಕಾವ್ಯವೆಲ್ಲಿ? ಬೆಳಗಲ್ಲಿ ಅದ್ಯಾತ್ಮ ದರ್ಶನಗೈವ ಕವಿ ಸಂಜೆಹೊತ್ತಲ್ಲಿ ; ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತಾ, ಆಗ ಸಂಜೆಯಾಗಿತ್ತ’ ಅಂತ ಕಣ್ಣ ಮಿಟಿಕಿಸುವ ತುಂಟತನಕ್ಕೂ ಕಡಿಮೆ ಇಲ್ಲ. ತಾನೊಲಿದವಳ ಮೊಗದ ಮೇಲೆ ನಗೆನವಿಲು ಆಡುವುದನ್ನು ಕಾಣುವ ಕವಿಯ ಕಲ್ಪನಾ ಕಾಣ್ಕೆಗೆ ಮಿಗಿಲುಂಟೇ ? ಸಾಮಾನ್ಯರ ಪಾಲಿನ ಸಹಜ ಪ್ರೇಮಭಾವ ಮೆರೆವ ‘ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು, ಅದಕು ಇದಕು ಎದಕು…’ ಎಂಥ ಮಧುರ ಮಧುರ ಪ್ರೇಮಾಲಾಪವಿದು..! ಪ್ರೇಮದ ಮುಂದಿನ ಹೆಜ್ಜೆ ಪ್ರಣಯವಲ್ಲವೇ. ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ, ಚುಂಬಕ ಗಾಳಿಯು ಬೀಸುತ್ತಿದೆ ಸೂರ‍್ಯನ ಬಿಂಬಕೆ ಚಂದ್ರನ ಬಿಂಬವು ರಂಬಿಸಿ ನಗೆಯಲಿ ಮೀಸುತಿದೆ…..’ ಕವಿ ಪ್ರಣಯ ಭಾವವನ್ನು ವ್ಯಕ್ತಪಡಿಸುವ ಪರಿ ನೋಡಿ! ಆದರೆ ಇಲ್ಲಿ ಎಲ್ಲವೂ ಸರಿ ಇರುವುದೇ? ಇಲ್ಲ.ಸಮಾಜದಲ್ಲಿ ಮಾನವ ಪ್ರೇರಿತ ಅತಿರೇಕಕ್ಕೆ ಕೆರಳುವ ಕವಿಯೊಳಗಿನ ರುದ್ರವೀಣೆ ಮಿಡಿಯುವ ಬಗೆ; ‘ಧರ‍್ಮಾಸನಹೊರಳುತಿವೆ’ ಸಿಂಹಾಸನ ಉರುಳುತಿವೆ, ಜಾತಿಪಂಥ ತೆರಳುತಿವೆ ಮನದ ಮರೆಯಲಿ, ಯಾಕೋ ಕಾಣೆ ರುದ್ರವೀಣೆ ಮಿಡಿಯುತ್ತಿರುವುದು…’ ಹೀಗೆ ತನ್ನ ಸುತ್ತಲ ಆಗುಹೋಗುಗಳಿಗೆ ಕಣ್ಣಾದ,ಕಿವಿಯಾದ ಕವಿ ನೊಂದಿದ್ದಾರೆ, ಮರುಗಿದ್ದಾರೆ ಮತ್ತು ಪ್ರತಿಭಟಿಸಲೂ ಹಿಂಜರಿಯದೆ ಧ್ವನಿಯಾಗಿದ್ದಾರೆ. ಕವಿ ಜನರ ನಡುವೆ,ಜನರೊಂದಿಗೇಬದುಕುವವನು ಸಂವಹನಿಸುವವನು. ಆಗ ಹೊರಹೊಮ್ಮುವ ಜನಪದೀಯ ಹಿಗ್ಗಿನ ಹಾಡೇ; ‘ಮಲ್ಲೀಗಿ ಮಂಟಪದಾಗ, ಗಲ್ಲಗಲ್ಲ ಹಚ್ಚಿಕೂತು, ಮೆಲ್ಲ ದನಿಲೆ ಹಾಡೋಣಂತ, ಯಾರಿಗೂ,ನಾವು ಯಾರಿಗೂ ಹೇಳೋಣು ಬ್ಯಾಡ.’