ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಒಳಿತಿನ ಉಣಿಸಿನ ಕಥೆಗಳು…

ಪುಸ್ತಕ ಸಂಗಾತಿ ಒಳಿತಿನ ಉಣಿಸಿನ ಕಥೆಗಳು… “ಚಮತ್ಕಾರಿ ಚಾಕಲೇಟ” “ಚಮತ್ಕಾರಿ ಚಾಕಲೇಟ” ಮಕ್ಕಳ ಕಥಾಸಂಲನ.ಲೇಖಕರು: ಸೋಮು ಕುದರಿಹಾಳ.ಬೆಲೆ:100ರೂ.ಪ್ರಕಟಣೆ:2020.ಪ್ರಕಾಶಕರು: ತುಂಗಾ ಪ್ರಕಾಶನ ಚಂದಾಪುರ. ಗಂಗಾವತಿ.9035981798 ಸೋಮು ಕುದರಿಹಾಳ ಮಕ್ಕಳ ಪ್ರೀತಿಯ ಶಿಕ್ಷಕರಾಗಿ ನಮಗೆಲ್ಲಾ ಪರಿಚಿತರು. ಅವರನ್ನು ನಾನಿನ್ನೂ ಮುಖತಹ ಭೆಟ್ಟ ಆಗಿಲ್ಲವಾದರೂ ಅವರ ಬರಹ, ಅವರು ಶಾಲೆಯಲ್ಲಿ ನಡೆಸುತ್ತಿರುವ ಪ್ರಯೋಗಗಳು. ಒಂದು ಪುಟ್ಟ ಸರಕಾರಿ ಶಾಲೆಯನ್ನು ಮಕ್ಕಳ ಎಲ್ಲ ಒಳಿತಿನ ಕಡೆಗೆ ಅಣಿಗೊಳಿಸುತ್ತಿರುವ ರೀತಿ ಎಲ್ಲ ಗಮನಿಸುತ್ತ ಅವರ ಸ್ನೇಹದ ವರ್ತುಲದಲ್ಲಿ ನಾನೂ ಸೇರಿ ಹೋಗಿದ್ದೇನೆ. ಅವರು ಈಗ ಮಕ್ಕಳ ಕಥಾ ಸಂಕಲನ ತರುವ ಮೂಲಕ ತಮ್ಮ ಸ್ನೇಹದ ವರ್ತುಲ ಇನ್ನೂ ವಿಸ್ತರಿಸಿಕೊಂಡಿದ್ದಾರೆ. ಇರಲಿ. ನಾನು ಶಿಕ್ಷಕನಾಗಿ ಬಹಳ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಆಗಿದ್ದರೂ ನನ್ನ ಆಲೋಚನೆಗಳೆಲ್ಲ ಮಕ್ಕಳ ಸುತ್ತಲೇ ಅರಳಿಕೊಳ್ಳುತ್ತಿರುತ್ತವೆ. ಅದು ಯಾವುದೋ ಮಗುವಿನ ತುಂಟಾಟವನ್ನೋ, ಪ್ರತಿಭೆಯನ್ನೋ, ಮಕ್ಕಳ ಸುತ್ತಲೂ ನಾವು ನಿರ್ಮಿಸಬೇಕಾದ ಪರಿಸರವನ್ನೋ, ಅವರ ಖುಷಿ ಹೆಚ್ಚಿಸುವ ಹಂಬಲವನ್ನೋ, ಮಕ್ಕಳು ಅನುಭವಿಸುವ ನೋವನ್ನೋ ಧ್ಯಾನಿಸುತ್ತಿರುತ್ತದೆ. ಹೌದು ಶಿಕ್ಷಕರಾಗಿದ್ದವರಿಗೆ ಹಾಗೂ ಮಕ್ಕಳ ಒಳಿತನ್ನು ಅಪಾರವಾಗಿ ಪ್ರೀತಿಸುವವರಿಗೆಲ್ಲ ಹಾಗೇ ಅನಿಸುತ್ತದೆ. ಇದೆಲ್ಲಾ ಏಕೆ ಹೇಳುತ್ತಿದ್ದೇನೆ ಅಂದರೆ ಸೋಮು ಕುದರೀಹಾಳ ಅವರ ‘ಚಮತ್ಕಾರಿ ಚಾಕಲೇಟ’ ಕಥಾಸಂಕಲನ ಮಕ್ಕಳ ಸುತ್ತಲೇ ಹರಡಿಕೊಳ್ಳುತ್ತ ಒಂದಿಷ್ಟು ಮಕ್ಕಳಿಗೆ ಒಳಿತಿನ ಉಣಿಸನ್ನು ಉಣಿಸಬೇಕು ಎಂಬ ಚೌಕಟ್ಟನ್ನು ಹಾಕಿಕೊಳ್ಳುತ್ತ ಅರಳಿದ ಕಥೆಗಳು ಎಂದು ನನಗೆ ಅನಿಸುತ್ತದೆ. ಸೋಮು ಅವರು ಇಲ್ಲಿ ಮಕ್ಕಳ ಸುತ್ತಲಿನ ಹಲವಾರು ಸಂಗತಿಗಳನ್ನು ಕಥೆಯಾಗಿಸಿದ್ದಾರೆ. ಇಲ್ಲಿ ಕೆಲವು ಜಾನಪದ ಮಾದರಿಗಳಿವೆ ಹಾಗೂ ಅವನ್ನು ಇಂದಿನ ತುರ್ತಿಗೆ ಅಗತ್ಯವಾದ ಕುಲಾವಿ ಆಗಿಸುವ ಪ್ರಯತ್ನವೂ ಇದೆ. ಬಹು ಪ್ರಚಲಿತವಾದ ಕಾಗಕ್ಕ ಗುಬ್ಬಕ್ಜಕನ ಕಥೆಯನ್ನೇ ಮಕ್ಕಳು ಇಂದು ಉಪಯೋಗಿಸುವ ಮೊಬೈಲ ಬಳಕೆಗೆ ಬೇಕಾಗುವ ಡಾಟಾ ಕದಿಯುವ ಕಾಗೆಯನ್ನಾಗಿಸಿ ಗುಬ್ಬಿಗೆ ಮೋಸ ಮಾಡುವಂತೆÀ ಕಥೆಯನ್ನು ಹೆಣೆದಿದ್ದಾರೆ. ಡಾಟಾ… ಪಾಸವರ್ಡ… ಅದರ ಸಾಫಲ್ಯತೆ ಗೆಲ್ಲಾ ಮಕ್ಕಳು ವಿಸ್ತರಿಸಿ ತಿಳುವಳಿಕೆ ಮೂಡಲಿ ಎಂಬ ಹಂಬಲದೊಂದಿಗೆ ಮೋಸ ಸರಿಯಲ್ಲ ಎನ್ನುವ ತಿಳುವಳಿಕೆಯನ್ನೂ ಕಥೆ ಇಡಲಿ ಎಂಬ ಹಂಬಲವಿದೆ.   ಯಾರು ಹೆಚ್ಚು ಕಥೆಯಲ್ಲಿ ಪೆನ್ನು, ಪೆನ್ಸಿಲ್, ಕ್ರೆಯಾನ್ಸ, ರಬ್ಬರ ಮುಂತಾದ ಮಕ್ಕಳ ಬ್ಯಾಗಿನಲ್ಲಿ ಯಾವಾಗಲೂ ಇರುವ ಅವರಿಗೆ ಆಪ್ತವಾದ ವಸ್ತುಗಳ ಸಂಗತಿ ಇದೆ. ಇವೆಲ್ಲ ತಾನು ಹೆಚ್ಚು ತಾನು ಹೆಚ್ಚು ಎಂದು ಕಿತ್ತಾಡಿ ಚಲ್ಲಾಪಿಲ್ಲಿ ಆಗುವುದು ಇದರಿಂದಾಗಿ ಅವು ಕಸದ ಬುಟ್ಟಿ ಸೇರುವುದು ಇದೆ. ಎಲ್ಲರೂ ಒಂದಾಗಿರಬೇಕು, ಜಗಳವಾಡಬಾರದು ಎಂದು ಹೇಳುವ ಈ ಕಥೆ ಮಕ್ಕಳನ್ನು ಸೆಳೆಯುತ್ತದೆ. ಶಾಲೆಯಲ್ಲಿ ನಡೆಯುವ ವಾಸ್ತವ ಸಂಗತಿಯ ಎಳೆಯೊಂದನ್ನು ಹಿಡಿದು ಬರೆದಿರುವ ‘ತಿಮ್ಮನ ಸಾಲ’ ಕಥೆಯಲ್ಲಿ ತಿಮ್ಮ ಹಿರಿಯರೊಬ್ಬರಿಗೆ ಸಹಾಯ ಮಾಡುವುದಕ್ಕಾಗಿ ಕೌಜುಗ ಹಕ್ಕಿಯನ್ನು ಹಣಕ್ಕೆ ಪಡೆದು ಸಾಲಗಾರನಾಗುತ್ತಾನೆ. ಇದರಿಂದ ಮಕ್ಕಳೆಲ್ಲ ಅವನನ್ನು ಸಾಲಗಾರನೆಂದು ಹೀಯಾಳಿಸುತ್ತಾರೆ. ಆದರೆ ತಿಮ್ಮನ ನಿಜವಾದ ಉದ್ಧೇಶ ತಿಳಿದ ಶಿಕ್ಷಕರು ಅವನ ಕುರಿತಾದ ತಪ್ಪು ಅಭಿಪ್ರಾಯ ಹೋಗಲಾಡಿಸುತ್ತಾರೆ. ಹೀಗೆ ವಾಸ್ತವಕ್ಕೆ ಹತ್ತಿರವಾದ ಇಂತಹ ಕಥೆಗಳು ಮಕ್ಕಳನ್ನು ಹೆಚ್ಚುಬೇಗ ಆವರಿಸಿಕೊಳ್ಳುತ್ತವೆ ಎಂದು ನನಗೆ ಅನಿಸುತ್ತದೆ. ಅಜ್ಜ ಹೇಳುವ ಚಾಕಲೇಟ ತಿನ್ನುತ್ತ ಚೆನ್ನ ಎನ್ನುವ ಬಾಲಕ ಎಡಬಿಡದ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಗೆಲುವು ಕಾಣುವುದನ್ನು ‘ಚಮತ್ಕಾರಿ ಚಾಕಲೇಟ’ ಕಥೆÀ ಹೇಳುತ್ತದೆ. ಆತ್ಮವಿಶ್ವಾಸ ಮತ್ತು ಪ್ರಯತ್ನಗಳು ಮುಖ್ಯ ಎಂಬ ಸಂದೇಶ ನೀಡುತ್ತದೆ ಈ ಕಥೆ. ವಿಚಿತ್ರ ಸುದ್ದಿ ಹೇಳದಿದ್ದರೆ ಸಾಹುಕಾರ ಕೆಲಸದಿಂದ ತೆಗೆದುಹಾಕುತ್ತಿದ್ದ. ವಿಚಿತ್ರ ಸುದ್ದಿಯ ಮೂಲಕವೇ ಸಾಹುಕಾರ ರಾತ್ರಿ ಪೂರಾ ಸೈಕಲ್ ಹೊಡೆಯುವಂತೆ ಮಾಡಿ ಅವನಿಗೆ ಬುದ್ಧಿ ಕಲಿಸುವುದು ಒಂದು ಕಥೆಯಾದರೆ… ಅಜ್ಜ ಕೊಡುವ ಹಣದಿಂದ ಏನಾದರೂ ಖರೀದಿಸುವ ರೋಸಿ ಎನ್ನುವ ಬಾಲಕಿ ಅಂಗಡಿಯವನೊಬ್ಬನ ಮೋಸದಿಂದ ತೊಂದರೆಗೆ ಒಳಗಾಗುತ್ತಾಳೆ. ಆದರೆ ತನ್ನ ಜಾಣತನದಿಂದ ತಾನು ಕಳೆದುಕೊಂಡ ಹಣ ಪುನಹ ದೊರಕಿಸಿಕೊಳ್ಳುವ ಕಥೆ ಇನ್ನೊಂದು.  ‘ಮನಸ್ಸಿನಂತೆ ಫಲ’, ‘ಕೆಟ್ಟ ಮೇಲೆ ಬುದ್ಧಿ ಬಂತು’ ಮುಂತಾದ ಕಥೆಗಳ ತಲೆಬರಹಗಳೇ ಉದ್ಧೇಶಗಳನ್ನು ಹೇಳಿಬಿಡುತ್ತವೆಯಾದರೂ ಒಳ್ಳೆಯ ಮನಸ್ಸು, ಹಿರಿಯರ ಜಾಣ್ಮೆ ಎಲ್ಲ ನಮ್ಮ ಮುಂದೆ ಇಡುತ್ತ ಗೆಲುವು ಪಡೆಯುತ್ತವೆ. ಸೋಮು ಕುದರಿಹಾಳ ಅವರು ಮಕ್ಕಳ ಒಳಿತಿನ ವಿಸ್ತಾರಕ್ಕೆ ಯತ್ನಿಸುತ್ತ ಅವರಿಗೆ ಆಪ್ತವಾಗುವ ಕಥೆಗಳ ಮೂಲಕವೇ ಪಠ್ಯಗಳಿಗಿಂತಲೂ ವಿಸ್ತಾರದ ಉಣಿಸನ್ನು ನೀಡಲು ಪ್ರಯತ್ನಿಸಿದ್ದಾರೆ. ಇದು ಅವರ ಮೊದಲ ಪ್ರಯತ್ನ. ದೊಡ್ಡವರಿಗಾಗಿಯೂ ಬರೆಯುತ್ತ, ಒಳ್ಳೊಳ್ಳೆಯ ಕವಿತೆಗಳನ್ನು ನೀಡುತ್ತ ನಮ್ಮ ಮುಂದಿರುವ ಸೋಮು ಅವರು ಮಕ್ಕಳ ಪ್ರೀತಿಯನ್ನು ಈ ಸಂಕಲನದ ಮೂಲಕ ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ. ಈ ಪ್ರೀತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾತ್ಮಕವಾಗಿ ಅರಳುವ ಎಲ್ಲ ಸಾಧ್ಯತೆಗಳಿಗೆ ಅವರು ತೆರೆದುಕೊಳ್ಳಿಲಿ ಎಂದು ಹೇಳುತ್ತ ಒಂದು ಒಳ್ಳೆಯ ಪ್ರಯತ್ನದೊಂದಿಗೆ ನಮ್ಮೊಂದಿಗಿರುವ ಅವರಿಗೆ ಕೃತಜ್ಞತೆ ಸಲ್ಲಿಸುತ್ತ… ತಾವೆಲ್ಲರೂ ಅವರ ಕಥಾ ಸಂಕಲನ ಓದಿ ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ. ***************************************************** ತಮ್ಮಣ್ಣ ಬೀಗಾರ.

