ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಗುರ್ ಮೆಹರ್ ಅಂತರಂಗ ಕನ್ನಡ ಮೂಲ: ಶೋಭಾ ಹೀರೆಕೈ ಇಂಗ್ಲೀಷಿಗೆ: ಸಮತಾ ಆರ್ ಗುರ್ ಮೆಹರ್ ಅಂತರಂಗ ಅವರಿವರ ಬಂದೂಕ ತುದಿಯಲ್ಲಿಹೂವಿನ ಮೊನಚಿತ್ತೇ?ಇಲ್ಲವಲ್ಲಮತ್ತೇಯುದ್ಧವನ್ನು ಯುದ್ಧವಲ್ಲದೆಇನ್ನೇನನ್ನಲಿ? ಯಾವ ಕಣಿವೆ ಬದುಕಿಸುವುದುನಾ ಕಳಕೊಂಡವಾತ್ಸಲ್ಯವನ್ನು ?ಯಾವ ಕುರ್ಚಿಯ ಬಳಿಕೇಳಲಿ ನ್ಯಾಯ? ಬೇಕೇ?ನಮ್ಮ ಬಿಸಿ ರಕ್ತಕೂಕೊಳಚೆಯ ಗಬ್ಬುಕಪ್ಪು -ಕೇಸರಿಗಳ ಜಿದ್ದಾ ಜಿದ್ದು ಬಣ್ಣದ ಮೇಲೂ ರಾಡಿಯಎರಚುತಿರುವವರಾರೋ?ಈಚೆಗಿರುವುದೇ ಅಚೆಆಚೆಗಿರುವುದೇ ಈಚೆಈಚೆ ಅಚೆಗಳಾಚೆಅದೇ ಮಣ್ಣು ,ಅದೇ ನೀರುಅದೇ ಗಂಧ, ಅದೇ ಗಾಳಿರಕ್ತ ಬೇರೆಯೇ ‌ಮತ್ತೆ? ಬೇಕೆ ಯುದ್ಧ?ನನ್ನಂಥ ತಬ್ಬಲಿಗಳ ಕೇಳಿ ಹೇಳು ಅಶೋಕ‘ಕಳಿಂಗ’ ನಿನ್ನ ಕಾಡಿದಂತೆ‘ಕಾರ್ಗಿಲ್ ‘ ನನ್ನ ಕಾಡುತ್ತಯುದ್ಧವನ್ನು ಯುದ್ಧವೆನ್ನದೆ ಇನ್ನೇನನ್ನಲಿ? —– (ಗುರ್ ಮೆಹರ್: ಕಾರ್ಗಿಲ್ ಯುದ್ಧದಲ್ಲಿ ತಂದೆಯನ್ನು ಕಳೆದುಕೊಂಡು ಅನಾಥಳಾದ ಮಗಳು) Quest of Gur Mehr.. Did the tips of theirs and our gunsHave the sharpness of a petal?No..never.. Then what else can I callA war other than a war? Which valley will reviveThe affection that I lostWhich chair shall I approach for just? Do we need the stench of the sewageFight of the black and saffronTo taint our fresh warm blood? Who is throwing slime on even the coloursWhatever is here, it’s also there,Whatever is there it’s also here, Beyond here and thereSoil, water,odour and air, are all same,Then how can the blood be different? Need a war?Ask orphans like me. Tell me AshokaJust like Kalinga haunted youWill the Kargil haunt me.. What else can I call a warOther than a War… ***********************************************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಶಾಪಗ್ರಸ್ಥ ಶಿಲೆ ಕನ್ನಡದ ಮೂಲ : ಸ್ವಾಮಿ ಪೊನ್ನಾಚಿ ಇಂಗ್ಲೀಷ್ಗೆ ಅನುವಾದ : ಮಾಲತಿ ಶಶಿಧರ್ ಶಾಪಗ್ರಸ್ಥ ಶಿಲೆ ಈ ಹೂವು ಪರಿಮಳ ಸ್ಪರ್ಶ ಕನಸು ಬೆಳದಿಂಗಳುಯಾವುದೂ ಬೇಡನನ್ನ ಪಾಡಿಗೆ ನನ್ನ ಬಿಟ್ಟುಬಿಡುಈ ಚಿಗುರು ವಸಂತ ತಲೆದೂಗುವವರೆಗೂತಲೆ ಮರೆಸಿಕೊಳ್ಳುತ್ತೇನೆ ನೀನೇನೋ ಮರೆತಂತೆ ನಾಟಕವಾಡಿದೆನಟನೆ ಬರದ ನಾನೇನು ಮಾಡಲಿನಿನ್ನ ಹೆಜ್ಜೆ ಗುರುತನ್ನು ಎಣಿಸಿಕೊಂಡುಬಂದ ತಪ್ಪಿಗೆನನಗೀಗ ದಿಕ್ಕು ತಪ್ಪಿದೆಹಿಂತಿರುಗುವ ದಾರಿಯನ್ನಾದರೂ ಒಮ್ಮೆ ತೋರು ಒಮ್ಮೆಗೆ ನೀನು ಮರಣದಂಡನೆಯತೀರ್ಪು ನೀಡಬೇಕಿತ್ತುಆಜೀವ ಶಿಕ್ಷೆ ಅನುಭವಿಸುವ ತ್ರಾಣಈಗ ನನ್ನಲ್ಲಿಲ್ಲ ಈ ವಸಂತದಲ್ಲಿ ಪ್ರೇಮಿಗಳು ಪರಸ್ಪರಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದರೆಶಾಪಗ್ರಸ್ಥ ಶಿಲೆಯಂತೆ ಕುಳಿತಿದ್ದೇನೆಎಂದಾದರೊಂದು ದಿನನಿನ್ನ ಪಾದಸ್ಪರ್ಶವಾಗಬಹುದೆಂದು —————– A statue of curse This flower, fragrance, proximity,dream, moonshineI dont need any of theseLeave me aloneLet me abscond till thespring nod its head You pretended like you have forgottenWhat shall i do without knowing the pretenceI have got misdirected for thesake of counting your footprintsShow me the path to come back you could’vegiven the gallows at onceNow I dont have power tosustain the life-sentence In this spring am sitting like astatue of cursewaiting to touch your feetWhen the lovers are makingthe petition of love with each other.. *********************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ನದಿಯೊಳಗಿನ ಹರಿವು ಕನ್ನಡ ಮೂಲ: ಗೀತಾ ಡಿ.ಸಿ. ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಇರುತ್ತದೆನದಿತನ್ನಷ್ಟಕ್ಕೆತಾನೆಂಬಂತೆಸದಾ..ತನ್ನೊಳಗಿನಪಸೆಯಾರದಂತೆಬೆಚ್ಚಗಿನಒರತೆಬತ್ತದಂತೆತನ್ನಪಾತ್ರದರಿವುಹರಿವಿನಜೀವಂತಸೆಲೆಯನುಸಂಯಮದಿಕಾಯ್ದುಕೊಳ್ಳುತ್ತದೆದಿವ್ಯಮೌನದಧ್ಯಾನದಲಿಸದಾ..ಅಂದುಕೊಳ್ಳುತ್ತಾರೆಜನಇಲ್ಲಸಲ್ಲದ್ದನ್ನು..ಬತ್ತಿದಂತಿರುವನದಿಯಕಂಡುಮರುಕಪಡುತ್ತಾರೆ.ಕರುಣೆಯುಕ್ಕಿಸಿಲೊಚಗುಡುತ್ತಾರೆ.ಉಕ್ಕಿಹರಿವಂತೆಸುಖಾಸುಮ್ಮನೆಪ್ರಾರ್ಥಿಸುತ್ತಾರೆ!ಮೊರೆಯದುನದಿಮೊಳೆಯದುಬೀಜಅದರಷ್ಟಕ್ಕೆಅದು..ಇಲ್ಲ. ಇಲ್ಲ..ನದಿತಾನಾಗಿಯೇಎಂದೂಬತ್ತುವುದಿಲ್ಲ.ಕಾಯುತ್ತದೆಜೀವಚೈತನ್ಯದರಸವುಕ್ಕುವಗಳಿಗೆಗಳಿಗಾಗಿ..ಇದ್ದಕ್ಕಿದ್ದಂತೆಮೋಡಗಟ್ಟಿಹನಿಯುದುರಿದ್ದೇತಡಭೋರ್ಗರೆಯುತ್ತದೆ.ಸಂಭ್ರಮಿಸುತ್ತದೆಸೋಂಕುವಗಾಳಿಗೆರವಿಕಿರಣದತೆಕ್ಕೆಯೊಳಗಿನಬೆಚ್ಚಗಿನಭಾವಕ್ಕೆಮೊಳೆವಬೀಜದರಿವಿಗೆಉದುರಿದಹನಿಮಣ್ಣಿಗೆಬಿದ್ದಬೀಜಕಾಯ್ದಿಟ್ಟನೀರತೇವಮುಪ್ಪುರಿಗೊಂಡುಮೊಳೆವಜೀವತನ್ನೊಳಗೇಸಕಲವನುಕಾಯ್ದುಪೊರೆವಜೀವಜಲಧುಮ್ಮಿಕ್ಕಿಹರಿಯುತ್ತದೆ..ತಡೆಯಿಲ್ಲದೆಹರಿವರಭಸಕ್ಕೆಉರುಳುರುಳಿಕೊಚ್ಚಿಹೋಗುತ್ತವೆಪ್ರಾರ್ಥನೆಗೂಉಳಿಯದಗುಡಿಗೋಪುರಗಳು..