. ಜನಸಾಮಾನ್ಯರ ಹಾಡಾಗುವುದು ಹೀಗೆ. ‘ಏಳು ಚಿನ್ನ ಬೆಳಗಾಯ್ತು ಅಣ್ಣ ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ ತಮವೆಲ್ಲ ಸೋರಿ, ಮಿಗಿಲಹುದು ಬಾನಬಣ್ಣ….’ ಎಂದು ಮೈದಡವಿ ಎಚ್ಚರಿಸುವ ಕವಿ ಸ್ವತ: ಒಂದು ಕಡೆ ಹೀಗೆ ಹೇಳುತ್ತಾರೆ, “ಈ ಬೇಂದ್ರೆ ಇನ್ನೂ ಬದುಕಿದ್ದಾನೆ. ಏಕೆ ಬದುಕಿದ್ದಾನೆ  ಅಂದ್ರೇ, ಹಿಂದಿನವರೆಲ್ಲ ಏನು ಹೇಳಿದ್ದಾರೆ ಅದನ್ನ ಹೇಳೋದಕ್ಕೆ ಬದುಕಿದ್ದಾನೆ…” ….. ಇಂತಹ ಸಶಕ್ತವಾದ ಸ್ಕ್ರಿಪ್ಟ್, ನಾಡಿನ ಧೀಮಂತ ಕವಿವರ‍್ಯರ ಬದುಕನ್ನು ಅವರದ್ದೆ ಕವಿತೆಗಳ ಮೂಲಕ ಎಳೆಎಳೆಯಾಗಿ ತೆರೆದಿಡುವಲ್ಲಿ ಮುಖ್ಯ ಭೂಮಿಕೆ ನಿರ‍್ವಹಿಸುತ್ತದೆ. ಲೇಖಕದ್ವಯರಾದ ಡಾ.ವರದರಾಜಚಂದ್ರಗಿರಿ ಮತ್ತು ಸಾ.ದಯಾರಿಗೆ ವಂದನೆಗಳು, ಅಭಿನಂದನೆಗಳು. …… ಕವಿವರ‍್ಯ ದ.ರಾ.ಬೇಂದ್ರೆಯವರುಬದುಕಿದ್ದರೆ ಅವರಿಗೀಗ ೧೨೫. ಹೌದು, ಕವಿಗೆ ಸಾವಿಲ್ಲ. ಆತ ತನ್ನ ಕವಿತೆಗಳ ಮೂಲಕ ಕಾವ್ಯಪ್ರಿಯರ ಅಕ್ಕರಾಸ್ಥೆಯಲಿ ಮತ್ತೆಮತ್ತೆ ಉಸಿರಾಡುತ್ತಲೇ ಇರುತ್ತಾನೆ. ಈ ಅಂಬೋಣವನ್ನು ಅಕ್ಷರಶ:  ಸಾಕ್ಷಾತ್ಕಾರಗೊಳಿಸಿ ಮುದ ನೀಡಿದ ನಾದಮಯ ಸಂಜೆಯಾಗಿತ್ತು…. ಅಂಬಿಕಾತನಯದತ್ತ ಕೇವಲ ರೂಪಕವಲ್ಲ, ಬದುಕಿನುದ್ದಕೂ ಕವಿ ಪ್ರತಿಪಾದಿಸುವ, ಅನುಭಾವ ಜೀವನದರ‍್ಶನವಾಗಿದೆ. ನೆರೆದ ಸುಮಾರು ೨೫೦ ಮಂದಿ ನವಿಮುಂಬೈ ಕನ್ನಡಸಂಘದ ಬಂಧುಗಳಲ್ಲಿ ಹೆಚ್ಚಿನವರಿಗೆ ಈ ರಂಗ ರೂಪಕದ ಪರಿಕಲ್ಪನೆಯೇ ಹೊಸತು. ಆದರೆ ಆ ಒಂದು ತಾಸು ಸಭಾಂಗಣದಲ್ಲಿ ಪಿನ್ಡ್ರಾಪ್ಸೈಲೆನ್ಸ್. ಕೊನೆಯಲ್ಲಿ ಹೆಚ್ಚಿನವರ ನಿಂತು ಕರತಾಡನ ಮಾಡುವುದನ್ನು ವೀಕ್ಷಿಸುವ ಆ ಕ್ಷಣದ ಆನಂದ ವರ‍್ಣನಾತೀತ… ಇಷ್ಟೆಲ್ಲ ಸೋಜಿಗ ಸಾಧ್ಯವಾದದ್ದು ಕವಿಶ್ರೇಷ್ಠ ಅಂಬಿಕಾತನಯದತ್ತರಕಾವ್ಯ ಭಾವವಿಲಾಸದ ಸಂಭ್ರಮದಿಂದಲೇ ಅಲ್ಲವೆ. ಗೋಪಾಲತ್ರಾಸಿ ..

