ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ನೆಂಟಸ್ತನದ ಸಂಬಂಧಗಳ ನಡೆ” ವಿಶೇಷ ಲೇಖನ ಸುಮನಾ ರಮಾನಂದ

ಸಂಬಂಧಗಳ ಸಂಗಾತಿ ಸುಮನಾ ರಮಾನಂದ “ನೆಂಟಸ್ತನದ ಸಂಬಂಧಗಳ ನಡೆ” ಇದ್ಯಾವ ಸಂಬಂಧಗಳ ಉಳಿಸುವಿಕೆ ಬಗ್ಗೆ ನಾ ಹೇಳಲು ಹೊರಟಿದ್ದೀನಿ ಇಂದಿನ ಅಂಕಣದಲಿ ಅಂತ ಆಶ್ಚರ್ಯಪಡದಿರಿ.ನಮ್ಮನು ಹೊಗಳಿದಂತೆ ಮಾಡಿ ನಮಗೇ ಗೊತ್ತಾಗದಂತೆ ತೆಗಳುವ,ತೆಗಳಿದರೂ ಅದನೇ ಸರಿಯೆಂದು ಸಮರ್ಥಿಸಿಕೊಳ್ಳುವ ಅದೇ ನಮ್ಮ ಹತ್ತಿರದ ನೆಂಟರ ಬಗ್ಗೆ ಕಣ್ರಿ… ಈಗಿನ ನಮ್ಮ ಕಾಲಮಾನದಲಿ ನಮ್ಮೆಲ್ಲರ ನೆಂಟರ ಜೊತೆಗಿನ ಸಂಬಂಧ ನಿಧಾನವಾಗಿ ಕಳೆಗುಂದುತಾ ಇರೋದು ನಿಮ್ಮೆಲ್ಲರ ಗಮನಕೂ ಬಂದಿರಬಹುದು.ಇದರ ಕಾರಣ  ಏನಿರಬಹುದು ಅಂತ ಒಮ್ಮೆ ವಿಚಾರ ಮಾಡಿದರೆ ತಿಳಿಯುತ್ತದೆ.ಮೊದಲನೆಯ ಕಾರಣ ಪ್ರತಿಯೊಬ್ಬರಿಗೂ ನೆಂಟರ ಜೊತೆ ಕಳೆಯಲು ಸಮಯ ಹೊಂದಾಣಿಕೆಯಾಗದಿರುವುದು.ಯಾರಾದ್ರೂ ನೆಂಟರು ಮನೆಗೆ ಬರ್ತಾರೆಂದರೆ ನಾವು ಮೊದಲು ಯೋಚಿಸುವುದೇ ಅವರಿಗೆ ನಾವು ಸಾಕಷ್ಟು ಸಮಯ ಕೊಡಲಾಗುವುದೇ ಆತಿಥ್ಯ ಮಾಡಲು ಹಾಗೂ ಅವರ ವಸತಿಗೆಲ್ಲ ಸರಿಯಾಗಿ ವ್ಯವಸ್ಥೆ ಮಾಡಲಾದೀತೇ ಎಂದು.ಎಲ್ಲರೂ ಹೀಗಿರುತ್ತಾರೆಂದು ಹೇಳಲಾಗದು.ನೆಂಟರೆಂದರೆ ಇಷ್ಟಪಡುವ ಮಂದಿಯೂ ಸಹ ಹೆಚ್ಚಾಗಿ ಇರುತ್ತಾರೆ. ಇನ್ನೊಂದು ಕಾರಣವೆಂದರೆ ಕೆಲವರಿಗೆ ನಂಟರು ಬರುತ್ತಾರೆಂದರೆ ಇರಿಸುಮುರಿಸು ಉಂಟಾಗುವುದು ಏಕಂದರೆ ಕೆಲವು ನೆಂಟರಿಗೆ ಅಲ್ಲಿಂದಿಲ್ಲಿಗೆ ಚಾಡಿಮಾತು ಹೇಳಿ ಜಗಳ ತಂದು ಹಾಕುವ ಸ್ವಭಾವಿರುತ್ತದೆ,ಆ ಸ್ವಭಾವದವರನ್ನು ದೂರವಿರಿಸುವ ಅಭ್ಯಾಸ ಆತಿಥ್ಯ ನೀಡುವವರಿಗೆ ಇರುತ್ತದೆ ಹಾಗಾಗಿ ಅಂತಹ ನೆಂಟರು ತಮ್ಮ ಮನೆಗೆ ಬರದಂತೆ ಕಾರಣ ಹುಡುಕುತ್ತಾರೆ.