ಟಂಕಾಗಳು
ಟಂಕಾಗಳು ಕೆ. ಸುನಂದಾ ಹಸಿದ ಹೊಟ್ಟೆಅರಸು ವೇಷ ; ಖಾಲಿಊಟದ ತಟ್ಟೆಜೀವನ ಸಾಗಿಸಲುಬೀದಿ ನಾಟಕದಾಟ** ನಡೆ ನುಡಿಯುಒಂದಾಗಲು ; ಜೀವನಸಾರ್ಥಕವಾಯ್ತುಕಪಟ ಮೋಸಗಳುಅಧಃಪತನ ವಾಯ್ತು** ನಾನೇ ಎಂಬುದುಅಹಂಕಾರ ; ನನ್ನದೇಎಂದರೆ ನಾಶಜೀವನ ನಡೆಸಲುಅರಿತು ಸಾಗಬೇಕು** ಜೀವನದಲ್ಲಿಸತ್ಯಕ್ಕೆ ; ಸಾವೇ ಇಲ್ಲಅಸತ್ಯ ಬೇಡಸಂಸ್ಕಾರ ವಂತರಿಗೆಜಯ ಕಟ್ಟಿಟ್ಟ ಬುತ್ತಿ** ಸಾವಿರ ಜನಸೇರಿ ಆಡುವ ಮಾತುಲೆಕ್ಕಕ್ಕೆ ಅಲ್ಲಆತ್ಮನ ನಿರ್ಧಾರವುಒಳಿತಿಗೆ ದಾರಿಯು** ಜೀವನ ಸಾರಕೆಲಸ ಮಾಡಿ ತಿನ್ನುಅನ್ಯರನೆಂದೂತಿರಸ್ಕರಿಸದಿರುಒಳಿತಿನ ಗುಟ್ಟಿದು** ಆಡದೇ ಮಾಡುಕೆಲಸ ಕೈ ಬಿಡದುಹಂಬಲವೇಕೆಫಲ ಅವನ ಇಚ್ಛೆನಿಷ್ಕಾಮ ಕರ್ಮ ಸಾಕು* ಸತ್ಯದ ನುಡಿಕೊನೆವರೆಗೆ ನಡಿಅಸತ್ಯ ಬೇಡದೇವನೇ ಬರುವನುಭಕ್ತನಿದ್ದೆಡೆ ಓಡಿ **************************************