‘ಅಂಬಿಕಾತನಯದತ್ತ’ಮುಂಬೈಯಲ್ಲೊಂದುಅಪರೂಪದರಂಗರೂಪಕ. Read Post »

ಇತರೆ

ಸಿಲ್ಕ್ ಸ್ಮಿತಾ ಜನ್ಮದಿನಕ್ಕೆ ಸಂಗಾತಿ ಶುಭಾಶಯ ಹಾಗೂ ಚಿರ ನೆನಪು

ಭಾರತೀಯ ಸಿನಿಮಾ ರಂಗದ ಅಪ್ರತಿಮ ಪ್ರತಿಭಾವಂತ ನಟಿಯಲ್ಲೊಬ್ಬರಾದ
ಸಿಲ್ಕ್ ಸ್ಮಿತಾ ಬದುಕಿದ್ದಿದ್ದರೆ ಇವತ್ತಿಗೆ ಅರವತ್ತೊಂದು ವರ್ಷಗಳಾಗುತ್ತಿದ್ದವು.

ತೆರೆಯ ಮೇಲೆ ಪುರುಷ ಪ್ರಧಾನ ವ್ಯವಸ್ಥೆಯ ಉಗ್ರ ಸಮರ್ಥಕ ಸ್ತ್ರೀ ಪಾತ್ರಗಳ ಕೋಪ, ದ್ವೇಷವನ್ನು ಸಹಿಸಿಕೊಂಡು ಅವಮಾನದಿಂದ ಏಕಾಂಗಿಯಾಗಿ ಮರೆಯಾಗುತ್ತಿದ್ದ ಸ್ಮಿತ ನಿಜ ಜೀವನದಲ್ಲೂ ಅದೇ ರೀತಿಯ ಏಕಾಂಗಿತನಕ್ಕೆ ಬಲಿಯಾದವರು.

ಈ ಅಪ್ರತಿಮ ಪ್ರತಿಭಾವಂತೆ, ಸುಂದರಿ, ಹೃದಯವಂತ ಕಲಾವಿದೆಯನ್ನು ಭಾರತದ ಚಿತ್ರರಂಗ stereotypical characters ಗಳಲ್ಲೆ ಕಳೆದು ಹಾಕಿತು. ಒಂಟಿಯಾಗಿಸಿತು.

ಬೇರೆ ಜನಪ್ರಿಯ ನಟಿಯರಾಗಿದ್ದರೆ ಅರವತ್ತು ತುಂಬಿದ ಕಾರಣಕ್ಕೆ ಶುಭಾಶಯಗಳ ಹೊಳೆಯೆ ಹರಿದಿರುತ್ತಿತ್ತು.
ಸಿಲ್ಕ್ ಸ್ಮಿತಾ ಅವರಿಗೆ ಶುಭಾಶಯಗಳನ್ನು ಹೇಳುವುದಕ್ಕೂ ಹಿಂದು ಮುಂದು ನೋಡುವ ಮಡಿವಂತ ಸಮಾಜದಲ್ಲಿ ಇವತ್ತಿಗೂ ನಾವಿದ್ದೇವೆ.

ಆದರೆ ಆಕೆ ಇವೆಲ್ಲವನ್ನು ಮೀರಿ ಹೋಗಿ ಅಮರರಾಗಿದ್ದಾರೆ.