ಒಂದುವೇಳೆ ಬಂದರೂ ಮರ್ಯಾದೆಯಿಂದಲೇ ಚೆನ್ನಾಗಿ ಆತಿಥ್ಯ ಮಾಡಿ ಕಳಿಸುತ್ತಾರೆ.  ಇನ್ನು ಹಲವರಿಗೆ ತಮ್ಮ ಆಫೀಸ್ ಹಾಗೂ ಮನೆಯ ಕೆಲಸಗಳ ಮಧ್ಯೆಯೂ ಅವರೆಲ್ಲರ  ಇಷ್ಟಾನುಸಾರವಾಗಿ ನೆಂಟರ ಬೇಕು ಬೇಡಗಳನು ಪೂರೈಸಲಾದೀತೇ ಅನ್ನುವ ಆತಂಕ ಮನಸಲಿ‌ ಕಾಡುತ್ತದೆ.ಪಾಪ ಚೆನ್ನಾಗಿ ಆತಿಥ್ಯ ಮಾಡಿ ಕಳಿಸಿದರೂ ಸಹ ಅದೇ ನೆಂಟರು ಹೊರಗೆ ಬಂದಾಗ ತಮ್ಮ ಬಗ್ಗೆ ಹಾಗೂ ತಮ್ಮ ಆತಿಥ್ಯದ ಬಗ್ಗೆಯೇ ಕೊಂಕು ಅಥವಾ ವ್ಯಂಗ್ಯದ ಮಾರಾಡುತ್ತಾರೆನ್ನುವ ಆತಂಕದಲಿ ದಿನ ದೂಡುತ್ತಾರೆ…ಹಾಗಾಗಿ ನೆಂಟರ ಬರುವಿಕೆ ಇಂದಿನ ದಿನಗಳಲಿ ಬಲು ಅಪರೂಪವಾಗಿದೆ ಅಂತಲೇ ಹೇಳಬಹುದು.ಅವರವರ ದೃಷ್ಟಿಕೋನದಲ್ಲಿ ನೋಡಿದಾಗ  ಇದರಲಿ ಯಾರದೂ ತಪ್ಪಿಲ್ಲವೆಂತಲೂ ಅನಿಸುವುದು.ಆದರೂ ಮನೆಗೆ ನೆಂಟರ ಆಗಮನ ಚೈತನ್ಯದಾಯಕವೂ ಹೌದು ಜೊತೆಗೆ ಹಲವು ವಿಚಾರಗಳ ವಿನಿಮಯವಾಗುವಿಕೆ ಮನಸಿನ ಏಕಾತಾನತೆಗೆ ಒಳ್ಳೆಯ ಮದ್ದು ಆಗುವುದಂತೂ ಸತ್ಯ. ನೆಂಟಸ್ತನವನು ಉಳಿಸುವ ನಡೆಯನು ವಿವರಿಸುತಾ ಹೀಗೂ ಯೋಚಿಸಬಹುದು..ನೆಂಟರು ಒಂದು ಮದುವೆಯ ಸಮಾರಂಭದಲ್ಲೊ ಅಥವಾ ಒಂದು ಹೋಮ- ಹವನದ ಕಾರ್ಯಕ್ರಮದಲ್ಲೋ  ಸೇರಿದಾಗ ಎಲ್ಲರಿಗೂ ತಮ್ಮ ಕುಟುಂಬದ ಈ ಐಕ್ಯತೆಯನು ಕಂಡು ಸಂತಸವಾಗುತ್ತದೆ.ಕುಟುಂಬದ ಹೊಸ ಸದಸ್ಯರನು ಹಳೆಯ ತಲೆಮಾರಿನವರು ತಮ್ಮ‌ ಕಾಲವಿನ್ನು ಮುಗಿಯಿತಪ್ಪಾ ಎನ್ನುತಾ ತುಂಬು ಮನಸಿಂದ ಅವರೆಲ್ಲರ ಪರಿಚಯ ಮಾಡಿಕೊಡುವುದನು ಕಂಡು ಒಮ್ಮೆಗೇ ಮನಸು ಭಾವುಕವಾಗುತ್ತದೆ. ಮುಂದೊಂದಿನದ  ಸಮಾರಂಭದಲಿ ಈ ಹಿರಿಯ ತಲೆಮಾರಿನವರು ಕಣ್ಮರೆಯಾಗದಿದ್ರೆ ಸಾಕು ಅಂತಲೂ ಮನಸು ಹಾರೈಸುತ್ತದೆ. ಜೊತೆಗೆ ನೆಂಟಸ್ತನ ಕುಂಠಿತವಾಗುವಿಕೆಯ ಮತ್ತೊಂದು ಮುಖ್ಯ ಕಾರಣವೆಂದರೆ..