ಒಳಿತಿನ ಉಣಿಸಿನ ಕಥೆಗಳು… Read Post »

ಪುಸ್ತಕ ಸಂಗಾತಿ

ರಾಗವಿಲ್ಲದಿದ್ದರೂ ಸರಿ

ಪುಸ್ತಕ ಸಂಗಾತಿ ರಾಗವಿಲ್ಲದಿದ್ದರೂ ಸರಿ ಕೃತಿ…..ರಾಗವಿಲ್ಲದಿದ್ದರೂ ಸರಿ   ಗಜಲ್ ಸಂಕಲನ ಲೇಖಕರು.‌.‌‌‌‌ಉಮರ್ ದೇವರಮನಿ ಪ್ರಕಾಶಕರು…….ಸಮದ್ ಪ್ರಕಾಶನ  ಮಾನವಿ ಜಿ.ರಾಯಚೂರು * ಉಮರ್ ದೇವರಮನಿ ಇವರು ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಮಾನವಿ ನಗರದ ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಇಂಗ್ಲಿಷ್ ಭಾಷಾ  ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸ ಕರಾಗಿದ್ದರೂ ಪ್ರವೃತ್ತಿಯಲ್ಲಿಸಾಹಿತಿಗಳಾಗಿದ್ದಾರೆ.ಮೂರು ವರ್ಷಗಳ ಹಿಂದೆ ಕಾವ್ಯ ಕಡಲು ವಾಟ್ಸಪ್ ಗುಂಪಿನಲ್ಲಿ ಪರಿಚಯ ವಾದವರು ,ಆಗಾಗ ಗುಂಪಿನಲ್ಲಿ ಉತ್ತಮವಾದ ಗಜಲ್ಗಳನ್ನು  ಓದಲು ಹಾಕುತ್ತಿದ್ದರು.ಈಗ ಅವರು ತಮ್ಮ ಪ್ರಕಟಿತ ಮೊದಲ ಗಜಲ್ ಸಂಕಲನ *ರಾಗವಿಲ್ಲದಿದ್ದರೂ ಸರಿ * ಎಂಬ ಕೃತಿಯನ್ನು  ಓದಲು ಕಳಿಸಿಕೊಟ್ಟಿದ್ದಾರೆ.ಕನ್ನಡ ಪುಸ್ತಕ ಪ್ರಾಧಿಕಾರ, ಕನಾ೯ಟಕ ಸರಕಾರ ಯುವ ಬರಹಗಾರರ ಚೊಚ್ಚಲು ಕೃತಿ ಪ್ರಕಟಿಸಲು ಕೊಡುವ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿದೆ. ಉಮರ್ ದೇವರಮನಿ ಯವರು ಮಿತ ಭಾಷಿ,ಸಂವೇದನಾಶೀಲ ಕವಿಯಾಗಿದ್ದಾರೆ. ಗಜಲ್ ಸಾಹಿತ್ಯಕ್ಕೆ ಮೋಹಿತರಾಗಿ ಅನೇಕ ಉದು೯ ಕವಿಗಳ ಉದು೯ ಗಜಲ್ ಗಳನ್ನು ಓದಿ  ಆಳವಾಗಿ ಅದರ ಛಂದೋಬದ್ಧತೆ ಯನ್ನು ಗೇಯತೆ ಲಾಲಿತ್ಯ ತಿಳಿದುಕೊಂಡು ಕನ್ನಡ ಗಜಲ್ ಗಳ ಛಂದೋಬದ್ಧತೆ ಯನ್ನು ಅರಿತುಕೊಂಡು ಕನ್ನಡ ಗಜಲ್ಗಳನ್ನು ರಚಿಸಿ ಓದುಗರಿಗೆ ಉತ್ತಮವಾದ  ಕನ್ನಡ ಗಜಲ್ ಗಳ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅಪಿ೯ಸಿದ್ದಾರೆ. ಉಮರ್ ದೇವರಮನಿ ಯವರ “ರಾಗವಿಲ್ಲದಿದ್ದರೂ ಸರಿ” ಕನ್ನಡ ಗಜಲ್ ಸಂಕಲನಕ್ಕೆ ಖ್ಯಾತ ಹಿರಿಯ ಕವಿಯತ್ರಿ,ಗಜಲ್ ಕಾತಿ೯,ವಿಮರ್ಶಕಿ ಚಿಂತಕಿ ಹಾಗೂ ಸಹೃದಯಿ ಗಳಾದ ಮೆಹಬೂಬ್ ಬೀ ಶೇಖ ಅವರು ಸಂಕಲನಕ್ಕೆ ಮೌಲಿಕವಾದ ಮುನ್ನುಡಿ ಬರೆದಿದ್ದಾರೆ. ಮತ್ತು ಗಜಲ್ ಪರಂಪರೆ ಬಗ್ಗೆ ,ಗಜಲ್ಗಳಿಗೆ ಬಳಿಸುವ ಸಾಂಕೇತಿಕ  ಭಾಷೆಯ ಬಗ್ಗೆ ,ರೂಪಕಗಳ ಬಗ್ಗೆ, ಹಾಗೂ ಉಮರ್ ದೇವರಮನಿಯವರ “ರಾಗವಿಲ್ಲದಿದ್ದರೂ ಸರಿ” ಸಂಕಲನದ ಬಗ್ಗೆ ವಿಮಶಾ೯ತ್ಮಕವಾಗಿ ವಿವರವಾಗಿ ಬರೆದಿದ್ದಾರೆ, ಇದರಿಂದ ಸಂಕಲನದ ಮೌಲ್ಯ ಹೆಚ್ಚಾಗಿದೆ.           ಸಂಕಲನಕ್ಕೆ ಬೆನ್ನುಡಿಯನ್ನು ಹಿರಿಯ ಸಾಹಿತಿಗಳಾದ ಕೇಶವ ಮಳಗಿ ಯವರು ವಿಮಶಾ೯ತ್ಮಕ ವಾದ ಬೆನ್ನುಡಿಯನ್ನು ಬರೆದು ದೇರವಮನಿ ಯವರ ಬೆನ್ನುತಟ್ಟಿದ್ದಾರೆ.     ಶ್ರೇಷ್ಠ ಗಜಲ್ ಕಾರರಾದ”ಅಲ್ಲಮ” ಗಿರೀಶ ಜಕಾಪುರೆ ಯವರು ದೇವರಮನಿಯವರು ತಮ್ಮ ಇಷ್ಟವಾದ ಗಜಲ್ ಕಾರರೆಂದು ಸಂವೇದನಾಶೀಲ ಕವಿ ಎಂದು ಉತ್ತಮ ಗಜಲ್ ಸಾಹಿತ್ಯದ ಗಂಭೀರ ಗಜಲ್ ಕೃಷಿಕರೆಂದು ಹೇಳಿದ್ದಾರೆ.             ಹಿರಿಯ ಗಜಲ್ ಕಾರರಾದ ಡಾ.ಗೋವಿಂದ ಹೆಗಡೆ ಯವರು ಉಮರ್ ದೇವರಮನಿ ಯವರು ಗಜಲ್ನ ನಾಡಿ ಮಿಡಿತವನ್ನು ಬಲ್ಲವರಾಗಿದ್ದಾರೆಂದು,ಇದು ಇವರ ಮೊದಲ ಸಂಕಲನವಾಗಿದ್ದರೂ ಗಜಲ್ ಲೋಕದ ಹೊಸ ವಿಸ್ತಾರಗಳನ್ನು ನಮಗೆ ಕಾಣುವಂತೆ ಗಜಲ್ ಗಳನ್ನು ರಚಿಸಿದ್ದಾರೆಂದು ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ                       ಜಬೀವುಲ್ಲಾ ಎಂ ಅಸದ್ ಅವರು ಗಜಲ್ ಕಾರರು ಹಾಗೂ ಚಿತ್ರಕಲಾವಿದರೂ ಆಗಿದ್ದು ಈ ಸಂಕಲನದ ಎಲ್ಲಾ ಗಜಲ್ ಗಳಿಗೆ ಅರ್ಥ ಪೂರ್ಣವಾದ ಸುಂದರ ರೇಖಾಚಿತ್ರಗಳನ್ನು ಚಿತ್ರಿಸಿದ್ದಾರೆ, ಹಾಗೂ ಕೃತಿಯಲ್ಲಿ ಬೆರಗು ಹುಟ್ಟಿಸುವ ರೂಪಕಗಳು ,ಪರವಶಗೊಳಿಸುವ ಪ್ರತಿಮೆಗಳು ದಿವ್ಯ ಪ್ರಭೆಯ ಮೂಲಕ ಓದುಗನ ಮೈ ಮನಸ್ಸು ಗಳನ್ನು ಆವರಿಸಿ ದೈವಿಕ ಸಾಕ್ಷಾತ್ಕರವನ್ನು ಈ ಗಜಲ್ ಗಳು ಪ್ರಸಾದಿಸುತ್ತವೆಂದು,ತಮ್ಮ ಅನಿಸಿಕೆಯಲ್ಲಿ ಬರೆದಿದ್ದಾರೆ.    ಸಂಕಲನದ ಮುಖ ಪುಟವನ್ನು ರಟ್ಟಿಹಳ್ಳಿ ರಾಘವಾಂಕುರ  ಅವರು ಸೊಗಸಾಗಿ ಸಿದ್ದ ಪಡಿಸಿದ್ದಾರೆ.               ಉಮರ್ ದೇವರಮನಿ ಯವರ ವ್ಯಾಖ್ಯಾನ ದಲ್ಲಿ ಗಜಲ್ ಎಂದರೆ “ಆತ್ಮದೊಂದಗಿನ ಸಂವಾದ ,ಅದು ನನಗೆ ದಕ್ಕಿದ್ದಲ್ಲ ನನ್ನಾತ್ಮಕ್ಕೆ ದಕ್ಕಿದ್ದು,ಏಕಾಂತದಲ್ಲಿ ಪ್ರಾಥಿ೯ಸಿದ್ದು,ಸುತ್ತಲೂ ನಡೆಯುತ್ತಿರುವ ವಿದ್ಯಮಾನಗಳೊಂದಿಗಿನ  ನನ್ನ ಅಂತರಂಗದ ಮನುಷ್ಯತ್ವದ ನೋವಿನ ಪಿಸುನುಡಿಯ ರಾಗ” ಎಂದು ಹೇಳಿದ್ದಾರೆ. ಉಮರ್ ದೇವರಮನಿ ಯವರು ಕೇವಲ ಪ್ರೀತಿ ,ಪ್ರೇಮ,ವಿರಹ,ಗಳಿಗೆ ಮಾತ್ರ ಗಜಲ್ ಗಳನ್ನು ರಚಿಸದೆ ಸಮುದಾಯ ಎದುರಿಸುತ್ತಿರುವ ತಲ್ಲಣಗಳು   ಹಾಗೂ ಅವಮಾನಗಳನ್ನು ಮೂಕನಾಗಿ ನೋಡೂತ್ತಾ ಧಿಗ್ಬ್ರಾಂತಿ ಗೊಳಗಾಗಿ ಅವುಗಳಿಗೆ ಸ್ವಂದಿಸಿ ಗಜಲ್ಗಳನ್ನು ರಚಿಸಿದ್ದಾರೆ. ಉಮರ್ ದೇವರಮನಿ ಯವರ “ರಾಗವಿಲ್ಲದಿದ್ದರೂ ಸರಿ” ಎಂಬ ಕನ್ನಡ ಗಜಲ್ ಸಂಕಲನದಲ್ಲಿ ಒಟ್ಟು ೫೩ ಗಜಲ್ಗಳಿದ್ದು ಪ್ರತಿಗಜಲ್ ಗಳಿಗೆ  ಶೀರ್ಷಿಕೆ ಯನ್ನು ಕೊಟ್ಟಿದ್ದಾರೆ ಮತ್ತು ಭಾವಕ್ಕೆ ತಕ್ಕಂತೆ ಕಲಾಕಾರರಿಂದ ಚಿತ್ರಗಳನ್ನು  ತೆಗೆದಸಿದ್ದಾರೆ.