ಬುದ್ಧನಾಗಲೂ ಕಷ್ಟವೀಗ
ಕವಿತೆ ಬುದ್ಧನಾಗಲೂ ಕಷ್ಟವೀಗ ಹೇಮಚಂದ್ರ ದಾಳಗೌಡನಹಳ್ಳಿ ಈಗಲೀಗ ಎದ್ದು ಹೊರಡಬೇಕೆನಿಸುತಿದೆನಿನ್ನಂತೆ ತೊರೆದು ಎಲ್ಲವಕಂಡೊಂದು ಸಾವಿಗೇ; ಶರಣಾದೆ ಮುಕ್ತಿಗೆಭಾಜನ ನೀನೀಗಲೂ ಜನಭಕ್ತಿಗೆತಮಗೇ ಸಾವು ಬಂದಡರಿ ನಿಂತರೂನಿಂತ ಕಟ್ಟಡ ಕಾಮಗಾರಿಗೆ ಬಳಲಿಅಳಲುಗೊಂಡಳುತ ನರಳುವರ ಕಂಡು(ಈಗಲೀಗ) ತರಿದು ಹಸುರ; ತೋಡಿ ನೆಲಬಸುರಮೀರಿದಂಕೆಗೆ ಮುತ್ತಿ ಮಾರಿ ಶಂಕೆಸುಳಿವ ಉಳಿದ ಗಾಳಿಯನೂ ಮುಕ್ತ ಮೂಸದಂತೆಮೂಗು ಬಾಯಿ ಬಂಧಿಸಿ; ಮನೆಯೊಳಗೇ ಸಂಧಿಸಿಕೊರೆದ ಕೊಳವೆ ಬಾವಿ ಕೆಲಸವರ್ಧಕೆ ನಿಂತುದಕೆಅವಲತ್ತುಕೊಂಡಳಲುತಿರುವ ತಿರುಕರ ಕಂಡು(ಈಗಲೀಗ) ಬಿರುಕು ಗೋಡೆ; ತೂತು ಮಾಡುಳ್ಳಮನೆಯೊಳಗೆ ಬರಲು ಮಳೆನೀರುಮಳೆಗೆ ಶಾಪ ಹಾಕುವ ಅಂಧರುಹುತ್ತಗಳ ಕೆಡವಿ ಮನೆಯ ಮಾಡಿತಮ್ಮನೆಯ ಸುತ್ತ ಹಾವುಗಳ ಹುತ್ತವೆಂದುಹಾವಿಗೆ ದೂರುವ ಮೂಳರ ಕಂಡು(ಈಗಲೀಗ) ಹೊರಟೂ ತೊರೆದು ಎಲ್ಲವ ಬುದ್ಧನಾಗಲುಗುಮಾನಿ ಬೆನ್ಹತ್ತಿ ಅಪರಾಧಿ ಮಾಡುತದೆನೆಲೆನಿಂತರೆ ಎಲ್ಲಾದರೊಂದು ಕಡೆಯಾರದೋ ಹೆಸರಿಗೆ ನೋಂದಣಿಯಾಗಿ ಪಾಳಬಿದ್ದ ನೆಲಮೂಲವ ಕೆಣಕಿ ಅಣಕಿಸುತದೆಇದ್ದರೂ ಮರೆತು ಹೊಂಟರೂ ಅರಿತುಕಷ್ಟವೀಗೀಗ ಸುಲಭವಲ್ಲಕಾಣುವ ಕಣ್ಣುಗಳಿಗೆ ಸಾವಿರದ ಭಾವತೆಗೆವುತವೆ ಜೀವಂತ ಜೀವ… **************
ಬುದ್ಧನಾಗಲೂ ಕಷ್ಟವೀಗ Read Post »