ಮೊಬೈಲ್ ಚಟ ಹಾಗೂ ಸಾಮಾಜಿಕ ತಾಣವೆನ್ನಬಹುದು. ಇತ್ತೀಚೆಗಿನ ಮೊಬೈಲಿನ YouTube Shorts ವೀಕ್ಷಣೆಯ ಮಟ್ಟ ಯಾವ ಯಾವ ರೀತಿಯಲಿ ಏರಿದೆಯೆಂದರೆ ಇಂದಿನ ಯುವಜನತೆ,ಹದಿಹರೆಯದ ಮಕ್ಕಳು,ಮಧ್ಯೆ ವಯಸ್ಸಿನ ಹೆಂಗಸರು, ಅರ್ಧ ಶತಕದ ಅಂಚಲಿರುವ ಗಂಡಸರೆನ್ನುವಭೇಧಭಾವವಿಲ್ಲದೆ ಈ ಚಟ ಆವರಿಸಿಕೊಂಡು ಬಿಟ್ಟಿದೆ. ಇದಕ್ಕೆ ದಾಸರಾಗಿರೊದರಿಂದ  ಮನೆಗೆ ಯಾರು ಬಂದರೂ ಅಥವಾ ಯಾವ ಫಂಕ್ಷನ್ ಗೆ ಹೋಗಬೇಕೆಂದರೂ ಇದಕೆ ಅಡ್ಡಿಯಾದೀತೆಂಬ ನೆಪವೊಡ್ಡಿ ಹೋಗದೇ ಇದ್ದುಬಿಡುತ್ತಾರೆ.ಇಂತಹ ಚಟದಿಂದ ಹೊರ ಬಂದರೆ ಮಾತ್ರ ಸಂಬಂಧಗಳ ಉಳಿಯುವಿಕೆ ಸಾಧ್ಯವಾಗುತ್ತದೆ.ಇಲ್ಲದಿದ್ರೆ ತಾವಾಯ್ತು ತಮ್ಮ ಪಾಡಾಯ್ತು ಅನ್ನುವ ಸ್ಥಿತಿಗೆ ಈ Gen Z ಹೋಗುವುದರಲಿ ಹೆಚ್ಚು ಕಾಲ ಉಳಿದಿಲ್ಲ ಅನ್ನಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಸಮಾಜದಲಿ ಒಳ್ಳೆಯ ಮನಸ್ಸಿರುವ ಎಲ್ಲರ ಜೊತೆಗೆ ಅದರಲೂ ತಮ್ಮ ಕುಟುಂಬದ ತೀರ ಹತ್ತಿರದ ನೆಂಟರಿಷ್ಟರ ಜೊತೆಯಲಿ ಬೆರೆತಾಗ ಮಾತ್ರ ಸಾಮರಸ್ಯದಿಂದ ಬಾಳು ಸಾಗುತಾ ನಮ್ಮೆಲ್ಲರ ಬಾಳ್ವೆ ಸುಂದರವೆನಿಸುತ್ತದೆ.ಇಲ್ಲವಾದರೆ ಏಕಾತಾನತೆಯ ಏಕಾಂತ ಕಾಡಿ,ಬೇರೆ ಯಾರ ಬಗ್ಗೆಯೂ ಯೋಚಿಸದಂತಹ ಸ್ವಾರ್ಥದತ್ತ ಮನಸು ಸಾಗುತ್ತದೆ. ನಮ್ಮ ಬದುಕು ಇವೆರಡು ದೃಷ್ಟಿಕೋನದಲಿ ನೋಡಿದಾಗ ಅದು  ಹೇಗಿರಬೇಕು ಅನ್ನುವ ಆಯ್ಕೆ ನಮ್ಮದೇ! ಸುಮನಾ ರಮಾನಂದ, ಕೊಯ್ಮತ್ತೂರು 