ಎಲ್.ಎಚ್.ಲಕ್ಷ್ಮಿನಾರಾಯಣ

ಸಿಲ್ಕ್ ಸ್ಮಿತಾ ಜನ್ಮದಿನಕ್ಕೆ ಸಂಗಾತಿ ಶುಭಾಶಯ ಹಾಗೂ ಚಿರ ನೆನಪು Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-45 ಡಾ. ನರಹರಿಯು ಗೋಪಾಲನನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಅಲ್ಲಿಂದ ಹೊರಟ ಸುಮಿತ್ರಮ್ಮನ ತಲೆಯಲ್ಲಿ ತಮ್ಮ ಮನೆಯ ದಾರಿಯುದ್ದಕ್ಕೂ ನರಹರಿಯ ಮಾತುಗಳೇ ತಿರುಗುತ್ತಿದ್ದವು. ಯಾವುದನ್ನು ನಂಬಬೇಕು? ಯಾರನ್ನು ನಂಬಬೇಕು? ಈ ನರಹರಿ ಹೇಳುವ ಮಾತಿನಲ್ಲೂ ಸತ್ಯವಿದೆ ಎಂದುಕೊಂಡರೆ ಗುರೂಜಿಯವರ ವೇದಾಂತವು ಬೇರೊಂದು ಕಥೆಯನ್ನು ಹೇಳುತ್ತದೆಯಲ್ಲ! ಇವುಗಳಲ್ಲಿ ಯಾವುದು ಸರಿ, ಯಾವುದು ಸತ್ಯ? ಇಂಥ ಹತ್ತು ಹಲವು ನಂಬಿಕೆಗಳು ಹಾಗು ಪೂಜೆ, ಪುನಸ್ಕಾರಗಳ ವಿಚಾರಗಳಲ್ಲಾಗಲೀ ಅಥವಾ ಕುಟುಂಬದ, ಸಾಮಾಜದ ಯಾವುದೇ ವಿಷಯಗಳಲ್ಲಾಗಲೀ ಗಂಡಸರಿಗಿಂತ ಹೆಂಗಸರೇ ಯಾಕೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ? ಇಂಥ ಸಂಗತಿಗಳ ಬಗ್ಗೆ ಗಂಡಸರಲ್ಲಿ ಇರುವಷ್ಟು ಧೈರ್ಯ ಮತ್ತು ಉದಾಸೀನದ ಬುದ್ಧಿಯು ನಾವು ಹೆಂಗಸರಲ್ಲಿ ಯಾಕಿಲ್ಲ…? ಅಥವಾ ಇದ್ದರೂ ಆ ಮನಸ್ಥಿತಿಯನ್ನು ತೋರಿಸಿಕೊಳ್ಳಲು ನಾವೇ ಹೆದರುತ್ತಿದ್ದೇವೋ ಹೇಗೇ…? ನನ್ನ ಹಿರಿಯರ ಕಾಲದಿಂದಲೂ ನಾನು ನೋಡುತ್ತ ಬಂದಿದ್ದೇನೆ, ತಮ್ಮ ಕುಟುಂಬದ ಯಾವುದೇ ತೊಂದರೆ, ತಾಪತ್ರಯಗಳಿರಲಿ ಅಥವಾ ಜಾತಿ ಮತ ಧರ್ಮಕ್ಕೆ ಸಂಬಂಧಿಸಿದ ಆಚಾರ ವಿಚಾರಗಳೇ ಇರಲಿ ಎಲ್ಲದಕ್ಕೂ ನನ್ನಂಥ ಹೆಂಗಸರೇ ಹೆಚ್ಚುಹೆಚ್ಚಾಗಿ ಬಲಿಯಾಗುತ್ತ ಒದ್ದಾಡುತ್ತಾರೆ. ಯಾವುದೇ ಒಂದು ನಂಬಿಕೆ ಅಥವಾ ಮೂಢ ವಿಚಾರಗಳನ್ನೇ ಆಗಲಿ ಯಾರಾದರೂ ನಮ್ಮ ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಮುಟ್ಟುವಂತೆ ವಿವರಿಸುತ್ತ ಹೋದರೆಂದರೆ ಅವರಾಡುವ ಸಂಗತಿಯ ಸತ್ಯಾಸತ್ಯತೆಯನ್ನು ಚೂರೂ ತರ್ಕಿಸಲು, ಸ್ವಂತ ಬುದ್ಧಿಯಿಂದ ನಿರ್ಧರಿಸಲು ಹೋಗದೆ ಅಂಥವರನ್ನು ನಾವು ಕಣ್ಣುಮುಚ್ಚಿ ನಂಬುತ್ತ ಅವರ ಬಲೆಗೆ ಬೀಳುತ್ತೇವೆ ಯಾಕೆ? ಅಂದರೆ ನನ್ನಂಥವರಿಗೆ ಸ್ವತಂತ್ರವಾಗಿ ಯೋಚಿಸುವ, ನಿರ್ಧರಿಸುವ ಶಕ್ತಿಯೇ ಇಲ್ಲವೆಂದಾ ಈ ಜನರ ಯೋಚನೆ…?