ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪ್ರೊ .ರಾಜೇಶ್ವರಿ ಶೀಲವಂತ ಪುಣೆ ಅವರ ʻಅಡುಗೆʼ

ಕಾವ್ಯ ಸಂಗಾತಿ ಪ್ರೊ .ರಾಜೇಶ್ವರಿ ಶೀಲವಂತ ಪುಣೆ ʻಅಡುಗೆʼ ಏನೇ ಏನಿವತ್ತು ಊಟಕ್ಕೆ  ಊಟಕ್ಕೇನಮ್ಮಎಲ್ಲರ ಮನೆಯ  ಸಹಜ ಪ್ರಶ್ನೆಅದಕ್ಕವಳದು ಹರ ಸಾಹಸನಿನ್ನೆಯದು ಇಂದಾಗೋಲ್ಲಪ್ರತಿದಿನವೂ ಹೊಸದಿರಬೇಕಲ್ಲಉಪ್ಪು ಖಾರ ಹದವಾಗಿರಲುಅವಳ ಪರಿವೆಯಿಲ್ಲಅದು  ತಪ್ಪಿದರೆ ಅವಳಿಗೇನೆ  ಎಲ್ಲಆ ಸಿಟ್ಟಿನಲ್ಲಿ  ಮಾಡೋಲ್ಲಅವಳು ರೊಟ್ಟಿಬಡೀತಾಳೆ ಸಿಟ್ಟಿನಲ್ಲಿ ತಟ್ಟಿ ತಟ್ಟಿಸೇರಿಸೋಲ್ಲ ಪಲ್ಯಕ್ಕೆ ಉಪ್ಪು ಖಾರಸುರೀತಾಳೆ ಭರ ಭರ ಕೋಪದಬ್ಬರ  ಎಲ್ಲರೂ ಹೋಟಲ ಮೊರೆರುಚಿಯಿರದ  ತಿಂಡಿಗೆ  ಟಿಪ್ಸ ಬೇರೆ  ನೀ ಮಾಡಿದ  ಚಹಾ ನಿನ್ನಷ್ಟೇ ಸಿಹಿಚಪಾತಿ ನಿನ್ನತರಹ ಮೃದುನಿನ್ನ ಕೈ ರುಚಿ ಜೇನಿನಂತೆಅಂತ   ನೀವೂಮ್ಮೆ ಪಿಸುಗುಟ್ಟಿದರದೆ ಅವಳಿಗೆ ಹೆಮ್ಮೆ  ಹೊಸ ಹುಮ್ಮಸ್ಸಿನೊಂದಿಗೆ ಪ್ರವೇಶಿಸುವಳವಳುಅಡುಗೆ ಮನೆಯ ಮತ್ತೊಮ್ಮೆಹೊತ್ತು ನೋಡಿ  ಈ ಎಲ್ಲವನುಒಂದು ದಿನವಾದರೂಮರುದಿನವೇ ತೇನಾಲಿ ರಾಮಕೃಷ್ಣನ ಬೆಕ್ಕಿನಂತೆ  ನೀವು ಪರಾರಿ                ನಿಟ್ಟುಸಿರಿನೊಂದಿಗೆಕೊನೆಗಂದೆಅಬ್ಬಾ!!  ನೀನೆ ಸರಿಸಾಟಿ ಇದಕೆಲ್ಲ. ಪ್ರೊ .ರಾಜೇಶ್ವರಿ ಶೀಲವಂತ ಪುಣೆ

ಪ್ರೊ .ರಾಜೇಶ್ವರಿ ಶೀಲವಂತ ಪುಣೆ ಅವರ ʻಅಡುಗೆʼ Read Post »