ಸಂಕಲನದ ಗಜಲ್ಗಳನ್ನು ಓದುತ್ತಾ ಹೋದಂತೆ ಗಜಲ್ ಗಳಿಗೆ ಬೇಕಾಗುವ ಭಾವತೀವ್ರತೆ,ರೂಪಕಗಳು,ಪ್ರತೀಕಗಳನ್ನು ಬಳಿಸಿ ಗಜಲ್ ರಚಿಸಿದ್ದಾರೆ.ಗಜಲ್ದ ಮಿಸ್ರಾ ಗಳು ಉದ್ದವಿರದೆ(ಚೋಟಿ ಬೆಹರ್)ಕಡಿಮೆ ಶಬ್ದ ಗಳಲ್ಲಿ ಹೆಚ್ಚಿನ ಭಾವತುಂಬಿದ್ದಾರೆ.ಈ ಸಂಕಲನದಲ್ಲಿ ಹೆಚ್ಚಿಗೆ ಗಮನಕ್ಕೆ ಬರುವ ಅಂಶವೆಂದರೆ ಬಹುತೇಕ ಗಜಲ್ ಗಳು ಸಮಾಜಮುಖಿಯಾಗಿವೆ.ಕವಿಯು ಸಮಾಜದ ದುಃಖವನ್ನು ತನ್ನದಾಗಿಸಿಕೊಂಡು ನೊಂದು ಗಜಲ್ ಮೂಲಕ ಸಾಂತ್ವನ ಹೇಳುತ್ತಾ ಮುಲಾಮ ಹಚ್ಚ ಬಯಸಿದ್ದಾರೆ.ವಿಶ್ವವೇ ಕುಟುಂಬ ಎಂಬಂತೆ ಕವಿಯು ವಿಶ್ವದ ನೋವಿಗೆ ನೊಂದು ಮನುಕುಲ ಉಧ್ಧಾರದ ಆಶಯವನ್ನು ಎತ್ತಿ ಹಿಡಿದಿದ್ದಾರೆ.ಗಜಲ್ ಕಾರರಿಗೆ ಇರಬೇಕಾದ ಧ್ಯಾನಸ್ಥ ಮನದಿಂದ ತನ್ನಾತ್ಮದೊಂದಿಗೆ ಸಂವಾದಿಸಿ ಗಜಲ್ ಗಳನ್ನು ರಚಿಸಿದ್ದಾರೆ. ಉಮರ್ ದೇವರಮನಿ ಯವರ “ರಾಗವಿಲ್ಲದಿದ್ದರೂ ಸರಿ ” ಎಂಬ ಗಜಲ್ ಸಂಕಲನದಲ್ಲಿ ಮುರದ್ದಫ್,ಗೈರಮುರದ್ದಫ್, ಮುಸಲ್ ಸಲ್, ಗೈರ್ ಮುಸಲ್ ಸಲ್ ,ಆಜಾದ್ ಗಜಲ್ ,ಮತ್ತು ರಾಜಕೀಯ ಗಜಲ್ ಗಳನ್ನು ಓದಬಹುದು.ಕೆಲವು ಗಜಲ್ಗಳು ಛಂದೋಬದ್ಧ ವಾಗಿದ್ದರೆ ಇನ್ನೂ ಕೆಲವು ಮುಕ್ತ ಛಂದಸ್ಸು ಗಳಾಗಿರುವುದರಿಂದ ದೇವರಮನಿ ಯವರು ತಮ್ಮ ಸಂಕಲನಕ್ಕೆ “ರಾಗವಿಲ್ಲದಿದ್ದರೂ ಸರಿ” ಎಂಬ ಶೀರ್ಷಿಕೆಯನ್ನು ಸಂಕಲನಕ್ಕೆ ಇಟ್ಟಂತೆ ಅನಿಸುತ್ತದೆ ಕೆಲವು ಗಜಲ್ ಗಳಲ್ಲಿ ಬಳಿಸಿದ ರೂಪಕಗಳು ವಚನ ಸಾಹಿತ್ಯ, ತತ್ವಪದಗಳ ಸಾಹಿತ್ಯ, ನುಡಿಗಟ್ಟುಗಳನ್ನು ಬಳಿಸಿದ್ದು ಕಂಡುಬರುತ್ತದೆ.ಮತ್ತು ಕೆಲವು ಗಜಲ್ ಗಳನ್ನು ಓದಿದಾಗ ಗಾಲಿಬ್ ಅವರ ಗಜಲ್ಗಳ ಛಾಯೆ ಬಿದ್ದಂತೆ ಭಾಸವಾಗುತ್ತದೆ.ಒಟ್ಟಿನಲ್ಲಿ ಹೇಳಬೇಕೆಂದರೆ ಸಂಕಲನವು ಪ್ರೌಢತೆಯಿಂದ ಕೂಡಿದ್ದು ಯುವ ಗಜಲ್ ಕಾರರಿಗೆ ಮಾರ್ಗದರ್ಶನ ಮಾಡುವಂತಹ ಕೃತಿಯಾಗಿದೆ. *ನನ್ನ ಹೃದಯ ದಲ್ಲಿ ನೆಲೆಸಿದ ಮತ್ತು ಅನುರಾಗದ ಅಲೆಯನ್ನು ಎಬ್ಬಿಸಿದ ಕೆಲವು ಗಜಲ್ ಗಳ ಮಿಸ್ರಾ ಗಳನ್ನು ಇಲ್ಲಿ ಸಾದರ ಪಡಿಸಲು ಇಚ್ಛಿಸುವೆ * “ಪ್ರೀತಿಯ ಮೈಖಾನೆಯಲಿ ಅಪರಿಚಿತರು ಇರುವುದಿಲ್ಲ ಇದು ಎಲ್ಲರಿಗೂ ತೆರೆದಿದೆ ಇಲ್ಲಿ ಬೀಗಗಳು ಇರುವುದಿಲ್ಲ” “ಕಲ್ಲು ಹೃದಯ ಗಳ ಮೇಲೆ ಹೂವು ಅರಳುವುದಿಲ್ಲ ನೀ ಪ್ರೀತಿಯ ಹನಿಯಾಗಬೇಕು ನನ್ನ ಈ ನೆಲಕೆ” “ ಚಿಗುರೊಡೆಯಬೇಕು ನಿನ್ನ ಎದೆಗೆ ಬಿದ್ದ ಬೀಜ ಹೇಗೆ ಉಸಿರಾಡುವುದು ಮೊಳಕೆ ಒಲವು ಮಣ್ಣಾಗು” “ಮೌನ ಮುರಿದು ಮಾತನಾಡಬೇಕಿದೆ”ಉಮರ್” ಮೂಕ ಮಗುವಿಗೆ ಎಂದು ಹಾಲು ಸಿಗಲೇ ಇಲ್ಲ” “ಮುಲ್ಲಾ ನೀನು ಕರೆಯಲಿಲ್ಲ ನಾ ಅಲ್ಲಾಹನಿಗಾಗಿ ಬರಲೇ ಇಲ್ಲ ಮಸೀದಿಯೇನೋ ಕಟ್ಟಿಸಿದೆ ನಮಾಜು ಅಲ್ಲಿ ಮಾಡಲೇ ಇಲ್ಲ” “ಮುಖ ಸ್ವಚ್ಛ ವಾಗುವುದಿಲ್ಲ ಕನ್ನಡಿಯನ್ನೆಷ್ಟೇ ಉಜ್ಜುತಿರು ನಿನ್ನ ಬಾಗಿಲು ತೆರೆಯುವುದಿಲ್ಲ ಬೇರೆ ಕದ ಎಷ್ಟೇ ತಟ್ಟುತಿರು” “ಎಲ್ಲರು ತಲೆದೂಗುತಿದ್ದಾರೆ ವಿರಹದ ಗೀತೆ ಕೇಳಿ ನೋವುಂಡ ಗಾಯ ಪ್ರೀತಿಯನು ಬೇಡುತಿದೆ” “ಬುದ್ಧ ಬಸವ ಏಸು ಪೈಗಂಬರರೇ ನೀವೆ ಕೇಳಿ ನೀವು ಕೊಟ್ಟ ಮಧುಬಟ್ಟಲು ಹೀಗೇಕೆ ಸೋರುತಿದೆ” “ತೂತು ಬಿದ್ದ ಹಡಗು ಎಂದೂ ದಡ ಸೇರುವುದಿಲ್ಲ ತುಕ್ಕು ಹಿಡಿದ ಕಬ್ಬಿಣ  ಎಂದೂ ತೂತು ಮುಚ್ಚುವುದಿಲ್ಲ” “ಇನ್ನೂ ಉಸಿರಾಡುವ ಹೆಣಗಳ ಮೇಲೆ ಚುನಾವಣೆಗೆ ನಿಂತಿದ್ದಾರೆ ಬಿಕ್ಕಳಿಸಿತಿರುವ ಪ್ರಜೆಗಳ ಮೇಲೆ ಚುನಾವಣೆಗೆ ನಿಂತಿದ್ದಾರೆ” “ರೊಟ್ಟಿ ಕೇಳಿದರೆ ಹೇಸಿಗೆ ತಿನ್ನುಎನುವವರೆ ಹೆಚ್ಚು ಒಂದು ರೂಪಾಯಿ ಇವರಿಂದ ಕೊಡಲಾಗಲಿಲ್ಲ ಆನಂದ” “ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವುದು ಬೇಡ ” ಉಮರ್” ದ್ವೇಷವಾರಿಸಲು ಪ್ರೀತಿಯ ಒರತೆ ತೋಡಿಸುವುದಾದರೆ ತೋಡಿಸು” “ನಿನ್ನ ಹೂದೋಟದಲಿ ಹಾರಾಡುವ ಮರಿದುಂಬಿ ನಾ ಭರವಸೆಯ ಹೂ ಅರಳಿದಾಗಲೆಲ್ಲಾ ಹಗುರವಾಗುತ್ತೇನೆ”            ಉಮರ್ ದೇವರಮನಿ ಯವರು “ಉಮರ್” ಎಂಬ ತಖಲ್ಲುಸ್ (ಕಾವ್ಯನಾಮ) ವಾಗಿಟ್ಟುಕೊಂಡು ಗಜಲ್ ಗಳನ್ನು ರಚನೆ ಮಾಡುತ್ತಿದ್ದಾರೆ.ಈ ತಖಲ್ಲುಸ್ ಓದಿದಾಗ ವಿಶ್ವ ಕಂಡ ಮಹಾನ್ ಕವಿ “ಉಮರ್ ಖೈಯಾಮ್” ನೆನಪಾಗುತ್ತಾರೆ.ಉಮರ್ ದೇವರಮನಿ ಯವರ ಗಜಲ್ ರಚನೆ ಸರಳವಾಗಿ ,ವಾಸ್ತವವಾಗಿ, ಶಬ್ದ ಗಳ ಮಿತ ಬಳಿಕೆಯಲ್ಲಿ ಸಂವೇದನಾಶೀಲವಾದ ಭಾವ ತೀವ್ರತೆಯನ್ನು ತುಂಬಿದ್ದಾರೆ.ಗಜಲ್ ಒಂದು ಹಾಡುಗಬ್ಬ ವೆಂದು ಅವರು ಅರಿತಿದ್ದಾರೆ.ಪ್ರೀತಿ, ಪ್ರೇಮ ವಿರಹ , ವೈರಾಗ್ಯ, ಸಮಾನತೆ ,ಸ್ವಾತಂತ್ರ, ಶಾಂತಿ ಹೀಗೆ ಎಲ್ಲಾ ವಿಷಯಗಳಲ್ಲಿ ಗಜಲ್ ಗಳನ್ನು ರಚಿಸಿದ್ದಾರೆ,ಲೌಕಿಕದಿಂದ ಅಲೌಕಿಕ ಕಡೆ ಕೊಂಡೊಯ್ಯತ್ತಾರೆ ಉಮರ್ ದೇವರಮನಿಯವರು ಇನ್ನೂ ಉತ್ತಮವಾದ ಗಜಲ್ ಗಳನ್ನು ರಚಿಸಿ ಓದುಗರಿಗೆ ತೃಪ್ತಿ ಪಡಿಸುತ್ತಾರೆಂಬ ಭರವಸೆಯ ಗಜಲ್ ಕಾರರಾಗಿದ್ದಾರೆ.ಕನ್ನಡ ಗಜಲ್ ಸಾಹಿತ್ಯ ಲೋಕಕ್ಕೆ ಇವರಿಂದ  ಅನೇಕ ಗಜಲ್ ಕೃತಿಗಳು ಬರಲೆಂದು ಹಾರೈಸುತಾ ನನ್ನ ಬರಹಕ್ಕೆ ವಿರಾಮ ಕೊಡುವೆನು. *****************************************************  ಪ್ರಭಾವತಿ ಎಸ್ ದೇಸಾಯಿ