“ನೆಂಟಸ್ತನದ ಸಂಬಂಧಗಳ ನಡೆ” ವಿಶೇಷ ಲೇಖನ ಸುಮನಾ ರಮಾನಂದ Read Post »

ಇತರೆ, ಜೀವನ

“ಮಾತನಾಡಬೇಕಾದ ಸಂದರ್ಭದಲ್ಲಿ ಮೌನ ಕಾಯ್ದುಕೊಳ್ಳುವುದು ಕೆಟ್ಟದು” ಡಾ.ಸುಮತಿ ಪಿ.ಅವರ ವಿಶೇಷ ಬರಹ-ಮಾತು-ಮೌನದ ಬಗ್ಗೆ

ಮೌನ ಸಂಗಾತಿ

ಡಾ.ಸುಮತಿ ಪಿ.

“ಮಾತನಾಡಬೇಕಾದ ಸಂದರ್ಭದಲ್ಲಿ

ಮೌನ ಕಾಯ್ದುಕೊಳ್ಳುವುದು ಕೆಟ್ಟದು”
ಏನು ಮಾತನಾಡಿದರೂ ಮೌನವಾಗಿರುವ ವ್ಯಕ್ತಿಗಳನ್ನು ಕಂಡರೆ ಮತ್ತೆ ಮತ್ತೆ ಅವರ ತಂಟೆಗೆ ಬರುವವರೇ ಜಾಸ್ತಿ. ಹಾಗಾಗಿ ಮಾತನಾಡಬೇಕಾದ ಸಂದರ್ಭದಲ್ಲಿ ಮೌನವಾಗಿರದೆ ಮಾತನಾಡಲೇ ಬೇಕಾಗುತ್ತದೆ.

“ಮಾತನಾಡಬೇಕಾದ ಸಂದರ್ಭದಲ್ಲಿ ಮೌನ ಕಾಯ್ದುಕೊಳ್ಳುವುದು ಕೆಟ್ಟದು” ಡಾ.ಸುಮತಿ ಪಿ.ಅವರ ವಿಶೇಷ ಬರಹ-ಮಾತು-ಮೌನದ ಬಗ್ಗೆ Read Post »

ಇತರೆ, ಜೀವನ

ಎಲ್ಲರ ಮನೆಯ ದೋಸೆನೂ………!?ಮಧುನಾಯ್ಕ ಲಂಬಾಣಿ

ಬದುಕಿನ ಸಂಗಾತಿ

ಮಧುನಾಯ್ಕ ಲಂಬಾಣಿ

ಎಲ್ಲರ ಮನೆಯ ದೋಸೆನೂ………!?
ಸಮಸ್ಯೆಗಳು ಕಡಿಮೆ ಇರುವಂತೆ ನಮ್ಮ ಬದುಕನ್ನು ರೂಪಿಸಕೊಳ್ಳಬೇಕಾಗುತ್ತದೆ.ಹಾಗಂತ ತೂತುಗಳೇ ಇಲ್ಲದ ದೋಸೆ ಸಾಧ್ಯವಿಲ್ಲ ಅದು ದೋಸೆ ಅನಿಸುವುದಿಲ್ಲ ಬದುಕು ಕೂಡ ಹಾಗೆನೆ…

ಎಲ್ಲರ ಮನೆಯ ದೋಸೆನೂ………!?ಮಧುನಾಯ್ಕ ಲಂಬಾಣಿ Read Post »

ಇತರೆ, ಜೀವನ

“ವೃದ್ಧಾಪ್ಯ ನಮಗೂ ಬರುತ್ತೆ..ಕಾಯಬೇಕು ಅಷ್ಟೇ.‌ ” ಹಿರಿಯ ಜೀವಿಗಳಕುರಿತಾದಒಂದು ಬರಹ ಶಿವಲೀಲಾ ಶಂಕರ್‌ ಅವರಿಂದ

“ವೃದ್ಧಾಪ್ಯ ನಮಗೂ ಬರುತ್ತೆ..ಕಾಯಬೇಕು ಅಷ್ಟೇ.‌ ” ಹಿರಿಯ ಜೀವಿಗಳಕುರಿತಾದಒಂದು ಬರಹ ಶಿವಲೀಲಾ ಶಂಕರ್‌ ಅವರಿಂದ

ವಯೋಸಹಜ ಕಾಯಿಲೆಗಳಿಗೆ ತುತ್ತಾದ ವೃದ್ದರು ನರಳುವ  ರೀತಿ ನೋಡಿದಾಗ ಕರುಳು ಕಿತ್ತು ಬರುತ್ತದೆ.ಪಾಪ! ಅವರಿಗೆ ಒಂದು ತುತ್ತು ಹೆಚ್ಚು,ಒಂದ ತುತ್ತು ಕಡಿಮೆ ಒತ್ತಾಯದ ಊಟ ಅವರಿಗೆ ಸಲ್ಲ.ನಿದ್ರೆಯ ಕೊರತೆ.

“ವೃದ್ಧಾಪ್ಯ ನಮಗೂ ಬರುತ್ತೆ..ಕಾಯಬೇಕು ಅಷ್ಟೇ.‌ ” ಹಿರಿಯ ಜೀವಿಗಳಕುರಿತಾದಒಂದು ಬರಹ ಶಿವಲೀಲಾ ಶಂಕರ್‌ ಅವರಿಂದ Read Post »

ಇತರೆ, ಜೀವನ

“ಸಾವು ಎಲ್ಲದಕ್ಕು ಪರಿಹಾರವಲ್ಲ” ವಿಶ್ವ ಆತ್ಮಹತ್ಯೆತಡೆದಿನದ ವಿಶೇಷ- ಗಾಯತ್ರಿ ಸುಂಕದ ಅವರಿಂದ

“ಸಾವು ಎಲ್ಲದಕ್ಕು ಪರಿಹಾರವಲ್ಲ” ವಿಶ್ವ ಆತ್ಮಹತ್ಯೆತಡೆದಿನದ ವಿಶೇಷ- ಗಾಯತ್ರಿ ಸುಂಕದ ಅವರಿಂದ

“ಸಾವು ಎಲ್ಲದಕ್ಕು ಪರಿಹಾರವಲ್ಲ” ವಿಶ್ವ ಆತ್ಮಹತ್ಯೆತಡೆದಿನದ ವಿಶೇಷ- ಗಾಯತ್ರಿ ಸುಂಕದ ಅವರಿಂದ Read Post »

ಇತರೆ, ಜೀವನ

“ಗೋಳಿನ ದನಿಗೆ ಕಿವಿಗಳಿಲ್ಲ…”ಲೇಖನ ಜಯಲಕ್ಷ್ಮಿ.ಕೆ ಅವರಿಂದ

ನಮ್ಮ ಅತೃಪ್ತಿ, ನಮ್ಮ ಕೊರಗು,ಇವುಗಳ ಕಥೆ ಕೇಳಲು ಯಾರೂ ಉತ್ಸುಕರಾಗಿ ಇರುವುದಿಲ್ಲ. ಹೇಳುವವರಿಗಾಗಲೀ, ಕೇಳುವವರಿಗಾಗಲೀ, ಇದರಿಂದ ಆನಂದವೂ ಇಲ್ಲ.
ಸ್ಪೂರ್ತಿ ಸಂಗಾತಿ

ಜಯಲಕ್ಷ್ಮಿ.ಕೆ

“ಗೋಳಿನ ದನಿಗೆ ಕಿವಿಗಳಿಲ್ಲ…”

“ಗೋಳಿನ ದನಿಗೆ ಕಿವಿಗಳಿಲ್ಲ…”ಲೇಖನ ಜಯಲಕ್ಷ್ಮಿ.ಕೆ ಅವರಿಂದ Read Post »

ಇತರೆ, ಜೀವನ

“ಮೌನ ಎಂಬ ಬಂಗಾರ” ವಿಶೇಷ ಬರಹ ವೀಣಾ ಹೇಮಂತ್‌ ಗೌಡ ಪಾಟೀಲ್

ಮೌನ ಸಂಗಾತಿ

ವೀಣಾ ಹೇಮಂತ್‌ ಗೌಡ ಪಾಟೀಲ್

“ಮೌನ ಎಂಬ ಬಂಗಾರ”
ಮೌನವನ್ನು ಭರಿಸುವುದು  ಶಕ್ತಿಯ ಸಂಕೇತ ̤ಮೌನವು ಹಲವಾರು ಸಮಸ್ಯೆಗಳಿಗೆ ಒಂದೇ ರೀತಿಯ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಉತ್ತರವಾಗ ಬಲ್ಲದು. ಅರಿತವರು ಮೌನದ ಮೊರೆ ಹೋಗುತ್ತಾರೆ.

