ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಇನಿಯ ಅಕ್ಷತಾ ಜಗದೀಶ ಪ್ರೇಮದ ಕಡಲಾಚೆ ಇಚೆಗಿನದಡದೊಳು ಮೂಡಿದ ನಮ್ಮ ‌ಪ್ರೇಮ..ಈಗ ಒಂದೇ ‌ದೋಣಿಯೊಳು ಕುಳಿತುಸಾಗಬೇಕೆನಿಸುತಿದೆ …ಈ‌ ನಮ್ಮ ಪಯಣ… ವಿಶಾಲ ಕಡಲಿನಂತೆ‌ ನಿನ್ನ ‌ಪ್ರೇಮಅಪರಿಮಿತ…ನಿನ್ನ ‌ಬಾಹುಬಂಧನದೊಳು ನಾನಾಗಿಹೆಮೂಕ ವಿಸ್ಮಯ….ಬಾಳೆಂಬ ಪ್ರೀತಿಯ ದೋಣಿಗೆಇನಿಯನೇ ನೀನಾಗು ನಾವಿಕನಿನ್ನ ಮಾತಿನ ಅಲೆಯೊಳುಮೌನವಾಗಿ ಸಾಗುವೆ ನಾ ನಿರಂತರ.. ಸ್ನೇಹದ ಈ ಅನುಬಂಧ..ಪ್ರೇಮದ ಬಂಧವಾಯ್ತು..ನನ್ನ ‌ಕನಸಿನ ಲೋಕನಿನ್ನಿಂದ ನನಸಾಯ್ತು…ಸೆರೆ ಹಿಡಿದೆ ಕಣ್ಣಲ್ಲೇ…ಕಡಲಾಳದ ಮುತ್ತಿನ ಹಾಗೆ..ನನ್ನ ನಾಳೆಯ ಬಾಳಿಗೆನೀನಾದೆ ಮಾಸದ ಹಣತೆ.. ***********************************

Read Post »

ಕಾವ್ಯಯಾನ

ಪ್ರೇಮ ನಳಿನ ಡಿ. ಆತ್ಮ ವಿಹೀನರಿಗೆಪ್ರೇಮವೆಂದರೆ ಬರೀ ಅದೇ,ಕಾಮಣ್ಣನ ಮಕ್ಕಳೆಷ್ಟೋ ವಾಸಿಪ್ರೇಮ ಹಬ್ಬಿಸಲು ಸುಟ್ಟುಅಮರರಾದ ಒಲುಮೆ ಬಲ್ಲವರು ಕೆಲವರಿಗೆ ಪ್ರೇಮವೆಂದರೆ ಅದೇ,ಬರೀ ಮಾತು, ಮೈಯ ಮಿಸುಕಾಟ,ನಿರ್ವಾಣಕ್ಕೊಂದು ಸುಳ್ಳು,ಕೇಸರಿ ಧೋತಿಗಳೊಂದು ನೆಪ, ಕೆಲವರಿಗೆ ಪ್ರೇಮವೆಂದರೆ ಬರೀ ಅದೇ,ಗಲ್ಲಿ ಗಲ್ಲಿಯಲಿ ಹುಡುಕಾಟ,ನೋಟಕ್ಕಾಗಿ ಅಲೆದಾಟ,ನೋಡಿಕೊಂಡೇ ಮುಗಿದು ಹೋಗುವ ಚಟ, ಕೆಲವರಿಗೆ ಪ್ರೇಮವೆಂದರೆ ಬರೀ ಅದೇ,ಮತ್ತೆ ಕೆಲವರಿಗೆ ಹಾಗಲ್ಲ,ಒಂದು ನೋಟ, ಒಂದೇ ಭೇಟಿ,ಪ್ರೀತಿ ಸಹಿ ಸಾಕು,ಇಡೀ ಜೀವನ ಹಾಗೇ ಸವೆಸಲು *******************************