ರಾಗವಿಲ್ಲದಿದ್ದರೂ ಸರಿ Read Post »

ಪುಸ್ತಕ ಸಂಗಾತಿ

ಮಾಯಾಕನ್ನಡಿ

‘ಮಾಯಾಕನ್ನಡಿ’ ಕೇರಳ ಕಾಂತಾ ಸಮ್ಮಿತದ ಮುಂದುವರಿದ ಭಾಗವೆನ್ನೆಡ್ಡಿಯಿಲ್ಲ. ಸ್ವಾತಂತ್ರೋತ್ತರ ಭಾರತ, ಸುಶಿಕ್ಷಿತ ಸ್ತ್ರೀಯರ ಬವಣೆಗಳು, ಸಮಾಜದ ದ್ವಂದ್ವ ನೀತಿಗಳನ್ನು ಪ್ರಶ್ನಿಸುವ ಗುಣ‌ ಇವೆಲ್ಲವನ್ನೂ ಇಲ್ಲಿಯ ೧೬ ಕಥೆಗಳಲ್ಲಿ ಕಾಣಬಹುದು. ೧೯ ನೆಯ ಶತಮಾನದಲ್ಲೇ ಭ್ರಮನಿರಸನ(ಗಾಂದೀಜಿಯೋತ್ತರ ದಿನಗಳು)ವಾದ ಚಿತ್ರ ಇಲ್ಲಿ ನೋಡಲು ಸಿಗುವುದು

ಮಾಯಾಕನ್ನಡಿ Read Post »

ಪುಸ್ತಕ ಸಂಗಾತಿ

*ಗೋರಿಯೊಳಗಿನ ಉಸಿರು”