ಕಾವ್ಯಯಾನ

“ವೇದಿಕೆಯ ಮೆಟ್ಟಿಲುಗಳು”ಡೋ ನಾ ವೆಂಕಟೇಶ

ಕಾವ್ಯ ಸಂಗಾತಿ ವೇದಿಕೆಯ ಮೆಟ್ಟಿಲುಗಳು ಡೋ ನಾ ವೆಂಕಟೇಶ್ ಆಗಿರಲಿ ವೇದಿಕೆಗಳುಪ್ರಬುದ್ಧ ಸಂವೇದನೆಗಳಕಿಚ್ಚುಆಗದಿರಲಿ ವೇದಿಕೆಗಳು ಅಬದ್ಧ ಕೊರೆತಗಳ ಕಾಳ್ಗಿಚ್ಚು ವೇದಿಕೆಯಲಿ ವಿಜೃಂಭಿಸಲಿಅಗಣಿತ ತಾರೆಗಳುದೇದೀಪ್ಯಮಾನ ಲಹರಿಗಳುಅನನ್ಯ ಸಾಂಗತ್ಯದ ಗೀತೆಗಳು ವೇದಿಕೆಗಳೊಳಗೆ ಇರಲಿವಿಚಾರವಂತನಿಗೆ ವಿನಯಅನಾಚಾರಿಗೆ ದುರ್ದಾನಮಾನವಂತನಿಗೆ ಸನ್ಮಾನ. ಹೇಳದೆಯೇ ಕೇಳಿಸಿಕೊಳ್ಳುವ ಶ್ರೋತೃಗಳುಶೋಕ ಗೀತೆಯಿಲ್ಲದೆಯೇ ಮಿಡಿಯುವ ಕಣ್ಣೀರಧಾರೆಗಳುಧ್ವನಿವರ್ಧಕವಿಲ್ಲದೇ ಮಾರ್ದನಿಸುವ ಅಮೃತ ವಚನಗಳು. ಎಲ್ಲಾಜೀವನದ ಅನುಭಾವ ಮೆಟ್ಟಿಲುಗಳು! ಡೋ ನಾ ವೆಂಕಟೇಶ

“ವೇದಿಕೆಯ ಮೆಟ್ಟಿಲುಗಳು”ಡೋ ನಾ ವೆಂಕಟೇಶ Read Post »

ಕಾವ್ಯಯಾನ

“ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ

ಕಾವ್ಯ ಸಂಗಾತಿ “ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ ನೆರಳು ಕೊಡದ ಅಪ್ಪನೆಂಬಆಲದ ಮರನೆರಳು ಕೊಡದಿದ್ದರೂಬೇಸಿಗೆಯ   ಬರಡಾಗಿ ಮಧ್ಯೆ ನಿಂತಿರುವಆಲದ ಮರದಂತೆನಮ್ಮ ಅಪ್ಪಬಿಸಿಲಿಗೆ ಸುಟ್ಟು ಬಿಸಿನಲಿ ಬೆಂದುಮಳೆಯಿಲ್ಲದೆ ಒಣಗಿಬೇರುಗಳಲ್ಲಿ ನೋವು ಕಟ್ಟಿಕೊಂಡುನಿಂತವನು.ನಮಗೆ ನೆರಳು ಬೇಕಿತ್ತು,ಅವನಿಗೆ ಮಾತ್ರಆಕಾಶದಷ್ಟು ಹೊಣೆ.ಮಾತಾಡಲಿಲ್ಲ,ಅಳಲಿಲ್ಲ,ತನ್ನ ಹಸಿವನ್ನುರಾತ್ರಿಯ ಕತ್ತಲಲ್ಲಿ ಮುಚ್ಚಿಟ್ಟುಕೊಂಡುಬೆಳಗಿನ ಬೆಳಕಿಗೆನಮ್ಮ ಕನಸುಗಳನ್ನು ಎತ್ತಿಕೊಟ್ಟವನು.ಎಲೆಗಳಿಲ್ಲದ ಕೊಂಬೆಗಳ ಮೇಲೆನಮ್ಮ ನಾಳೆಗಳನ್ನೇ ಕಟ್ಟಿಕೊಂಡುಬಿರುಗಾಳಿಗೂ ಎದುರಾಗಿಅಚಲವಾಗಿ ನಿಂತವನು.ನೆರಳು ಸಿಗದಿದ್ದಕ್ಕೆನಾವು ಅವನನ್ನು ತಪ್ಪು ತಿಳಿದೆವು,ಆದರೆನೆಲದೊಳಗೆ ಅವನುನಮಗಾಗಿ ಹರಿಸಿದ್ದಅದೆಷ್ಟು ಮೌನವಾದ ಶ್ರಮ!ನೀರಿಲ್ಲದ ಆಲದ ಮರದಂತೆಅವನ ಪ್ರೀತಿಗೂಹೆಸರು ಇರಲಿಲ್ಲ,ಬಣ್ಣವೂ ಇರಲಿಲ್ಲ,ಆದರೆಅದು ಜೀವ ಉಳಿಸುವ ಬೇರು.ಇಂದು ನಾವುಎತ್ತರಕ್ಕೆ ಬೆಳೆದಾಗಹಿಂದೆ ನೋಡಿದರೆನೆರಳು ಕಾಣುವುದಿಲ್ಲ,ಆದರೆನೆಲದೊಳಗೆ ಕೈ ಹಾಕಿದರೆಅಪ್ಪನ ತ್ಯಾಗಇನ್ನೂ ತೇವವಾಗಿಯೇ ಇದೆ.ನೆರಳು ಕೊಡದ ಅಪ್ಪನೆಂಬ ಆಲದ ಮರ—ಬೀಳದೆ ನಿಂತುಬೇರೂರಿನಮ್ಮ ಬದುಕನ್ನೇತುಂಬಿಸಿಕೊಂಡವನು. ಡಾ ತಾರಾ ಬಿ ಎನ್ ಧಾರವಾಡ

“ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ Read Post »

ಕಾವ್ಯಯಾನ

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು”

ಕಾವ್ಯ ಸಂಗಾತಿ ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು“ ನನ್ನವರು ಸಾಯುವುದು ಗುಂಡಿನಿಂದಲ್ಲಎದೆ ಹಣೆ ಸೀಳಿದ್ದುಪಿಸ್ತೂಲು ಬಂದೂಕಿನಿಂದಲ್ಲ.ರುಂಡ ಮುಂಡ ಕತ್ತರಿಸಿದ್ದುಚಾಕು ಲಾಂಗುಗಳಲ್ಲ.ಸತ್ಯವಂತ ಸಾಯುವುದುದುಷ್ಟ ಹಂತಕರಿಂದಲ್ಲ.ಸಜ್ಜನ ಹೇಡಿಗಳಿಂದ ಅವರು ಇದ್ದಾಗ ಬೆಂಬಲಿಸಲಿಲ್ಲ.ಬೆನ್ನು ತಟ್ಟಿ ಕೈಜೋಡಿಸಲಿಲ್ಲ.ಸತ್ತಾಗ ಬಿಕ್ಕಿ ಬಿಕ್ಕಿ ಅಳುತ್ತೇವೆ.ಮಾನವ ಸರಪಳಿ ಪ್ರತಿಭಟನೆ.ಟಿವಿ ಪತ್ರಿಕೆಯಲ್ಲಿ ಭಾರಿ ಸುದ್ಧಿಆಕ್ರೋಶ ಅಬ್ಬರಹಂತಕರ ಹಿಡಿಯಲು ಸಮಿತಿಸರಕಾರ ಮಲಗುತ್ತದೆ.ಕೊಳಕು ವ್ಯವಸ್ಥೆ ನಾವೂ ಮಲಗುತ್ತೇವೆ . ಸತ್ಯವಂತ ಸಾಯುತ್ತಾನೆ.ಬದುಕಿನಿದ್ದಕ್ಕೂ ಹೋರಾಡುತ್ತಾನೆಸತ್ಯ ಶಾಂತಿ ಹಕ್ಕಿಗಾಗಿ.ಇದ್ದಾಗಲೂ ಒಬ್ಬಂಟಿಗಸತ್ತಾಗಲೂ ಒಬ್ಬನೇಸಾವು ಬೆನ್ನು ಬಿಡಲಿಲ್ಲ.ಸತ್ತವರಿಗೆ ಸಂತನ ಪಟ್ಟ ಕಟ್ಟಿ.ಕೊರಳಲ್ಲಿ ಬೋರ್ಡ್ ಹಾಕುತ್ತೇವೆ. ಅವರು ಸಾಯುವುದು ಗುಂಡಿನಿಂದಲ್ಲ.ನಮ್ಮ ಉದಾಸೀನ ಮೌನದಿಂದ. ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು” Read Post »

ಕಾವ್ಯಯಾನ

ರಶ್ಮಿ ಶಮಂತ್ ಅವರ ಕವಿತೆ, “ಅತ್ಯಾಚಾರ”

ಕಾವ್ಯ ಸಂಗಾತಿ ರಶ್ಮಿ ಶಮಂತ್ “ಅತ್ಯಾಚಾರ” ಮುಗಿಯದ ಕಥೆಯಿದುಸುಡುತ್ತೇವೆನೂರಾರು ಮೇಣದಬತ್ತಿಯನ್ನುಬಿಗಿಯುತ್ತೇವೆ ಭಾಷಣದುಃಖಿಸುತ್ತೇವೆ, ಕೊರಗುತ್ತೇವೆನೆನೆ ನೆನೆದು‘ಅಯ್ಯೋ ಸಣ್ಣ ಮಗುವಂತೆ’ಉದ್ಘರಿಸುತ್ತೇವೆ,ಚೆಲ್ಲುವೆವು ನಿಟ್ಟುಸಿರಚಿಂತಿಸುವೆವು ಮುಂದೇನೆಂದುಹೆಣ್ಣೇಕೆ ಹುಟ್ಟಿತೆಂದುಕೊಡುತ್ತೇವೆ ನೂರಾರು ಸಲಹೆಗಳನ್ನುಮರೆತು ಬಿಡುತ್ತೇವೆಆಕ್ಷಣವನ್ನು ನಡೆಯುತ್ತದೆ? ——- ಏನು?ಮತ್ತೊಮ್ಮೆ ಮಗದೊಮ್ಮೆ  ಅಲ್ಲೆಲ್ಲೋ ಇನ್ನೆಲ್ಲೋ ಮತ್ತೆಲ್ಲೋಕೊನೆಗೊಮ್ಮೆ ನಡೆದರೂ ನಮ್ಮ ಪಕ್ಕದಲ್ಲಿದಿವ್ಯ ನಿರ್ಲಕ್ಷ್ಯ ನಮ್ಮದುಅದೇ ಪುನರಾವರ್ತನೆದೂಷಿಸುತ್ತೇವೆ , ಮರುಗುತ್ತೇವೆಹಾಗೆಯೇ ತೇಲಿಬಿಡುತ್ತೇವೆ ವಿಷಯವನು ಹೊಣೆಯಾಗಿಸುತ್ತೇವೆಪಕ್ಷಗಳನ್ನು , ಜಾತಿಗಳನ್ನು, ಧರ್ಮಗಳನ್ನುತಿಳಿಯಲಾರೆವು ಮೂಲ ಕಾರಣವನಿಂದಿಸಿ, ಆರೋಪಿಸಿ, ನಡೆಸಿ ಜಾಥಾ,ಮಾಧ್ಯಮಗಳಲ್ಲಿ ಕುಳಿತುನಡೆಸುವಾಗ ವಿತಂಡವಾದವಟಿ ಆರ್ ಪಿ ಯ ಸರಕಾಗುತ್ತದೆ ಅವಳ ಕಣ್ಣೀರುಮರೆಯುತ್ತೇವೆ ಮತ್ತೆತಣ್ಣಗಾಗುತ್ತೇವೆ ಎಂದಿನಂತೆಏನೂ ಆಗದಂತೆ ಬಳಸುತ್ತವೆಪಕ್ಷಗಳು ತಮ್ಮ ಬೇಳೆಯ ಬೇಯುವಿಕೆಗೆಹಳಿಯುತ್ತದೆ  ವಿರೋಧ ಪಕ್ಷವುಆಡಳಿತ ಪಕ್ಷವನುಕೊನೆಗೊಮ್ಮೆ ನೀಡುತ್ತಾರೆ ಧರ್ಮ ಜಾತಿಯಹಣೆ ಪಟ್ಟಿಯನುನಗು ನಗುತ್ತಾ ಚರ್ಚಿಸುವರು ಸದನದಲಿಘೋಷವಾಕ್ಯವೊಂದು ತಯಾರಾಗುತ್ತದೆ‘ಮಲಗಿ ಆನಂದಿಸಿ’ ಬಿಸಿ ತಟ್ಟುತ್ತದೆ ಒಮ್ಮೆಸಂತ್ರಸ್ತೆ ನಮ್ಮದೇ ಮನೆಯ ಮಗಳಾದಾಗಎಚ್ಚರವಿರಲಿ ಮೊದಲಾಗಲಿ ಬದಲಾವಣೆ ನಮ್ಮಿಂದಲೇತಡೆಯೋಣ ಮುಂದಾಗದಂತೆ ಅತ್ಯಾಚಾರಗಳುನಿರೂಪಿಸೋಣ ಅಬಲೆಯಲ್ಲ ಅವಳು ಸಬಲಳುಬಲಹೀನತೆಯ ತೊರೆದುನನಸಾಗಿಸೋಣ ಸ್ವಸ್ಥ ಸಮಾಜದ ನಮ್ಮ ಕನಸು ರಶ್ಮಿ ಶಮಂತ್

ರಶ್ಮಿ ಶಮಂತ್ ಅವರ ಕವಿತೆ, “ಅತ್ಯಾಚಾರ” Read Post »

ಕಾವ್ಯಯಾನ

ನಾಗರಾಜ ಬಿ ನಾಯ್ಕ ಅವರ ಕವಿತೆ “ತಕದಿಮಿತ”

ಕಾವ್ಯ ಸಂಗಾತಿ ನಾಗರಾಜ ಬಿ ನಾಯ್ಕ “ತಕದಿಮಿತ” ತಕದಿಮಿತಎದೆಯ ಕವಿತೆಯೊಳಗೆಭಾವದ ತಕದಿಮಿತಮೋಡ ಮಲ್ಲಿಗೆಯ ದಾಟಿಗಾಳಿ ವೀಣೆಯ ನುಡಿಸಿಪಲ್ಲವಿಯ ಹಿಡಿದೆಬ್ಬಿಸಿಜಗದ ಒಲವಿಗೆಬಾಳುವುದ ಕಲಿಸಿನಾದದಿ ಮತ್ತೆ ನಾದವಾಗಿಉಲಿವ ತಕದಿಮಿತಸುಳಿವ ತೇರಿನ ನೆರಳುಮುಂಗುರುಳ ಮಾತಾಡಿಸಿಮೌನದಲಿ ಹಬ್ಬಿರುವನಗೆಯ ನಗುವಾಗಿಸಿಕುಣಿವಂದದ ಕುಣಿತದಿಮೇಲ್ಮುಗಿಲ ತೋರಣದಿಹೆಜ್ಜೆಗೊಂದು ಕರಗಳ ಹಿಡಿದುನಡೆ ನಂಬಿ ಬಂದ ಹಕ್ಕಿಗೆಗೂಡೊಳಗೆ ಸವಿನಿದ್ದೆಬೆಟ್ಟದ ತುದಿಯಕಲ್ಲು ಮಂಚದ ಮೇಲೆಮಲಗಿದ್ದ ಉಸಿರಿನಬಡಿತವೂ ಒಂದು ತಕದಿಮಿತಹೂವರಳಿ ನಿಂತಂದಕೆಬೇರೊಳಗೆ ಸಂಚಲನಬೇರು ಮಣ್ಣೊಳಗೆಜೊತೆಗಿರುವ ಅನುಬಂಧಮಾತು ಮಾತಿಗೆಗೆರೆಯಾಗದ ಸಂಬಂಧಗರಿಗಳ ನಡುವೆ ಬೀಸುವತಂಗಾಳಿಯ ಪಿಸುಮಾತುಕೂಡ ಒಂದು ತಕದಿಮಿತ ನಾಗರಾಜ ಬಿ ನಾಯ್ಕ

ನಾಗರಾಜ ಬಿ ನಾಯ್ಕ ಅವರ ಕವಿತೆ “ತಕದಿಮಿತ” Read Post »

ಕಾವ್ಯಯಾನ

ಸುಮತಿ ನಿರಂಜನ ಕವಿತೆ, “ಪತಂಗ ಸಂಗ-ತಿ”

ಕಾವ್ಯ ಸಂಗಾತಿ ಸುಮತಿ ನಿರಂಜನ “ಪತಂಗ ಸಂಗ-ತಿ” ಹಾರೋಣ ಬನ್ನಿರಿ ಗೆಳೆಯರೇ ಹಾರೋಣನೀಲಿ ಆಕಾಶಕ್ಕೆ ಹಾಕೋಣ ಲಗ್ಗೆಒಂದೇ ದಿನವೆಂದು ಕುಂದದೆ ನಾವಿಂದುಒಂದಾಗಿ ಚಂದದಲಿ ನಲಿಯೋಣಚಂದಿರನ ಹೊಲದಲಿ ಚಿಕ್ಕೆಯ ಕುಯಿಲುಸಿಕ್ಕಷ್ಟು ಬಾಚಿ ತಬ್ಬೋಣ ಸುಗ್ಗಿಯಸಗ್ಗದ ಸುಖವ ಸವಿಯೋಣ !ಬೇರೆ ಬೇರೆ ರಂಗು ಬೇರೆ ಬೇರೆ ಗುಂಗುಲಂಗುಲಗಾಮಿಲ್ಲದೇ ಹಾರೋಣಒಬ್ಬರ ಬಿತ್ತರ ಇನ್ನೊಬ್ಬರೆತ್ತರಕಂಡು ಕರುಬದೆ ಮೇಲೆ ಹಾರೋಣರೆಕ್ಕೆ ಕತ್ತರಿಸದೆ ಕೊಕ್ಕಿಂದ ಚುಚ್ಚದೆಸಕ್ಕರೆ ಅಚ್ಚು ಹಂಚೋಣ ಸ್ನೇಹಿತರೆಅಕ್ಕರೆಯಿಂದ ಹರಸೋಣ ಕಣ್ಣಲ್ಲೆಕನಸಿನ ಗೋಪುರ ಕಟ್ಟೋಣಕೊನೆಯಿಲ್ಲ ಕಲ್ಪನೆ ಕ್ಷಿತಿಜಕ್ಕೆ ಕೆಳೆಯರೇಮಿತಿಯಿಲ್ಲ ಆತುಮ ಬಲಕೆ ಸಾಹಸಕೆಬನ್ನಿರಿ ಗೆಳೆಯರೆ ತನ್ನಿರಿ ಸುಮಶರಕಾಮನ ಬಿಲ್ಲ ಹೆದೆಗೇರಿಸೋಣಕಟ್ಟೋಣ ತೋರಣ ಬಾನ ಬಾಗಿಲಿಗೆಮುತ್ತಿನ ತೋರಣ ಕಟ್ಟೋಣ ಬನ್ನಿರಿಅಕ್ಷರ ದೀಪವ ಬೆಳಗೋಣ !! ಸುಮತಿ ನಿರಂಜನ

