ವಿ.ಜೇ. ನಾಯಕ ಅವರ ತರುವಾಯ ಜಿಲ್ಲಾ ಘಟಕದ ಅಧ್ಯಕ್ಷಗಾದಿಯೇರಿದ ಟಿ.ಕೇ.ಮಹಮೂದ ಎಂಬ ಹಿರಿಯರು ಇಪ್ಪತ್ತೊಂದು ವರ್ಷಗಳ ಕಾಲ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿಯೂ ಜಿಲ್ಲಾಧ್ಯಕ್ಷರಾಗಲೀ, ತಾಲೂಕು ಘಟಕದ ಅಧ್ಯಕ್ಷರಾಗಿದ್ದ ಹಿರಿಯರಾಗಲೀ, ಅಂಕೋಲಾ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವುದಾಗಲೀ, ಘಟಕವನ್ನು ಕ್ರಿಯಾಶೀಲ ಚಟುವಟಿಕೆಗಳಿಂದ ಮುನ್ನಡೆಸುವುದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.
ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ
ಅಂಕಣ ಬರಹ
‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ.
ಸಾಧಕಿಯರ ಯಶೋಗಾಥೆ
ರಾಕ್ಷಸ ಸಂಹಾರಕ್ಕೆ ವೀರರಾದ ಬಾಲಕರನ್ನು ಕಳಿಸಿಕೊಡೆಂದು ಕೇಳಿದಾಗ ದಶರಥ ಮಹಾರಾಜ ಹೌಹಾರಿದ್ದನೆಂದೇ ರಾಮಾಯಣ ಹೇಳುತ್ತದೆ. ‘ಮಕ್ಕಳಿನ್ನೂ ಹಾಲುಗಲ್ಲದ ಹಸುಗೂಸುಗಳು, ನಾನೇ ಬರುವೆ, ಸೈನ್ಯ ತರುವೆ..‘ ಎಂದು ಚಡಪಡಿಸಿ ಬಡಬಡಾಯಿಸಿದ್ದ ಎಂದು ತಿಳಿದಾಗ, ಎಂಥಾ ರಾಜಾಧಿರಾಜ ಆದರೂ ಅಪ್ಪನೆಂಬ ಅಂತಃಕರಣ ಮೀರಲಾದೀತೇ ಎನಿಸುತ್ತದೆ.
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—43 ಆತ್ಮಾನುಸಂಧಾನ ಜಿ.ಸಿ. ಕಾಲೇಜಿನಲ್ಲೊಂದು ‘ಅಭಿನಯ ಮಂಟಪ’ ಅಂಕೋಲೆಯಲ್ಲಿ ಮಾನ್ಯ ದಿನಕರ ದೇಸಾಯಿ ಅವರ ನಾಯಕತ್ವದಲ್ಲಿ ಸ್ಥಾಪನೆಗೊಂಡ “ಕೆನರಾ ವೆಲ್‌ಫೇರ್ ಟ್ರಸ್ಟ್” ಎಂಬ ಶಿಕ್ಷಣ ಸಂಸ್ಥೆ ಜಿಲ್ಲೆಯಾದ್ಯಂತ ಹುಟ್ಟುಹಾಕಿದ ಜನತಾ ವಿದ್ಯಾಲಯಗಳೆಂಬ ಪ್ರೌಢಶಾಲೆಗಳು ಜಿಲ್ಲೆಯಲ್ಲಿ ಅಕ್ಷರ ಜ್ಯೋತಿ ಬೆಳಗಿಸುವ ಮಹತ್ವದ ಕಾರ್ಯಾಚರಣೆಗೆ ತೊಡಗಿ ಶೈಕ್ಷಣಿಕ ಕ್ರಾಂತಿಗೆ ಕಾರಣವಾದದ್ದು ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಒಂದು ಸುವರ್ಣಮಯ ಕಾಲಾವಧಿ. ಇದರ ಮುಂದಿನ ಹೆಜ್ಜೆಯಾಗಿ ಸ್ಥಾಪನೆಗೊಂಡದ್ದೇ ಅಂಕೋಲೆಯ ‘ಗೋಖಲೆ ಸೆಂಟನರಿ ಕಾಲೇಜ್’ ಎಂಬ ಮಹಾವಿದ್ಯಾಲಯ. ತಮ್ಮ ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳ ಆಯ್ಕೆಯಲ್ಲಿಯೂ ತುಂಬಾ ಕಾಳಜಿಪೂರ್ವಕ ಪರಿಶೀಲನೆ ನಡೆಸುವ ಮಾನ್ಯ ದೇಸಾಯಿಯವರು ಅತ್ಯಂತ ದಕ್ಷ ಪ್ರಾಮಾಣಿಕ ಪ್ರತಿಭಾ ಸಂಪನ್ನರನ್ನೇ ಆಯ್ಕೆ ಮಾಡಿ ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಸೇವೆಯನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುತ್ತ ಪ್ರತಿಯೊಂದು ಸಂಸ್ಥೆಯೂ ಯಶಸ್ವಿಯಾಗಿ ಬೆಳವಣಿಗೆ ಹೊಂದುವಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಇದಕ್ಕೆ ಉತ್ತಮ ನಿದರ್ಶನವೆಂಬಂತೆ ಕೇ.ಜಿ.ನಾಯ್ಕ ಎಂಬ ದಕ್ಷ ಆಡಳಿತಗಾರನೊಬ್ಬನನ್ನು ಗೋಖಲೆ ಸೆಂಟನರಿ ಕಾಲೇಜಿನ ಪ್ರಥಮ ಪ್ರಾಂಶುಪಾಲರನ್ನಾಗಿ ಆಯ್ಕೆ ಮಾಡಿದ್ದು, ಅವರ ಆಡಳಿತದಲ್ಲಿ ಕಾಲೇಜು ಕೆಲವೇ ಕೆಲವು ವರ್ಷಗಳಲ್ಲಿ ತನ್ನ ಶೈಕ್ಷಣಿಕ ಸಾಧನೆಗಳಿಂದಲೇ ರಾಜ್ಯಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಪ್ರಚುರ ಪಡಿಸಿದ್ದು ಚರಿತ್ರಾರ್ಹ ಸಂಗತಿಯಾಗಿದೆ. ಕೇ.ಜಿ.ನಾಯ್ಕ ಜಿಲ್ಲೆಗೆ ಅಪರಿಚಿತರೇನಲ್ಲ. ಮೂಲತಃ ಇದೇ ಜಿಲ್ಲೆಯ ಕುಮಟಾ ತಾಲೂಕಿನ ಹನೇಹಳ್ಳಿಯೆಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದವರು. ಹನೇಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಧಾರವಾಡ ಇತ್ಯಾದಿಯಾಗಿ ಜಿಲ್ಲೆಯ ಹೊರಗಿದ್ದುಕೊಂಡೇ ಪದವಿ ಶಿಕ್ಷಣ, ಸ್ನಾತಕೋತ್ತರ ಪದವಿಗಳನ್ನು ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗಣಿತಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದವರು. ಬಹುಶಃ ಇದೇ ಕಾರಣದಿಂದ ಜಿಲ್ಲೆಯ ಬಹುಜನ ಸಮುದಾಯಕ್ಕೆ ಅಪರಿಚಿತರಾಗಿದ್ದವರು. ಇದು ಕೇ.ಜಿ.ನಾಯ್ಕರ ಪ್ರಾಂಶುಪಾಲ ಹುದ್ದೆಯ ಆಡಳಿತ ವ್ಯವಹಾರಗಳಿಗೆ ವರವಾಗಿಯೇ ಪರಿಣಮಿಸಿತು ಎಂಬುದು ಮುಂದಿನ ಅವರ ಕಾರ್ಯಕ್ಷಮತೆಯನ್ನು ಕಾಣುವಾಗ ಯಾರಿಗಾದರೂ ಮನವರಿಕೆಯಾಗುತ್ತದೆ. ಅಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಮಾನ್ಯ ಅಡಕೆಯವರಲ್ಲಿ ತಮ್ಮ ಬೇಡಿಕೆಯನ್ನು ಸಲ್ಲಿಸಿ ಸಮರ್ಥ ಆಡಳಿತಗಾರನೋರ್ವನನ್ನು ನೀಡುವಂತೆ ದೇಸಾಯಿಯವರು ಮಾಡಿದ ಮನವಿಗೆ ಸ್ಪಂದಿಸಿದ ಮಾನ್ಯ ಅಡಕೆ ಸಾಹೇಬರು ಅಂಕೋಲೆಗೆ ನೀಡಿದ ಕೊಡುಗೆಯೇ ಶ್ರೀಮಾನ್ ಕೇ.ಜಿ.