ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ

ಸಾವಿಲ್ಲದಶರಣರು ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ ಮಹಿಳಾ ಸಾಹಿತ್ಯದ ಚರಿತ್ರೆ ಎಂದರೆ ಮಹಿಳೆಯರು ತಮ್ಮ ಅನುಭವಗಳು, ಸಮಾಜದ ಸ್ಥಿತಿ, ರಾಜಕೀಯ ಅಭಿಪ್ರಾಯಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ ಪಯಣವಾಗಿದ್ದು, ಇದು ಪ್ರಾಚೀನ ಕಾಲದಿಂದಲೂ ಇದ್ದು, ಅಮೇರಿಕಾದ ಕ್ರಾಂತಿಯಂತಹ ಸಂದರ್ಭಗಳಲ್ಲಿ ತೀವ್ರಗೊಂಡಿತು; ಇವರು ಮನೆ, ಸಮಾಜ ಮತ್ತು ಪ್ರಕೃತಿಯೊಂದಿಗಿನ ಸಂಬಂಧಗಳನ್ನು ಕಾದಂಬರಿ, ಕವಿತೆಗಳ ಮೂಲಕ ನಿರೂಪಿಸಿ, ಮಹಿಳೆಯರ ಸ್ಥಾನಮಾನದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ, ಇದು ಮುಖ್ಯವಾಗಿ ಸ್ತ್ರೀವಾದಿ ಚಿಂತನೆಗಳನ್ನು ಜಗತ್ತಿಗೆ ಪರಿಚಯಿಸಿದೆ.ಮಹಿಳಾಪರ ಚಿಂತನೆ ಆಲೋಚನೆಗಳು ಕಥೆ ಕಾದಂಬರಿ ಕಾವ್ಯ ಸಾಹಿತ್ಯ ರಚನೆಯಲ್ಲಿ ಮುಕ್ತವಾಗಿ ಬರೆಯಲು ಆರಂಭಿಸಿದರು ಕನ್ನಡತಿಯರು. 12 ನೆಯ ಶತಮಾನದ ಶ್ರೇಷ್ಠ ವಚನಕಾರ್ತಿಯರು ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜ ಕಟ್ಟಿದರು.ನವ್ಯ ನವೋದಯ ಪ್ರಗತಿಶೀಲ ಬಂಡಾಯ ದಲಿತ ಸಾಹಿತ್ಯ ಹೀಗೆ ಎಲ್ಲಾ ಘಟ್ಟಗಳಲ್ಲಿವಚನ ಸಾಹಿತ್ಯ ಮತ್ತು ಶರಣೆಯರ ಸಾಹಿತಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಗಳನ್ನು ಮರೆಯಲಾಗದು. ಕನ್ನಡ ಸಾಹಿತ್ಯದಲ್ಲಿಜಯದೇವಿ ತಾಯಿ ಲಿಗಾಡೆ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತು ಸಮಗ್ರ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮವಾಗಿ ದುಡಿದವರು ಶಾಂತಾದೇವಿ ಮಾಳವಾಡ ಅವರು. ಶಾಂತಾದೇವಿ ಮಾಳವಾಡ ಇವರು 1922 ಡಿಸೆಂಬರ್ 10 