ಉಕ್ಕುಕ್ಕಿಹರಿವನದಿ.. ಭಯ, ವಿಸ್ಮಯದನಡುವೆಯೂಆಡಿಕೊಳ್ಳುತ್ತಾರೆಅರಿವಿರದಜನ..ಸುಮ್ಮನಿರುತ್ತದೆನದಿತನ್ನಷ್ಟಕ್ಕೆತಾನೆಂಬಂತೆಜೀವಂತಹರಿಯುತ್ತಾತನ್ನೊಳಗನ್ನುಬೆಚ್ಚಗೆಕಾಯ್ದುಕೊಳ್ಳುತ್ತಾಸದಾ…————- The flow of the river River is beingAs it isBy itselfAlways.Never allows todry up its inner wetnessAnd warm wellspringWith patiencedefendsthyselfthe flow and lifespringIn the meditation of devine silenceAlwaysBut they thinkAbsurd…the people!By looking at itsDrynessFeel pityMurmer atwith mercyful sightPrays for itsQuick outflowNever the riverRoars..Never the seedSproutsas by themselfNo..no..River never everBecomes dry by itself.Awaits for themoments of delightfulLifespirits.When the cloudedMass comes togetherand starts to drizzle,It roars vigorously.Rejoices itself tothe blasts of windthe warm embrace ofSunraysconsciouness of germinating seedfallen waterdropssown seedsReserved dampnessComes togetherSprouts the life.Having all withinThe protective and caringThe lifespringOutflows vigorouslyRushing riverflows fastwithout pauserolls out, all temple domeswashawayeven the prayers chantscan’t save them Still they talkFoolishlyThese people…amid the fear and wonder!River keepsItself mumas it isalwaysKeeps itself alivePreserves its innerWarmthAnd flows alwaysby itself.******************************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಮಳೆ ಹನಿ ಕನ್ನಡಮೂಲ: ಸ್ಮಿತಾ ಅಮೃತರಾಜ್.ಸಂಪಾಜೆ. ಇಂಗ್ಲೀಷಿಗೆ: ಸಮತಾ ಆರ್. ಮಳೆ ನಿಂತುಹೋದ ಮೇಲೂಯಾರನ್ನೋ ಕಾಯುತ್ತಾಒಂಟಿ ಹಗ್ಗದ ಮೇಲೆಆತುಕೊಂಡ ಸಾಲು ಸಾಲುಮಳೆ ಮಣಿಗಳುಒಲ್ಲದ ಮನಸ್ಸಿನಿಂದಧರೆಗುರುಳುತ್ತಿವೆ. ಬೆಡಗು ಬಿನ್ನಾಣದಲಿಒಂದೇ ಬಿಂದು ಹನಿಹೂ ದಳದ ಮೇಲೆಎತ್ತಿ ಬೊಗಸೆಯೊಳಗಿಟ್ಟುಜೋಪಾನ ಮಾಡ ಬೇಕೆನ್ನುವಷ್ಟರಲ್ಲಿ..