ಪುಸ್ತತಕ ಸಂಗಾತಿ *ಗೋರಿಯೊಳಗಿನ ಉಸಿರು” ಗೋಕಾವಿ ನಾಡಿನ ಪ್ರಾಥಮಿಕ ಶಾಲೆಯೊಂದರ‌ ಮುಖ್ಯೋಪಾದ್ಯಾಯರಾಗಿರುವ  ಶ್ರೀ ಈಶ್ವರ ಮಮದಾಪೂರ ಅವರು ಈಗಾಗಲೇ‌ ಕನ್ಮಡ‌ ಕಾವ್ಯ ಕ್ಷೇತ್ರದ ಪರಿಚಿತ ಹೆಸರು. ಮಮದಾಪೂರರ ಚುಟುಕುಗಳು,ಮಮದಾಪೂರ  ಹನಿಗವಿತೆಗಳು , ಕಾವ್ಯಯಾನ (ಕವನ ಸಂಕಲನ) ಮೊದಲಾದ ಸಂಕಲನಗಳನ್ನು ಹೊರ ತಂದಿದ್ದಾರೆ. ಈಚೆಗೆ ಕಾವ್ಯ ರಚನೆಗೆ ಕಾವ್ಯರಚಕರಿಗೆ ಪ್ರಧಾನ ವೇದಿಕೆಯಾಗಿರುವದು ವ್ಯಾಟ್ಸಪ್ ಎಂಬ ವಿನೂತನ ಮಾದ್ಯಮ.ಕನ್ನಡ ಕಾವ್ಯಕೂಟ ಎಂಬ ವ್ಯಾಟ್ಸಪ್ ಬಳಗದ  ಮೂಲಕವೇ ನೂರಾರು ಜನ‌ ಸಶಕ್ತ ಕವಿಗಳನ್ನು ಒಂದುಗೂಡಿಸಿದ ವಿಶೇಷತೆ ಈಶ್ವರ ಅವರದು.ಅವರು ಬರೆದಿರುವ ಚುಟುಕುಗಳ ವಿಶೇಷತೆಯನ್ನು ಗುರುತಿಸಿದ ಹಿರಿಯ ಕವಿ ಡಾ.ಸಿ.ಪಿ.ಕೆ ಯವರು ಈಶ್ವರ‌ ಮಮದಾಪೂರ ಅವರನ್ನು‌      ‘ ಪ್ರೇಮದ ಪ್ರವಾದಿ’  ಎಂದು ಗುರುತಿಸಿರುವುದು  ಮಮದಾಪೂರ ರ ಕಾವ್ಯಕ್ಕೆ ಸಂದ ಗೌರವವಾಗಿದೆ.       “ಗೋರಿಯೊಳಗಿನ‌ ಉಸಿರು” ಮಮದಾಪೂರ ಅವರು ರಚಿಸಿದ ಒಟ್ಟು ೩೭ ಗಜಲ್ಗಳ ಸಂಕಲನ .  ಇದು ೨೦೨೦ ರಲ್ಲಿ ಈಶ್ವರ ಪ್ರಕಾಶನ ಗೋಕಾಕದಿಂದ ಪ್ರಕಟವಾಗಿದೆ .ಇಲ್ಲಿನ  ಪ್ರತಿ ಗಜಲ್ ಗಳೂ ಹೊಂದುವ ಚಂದದ ರೇಖಾ ಚಿತ್ರ ಒಳಗೊಂಡಿವೆ . ಈಚೆಗೆ ಕಾವ್ಯ‌ ಮತ್ತು‌ ಕುಂಚಗಳೆರಡೂ ಸ್ಪಂದಿಸುತ್ತ ಸಂಕಲನ ಗಳ ಅಂದ ಹೆಚ್ಚುತ್ತಿರುವುದನ್ನು ಕಾಣುತ್ತೇವೆ. ತೀರಾ ಈಚೆಗೆ ಬಂದ ಗದುಗಿನ ಕವಿ ಏ. ಎಸ್‌.ಮಕಾನದಾರ ಅವರ ‘ಪ್ಯಾರಿ ಪದ್ಯಗಳು’ ಹನಿಗವನ ಸಂಕಲನದಲ್ಲಿ  ಕವಿಯಂತೆಯೆ ಚಿತ್ರ ಒದಗಿಸಿದ ಚಿತ್ರಕಲಾವಿದ ವಿಜಯ ಕಿರೇಸೂರ ಅವರ ಪರಿಚಯದ ಒಂದು ಪುಟ ಸೇರಿಸಿದ್ದು ನಿಜಕ್ಕೂ ಕಲೆಗಳ ಸಾಂಗತ್ಯದ ಉದಾಹರಣೆಯಾಗಿದೆ. ಈಶ್ವರ ಅವರ ಸಂಕಲನಕ್ಕೆ ಅವರ ಕಾವ್ಯದ ಓದುಗ ಸದಾ ಪ್ರೇರಕರೆಂದು ಗುರುತಿಸಿಕೊಂಡ ಯುವ‌‌ ಗಜಲ್ ಕಾರರಾದ ಶ್ರೀ ಜಬೀವುಲ್ಲಾ .ಎಂ.ಅಸದ್ ರವರು ಚಿತ್ರ ಬಿಡಿಸಿದ್ದಾರೆ ಮಾತ್ರವಲ್ಲ ,ಈಶ್ವರ್ ಅವರ ಗಜಲ್ ಗಳ ಕುರಿತು ಕೆಲವು ಮೆಚ್ಚಿಕೆಯ‌‌ ಮಾತೂ‌ ಬರೆದಿದ್ದಾರೆ.   ಈಶ್ವರ ಅವರ ಗಜಲ್ ಗಳು ಕೇವಲ ಪ್ರೇಮದ ಆಲಾಪಗಳಲ್ಲ. ನವಿರು‌ಭಾವದ ನಿರೂಪಣೆಗಳಲ್ಲ ಬೆನ್ನುಡಿ ಬರೆದಿರುವ ಹಿರಿಯ ಕವಿಗಳಾದ ಡಾ. ಸರಜೂ ಕಾಟ್ಕರ್ ಅವರು ಗುರುತಿಸಿರುವಂತೆ .” ಮಮದಾಪೂರ ಅವರ ಗಜಲ್ ಯಾಕೆ ವಿಶಿಷ್ಟವಾಗುತ್ತದೆ ಎಂದರೆ ಅವರು ಬರೀ ಪ್ರೀತಿ ,ಪ್ರೇಮ, ವಿರಹ , ಸಾಕಿ,ಚಂದ್ರ , ಚಕೋರಿಗಳನ್ನು ಮಾತ್ರ ತಮ್ಮ ಗಜಲ್ಗಳಲ್ಲಿ ತರುವದಿಲ್ಲ. ಸಾಮಾಜಿಕ ಅನಿಷ್ಠಗಳಾದ ಬಡತನ‌,ಪರಿಸರ ಮಾಲಿನ್ಯ ನಗರೀಕರಣದ ಶಾಪ ,ಜಾತಿ,ವರ್ಣಭೇದ, ಮುಂತಾದ ಸಾಮಾಜಿಕ  ಪಿಡುಗುಗಳ ಬಗ್ಗೆಯೂ ಅವರ ಗಜಲ್ ಗಳ ಮೂಲಕ ಧ್ವನಿ ಒದಗಿಸಿದ್ದಾರೆ. ಕಾವ್ಯವು ನೊಂದವರ ಧ್ವನಿಯಾಗಬೇಕು. ಹಾಗಾದಾಗ ಮಾತ್ರ ಅವರ ಸಾರ್ಥಕತೆಗೆ ಅರ್ಥ ಬರುತ್ತದೆ.ಈಶ್ವರ ಮಮದಾಪೂರ ಕಾವ್ಯವು ನೊಂದವರ , ಬೆಂದವರ ಧ್ವನಿಯಾಗಿ ಹೊರಹೊಮ್ಮಿದೆ ” ಎನ್ನುವ ಅವರ ಮಾತುಗಳೂ ಈಶ್ವರ ಅವರ ಗಜಲ್  ಕಾವ್ಯಕ್ಕೆ‌ ನಿಜವಾಗಿ ಸಂದ ಗೌರವವಾಗಿದೆ.ಮತ್ತು‌ ಅವರು ಬರೆದಿರುವ ಸಾಲುಗಳಿಗೆ‌ ಪೂರಕವಾದ ಪುರಾವೆಗಳನ್ನು ಒದಗಿಸುವ ಎಷ್ಟೋ ಗಜಲ ಗಳು ಈ ಸಂಕಲನದಲ್ಲಿರುವುದೂ ಅಷ್ಟೇ ಸತ್ಯವಾಗಿದೆ.          ಎರಡನೆಯ ಗಜಲ್ ದಲ್ಲಿ ಅನುಭಾವಿಕ‌ ನೆಲೆ ಇದೆ. ದಾಸರು‌ ಮನುಷ್ಯನ ಐಹಿಕ ಬದುಕು ಅರ್ಥಹೀನ, ಆತನ‌‌ ನಿಜವಾದ ನೆಲೆ ಏನಿದ್ದರೂ ಅದು‌ ಪರಲೋಕ, ಇಲ್ಲಿಗೆ ಬಂದಿರುವದು ಸುಮ್ಮನೇ ಎನ್ನುವ ಅರ್ಥದ ವಿಚಾರ‌ ಮಂಡಿಸಿದ್ದರು. ಈ‌ ಕವಿ ಕೂಡಾ ದಾಸರ ಪದ್ಯದ ಸಾಲನ್ನೇ ಬಳಸಿಕೊಂಡು ಗಜಲ್ ವಿಸ್ತರಿಸುವ ರೀತಿ ಕುತೂಹಲಕ ರವಾಗಿದೆ. ಇಲ್ಲಿರುವದು ಸುಮ್ಮನೆ ನಿಜವಲ್ಲವೆ‌ ಗೆಳೆಯ ಅಲ್ಲಿರುವದು ನಮ್ಮ‌ ಮನೆ ಹೌದಲ್ಲವೇ ಗೆಳೆಯ ಎನ್ನುವ ಕವಿ ಆದರೆ ಇರುವಷ್ಟು ಕಾಲವಾದರೂ ಪರಸ್ಪರರು ಹೊಂದಿಕೊಂಡು ಹೋಗುವದು ಅಗತ್ಯ ವಲ್ಲವೇ ? ಎಂಬ ಬಹು‌ ಮಹತ್ವದ ತಿರುವನ್ನು‌‌ ಕವಿತೆಗೆ ಒದಗಿಸುತ್ತದೆ. .ಬದುಕನ್ನು ನಿರಾಕರಿಸುವ ನೆಲೆಯಿಂದ ಬದುಕನ್ನು ಸಹ್ಯವಾಗಿಸುವ ನೆಲೆಗೆ ಎತ್ತರಿಸುವ ಪ್ರಯತ್ನವಿದು. ಅದನ್ನೇ ಹೇಳುವ ಗಜಲ್ ಅನುಭಾವಿಕ ನೆಲೆಯಲ್ಲಿ ನಿಲ್ಲದೇ “ಇರುವಷ್ಟು ದಿನವಾದರೂ ಬದುಕನ್ನು ಸ್ವೀಕರಿಸುವ ಧನಾತ್ಮಕ ಚಿಂತನೆಗಿಳಿಯುವುದು”   ಈಶ್ವರರ ಕವಿತೆಯ ವಿಶೇಷತೆಯಾಗಿದೆ. ಅಂತೆಯೆ ಗಜಲ್‌ ಕೊನೆಮುಟ್ಟುವ  ಈ ತೀರ್ಮಾನ ಮಹತ್ವದ್ದು. ನಿನ್ನಷ್ಟಕ್ಕೆ ನೀನೋಬ್ಬನೇ ನಗುತ್ತಿದ್ದರೇನು ಬಂತು ನೊಂದವರ ಹೃದಯದಲ್ಲಿರಲು ಈಶ್ವರನಿಗೂ ಪ್ರೀತಿಯಲ್ಲವೇ ಮಿತ್ರ ಕವಿತೆಯ ಬಂಧ ಯಾವುದಾದರೇನು? ಅದು ಬದುಕನ್ನು ಪ್ರೀತಿಸುವುದು‌ ಮುಖ್ಯ ಎನ್ನುವದು ‌ಇಲ್ಲಿ‌ ಮಹತ್ವದ್ದು .           