ನಾಯ್ಕ ಎಂಬ ಗೋಖಲೆ ಶತಾಬ್ಧಿ ಮಹಾವಿದ್ಯಾಲಯದ ಪ್ರಪ್ರಥಮ ಪ್ರಾಂಶುಪಾಲರು. ತೆಳ್ಳಗೆ-ಬೆಳ್ಳಗೆ ತುಂಬಾ ಎತ್ತರದ ನಿಲುವಿನ, ಸದಾ ಗಾಂಭೀರ್ಯವೇ ಮೂರ್ತಿವೆತ್ತಂತೆ ತೋರುವ ಕೇ.ಜಿ.ನಾಯ್ಕರು ತಮ್ಮ ಸಂಸ್ಥೆಯ ಅಧ್ಯಾಪಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಒಂದು ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡೇ ಇರುತ್ತಿದ್ದರು. ಅವರ ಪೂರ್ವಾನುಮತಿ ಇಲ್ಲದೆ ಅಧ್ಯಾಪಕರಾಗಲಿ, ಸಿಬ್ಬಂದಿಗಳಾಗಲಿ, ವಿದ್ಯಾರ್ಥಿಗಳಾಗಲಿ, ಸರಕಾರಿ ಅಧಿಕಾರಿಗಳಾಗಲೀ ಅವರ ಚೇಂಬರ್ ಪ್ರವೇಶಿಸುವ ಅವಕಾಶವಿರಲಿಲ್ಲ. ಇದು ಹಲವರಿಗೆ ತಲೆನೋವಿನ ಸಂಗತಿಯೆನಿಸಿದರೂ ಪ್ರಾಚಾರ್ಯ ಹುದ್ದೆಯ ಘನತೆಯನ್ನು ಅವರಂತೆ ಕಾಪಾಡಿಕೊಂಡ ಇನ್ನೊಬ್ಬ ವ್ಯಕ್ತಿ ಅಪರೂಪಕ್ಕೆ ಅಪರೂಪವಾಗಿಯೂ ನನಗೆ ಕಂಡಿಲ್ಲ. ಮುಂಜಾನೆ ಹನ್ನೊಂದು ಗಂಟೆಗೆ ಅವರು ಕಾಲೇಜ್ ಕ್ಯಾಂಪಸ್ಸಿಗೆ ಬಂದರೆ ಪಾಠ ಪ್ರವಚನಗಳ ಧ್ವನಿ- ಪ್ರತಿಧ್ವನಿಗಳಲ್ಲದೆ ಬೇರೆ ಯಾವ ಸದ್ದುಗದ್ದಲವನ್ನೂ ಅವರು ಸಹಿಸುತ್ತಿರಲಿಲ್ಲ. ಅವರೊಮ್ಮೆ ಕಾರಿಡಾರಿನಲ್ಲಿ ನಿಂತು ಅತ್ತಿತ್ತ ಕಣ್ಣು ಹಾಯಿಸಿದರೆ ಒಂದು ನರಪಿಳ್ಳೆಯೂ ತರಗತಿಯಿಂದ ಹೊರಗೆ ಕಾಣಿಸುವುದು ಸಾಧ್ಯವಿರಲಿಲ್ಲ. ವರ್ತಮಾನದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಯ ಆವರಣವನ್ನು ಪ್ರವೇಶಿಸಿದರೂ ಇಂಥ ಅನುಭವವನ್ನು ಪಡೆಯುವುದು ಸಾಧ್ಯವೇ ಇಲ್ಲ. ಆದರೆ ಮಾನ್ಯ ಕೇ.ಜಿ.ನಾಯ್ಕ ಅವರು ಅದು ಹೇಗೆ ಅಂದಿನ ದಿನಗಳಲ್ಲಿ ಅಂಥ ಗಾಂಭೀರ್ಯವನ್ನು ಕಾಯ್ದುಕೊಂಡರು? ಎಂದು ಯೋಚಿಸಿದರೆ ಅಚ್ಚರಿಯೇ ಆಗುತ್ತದೆ. ಕಾಲೇಜಿನಂಥ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳನ್ನಲ್ಲದೇ ಪಠ್ಯೇತರ ವಿಷಯಗಳಲ್ಲಿಯೂ ಕಲಿಕೆಯ ಆಸಕ್ತಿ ತೋರಬೇಕು. ಇಲ್ಲವಾದರೆ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆ ಖಂಡಿತ ಸಾಧ್ಯವಿಲ್ಲ. ಕೇ.ಜಿ ನಾಯ್ಕರು ಆಡಳಿತದಲ್ಲಿ ದಕ್ಷತೆ ತೋರುವುದರೊಂದಿಗೆ ಕಠಿಣ ಶಿಸ್ತನ್ನು ಪಾಲಿಸುತ್ತಿದ್ದರು. ಅದರ ಜೊತೆಯಲ್ಲಿಯೇ ಅವರ ವ್ಯಕ್ತಿತ್ವದಲ್ಲಿ ವಿಶಾಲ ದೃಷ್ಠಿಕೋನ ಮತ್ತು ದೂರದರ್ಶಿತ್ವ ಅಡಗಿತ್ತು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಸಂಸ್ಥೆಯು ಕೊಡಬಹುದಾದ ಎಲ್ಲ ಅವಕಾಶಗಳನ್ನು ಪೂರೈಸಬೇಕೆಂಬ ಜವಬ್ದಾರಿಯಿತ್ತು. ಇಂಥ ಸಂದರ್ಭದಲ್ಲಿ ಅಧ್ಯಾಪಕರೊಡನೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಅದನ್ನು ಕಾರ್ಯಗತಗೊಳಿಸುವ ಸಂಕಲ್ಪ ಶಕ್ತಿಯಿತ್ತು. ಕಾಲೇಜಿನ ಪಠ್ಯೇತರ ಚಟುವಟಿಕೆಗಳಿಗಾಗಿಯೇ ‘ಯೂನಿಯನ್’, ‘ಜಿಮಖಾನಾ’ ಎಂಬ ಎರಡು ವಿಭಾಗಗಳು ಕ್ರಿಯಾಶೀಲವಾಗಿದ್ದವು. ಅವು ತುಂಬ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿದ್ದವು. ಕೇ.ಜಿ. ನಾಯ್ಕ ಅವರ ಇನ್ನೊಂದು ವ್ಯಕ್ತಿ ವಿಶೇಷವೆಂದರೆ ಗುಣ ಗ್ರಾಹಿತ್ವ. ಯಾವ ಅಧ್ಯಾಪಕರಿಂದ ಯಾವ ಕೆಲಸವನ್ನು ಯಶಸ್ವಿಯಾಗಿ ಮಾಡಿಸಬಹುದೆಂಬ ಸೂಕ್ಷ್ಮಜ್ಞತೆ ಇರುವುದರಿಂದ ನಿರ್ದಿಷ್ಟ ವಿಭಾಗಕ್ಕೆ ಸೂಕ್ತ ವ್ಯಕ್ತಿಗಳನ್ನೇ ಆಯ್ದು ಜವಾಬ್ದಾರಿಯನ್ನು ಒಪ್ಪಿಸುತ್ತಿದ್ದರು. ಆರಂಭದ ದಿನಗಳಲ್ಲಿ ಹೆಚ್ಚಿನ ಕಾಲಾವಧಿಗೆ ಯೂನಿಯನ್ / ಜಿಮಖಾನಾ ವಿಭಾಗದ ಜವಾಬ್ದಾರಿಯನ್ನು ಪ್ರೊ. ವಿ.ಎ.ಜೋಷಿ ಮತ್ತು ಪ್ರೊ.ಎಂ.ಪಿ.ಭಟ್ ನಿಭಾಯಿಸಿದ್ದಾರೆ. ಪ್ರಸಕ್ತ ಕಾಲಾವಧಿಯ ಚರ್ಚಾ ಸ್ಪರ್ಧೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಜಿಲ್ಲೆಯ ತುಂಬ ಇತರ ಶಿಕ್ಷಣ ಸಂಸ್ಥೆಗಳ ಗಮನ ಸೆಳೆಯುವಂತೆ ಇರುತ್ತಿದ್ದವು. ಕ್ರೀಡಾ ವಿಭಾಗದಲ್ಲಿ ಪ್ರತಿ ವರ್ಷವೂ ಎಂಟರಿಂದ ಹತ್ತರವರೆಗೂ ವಿವಿಧ ಕ್ಷೇತ್ರದ ಕ್ರೀಡಾಪಟುಗಳು “ಯೂನಿವರ್ಸಿಟಿ ಬ್ಲೂ” ಎನ್ನಿಸಿಕೊಂಡು ಕಾಲೇಜಿಗೆ ಕೀರ್ತಿ ತಂದಿದ್ದರು,. ಉದಯ ಪ್ರಭು ಎಂಬ ವಿದ್ಯಾರ್ಥಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಬೆಳೆದು ನಿಲ್ಲುವಲ್ಲಿ ಪ್ರಾಚಾರ್ಯ ಕೇ.ಜಿ ನಾಯ್ಕ ಮತ್ತು ಪ್ರೊ. ಎಂ.ಪಿ.ಭಟ್ ಅವರ ಕೊಡುಗೆ ತುಂಬಾ ಸ್ಮರಣೀಯವಾದುದೇ ಆಗಿದೆ. ಯೂನಿಯನ್ ಮತ್ತು ಜಿಮಖಾನಾ ವಿಭಾಗಗಳ ಕಾರ್ಯಕ್ಷೇತ್ರಗಳ ಆಚೆಗೂ ಚಟುವಟಿಕೆಗಳನ್ನು ವಿಸ್ತರಿಸಬೇಕೆಂದು ಕೇ.ಜಿ.ನಾಯ್ಕರು ಸದಾ ಚಿಂತನೆ ನಡೆಸುತ್ತಿದ್ದರು. ಸಹ ಅಧ್ಯಾಪಕರೊಡನೆ ಚರ್ಚಿಸಿ ಸೂಕ್ತ ಸಲಹೆಗಳು ದೊರೆತಾಗ ಪರಿಪೂರ್ಣ ಸಹಕಾರ ನೀಡಿ ಕಾರ್ಯರೂಪಕ್ಕೆ ತರುತ್ತಿದ್ದರು. ಅದರ ಫಲಶೃತಿಯಾಗಿ ಹುಟ್ಟಿಕೊಂಡ ಮಹತ್ವದ ವೇದಿಕೆಗಳೆಂದರೆ ‘ಅಭಿನಯ ಮಂಟಪ’, ‘ಫೋಟೋ ಕ್ಲಬ್’ ಮತ್ತು ‘ಲೇಡಿಸ್ ಫೋರಂ’. ವಿದ್ಯಾರ್ಥಿನಿಯರ ವೈಯಕ್ತಿಕ ಸಮಸ್ಯೆಗಳು ಮತ್ತು ಯೋಗಕ್ಷೇಮದತ್ತ ಗಮನ ಹರಿಸಲು ಸೂಕ್ತ ವೇದಿಕೆಯಾದದ್ದು ‘ಲೇಡಿಸ್ ಫೋರಂ’. ಅದನ್ನು ಸ್ಥಾಪಿಸುವುದರೊಂದಿಗೆ ವಿದ್ಯಾರ್ಥಿನಿಯರ ಮುಕ್ತ ಮಾತುಕತೆಗೆ ಅವಕಾಶ ಕಲ್ಪಿಸಿದ್ದು ಇದರ ಜವಾಬ್ದಾರಿಯನ್ನು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಶಾಂತಾ ಥಾಮಸ್ ಬಹು ದೀರ್ಘ ಕಾಲ ಯಶಸ್ವಿಯಾಗಿ ನಿರ್ವಹಿಸಿದರು. ವಿದ್ಯಾರ್ಥಿಗಳಲ್ಲಿ ಫೋಟೋಗ್ರಾಫಿಯ ಅರಿವು ಮತ್ತು ಆಸಕ್ತಿಯನ್ನು ಬೆಳೆಸುವುದಕ್ಕಾಗಿಯೇ ಕಾಲೇಜಿನಲ್ಲಿ ‘ಫೋಟೋ ಕ್ಲಬ್’ ಒಂದನ್ನು ಸ್ಥಾಪಿಸಲಾಯಿತು. ಈ ಮಹತ್ವದ ಸಲಹೆ ಮತ್ತು ಯೋಜನೆಯನ್ನು ಪ್ರಾಚಾರ್ಯರ ಗಮನಕ್ಕೆ ತಂದ ರಸಾಯನ ಶಾಸ್ತ್ರ ಅಧ್ಯಾಪಕ ಪ್ರೊ.ವಿ.ಆರ್. ವೇರ್ಣೇಕರ್ ಮತ್ತು ಸಸ್ಯಶಾಸ್ತ್ರ ವಿಭಾಗದ ಪ್ರೊ.ಆರ್.ಬಿ ನಾಯ್ಕ ಎಂಬ ಅಧ್ಯಾಪಕರಿಗೆ ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಟ್ಟು ಹತ್ತಾರು ವರ್ಷಗಳವರೆಗೆ ನೂರಾರು ವಿದ್ಯಾರ್ಥಿಗಳು ಫೋಟೋಗ್ರಾಪಿಯ ಕಲಿಕೆಯ ಪ್ರಯೋಜನ ಪಡೆಯುವ ಅವಕಾಶವನ್ನು ಪ್ರಾಚಾರ್ಯ ಕೇ.ಜಿ. ನಾಯ್ಕ ಪೂರೈಸಿದರು. ಯೂನಿಯನ್ ವಿಭಾಗದ ‘ಕಲಾಮಂಡಲ’ದ ಅಧ್ಯಕ್ಷರಾಗಿ ಬಹಳಷ್ಟು ವರ್ಷ ಕಾರ್ಯನಿರ್ವಹಿಸಿದ್ದ ಪ್ರೊ. ಮೋಹನ ಹಬ್ಬು ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನ ಮತ್ತು ನಾಟಕ ಕಲಿಕೆಯ ಅವಕಾಶ ಕಲ್ಪಿಸಲು ಒಂದು ಪ್ರತ್ಯೇಕ ವೇದಿಕೆಯ ಅವಶ್ಯಕತೆಯಿರುವುದನ್ನು ನಮ್ಮ ಪ್ರಾಚಾರ್ಯರ ಗಮನಕ್ಕೆ ತಂದರು. ಅದಕ್ಕೆ ಒಪ್ಪಿಕೊಂಡ ಪ್ರಾಚಾರ್ಯರು ಅಗತ್ಯವಾದ ಎಲ್ಲ ನೆರವನ್ನೂ ನೀಡುವ ಭರವಸೆಯೊಂದಿಗೆ ವೇದಿಕೆಗೆ ಪ್ರೊ.ಹಬ್ಬು ಅವರೇ ಸೂಚಿಸಿದ “ಅಭಿನಯ ಮಂಟಪ” ಎಂಬ ಹೆಸರಿನೊಂದಿಗೆ ಉದ್ಘಾಟನೆಯನ್ನು ನೆರವೇರಿಸಿ ಕಾರ್ಯಾರಂಬ ಮಾಡಿಸಿದ್ದರು. ಆರಂಭದ ಎರಡು ವರ್ಷಗಳ ಕಾಲ ಇಂಗ್ಲೀಷ್ ವಿಭಾಗದ ಅಧ್ಯಾಪಕರಾದ ಎಸ್.ಎಸ್.ನಾಯಕ ವೇದಿಕೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರೆ, ಮುಂದಿನ ಹಲವು ವರ್ಷಗಳ ಕಾಲ ನಾನು “ಅಭಿನಯ ಮಂಟಪದ”ದ ಜವಾಬ್ದಾರಿ ವಹಿಸಿಕೊಂಡಿದ್ದೆ. ಯಕ್ಷಗಾನ ಕಲಿಕೆಗೆ ಅಗತ್ಯವಾದ ಹಿಮ್ಮೇಳದ ವಾದ್ಯಪರಿಕರಗಳಾದ ಮೃದಂಗ, ಚಂಡೆ, ಶೃತಿ ಪೆಟ್ಟಿಗೆ, ತಾಳ ಇತ್ಯಾದಿಗಳನ್ನೆಲ್ಲ ಪೂರೈಸಿಕೊಟ್ಟ ನಮ್ಮ ಪ್ರಾಚಾರ್ಯರು ನಿರ್ದಿಷ್ಟ ದಿನಾಂಕಗಳಲ್ಲಿ ಕಲಿಕೆಯ ವೇಳಾಪತ್ರಿಕೆಯನ್ನು ಸಿದ್ಧಪಡಿಸುವಂತೆ ಮಾಡಿ ತರಬೇತಿ ನೀಡುವ ಭಾಗವತ, ಮದ್ದಳೆಗಾರರ ಸಂಭಾವನೆಗೂ ಆರ್ಥಿಕ ನೆರವನ್ನು ನಿರಂತರವಾಗಿ ಒದಗಿಸಿಕೊಟ್ಟಿದ್ದರು. ಆರಂಭದ ದಿನಗಳಲ್ಲಿ ಹಿರಿಯರಾದ ಬುದ್ದು ಭಾಗ್ವತ ವಂದಿಗೆ, ಬಾಬಣ್ಣ ಮಾಸ್ತರ ವಂದಿಗೆ, ಕೃಷ್ಣ ಮಾಸ್ಕೇರಿ ಮುಂತಾದ ಮಹನೀಯರು ಕಾಲೇಜಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಕೆಯ ತರಬೇತಿ ನೀಡಿದ್ದರು. ಇಂದು ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ ವೃತ್ತಿಯಲ್ಲಿದ್ದೂ ಹವ್ಯಾಸಿ ಯಕ್ಷಗಾನ ಭಾಗವತರೆಂದು ಹೆಸರು ಮಾಡಿರುವ ಬೊಮ್ಮಯ್ಯ ಗಾಂವಕರ ಹಿತ್ತಲಮಕ್ಕಿ ಅವರು ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಇದೇ ಅಭಿನಯ ಮಂಟಪದ ಸದಸ್ಯರಾಗಿ ಮಾರ್ಗದರ್ಶನ ಪಡೆದಿದ್ದರು. ವಿದ್ಯಾರ್ಥಿಯಾಗಿರುವಾಗಲೇ ಗೆಳೆಯರ ಬಳಗದೊಂದಿಗೆ ಯಕ್ಷಗಾನ ಪ್ರದರ್ಶನ ಏರ್ಪಡಿಸುತ್ತಿದ್ದರು. ವಿದ್ಯಾರ್ಥಿ ಭಾಗವತರಾಗಿಯೇ ಬೊಮ್ಮಯ್ಯ ಗಾಂವಕರರು ಕಾಲೇಜಿನಲ್ಲಿ ‘ತಾಳಮದ್ದಲೆ’ ಕಾರ್ಯಕ್ರಮವೊಂದನ್ನು ಸಂಘಟಿಸಿ “ಭೀಷ್ಮ ವಿಜಯ” ಪ್ರಸಂಗವನ್ನು ಸಾದರಪಡಿಸಿದ್ದರು. ಈ ತಾಳಮದ್ದಲೆ ಪ್ರದರ್ಶನದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರೊ. ಕೇ.ವಿ.