ಅರುಣಾ ನರೇಂದ್ರ ಅವರ ಗಜಲ್
ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ದೇಹ ನಶ್ವರ ಆತ್ಮ ನಿಜದಲಿ ಕೆಡಬಹುದೇ ಕಣ್ಣು ಕಟ್ಟು ಕನಸು ಬಟ್ಟೆಯಲಿ ಕಟ್ಟಬಹುದೆ ಹುಣಿವೆ ಚಂದ್ರನ ಬೆಳಕು ಉಕ್ಕಿದೆ ಸಾಗರಬೆಳದಿಂಗಳ ಬೊಗಸೆಯಲಿ ತುಂಬಬಹುದೇ ಅರಳಿದ ಹೂ ಮುದದಿ ಮುಡಿಯುತ್ತೇನೆಗಂಧವನು ಬೆರಳಿನಲಿ ಹಿಡಿಯಬಹುದೇ ತೂಗಾಡುವ ಮರವ ಹಬ್ಬಿ ನಿಂತಿದೆ ಬಳ್ಳಿಗಾಳಿಯನು ತೋಳಿನಲಿ ತಬ್ಬಬಹುದೇ ಅರುಣಾಳ ಕೊಂದು ಖುಷಿಪಡಬಹುದುಅವಳ ಆಸೆಗಳ ಶಸ್ತ್ರದಿ ಕೊಲ್ಲಬಹುದೇ ಅರುಣಾ ನರೇಂದ್ರ
ಅರುಣಾ ನರೇಂದ್ರ ಅವರ ಗಜಲ್ Read Post »









