ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯ ದರ್ಪಣ

ನಾಗರತ್ನ.ಹೆಚ್ ಗಂಗಾವತಿ ಅವರ “ಗೆಲ್ಲುವೆ ಮನ”

ಕಾವ್ಯ ಸಂಗಾತಿ ನಾಗರತ್ನ.ಹೆಚ್ ಗಂಗಾವತಿ “ಗೆಲ್ಲುವೆ ಮನ” ಬೇಕು ಬೇಡಿಕೆಗಳ ನಡುವೆ ಸಾಗಿದೆ ಜೀವನಅರಿಯದ ಮನಗಳ ನಡುವೆ ಮೌನದ ತಲ್ಲಣಕೋಪ ಮುನಿಸುಗಳ ನಡುವೆ ಜೀವನ ಪಯಣಮತ್ತೇರಿದ ಗುಂಗಿನಲ್ಲಿ ಕೆಲವರ ಮಾತಿನ ಔತಣಇರಲು ನಿನ್ನಲ್ಲಿ ತಾಳ್ಮೆಯ ಗುಣ ಗೆಲ್ಲುವೆ ನೀ ಎಲ್ಲರ ಮನ.ಅಪರೂಪದ ಮಾತಿನ ಬಗೆಗಳ ಆಲಿಸುವ ತಾಳ್ಮೆಯ ಸೌಜನ್ಯಸ್ವಾರ್ಥದ ಬೇಗೆಯಲ್ಲಿ ಬಂಧಗಳ ಬಿರುಕಿನ ಕಂಪನ .ಆಡಿದವರ ಮಾತಿಗೆ ಹಾಕಬೇಕಿದೆ ವಿರಾಮ.ನಿನ್ನ ನಡೆ-ನುಡಿಯಲ್ಲಿ ಇರಲಿ ಸದಾ ಚೇತನಭಗವಂತನ ದಯೆ ಇರಲು ನಿನ್ನ ಮೇಲೆ ಸದಾ ಗೆಲುವಿನ ಪಯಣ. ನಾಗರತ್ನ.ಹೆಚ್. ಗಂಗಾವತಿ

ನಾಗರತ್ನ.ಹೆಚ್ ಗಂಗಾವತಿ ಅವರ “ಗೆಲ್ಲುವೆ ಮನ” Read Post »

ಕಾವ್ಯ ದರ್ಪಣ, ಗಝಲ್

ಗಜಲ್ ಜುಗಲ್ ಬಂದಿ

ತರಹೀ ಗಜಲ್ : ನಯನ. ಜಿ. ಎಸ್ ಅವರ ಊಲಾ ಮಿಸ್ರಾ”

ಅವರಿವರನ್ನು ಜರೆಯುತ್ತಾ ನಾಳೆಗಳ ಭವ್ಯ ಸಾರವನ್ನು ಹಿಂಡುತ್ತಿದ್ದೇನೆ
ಅಗಮ್ಯವನ್ನು ನೆನೆಯುತ್ತಾ ಈ ಕ್ಷಣದ ನಲಿವನ್ನು ಕಳೆದುಕೊಳ್ಳುತ್ತಿದ್ದೇನೆ

ಅಲಕ್ಷಿಸುತ ಮುನ್ನಡೆಯಬೇಕು ಅನ್ಯರ ದೋಷಗಳನ್ನು ನಾವಿಲ್ಲಿ
ಅರಿವಿರದ ವ್ಯಾಜ್ಯಗಳ ಕಟಕಟೆಯಲ್ಲಿರಿಸಿ ಕಾಲವನ್ನು ವ್ಯಯಿಸುತ್ತಿದ್ದೇನೆ

ಅಂತರವನ್ನು ಬಯಸಿದವರ ಮನದಲ್ಲಿ ಆತ್ಮೀಯತೆಗೆಲ್ಲಿರುವುದು ಸ್ಥಾನ
ಎಳೆದು ಮುಚ್ಚಿದ ಕದದ ಬಳಿ ಕುಳಿತು ಭವಿಷ್ಯವನ್ನು ನಿರ್ಲಕ್ಷಿಸುತ್ತಿದ್ದೇನೆ

ಪ್ರಬುದ್ಧ ಮನದಲ್ಲಷ್ಟೇ ನಡೆಯುವುದು ನಿರ್ಲಿಪ್ತತೆಯಿಂದ ನಿದಿಧ್ಯಾಸನ
ಪ್ರಕ್ಷುಬ್ಧತೆಯ ಪರಾಕಾಷ್ಠೆಯಲ್ಲಿ ತಪಿಸುತ ಚಿತ್ತಸ್ವಾಸ್ಥ್ಯವನ್ನು ಸುಡುತ್ತಿದ್ದೇನೆ

ಉಡಿಯೊಳಗೆ ಇರಿಸಿದ ಇಂಗಳವದು ದಹಿಸದಿರುವುದೇ ಒಳಗೊಳಗೆ
ಹುಚ್ಚು ಮನಸ್ಸಿನ ಹೊಯ್ದಾಟದಲ್ಲಿ ‘ವಿಜಯ’ವನ್ನು ವರ್ಜಿಸುತ್ತಿದ್ದೇನೆ.
ವಿಜಯಪ್ರಕಾಶ್. ಕೆ

ಗಜಲ್ ಜುಗಲ್ ಬಂದಿ Read Post »

ಕಾವ್ಯ ದರ್ಪಣ

ಗಜಲ್

ಕಾವ್ಯ ಸಂಗಾತಿ ಗಜಲ್ ಮಾಜಾನ್ ಮಸ್ಕಿ ದುರ್ಜನರ ದುರಹಂಕಾರಕ್ಕೆ ಬಲಿಯಾಗುತ್ತಿದೆ ಬದುಕುಸಜ್ಜನರ ಒಡನಾಟಕ್ಕೂ ಭಯ ಪಡುತ್ತಿದೆ ಬದುಕು ಅನುಭವವು ಜೀವನ ನಡೆಸುವುದನ್ನು ಕಲಿಸಿಕೊಡುತ್ತದೆಯಾರನ್ನು ನಂಬಬೇಕೆಂದು ಹೇಳುವುದು ಮರೆಯುತ್ತಿದೆ ಬದುಕು ವಿಶ್ವಾಸ ಮಾಡದೇ ಬದುಕಿದರೆ ದ್ವೇಷ ಕೋಪಗಳಿಗೆಬಲಿಯಾಗಬೇಕಿದೆಮುಗ್ದ ಮನಸ್ಸಿಗೆ ಶರಣಾಗಿ ದಿಲ್ ನೋಯುತ್ತಿದೆ ಬದುಕು ಎಷ್ಟು ಗೋಗರೆದರೇನು ಕಟುಕನಿಗೆ ಕನಿಕರ ಬರುವುದೆಭಾವನೆಗಳು ಕಲ್ಲು ಅಲ್ಲಲ್ಲ ಉಕ್ಕಾಗಲು ಬಯಸುತ್ತಿದೆ ಬದುಕು ಜೀವ ಉಳಿಸಿಕೊಂಡ ಮೀನು ನೀರಿನ ಆಳಕ್ಕೆ ಇಳಿದಿದೆ “ಮಾಜಾ”ಬೀಸುವ ಬಲೆಯಿಂದ ತಪ್ಪಿಸಿಕೊಳ್ಳಲು ಸೆಣಸುತ್ತಿದೆ ಬದುಕು

ಗಜಲ್ Read Post »

You cannot copy content of this page

Scroll to Top