ಸಣ್ಣಗೊಂದು ನಕ್ಕುಹೂವಿನೆದೆಯೊಳಗೆ ಹುದುಗಿ ಹೋಯಿತು. ಎಲೆಯ ತುದಿಯಲ್ಲಿಕೊನೇ ಹನಿಇನ್ನೇನು ಬೀಳಬೇಕುನನ್ನೊಳಗೆ ತೀರದ ಸಂಕಟಮೆಲ್ಲಗೆ ಬೆರಳ ತುದಿಗೆಇಳಿಬಿಟ್ಟು ಕಣ್ಣ ಪಾಪೆಯೊಳಗೆಮುಚ್ಚಿಟ್ಟೆ. ನನಗೂ ಮಳೆಗೂ ಈಗತೀರದ ನಂಟು. *********************** A Drop..Even after the rain has stoppedAs if waiting for someoneDrops lined on a lone ropeAre dripping downWith a heavy heart… A lovely single dropOn a petal is gleaming andWhen went to pick itAnd protect in my handIt escaped smiling and hidIn the bosom of the flower. A last drop at the tip of a leafWas about to dropThen unable to bear that painI held it on my finger tipAnd hid it inside my eye. Now I and rain are bonded forever…

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಗೋಲಿಗಳು ಹಿಂದಿಮೂಲ:- ಮರಹೂಮ್ ಇಮ್ತಿಯಾಜ. ಕನ್ನಡಕ್ಕೆ:-ಡಿ.ಎಮ್. ನದಾಫ್ ನನ್ನ ಬಾಲ್ಯದ ಮೊದಲಗಳಿಕೆ ಅದ ನಾನು ಕಡು ಶ್ರಮದಿ ಗಳಿಸಿದೆ,ಹಗಲೆನ್ನಲಿಲ್ಲ,ರಾತ್ರಿಯನಲಿಲ್ಲಹಸಿವೆನಲಿಲ್ಲ,ನೀರಕಾಣಲಿಲ್ಲ,ಬರೀ ಗಳಿಕೆಯೋ ಗಳಿಕೆ. ಹಲ ಹಲವು ಬಣ್ಣ-ಬಣ್ಣದವುಕೆಲ-ಕೆಲವು  ಒಡಕು ತಡುಕುವಿಧ-ವಿಧದ ಹೊಂಬಣ್ಣದವುಕೆಲವು ನನ್ನಂತೆ ಅಮೂಲ್ಯಹಲವಲ್ಲಿ ಗೋವ ಕಂಗಳ ನೈರ್ಮಲ್ಯ ಕಿಸೆಯ ಕೊನೆ ಮೂಲೆ ಹರಿದಿತ್ತುಆದರೂ ಅದು ಗೋಟಿಗಳಿಂದ ತುಂಬಿತ್ತು.ವೇಗವಾಗಿ ಓಡಿದಾಗಲೆಲ್ಲಇವುಗಳ ಕಿಂಕಿಣಿ ಕಿವಿ ತುಂಬುತಿತ್ತು. ನಾನು ನನಗಿಂತ ಅವುಗಳನ್ನೇಹೆಚ್ಚು ಸಂಭಾಳಿಸಿದ್ದೆ’ಹಿಟ್ಟಿನ ಬುಟ್ಟಿಯಲ್ಲಿ ಬಚ್ಚಿಟ್ಟಿದ್ದೆ,ಗೊತ್ತಾಗುತ್ತಿಲ್ಲ ಗೆಳೆಯ ನನ್ನ ಗೋಟಿಗಳು ಎಲ್ಲಿ ಕಳೆದು ಹೋದವು?ತುಂಬಿ ಹರಿಯುವ  ನದಿಯಂತೆ ನನ್ನ ಯೌವನದ ಸೆಳೆವಿನಲ್ಲಿ ಎಲ್ಲಿ ತೇಲಿ ಹೋದವು. *********************************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಬಾವಿ ಕಟ್ಟೆ ಕನ್ನಡ ಮೂಲ: ಸ್ಮಿತಾ ಅಮೃತರಾಜ್.ಸಂಪಾಜೆ ಇಂಗ್ಲೀಷಿಗೆ: ಸಮತಾ ಆರ್. ಗುದ್ದಿ ಗುದ್ದಿ ಆಳಕ್ಕೆ ಅಗೆದುಸಿಕ್ಕ ಜೀವ ಜಲಕ್ಕೆಅತ್ತ ಇತ್ತ ಮಿಸುಕಾಡದಂತೆಕಟ್ಟಿದ್ದು ಕಟ್ಟೆ. ನೆಟ್ಟ ದಿಟ್ಟಿಗೆ ಒಂದು ಹಿಡಿಆಗಸ ಬಿಟ್ಟರೆಆಕೆ ತರುವ ಕೊಡದೊಂದಿಗಷ್ಟೇಹೇಗೋ ಬೆಳೆದದ್ದು ನಂಟು. ಅದೆಂತಹ ಆತುರ ಬಿಂದಿಗೆಗೆಕಂಠಕ್ಕೆ ಹಗ್ಗ ಬಿಗಿಸಿಕೊಳ್ಳುತ್ತಾಹಾಗೇ ಇಳಿಬಿಡುವ ಹೊತ್ತಿಗೆ ಕೈಯ ಹಿಡಿತವನ್ನೇ ಸಡಿಲಿಸಿರೊಯ್ಯನೆ ಡುಬುಕಿ ಹೊಡೆದಾಗಕೊಡ ಸೇರಿ ಜಗತ್ತು ನೋಡುವಕಾತರಕ್ಕೆ ಬಾವಿಯ ಮೈ ತುಂಬಾಅಲೆ. ಅನ್ನಕ್ಕೆ ಸಾಂಬಾರಿಗೆ ಕಾಫಿಗೆಚಹಕ್ಕೆ ನೀರು ಸದ್ದಿಲ್ಲದೇಕಲಬೆರಕೆಯಾಗುವ ಸಂಕಟಕ್ಕೆಕುದಿ ಮತ್ತಷ್ಟು ಹೆಚ್ಚುತ್ತಿದೆ. ಖಾಲಿಯಾಗುವ ಖುಷಿಗೆಕೊಡ ಇಂಚಿಂಚೇ ಮೈ ಅಲಗಿಸಿ ಕೊಳ್ಳುತ್ತಿದೆಇತ್ತ ಬಾವಿ ಹೆಜ್ಜೆ ಸಪ್ಪಳಕ್ಕೆಕಿವಿ ತಾಗಿಸಿ ಕುಳಿತಿದೆ. ಈ ಕೊಡದ ನೀರುಗಿಡದ ಬುಡಕ್ಕೋಅಡುಗೆ ಮನೆಯ ವ್ಯಂಜನಕ್ಕೋ?