ರಂದು ಬೆಳಗಾವಿ ಯಲ್ಲಿ ಜನಿಸಿದರು. ತಾಯಿ ಜಯವಂತಿದೇವಿ; ತಂದೆ ಕರ್ಜಗಿ ಮುರಿಗೆಪ್ಪ ಶೆಟ್ಟರು. ತವರು ಮನೆ ಹೆಸರು ಕರ್ಜಗಿ ದಾನಮ್ಮ. ಎರಡು ವರ್ಷದವಳಿದ್ದಾಗ ತಂದೆಯನ್ನು ಹಾಗು ಹತ್ತು ವರ್ಷದವಳಿದ್ದಾಗ ತಾಯಿಯನ್ನು ಕಳೆದುಕೊಂಡ ದಾನಮ್ಮ ಅಜ್ಜಿಯ ಮಡಿಲಲ್ಲಿ ಬೆಳೆದಳು. ವನಿತಾ ವಿದ್ಯಾಲಯದಲ್ಲಿ ಹೈಸ್ಕೂಲ ಎರಡನೆಯ ತರಗತಿಯವರೆಗೆ ಅಂದರೆ ಒಂಬತ್ತನೆಯ ತರಗತಿ ಕಲಿತು, ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು. ಮದುವೆಶಾಂತಾದೇವಿ ಮಾಳವಾಡ ಅವರು ತಮ್ಮ 15 ನೆಯ ವಯಸ್ಸಿನಲ್ಲಿ1937 ನೆಯ ಇಸವಿಯಲ್ಲಿ ಪ್ರೊ. ಸ.ಸ. ಮಾಳವಾಡರ ಜೊತೆ ಮದುವೆ ಆಯಿತು. ಮುಂದೆ ತಮ್ಮ ಪತಿಯ ಒತ್ತಾಸೆಯಿಂದಾಗಿ ಶಾಂತಾದೇವಿಯವರು ಮನೆಯಲ್ಲಿಯೆ ಇಂಗ್ಲೀಷ್,ಹಿಂದಿ, ಪ್ರಾಚೀನ ಕನ್ನಡ ಸಾಹಿತ್ಯ ಹಾಗು ವಚನ ಸಾಹಿತ್ಯದ ಅಧ್ಯಯನ ಮಾಡಿದರು. 1940 ರಲ್ಲಿ ಕನ್ನಡ ಜಾಣ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಪತಿಯ ಪ್ರೋತ್ಸಾಹದಿಂದ 1938ರಲ್ಲಿ ಅಕ್ಕನ ಬಳಗ ವೆಂಬ ಮಹಿಳಾ ಸಂಘಟನೆಯನ್ನು ಹುಟ್ಟು ಹಾಕಿದರು.ಶಾಂತಾದೇವಿ ತಾಯಿಯ ಮಮತೆ ತಂದೆಯ ಪ್ರೀತಿ ಕಾಣದ ಮುಗ್ಧ ಬಾಲಕಿಸುಮಾರು ಹತ್ತು ಸಲ ಅವರಿಗೆ ಗರ್ಭಪಾತವಾಯಿತು.ಮಕ್ಕಳಿಲ್ಲದ ಕೊರಗು ಬಿಟ್ಟು ಸಂಪೂರ್ಣ ಸಾಹಿತ್ಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದರು.ಅರಿವು (ಜ್ಞಾನ, ಅರಿವು), ಆಚಾರ (ಅಭ್ಯಾಸ) ಅನುಭವ (ಆಧ್ಯಾತ್ಮಿಕ ಅನುಭವ), ಕಾಯಕ (ದೈಹಿಕ ದುಡಿಮೆಯಿಂದ ಗಳಿಸುವುದು), ಸತ್ಯ ಮತ್ತು ಪರಿಶುದ್ಧತೆಯನ್ನು ಕಾಪಾಡುವುದು, ದಾಸೋಹ (ಯಾವುದೇ ಅಹಂ’ ಇಲ್ಲದೆ ದುಡಿದವರಿಗೆ ನೀಡುವುದು ಶರಣ ಸಂಸ್ಕೃತಿಯ ತತ್ವಗಳು.