Read Post »

ಕಾವ್ಯಯಾನ

ಪ್ರೇಮಕವಿತೆ ಶ್ರೀಲಕ್ಷ್ಮೀ ಅದ್ಯಪಾಡಿ. ತಡೆದು ಬಿಡು ಸಮಯವನು….ಸರಿಯುತಿಹುದು ಸಮಯ ಜಿದ್ದಿಗೆಬಿದ್ದಂತೆಒಂದು ಕ್ಷಣ ಒಂದೇ ಒಂದು ಕ್ಷಣತಡೆದುಬಿಡುಇದ್ದಲ್ಲೆ ಇರುವಂತೆಉಸುರದೇ ಉಳಿದ ಸಾವಿರ ಮಾತುಗಳೋಒಂದೊಂದೇ ಕಾದಿಹವುಸರತಿಯಸಾಲಿನಲಿನಿಂತಂತೆಇದೀಗ….. ನಿನ್ನೊಂದಿಗೆಒಂದೊಂದಾಗಿ ಭಾವಗಳ ಹಂಚಿಕೊಳ್ಳಬೇಕಿದೆಕಾಮನಬಿಲ್ಲಿನರಂಗಿನಂತೆಮನಸಾರೆ ನೆನಪಿನ ದಾರದಿ ಪೋಣಿಸಿದಒಲವಿನಹೂವುಗಳಂತೆಓಡುವ ಹೊತ್ತನೂ ಮೀರಿ ನಿನ್ನೊಳುಬೆರೆಯಬೇಕಿದೆಬೆರೆತು ನಿನ್ನುಸಿರಿನೊಳುನನ್ನುಸಿರೇಬೆವೆಯಬೇಕಿದೆನಿನ್ನ ಕಣ್ಣೊಲವನೇ ಬೆಚ್ಚಗೆ ಹೊದ್ದು ಮೈಮರೆತುಮಾಗಿಯಚಳಿಯು ಸಹ ಅಸೂಯೆ ಪಡುವಂತೆಹಂಗಿಸಬೇಕಿದೆನಿನ್ನ ಬೆರಗಿನ ಪ್ರತಿ ಗುಂಗಿನ ಬೀಜಗಳನನ್ನಾಳದೊಳು ಪಡೆದುಬರುವ ನಾಳೆಗಳೂಭೇಟಿಗೆಕಾತರಿಸಿದಂತೆನಿನಗಾಗಿಹೂವರಳಿಸಿನಗಬೇಕಿದೆಆಗಸವೇಒಲವಿನರಂಗನು ಪಡೆದುನಮ್ಮ ಪ್ರೇಮವನುಹರಸುವಂತೆ ****************************************

Read Post »

ಕಾವ್ಯಯಾನ

ಅಂತರ ರೇಷ್ಮಾ ಕಂದಕೂರ. ಒಂದಾಗಿದ್ದ ಸಂಬಂಧಇಂದೇಕೋ ಅಂತರ ಕಾಯ್ದುಕೊಂಡಿದೆಭಾವತರಂಗದ ಉಬ್ಬು ತಗ್ಗುಗಳುಲಗ್ಗೆ ಇಟ್ಟಿವೆ ಮನದಾಳದ ಕಡಲಲಿ ಸಂತಸದ ಕ್ಷಣಗಳುತೆರೆ ಮರೆಗೆ ಸರಿದಿವೆನಾ ನೀ ಎಂಬಂತಹ ಸ್ಥಿತ್ಯಂತರದಿರೂಪಾಂತರ ಹೊಂದಿವೆ ಬಂಧು ಬಂಧುರವೇಹೇಳ ಹೆಸರಿಲ್ಲದಂತೆ ಹೋಗಿವೆಬಾಳ ಸವಿಗಾನಕೆಅಂತರದ ಬಾಗೀನ ಪಡೆದಿದೆ ಅಂತರಾಳದಿ ಅಲೆಗಳೆದ್ದುಬಾನಂಚಿನ ಚಂದ್ರನೆ ಕೆಂಪಾಗಿಸೋಂಪಾಗಿ ಬೆಳೆದ ಮರಕೆಬರಸಿಡಲು ಹೊಕ್ಕಾಗಿದೆ. ****************************

Read Post »

ಕಾವ್ಯಯಾನ

ಲಾಲಿತ್ಯ ಚಂದ್ರಪ್ರಭ ನಗುವೆ ಮೈವೆತ್ತ ಆ ಮಧುರ ಕ್ಷಣದಲಿಬೆಳಕನರಸುತ್ತ ನನ್ನ ಕಣ್ಣೊಳುನೀ ನುಡಿದೆ-‘ ಪ್ರೀತಿಸು ಕವಿತೆಯನುಅದು ನಿನ್ನ ಪ್ರೀತಿಸುವುದು…ಆಗಹೊಳೆಯುವ ಪದಗಳ ಲಾಲಿತ್ಯ ನೋಡು.’. ನಾ ನಿನ್ನ ಪ್ರೀತಿಸಿದೆ….ನಿನ್ನ ನುಡಿಯ ಸತ್ಯ ವೇದ್ಯವಾಗಿತ್ತುನನ್ನ ಲೇಖನಿಯಲಿ ಅರಳಿದನಿನ್ನ ಕವನಗಳು… ನಿನ್ನನಗುವೊಂದು ಕವನನಡೆ ಇನ್ನೊಂದುಮುನಿಸೊಂದು ಕವನಒಲುಮೆ ಮತ್ತೊಂದು… ನೀನಿಲ್ಲದಿರುವಾಗಲೂಕೈಹಿಡಿದು ನಡೆಸುತಿದೆ ಕವಿತೆತೆರೆ ಮರೆಯ ಹಣತೆಯಾಗಿಹೆಜ್ಜೆ ಹೆಜ್ಜೆಯಲೂ…. ****************************

Read Post »

ಕಾವ್ಯಯಾನ

ಗಜಲ್ ಸಿದ್ಧರಾಮ ಹೊನ್ಕಲ್ ಕದ್ದು ಕದ್ದು ನೋಡುವುದೇಕೆ ಹೀಗೆ ಕಾಡುವುದೇಕೆ ಸಖಿಮನ ತುಂಬಾ ಪರಸ್ಪರ ನಾವಿರಲು ಈ ಬಿಗುಮಾನವೇಕೆ ಸಖಿ ಬಿಟ್ಟಿರಲಾರೆವು ಅನುದಿನ ಪ್ರೀತಿಯೋ ಜಗಳವೋ ಒಂದೇಎಷ್ಟು ದಿನದ ಮಾತಿದು ಆದರೀಗೆ ಮಾಡುವುದೇಕೆ ಸಖಿ ಉಸಿರುಸಿರಲಿ ಪ್ರೇಮದಿ ಮನಸು ಬೆರೆತು ಹೋಗಿರುವದುಕ್ಷಣ ಕಣ್ಣ ಮುಂದೆ ಕಾಣದಿದ್ದರೆ ಚಡಪಡಿಸುವದೇಕೆ ಸಖಿ ಮನದ ಬಾಗಿಲು ಮುಚ್ಚೋದು ತೆರಿಯೋದು ಮಾಡಬೇಡಹಂಬಲಿಸಿ ಕಾದು ಕುಳಿತವಗೆ ಹುಚ್ಚನಂತೆ ಕಾಣುವುದೇಕೆ ಸಖಿ ನಾ ಎಲ್ಲಿದ್ದರೂ ಹೇಗಿದ್ದರೂ ಸದಾ ನಿನ್ನ ನೆನಪಲಿರುವುದುಯೋಚಿಸು ಹೊನ್ನಸಿರಿ’ಅಗಲಿ ಸುಖದಿ ಇರಲಾಗದೇಕೆ ಸಖಿ