ಕುತೂಹಲ ತಣಿದ ದಿನಕಣ್ಣು ಹೊಳಪು ಕಳೆದುಕೊಂಡುಬಿಡುತ್ತದೆ. ಮತ್ತೆ ಕೊಡ ತುಂಬಿಕೊಳ್ಳುತ್ತಿದೆಡುಬು ಡುಬು ಎದೆಬಡಿಯುವಒಡಲಾಳದ ಸದ್ದುಎಲ್ಲಿಯದ್ದು .? ಬಿಂದಿಗೆಯದ್ದಾ..?ಬಾವಿಯದ್ದಾ..? ಅರೆ!ನನ್ನೆದೆಯೇಕೆ ಹೀಗೆಬಡಿದುಕೊಳ್ಳುತ್ತಿದೆ ಈ ಹೊತ್ತು . ************************** A stone lined well Digging and digging deep downFound the elixir of life,Not to make it waggleA stone lined well was built. Other than a piece of skyLeft for the direct sight,Got attached to a pitcher,Brought by her How hurried this pitcher is,When let to climb down,With a tightening rope around the neck,Loosening the grip, dives deep within. Then with the eagerness to see,The world through this pitcher,The well tremblesWith waves all around. When used quietly to makerice,curry,coffee or tea,The agony of being tainted,boils the water up. The pitcher is moving inch by inchWith the joy of getting emptied.Here the well is all ears,Eagerly waiting for,The rustling by the steps. Whether this pitcher willWater a plantOr a dish in the kitchen.?The moment this query gets quenchedThe eyes may loose the shine. The pitcher is getting filled again,From where does thisDub dub sound, thumping the heartdeep within, is coming?From the pitcher or the well ? Hey,why my heart is beatingSo much at this hour… ********************************************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಒಂದೇ ಬಾಗಿಲು ಕನ್ನಡ ಮೂಲ: – ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ಇಂಗ್ಲೀಷಿಗೆ:- ಡಾ.ಎನ್. ತಿರುಮಲೇಶ್ ಭಟ್ ಒಂದೇ ಬಾಗಿಲು ಕತ್ತಲು ಕವಿದಿದೆನನ್ನ ಬಾಳಮನೆಗೆ ಮಾತ್ರಒಂದೇ ಬಾಗಿಲುಒಳ ಬರುವುದೂ ಅಲ್ಲಿಂದಲೇಹೊರ ಹೋಗುವುದೂ ಅಲ್ಲಿಂದಲೇ… ಅವನು ಕರೆಯುತ್ತಿದ್ದಾನೆಅವನ ಮನೆಗೆ ಗೋಡೆ ಬಾಗಿಲುಗಳೇ ಇಲ್ಲನನ್ನ ಬಾಳಮನೆಗೆ ಮಾತ್ರ ಒಂದೇ ಬಾಗಿಲುಈ ಇಹ ಹೇಗೆ ನಿಂತಿದೆಬೆಳಕು ಬಾಗಿಲಿಗೆ ಅಡ್ಡಲಾಗಿ !ಒಳಗೆ ಕತ್ತಲು ಕವಿದಿದೆ. ಅವನೋ ಕಿಂಡಿಯಲೇಕೈತೂರಿ ಕರೆಯುತ್ತಿದ್ದಾನೆಹೊರಗೆ ಬಾ ಬಾನನ್ನ ಮಗುವೇ ಎಂದುಹೇಗೆ ಬರಲಿ ಹೇಳುಈ ಇಹದ ಕಣ್ಣು ತಪ್ಪಿಸಿಕೊಂಡು ? ಬೆಳಕು ಬಾಗಿಲ ಹೊಸ್ತಿಲಲೇಹೇಗೆ ಅಡ್ಡವಾಗಿ ನಿಂತಿದೆಹರಿವಾಣದ ತುಂಬ ಚಿನ್ನದ ಮೊಟ್ಟೆಗಳಹರಡಿಕೊಂಡು ಬಸುರಿ ಹೇಂಟೆಯAತೆಕಾಲಬುಡದ ಮಣ್ಣನ್ನೇ ಕೆದರಿಕೊಳ್ಳುತ್ತಈ ಇಹದ ಬಾಳು !ಕವಿಗೆ ಕಾಣದಂತೆ ಬೆಳಕಿನ ಆ ಲೋಕಕವಿದ ಕತ್ತಲಲ್ಲಿ… ಬೆಳಕಿಗಡ್ಡಇರುಳು ಚಂದ್ರನಿಗೂ ಅಡ್ಡಓಹ್ !ಬೆಳಕು ಕಿಂಡಿಯಲಿಅವನದೇ ಕೈಒಡೆದು ಬಿಡು ಗೋಡೆಗಳನನಗಾಗಿ…ಕತ್ತಲಿಗೆ ಹೊಂದಿಕೊAಡ ನನ್ನ ಕಂಗಳಬೆಳಕಿಗಾಗಿಹೃದಯದೀಪವ ಹಚ್ಚಿಡಲೇ ?ಎಸೆ ಈ ಕಿಂಡಿಯಲೇಬೆಳಕು ಕಿರಣಗಳಹಚ್ಚಿಕೊಳ್ಳಬೇಕಿದೆ ಈ ಹಸಿಮೈಗೆ ಬೆಳಕಮನಸ್ಸು ದೀಪವಾಗಲು ಓಹ್ !ನಾನೀಗ ಒಂದು ಬೆಂಕಿಯದ್ದೇ ಪೆಟ್ಟಿಗೆಎಸೆ ಮದ್ದು ಪೇಟಗಳ ಬೆಂಕಿಕಡ್ಡಿಗಳ ಒಳಗೆಬೆಂಕಿಯಿಡಬೇಕುಈ ಇಹಕ್ಕೂಈ ಕತ್ತಲಿಗೂ… ******************************* A Single Door Darkness has descended,Only around my life’s abode:Just a single door there is for my houseTo get in and to exit. He is beckoning to me,His house has no walls nor door.Mylife’s abode has only a single door.This earth stands betweenThe door and the lightThere is darkness within. He is beckoning to meWith his hand pushed through the windowHe calls me tenderlyCome out, come out, my child,But how do I leave,Escaping the eyes of the world?At the very threshold of the door,Meant for the light to enterLike a full-term pregnant lady-henCarrying a cradle of golden eggs aplenty,Scratching the soil with the claws at her feetStands this earthly life. That world of light is out of the poet’s sightIt is covered with darkness, hiding all lightHiding even the moon at night.Oh!Through the small windowIs his hand beckoning to me,‘Break the walls’ For me to see the lightWith eyes adjusted to darknessFor the sake of lightI shall light this lamp ofmy heartThrow through this windowRays of lightI have to smear light on this raw bodyTo light my heartOh!I am now a box of lightThrow within sticks coated with the paste ofexplosive powderI should set ablazeThis earthThis darkness. ******************************************* ಡಾ.ಎನ್. ತಿರುಮಲೇಶ್ ಭಟ್