ಸಂಕಲನಕ್ಕೆ ಅರ್ಥಪೂರ್ಣ  ಮುನ್ನುಡಿ ಬರೆದಿರುವ ಡಾ,ಮಲ್ಲಿನಾಥ ಎಸ್ ತಳವಾರ ಅವರು  ಗಜಲ್ ಓದಿಗೆ ಹೊಸ ಪ್ರಸ್ತಾವಣೆ ಎನ್ನುವ ರೀತಿಯಲ್ಲಿ ಕೆಲವು‌ ಮಾತು ಹೇಳಿರುವದು ಗಜಲ್‌ ಪ್ರವೇಶಕ್ಕೆ ಒಳ್ಳೆಯ ದಾರಿ ತೋರುತ್ತದೆ. ಗಜಲ್‌ ಕುರಿತು ಶ್ರೀಯುತರು ಹೇಳುವ‌ ಮಾತುಗಳು ಸದಾ ಮನನಯೋಗ್ಯವಾಗಿವೆ. ಆರಂಭದಲ್ಲಿ ಪ್ರೀತಿ, ‌ಪ್ರೇಮ, ವಿರಹಗಳ ಸುತ್ತ ಸುತ್ತುತ್ತಿದ್ದ ಗಜಲ್ ಕಾವ್ಯ ಪ್ರಕಾರ ಇಂದು ಮಾನವ ಬದುಕಿನ ಸಕಲ ಲೋಕಕ್ಕೂ ವಿಸ್ತಾರಗೊಂಡು ಗಜಲ್ ಕಾವ್ಯ ಆಧುನಿ‌ಕ ಕನ್ನಡದ ಪ್ರಮುಖ ಕಾವ್ಯ ಪ್ರಕಾರವಾಗಿ ಹೊರಹೊಮ್ಮಿದೆ  . ನೂರಾರು ಜನ‌ ಕವಿಗಳು ಗಜಲ್ ಬರವಣಿಗೆಯತ್ತ ಧಾವಿಸುತ್ತಿದ್ದಾರೆ. “ಲಯ,ನಿಯಮ, ಲಕ್ಷಣಗಳನ್ನು ಹೊಂದಿರುವ ಗಜಲ್ ಕಾವ್ಯ ಪ್ರಕಾರವು ಸಾಹಿತ್ಯಾಸಕ್ತರ ಮನ ಸೆಳೆಯುತ್ತಿದೆ.ಇದರ ಮೂಲ ಛಂದಸ್ಸು  ಅರಬ್ ರಾಷ್ಟ್ರದಿಂದ ಬಂದಿದ್ದರೂ ಅದು ನೆಲೆಸಿದ್ದು ,ವಿಕಸನ ಗೊಂಡಿದ್ದು ಹಾಗೂ ಸಮೃದ್ಧ ಪರಂಪರೆಯಾಗಿ ಬೆಳೆದು ಬಂದದ್ದು‌ ಮಾತ್ರ ನಮ್ಮ ಭರತ ಖಂಡದಲ್ಲಿಯೇ. ಹಿಂದೂಸ್ತಾನಕ್ಕೆ ಬಂದ ಗಜಲ್ ನಲ್ಲಿ ಈ ದೇಶದ ಲೋಕಗೀತೆ ,ರೀತಿ ರಿವಾಜುಗಳು, ಋತು, ನೀರು,ಗಾಳಿ,ಹಸಿರು,ನೆಲ,ಹೂ ಹಬ್ಬ… ಹೀಗೆ ಹತ್ತು ಹಲವಾರು ವಿಷಯಗಳನ್ಮು ಒಳಗೊಂಡು ಇಂದು ಭಾರತೀಯ ಸಾಹಿತ್ಯ ಪ್ರಕಾರವಾಗಿ ಸಹೃದಯರ‌ ಮನವನ್ನು ತಣಿಸುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಕಾವ್ಯ‌ಕೃಷಿಯಲ್ಲಿ ತೊಡಗಿರುವ ಪ್ರತಿಯೊಬ್ಬ ಕವಿಯೂ ತಾವೊಂದು ಗಜಲ್ ಬರೆಯಲೇಬೇಕು,ಬರೆಯದೆ ಹೋದರೆ ತನ್ನ ಸಾರಸ್ವತ ಲೋಕವೇ ಅಪೂರ್ಣ ಎಂದು ಭಾವಿಸಬಹುದಾದಷ್ಟು ”  (ಗಜಲ್ ಎಂಬ ಜೀವನದಿಯಲ್ಲಿ..-ಡಾ.ಮಲ್ಲಿಕಾರ್ಜುನ .ಎಸ್ ತಳವಾರ – ಮುನ್ನುಡಿಯಲ್ಲಿ) ಎಂದಿರುವದು ಸತ್ಯವಾಗಿದೆ. ಇಲ್ಲಿನ ಗಜಲ್ ಗಳನ್ನು  ಎರಡು ಭಾಗವಾಗಿಸಬಹುದು.ಪ್ರೀತಿ ಪ್ರೇಮ ವಿರಹ,ತನ್ನ ನಲ್ಲೆಯ ಅಗಲಿಕೆ , ಅದರ ವಿಷಾದ ಈ ಅಂಶಗಳನ್ನು ಹೇಳುವ ಗಜಲ್ ಗಳು ಇಲ್ಲಿ ಕೆಲವಿವೆ. “ಕೇಳದೇ ಕೊಟ್ಟಿರುವೆ ಹೃದಯವನ್ನು ಸ್ವೀಕರಿಸು ಗೆಳತಿ ಇನ್ನೇನು ಬೇಕು ನನ್ನನ್ನು‌ ಮೀಸಲಿಟ್ಟಿರುವೆ  ಪ್ರೀತಿಸು ಗೆಳತಿ” ಈ ಬಗೆಯ ಅಹವಾಲುಗಳು , ” ಜೀವಂತ ಕೊಲ್ಲದಿರು ಪ್ರೀತಿಯನ್ನು ಹೊರಗಿಟ್ಟು ಸತ್ತರೂ  ಮುಳ್ಳಿರದ ಗುಲಾಬಿ ನೀಡುವೆ ಮುದ್ದಿಸು ಗೆಳತಿ “   ಎಂಬ ಈ ಥರದ ಪ್ರೇಮಾಧಿಕ್ಯದ ಸಾಲುಗಳೂ ಇವೆ. ಅತಿಶಯ ಪ್ರೇಮ ಇಲ್ಲಿನದು.ಅವಳ ಪ್ರೇಮದ ತಿರಸ್ಕಾರ ಅವನನ್ನು  ಜೀವಂತ  ಹೆಣವಾಗಿಸಿದೆ.ಅದಕ್ಜೆ ತನ್ನವಳಾಗಿದ್ದವಳನ್ನು “ಒಲವ ಜಲದಿಂದ ಹೊರಗೇಕೆ ನೂಕಿದೆ ನನ್ನನ್ನು ಪ್ರೀತಿಯ ಉಸಿರಿಲ್ಲದೆ ಹೆಣವಾಗಿಸಿದೆ ಗೆಳತಿ‌ “ ಎಂದು ಕೇಳುತ್ತಾನೆ .ಅವಳಿಲ್ಲದ ರಾತ್ತಿ ತುಂಬ ಜಡವಾಗಿದ್ದು ” ಚಂದ್ರಮನ ಬೆಳಕದಿಂಗಳು ಕೂಡ ಬಿಸಿಯಾಗಿದೆ ” ಎನ್ನುತ್ತಾರೆ.ಈ ಜಗತ್ತು ಇಂತ‌ಹ ಪ್ರೀತಿಯನ್ನು ಹುಚ್ವು ಎನ್ನುತ್ತದೆ . ಆದರೆ ಯಾವ‌ ಪ್ರೇಮಿಗಳು ತಾನೇ  ಲೋಕದ ಮಾತು‌ ಕೇಳಿದ್ದಾರೆ?ಸತ್ತರೂ ಗೋರಿಯಲ್ಲದ್ದು  ಕನಸು ಕಾಣುವ ಇರಾದೆ ಇರುವ ಇಲ್ಲಿನ‌ ಪ್ರೇಮಿ ದೇವರನ್ನು “ಪ್ರೇಮಿಗಳಿಗೆ ವಿರಹದ ಶಾಪ ಇರಬಾರದು ಈಶ್ವರನೇ   ಒಂದಾಗಿ ಬಾಳುವಾಸೆ ಇನ್ನು ಜೀವಂತವಿದೆ ಗೆಳತಿ “ ಎಂದು ತಪಿಸುತ್ತಾನೆ  ಇಂತಹ ಹತ್ತಾರು ಸಾಲುಗಳನ್ನು  ಸಂಕಲನದಲ್ಲಿ ಕಾಣಬಹುದು. ಆದರೆ ನಿಜಕ್ಕೂ ಈ ಗಜಲ್ ಸಂಕಲನದ ಮಹತ್ವ ಇರುವದು ಇಲ್ಲಿ ಸಾಮಾಜಿಕವಾಗಿರುವ ಗಜಲಗಳ ರಚನೆಯಲ್ಲಿ. ಪಗರಾಣಿಗಳನ್ನು‌ ಮನುಷ್ಯ ನಡೆಸಿಕೊಳ್ಳುವ ರೀತಿಯೂ ಕವಿಯ ಮನವನ್ನು ನೋಯಿಸಿದೆ. ಗೋವಿನ ಹಾಡಿನ ರೀತಿಯಲ್ಲಿ ಇರುವ ಗಜಲ್ ಕಸ ತಿಂದರೂ ರಸವನ್ನೇ ನೀಡುವ ಅಕಳ‌ ಮೊಲೆಗೆ ಎಂಜಿನ್ ಗಳನ್ನು ಹಾಕಿ ಹಿಂಡುವ ದಾರುಣ ಚಿತ್ರನೀಡುತ್ತಾರೆ.ಇಲ್ಲಿ ಸಂಬಂಧಗಳು ಕುಸಿಯುತ್ತಿರುವದರತ್ತವೂ ಕವಿಯ ನೋವಿದೆ. ಇದರ ಜೊತೆಗೆ ಜ್ಞಾನದ  ಹಂಬಲವನ್ನು ಕವಿ ವ್ಯಕ್ತಪಡಿ ಸುತ್ತಾನೆ. ಆದರೆ ಆ ಜ್ಞಾನದ ಹಂಬಲ ಸ್ವ ಉಧ್ದಾರವನ್ನು ಬಯಸುವ ಪಾರಮಾರ್ಥದ ಹಂಬಲ ಮಾತ್ರವಾಗಿರದೆ ಅಲ್ಲಿಯೂ ಕೊನೆಗೆ ಕವಿ ಹಸಿದ ಹೊಟ್ಡೆಗಳು ಕಂಡರೂ ಕುರುಡತನವೇಕೆ ನನ್ನಲ್ಲಿ ಹಂಚಿ ತಿನ್ನುವ ಗುಣ ಬರಬೇಕಿದೆ  ನನ್ನಲ್ಲಿ ಎನ್ನುವಲ್ಲಿ ಮತ್ತೆ ಅದೃ ಬಡವರ ಪರ,ಇಲ್ಲದವರ ಪರ ಕಾಳಜಿ ವಹಿಸುವ ಪ್ರಜ್ಞೆಯಾಗಿ ಕಂಡಿದೆ. ಹಾಗೆಯೇ ಬಾಲ್ಯದ ಸ್ನೇಹ ಎಂದೂ ಕಡಿಮೆಯಾಗದುದನ್ನು ಮಕ್ಕಳ ಮೃದು ಹೃದಯಗಳನ್ನು ಗುರುತಿಸುತ್ತಾರೆ.ಅವರದು ” ಪುಟ್ಟ ಎದೆಯಲ್ಲಿ ಅಡಗಿಹ ಗಟ್ಟಿ ನಿಷ್ಕಲ್ಮಶ ಪ್ರೀತಿ” ಎಂದು ಕಂಡುಕೊಂಡಿದ್ದಾರೆ. ಅವರ ಕಾವ್ಯದ ಪ್ರಮುಖ ಉದ್ದೇಶವೆ ಒಡೆದವ ಮನಸುಗಳನ್ನು ಒಂದು‌ ಮಾಡುವದು‌ ಮತ್ತು ” ಭಿನ್ನ‌ಮನಸುಗಳ ಸುಟ್ಟು ಪ್ರೀತಿ ಬಿತ್ತುವುದು” ಆಗಿದೆ.ಒಟ್ಟಾರೆ ಅವರ ಗಜಲು ಗಳು ಸಾರುವದು ಮನುಷ್ಯ  ಪ್ರೀತಿಯನ್ನೇ..ಅದು ಅವರು‌‌ ಕಂಡು‌ಕೊಂಡ ಗಂಡು ಹೆಣ್ಣಿನ‌ ಪ್ರೀತಿಯಲ್ಲಿಯೂ ಇದೆ ಅಂತೆಯೆ ತಮ್ಮ ಚೆಲುವೆಗೆ ಹೇಳುವ ಈ‌ಮಾತು ಲೋಕ‌ ಕಾಪಾಡುವ ಮಾತೂ ಹೌದು. ದಿಕ್ಕೆಟ್ಟ ದಾರಿಯಲ್ಲಿ ದಾರಿ ದೀವಿಗೆಯಾದೆ ಚಲುವೆ ಕತ್ತಲೆ ರಾತ್ರಿಯಲ್ಲಿ‌ತೋರು ಬೆಳಕಾದೆ ಚಲುವೆ ಕಾವ್ಯವೂ ದಿಕ್ಜೆಟ್ಟ ದಾರಿಯಲ್ಲಿ ಬೆಳಕು ಚಲ್ಕುವ ದೀವಿಗೆ ಎಂದು ನಂಬಿದ ಶ್ರೀ ಈಶ್ವರ ಮಮದಾಪೂರ ಕಾವ್ಯೋದ್ಯೋಗದ ಆರಂಭದಿಂದಲೂ‌ ಪ್ರೀತಿ ಬೆಳೆಯನ್ನೇ ಬಿತ್ತಿ‌ ಬೆಳೆದಿದ್ದಾರೆ. ಅವರಿಂದ ಇನ್ನೂ ಇಂತಹ ಹತ್ತಾರು ಕೃತಿ‌ ನಿರೀಕ್ಷಿಸಬಹುದಾಗಿದೆ. ***************************** ಡಾ.ಯ.ಮಾ.ಯಾಕೊಳ್ಳಿ

