ವಿಜಯಲಕ್ಷ್ಮಿ ಕೆ ಹಂಗರಗಿ ಕವಿತೆ “ನಿತ್ಯನೂತನ”
ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಕೆ ಹಂಗರಗಿ “ನಿತ್ಯನೂತನ” ನಿದ್ದೆಗೊಮ್ಮೆ ನಿತ್ಯ ಮರಣಎದ್ದ ಸಲ ನವೀನ ಜನನ”ದರಾ ಬೇಂದ್ರೆಯವರಅದ್ಭುತ ಕವನಗಳ ಸಾಲುನೆನೆಯುತ್ತ ಅಡಿ ಇಡೋಣಆಗಲಿ ನಿತ್ಯ ನೂತನ… ದಿನ ತಿಂಗಳು ವರ್ಷಗಳುಮತ್ತೆ ಮತ್ತೆ ಮರಳಲಿಪರಿವರ್ತನೆ ಜಗದ ನಿಯಮಹೊಸ ಮೆಟ್ಟಿಲು, ಹೊಸ ಸಂಕಲ್ಪ ನಮ್ಮದಾಗಲಿ ನವ ನವೀನಹೊಸ ಬದುಕು ನಿತ್ಯ ನೂತನ… ಸಮಸ್ಟಿ ಇರಲಿ ಚಿಂತನಸಮನ್ವತೆ ಇರಲಿ ಮಂಥನಪ್ರಶಾಂತತೆ ಕಾಪಾಡಿ ಪ್ರಮಾಣಿಕಸಬ್ಯತೆ ಸೌಜನ್ಯತೆ ಕೂಡಿರಲಿಅರಿವಿನ ಪ್ರಯತ್ನ ಮಾಡಿರಿದಿನವೂ ಸಾಗಲಿ ನಿತ್ಯ ನೂತನ… ಪ್ರಕೃತಿಯ ಮಡಿಲಿನ ಪ್ರೀತಿದಿನವು ನಿತ್ಯ ನೂತನವಾಗಲಿಸೃಷ್ಟಿಯ ಚೈತ್ರ ಆರಂಭಇಬ್ಬನಿಯ ಜೊತೆಗೂಡಿಪ್ರತಿಫಲನ ನೀಡಿ ನೇಸರಬೆಟ್ಟದ ಮಧ್ಯೆ ಇರುವ ರವಿ ಬೆಳಗಲಿ… ಹೊಂಬಣ್ಣದ ನೇಸರ ಜಗಕೆಲ್ಲಸ್ವಾಗತ ಹೊಸ ಉತ್ಸಾಹ ಹೊಸ ಚಿಲುಮೆಂತಿರಲಿಅದ್ಭುತ ಪ್ರಪಂಚ ಜ್ಞಾನ ದೀವಿಗೆಸಮಾನತೆ ಸಹಕಾರ ಇರಲಿಹೊಸ ವರುಷದ ಸಂಭ್ರಮ ನಿತ್ಯ ನೂತನವಾಗಲಿ… ವಿಜಯಲಕ್ಷ್ಮಿ ಕೆ ಹಂಗರಗಿ
ವಿಜಯಲಕ್ಷ್ಮಿ ಕೆ ಹಂಗರಗಿ ಕವಿತೆ “ನಿತ್ಯನೂತನ” Read Post »









