ಕಾವ್ಯಯಾನ
ಒಲವೂ ಯುದ್ಧದ ಹಾಗೆ ನಂದಿನಿ ವಿಶ್ವನಾಥ ಹೆದ್ದುರ್ಗ ಒಲವೂ ಯುದ್ಧದ ಹಾಗೆಸಿದ್ದ ಸಿದ್ಧಾಂತವಿಲ್ಲ ಮೀರದೆ ಮೀಸಲುಚಹರೆ ಪಹರೆ ಅರಿತುನಿಖರ ನಿಕಷದ ನಿಮಿತ್ತಕೊಡಬೇಕು ನಿರ್ವಾತ ಮೊಳೆಯುವ ಬೆಳೆಯುವಅರಳುವ ಹೊರಳುವಉರುಳುವ ಮರಳುವಆಕಾಶದ ಅವಕಾಶ. ತೆಗೆದ ಕದವೇ ಹದ.ಹೋಗಗೊಡಬೇಕು..ನಂಬುಗೆಗೆ ಕಳೆದ ಛಾವಿಯಗೊಡವೆ ಮರೆಯಬೇಕು ಸರಳರೇಖೆ ಹೃದಯವಾಗಲುಕಾಯಬೇಕು,ಬೇಯಬೇಕುಗಾಯಗಳ ಮಾಯಿಸಬೇಕು.ಅರಳಿದರೆ ಬಿಳಿ..ಮಳೆಬಿಲ್ಲು ಸಿದ್ದ ಸಿದ್ದಾಂತವಿಲ್ಲಗೆದ್ದರದು ಗೆಲುವಲ್ಲ ಒಡೆದ ಹೃದಯ ಛಿದ್ರ ಬದುಕು.ಹೊಲೆದು ಮಡಿಸಿಟ್ಟ ಕನಸುಕಾಲ ನುಂಗಿ ಕಣ್ಮರೆಯಾದ ಬಣ್ಣಯುದ್ಧ ಮುಗಿದ ಊರು ************8 __