*ಗೋರಿಯೊಳಗಿನ ಉಸಿರು” Read Post »

ಪುಸ್ತಕ ಸಂಗಾತಿ

‘ ಬಯಲೊಳಗೆ ಬಯಲಾಗಿ’

ಪುಸ್ತಕ ಸಂಗಾತಿ ‘ ಬಯಲೊಳಗೆ ಬಯಲಾಗಿ’ ಕನ್ನಡ ಗಜಲ್ ಸಾಹಿತ್ಯ ಲೋಕದಲ್ಲಿ ಈಗಾಗಲೇ ಅಂತರ್ಜಾಲದ ಗುಂಪುಗಳ ಮೂಲಕ ಗಜಲ್ ಕಾರರಾಗಿ ಹೆಸರು ಮಾಡಿರುವ ಶ್ರೀ. ಲಕ್ಷ್ಮಿಕಾಂತ ಮಿರಜಕರ ಅವರು ಬಯಲೊಳಗೆ ಬಯಲಾಗಿ ತಮ್ಮ ಮೊದಲ ಗಜಲ್ ಸಂಕಲನವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಹಾವೇರಿ ಜಿಲ್ಲೆಯ ಶ್ರೀ. ನೇತಾಜಿ ಹಾಗೂ ಶ್ರೀಮತಿ. ಲಕ್ಷ್ಮಿ ದಂಪತಿಯ ಪುತ್ರರಾದ ಲಕ್ಷ್ಮಿಕಾಂತ ಹುಟ್ಟೂರು ಶಿಗ್ಗಾಂವನಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಪೂರೈಸಿದವರು. ಬೆಂಗಳೂರಿನ ಎಂ. ವಿ. ಜೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ. ಎಡ್. ಪದವಿ ಪಡೆದು ನಂತರ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ , ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಹಾಗೂ ಮಾಧ್ಯಮ ಅಧ್ಯಯನ ಎಂ.ಎ ಪದವಿಗಳನ್ನು ಪೂರೈಸಿದ್ದಾರೆ. ಪ್ರಸ್ತುತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಲಕ್ಷ್ಮಿಕಾಂತ ಅವರ ಕಥೆ, ಕವನ ಮತ್ತು ಗಜಲ್ ಗಳು ಪ್ರಕಟಗೊಂಡಿವೆ. ನವೀನಚಂದ್ರ ಕಾವ್ಯ ಬಹುಮಾನ, ಗೋವಿಂದ ಪೈ ಸ್ಮಾರಕ ಕಾವ್ಯ ಬಹುಮಾನ , ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾವ್ಯ ಸ್ಪರ್ಧೆಯ ಬಹುಮಾನ ಹಾಗೂ ಅಕ್ಷರ ಐಸಿರಿ ಕಾವ್ಯ ಸ್ಪರ್ಧೆ ಬಹುಮಾನಗಳಿಗೆ ಭಾಜನರಾಗಿದ್ದಾರೆ. ಮೈಸೂರಿನ ಕರ್ನಾಟಕ ಕಾವಲು ಪಡೆ ಬಳಗದಿಂದ ೨೦೧೬ ನೇ ಸಾಲಿನ ‘ಆದರ್ಶ ಶಿಕ್ಷಕ ಪ್ರಶಸ್ತಿ’ , ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನ ಬಳಗದಿಂದ ‘ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ’, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೨೦೧೮ ನೇ ಸಾಲಿನ ‘ಉತ್ತಮ ಕನ್ನಡ ಶಿಕ್ಷಕ ಪ್ರಶಸ್ತಿ’ಗಳು ಲಭಿಸಿವೆ. ಗಜಲ್ ರಚನೆಯ ನಿಯಮಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ನಂತರವೇ ಲಕ್ಷ್ಮಿಕಾಂತ ಅವರ  ಮೊದಲ ಗಜಲ್ ಸಂಕಲನದ ಕನಸು ನನಸಾದುದು. ನೇತಾಜಿ ಪ್ರಕಾಶನದಿಂದ ಪ್ರಕಟಗೊಂಡಿರುವ ಬಯಲೊಳಗೆ ಬಯಲಾಗಿ ಕೃತಿಯಲ್ಲಿ ಒಟ್ಟು ೬೩ ಗಜಲ್ ಗಳಿವೆ. ಮುರದ್ಧಫ್ ಗಜಲ್ ಗಳೇ ಹೆಚ್ಚಾಗಿದ್ದು ಗೈರ್ ಮುರದ್ಧಫ್ , ಜುಲ್ ಕಾಫಿಯಾ ಮತ್ತು ಸಂಪೂರ್ಣ ಮತ್ಲಾ ಗಜಲ್ ಗಳೂ ಇವೆ. ಗಜಲ್ ಕ್ಷೇತ್ರದಲ್ಲಿ ಖ್ಯಾತನಾಮರಾದ ಶ್ರೀ. ಅಲ್ಲಾಗಿರಿರಾಜ್, ಕನಕಗಿರಿ ಅವರ ಮುನ್ನುಡಿ ಹಾಗೂ ಶ್ರೀಮತಿ. ಪ್ರೇಮಾ ಹೂಗಾರ ಅವರ ಬೆನ್ನುಡಿ ಇವೆ.ಸಂಕಲನಕ್ಕೆ ಮುಖಪುಟವೇ ಮುಖ್ಯ ಆಕರ್ಷಣೆಯಾಗಿದೆ. ಮುದ್ರಣ ಅಚ್ಚುಕಟ್ಟಾಗಿದ್ದು ಪ್ರತೀ ಗಜಲಿನ ಪುಟ ವಿನ್ಯಾಸ ಓದುಗರ ಮನಸೆಳೆಯುತ್ತದೆ. ಗಜಲ್ ಗಳು ಕೇವಲ ಪ್ರೇಮ, ಪ್ರೀತಿ , ಶೃಂಗಾರಗಳಿಗೆ ಸೀಮಿತವಾಗಿರದೇ ಗಾಂಧಿ, ಡಾ.ಅಂಬೇಡ್ಕರ್, ದಮನಿತರ ನೋವು, ಹೆಣ್ಣಿನ ಶೋಷಣೆ, ಅಸಮಾನತೆ, ಮನುಷ್ಯರ ಸ್ವಾರ್ಥ, ಬಲಹೀನರ ಅಸಹಾಯಕತೆ , ಕೋಮುವಾದ…ಹೀಗೆ ವಿವಿಧ ವ್ಯಕ್ತಿ , ವಿಷಯಗಳ ಬಗ್ಗೆ ಪರಿಣಾಮಕಾರಿಯಾಗಿ ರಚಿಸಲ್ಪಟ್ಟಿವೆ. ಅಗಲಿದ ಪ್ರೀತಿಯ ತಂದೆಯವರಿಗೆ ಈ ಸಂಕಲನವನ್ನು ಅರ್ಪಿಸಿರುವ ಲಕ್ಷ್ಮಿಕಾಂತ ಅವರೇ ತಮ್ಮ ನುಡಿಗಳಲ್ಲಿ ಹೇಳಿರುವಂತೆ ‘ ಬಯಲು ‘ ಎಂಬ ಪದಕ್ಕೆ ‘ ಖಾಲಿಯಾದ ಆವರಣ ‘ ಎಂಬ ಅರ್ಥವಿದ್ದರೂ ಶರಣರು ಈ ಪದವನ್ನು ಪರಮಾತ್ಮನಿಗೆ ಸಮೀಕರಿಸಿದ್ದಾರೆ. ‘ಬಯಲು’ ಎಂಬುದಕ್ಕೆ ಸೃಷ್ಟಿಯೆಂಬ ದೇವರು, ಸತ್ಯ, ಜ್ಞಾನ, ಆನಂದ, ಶಕ್ತಿ , ಮುಕ್ತಿ, ನಿರ್ವಾಣ, ಸಮಾಧಿ, ಶಿವತ್ವ, ಬುದ್ಧತ್ವ, ಬಸವತ್ವ…… ಇತ್ಯಾದಿ ಅರ್ಥಗಳಿದ್ದು ಪರಿಪೂರ್ಣವಾದ ಅನಂತ ಚೈತನ್ಯದ ಪ್ರತೀಕವಾಗಿದೆ. ಮನುಷ್ಯ ಸ್ಥಾವರನಾಗದೇ ಜಂಗಮನಾಗಿದ್ದು ಬಯಲೊಳಗೆ ಬಯಲಾಗಿ ಬೆರೆತು ಯಾವಾಗಲೂ ಬಯಲಾಗುವ ಗುಣವನ್ನು ಹೊಂದಿರಬೇಕೆಂಬ ಆಶಯದೊಂದಿಗೆ ಈ ಗಜಲ್ ಸಂಕಲನವನ್ನು ಹೊರತಂದಿರುವ ಲಕ್ಷ್ಮಿಕಾಂತ ಅವರು ಗಜಲ್ ರಚನೆಯ ಅಮಲಿನಲ್ಲಿ ಕಳೆದುಹೋಗಿದ್ದಾರೆ. ಅವುಗಳು ನೀಡಿದ ಸುಖ ಮತ್ತು ಪ್ರಶಾಂತ ಭಾವನೆಯನ್ನು ತನ್ಮಯತೆಯಿಂದ ಅನುಭವಿಸಿದ್ದಾರೆ. ಬದುಕನ್ನು ವಿವಿಧ ದೃಷ್ಟಿಕೋನಗಳಿಂದ ನೋಡುವುದನ್ನು ಕಲಿತಿದ್ದಾರೆ. ಬಯಲೊಳಗೆ ಬಯಲಾಗಿ ಸಂಕಲನದ ಗಜಲ್ ಗಳನ್ನು ಓದುತ್ತಿದ್ದಂತೆ ಓದುಗರೂ ಓದಿನ ನಶೆಯಲ್ಲಿ , ದೊರೆವ ಹಿತ ಸಂವೇದನೆಯಲ್ಲಿ ಕಳೆದುಹೋಗುವುದು ಸುಳ್ಳಲ್ಲ. ಮನಮುಟ್ಟುವ, ನನಗಿಷ್ಟವಾದ ಕೆಲವು ಗಜಲ್ ಗಳ ಸಾಲುಗಳನ್ನು ನಾನೀಗ ಉಲ್ಲೇಖಿಸುತ್ತಿದ್ದೇನೆ. ಜಗದ ಎಲ್ಲ ಜೀವಿಗಳಲ್ಲಿ ಕಷ್ಟವೂ ಇದೆ ಸುಖವೂ ಇದೆ ಹಣೆಯಲಿ ವಿಧಿ ಬರೆದ ನಸೀಬಿನ ಎದುರು ಎಲ್ಲರೂ ಒಂದೇ ( ಗಜಲ್ ೧ ) ಅರಿವೆಂಬ ಬಯಲೊಳಗೆ ಬಯಲಾಗಬೇಕಿದೆ ಸಾಕಿ ಭಕ್ತಿಯೆಂಬ ಬಯಲೊಳಗೆ ಶರಣನಾಗಬೇಕಿದೆ ಸಾಕಿ ( ಗಜಲ್ ೪ ) ಸುಲಭವಾಗಿ ಸ್ನೇಹ ಸಂಬಂಧಗಳ ಕಡಿದುಕೊಳ್ಳುತ್ತಾರೆ ಕಾಂತ ಮನಸ್ಸುಗಳ ನಡುವೆ ಗೋಡೆ ಕಟ್ಟಿದ್ದಾರೆ ಯಾರನ್ನು ದೂರದಲಿ ( ಗಜಲ್ ೮ ) ಪ್ರಕ್ಷುಬ್ಧ ಕಾಶ್ಮೀರ ಮತ್ತೆ ಪ್ರೇಮ ಕಾಶ್ಮೀರವಾಗಿ ಬದಲಾಗಲಿ ಇನ್ನಾದರೂ ಕಲ್ಲು ತೂರುವ ಕೈಗಳಲಿ ಶಾಂತಿ ಹೂವುಗಳು ಅರಳಲಿ ಇನ್ನಾದರೂ ( ಗಜಲ್ ೧೩ ) ಕನಸು ಮುರಿದಿದೆ ಮನಸು ಮುರಿದಿಲ್ಲ ರಟ್ಟೆ ಗಟ್ಟಿಯಿದೆ ಇನ್ನೂ ಕೆಸರಾದ ಭೂಮಿಯಲ್ಲೇ ಕಮಲ ಅರಳಿಸುವೆವು ಮುಳುಗಿಲ್ಲ ಬದುಕು ( ಗಜಲ್ ೧೯ ) ಜಾತಿ, ಧರ್ಮ ,ಅಂತಸ್ತು ಎಂದು ಹೆಚ್ಚು ಬೀಗಬೇಡ ಕಾಂತ ಇತಿಹಾಸ ನೆನಪಿಸಿಕೊಳ್ಳುವುದಿಲ್ಲ ಮನುಷ್ಯತ್ವ ಮರೆತರೆ ( ಗಜಲ್ ೨೨ ) ಬೆಳಕನೀಯುವ ದೀಪಕ್ಕೂ ಇದೆ ಉರಿಯುವ ಸಂಕಟ ನೋವುಂಡ ಮನವೇ ಮುಕ್ತವಾಗಿ ನಗುವುದು , ತಿಳಿಯಿತೇ ಸಖಿ ( ಗಜಲ್ ೨೮ ) ನೀನಿಲ್ಲದೆ ನನ್ನ ಹಗಲು ಇರುಳು ಕಳೆದಿಲ್ಲ ನಿನ್ನ ತೋಳಲಿ ಇರದ ದಿನ ಅದು ನನ್ನದಲ್ಲ ( ಗಜಲ್ ೩೪ ) ನೀನು ಬೆಳಗಿದ ದೀಪದ ಬೆಳಕನು ಆರಿಸಿದ್ದೇವೆ ಕ್ಷಮಿಸು ಗಾಂಧಿ ನೀನು ತೋರಿಸಿದ ಸರಿದಾರಿಯನ್ನು ತೊರೆದಿದ್ದೇವೆ, ಕ್ಷಮಿಸು ಗಾಂಧಿ ( ಗಜಲ್ ೪೦ ) ಒಳಕೊಳೆ ತೊಳೆಯುವ ಜೀವಕೆ ಹತ್ತಿದಾಗಬೇಕು ಭರವಸೆ ತುಂಬುವ ಜೀವಕೆ ಹತ್ತಿರಾಗಬೇಕು ( ಗಜಲ್ ೪೪  ) ಪ್ರೀತಿ ಬಿಟ್ಟು ಯಾವುದೂ ಶ್ರೇಷ್ಠವಲ್ಲ ಇಲ್ಲಿ ಒಬ್ಬರಿಗೆ ಒಬ್ಬರು ನೆರವಾಗಬೇಕು ಮನುಷ್ಯರಂತೆ ( ಗಜಲ್ ೫೦ ) ನಡೆಯುತ್ತ ಅಂದುಕೊಂಡ ಗಮ್ಯ ಸೇರುವ ಅಲೆಮಾರಿಯಂತೆ ನಾನು ಈಜುತ್ತ ಕಷ್ಟಗಳ ನದಿಯನ್ನು ದಾಟುವ ಸಾಹಸಿಯಂತೆ ನಾನು ( ಗಜಲ್ ೬೦ ) ಲಕ್ಷ್ಮಿಕಾಂತ ಅವರ ಬರವಣಿಗೆ ಶಕ್ತಿಯುತವಾಗಿರುವುದಷ್ಟೇ ಅಲ್ಲದೆ ಸಾಮಾಜಿಕ ಪಿಡುಗುಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ಹಾಗೂ ಮೌಲ್ಯಯುತ ಸಂದೇಶವನ್ನು  ನೀಡುತ್ತಿರುವುದು ಅವರ ಹೆಗ್ಗಳಿಕೆಯಾಗಿದೆ. ಆದರೆ , ಕೆಲವು ಗಜಲ್ ಗಳ ಮಿಸ್ರಾಗಳು ಸ್ವತಂತ್ರವಾಗಿಲ್ಲದಿರುವುದು ಒಂದು ಸಣ್ಣ ಕೊರತೆ. ಮುಂದಿನ ದಿನಗಳಲ್ಲಿ ಇದನ್ನು ನೀಗಿಸಿಕೊಂಡು ಅವರು ಮತ್ತಷ್ಟು ಸತ್ವಯುತ ಗಜಲ್ ಸಂಕಲನಗಳನ್ನು ಹೊರತರುವ ಮೂಲಕ ಗಜಲ್ ರಚನೆಯ ಕಲಿಕಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತಾಗಲೆಂದು ಪ್ರೀತಿಪೂರ್ವಕವಾಗಿ ಹಾರೈಸುತ್ತೇನೆ. ಆ ತಾಯಿ ಸರಸ್ವತಿಯ ಆಶೀರ್ವಾದ ಎಂದೂ ಕಾಂತ ನ ಮೇಲಿರಲಿ. ***************************                          ಎ . ಹೇಮಗಂಗಾ                         

‘ ಬಯಲೊಳಗೆ ಬಯಲಾಗಿ’ Read Post »

ಪುಸ್ತಕ ಸಂಗಾತಿ

ಜೋಗದ ಸಿರಿ ಬೆಳಕಿನಲ್ಲಿ

ಪುನರ್ವಸು’ ನಿಸ್ಸಂಶಯವಾಗಿ ನಾನು ಓದಿದ ಶ್ರೇಷ್ಠ ಕೃತಿಗಳಲ್ಲಿ ಒಂದು. ಶರಾವತಿ ವಿದ್ಯುತ್ ಯೋಜನೆ – ಜೋಗ್ ಪ್ರಾಜೆಕ್ಟ್ ಕುರಿತಾದ ಈ ಕಾದಂಬರಿ ನಮಗೆ ತಿಳಿದಿರದ ಬಹಳಷ್ಟು ವಿಷಯಗಳನ್ನು ಮನದಟ್ಟು ಮಾಡಿಸುತ್ತದೆ.