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಸರಳವೇ ಸುಂದರ ಇಂಗ್ಲೀಷ್ ಮೂಲ:ಮ್ಯಾಥಿವ್ ಪಿ ಥಾಮಸ್ ಕನ್ನಡಕ್ಕೆ:ಚೈತ್ರಾ ಶಿವಯೋಗಿಮಠ ಪುಟ್ಟ ವೃಕ್ಷಮಾತೆಯೊಬ್ಬಳು ಕೈಚಾಚಿ ಕರೆದಳು,ತನ್ನ ಪ್ರೀತಿಯ ತೆಕ್ಕೆಯಲ್ಲಿ ನನ್ನ ಎತ್ತಿ ಮೇಲಕ್ಕೆಸೆದು ಆಡಿಸಿದಳುಅಲ್ಲಿ ಮೇಲೆ, ಸಣ್ಣ ಬಿಳಿ ಹತ್ತಿಯಂತಹ ಮೋಡಗಳು ತೇಲುವುದ ಕಂಡೆಬಾಳಿನ ಅವ್ಯಕ್ತ ಚಿತ್ರಗಳನು ತಿಳಿ ನೀಲಿ ಬಾನ ಪಟದ ಮೇಲೆ ಬಿಡಿಸಿದಂತೆ. ಅವಳು ತನ್ನ ನೆಮ್ಮದಿಯ ನೆಳಲಿನ ಮಡಿಲಲಿ ನನ್ನ ಮಲಗಿಸಿದಳು.ದೂರದೂರುಗಳ, ಹಚ್ಚ ಹಸಿರು ಬಯಲುಗಳ ಕನಸ ಕಂಡೆಅಲ್ಲಿ, ಉಕ್ಕಿ ಹರಿಯುವ ನದಿಗಳು ಪ್ರತಿ ಕಲ್ಲುಗಳನ್ನು ನುಣುಪಾಗಿಸುವುವುಅಲ್ಲಿ, ನವಿಲು ತನ್ನ ನಲ್ಲೆಯ ಹೃದಯದ ತಾಳಕೆ ಹೆಜ್ಜೆ ಹಾಕುವುದುಅಲ್ಲಿ, ಹುಲ್ಲೆ-ಹುಲಿಗಳು ಸ್ವಚ್ಛಂದವಾಗಿ ಒಂದೇ ಕೊಳದಲಿ ನೀರು ಕುಡಿಯುವವುಅಲ್ಲಿ, ಮಕ್ಕಳು ಗಾಳಿಯಲ್ಲಿ ಅಚ್ಚ ಬಿಳಿ ಹೊಗೆಯುಂಗುರಗಳನು ಹಿಡಿಯಲು ಯಾವ ಅಳುಕಿಲ್ಲದೆ ಓಡುವರು.ಅಲ್ಲಿ, ಮುಂಬೆಳಗಲಿ ಮುಗಿಲು ಬೆಟ್ಟಗಳನು ತಬ್ಬುವುದು.ದೂರದೂರುಗಳ, ಹಚ್ಚ ಹಸಿರು ಬಯಲುಗಳ ಕನಸ ಕಂಡೆ ವರುಷಗಳ ನಂತರ….. ವಿಮಾನದಲ್ಲಿ ಕುಳಿತು ಮುಗಿಲ ಮೇಲೆ ಹಾರಿದೆ.ಎತ್ತರದ ಕಾರ್ಖಾನೆ-ಕಟ್ಟಡಗಳು ಉಗುಳುವ ಹೊಗೆ-ಧೂಳುಗಳಿಂದ ಮೋಡಗಳು ಕಡುಗಪ್ಪಾಗಿ ಬಿಮ್ಮನಿಸಿದ್ದವುಹಾಲು-ಜೇನುಗಳ ಸಮೃದ್ಧ ನಾಡನ್ನು ಕಟ್ಟಲು,ಕಲ್ಲಿನ ಗಣಿಗಳು, ಬೆಳ್ಳಿ-ಬಂಗಾರದ ಖನಿಗಳ ಕನಸ ಕಂಡೆಆಯುಧದ ಬಲಿಪೀಠಗಳು, ಹುತಾತ್ಮರ ಪ್ರತಿಮೆಗಳ ಕನಸ ಕಂಡೆಮರಮುಟ್ಟು, ಉಕ್ಕು, ಗಾರೆ, ಇಟ್ಟಿಗೆಗಳ ಕನಸ ಕಂಡೆಇಷ್ಟೆಲ್ಲ ಕನಸುಗಳುವಿಮಾನ ಕೆಳಗಿಳಿದು, ವಿವಿಧ ಆಕಾರದ ಮುಖಗವಸುಗಳ ತೊಟ್ಟಮನುಷ್ಯರು ಅಂತರ ಕಾಯ್ದುಕೊಂಡು ನನ್ನನ್ನು ಸ್ವಾಗತಿಸುವವರೆಗೆ! ಆ ದೇವರ ಸೃಷ್ಟಿಯ ಒಂದು ಸಣ್ಣ ವೈರಾಣುವಿನಿಂದಾಗಿಮತ್ತೆ ಸ್ವಚ್ಛ ಆಕಾಶ, ಸ್ವಚ್ಛ ಭೂಮಿಯ ಕನಸ ಕಂಡೆ.ಇನ್ನಿಲ್ಲದ ಮರದ ಅಪ್ಪುಗೆ ಬಯಸಿ ಹಂಬಲಸಿದೆ! “ಸರಳವೇ ಸುಂದರ”‌ವೆಂದು ಮಮ್ಮಲ ಮರುಗಿದೆ! ********************************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಶೂರ್ಪನಖಾಯಣ ಮಲಯಾಳಂ ಮೂಲ:ರವೀಂದ್ರನ್ ಪಾಡಿ ಕನ್ನಡಕ್ಕೆ:ಚೇತನಾ ಕುಂಬ್ಳೆ ರಾತ್ರಿ ಕಂಡ ಕನಸಿನಲ್ಲಿನನ್ನ ಮುಂದಿದ್ದಳು ಶೂರ್ಪನಖಿಎಲ್ಲಿಯೂ ಸೀತೆಯನ್ನು ಕಾಣಲಿಲ್ಲಬಳಿಯಲ್ಲಿ ರಾಮನೂ ಇರಲಿಲ್ಲ ಹಲವು ದಿನಗಳಿಂದ ಆಲೋಚನೆಗಳಲ್ಲಿರಾಮ ರಾವಣ ಯುದ್ಧವೇ ತುಂಬಿತ್ತುಯಾರ ಪಕ್ಷ ಸೇರಲಿ?ಮಾನ್ಯರಲ್ಲ ಇಬ್ಬರೂ ಸೀತೆಯೊಂದಿಗೆ ನಿಂತುರಾಮನನ್ನು ದೂಷಿಸಬಹುದೇ?