ಆಯ್ಕೆ ನಿನ್ನದು
ಕವಿತೆ ಆಯ್ಕೆ ನಿನ್ನದು ಸುಮಾ ಆನಂದರಾವ್ ಜುಳುಜುಳು ಹರಿವ ಝರಿ ತೊರೆಗಳುನಯನ ಮನೋಹರ ಪರ್ವತ ಶಿಖರಗಳುಬಣ್ಣ ಬಣ್ಣದ ಹೂ ಗೊಂಚಲುಗಳುಹೀರಿದ ಮಕರಂದದಿ ಮಧು ಪಾತ್ರೆಯಸಿಹಿ ತುಂಬಿಸಿ ಝೇಂಕರಿಪ ದುಂಬಿಗಳುಕಣ್ಮನ ಸೂರೆಗೊಳ್ಳುವ ಹಚ್ಚ ಹರಿದ್ವರ್ಣಒಳನುಸುಳಲು ಹೊಂಚುಹಾಕುತಿಹ ಸೂರ್ಯಕಿರಣಒಂದೇ ಎರೆಡೇ ಗೋವರ್ಧನ ಗಿರಿ ಸಂಪತ್ತು ಶ್ಯಾಮನೇಕೆಭಾರದ ಗಿರಿಯ ಒಂದೇ ಬೆರಳಲಿ ಹಿಡಿದ ?ಹಗುರಾದ ಕೊಳಲನೇಕೆ ಎರಡು ಕೈಯಲಿ ಪಿಡಿದ!ಅಚ್ಚರಿಯೊಡನೆ ದಿವ್ಯ ಸತ್ಯವೊಂದಿಹುದುಗಿರಿಯಲಿ ಸೌಂದರ್ಯ ತುಂಬಿಕೊಂಡರೂಗಾಢ ಕತ್ತಲು, ಭಯಂಕರ ಮೃಗಗಳು, ಸರೀಸೃಪಗಳುಓಡಲಾಳದಿ ಇವೆಯಲ್ಲವೇ?ಕೊಳಲಾದರೋ ತನ್ನೊಳಗೆ ನುಗ್ಗಿದ ಶ್ವಾಸವನ್ನು ಸಹ ಹಿಡಿದಿಡದೆಸುಶ್ರಾವ್ಯವಾಗಿ ಕಿವಿಗೆ ಇಂಪು ನೊಂದ ಮನಕೆ ತಂಪು ನೀಡುವುದು ನಿರಾಡಂಬರ ನಿಷ್ಕಲ್ಮಶವ ಅನಾವರಣಗೊಳಿಸುವಕೊಳಲಾಗುವೆಯ ಶ್ಯಾಮ ನಿನ್ನ ಭದ್ರವಾಗಿಎರೆಡು ಕೈಯಲಿ ಪಿಡಿವಗಿರಿಯಾಗುವೆಯ ಆಗಲು ಹಿಡಿವ ಆದರೆಎತ್ತಿ ಆಗಸದೆತ್ತರಕೆ ಒಂದೇ ಬೆರಳಲಿಆಯ್ಕೆ ನಿನ್ನದು *****************************************