ನಾಯಕ ಡಾ. ಶ್ರೀಪಾದ ಶೆಟ್ಟಿ ಮತ್ತು ನಾನು ಅರ್ಥಧಾರಿಗಳಾಗಿ ಭಾಗವಹಿಸಿದ್ದೆವು. ಬೊಮ್ಮಯ್ಯ ಗಾಂವಕರ ತನ್ನ ಗೆಳೆಯರ ಬಳಗದೊಂದಿಗೆ ಸಾದರ ಪಡಿಸಿದ “ರುಕ್ಮಿಣೀ ಸ್ವಯಂವರ” ಎಂಬ ಯಕ್ಷಗಾನ ಪ್ರದರ್ಶನ ಬಹುಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇಂದು ವೃತ್ತಿಯಿಂದ ಪ್ರಸಿದ್ಧ ನ್ಯಾಯವಾದಿಯಾಗಿ, ಯಕ್ಷಗಾನದ ಹವ್ಯಾಸಿ ಕಲಾವಿದರಾಗಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ ಕಾರವಾರದ ನಾಗರಾಜ ನಾಯಕ ನಮ್ಮ ಕಾಲೇಜಿನ ‘ಅಭಿನಯ ಮಂಟಪ’ದ ಸದಸ್ಯರಾಗಿದ್ದರು ಎಂಬುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ ಗೆಳೆಯರೊಂದಿಗೆ ಕಾಲೇಜಿನಲ್ಲಿ ಪ್ರದರ್ಶನಗೊಂಡ ‘ಲವ-ಕುಶ’ ಪ್ರಸಂಗದ ಕುಶನ ಪಾತ್ರನಿರ್ವಹಣೆಯಲ್ಲಿ ನಾಗರಾಜ ನಾಯಕ ತೋರಿದ ಕಲಾವಂತಿಕೆಯು ಬಹು ಜನರ ಮೆಚ್ಚುಗೆ ಗಳಿಸಿದ್ದು ಒಂದು ಸುಂದರ ನೆನಪಾಗಿದೆ. ಸೂರ್ವೆಯ ಶಿಕ್ಷಕ ರಾಜೇಶ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಹೊಸ್ಕೇರಿ ಹೊನ್ನಪ್ಪ ನಾಯಕ, ಶಿಕ್ಷಕರಾಗಿರುವ ಶೀಳ್ಯ ರಮಾನಂದ ನಾಯಕ, ನಿತೀಶ ನಾಯಕ ಮುಂತಾದವರೆಲ್ಲ ಯಕ್ಷರಂಗದಲ್ಲಿ ಹೆಸರು ಮಾಡಿರುವುದಕ್ಕೆ ಕಾಲೇಜಿನ ‘ಅಭಿನಯ ಮಂಟಪ’ ಮಹತ್ವದ ಕೊಡುಗೆ ನೀಡಿದೆ ಎಂದು ನಾನು ಭಾವಿಸಿದ್ದೇನೆ. ಅಂದಿನ ದಿನಗಳಲ್ಲಿ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನವೆಂದರೆ ಎರಡು ದಿನಗಳ ಉತ್ಸವವೇ ಆಗಿರುತ್ತಿತ್ತು. ಮೊದಲ ದಿನ ರಾಜ್ಯಮಟ್ಟದ ಖ್ಯಾತ ಸಾಹಿತಿಗಳು ಮುಖ್ಯ ಅಥಿತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ನೀಡುವ ಉಪನ್ಯಾಸ, (ಪಿ.ಲಂಕೇಶ್, ಆಲನಹಳ್ಳಿ ಕೃಷ್ಣ, ಬೀಚಿ, ಶ್ರೀರಂಗ, ವಿ.ಕೃ.ಗೋಕಾಕ್ ಮುಂತಾದವರು) ವಿದ್ಯಾರ್ಥಿಗಳ ಯೂನಿಯನ್/ಜಿಮಖಾನಾ ಪ್ರಶಸ್ತಿಗಳು, ಮೆರಿಟ್ ಪ್ರಶಸ್ತಿ ಪತ್ರಗಳ ವಿತರಣೆ, ಕೊನೆಯಲ್ಲಿ ಕಾಲೇಜಿನ ಕಲಾಮಂಡಲ ಸಾದರಪಡಿಸುವ ಮನರಂಜನೆ ಕಾರ್ಯಕ್ರಮಗಳು ಇರುತ್ತಿದ್ದವು. ಎರಡನೆಯ ದಿನದ ರಾತ್ರಿಯಿಡೀ ಅಭಿನಯ ಮಂಟಪದ ಕಲಾವಿದರಿಂದ ನಾಟಕ ಮತ್ತು ಯಕ್ಷಗಾನ ಪ್ರದರ್ಶನಗಳು ಇರುತ್ತಿದ್ದವು. ರಾಜೇಂದ್ರ ನಾಯಕ ಸಗಡಗೇರಿ, ಮನೋಹರ ನಾಯಕ ಜಮಗೋಡ, ತೇಜಸ್ವಿ ನಾಯಕ, ಗೋಕರ್ಣ, ಪೂರ್ಣಿಮಾ ಗಾಂವಕರ, ವಿಶ್ವಭಾರತಿ ನಾಯಕ, ದಾಮೋದರ ನಾಯ್ಕ ಮುಂತಾದ ವಿದ್ಯಾರ್ಥಿ ಕಲಾವಿದರು ನಾಟಕಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಅಧ್ಯಾಪಕರಲ್ಲಿ ಪ್ರೊ. ಹಬ್ಬು, ದಫೇದಾರ, ಎಲ್.ಎನ್. ನಾಯ್ಕ ಮತ್ತು ನಾನು ಪಾತ್ರಧಾರಿಗಳಾಗಿ ವಿದ್ಯಾರ್ಥಿಗಳ ಜೊತೆ ಸೇರುತ್ತಿದ್ದೆವು. ಅಂದು ನಾವು ಪ್ರದರ್ಶಿಸಿದ ‘ಜಾತ್ರೆ’ ‘ಕಂಬನಿ’ ಮುಂತಾದ ನಾಟಕಗಳು ನಮ್ಮೆಲ್ಲರಿಗೂ ಒಳ್ಳೆಯ ಹೆಸರು ತಂದುಕೊಟ್ಟಿದ್ದವು. ೧೯೬೬ ರಿಂದ ಆರಂಭಿಸಿ ಪ್ರಾಚಾರ್ಯ ಕೇ.ಜಿ.ನಾಯ್ಕರು ನಿವೃತ್ತಿ ಹೊಂದಿದ ೧೯೯೧ ರವರೆಗಿನ ಕಾಲಾವಧಿಯಲ್ಲಿ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳೂ ನಿರಂತರವಾಗಿ ನಡೆಯುವಂತೆ ಎಲ್ಲರೂ ಸಹಕಾರ ನೀಡಿ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ತದನಂತರದ ದಿನಗಳಲ್ಲಿ ಈ ಮಹತ್ವದ ವೇದಿಕೆಗಳಲ್ಲಿಯೂ ಕಟ್ಟುನಿಟ್ಟಿನ ಕಾರ್ಯಕ್ರಮ ಸಂಘಟನೆ ನಡೆಯಲಿಲ್ಲ. ಕಾಲಕ್ರಮೇಣ ನಾವೆಲ್ಲರಿದ್ದೂ ನಮ್ಮ ಕಣ್ಣೆದುರೇ ಈ ಮಹತ್ವದ ವೇದಿಕೆಗಳು ನಿಷ್ಕಿçಯವಾದದ್ದು ಒಂದು ದುರಂತವೆಂದೇ ಹೇಳಬೇಕು. ಏನಿದ್ದರೂ ಪದವಿ ಮಹಾವಿದ್ಯಾಲಯದಂಥ ಸಂಸ್ಥೆಯ ಆವರಣದಲ್ಲಿ ಇಂಥ ಮಹತ್ವದ ವೇದಿಕೆಗಳು ಉದಯವಾದದ್ದು ಹಲವು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ನಮ್ಮ ನಮ್ಮ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ತುಂಬಾ ಮಹತ್ವದ ಕೊಡುಗೆ ನೀಡಿದೆ ಎಂಬುದರಲ್ಲಿ ಯಾವುದೇ
ಅಂಕಣ ಬರಹ ‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ. ಸಾಧಕಿಯರ ಯಶೋಗಾಥೆ ಸಮಾಜ ಸೇವಕಿ ಮತ್ತು ವೈದ್ಯೆ ರುಕ್ಮಾಬಾಯಿ (೧೮೬೪-೧೯೫೫) ವಸಾಹಾತುಶಾಹಿ ಭಾರತದ ವೈದ್ಯೆರಾಗಿದ್ದ ರುಕ್ಮಾಬಾಯಿಯವರು ೨೨ ನವೆಂಬರ್ ೧೮೬೪ ರಲ್ಲಿ ಜನಿಸಿದರು. ಇವರ ತಂದೆ ಜನಾರ್ಧನ್ ಪಾಂಡುರಂಗ ತಾಯಿ ಜಯಂತಿಬಾಯಿ. ಇವರು ಮರಾಠಿ ಕುಟುಂಬದವರು. ರುಕ್ಮಾಬಾಯಿಯು ಎರಡು ವರ್ಷದವಳಿರುವಾಗಲೇ ತಂದೆಯನ್ನು ಕಳೆದುಕೊಂಡರು. ಬಡಿಗ/ ಸುತಾರ ಸಮುದಾಯದಲ್ಲಿ ವಿಧವೆಯರ ಮರುಮದುವೆಗೆ ಅವಕಾಶ ಇರುವುದರಿಂದ ರುಕ್ಮಾಬಾಯಿಯ ತಾಯಿಯೂ, ಬಾಂಬೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಖ್ಯಾತ ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ಆಗಿದ್ದ ಡಾ|| ಸಖಾರಾಮ್ ಅರ್ಜುನ ಅವರನ್ನು ಮರು ವಿವಾಹವಾದರು. ಇವರ ತಾಯಿಯು ಕೂಡ ಬಹಳ ದಿನಗಳವರೆಗೆ ಬದುಕುಳಿಯಲಿಲ್ಲ. ರುಕ್ಮಾಬಾಯಿಯು ೧೭ ವರ್ಷದವಳಿದ್ದಾಗ ತಾಯಿಯನ್ನು ಕೆಳೆದುಕೊಂಡರು. ೧೧ ವರ್ಷದ ರುಕ್ಮಾಬಾಯಿಯು ತನ್ನ ಮಲತಂದೆಯ ಸೋದರ ಸಂಬಂಧಿ ೧೯ ವರ್ಷದ ದಾದಾಜಿ ಭಿಕಾಜಿಯವರನ್ನು ಮದುವೆಯಾದರು. ಚಿಕ್ಕವರಾಗಿರುವುದರಿಂದ ಮದುವೆಯ ಬಳಿಕ ತಂದೆ-ತಾಯಿಯ ಮನೆಯಲ್ಲಿಯೇ ಉಳಿಯುತ್ತಾರೆ. ಹಾಗೆಯೇ ಇವರ ಪತಿಯೂ ಕೂಡ ಮನೆಅಳಿಯರಾಗುತ್ತಾರೆ. ಆ ಸಮಯದಲ್ಲಿ ಇಬ್ಬರೂ ಶಿಕ್ಷಣವನ್ನು ಸರಿಯಾದ ರೀತಿಯಲ್ಲಿ ಪಡೆದು, ಒಳ್ಳೆಯ ಮನುಷ್ಯರಾಗಿ ಬಾಳಳು ತಂದೆ ತಾಯಿಗಳು ಮಾರ್ಗದರ್ಶನ ನೀಡುತ್ತಾರೆ. ರುಕ್ಮಾಬಾಯಿಯವರು ಮದುವೆಯಾಗಿ ಆರು ತಿಂಗಳಲ್ಲಿ ಋತುಮತಿಯಾಗುತ್ತಾರೆ. ಆಗ ಗಂಡನ ಮನೆಗೆ ಕಳುಹಿಸಿಕೊಡಬೇಕೆಂದು ಗಂಡನ ಕುಟುಂಬದವರು ಒತ್ತಾಯಿಸುತ್ತಾರೆ. ಮಗಳು ಚಿಕ್ಕವಳಾಗಿರುವುದರಿಂದ ಗಂಡನ ಮನೆಗೆ ಕಳುಹಿಸುವುದನ್ನು ಸಖಾರಾಮ್ ರವರು ಒಪ್ಪುವುದಿಲ್ಲ. ರುಕ್ಮಾಬಾಯಿ ಪತಿ ದಾದಾಜಿ ಭಿಕಾಜಿಯವರು ೨೦ ವರ್ಷದವರಿದ್ದಾಗ ಅವರ ತಾಯಿ ತೀರಿಕೊಂಡರು. ರುಕ್ಮಾಬಾಯಿಯ ಕುಟುಂಬದವರು ಭಿಕಾಜಿಯವರನ್ನು ಶಾಲೆಗೆ ಸೇರಿಸಲು ಮುಂದಾದರು. ಆದರೆ ದಾದಾಜಿ ಭಿಕಾಜಿಯವರು ಕಾಲೇಜು ಮಟ್ಟದಲ್ಲಿ ಇರಬೇಕಾದ ಸಮಯದಲ್ಲಿ ಅವರು ಆರನೇ ತರಗತಿಗೆ ಹೋಗಬೇಕಾಗಿತ್ತು. ಹಾಗಾಗಿ ಭಿಕಾಜಿಯವರು ಓದಲು ನಿರಾಕರಿಸಿ ಅತ್ತೆ ಮಾವನ ಮನೆ ಬಿಟ್ಟು ಬೇರೆಯವರ ಮನೆಯಲ್ಲಿ ವಾಸಿಸಲು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲದೇ ಭಿಕಾಜಿಯವರು ರುಕ್ಮಾಬಾಯಿಯವರನ್ನು ತಮ್ಮೊಂದಿಗೆ ಬಂದು ವಾಸಿಸಲು ಒತ್ತಾಯಿಸಿತ್ತಾರೆ. ಆಗ ರುಕ್ಮಾಬಾಯಿಯವರು ಗಂಡ ನೊಂದಿಗೆ ಹೋಗಲು ನಿರಾಕರಿಸಿದ ನಿರ್ಣಯಕ್ಕೆ ಅವರ ಮಲತಂದೆಯವರು ಕೂಡ ಬೆಂಬಲಿಸಿದರು. ಪತಿ ದಾದಾಜಿ ಭಿಕಾಜಿಯವರ ವಿರುದ್ಧವಾಗಿ ಅದೇ ವರ್ಷ ರುಕ್ಮಾಬಾಯಿಯವರು ಚರ್ಚ್ಮಿಷನ್ ಗ್ರಂಥಾಲಯದಿಂದ ಉಚಿತವಾಗಿ ಗ್ರಂಥಗಳನ್ನು ಪಡೆದುಕೊಂಡು ಮನೆಯಲ್ಲಿಯೇ ಅಧ್ಯಯನ ಮಾಡಲು ತೊಡಗುತ್ತಾರೆ. ತನ್ನ ತಂದೆಯ ಒಡನಾಟದಿಂದಾಗಿ ಅನೇಕ ಧಾರ್ಮಿಕ ಮತ್ತು ಸಮಾಜ ಸುಧಾರಕರೊಂದಿಗೆ ಸಂಪರ್ಕ ಬೆಳೆಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ವಿಷ್ಣುಶಾಸ್ತ್ರಿ ಪಂಡಿತ ಅವರೊಂದಿಗೆ ಸಂಪರ್ಕ ಬೆಳೆಸಿಕೊಂಡಾಗಲೇ ಯುರೋಪಿಯನ್ ಸ್ತ್ರೀಯರ ಮತ್ತು ಪುರುಷರ ಸುಧಾರಣಾವಾದಗಳನ್ನು ಒಪ್ಪಿಕೊಳ್ಳುತ್ತಾರೆ. ತನ್ನ ತಾಯಿಯೊಂದಿಗೆ ಇವರು ನಿಯಮಿತವಾಗಿ ಪ್ರಾರ್ಥನಾ ಸಮಾಜ ಮತ್ತು ಆರ್ಯ ಮಹಿಳಾ ಸಮಾಜ ಸಾಪ್ತಾಯಿಕ ಸಭೆಗಳಲ್ಲಿ ಭಾಗವಹಿಸಿತ್ತಿದ್ದರು. ದಾದಾಜಿ ಭಿಕಾಜಿಯವರು ಕಾಂಜುಗಲ್ ಹಕ್ಕುಗಳ ಮರುಸ್ಥಾಪನೆಗಾಗಿ ಮಾರ್ಚ್ ೧೮೮೪ರಲ್ಲಿ ಕೋರ್ಟ್ ಮೆಟ್ಟಿಲೇರಿದರು. ಭಿಕಾಜಿಯವರು ತಮ್ಮ ವಕೀಲರ ಸಹಾಯದಿಂದ ಸಖಾರಾಮ್ ಅರ್ಜುನ ಅವರಿಗೆ ಕಾನೂನು ನೋಟಿಸ್ ಕಳುಹಿಸಿ ‘ಪತ್ನಿ ರುಕ್ಮಾಬಾಯಿಯವರೊಂದಿಗೆ ತನ್ನನ್ನು ಸೇರಿಕೊಳ್ಳಲು ತಡೆಯೊಡ್ಡುತ್ತಿದ್ದಾರೆ’ ಎಂದು ಕೋರ್ಟಿಗೆ ಮೊರೆ ಹೋಗುತ್ತಾರೆ. ಅದಕ್ಕೆ ಪ್ರತಿಯಾಗಿ ಡಾ. ಸಖಾರಾಮ್ ರವರು ಕೂಡ ತಮ್ಮ ಕಾನೂನು ಸಲಹಾಗಾರರ ಸಹಾಯ ಪಡೆದು ‘ಮಗಳನ್ನು ಏಕೆ ಅಳಿಯನೊಂದಿಗೆ ಕಳುಹಿಸುತ್ತಿಲ್ಲ’ ಎಂಬುದಕ್ಕೆ ಕಾರಣಗಳನ್ನು ವಿವರವಾಗಿ ನೀಡುತ್ತಾರೆ. ಹಾಗಾಗಿ ಕಾನೂನು ಕೂಡ ಯುವತಿಯನ್ನು ಒತ್ತಾಯಿಸಲು ಬರುವುದಿಲ್ಲವೆಂದು ಹೇಳುತ್ತದೆ. ಈ ಪ್ರಕರಣದಲ್ಲಿ ಅನೇಕ ಪರ ವಿರೋಧಗಳು ಕಂಡು ಬಂದವು. ಹಿಂದೂ ಸಂಪ್ರದಾಯವಾದಿಗಳು ರುಕ್ಮಾಬಾಯಿಯವರ ಕುಟುಂಬದವರನ್ನು ಟೀಕಿಸುತ್ತಾರೆ. ಅನೇಕ ಪತ್ರಿಕೆಗಳು ಕೂಡ ಇವರ ವಿರುದ್ಧವಾಗಿ ಬರೆಯುತ್ತವೆ. ಆದರೂ ಕೂಡ ರುಕ್ಮಾಬಾಯಿಯವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಓದನ್ನು ಮುಂದುವರಿಸುತ್ತಾರೆ. ಈ ಪ್ರಕರಣವನ್ನು ೧೮೮೭ರಲ್ಲಿ ಮತ್ತೆ ನ್ಯಾಯಮೂರ್ತಿ ಫರಾನ್ ಮರುವಿಚಾರಣೆಗೆ ಕೈಗೆತ್ತಿಕೊಂಡಿತು. ಹಿಂದೂ ಕಾನೂನುಗಳ ಸಹಾಯ ಪಡೆದು ರುಕ್ಮಾಬಾಯಿಗೆ ಗಂಡನೊಂದಿಗೆ ವಾಸಿಸಲು ನಿರ್ದೇಶನವನ್ನು ನೀಡುತ್ತದೆ. ಗಂಡನ ಜೊತೆಗೆ ವಾಸಿಸಲು ನಿರಾಕರಿಸಿದರೆ ಆರು ತಿಂಗಳ ಜೈಲುಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆಂದು ಆದೇಶವನ್ನು ನೀಡುತ್ತದೆ. ಅದಕ್ಕೆ ಪ್ರತಿಯಾಗಿ ರುಕ್ಮಾಬಾಯಿಯು ಗಂಡನ ಮನೆಗೆ ಹೋಗಲು ನಿರಾಕರಿಸಿ ಜೈಲು ಶಿಕ್ಷೆಯನ್ನು ಅನುಭವಿಸಲು ಸಿದ್ಧಳಾಗುತ್ತಾಳೆ. ಈ ನಿರ್ಧಾರವು ಸಮಾಜದಲ್ಲಿ ಕೋಲಾಹಲ ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಯಿತು. ಇದೇ ಸಮಯದಲ್ಲಿ ಬಾಲಗಂಗಾಧರ ತಿಲಕ್‌ರವರು ಕೇಸರಿ ಪತ್ರಿಕೆಗೆ “ಇಂಗ್ಲೀಷ್ ಶಿಕ್ಷಣದ ಪ್ರಭಾವದಿಂದಾಗಿ ಹಿಂದೂಧರ್ಮ ಅಪಾಯದಲ್ಲಿದೆ” ಎಂದು ಬರೆದರು. ಮತ್ತೊಂದೆಡೆ ಮ್ಯಾಕ್ಸೆಮುಲ್ಲರ್‌ರವರು ‘ರುಕ್ಮಾಬಾಯಿಯ ಪ್ರಕರಣಕ್ಕೆ ಕಾನೂನು ಮಾರ್ಗವು ಪರಿಹಾರವಲ್ಲ ಮತ್ತು ಅವಳ ಶಿಕ್ಷಣವು ಕೂಡ ಅಲ್ಲ, ಅವಳು ತನ್ನದೇ ಆದ ಆಯ್ಕೆಯ ಅತ್ಯುತ್ತಮ ನ್ಯಾಯಾಧೀಶಳಾಗಿದ್ದಾಳೆಂದು’ ಬರೆಯುತ್ತಾರೆ. ರುಕ್ಮಾಬಾಯಿಯವರು ತನ್ನ ವಿವಾಹ ವಿಚ್ಚೇದನೆಗೆ ಸಂಬಂಧಿಸಿದಂತೆ ರಾಣಿ ವಿಕ್ಟೋರಿಯಾರವರ ಸಹಾಯವನ್ನು ಪಡೆಯುತ್ತಾರೆ. ೧೮೮೮ರಲ್ಲಿ ವಿವಾಹ ವಿಚ್ಛೇದನೆ ಪಡೆದ ದಾದಾಜಿ ಭಿಕಾಜಿಯವರು ಬೇರೆ ಮದುವೆಯಾಗುತ್ತಾರೆ. ರುಕ್ಮಾಬಾಯಿಯವರು ಖ್ಯಾತ ಸ್ತ್ರೀವಾದಿ ಮತ್ತು ವೈದ್ಯರಾಗಿ ಬೆಳಕಿಗೆ ಬರುತ್ತಾರೆ. ರುಕ್ಮಾಜಿಯವರ ಪ್ರಕರಣವು ಭಾರತ ಮತ್ತು ಇಂಗ್ಲೆಂಡಿನೊಳಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕುತ್ತದೆ. ಇದರ ಪರಿಣಾಮವಾಗಿ ಭಾರತದಲ್ಲಿ ೧೮೯೧ರಲ್ಲಿ “ಎಜ್‌ಆಫ್ ಕನ್‌ಸಂಟ್ ಆಕ್ಟ್”ವು ಜಾರಿಗೆ ಬರಲು ಕಾರಣವಾಯಿತು. ಬ್ರಿಟೀಷ್ ಭಾರತದಾದ್ಯಂತ ೧೦ ರಿಂದ ೧೨ ವರ್ಷಗಳಿಗೆ ವಿವಾಹ ಒಪ್ಪಿಗೆಗೆ ಅನುಮತಿಯನ್ನು ನೀಡಿತು. ಕಾಮಾ ಆಸ್ಪತ್ರೆಯಲ್ಲಿ ಡಾ. ಎಡಿತ್ ಪೆಚ್ ಎಂಬುವವರು ರುಕ್ಮಾಬಾಯಿಯನ್ನು ಪ್ರೋತ್ಸಾಹಿಸಿ, ಇವರ ಶಿಕ್ಷಣಕ್ಕಾಗಿ ಹಣ ಸಂಗ್ರಹಿಸಲು ಪ್ರಯತ್ನಿಸುತ್ತಾರೆ. ೧೮೮೯ರಲ್ಲಿ ಲಂಡನ್ ಸ್ಕೂಲ್ ಆಫ್ ಮೆಡಿಸನ್ ಫಾರ್ ವುಮೆನ್ ನಲ್ಲಿ ಅಧ್ಯಯನ ಮಾಡಲು ರುಕ್ಮಾಬಾಯಿ ಇಂಗ್ಲೆಂಡಿಗೆ ತೆರಳುತ್ತಾರೆ. ರುಕ್ಮಾಬಾಯಿ ರಕ್ಷಣಾವೇದಿಕೆಯನ್ನು ಸ್ಥಾಪಿಸಲು ಇವಾ ಮೆಕ್ಲಾರೆನ್, ವಾಲ್ಟರ್ ಮೇಕ್ಲಾರೆನ್, ಅಡಿಲೇಡ್ ಮ್ಯಾನಿಂಗ್ ಇತರರು ಸಹಕಾರ ನೀಡಿದರು. ಶಿವಾಜಿರಾವ್ ಹೇಳರ ಎಂಬುವವರು ೫೦೦ ರುಪಾಯಿಗಳ ದೇಣಿಗೆಯನ್ನು ನೀಡುತ್ತಾರೆ. ರುಕ್ಮಾಬಾಯಿಯವರು ತಮ್ಮ ಅಂತಿಮ ಪರೀಕ್ಷೆಗಾಗಿ ಎಡಿನ್‌ಬರ್ಗ್ಗೆ ತೆರಳಿ ಅಧ್ಯಯನ ಪೂರ್ಣಗೊಳಿಸಿ ೧೮೯೪ ರಲ್ಲಿ ಭಾರತಕ್ಕೆ ಬಂದ ನಂತರ ಸೂರತ್ ಆಸ್ಪತ್ರೆಯಲ್ಲಿ ಸೇರಿಕೊಳ್ಳುತ್ತಾರೆ. ೧೯೧೮ ರಲ್ಲಿ ರುಕ್ಮಾಬಾಯಿಯವರು ಮಹಿಳಾ ವೈದ್ಯಕೀಯ ಸೇವೆಗೆ ಸೇರಲು ನಿರಾಕರಿಸಿದ್ದರೂ ಈಗ ರಾಜ್ಕೋಟನಲ್ಲಿ ಮಹಿಳೆಯರಿಗಾಗಿ ರಾಜ್ಯ ಆಸ್ಪತ್ರೆಯಲ್ಲಿ ಸೇರಿಕೊಳ್ಳುತ್ತಾರೆ. ಬಾಂಬೆಯಲ್ಲಿ ೧೯೩೦ ರಲ್ಲಿ ತಮ್ಮ ಸೇವೆಯಿಂದ ನಿವೃತ್ತರಾಗುವ ಮುನ್ನ ರುಕ್ಮಾಬಾಯಿಯವರು ೩೫ ವರ್ಷಗಳ ಕಾಲ ವೈದ್ಯಕೀಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ಸಮಾಜ ಸುಧಾರಣೆಗಾಗಿ ತಮ್ಮ ಕೆಲಸವನ್ನು ಮುಂದುವರಿಸಿದರು. ರುಕ್ಮಾಬಾಯಿಯವರು ‘ಪರ್ದಾಹ ಅದರ ನಿರ್ಮೂಲನೆಯ ಅಗತ್ಯ’ ಎಂಬ ಪುಸ್ತಕವನ್ನು ಪ್ರಕಟಿಸಿದರು. ರುಕ್ಮಾಬಾಯಿಯವರು ೨೫ ಸೆಪ್ಟೆಂಬರ್ ೧೯೫೫ ರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ೯೦ ವರ್ಷ ವಯಸ್ಸಿನವರಿರುವಾಗ ನಿಧನರಾದರು. ರುಕ್ಮಾಬಾಯಿಯವರ ಜೀವನ ಕಥೆಯನ್ನು ಆಧರಿಸಿ ಅನೇಕ ಕಾದಂಬರಿಗಳು ಮತ್ತು ಚಲನಚಿತ್ರಗಳು ಮೂಡಿಬಂದಿವೆ. ೨೦೧೭ ನವೆಂಬರ್ ೨೨ ರಂದು ಗೂಗಲ್ ಇಂಡಿಯಾ ರುಕ್ಮಾಬಾಯಿಯವರ ೧೫೩ ನೇ ಹುಟ್ಟು ಹಬ್ಬದಂದು ಒಂದು ಡೂಡಲ್(ಸಾಕ್ಷ್ಯ ಚಿತ್ರವನ್ನು) ಅನ್ನು ಅರ್ಪಿಸಿತ್ತು. ******************************** ಡಾ.ಸುರೇಖಾ ಜಿ.ರಾಠೋಡ ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿದೆ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—42 ಆತ್ಮಾನುಸಂಧಾನ ಅಂಕೋಲೆಯ “ಕರ್ನಾಟಕ ಸಂಘ” ಮತ್ತು ನಾನು ೧೯೫೦ ರ ದಶಕದ ಆರಂಭದಲ್ಲಿಯೇ ಹುಟ್ಟಿ ಅಂಕೋಲೆಯ ಸಾಮಾಜಿಕ ಪರಿಸರದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆರಂಭಿಸಿದ ಅಂಕೋಲೆಯ “ಕರ್ನಾಟಕ ಸಂಘ” ವೆಂಬ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯು ನನ್ನಂಥ ಹಲವರಿಗೆ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ವೇದಿಕೆಯಾದದ್ದು ಅಂಕೋಲೆಯ ಇತಿಹಾಸದಲ್ಲಿಯೇ ಒಂದು ಅಭೂತಪೂರ್ವ ಕಾಲಾವಧಿ ಎನ್ನಬಹುದು. ೧೯೫೨ ರಲ್ಲಿ ಸ್ಥಾಪನೆಗೊಂಡು ಅಂಕೋಲೆಯ ಸಾಹಿತ್ಯ-ಕಲೆ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ ಸಹಸ್ರಾರು ಜನರ ಆಶೋತ್ತರಗಳನ್ನು ಈಡೇರಿಸುತ್ತಲೇ ಬದುಕಿಗೆ ಸಾಂಸ್ಕೃತಿಕ ಶ್ರೀಮಂತಿಕೆಯ ಮೆರುಗನ್ನು ನೀಡಿದ ಕರ್ನಾಟಕ ಸಂಘದ ಹುಟ್ಟು ಬೆಳವಣಿಗೆಯಲ್ಲಿ ಈ ನೆಲದ ಹಲವು ಮಹನೀಯರ ಕನಸು ಮತ್ತು ಪರಿಶ್ರಮಗಳಿವೆ. ಅಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಹಿರಿಯ ವಿದ್ವಾಂಸರಾದ ತೀ.