 

“ಮೌನ ಎಂಬ ಬಂಗಾರ” ವಿಶೇಷ ಬರಹ ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ, ಜೀವನ

ರಾಷ್ಟ್ರೀಯ ಪತ್ರ ಬರಹ ದಿನʼದ ವಿಶೇಷ ಲೇಖನ ಗಾಯತ್ರಿ ಸುಂಕದ ಅವರಿಂದ

ಪತ್ರ ಸಂಗಾತಿ

ಗಾಯತ್ರಿ ಸುಂಕದ ಬಾದಾಮಿ

ʼಪತ್ರ ಬರಹ ದಿನʼ

ವಿಶೇಷ ಲೇಖನ
ನಮ್ಮ ಹಾಸ್ಟೆಲ್ ಫ್ರೆಂಡ್ಸ್ ಪತ್ರ ಬರೆಯಬೇಕಾದರೆ ಬೇಗ ದುಡ್ಡು ಕಳಿಸಿ ಕೊಡದೆ ಇದ್ದರೆ ವಾಪಸ್ ಊರಿಗೆ ಬರುತ್ತೇವೆ ಎಂದು ವಾರ್ನಿಂಗ್ ಪತ್ರ ಬರೆಯುತ್ತಿದ್ದರು. ಅದು ಮುಟ್ಟಿದ ಒಂದೆರಡು ದಿನಗಳಲ್ಲಿ ದುಡ್ಡು ಅಕೌಂಟಿಗೆ ಬಂದು ಬೀಳುತ್ತಿತ್ತು.
ಆಗ ನಾವ್ಯಾರು ಅರ್ಧ ಪತ್ರ ಬರೆ

ರಾಷ್ಟ್ರೀಯ ಪತ್ರ ಬರಹ ದಿನʼದ ವಿಶೇಷ ಲೇಖನ ಗಾಯತ್ರಿ ಸುಂಕದ ಅವರಿಂದ Read Post »

ಇತರೆ, ಜೀವನ

“ಮದುವೆ ಎಂಬುದು ಮಧ್ಯಂತರ ತಿರುವಲ್ಲ; ಜೀವನದ ನಿರಂತರ ಪ್ರಯಾಣ”ಭೀಮಾ ಕುರ್ಲಗೇರಿ

“ಮದುವೆ ಎಂಬುದು ಮಧ್ಯಂತರ ತಿರುವಲ್ಲ; ಜೀವನದ ನಿರಂತರ ಪ್ರಯಾಣ”ಭೀಮಾ ಕುರ್ಲಗೇರಿ
ಪ್ರೇಮವೆಂದರೆ ಜವಾಬ್ದಾರಿ, ದುಡಿಮೆ ,ಕಾಳಜಿ ಹೊರತು ಮೋಹ, ತಿರಸ್ಕಾರವಲ್ಲ. ನಾವು ನಮ್ಮ ಹೃದಯದಲ್ಲಿ ಪ್ರೇಮದ ಅನುಭವ ಮಾಡಿಕೊಳ್ಳಬೇಕಾದರೆ ಮೊದಲು ನಾವು ಇತರರನ್ನು ಪ್ರೀತಿಸಲು ಆರಂಭಿಸಬೇಕು

“ಮದುವೆ ಎಂಬುದು ಮಧ್ಯಂತರ ತಿರುವಲ್ಲ; ಜೀವನದ ನಿರಂತರ ಪ್ರಯಾಣ”ಭೀಮಾ ಕುರ್ಲಗೇರಿ Read Post »

ಇತರೆ, ಜೀವನ, ನಿಮ್ಮೊಂದಿಗೆ

ʼತಿರುವುಗಳಲ್ಲಿ ಅರಿವಿರಲಿʼ ಲೇಖನ ಶುಭಲಕ್ಷ್ಮಿ ಆರ್ ನಾಯಕ

ಜೀವನ ಸಂಗಾತಿ

ಶುಭಲಕ್ಷ್ಮಿ ಆರ್ ನಾಯಕ

ʼತಿರುವುಗಳಲ್ಲಿ ಅರಿವಿರಲಿʼ
ಈಸಬೇಕು ಇದ್ದು ಜಯಿಸಬೇಕು ಎಂಬ ದಾಸೋಕ್ತಿಯಂತೆ ಜಯಿಸಲು ಆತ್ಮವಿಶ್ವಾಸವೇ ತಳಹದಿ. ತಿರುವುಗಳಲ್ಲಿ ಅರಿವಿನಿಂದ ಹೆಜ್ಜೆ ಹಾಕಿದಾಗ ಜೀವನ ಸಾಫಲ್ಯವನ್ನು ಕಾಣುತ್ತದೆ.

ʼತಿರುವುಗಳಲ್ಲಿ ಅರಿವಿರಲಿʼ ಲೇಖನ ಶುಭಲಕ್ಷ್ಮಿ ಆರ್ ನಾಯಕ Read Post »

You cannot copy content of this page

Scroll to Top