Read Post »

ಕಾವ್ಯಯಾನ

ಮೊದಲ ಸ್ಪರ್ಶ ಮಾಲತಿ ಶಶಿಧರ್ ಮೊದಲ ಸ್ಪರ್ಶಮೈ ನಡುಕ ರೋಮಾಂಚಕಅದುರಿದಧರ, ಸಾಲು ಬೆವರಪದದಲ್ಲಿಡುವ ಕಸರತ್ತು ರೋಮ ರೋಮದಬಳ್ಳಿಯಲ್ಲೂ ಮೈನೆರೆದಹೂಗಳುಮನದಲ್ಲಲ್ಲಲ್ಲಿ ಬೆಳಗಿದನಕ್ಷತ್ರಗಳ ಸಾಲು ನೆನೆದು ನೆನೆದುಏರಿ ಕಾವುಬಿಸಿಯುಸಿರಲೇ ಬರೆದಶೃಂಗಾರ ರಸ ಅದೆಂತಾ ಮಾಂತ್ರಿಕಮೊದಲ ಸ್ಪರ್ಶತಣ್ಣಗೆ ಸೋಕಿಬಿಸಿ ಏರಿಸುವ ಆಟಅಣುರೇಣುವಿನಲ್ಲೂಅದರದ್ದೇ ಜೂಜಾಟ..

Read Post »

ಕಾವ್ಯಯಾನ

ವರ್ಷಧಾರೆ ಸಂಮ್ಮೋದ ವಾಡಪ್ಪಿ ಅವಳ ಕಣ್ಣ ನೋಟದಲಿಮಿಂಚು ಹರಿಯುತತಲಿತ್ತುಎನ್ನ ಮನದ ಭಾವನೆಗಳಅವಳು ಅರಿತಂತಿತ್ತು ಪ್ರೀತಿಯ ಕಾರ್ಮೋಡಗಳುವರ್ಷಧಾರೆಯ ಮಾಡಲೆಂದುಒಟ್ಟಿಗೆ ಬಂದು ನಿಂತಂತ್ತಿತ್ತುತಂಗಾಳಿಯು ತಂಪನು ಸೂಸುತಲಿತ್ತು ಪ್ರೇಮದ ಮಳೆಯ ಸಿಂಚನದಲಿನೆನೆಯಲು ಹವಣಿಸುತಲಿತ್ತುಅವಳ ಕಣ್ಣರೆಪ್ಪೆ ಎಲ್ಲ ತಿಳಿಸಿತ್ತುಕಾದಿರುವ ಮನದ ದಣಿವಾರಿತ್ತು ಕಿರುನಗೆಯು ಮೊಗದಲಿ ಹೊರಹೊಮ್ಮಿತ್ತುಮನದ‌ ತೊರೆಯು ತುಂಬಿಹರಿದಿತ್ತುಬಾಳ ಸಂಗಾತಿಯ ಪ್ರೇಮದ ಪರಿಯೇಬದುಕಲ್ಲಿ ಭರವಸೆಯ ಬಹು ಚೆಲ್ಲಿತ್ತು ನಲ್ಮೆಯ ಗೆಳತಿಯು ಕೈಹಿಡಿದು ನಡೆವಾಗನೀರು ಗಾಳಿ ಸೇರಿ ಒಲವ ಧಾರೆಯ ಎರೆದುನೀರುಣಿಸಿ ಕಾರ್ಮೋಡ ಸರಿದು ಹೋಗಿತ್ತುಜೊತೆಯಲಿ ನಡೆವ ದಾರಿಯಲಿ ಬೆಳಕು ಕಂಡಿತ್ತು *********************************

Read Post »

ಕಾವ್ಯಯಾನ

ಒಪ್ಪಿಸಿಕೋ… ಜಿ. ಲೋಕೇಶ ಕಾಡುತಿದೆ ಎದೆಯ ಮಾತೊಂದುಸಿಗುವೆಯಾ ಹೇಳಲೇ ಬೇಕಿಂದುಆವರಿಸಿ ಹೀಗೊಂದು ಭಾವಕಳೆದಿದೆ ವರುಷವೇ ತಿಳಿ ಜೀವನನ್ನ ಒಳಗೆ ಮೌನಿ ನಾನುಒಮ್ಮೆ ಒಂದು ಕೇಳೇ ನೀನುಮೊರೆಯಿಡುತಿರುವೆ ತುಂಬಲು ಒಲವನ್ನು ಇದ್ದೇನು ನನ್ನ ಪಾಡಿಗೆಕಂಡೇನು ಕಣ್ಣ ಕಾಡಿಗೆಕಸಿದೇ ನೀನು ಒಂಟಿತನವಒರಟ ನಾನು ಕಂಡು ಒಲವಹೆಜ್ಜೆಯು ಹಸಿರು ಹಾದಿಗೆಹೊರಳಿತು ಮಾತಿಲ್ಲದೆಹಿಡಿತ ನಿಂದು ಬಿಡಿಸು ಬಂದುತುಡಿತ ನಂದು ತಿಳಿಸು ನಿಂದು ಕಳೆದಿದೆ ನನ್ನ ಬೇಸಿಗೆನೆನೆದನು ನಿನ್ನ ಮಳೆಗೆಬಿಸಿಯ ಬೇಕು ಎದೆಯ ಮಾತುಬಳಿಯಲೊಮ್ಮೆ ಕೇಳು ಕೂತುಅರಳಿಸು ಎದೆಯ ಕುಸುಮಬಿರಿಯಲಿ ಮೀರಿಸಿ ದಿನವಮಿಡಿತ ನಂದು ಬಡಿತ ನಿಂದುಒಮ್ಮೆ ಬಂದು ಹೇಳು ನಿಂದು ******************************

Read Post »

ಕಾವ್ಯಯಾನ

ಕಾದಿಹುದು ತನು ಮನ ಶುಭಲಕ್ಷ್ಮಿ ಆರ್ ನಾಯಕ ಇಳಿ ಸಂಜೆಯು ಜಾರುತಿಹುದುತಂಗಾಳಿಯು ಸ್ಪರ್ಶಿಸಿಹುದುಪ್ರೇಮ ರಾಗ ಹಾಡುತಿಹುದುಒಲವ ವೀಣೆ ನುಡಿಯುತಿಹುದು//೧// ನಮ್ಮಿಬ್ಬರ ಮಿಲನಕೆಕಡಲಲೆಗಳ ಚುಂಬನಚಂದ್ರನಿರದ ಬಾನಿನಲ್ಲಿನಲ್ಲೆ ನೀನೆ ಚಂದ್ರಮ//೨// ಜೀವನದ ಕನಸಹೊತ್ತುತೇಲುತಿಹುದು ನಮ್ಮ ಮನಒಲುಮೆಯೆಂಬ ಸಾಗರದಲಿಪ್ರೀತಿಯ ಅಲೆ ಅಲೆಗಳಾಗಿ//೩// ಮರಳ ರಾಶಿಯ ತೀರದಲಿಮಿಣುಕು ದೀಪದ ಬೆಳಕಿನಲ್ಲಿಬಾನು ಭುವಿಯ ಸಂಗಮದಲಿನಮ್ಮೀರ್ವರ ಸರಸ ಸಲ್ಲಾಪಕೆ//೪// ಪ್ರಕೃತಿಯ ಸೌಂದರ್ಯದಲಿನವ ಭಾವದ ರೋಮಾಂಚನಕೆಒಲವಿನಾ ಮಿಲನಕೆಕಾದಿಹುದು ತನುಮನ//೫// ******************************************

Read Post »

You cannot copy content of this page

Scroll to Top