ನಂ.ಶ್ರೀಕಂಠಯ್ಯನವರಿಂದ ಉದ್ಘಾಟನೆಗೊಂಡ ಕನಾಟಕ ಸಂಘದ ಮೊದಲ ಅಧ್ಯಕ್ಷರಾಗಿ ಶ್ರೀ ಸ.ಪ.ಗಾಂವಕರ, ಉಪಾಧ್ಯಕ್ಷರಾಗಿ ಶ್ರೀ ಎಸ್.ವಿ.ಪಿಕಳೆ, ಕಾರ್ಯದರ್ಶಿಯಾಗಿ ಯು. ರಾಜಗೋಪಾಲಾಚಾರ್ ಕಾರ್ಯ ನಿರ್ವಹಿಸುತ್ತ ಸಂಘಕ್ಕೆ ಭದ್ರ ಬುನಾದಿ ಹಾಕಿದರು. ಈ ಪರಂಪರೆಯ ಮುಂದುವರಿಕೆಯಾಗಿ ಸಂಘವು ಸಂಘ-ಸಂಸ್ಥೆಗಳ ನೋಂದಣಿ ನಿಯಮದಂತೆ ನೋಂದಾಯಿಸಲ್ಪಟ್ಟ ೧೯೮೪-೮೫ ನೇ ವರ್ಷದಿಂದ ವರ್ಷಾವಧಿಯ ಆಡಳಿತದಲ್ಲಿ ಪ್ರಾಚಾರ್ಯ ಕೆ.ಜಿ.ನಾಯ್ಕ, ಪತ್ರಕರ್ತ ಅಮ್ಮೆಂಬಂಳ ಆನಂದ, ಮುಖ್ಯಾಧ್ಯಾಪಕ ವಿ.ಜೇ.ನಾಯಕ ವಂದಿಗೆ, ಶಾಂತಾರಾಮ ನಾಯಕ ಹಿಚ್ಕಡ, ವಿಷ್ಣು ನಾಯ್ಕ, ಶ್ಯಾಮ ಹುದ್ದಾರ, ಕಾಳಪ್ಪ ನಾಯಕ, ಮೋಹನ ಹಬ್ಬು, ವಸಂತ ಮಹಾಲೆ ಮುಂತಾದ ಮಹನೀಯರು ಸಂಘದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತ ಸಂಘದ ಸಾಹಿತ್ಯಿಕ ಸಾಂಸ್ಕೃತಿಕ ರಥವನ್ನು “ಬೆಳ್ಳಿಹಬ್ಬ”, “ಸುವರ್ಣ ಮಹೋತ್ಸವ” ಇತ್ಯಾದಿ ಸಂಭ್ರಮಗಳ ಕಡೆಗೆ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಸತ್ಪರಂಪರೆಯಲ್ಲಿ ೧೯೯೭-೯೮, ೧೯೯೮-೯೯, ೧೯೯೯-೨೦೦೦ ಇಸ್ವಿಯ ಮೂರು ಕಾಲಾವಧಿಗೆ ಸಂಘದ ಅಧ್ಯಕ್ಷನಾಗಿ ನನ್ನ ಅಳಿಲು ಸೇವೆ ಸಲ್ಲಿಸುವ ಸುವರ್ಣಾವಕಾಶ ನನಗೆ ದೊರೆತದ್ದು ನನ್ನ ಜೀವಿತಾವಧಿಯ ಬಹುದೊಡ್ಡ ಭಾಗ್ಯವೆಂದೇ ನಾನು ಭಾವಿಸಿದ್ದೇನೆ. ಕರ್ನಾಟಕ ಸಂಘದ ಆಶ್ರಯದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಪುಸ್ತಕ ಬಿಡುಗಡೆ, ಉಪನ್ಯಾಸ, ವಿಚಾರ ಸಂಕಿರಣ, ಕವಿಗೋಷ್ಠಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತ ೧೯೮೦ ರಿಂದ ೨೦೦೦ ದ ಕಾಲಾವಧಿಯ ಎರಡು ದಶಕಗಳಲ್ಲಿ ಪಡೆದ ಹಿರಿಯ ಕವಿ-ವಿದ್ವಾಂಸರ ಒಡನಾಟ, ಮಾರ್ಗದರ್ಶನ, ವಿಚಾರಧಾರೆಗಳಿಂದ ಪ್ರೇರಣೆ ಪಡೆದು ಒಬ್ಬ ಬರಹಗಾರನಾಗಿ ನನ್ನನ್ನು ನಾನು ರೂಪಿಸಿಕೊಳ್ಳುವುದು ಸಾಧ್ಯವಾಯಿತು. ಕರ್ನಾಟಕ ಸಂಘವು ನನಗೆ ಮತ್ತು ನನ್ನಂಥ ಅನೇಕರಿಗೆ ಸಾಹಿತ್ಯಿಕ ಒಲವು ಮತ್ತು ಸೃಜನಶೀಲತೆಗೆ ಬಹು ದೀರ್ಘಕಾಲದ ಪೋಷಕಾಂಶಗಳನ್ನು ಪೂರೈಸಿದೆ. ಈ ದಿಸೆಯಲ್ಲಿ ನಾವೆಲ್ಲರೂ ಅಂಕೋಲೆಯ ಕರ್ನಾಟಕ ಸಂಘಕ್ಕೆ ಆ ಜನ್ಮ ಋಣಿಗಳಾಗಿದ್ದೇವೆ. ಕರ್ನಾಟಕ ಸಂಘದಿಂದ ಪಡೆದ ಸಾಂಸ್ಕೃತಿಕ ಪ್ರಭಾವ ಕೂಡ ನಮ್ಮ ಬದುಕಿನಲ್ಲಿ ಮಹತ್ವದ ಪರಿಣಾಮ ಬೀರಿತು. ನಾನು ಒಬ್ಬ ರಂಗ ಕಲಾವಿದನಾಗಿ ರೂಪುಗೊಳ್ಳಲು ಅಪೂರ್ವ ಅವಕಾಶ ದೊರೆಯಿತು. ೧೯೮೫ ರ ವರ್ಷಾವಧಿಯಲ್ಲಿ ಕರ್ನಾಟಕ ಸಂಘ ಏರ್ಪಡಿಸಿದ ನಾಟಕೋತ್ಸವ ಮತ್ತು ತನ್ನಿಮಿತ್ತ ನಡೆದ ರಂಗ ತರಬೇತಿ ಶಿಬಿರಗಳು ರಂಗಾಸಕ್ತರಿಗೆ ತುಂಬ ಪ್ರಯೋಜನಕಾರಿಯಾದವು. ಸಂಘದ ಹಿರಿಯ ಸದಸ್ಯರಾಗಿದ್ದ ವಿ.ಜೇ.ನಾಯಕ ವಂದಿಗೆ ಅವರು ಅಂದು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಇದ್ದ ಸಂದರ್ಭ ಅದು. ಅವರು ಅಕಾಡೆಮಿಯ ನೆರವನ್ನು ದೊರಕಿಸಿಕೊಟ್ಟು ಇಂಥ ಕಾರ್ಯಕ್ರಮ ಸಂಯೋಜನೆಗೆ ಅವಕಾಶ ಕಲ್ಪಿಸಿದ್ದರು. ಅದೇ ಕಾಲಘಟ್ಟದಲ್ಲಿ ಮೈಸೂರಿನ ‘ಶ್ರೀನಿವಾಸ’ ಎಂಬ ಯುವ ರಂಗತಜ್ಞರೊಬ್ಬರು ಅಂಕೋಲೆಗೆ ಬಂದು ‘ಬೀದಿನಾಟಕ-ಪ್ರಯೋಗ’ದ ಕುರಿತು ಇಲ್ಲಿನ ರಂಗಾಸಕ್ತರಿಗೆ ತರಬೇತಿ ನೀಡಿದರು. ಇಲ್ಲಿ ತರಬೇತಿ ಪಡೆದ ಬಹಳಷ್ಟು ಸಂಘದ ಸದಸ್ಯರು ಮುಂದಿನ ದಿನಗಳಲ್ಲಿ ಅಂಕೋಲೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಲವಾರು ಬೀದಿ ನಾಟಕಗಳನ್ನು ಪ್ರದಶಿಸಿ ಜನಜಾಗೃತಿ ಮೂಡಿಸಲು ಅವಕಾಶವಾಯಿತು. ಇದೇ ಕಾಲಾವಧಿಯಲ್ಲಿ ರಾಜ್ಯದಾದ್ಯಂತ ಚುರುಕುಗೊಂಡ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಅಂಕೋಲೆಯ ಹಲವು ಬರಹಗಾರರು ಸಕ್ರಿಯರಾದರು. ಬೀದಿ ನಾಟಕ ಪ್ರದರ್ಶನದ ಉದ್ದೇಶದಿಂದಲೇ ‘ಬಸಂತ’ ಕಲಾವಿದರ ತಂಡವೊಂದು ರೂಪುಗೊಂಡಿತು. “ಬಂಡಾಯ ಸಂಘಟನೆ ತಂಡ” ಎಂಬುದು ಅದರ ವಿಸ್ತೃತ ರೂಪ. ಈ ತಂಡದಲ್ಲಿ ನಾನು, ಹಿರಿಯರಾದ ವಿಷ್ಣು ನಾಯ್ಕ, ಮೋಹನ ಹಬ್ಬು, ಡಾ. ಶ್ರೀಪಾದ ಶೆಟ್ಟಿ, ಸದಾನಂದ ನಾಯಕ, ಕೃಷ್ಣಾ ನಾಯಕ, ಪ್ರಕಾಶ ಕಡಮೆ, ನರೇಶ ದೇಸಾಯಿ, ಶ್ಯಾಮ ಹುದ್ದಾರ, ಮಂಗೇಶ ಶೆಟ್ಟಿ, ಸುರೇಂದ್ರ ದಫೇದಾರ, ಪ್ರೊ. ನಿರಂಜನ, ಅನಂತ ನಾಯ್ಕ ಮುಂತಾದ ಕಲಾವಿದರು ತುಂಬ ಆಸಕ್ತಿಯಿಂದ ತೊಡಗಿಕೊಂಡಿದ್ದೆವು. ‘ಬಸಂತ’ ಕಲಾವಿದರ ತಂಡವು ಹಲವು ವರ್ಷಗಳವರೆಗೆ ಬಹಳಷ್ಟು ನಾಟಕಗಳನ್ನು ಪ್ರದರ್ಶಿಸುತ್ತ ಜನಪ್ರಿಯ ಬೀದಿನಾಟಕ ತಂಡವೆಂದು ಪ್ರಸಿದ್ಧಿ ಪಡೆದುಕೊಂಡಿತ್ತು. ತಂಡವು ಪ್ರದರ್ಶಿಸಿದ ಸರಾಯಿ ಸೂರಪ್ಪ, ಕತ್ತೆ ಮೋತಿ ಪ್ರಸಂಗ, ನಾಯಿಗಳು, ರೇಶನ್ ಕಾರ್ಡ್, ಒಂದು ಹನಿ ರಕ್ತ, ಸಾವಸುತ್ತ, ವಂದೇ ಮಾತರಂ ಮುಂತಾದ ನಾಟಕಗಳು ತುಂಬ ಯಶಸ್ವಿಯಾಗಿ ಪ್ರದರ್ಶನಗೊಂಡು ಕಲಾವಿದರು ಕೂಡ ಜನಪ್ರಿಯತೆ ಪಡೆಯಲು ಅವಕಾಶವಾಯಿತು. ಬೀದಿ ನಾಟಕಗಳ ಜೊತೆ ಜೊತೆಯಲ್ಲಿಯೇ ಇದೇ ಕಾಲಾವಧಿಯಲ್ಲಿ ಕರ್ನಾಟಕ ಸಂಘವು ಹಲವಾರು ರಂಗ ನಟಕಗಳನ್ನು ಪ್ರದರ್ಶಿಸಿದ್ದು ಬಹುತೇಕ ನಾಟಕಗಳಲ್ಲಿ ನಾನು ಮುಖ್ಯ ಪಾತ್ರಧಾರಿಯಾಗಿ ಅವಕಾಶ ಪಡೆದದ್ದು ಕೂಡ ಸ್ಮರಣೀಯವೆನಿಸುತ್ತದೆ. ಕರ್ನಾಟಕ ಸಂಘವು ಪ್ರದರ್ಶಿಸಿದ ‘ಜೈಸಿದ ನಾಯ್ಕ್’ ನಾಟಕದ ಸಿದ್ಧ ನಾಯ್ಕ, ಮಾರಿಕೊಂಡವರು ನಾಟಕದ ಪೊಲೀಸ್ ಅಧಿಕಾರಿ, ‘ಕಟ್ಟು’ ನಾಟಕದ ಮುಂಗೋಪಿ ಯುವಕ, ‘ಒಂದು ಕತ್ತೆಯ ಕಥೆ’ ನಾಟಕದ ನವಾಬ, ‘ಜಾತ್ರೆ’ ನಾಟಕದ ಅಧಿಕ ಬುದ್ಧಿಯ ಮಹಾರಾಜ, ‘ಇವ ನಮ್ಮವ’ ನಾಟಕದ ಕನ್ನಮಾರಿ, ಮೊದಲಾದ ಪಾತ್ರಗಳು ರಂಗ ಕಲಾವಿದನಾಗಿ ನನಗೆ ತುಂಬ ಜನಪ್ರಿಯತೆ ಮತ್ತು ಗೌರವವನ್ನು ತಂದು ಕೊಟ್ಟಿವೆ. ನಾವು ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿಸಿದ ‘ಕಟ್ಟು’ ಎಂಬ ಏಕಾಂಕ ನಾಟಕವು ಪ್ರಥಮ ಬಹುಮಾನ ಪಡೆದು ರಾಜ್ಯ ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿಯೂ ಪ್ರದಶನಗೊಳ್ಳುವ ಅವಕಾಶ ಪಡೆದುಕೊಂಡಿತ್ತು! ‘ಒಂದು ಕತ್ತೆಯ ಕಥೆ’ ನಾಟಕವು “ಏಕ-ಥಾ ಗದಾ” ಎಂಬ ಹಿಂದಿ ನಾಟಕವೊಂದರ ಕನ್ನಡ ಅನುವಾದ. ಅದನ್ನು ಪ್ರೊ. ಮೋಹನ ಹಬ್ಬು ಕನ್ನಡಕ್ಕೆ ಅನುವಾದಿಸಿ ರಂಗಪ್ರಯೋಗಕ್ಕೆ ಅನುವು ಮಾಡಿಕೊಟ್ಟು ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಇದು ಅಂಕೋಲಾ, ಕಾರವಾರ, ಮಂಚಿಕೇರಿ (ಯಲ್ಲಾಪುರ) ಭಟ್ಕಳ ಇತ್ಯಾದಿ ಜಿಲ್ಲೆಯ ಹಲವು ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತು. ಈ ಕಾಲಾವಧಿಯಲ್ಲಿ ಪ್ರೊ. ಮೋಹನ ಹಬ್ಬು ಅವರು ಬರೆದ ‘ಸಾವ ಸುತ್ತ’ ಮತ್ತು ನಾನು ರಚಿಸಿದ ‘ವಂದೇ ಮಾತರಂ’ ಎಂಬ ಎರಡು ಬೀದಿ ನಾಟಕಗಳನ್ನು ಪ್ರಕಟಿಸುವ ಮೂಲಕ ಕರ್ನಾಟಕ ಸಂಘವು ಮೊದಲ ಬಾರಿಗೆ ಪುಸ್ತಕ ಪ್ರಕಟಣೆಯ ಪ್ರಯೋಗ ಮಾಡಿದ್ದು ಮತ್ತು ಆ ಮೂಲಕ ನಮ್ಮನ್ನು ಪ್ರೋತ್ಸಾಹಿಸಿರುವುದು ಅವಿಸ್ಮರಣೀಯ ಸಂದರ್ಭವಾಗಿದೆ. ಒಟ್ಟಾರೆಯಾಗಿ ಕರ್ನಾಟಕ ಸಂಘದ ಸದಸ್ಯರಾದ ಪ್ರತಿಯೊಬ್ಬರು ಇಲ್ಲಿಯ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಿಂದ ಒಂದಲ್ಲ ಒಂದು ವಿಧದಲ್ಲಿ ಅದರ ಪ್ರಭಾವಕ್ಕೆ ಒಳಗಾಗಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಂಡಿದ್ದಾರೆ. ನನ್ನ ‘ಕಾಲೇಜು ಉಪನ್ಯಾಸಕ’ ಎಂಬ ಒಂದು ವ್ಯಕ್ತಿತ್ವಕ್ಕೆ ಕಲಾವಿದ, ಲೇಖಕ ಇತ್ಯಾದಿ ಪೂರಕವಾದ ಇನ್ನಷ್ಟು ಮುಖಗಳು ಅಭಿವ್ಯಕ್ತಗೊಂಡು ಸಾಮಾಜಿಕವಾಗಿ ನಾನು ಗುರುತಿಸಲ್ಪಡುವುದಕ್ಕೆ ಗೌರವಾರ್ಹನಾಗುವುದಕ್ಕೆ ಕರ್ನಾಟಕ ಸಂಘವು ಮಹತ್ವದ ಕೊಡುಗೆ ನೀಡಿದೆ ಎಂಬುದು ನಿಸ್ಸಂದೇಹ. ಪ್ರೀತ್ಯಾದರಗಳಿಂದಲೇ ನನ್ನನ್ನು ಸಂಘದ ಒಳಗು ಮಾಡಿಕೊಂಡ ಇಲ್ಲಿನ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ ನಾನು ಯಾವತ್ತೂ ಋಣಿಯಾಗಿರುವೆ. ಹಾಗೆಯೇ ನನ್ನ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ನಾಟಕಕಾರರಾದ ವಿಷ್ಣು ನಾಯ್ಕ, ಮೋಹನ ಹಬ್ಬು, ಚಂದ್ರಶೇಖರ ಕಂಬಾರ, ವ್ಯಾಸ ದೇಶಪಾಂಡೆ, ಎ.ಎನ್.ಮೂರ್ತಿರಾವ್ ಅವರ ಕೊಡುಗೆಯನ್ನೂ ಸ್ಮರಿಸದಿರಲಾರೆ. ನಮ್ಮ ನಾಟಕಗಳನ್ನು ನಿರ್ದೇಶಿಸಿ ನಮ್ಮ ಅಭಿನಯ ಸಾಮರ್ಥ್ಯಕ್ಕೆ ಸಾಣೆ ಹಿಡಿದ ನಿರ್ದೇಶಕರಾದ ಮೈಸೂರಿನ ಶ್ರೀನಿವಾಸ, ಹೊನ್ನಾವರದ ಡಾ. ಶ್ರೀಪಾದ್ ಭಟ್, ವಿಷ್ಣು ನಾಯ್ಕ, ಮೋಹನ ಹಬ್ಬು ಮೊದಲಾದ ಹಿರಿಯರೆಲ್ಲರೂ ನನ್ನ ಕಲಾವಿದ ವ್ಯಕ್ತಿತ್ವದ ಹಿಂದಿನ ಶಕ್ತಿಗಳು ಎಂದು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುವೆ ********************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿ
ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ.
ಕೆಲವೊಮ್ಮೆ ವೈಯಕ್ತಿಕ ದ್ವೇಷಕ್ಕೂ ಸಾಕು ಪ್ರಾಣಿಗಳು ಬಲಿಯಾಗುತ್ತವೆ. ವಿಷ ಉಣಿಸಿಯೋ, ಅಪಘಾತ ಮಾಡಿಸಿಯೋ ಕೊಲ್ಲುವುದು ಮನುಷ್ಯರಾದವರು ಮಾತ್ರ ಮಾಡಬಹುದಾದ ನೀಚ ಕ್ರಿಯೆ. ಮತ್ತೆ ಕೆಲವು ಕಡೆ ತಮಗೆ ಆಗದವರ ಮೇಲೆ ನಾಯಿಗಳನ್ನು ‘ಚೂ..’ ಬಿಟ್ಟು ಕಚ್ಚಿಸುವುದೂ ಉಂಟೆಂಬ ವಿಷಯ ಗೊತ್ತಾದಾಗ ಭಯವಾಗುತ್ತದೆ.