ಜೋಗದ ಸಿರಿ ಬೆಳಕಿನಲ್ಲಿ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

“ಐ ಕಾಂಟ್ ಬ್ರೀದ್” ಕವನ ಸಂಕಲನವು ಮೌಲಿಕವಾಗಿದೆ.ಬದುಕಿನ ಮರ್ಮವನು ತಿಳಿಸುವ,ನಯನಾಜೂಕಿನ ಕ್ರಾಂತಿ ಬಿಂಬಿಸಿದಂತೆ ಮಹೇಶ ಬಳ್ಳಾರಿ ಇವರ ವಿನಯ ಗುಣಗಳು ಇಲ್ಲಿ ಮೆರೆದಿವೆ

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ಕಾವ್ಯವೆಂಬ ಕಾವು ಆರದ ಮಗ್ಗಲು

ಪುಸ್ತಕ ಸಂಗಾತಿ ಕಾವ್ಯವೆಂಬ ಕಾವು ಆರದ ಮಗ್ಗಲು ಕಾವ್ಯವೆಂಬುದು ಕಾಣುವ ಜಗತ್ತಿನೊಳಗಿನ ಕಾಣದ ಅನುಭೂತಿಯನ್ನು ಹುಡುಕುವ ಪಯಣ. ಈ ವ್ಯಕ್ತದೊಳಗಿನ ಅವ್ಯಕ್ತವನ್ನು ಹುಡುಕುವ ತಳಮಳವು ಅಲ್ಲಮನಾದಿಯಾಗಿ ನಮ್ಮ ಪರಂಪರೆಯಲ್ಲೇ ಹರಿದುಬಂದಿದೆ. ಇದಕ್ಕೆ ಆಕಾರಕೊಡುವ ಹೊಸ ಬಗೆ, ಹೊಸ ಬನಿಯಿಂದಾಗಿ ತೇಜಾವತಿಯವರ ಕವಿತೆಗಳು ನಮ್ಮೊಳಗೆ ನಿಚ್ಚಳ ಬಿಂಬವೊಂದನ್ನು ಮೂಡಿಸುತ್ತವೆ. ಕವಿತೆಯೆಂದರೆ ಮಣ್ಣಿನೊಳಗೆ ಬೀಜ ಬೆರೆತು ಮೊಳೆತು ಎಸಳೊಡೆದು ದಳಗಳಾಗಿ ಅರಳಿ ಮಿಡಿಯಾಗಿ ಕಾಯಾಗಿ ಮಾಗಿದ ಹಣ್ಣಿನಂತೆ…. (ಕವಿತೆ) ಕವಿತೆ ಅವ್ಯಕ್ತದ ದಾಹವಾಗಿದ್ದರೂ ಅದು ಅನುಭವಗಳ ಮೈಯೊಳಗೇ ಅರಳುವ ವಿದ್ಯಮಾನ. ಬೀಜ ಮೊಳೆತು ದಳಗಳಾಗಿ ಅರಳಿ,ಹಣ್ಣಾಗಿ ಮಾಗುವ ಈ ವಿಕಸನದ ಕ್ರಿಯೆ ಜೀವಂತ. ಭವದಿಂದ ಅನುಭವ, ಅನುಭವದಿಂದ ಅನುಭಾವ. ಈ ಗುಟ್ಟು ಕವಿತೆಯನ್ನು ಒಳಗೊಳಗೇ ಮಾಗಿಸುತ್ತದೆ. ತೇಜಾವತಿಯವರ ಕವಿತೆಗಳಲ್ಲಿ ಹೀಗೆ ಹಿಗ್ಗುವ ಮಹತ್ವಾಕಾಂಕ್ಷೆಯಿದೆ. ಆ ದಾರಿಯಲ್ಲಿ ಅವರ ಹಸಿಹೆಜ್ಜೆಗಳು ಮೂಡುತ್ತಿವೆ. ಕವಿತೆ ಹದಗೊಂಡ ತನ್ನೊಳಗನ್ನು ಕಾಣಿಸಲು ಭಾಷೆಯು ಸೂಕ್ಷ್ಮಗೊಳ್ಳಬೇಕು. ಕಣ್ಣಿನಾಚೆಯ ಸತ್ಯವನ್ನು ಕವಿಯು ಕಾಣಲು ಪ್ರಜ್ಞೆಯು ಸೂಕ್ಷ್ಮಗೊಳ್ಳಬೇಕು. ಇಂಥ ಸೂಕ್ಷ್ಮತೆಯಿಂದ ಕಂಪಿಸುವ ಹಲವು ಕವಿತೆಗಳು ಈ ಸಂಕಲನದಲ್ಲಿವೆ. ಕವಿ ತನ್ನ ಪ್ರಜ್ಞೆಯನ್ನು ಬೆಳಕಾಗಿಸಿ ಕತ್ತಲನ್ನು, ದುಃಖವನ್ನು ಸದಾ ದಾಟಲು ಪ್ರಯತ್ನಿಸುತ್ತಿರುತ್ತಾಳೆ/ತ್ತಾನೆ. ಅಂಥ ಬೆಳಕಿನ ಕಾವು ಆರದಂತೆ ಕಾಪಿಟ್ಟುಕೊಳ್ಳುವ ನಿಗಿನಿಗಿ ಹಂಬಲವು ಇಲ್ಲಿನ ಕವಿತೆಗಳನ್ನು ಸದಾ ಎಚ್ಚರದಲ್ಲಿ ಇರಿಸಿದೆ. ಸುತ್ತುವರಿದ ಸಮಾಜದ ಚೌಕಟ್ಟುಗಳು, ತೋರಿಕೆಯ ಬದುಕಿನ ಬಂಧನದಾಚೆಗೆ ತೂರಿಬರಲು ತಪಿಸುವ ಆರ್ದ್ರ ದನಿಯೊಂದು ಇಲ್ಲಿ ನಿನದಿಸುತ್ತದೆ. ತೇಜಾವತಿಯವರ ಕವಿತೆಗಳು ಸ್ಮೃತಿ, ಎಚ್ಚರ ಹಾಗೂ ಇದನ್ನು ಮೀರಿದ ಇನ್ನೇನನ್ನೋ ಹಿಡಿಯುವ ಸನ್ನಾಹದಲ್ಲಿ ಬೆರಗು ಮೂಡಿಸುತ್ತವೆ. ಚಲಿಸುವ ಕಾಲದ ಬಿಂಬಗಳನ್ನು ರೂಪಕಗಳಲ್ಲಿ ಸೆರೆಹಿಡಿಯಲು ಹವಣಿಸುತ್ತಾರೆ. “ಊರುಗಳೇ ತಲೆದಿಂಬಾದವು” ಎಂಬ ಕವಿತೆ ಇಂಥ ಬೆರಗಲ್ಲಿ ಹುಟ್ಟಿದ್ದು. ಪ್ರೀತಿ -ಸ್ನೇಹಗಳ ಸೆಳೆತದಲ್ಲಿ ಹಿಗ್ಗುತ್ತ ಹರಿಯುವ ಬದುಕಲ್ಲಿ ಅದನ್ನು ನಿರ್ಬಂಧಿಸುವ ವರ್ತಮಾನದ ಸೂಕ್ಷ್ಮತೆಯನ್ನು ತೇಜಾವತಿಯವರ ಕವಿತೆ ಪ್ರಶ್ನಿಸುತ್ತ ಪ್ರತಿರೋಧಿಸುತ್ತ ಹರಿಯುತ್ತವೆ. ಬೀಸುವ ಗಾಳಿ, ಹರಿಯುವ ನದಿ, ಕೊರೆಯುವ ಹಿಮಗಲ್ಲಿಗಿಲ್ಲದ ಧರ್ಮದ ಹಂಗು ನಮಗೆಲ್ಲ ಯಾಕೆ? ಎಂದು ಆರ್ತವಾಗಿ ಕೇಳುತ್ತಾರೆ. ಮನುಷ್ಯನ ಪ್ರಜ್ಞೆಯನ್ನು ಪ್ರಕೃತಿಯ ಅನಿರ್ಬಂಧಿತ ಪ್ರಜ್ಞೆಯಲ್ಲಿ ಕರಗಿಸುವ ನುಡಿಗಳಿಂದ ಕವಿತೆ ಒಳಗಿನ ಸ್ವಾತಂತ್ರ್ಯದ ಝರಿಯನ್ನು ಶೋಧಿಸಿಕೊಳ್ಳುತ್ತದೆ. ಘೋಷಣೆಗಿಳಿಯದೇ, ಕಾದಾಡದೇ ಎಲ್ಲವನ್ನೂ ಮೀರುವ ಸಂಯಮದ ದನಿಯೇ ಇಲ್ಲಿ ಕಸುವುಗೊಂಡಿದೆ. ಸುತ್ತಲಿನ ದಿಗ್ಬಂಧನಗಳನ್ನು ಕಳಚಿ ನಿರಾಳವಾಗುವ ದಾರಿಗಳನ್ನು ಹುಡುಕುವ ಮಾಧ್ಯಮವೂ ಇಲ್ಲಿ ಕವಿತೆಯೇ ಆಗಿದೆ. ಒಂದು ದಿನ ಬೀಗ ಹಾಕಿಕೊಂಡಿದ್ದ ಬಾಯಿಗೆ ನಾಲಿಗೆ ಬಂದಿತು ಒಳಗಿಟ್ಟುಕೊಂಡಿದ್ದ ಕೆಂಡ ದುಃಖದ ಮಡುವಲ್ಲಿ  ಕರಗಿಹೋಯಿತು.. (ನೀರ ಮೇಲಿನ ಪಾದ) ತೇಜಾವತಿಯವರ ಕವಿತೆಯಲ್ಲಿರುವ ಬೆಳಕಿನ ಹಂಬಲ, ಆಶಾವಾದ, ಭವಿಷ್ಯದ ಕುರಿತ ಕನಸುಗಳು…. ಇವೆಲ್ಲ ಕತ್ತಲ ಗರ್ಭದಲ್ಲಿಯೇ ಬೆಳಕಿನ ಬೀಜಗಳನ್ನು ಊರುತ್ತವೆ. ಅದರ ಅಪಾರ ಸಾಧ್ಯತೆಗಳನ್ನು ಕನಸುತ್ತವೆ. ಕಾವ್ಯವು ಕಾವು ಆರದ ಮಗ್ಗಲಾಗಿ ಅವರಿಗೆ ಕಾಣಿಸುವುದೇ ಚೇತೋಹಾರಿ. ಬಾ… ಭವಿಷ್ಯದ ನಕ್ಷತ್ರಗಳಾಗೋಣ ಕಾವು ಆರದ ಮಗ್ಗಲುಗಳು ಎಡಬಿಡದೆ ಕಾಡಿಸುತ್ತವೆ ನಿನ್ನನ್ನೇ… ಬದುಕಿನ ಎಲ್ಲ ಮರ್ಮರಗಳಿಗೆ ಕಿವಿಯಾಗುತ್ತಲೇ ದಿವ್ಯವಾದುದೊಂದು ನಮ್ಮನ್ನು ಕಾಡದೇ ಹೋದರೆ, ನಮ್ಮ ಕನಸುಗಳನ್ನು ಹಸಿಯಾಗಿ ಉಳಿಸದೇ ಹೋದರೆ ಕಾವ್ಯ ಹಳಹಳಿಕೆಯಾಗುತ್ತದೆ. ತೇಜಾವತಿಯವರ ಕಾವ್ಯ ಜೀವಂತವಾಗಿರುವುದೇ ಅದರ ಚಲಿಸುವ ಚೈತನ್ಯದಿಂದ ಹಾಗೂ ಸದಾ ಹಿಗ್ಗುವ ಹಂಬಲದಿಂದ. ****************************************** ಡಾ. ಗೀತಾ ವಸಂತ

ಕಾವ್ಯವೆಂಬ ಕಾವು ಆರದ ಮಗ್ಗಲು Read Post »

ಪುಸ್ತಕ ಸಂಗಾತಿ

‘ ಗಾಲಿಬ್ ಸ್ಮೃತಿ’

ಸುಮಾರು ಇಪ್ಪತ್ತು ಷೇರ್ ಗಳನ್ನು ಹೊಂದಿರುವ ೯೦ ನೇ ಗಜಲ್ ತನ್ನ ಮಗನ ಸಾರ್ಥಕ ಬಾಳಿಗಾಗಿ ಜೀವ ಸವೆಸಿ ಕೊನೆಗೆ ಒಂಟಿತನದಲ್ಲಿ ನರಳುತ್ತಾ ತಾನು ತೊರೆದಿದ್ದ ಮದಿರೆಗೇ ದಾಸನಾಗುವ ತಂದೆಯ ಕರುಣಾಜನಕ ಕಥೆಯನ್ನು ಕಟ್ಟಿಕೊಡುತ್ತದೆ.

‘ ಗಾಲಿಬ್ ಸ್ಮೃತಿ’ Read Post »

You cannot copy content of this page

Scroll to Top