ಬಾಲ್ಯದಿಂದಲೂ ಇಂತಹ ಅಪೂರ್ವ ಶರಣ ಸಂಸ್ಕೃತಿ ಮೈಗೂಡಿಸಿಕೊಂಡ ಶಾಂತಾದೇವಿ ಮುಂದೊಂದು ದಿನ ನಾಡಿನ ಅಗ್ರ ಲೇಖಕಿ ಸಾಹಿತಿ ಲೇಖಕಿಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸಾರ್ವಜನಿಕ ಸಾಮಾಜಿಕ ಸೇವೆ ಅಕ್ಕನ ಬಳಗ ಸ್ಥಾಪನೆ ( 1940)ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು (1965)ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿಯ ಸದಸ್ಯರು (1974-1978)ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರು (1979)ಧಾರವಾಡ ಆಕಾಶವಾಣಿ ಆಡಿಶನ್ ಕಮಿತಿ ಸದಸ್ಯರು(1961-1962)ಗಾಂಧಿ ಶಾಂತಿ ಪ್ರತಿಷ್ಠಾನದ ಮಹಿಳಾವಿಭಾಗದ ಕಾರ್ಯಾಧ್ಯಕ್ಷರು(1967-1970)ಕರ್ನಾಟಕ ವಿದ್ಯಾವರ್ಧಕ ಸಂಘ,ಧಾರವಾಡ ದ ಉಪಾಧ್ಯಕ್ಷರು (1974-1978)ಉತ್ತರ ಕರ್ನಾಟಕ ಲೇಖಕಿಯರ ಸಂಘ (ಹುಬ್ಬಳ್ಳಿ-ಧಾರವಾಡ) ದ ಆಜೀವ ಗೌರವಾಧ್ಯಕ್ಷರು ಸಾಹಿತ್ಯ ಕೃತಿಗಳು ಕಥಾಸಂಕಲನ ಮೊಗ್ಗೆಯ ಮಾಲೆಕುಂಕುಮ ಬಲ ಗದ್ಯ ಸಾಹಿತ್ಯ ಹಚ್ಚೇವು ಕನ್ನಡದ ದೀಪ.ಕನ್ನಡದ ತಾಯಿ.ಮಹಿಳೆಯರ ಅಲಂಕಾರಸೊಬಗಿನ ಮನೆಮಹಿಳೆಯರ ಆತ್ಮಶ್ರೀ.ರಸಾಪಾಕಸಾರ್ವಜನಿಕ ರಂಗದಲ್ಲಿ ಮಹಿಳೆ.ದಾಂಪತ್ಯಯೋಗವಧುವಿಗೆ ಉಡುಗೊರೆ.ಜನನೀ ಜನ್ಮ ಭೂಮಿಶ್ಚ.ಮಹಿಳಾ ಚೇತನ.ಸಮುಚ್ಚಯ. ಕಾದಂಬರಿಬಸವ ಪ್ರಕಾಶ.ದಾನದಾಸೋಹಿ ದಾನಮ್ಮ.ವೀರ ಶೂರರಾಣಿ ಕೆಳದಿ ಚೆನ್ನಮ್ಮ ಮಕ್ಕಳ ಸಾಹಿತ್ಯಬೆಳವಡಿ ಮಲ್ಲಮ್ಮ.ಕೆಳದಿ ಚೆನ್ನಮ್ಮ.ನಾಗಲಾಂಬಿಕೆ.ನೀಲಾಂಬಿಕೆಕುಟುಂಬ.ಬಸವಯುಗದ ಶಿವಶರಣೆಯರುಭಾರತದ ಮಾನಸಪುತ್ರಿಯರುಗಂಗಾಂಬಿಕೆಶಿವಯೋಗಿಣಿಎಣ್ಣೆ ಹೊಳೆಯ ನಂದಾದೀಪಪುರಾತನ ಶರಣರುದಾನದಾಸೋಹಿ ದಾನಮ್ಮ. ಪ್ರಶಸ್ತಿ ಗೌರವಗಳು ಜ.ಚ.