ವಾಲಿಯನ್ನು ವಧಿಸದೆರಾಮನ ವಿರುದ್ಧ ನಿಲ್ಲಬಹುದು ತಾಟಕಿ, ಶಂಬೂಕರುನಮ್ಮ ಪಕ್ಷ ಸೇರುವರುರಾವಣನನುಜ ವಿಭೀಷಣನನ್ನು ಅಂಕೆಯಲ್ಲಿರಿಸಬಹುದು ಹನುಮಂತನನ್ನು ಸೋಲಿಸಲುವಾಲಿಯೊಬ್ಬನೇ ಸಾಕಲ್ಲವೇಪ್ರಜೆಗಳು ಹೇಗಾದರೂ ಇರಲಿಅಮ್ಮನಿಗೆ ಕೈಯೆತ್ತುವರು ಅವರ ಮಾತನಾಲಿಸಿನಾಡಿನಲ್ಲಿ ಬದುಕಲು ಸಾಧ್ಯವೇ?ಗಾಳಿಸುದ್ದಿಯನ್ನೇ ಹಬ್ಬಿಸುವರೆಲ್ಲರೂಬೇರೇನೂ ಕೆಲಸವಿಲ್ಲವಲ್ಲ ವಾಲ್ಮೀಕಿ ಬರೆಯಲಿಅವರು ಕವಿಯಲ್ಲವೇಕವಿತೆಗಳೆಲ್ಲವೂ ಕಥೆಗಳಲ್ಲಕಥೆಗಳೆಲ್ಲವೂ ನಿಜವಲ್ಲ ರಾಮನಿಗೆ ಸೀತೆ ಏನಾಗಬೇಕೆಂದುಚಿಂತಿಸುತ್ತಲೇಜನರು ಸಮಯ ವ್ಯಯಿಸುತ್ತಾರೆಕಾಡುಗಳಲ್ಲಿ ಮತ್ತೆ ಹೂಗಳರಳುತ್ತವೆ ಬಂದುಬಿಡು ಪ್ರಾಣಸಖಿಶೂರ್ಪನಖೀ ನನ್ನೊಲವೇಲಕ್ಷ್ಮಣ ಹೋಗಲಿ ಬಿಡುನಾನಿದ್ದೇನೆ ನಿನಗೆ ****************************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಕವಿತೆ ಧ್ಯಾನ ಕನ್ನಡಮೂಲ: ಸುನೀತಾ ಕುಶಾಲನಗರ ಇಂಗ್ಲೀಷಿಗೆ:ಸಮತಾ ಆರ್. ಧ್ಯಾನ ಎಲ್ಲೆಡೆ ಗವ್ ಎನ್ನುವಾಗಲೂಅದೇನೋ ಧ್ಯಾನಮನೆಯೊಳಗಿದ್ದರೂ ನುಗ್ಗಿಬರುವ ಕವಿತೆ ಆಕಾಶದಂತೆ ಆವರಿಸಿನಿತ್ಯ ಬೆಳದಿಂಗಳುಋತುಚಕ್ರ ಉರುಳಿದಂತೆಋತುಸ್ರಾವ ವ್ಯತ್ಯಾಸಬಣ್ಣದ ಕನಸುಗಳಿಗೆಅದೆಷ್ಟು ಕೂಸುಗಳ ಕೇಕೆಜತೆಯಾದ ಕ್ಷಣ ಕ್ಷಣವೂಕಣ ಕಣಕೂ ಹಿತಮತ್ತೊಮ್ಮೆ ಬದುಕಿಬಿಡೆಂದುಚಾಚುವ ಕೈಕಣ್ಣ ಸುತ್ತಿದ ಬಳೆಯಾಕಾರದಕಪ್ಪನೂ ನೇವರಿಸುವಕೂದಲ ಬಣ್ಣದ ಲೇಪನಕೆಹೊಸ ಹೊಳಪುಭೂತ ಭವಿಷ್ಯದಹಂಗ ತೊರೆವ ವರ್ತಮಾನತೀರಾ ಖಾಸಗಿ ಬದುಕೇಆದರೂ ಸದ್ದಿಲ್ಲದೆಮುಟ್ಟುಗೋಲಾಗುವ ಮುಟ್ಟಿಗೂಹುಟ್ಟುತ್ತಿದೆ ಹೊಸಹುರುಪುದಿನ,ದಿನಾಂಕಗಳಗಡಿದಾಟಿ ಬರುವಲವಲವಿಕೆಯ ಮತ್ತು. A Musing.. ‌‌Far and wide surrounded by gloom,‌But still have some kind of musing.‌A poem is invading even inside the home,‌Day to day covering like a moonlit sky. ‌‌Like babies giggling in‌Their rainbow dreams‌Drowning in pleasure bit by bit.‌In every intimate moment. ‌‌A held out hand is making me alive again.‌Even the coloured hair caressing‌The dark circles of eyes‌Is gleaming with new light. ‌‌As the seasons turnSo the periods change,‌The present is though‌Too personal of a life,Is careless of future and past, Silently forfeited monthly cycleIs giving birth to a new spirit.A vigorous spree is crossingAll the borders ofTime and space… *********************

ಅನುವಾದ ಸಂಗಾತಿ Read Post »

You cannot copy content of this page

Scroll to Top