- ಎಂದೆಲ್ಲ ಅಶಾಂತಿಯಿಂದ ಚಿಂತಿಸುತ್ತ ನಡೆಯುತ್ತಿದ್ದ ಸುಮಿತ್ರಮ್ಮನ ಒಳಮನಸ್ಸಿನಲ್ಲಿ ಕೊನೆಗೆ ನರಹರಿಯ ವಿಚಾರಗಳೇ ಸ್ವಲ್ಪ ಮಟ್ಟಿಗೆ ಗೆಲುವು ಸಾಧಿಸಿದಂತೆ ತೋರುತ್ತಿತ್ತು.    ಹೌದು, ಹೌದು. ನರಹರಿ ನನಗಿಂತ ಕಿರಿಯ ವಯಸ್ಸಿನವನು ಎನ್ನುವುದೇನೋ ಸರಿ. ಆದರೆ ಅವನು ಹೇಳಿದ್ದರಲ್ಲಿ ಬಹಳ ಅರ್ಥವೂ ಇದೆ ಎಂದೆನ್ನಿಸುತ್ತದೆ. ಅದನ್ನೆಲ್ಲ ತಾಳ್ಮೆಯಿಂದ ವಿಚಾರ ಮಾಡುವಾಗ ಗೊಂದಲ ಕಳೆದು ಮನಸ್ಸು ಹಗುರವಾಗುತ್ತದೆ. ಹಾಗಾದರೆ ಆ ನಾಗರಹಾವಿನ ವಿಷಯದಲ್ಲಿ ತಾವು ಈವರೆಗೆ ಅಂದುಕೊಂಡಿದ್ದೆಲ್ಲ ಬರೇ ಭ್ರಮೆಯಾ…? ತಮ್ಮ ಮುತ್ತಜ್ಜನ ಕಾಲದಿಂದಲೂ ಅವರೆಲ್ಲ ನಂಬಿಕೊಂಡು ಬಂದಿದ್ದು, ‘ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ನಾಗರಹಾವು ಮಾತ್ರವೇ!’ ಎಂದಲ್ಲವಾ! ಹಾಗಾದರೆ ನನ್ನ ಮನೆಯೊಳಗೆ ಬಂದ ಆ ಹಾವು ನರಹರಿಯ ಪ್ರಕಾರ ಕೇವಲ ಒಂದು ಸರೀಸೃಪವೆಂದಾದರೆ ನಮ್ಮ ಹಿರಿಯರು ನಂಬಿ, ಪೂಜಿಸಿಕೊಂಡು ಬಂದಂಥ ಆ ನಾಗನೆಂಬ ಶಕ್ತಿ ಯಾವುದು…? ಎಂದು ಆಳವಾಗಿ ಮತ್ತು ಧೈರ್ಯವಾಗಿ ಯೋಚಿಸಿದರು. ಆದರೆ ತಟ್ಟನೆ ಅವರಿಗೆ ಉತ್ತರ ಸಿಗದಿದ್ದಾಗ ಮತ್ತೆ ಪೂರ್ವಾಗ್ರಹಿತ ಗೊಂದಲಕ್ಕೇ ಬಿದ್ದರು. ಅದೇ ತಳಮಳದಿಂದ ಮನೆಗೆ ಬಂದು ಬಾಗಿಲು ತೆಗೆದು ಇನ್ನೇನು ಒಳಗಯಿಡಬೇಕು ಎಂಬಷ್ಟರಲ್ಲಿ ಮತ್ತೊಂದು ಆಘಾತ ಅವರನ್ನಪ್ಪಳಿಸಿತು!   ಈ ಹಿಂದೆ ಎರಡು ಬಾರಿ ಮನೆಯೊಳಗೆ ಬಂದು ಸುಮಿತ್ರಮ್ಮನನ್ನು ನಖಶಿಕಾಂತ ಬೆದರಿಸಿ ಹೋಗಿದ್ದ ಅದೇ ಸರ್ಪವು ಇವತ್ತು ಅವರ ಮನೆಯೊಳಗೆ, ಮುಖ್ಯ ದ್ವಾರದ ಗೋಡೆಯ ಮೂಲೆಯಲ್ಲಿ ಮೈಯೊಡ್ಡಿ ಮಲಗಿತ್ತು. ಆದರೆ ಸುಮಿತ್ರಮ್ಮನ ಆಕಸ್ಮಿಕ ಪ್ರವೇಶದಿಂದ ಬೆಚ್ಚಿಬಿದ್ದು ಎದ್ದ ಹಾವು ಇಂದು ಕೂಡಾ ತನ್ನ ಅತೀ ಸಮೀಪದಲ್ಲಿ ಅವರನ್ನು ಕಂಡದ್ದು ದಿಕ್ಕು ತೋಚದೆ ಭೀಕರವಾಗಿ ಬುಸುಗುಟ್ಟುತ್ತ ಹೆಡೆಯೆತ್ತಿ ನಿಂತುಬಿಟ್ಟಿತು. ಹಾವನ್ನು ಕಂಡ ಸುಮಿತ್ರಮ್ಮನಿಗೆ ಕಣ್ಣು ಕತ್ತಲಿಟ್ಟಿತು. ಜೋರಾಗಿ ಚೀರಿ ಅಂಗಳಕ್ಕೆ ಜಿಗಿದರು. ಅದನ್ನು ಕಂಡ ಹಾವು ಇನ್ನಷ್ಟು ಕಂಗಾಲಾಗಿ ಸರ್ರನೇ ಹೆಡೆಯನ್ನು ಮಡಚಿ ಉಸಿರುಗಟ್ಟುವಂತಿದ್ದ ತನ್ನ ಉಬ್ಬಿದ ಹೊಟ್ಟೆಯನ್ನು ಕಷ್ಟಪಟ್ಟು ಎಳೆದುಕೊಂಡು ಸರಸರನೇ ಹೊರಗೆ ಹರಿದು ಕಣ್ಮರೆಯಾಯಿತು. ಹಾವು ಹೊರಟು ಹೋದುದನ್ನು ಕಂಡ ಸುಮಿತ್ರಮ್ಮ ತೆಂಗಿನ ಕಟ್ಟೆಯ ಮೇಲೆ ಕುಸಿದು ಕುಳಿತು ಅಳತೊಡಗಿದರು. ಸ್ವಲ್ಪಹೊತ್ತಲ್ಲಿ ಸಮಾಧಾನಗೊಂಡವರಿಗೆ ಆ ಹಾವಿನ ಹೊಟ್ಟೆಯು ಉಬ್ಬಿದ್ದುದು ಕಣ್ಣ ಮುಂದೆ ಸುಳಿಯಿತು. ತಟ್ಟನೆ ಏನೋ ಅನುಮಾನ ಬಂದು ಗಡಿಬಿಡಿಯಿಂದೆದ್ದು ಒಳಗೆ ಧಾವಿಸಿದರು. ಆದರೆ ಅಲ್ಲಿನ ದೃಶ್ಯವನ್ನು ಕಂಡು ಕಂಗಾಲಾದರು!    ‘ವಯಸ್ಸಾದ ಅಪ್ಪ ಅಮ್ಮನಿಂದ ತಾನೂ, ತಮ್ಮನೂ ಸಂಸಾರ, ದುಡಿಮೆ ಅಂತ ಯಾವಾಗಲೂ ದೂರವೇ ಇರುತ್ತೇವೆ. ಆದ್ದರಿಂದ ಅವರಿಗೆ ನಮ್ಮ ನೆನಪು ಬಂದಾಗಲೆಲ್ಲ ಈ ಬೆಕ್ಕಿನ ಮೂಲಕವಾದರೂ ಸ್ವಲ್ಪ ನೆಮ್ಮದಿ ಕಾಣಲಿ!’ ಎಂದುಕೊಂಡು, ಮುಂಬೈಯಲ್ಲಿದ್ದ ಸುಮಿತ್ರಮ್ಮನ ಮಗಳು ಹೊರ ದೇಶದ ತಳಿಯೊಂದರ ಮರಿಯನ್ನು ಹದಿನೈದು ಸಾವಿರ ರೂಪಾಯಿ ಕೊಟ್ಟು ತಂದು ಹೆತ್ತವರಿಗೆ ಪ್ರೀತಿಯಿಂದ ಉಡುಗೊರೆ ನೀಡಿದ್ದಳು. ಸುಮಿತ್ರಮ್ಮನೂ ಅದನ್ನು ಬಹಳ ಅಕ್ಕರೆಯಿಂದ ಸಾಕಿ ಬೆಳೆಸಿದ್ದರು. ಅಂಥ ಬೆಕ್ಕು ಇವತ್ತು ಅವರ ಕಣ್ಣಮುಂದೆಯೇ ಮಲಮೂತ್ರ ವಿಸರ್ಜನೆ ಮಾಡಿಕೊಂಡು ಸತ್ತುಬಿದ್ದಿತ್ತು! ಅದಕ್ಕೆ ಹಾವು ಕಚ್ಚಿರುವುದು ಖಚಿತವಾಗಿ ದುಃಖದಿಂದ ಅವರ ಕರುಳು ಹಿಂಡಿದಂತಾಗಿ ಅದನ್ನು ಪ್ರೀತಿಯಿಂದ ಎತ್ತಿಕೊಳ್ಳಲು ಮನಸ್ಸು ತುಡಿಯಿತು. ಆದರೆ ಹಾವು ಕಚ್ಚಿದ್ದನ್ನು ನೆನೆದವರಿಗೆ ಅದನ್ನು ಮುಟ್ಟಲೇ ಭಯವಾಯಿತು. ರಪ್ಪನೆ ಬೆಕ್ಕಿನ ಕಳೇಬರದ ಪಕ್ಕ ಕುಸಿದು ಕುಳಿತು, ‘ಅಯ್ಯಯ್ಯೋ ದೇವರೇ…!’ ಎಂದು ಗೋಳಿಟ್ಟರು. ಅಷ್ಟರಲ್ಲಿ ಬೆಕ್ಕಿನ ಮರಿಗಳ ನೆನಪಾಯಿತು. ಅಳುತ್ತಲೇ ಅವುಗಳ ಕೋಣೆಗೆ ಓಡಿದರು. ಅಲ್ಲಿ ಎರಡು ದಿನಗಳ ಹಿಂದಷ್ಟೇ ಕಣ್ಣು ಬಿಟ್ಟಿದ್ದ ಮೂರು ಮರಿಗಳಲ್ಲಿ ಎರಡು ಮರಿಗಳು ಕಾಣೆಯಾಗಿದ್ದವು! ಒಂದು ಮರಿ ಮಾತ್ರ ಯಾವುದರ ಪರಿವೆಯೂ ಇಲ್ಲದೆ ಗಾಢ ನಿದ್ದೆಯಲ್ಲಿತ್ತು. ಅದನ್ನು ಕಂಡು ಮತ್ತೊಮ್ಮೆ ರೋಧಿಸಿದರು. ಮರುಕ್ಷಣ ಅವರಿಗೆ ಆ ಹಾವನ್ನು ಬೆನ್ನಟ್ಟಿ ಹೋಗಿ ಹಿಡಿದು ಚಚ್ಚಿ ಕೊಲ್ಲುವಷ್ಟು ಕೋಪ ಉಕ್ಕಿತು. ಆದರೆ ಅದು ಸಾಧ್ಯವಿರಲಿಲ್ಲವಾದ್ದರಿಂದ, ‘ಆ ಹಾವಿನ ಸಂತಾನವೂ ನಿಸ್ಸಂತಾನವಾಗಿ ಹೋಗಲಿ…!’ ಎಂದು ಶಪಿಸಿದರು. ಅಷ್ಟರಲ್ಲಿ ಅವರಿಗೊಂದು ಸಂಗತಿ ಹೊಳೆಯಿತು. ಅಂದರೆ, ಇಷ್ಟು ದಿನಗಳಿಂದ ಆ ಹಾವು ನನ್ನ ಬೆಕ್ಕಿನ ಮರಿಗಳನ್ನು ತಿನ್ನುವುದಕ್ಕಾಗಿಯೇ ಹಠ ಹಿಡಿದು ಒಳಗೆ ಬರುತ್ತಿದ್ದುದಾ…? ಎಂದು ಯೋಚಿಸಿದವರಿಗೆ ಒಮ್ಮೆಲೇ ಆಘಾತವಾಯಿತು! ಅಯ್ಯೋ, ಪರಮಾತ್ಮಾ…! ಇಂಥದ್ದೊಂದು ಹಾಳು ಸರೀಸೃಪವನ್ನೂ ತಾನು ದೇವರು ದಿಂಡರು ಅಂತ ಅಂದುಕೊಂಡಿದ್ದಲ್ಲದೇ ಅದನ್ನೇ ಊರಿಡೀ ಜಾಗಟೆ ಬಾರಿಸಿಕೊಂಡು ತಿರುಗಾಡಿದೆನಲ್ಲಾ…? ಎಂದೆನ್ನಿಸಿ ನಾಚಿಕೆ, ಅವಮಾನದಿಂದ ಹಿಡಿಯಾದರು. ಆದರೆ ಮರುಕ್ಷಣ, ‘ಛೇ, ಛೇ! ತಪ್ಪು ತಪ್ಪು! ಅಷ್ಟು ಬೇಗ ಯಾವ ನಿರ್ಧಾರಕ್ಕೂ ಬರಬೇಡ ಸುಮಿತ್ರಾ!’ ಎಂದು ಅವರೊಳಗೆ ಯಾರೋ ಜೋರಾಗಿ ಗದರಿಸಿದಂತಾಯಿತು. ಹಾಗಾಗಿ ಮರಳಿ ಭಯವೋ, ಪಶ್ಚಾತ್ತಾಪವೋ ತಿಳಿಯದೆ ನೊಂದುಕೊಂಡರು. ಬಳಿಕ ಮತ್ತೆ, ಯಾಕೆ, ಯಾಕೆ ಅಂದುಕೊಳ್ಳಬಾರದು? ಆ ಹಾವು ನಿಜಕ್ಕೂ ದೇವರ ಹಾವೇ ಆಗಿದ್ದಿದ್ದರೆ ತಾನು ತನ್ನ ಮಗುವಿಂತೆ ಸಾಕಿ ಬೆಳೆಸಿದ ಬೆಕ್ಕನ್ನು ಕಚ್ಚಿ ಸಾಯಿಸಿ ಅದರ ಮರಿಗಳನ್ನೂ ಕೊಂದು ತಿಂದು ಹೋಗುತ್ತಿತ್ತಾ…? ಎಂದು ಕೋಪದಿಂದ ಅವುಡುಗಚ್ಚಿದರು.    ಮತ್ತೆ ಯೋಚನೆ ಬಂತು. ಅಯ್ಯೋ ಭಗವಂತಾ…! ನಮ್ಮ ಹಿರಿಯರು ಅನಾದಿಕಾಲದಿಂದಲೂ ನಾಗದೇವರು ಎಂದು ಪೂಜಿಸುತ್ತ ಬಂದಿರುವ ಹಾವೊಂದು ಬೆಕ್ಕಿನ ಮರಿಗಳನ್ನೂ ತಿನ್ನುತ್ತದಾ…!? ಥೂ, ಥೂ, ಏನಿದು ಅಸಹ್ಯ! ಇಂಥ ಹಾವಿನ ಬಗ್ಗೆಯೂ ತಾನು ಬೇಡದಿದ್ದನ್ನೆಲ್ಲ ಊಹಿಸಿಕೊಂಡು ಅದೇ ಸಂಶಯವನ್ನು ನಿವಾರಿಸಿಕೊಳ್ಳಲು ಆ ಕಳ್ಳ ಗುರೂಜಿಯಲ್ಲಿಗೂ ಹೋಗಿ ಬಂದೆನಲ್ಲ…! ಆ ಮನುಷ್ಯನಾದರೂ ಏನು ಮಾಡಿದ? ಬಣ್ಣಬಣ್ಣದ ಮಾತಾಡಿ ನಮ್ಮಿಂದ ಲಕ್ಷಗಟ್ಟಲೆ ಸುಲಿದವನು ಈಗ ಮತ್ತೆ ನಾಗಬನ ಜೀರ್ಣೋದ್ಧಾರದ ಹೆಸರಿನಲ್ಲೂ ಊರಿನವರನ್ನೆಲ್ಲ ನುಣ್ಣಗೆ ಬೋಳಿಸಲು ಹೊರಟಿದ್ದಾನೆ ಅವಿವೇಕಿ! ಎಂದು ಗುರೂಜಿಯ ಮೇಲೂ ಕಿಡಿಕಾರಿದರು. ಆದರೆ ಬಳಿಕ, ಥೂ! ತಾನಾದರೂ ಮಾಡಿದ್ದೇನು? ಹಾವು ಮನೆಯೊಳಗೆ ಹೊಕ್ಕಿದ್ದನ್ನು ವಠಾರವಿಡೀ ಟಾಂ! ಟಾಂ! ಮಾಡಿಕೊಂಡು ಬಂದೆನಲ್ಲದೇ ಅದೇ ವಿಚಾರವಾಗಿ ಆ ಬಡಪಾಯಿ ರಾಧಾಳ ಕುಟುಂಬವನ್ನೂ ಅನಾವಶ್ಯಕವಾಗಿ ನೋಯಿಸಿಬಿಟ್ಟೆ. ಪಾಪ ಅವರು ಯಾರಿಗೇನು ಅನ್ಯಾಯ ಮಾಡಿದ್ದರು!’ ಎಂದು  ತೊಳಲಾಡುತ್ತ ಕಣ್ಣೀರಿಟ್ಟರು.     ಆದರೂ ವಯಸ್ಸಾದ ಅವರ ಮನಸ್ಸು ಅಷ್ಟುಬೇಗನೇ ತಮ್ಮ ಪೂರ್ವಿಕರ ನಂಬಿಕೆ ಮತ್ತು ಸಂಪ್ರದಾಯಗಳನ್ನು ನಿರಾಕರಿಸಲು ಒಪ್ಪಲಿಲ್ಲ. ಆದ್ದರಿಂದ ಈ ಸರೀಸೃಪಜೀವಿಯು ನಾಗನಲ್ಲದಿದ್ದರೇನಾಯ್ತು? ನಮ್ಮವರು ತಲೆತಲಾಂತರದಿಂದ ಪೂಜಿಸಿಕೊಂಡು ಬಂದಂಥ ಆ ನಾಗಶಕ್ತಿಯೊಂದನ್ನು ಮನುಷ್ಯ ಮಾತ್ರನಿಂದ, ‘ಇಲ್ಲ!’ ಎನ್ನಲು ಸಾಧ್ಯವಿದೆಯಾ? ಆ ದೈವಶಕ್ತಿಯು ಖಂಡಿತಾ ಇದೆ. ಅಷ್ಟು ತಿಳಿಯದೆ ನಮ್ಮ ಹಿರಿಯರು ಅವನನ್ನು ನಂಬಿ ಪೂಜಿಸಿಕೊಂಡು ಬಂದಿದ್ದಾರಾ…? ಏನೇ ಇರಲಿ. ನಮ್ಮ ಸನಾತನ ಸಂಪ್ರದಾಯವನ್ನು ನಾವು ಎಂದಿಗೂ ಮರೆಯಬಾರದು ಮತ್ತು ಬಿಟ್ಟುಕೊಡಲೂಬಾರದು. ಇನ್ನು ಮುಂದೆ ತಾನು ಆಚರಿಸುವ ಪೂಜೆ ಪುನಸ್ಕಾರಗಳೇನಿದ್ದರೂ ಆ ಅವ್ಯಕ್ತಶಕ್ತಿ ನಾಗದೇವನಿಗೆಂದೇ ಭಾವಿಸಿದರಾಯ್ತು ಎಂದು ಯೋಚಿಸಿ ಸ್ವಲ್ಪ ಸಮಾಧಾನಚಿತ್ತರಾದ ಸುಮಿತ್ರಮ್ಮ ಕೂಡಲೇ ಗಂಡನಿಗೆ ಕರೆ ಮಾಡಿ ಅಳುತ್ತ ವಿಷಯ ತಿಳಿಸಿದರು. (ಮುಂದುವರೆಯುವುದು) ಗುರುರಾಜ್ ಸನಿಲ್

Read Post »

ಇತರೆ

ಸಿರಿವೆನ್ನಲ ಸೀತಾರಾಮ ಶಾಸ್ತ್ರಿ ನೆನಪಿಗೆ.

ಶ್ರೀಸಿರಿವೆನ್ನಲ‌ ಸೀತಾರಾಮಶಾಸ್ತ್ರಿಯವರುತೆಲುಗಿನಖ್ಯಾತಚಲನಚಿತ್ರಗೀತೆರಚನಾಕಾರರು. ಇವರು೩೦-೧೧-೨೦೨೧ರಂದುಮರಣಿಸಿದರು. ಈಸಂತಾಪದಸಂದರ್ಭದಲ್ಲಿಅವರಿಗೆಅವರದೇಗೀತೆಯಅನುವಾದದಮೂಲಕಸಂಗಾತಿ ಪತ್ರಿಕೆಶ್ರದ್ಧಾಂಜಲಿಅರ್ಪಿಸುತ್ತದೆ

ಸಿರಿವೆನ್ನಲ ಸೀತಾರಾಮ ಶಾಸ್ತ್ರಿ ನೆನಪಿಗೆ. Read Post »

You cannot copy content of this page

Scroll to Top