ನಿ. ಪೀಠಾರೋಹಣ ಬೆಳ್ಳಿಹಬ್ಬ ‘ ಸಾಹಿತ್ಯಸುಮ ‘ ಬಂಗಾರದ ಪದಕಸಾಹಿತ್ಯ ಅಕಾಡೆಮಿ ಪ್ರಶಸ್ತಿ (1973)ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1983)ಸಾವಿತ್ರಮ್ಮ ದೇ.ಜ.ಗೌ. ಪ್ರಶಸ್ತಿ (1991)ಷಷ್ಟ್ಯಬ್ದಿ ಸಮಾರಂಭ (‘ ಪ್ರಶಾಂತ’ ಆಭಿನಂದನ ಗ್ರಂಥ ಸಮರ್ಪಣೆ:1982) 1999 ರಲ್ಲಿ ಬಾಗಲಕೋಟೆಯಲ್ಲಿ ನಡೆದ 68 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೇಷ್ಠ ಸಾಹಿತಿ ಶಾಂತಾದೇವಿ ಮಾಳವಾಡ ಅವರು 7 ಆಗಸ್ಟ್ 2005 ರಲ್ಲಿ ಬಯಲಲ್ಲಿ ಬಯಲಾದರು.ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸ್ನೇಹ ಪ್ರೀತಿ ಮತ್ತು ಆತ್ಮ ಸ್ಥೈರ್ಯದ ಸಂಕೇತವಾದ ಕನ್ನಡ ಸಾಹಿತ್ಯದ ದಿಗ್ಗಜೆ ಶಾಂತಾದೇವಿ ಮಾಳವಾಡ ಅವರು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಕೊಟ್ಟ ಕೊಡುಗೆ ಅಪಾರವಾಗಿದೆ. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

“ಸಾವಿಲ್ಲದ ಶರಣರು” ಮಾಲಿಕೆ, ಕಲ್ಯಾಣದ ಮೇರು ಲಿಂಗಸಾಧಕ ಭಾಲ್ಕಿ  ಡಾ ಶ್ರೀ ಚೆನ್ನಬಸವ ಸ್ವಾಮೀಜಿ-ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ “ಸಾವಿಲ್ಲದ ಶರಣರು” ಮಾಲಿಕೆ, ಕಲ್ಯಾಣದ ಮೇರು ಲಿಂಗಸಾಧಕ ಭಾಲ್ಕಿ  ಡಾ ಶ್ರೀ ಚೆನ್ನಬಸವ ಸ್ವಾಮೀಜಿ- ಹೈದ್ರಾಬಾದ   ಕರ್ನಾಟಕದ ಶ್ರೇಷ್ಠ ಶಿವಯೋಗ ಸಾಧಕ ಭಾಲ್ಕಿ ಡಾ ಡಾ ಶ್ರೀ ಚೆನ್ನಬಸವ ಸ್ವಾಮೀಜಿ .ರಜಾಕಾರ ಮತ್ತು ಮುಸ್ಲಿಮರ ಹಾವಳಿಗೆ ಕನ್ನಡ ಶಿಕ್ಷಣ ತತ್ತರಿಸಿ ಹೋಗಿತ್ತು ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡವನ್ನು ಕಲಿಸುವ ದಿಟ್ಟತನವನ್ನು ಪರಮ ಪೂಜ್ಯ ಡಾ ಭಾಲ್ಕಿ ಡಾ ಚೆನ್ನ ಬಸವ ಸ್ವಾಮೀಜಿಯವರು ಕೈಗೊಂಡರು ಹಿರೇಮಠ ಸಂಸ್ಥಾನ ಕನ್ನಡದ ಮಠ, ಬಸವ ತತ್ವದ ಮಠ, ಇದು ಜನತೆಯ ಮಠ, ನಮ್ಮೆಲ್ಲರ ಮಠ. ಬಸವಣ್ಣನವರನ್ನು