ಅಂಕಣ ಸಂಗಾತಿ
ಭಾರತದಮಹಿಳಾ ಮುಖ್ಯಮಂತ್ರಿಗಳು
ಸುರೇಖಾ ರಾಠೋಡ್
ಬಿಹಾರದ ಮೊದಲ ಮಹಿಳಾ ಮುಖ್ಯಮಂತ್ರಿ ರಾಬ್ರಿ ದೇವಿ
(ಅಧಿಕಾರ ಅವಧಿ: ೭ವರ್ಷ ೧೯೦ ದಿನಗಳು)
ಅಂಕಣ ಸಂಗಾತಿ
ಭಾರತದಮಹಿಳಾ ಮುಖ್ಯಮಂತ್ರಿಗಳು
ಸುರೇಖಾ ರಾಠೋಡ್
ಬಿಹಾರದ ಮೊದಲ ಮಹಿಳಾ ಮುಖ್ಯಮಂತ್ರಿ ರಾಬ್ರಿ ದೇವಿ
(ಅಧಿಕಾರ ಅವಧಿ: ೭ವರ್ಷ ೧೯೦ ದಿನಗಳು)
ಅಂಕಣ ಸಂಗಾತಿ ಭಾರತದ ಮಹಿಳಾ ಮುಖ್ಯಮಂತ್ರಿಗಳು ಸುರೇಖಾ ರಾಠೋಡ್ ಪಂಜಾಬ್ ನ ಮೊದಲ ಮಹಿಳಾ ಮುಖ್ಯಮಂತ್ರಿ ರಾಜೇಂದ್ರ ಕೌರ್ ಭಟ್ಟಾಲ್(ಅಧಿಕಾರಾವಧಿ 21/11/1996 ರಿಂದ 12/02/1997, 83 ದಿನಗಳು) ಪಂಜಾಬ್ ನ ಮೊದಲ ಮಹಿಳಾ ಮುಖ್ಯಮಂತ್ರಿ ರಾಜೇಂದ್ರ ಕೌರ್ ಭಟ್ಟಾಲ್(ಅಧಿಕಾರಾವಧಿ 21/11/1996 ರಿಂದ 12/02/1997, 83 ದಿನಗಳು) ರಾಜೆಂದ್ರ ಕೌರ್ ಇವರು 30 ಸೆಪ್ಟೆಂಬರ್ 1945 ರಲ್ಲಿ ಪಂಜಾಬ್ ನ ಲಾಹೋರ್ನಲ್ಲಿ ಜನಿಸಿದರು. ಇವರ ತಂದೆ ಹೀರಾಸಿಂಗ್ ಭಟ್ಟಲ್. ತಾಯಿ ಹರ್ನಾಮ ಕೌರ್. ಇವರು ಸಂಗ್ರೂರ ಜಿಲ್ಲೆಯ ಲೆಹಗ್ರಾ ಗ್ರಾಮದಲ್ಲಿ ಚಂಚಲಿ ವಾಲಾದ ಲಾಲ್ಸಿಂಗ್ ಸಿದ್ದು ಅವರನ್ನು ವಿವಾಹವಾದರು. ಇವರಿಗೆ ಒಂದು ಗಂಡು ಒಂದು ಹೆಣ್ಣು ಮಗು. ರಾಜೇಂದ್ರ ಕೌರ್ ಅವರು 1994ರಲ್ಲಿ ಚಂಡಿಘಡದಲ್ಲಿ ರಾಜ್ಯ ಶಿಕ್ಷಣ ಸಚಿವರಾದರು. ಇವರು ಹರ್ಚರಣಸಿಂಗ್ ಅವರ ರಾಜೀನಾಮೆಯ ನಂತರ 21.11.1996 ರಂದು ಪಂಜಾಬ್ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಇವರು ಮುಖ್ಯಮಂತ್ರಿ ಆಗಿದ್ದಾಗ ಸಣ್ಣ ರೈತರಿಗೆ ಕೊಳವೆಬಾವಿ ನೀರಾವರಿಗೆ ಸಂಬಂಧಿಸಿದ ಉಚಿತ ವಿದ್ಯುತ್ ಅನುದಾನವನ್ನು ಒದಗಿಸುವ ಹಲವು ಯೋಜನೆಗಳನ್ನು ಜಾರಿಗೆ ತಂದರು. ಹಾಗೇಯೆ ಇವರು ತಮ್ಮ ಅಧಿಕಾರ ಅವಧಿಯಲ್ಲಿ ಜನಪರ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. 