ಹಾಸಿಕೊಂಡು, ಹೊದ್ದುಕೊಂಡಿರುವಂಥ ಮಠ. ಇವನಾರು, ಇವನಾರು? ಎಂದು  ಕೇಳದೆ ಎಲ್ಲರೂ ನಮ್ಮವರೆನ್ನುವ ಮಠ. ಬಡವರಿಗೆ, ದೀನರಿಗೆ, ದಲಿತರಿಗೆ, ಅಂಗವಿಕಲರಿಗೆ, ಅಬಲೆಯರಿಗೆ, ವಿಧವೆಯರಿಗೆ, ಅನಾಥರಿಗೆ, ಕಲಾವಿದಾರಿಗೆ ಆಶ್ರಯ ನೀಡಿರುವಂಥ ಮಠ. ಖ್ಯಾತ ಸಂಶೋಧಕರಾದ ಎಂ. ಎಂ. ಕಲಬುರ್ಗಿಯವರು “ ನಾಡಿನ ಗುರುಸ್ಥಲ ಮಠಗಳಿಗೆ  ಭಾಲ್ಕಿ ಮಠ ಮಾದರಿ ಹಾಗೂ ನಾಡಿನ ವಿರಕ್ತ ಮಠಗಳಿಗೆ ಇಳಕಲ ಮಠ ಮಾದರಿ” ಎಂದು ಬರೆದಿರುವುದು ಇಲ್ಲಿ ಸ್ಮರಿಸಬಹುದು. ಲಿಂಗೈಕ್ಯ ಡಾ|| ಚೆನ್ನಬಸವ ಪಟ್ಟದೇವರು ಹಿಂದಿನಿಂದಲೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕಲ್ಯಾಣ (ಹೈದ್ರಾಬಾದ) ಕರ್ನಾಟಕವು ಪರಕೀಯ ಆಳ್ವಿಕೆ. ಸ್ಠಳೀಯರ ಅಭಿಮಾನ ಶೂನ್ಯತೆ ಜನಮಾನಸದ ಅಸಹಕಾರ ಶೋಷಣೆಗೆ ಒಳಗಾದ ಜನಸಮುದಾಯಕ್ಕೆ ನೆರವಾಗಿ ಬಂದವರು ಡಾ.ಚೆನ್ನಬಸವ ಪಟ್ಟದೇವರು. ಬಾಲ್ಯ ಮತ್ತು ಶಿಕ್ಷಣಇವರ ಮೊದಲ ಹೆಸರು ಮಹಾರುದ್ರಪ್ಪ. ಬೀದರ ಜಿಲ್ಲೆಯ ಔರಾದ ತಾಲೂಕಿನ ಕಮಲನಗರದಲ್ಲಿ ಬುಳ್ಳಾ ಎಂಬ ವ್ಯಾಪಾರಸ್ಥ  ಮನೆತನದಲ್ಲಿ ತಂದೆ ರಾಜಪ್ಪ- ತಾಯಿ ಸಂಗಮ್ಮಎಂಬ ದಂಪತಿಗಳಿಗೆ  22 ಡಿಸೆಂಬರ್ 1890 ರಂದು  ಮಗುವಾಗಿ ಹುಟ್ಟಿದ ಇವರು ಐದು ವರ್ಷ ತುಂಬುವಾಗಲೇ ತಂದೆ-ತಾಯಿಗಳನ್ನು ಕಳೆದುಕೊಂಡು ಮಹಾ ಅನಾಥರಾದರು. ಬಾಲ್ಯದ 8 ರಿಂದ 10 ವರ್ಷಗಳವರೆಗೆ  ಭಾಲ್ಕಿ ಹಿರೇಮಠ ಶಾಖಾ ಮಠದ ಕಮಲನಗರದಲ್ಲಿ ಅನಾಥ ಬಾಲಕನಾಗಿ ಕಂತಿ ಭಿಕ್ಷೆ ಎತ್ತಿದರು. ಮಠಗಳ ದನ ಕಾಯ್ದು ಬದುಕು ಸವೆಸುತ್ತಿರುವಾಗ, ಭಾಲ್ಕಿ ಹಿರೇಮಠದ ಶ್ರೀ ಸಿದ್ಧ ಬಸವ ಸ್ವಾಮಿಗಳು ದೀಕ್ಷೆ ನೀಡಿ ಸಂಸ್ಕಾರ ಬೋಧಿಸಿ, “ ಚನ್ನಬಸವ” ನೆಂಬ ಹೆಸರಿಟ್ಟು ಸಮೀಪದ ಮುಧೋಳ ಶಿವಲಿಂಗ ಸ್ವಾಮಿಗಳ ಸೇವೆಗೆ ಕಳುಹಿಸಿದರು. ಈ ಹೊತ್ತಿಗಾಗಲೆ “ಚೆನ್ನಬಸವ” ಅಕ್ಷರ ಜ್ಜಾನ ಪಡೆದು ಮರಾಠಿ- ಕನ್ನಡ ಕಲಿಯುತ್ತಿದ್ದರು. ವಿಶೇಷವೆಂದರೇ ಕನ್ನಡ ಭಾಷೆಯನ್ನು ಮೊಡಿ ಲಿಪಿಯಲ್ಲಿ ಬರೆಯುತ್ತಿದ್ದರು ಇವರ ಅಕ್ಷರ ಪ್ರೀತಿಯನ್ನು ಕಂಡ ಶಿವಲಿಂಗ ಮಹಾಸ್ವಾಮಿಗಳು ಔರಾದ (ಬಿ) ದಲ್ಲಿನ ಕೇದಾರಗಳಂಗಳಪ್ಪನವರ ಕನ್ನಡ ಶಾಲೆಗೆ (ಜಿಲ್ಲೆಯಲ್ಲಿ ಇವರೊಬ್ಬರೆ ಕನ್ನಡ ಕಲಿಸುವವರಿದ್ದರು) ಕಳುಹಿಸಿದರು. ಚೆನ್ನಬಸವ ಇಲ್ಲಿಯೇ ಕನ್ನಡದ ಪ್ರಮುಖ ಕಾವ್ಯಗಳಾದ “ರಾಜಶೇಖರ ವಿಳಾಸ, ಶಬರಶಂಕರ ವಿಳಾಸ, ಕರ್ನಾಟಕ ಶಬ್ದ ಮಂಜರಿ, ಬಸವರಾಜ, ವಿಜಯ” ಅಭ್ಯಾಸ ಮಾಡಿದರು. ಪ್ರಸಾದ (ಊಟ)ಕ್ಕಾಗಿ ವಾರದ ಮನೆ ನಿಗದಿಗೊಂಡಿದ್ದು , ದಾಸೋಹ ಮನೆಗೆ ಮನೆಗೆ ಕಂತಿ ಭಿಕ್ಷೆ ತರಬೇಕಾಗುತ್ತಿತ್ತು. ಓದುವ ಗೀಳು ಹೊಂದಿದ್ದ ಚೆನ್ನಬಸವ ಮೈಸೂರಿನಿಂದ ಬರುತ್ತಿದ್ದ ಕನ್ನಡ ಪತ್ರಿಕೆ “ಮೈಸೂರು ಸ್ಟಾರ್” ಓದುತ್ತಿದ್ದರು. ಅದರಲ್ಲಿ ಶಿವಯೋಗ ಮಂದಿರದ ವಿಷಯಗಳು ಓದಿ ಅಲ್ಲಿಗೆ ಹೋಗುವ ಹಂಬಲವಾದರೂ ಅದಮಿಟ್ಟುಕೊಂಡರು. ಇತ್ತ  ಭಾಲ್ಕಿ ಹಿರೇಮಠಕ್ಕೆ ಹೊಸ ಪಟ್ಟಾಧ್ಯಕ್ಷರು ಬೇಕಾಗಿದ್ದರು. ಕಾಶಿರಾಯ ದೇಶಮುಖ, ಶಿವಲಿಂಗಪ್ಪ ಖಂಡ್ರೆ ಇದಕ್ಕಾಗಿ ಯೋಗ್ಯರನ್ನು, ಹುಡುಕುತ್ತಿರುವಾಗ ನಿಷ್ಠೆ, ಕರುಣೆ, ಸಚ್ಚಾರಿತ್ರ್ಯ ಮೈಗೂಡಿಸಿಕೊಂಡು ತಿಳಿವಳಿಕೆಯಿಂದ ಜ್ಜಾನಿಯಾಗಿದ್ದ ಕ್ರಿಯಾಶೀಲ ಚೆನ್ನಬಸವ ಜನಾನುರಾಗಿಯಾಗಿ ಬೆಳೆಯುತ್ತಿರುವುದನ್ನು ದೇಶಮುಖರು ಗಮನಿಸಿ ತರಬೇತಿಗಾಗಿ ಶಿವಯೋಗ ಮಂದಿರಕ್ಕೆ ಕಳುಹಿಸಿದ್ದರು. ಶಿವಯೋಗ ಮಂದಿರದಲ್ಲಿ ಹಾನಗಲ್ ಕುಮಾರ್ ಸ್ವಾಮಿಗಳ ಪ್ರೀತಿಯ ಶಿಷ್ಯನಾಗಿ, ಕನ್ನಡ ಭಾಷೆ-ಸಾಹಿತ್ಯ ವಚನಗಳ ಅಧ್ಯಯನದೊಂದಿಗೆ ಬದುಕಿನಲ್ಲಿ ಶರಣ ತತ್ವಗಳನ್ನು ರೂಢಿಸಿಕೊಂಡರು. ಇವೆಲ್ಲದರ ಮಧ್ಯ ಲೌಕಿಕ ಬದುಕಿನ ಬಗ್ಗೆ ಆಸಕ್ತಿಯೇ ತೋರಲಿಲ್ಲ. ಆದ್ದರಿಂದ ಅವರ ಬದುಕಿನ ಸ್ಥಾಯಿ “ವಿರಕ್ತ”ವಾಯಿತು ಕಾಯಕ ದಾಸೋಹ ಅವರ ಜೀವನವಾದರೆ ಲೋಕಸೇವೆ ಜೀವನದ ಗುರಿಯಾಯಿತು. ಹೀಗೆ ಶಿವಯೋಗ ಮಂದಿರ ಬದುಕಿನ ಬೆಳಕಾಯಿತು. ಗುರು ಲಿಂಗ ಜಂಗಮ ತತ್ವಗಳನ್ನು ನಾಡಿನ ತುಂಬೆಲ್ಲಾ ಪ್ರಸಾರ ಮಾಡಿ 22 ಏಪ್ರಿಲ್ 1999 ರಂದು ತಮ್ಮ ನೂರಾ ಒಂಬತ್ತನೆಯ ವಯಸ್ಸಿನಲ್ಲಿ ಬಯಲಲ್ಲಿ ಬಯಲಾದರು __________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

“ಸಾವಿಲ್ಲದ ಶರಣರು” ಮಾಲಿಕೆ, ಕಲ್ಯಾಣದ ಮೇರು ಲಿಂಗಸಾಧಕ ಭಾಲ್ಕಿ  ಡಾ ಶ್ರೀ ಚೆನ್ನಬಸವ ಸ್ವಾಮೀಜಿ-ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,ವ್ಯಾಕರಣದ ಶ್ರೀ ಬೇಗೂರು ಮಲ್ಲಪ್ಪ- ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ,ವ್ಯಾಕರಣದ ಶ್ರೀ ಬೇಗೂರು ಮಲ್ಲಪ್ಪ- ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ
ಹಿಂದುಳಿದ ಚಾಮರಾಜನಗರ ಜಿಲ್ಲೆಯಿಂದ ಬಂದು ಮೈಸೂರು ಮಹಾರಾಜರ ಪ್ರೀತಿಗೆ ಪಾತ್ರರಾಗಿ
ಶ್ರೇಷ್ಠ ವ್ಯಾಕರಣ ತಜ್ಞರೆನಿಸಿಕೊಂಡ ಬೇಗೂರ ಮಲ್ಲಪ್ಪನವರು ಲಿಂಗಾಯತ ಧರ್ಮದ ಸಾವಿಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,ವ್ಯಾಕರಣದ ಶ್ರೀ ಬೇಗೂರು ಮಲ್ಲಪ್ಪ- ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಯೋಗ ಸಾಧಕ ಹಡಪದ ರೇಚಣ್ಣ

ಅಂಕಣ ಸಂಗಾತಿ

ಸಾವಿಲ್ಲದ ಶರಣರು

ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಯೋಗ ಸಾಧಕ ಹಡಪದ ರೇಚಣ್ಣ

ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಯೋಗ ಸಾಧಕ ಹಡಪದ ರೇಚಣ್ಣ Read Post »

You cannot copy content of this page

Scroll to Top