1997ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸೋತಿದ್ದಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ನಂತರ ಮೇ ತಿಂಗಳಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ನಂತರ ವಿಧಾನಸಭಾ ಶಾಸನಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ 12/02/ 1997 ರಿಂದ 10/10/1998 ವರೆಗೆ ಕಾರ್ಯನಿರ್ವಹಿಸಿದರು. ನಂತರ 6/01/2004 ರಿಂದ 1/03/ 2007 ರವರೆಗೆ ಪಂಜಾಬ್ ನ ಎರಡನೆಯ ಉಪಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದರು. ಇವರು 1992 ರಿಂದ ಲೆಹ್ರಾ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಗೆದ್ದಿದ್ದಾರೆ. ಸುರೇಖಾ ರಾಠೋಡ್
ಅಂಕಣ ಸಂಗಾತಿ ಭಾರತದ ಮಹಿಳಾ ಮುಖ್ಯಮಂತ್ರಿಗಳು, ಸುರೇಖಾ ರಾಾಠೋಡ್ ಮಾಯಾವತಿ ಭಾರತದ ಮೊದಲ ಮಹಿಳಾದಲಿತ ಮಂತ್ರಿ ಮಾಯಾವತಿ(ಆಡಳಿತ ಅವಧಿ ೭ ವರ್ಷ ೫ದಿನಗಳು) ಇವರು ಜನವರಿ ೧೫, ೧೯೫೬ ರಂದು ನವದೆಹಲಿಯಲ್ಲಿ ಜನಿಸಿದರು. ಇವರ ತಂದೆ ಪ್ರಭು ದಾಸ. ತಂದೆ ಅಂಚೆ ಕಛೇರಿ ಉದ್ಯೋಗಿಯಾಗಿದ್ದರು. ಇವರ ಕುಟುಂಬದಲ್ಲಿ ಗಂಡು ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ಕಳುಹಿಸಿದರೆ ಹೆಣ್ಣುಮಕ್ಕಳಿಗೆ ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. ಮಾಯಾವತಿಯವರು ೧೯೭೫ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ವಿಭಾಗದಿಂದ ಎಲ್‌ಎಲ್‌ಬಿ ಪದವಿ ಪಡೆದರು. ವಿಎಂಎಲ್‌ಜಿ ಕಾಲೇಜಿನಿಂದ ಬಿಎಡ್ ಪದವಿಯನ್ನು ಪಡೆದರು. ನಂತರ ಇವರು ಕೆಲ ದಿನಗಳವರೆ ಶಿಕ್ಷಕಿಯಾಗಿ ಕೆಲಸ ಮಾಡಿದರು. ಹಾಗೆಯೆ ಐಎಎಸ್ ಪರೀಕ್ಷೆ ತಯಾರಿ ನಡೆಸುವಾಗ ೧೯೭೭ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳ ರಾಜಕಾರಣಿಯಾದ ಕಾನ್ಶಿರಾಮ್ ಅವರು ಇವರ ಕುಟುಂಬಕ್ಕೆ ಭೇಟಿ ನೀಡಿದರು. ಅಜಯ್ ಬೋಸ್ ಅವರ ಬಯೋಗ್ರಾಫಿಯಲ್ಲಿ ಮಾಯಾವತಿಯವರಿಗೆ ರಾಮ್ ಅವರು ಒಂದು ಮಾತನ್ನು ಹೇಳುತ್ತಾರೆ ‘ನಾನು ನಿಮಗೆ ಒಂದು ದಿನ ಇಷ್ಟು ದೊಡ್ಡ ನಾಯಕಿಯಾನ್ನಾಗಿ ಮಾಡುತ್ತೇನೆಂದರೆ ನಿಮ್ಮ ಆದೇಶಗಳಿಗಾಗಿ ಒಂದಲ್ಲ ಸಾಲುಗಟ್ಟಲೇ ಐಎಎಸ್ ಅಧಿಕಾರಿಗಳು ಕಾಯುತ್ತಾರೆಂದು’. ೧೯೮೪ರಲ್ಲಿ ಕಾನ್ಶಿರಾಮ್ ಅವರು ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿದಾಗ ಮಾಯಾವತಿಯವರಿಗೆ ಸದಸ್ಯರನ್ನಾಗಿ ಸೇರಿಸಿಕೊಂಡರು. ಹೀಗೆ ಮಾಯಾವತಿಯವರು ರಾಜಕಿಯವನ್ನು ಪ್ರವೇಶ ಪಡೆದರು. ಇವರು ಮೊದಲ ಬಾರಿಗೆ ೧೯೮೯ರಲ್ಲಿ ಸಂಸತ್ತಿಗೆ ಆಯ್ಕೆಯಾದರು. ಮಾಯಾವತಿಯವರು ಡಾ. ಬಾಬಾ ಸಾಹೇಬ್ ಅಂಬೆಡ್ಕರ್ ಅವರ ವಿಚಾರಧಾರೆಗಳಿಂದ ತುಂಬಾ ಪ್ರಭಾವಿತರಾಗಿದ್ದವರು. ಇವರು ತಮ್ಮ ಅಧಿಕಾರವಧಿಯಲ್ಲಿ ದಲಿತರ ಪರವಾಗಿ ದಮನಿತರ ಪರವಾಗಿ ಅನೇಕ ಕೆಲಸಗಳನ್ನು ಮಾಡಿದರು. ಜನರು ಇವರನ್ನು ಸಹೋದರಿ(ಬೆಹೆನಜಿ) ಎಂದು ಕರೆಯುತ್ತಿದ್ದರು. ‘ಬೆಹೆನಜಿ ತುಮ್ ಸಂಘರ್ಷ ಕರೋ, ಹಮ್ ತುಮಾರೇ ಸಾಥ್ ಹೈ”(ಸಹೋದರಿ ನಿಮ್ಮ ಹೋರಾಟಗೊಂದಿಗೆ ಮುಂದುವರೆಯಿರಿ, ನಾವು ನಿಮ್ಮೊಂದಿಗೆ ಇದ್ದೇವೆ) ಎಂದು ಹೇಳುತ್ತಿದ್ದರು. ೧೯೮೪ರಲ್ಲಿ ನಡೆದ ತನ್ನ ಮೊದಲ ಚುನಾವಣಾ ಪ್ರಚಾರದಲ್ಲಿ ಬಿಎಸ್‌ಪಿ ಮಾಯಾವತಿಯವರನ್ನು ಮುಜಫರ್ ನಗರ ಜಿಲ್ಲೆಯ ಕೈರಾನಾ ಲೋಕಸಭಾ ಸ್ಥಾನಕ್ಕೆ, ೧೯೮೫ರಲ್ಲಿ ಬಿಜ್ನೋರ್‌ನಿಂದ ಮತ್ತು ೧೯೮೭ರಲ್ಲಿ ಹರಿದ್ವಾರದಿಂದ ಕಣಕ್ಕಿಳಿಸದರು. ಇವರು ೧೯೮೯ರಲ್ಲಿ ಬಿಜ್ನೋರ್‌ನಿಂದ ಪ್ರತಿನಿಧಿಯಾಗಿ ಆಯ್ಕೆಯಾದರು.ಮಾಯಾವತಿಯವರು ಮೊದಲ ಬಾರಿಗೆ ೧೯೯೪ರಲ್ಲಿ ಉತ್ತರ ಪ್ರದೇಶದ ರಾಜ್ಯಸಭೆಗೆ ಆಯ್ಕೆಯಾದರು. ೧೯೯೫ರಲ್ಲಿ ಇವರು ತಮ್ಮ ಪಕ್ಷದ ಮುಖ್ಯಸ್ಥರಾಗಿ, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದರು. ಇವರು ಅತ್ಯಂತ ಕಿರಿಯ ಮತ್ತು ಭಾರತದ ಮೊದಲ ಮಹಿಳಾ ದಲಿತ ಮುಖ್ಯಮಂತ್ರಿಯಾದರು. ೧೯೯೬ರಲ್ಲಿ ಅವರು ಎರಡು ವಿಭಿನ್ನ ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದರು. ೧೯೯೭ರಲ್ಲಿ ಎರಡನೆ ಮತ್ತು ಮೂರನೇ ಅವಧಿಗೆ ೨೦೦೨ ರಿಂದ ೨೦೦೩ವರೆಗೆ ಭಾರತೀಯ ಜನತಾ ಪಕ್ಷದೊಂದಿಗಿನ ಒಕ್ಕೂಟದಲ್ಲಿ ಮತ್ತೆ ಮುಖ್ಯ ಮಂತ್ರಿಯಾದರು. ಮತ್ತೆ ೨೦೦೭ರ ಮೇ ೧೩ರಂದು ನಾಲ್ಕನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.೨೦೦೧ರಲ್ಲಿ ರಾಮ್ ಅವರು ಪಕ್ಷದ ನಾಯಕತ್ವದ ಉತ್ತರಾಧಿಕಾರಿಯಾಗಿ ಇವರನ್ನು ಘೋಷಿಸಿದರು. ೨೦೦೩ ರಂದು ಇವರು ಮೊದಲ ಬಾರಿಗೆ ಬಿಎಸ್‌ಪಿಗೆ ರಾಷ್ಟಿçÃಯ ಅಧ್ಯಕ್ಷರಾಗಿ ಆಯ್ಕೆಯಾದರು. ೨೦೦೬ರಲ್ಲಿ ಮತ್ತೆ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾದರು. ೨೦೧೪ ರಲ್ಲಿ ಮೂರನೇ ಬಾರಿ ಮತ್ತು ೨೦೧೯ರಲ್ಲಿ ನಾಲ್ಕನೇ ಬಾರಿ ಅವಿರೋಧವಾಗಿ ಆಯ್ಕೆಯಾದರು. ೧೯೯೯ ರಿಂದ ೨೦೦೨ ೧೩ನೇ ಲೋಕಸಭೆಯಲ್ಲಿ ಅಕ್ಬರ್‌ಪುರದಿಂದ ಸಂಸದ ಸದಸ್ಯರಾದರು. ೨೦೦೭ ರಿಂದ ೨೦೧೨ವರೆಗೆ ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಎಂಎಲ್‌ಸಿಯಾಗಿ ಕಾರ್ಯನಿರ್ವಹಿಸಿದರು. ೨೦೧೨ ರಿಂದ ೨೦೧೭ರ ವರೆಗೆ ಉತ್ತರ ಪ್ರದೇಶದಿಂದ ರಾಜ್ಯಸಭೆಯ ಸಂಸತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಇವರ ಕುರಿತು ಸಾಹಿತ್ಯ ಕೂಡ ರಚನೆಯಾಗಿವೆ. ಅವುಗಳೆಂದರೆ ‘ಐರನ್ ಲೇಡಿ’, ‘ಮೇರೆ ಸಂಘರ್ಷಮೈ ಜೀವನ ಏವಂ ಬಹುಜನ ಚಳುವಳಿ ಕಾ ಸಫರ್ನಾಮಾ’, ‘ಬೆಹೆಂಜಿ’. ಇವರಿಗೆ ಅನೇಕ ಪ್ರಶಸ್ತಿಗಳು ದೊರತಿವೆ. ಅವುಗಳೆಂದರೆ ೨೦೦೩ರಲ್ಲಿ ಯುನಿಸ್ಕೋ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ರೋಟರಿ ಇಂಟರ್ನ್ಯಾಷನಲ್ ಪಾಲ್ ಹ್ಯಾರಿಸ್ ಫೆಲೋ ಪ್ರಶಸ್ತಿಯನ್ನು ನೀಡಿತು. ರಾಜರ್ಷಿ ಶಾಹು ಸ್ಮಾರಕ ಟ್ರಸ್ಟ್ನಿಂದ ರಾಜರ್ಷಿ ಶಾಹು ಪ್ರಶಸ್ತಿಯನ್ನು ನೀಡಿದೆ. ೨೦೦೮ರಲ್ಲಿ ಪೋರ್ಬ್ಸ್ ವಿಶ್ವದ ೧೦೦ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಮಾಯಾವತಿಯವರು ೫೯ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ೨೦೦೭ರಲ್ಲಿ ನ್ಯೂಸ್‌ವೀಕ್‌ನ ಉನ್ನತ ಮಹಿಳಾ ಸಾಧಕರ ಪಟ್ಟಿಯಲ್ಲಿ ಕೂಡ ಇವರು ಸ್ಥಾನ ಪಡೆದರು. ೨೦೦೭ರಲ್ಲಿ ಟೈಮ್ ನಿಯತಕಾಲಿಕೆಯು ಮಾಯಾವತಿಯವರನ್ನು ಭಾರತದ ೧೫ ಅತ್ಯಂತ ಪ್ರಭಾವಶಾಲಿ ಪಟ್ಟಿಯಲ್ಲಿ ಹೆಸರಿಸಿತು. ಸುರೇಖಾ ರಾಠೋಡ್
ಭಾರತದ ಮಹಿಳಾ ಮುಖ್ಯಮಂತ್ರಿಗಳು,ಸುರೇಖಾ ರಾಾಠೋಡ್ Read Post »
ಭಾರತದ ಮಹಿಳಾ ಮುಖ್ಯ ಮಂತ್ರಿಗಳು
ಸುರೇಖಾ ರಾಠೋಡ್
ಜೆ. ಜಯಲಲಿತಾ
(೨೪/೦೨/೧೯೪೮ ರಿಂದ೦೫/೧೨/೨೦೧೬)*
ಅವಧಿ: ೧೪ ವರ್ಷ, ೧೨೪ ದಿನಗಳು
ಭಾರತದ ಮಹಿಳಾ ಮುಖ್ಯ ಮಂತ್ರಿಗಳು Read Post »
ಅಂಕಣ ಸಂಗಾತಿ
ಭಾರತದ ಮಹಿಳಾ ಮುಖ್ಯಮಂತ್ರಿಗಳು
ಭಾರತ ದೇಶದ ಮಹಿಳಾ ಮುಖ್ಯಮಂತ್ರಿಗಳ ಬಗ್ಗೆಪರಿಚಯಿಸುವ ಸಂಗಾತಿಪತ್ರಿಕೆಯ ಮೊದಲ ಹೆಜ್ಜೆಯಾಗಿ ಈ ಸರಣಿ ಬರಹ ನಮ್ಮ ಪತ್ರಿಕೆಯ ಪ್ರಗತಿಪರ ಲೇಖಕಿ ಸುರೇಖಾ ರಾಠೋಡ್ ಅವರಿಂದ ತಿಂಗಳ ಎರಡನೆಯಮತ್ತು ನಾಲ್ಕನೆಯ ಶನಿವಾರಗಳಂದು
ಸುರೇಖಾ ರಾಠೋಡ್
ಭಾರತದ ಮೂರನೇ
ಮಹಿಳಾ ಮುಖ್ಯಮಂತ್ರಿ
ಸೈಯದಾ ಅನ್ವರ್ ತೈಮೂರ್ (೧೯೩೬-೨೦೨೦)*
(ಮುಖ್ಯಮಂತ್ರಿಯಾದ ಅವಧಿ ೬ ಡಿಸೆಂಬರ್ ೧೯೮೦-೩೦ ಜೂನ ೧೯೮೧ ೨೦೬ ದಿನಗಳು)
ಭಾರತ ದೇಶದ ಮಹಿಳಾ ಮುಖ್ಯಮಂತ್ರಿಗಳ ಬಗ್ಗೆಪರಿಚಯಿಸುವ ಸಂಗಾತಿಪತ್ರಿಕೆಯ ಮೊದಲ ಹೆಜ್ಜೆಯಾಗಿ ಈ ಸರಣಿ ಬರಹ ನಮ್ಮ ಪತ್ರಿಕೆಯ ಪ್ರಗತಿಪರ ಲೇಖಕಿ ಸುರೇಖಾ ರಾಠೋಡ್ ಅವರಿಂದ ತಿಂಗಳ ಎರಡನೆಯಮತ್ತು ನಾಲ್ಕನೆಯ ಶನಿವಾರಗಳಂದು
ಭಾರತ ದೇಶದ ಮಹಿಳಾ ಮುಖ್ಯಮಂತ್ರಿಗಳ ಬಗ್ಗೆಪರಿಚಯಿಸುವ ಸಂಗಾತಿಪತ್ರಿಕೆಯ ಮೊದಲ ಹೆಜ್ಜೆಯಾಗಿ ಈ ಸರಣಿ ಬರಹ ನಮ್ಮ ಪತ್ರಿಕೆಯ ಪ್ರಗತಿಪರ ಲೇಖಕಿ ಸುರೇಖಾ ರಾಠೋಡ್ ಅವರಿಂದ ತಿಂಗಳ ಎರಡನೆಯಮತ್ತು ನಾಲ್ಕನೆಯ ಶನಿವಾರಗಳಂದು
ಅಂಕಣ ಸಂಗಾತಿ
ಭಾರತದ ಮಹಿಳಾ ಮುಖ್ಯಮಂತ್ರಿಗಳು
ಸುರೇಖಾ ರಾಠೋಡ್
ಭಾರತ ದೇಶದ ಮೊದಲ
ಮಹಿಳಾ ಮುಖ್ಯಮಂತ್ರಿ
ಸುಚೇತಾ ಕೃಪಲಾನಿ
You cannot copy content of this page