ಸುಮತಿ ನಿರಂಜನ ಕವಿತೆ, “ಪತಂಗ ಸಂಗ-ತಿ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಕವಿತೆ “ಅಧಿಕಾರ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಅಧಿಕಾರ ಅಧಿಕಾರವೆಂದರೆಕೈಯಲ್ಲಿರುವ ಕಿರೀಟವಲ್ಲ,ಜವಾಬ್ದಾರಿಯುತ ಹೊಣೆಗಾರಿಕೆಅದು ಗದ್ದುಗೆ ಮೇಲಿನ ಮೋಹ ಅಲ್ಲ,ನೆಲದ ಮೇಲಿನ ಬೆಳಕ ದೀವಿಗೆ.ಹೆಜ್ಜೆ ಹಾಕುವ ಪ್ರತಿ ಹಾದಿಯನ್ನೂಜವಾಬ್ದಾರಿಯಿಂದ ತೋರುವ ದೀಪ.ಕಠಿಣ ಧ್ವನಿಯಲ್ಲಿ ಕೂಗುವುದಲ್ಲ ಕೀಲುರಿಮೆಯಿಂದ  ಕಾಣುವುದಿಲ್ಲ ಕಿರಿ ಮಾಡಿ ಮೊದಲಿಸುದಲ್ಲ ಅಧಿಕಾರ,!ಮೃದು  ಭಾವದಲ್ಲಿ ನಂಬಿಕೆ  ಹುಟ್ಟಿಸುವಂಥದ್ದು. ಅಧಿಕಾರ!ಭಯ ಹುಟ್ಟಿಸುವ ಕೈಯಲ್ಲಲ್ಲ,ಆಶ್ರಯ ಕೊಡುವ ಹೃದಯದ ಆದರ್ಶ ಅರ್ಥಪೂರ್ಣ ವ್ಯವಸ್ಥೆ ಅಧಿಕಾರ!ಒಮ್ಮೆ ಅಹಂಕಾರವಾದರೆಅದು ವಿಷವಾಗುತ್ತ  ಮನಸ್ಸುಹದಗೆಡಿಸಿ ಮನಗಳ ಕೊಲೆಯಂತಪಾಪಕೃತ್ಯ ಇಳಿಸಿಬಿಡುವ ನಶೆ.ಸ್ವಂತ ಬೇರುಗಳನ್ನೇಸುಟ್ಟುಹಾಕುವ ಅಗ್ನಿ. ಅಧಿಕಾರ,,!ಸೇವೆಯಾಗಿ ಪರಿವರ್ತಿತವಾದರೆಅದು ಅಮೃತವಾಗುವ ಸಂಜೀವಿನಿಬಾಯಾರಿದ ಬದುಕುಗಳಿಗೆ  ಜೀವ  ನದಿ. ಅಧಿಕಾರ.!ಆಜ್ಞೆ ನೀಡುವುದು ಸುಲಭ,ಆದರ್ಶವಾಗಿಸುವುದು ಕಠಿಣ.ತೀರ್ಪು ಹೇಳುವುದು ಸುಲಭ,ನ್ಯಾಯ ಒದಗಿಸುವದು ಧೈರ್ಯ.ನಿಜವಾದ ಅಧಿಕಾರಎತ್ತರದಲ್ಲಿ ನಿಂತು ನೋಡುವುದಲ್ಲ,ಕೆಳಗಿಳಿದು ಕೈ ಹಿಡಿದು ನಡೆಯುವುದು.ತಾನೊಬ್ಬನೆ ಹೊಳೆಯುವುದಲ್ಲ, ಬಿದ್ದವರನ್ನು ಕೈ ಹಿಡಿದು ಎತ್ತಿ ಬದುಕ ಬೆಳಗಿಸಿ  ಮೌನವಾಗುವುದು.ಅಧಿಕಾರಗೆಲುವಿನ ಘೋಷಣೆ ಅಲ್ಲ,ಸೋಲಿನ   ಸಮಯದಲ್ಲಿಜೊತೆಯಾಗಿರುವ  ಆಪ್ತತೆ.ಗತಕಾಲದಲ್ಲಿ ಆಳಿದಗದ್ದುಗೆಗಳು ಕರಗಿಮಣ್ಣಲ್ಲಿ ಮಣ್ಣಾಗಿವೆ.ಹುದ್ದೆಗಳು ರದ್ದಾಗುತ್ತವೆ.ಉಳಿಯುವುದು ಮಾತ್ರ ನಿನ್ನ ನಡತೆ  ಘೋರತೆಯ ನೆನಪು.ಹಾಗಾಗಿಅಧಿಕಾರವನ್ನು ಧರಿಸುಭಾರವಾಗಿ ಅಲ್ಲ, ಭಕ್ತಿಯಂತೆ.ಅದನ್ನು ಬಳಸು.ಯುಕ್ತಿ, ಸ್ವಾರ್ಥಕ್ಕಾಗಿ ಅಲ್ಲ,ಸಾರ್ಥಕತೆಗಳಿಗಾಗಿ.ಏಕೆಂದರೆಅಧಿಕಾರಕ್ಕೆ ಅಂತ್ಯವಿದೆ,ಉತ್ತಮಾಧಿಕಾರದ ಮೌಲ್ಯಕ್ಕೆಅಂತ್ಯವಿಲ್ಲ. ಅದು ಶಾಶ್ವತ ಡಾ ತಾರಾ ಬಿ ಎನ್

ಡಾ ತಾರಾ ಬಿ ಎನ್ ಕವಿತೆ “ಅಧಿಕಾರ” Read Post »

ಕಾವ್ಯಯಾನ

“ಅವ್ವನ ಮಡಿಲು”ಡಾ ವಿಜಯಲಕ್ಷ್ಮಿ ಪುಟ್ಟಿ

ಕಾವ್ಯ ಸಂಗಾತಿ ಡಾ ವಿಜಯಲಕ್ಷ್ಮಿ ಪುಟ್ಟಿ “ಅವ್ವನ ಮಡಿಲು” ​ಅವ್ವ, ನೀನೆಷ್ಟು ನೆನಪಾಗುತ್ತಿ ಗೊತ್ತಾ?ಜಗತ್ತಿನ ಭಾರವೆಲ್ಲ ಹೆಗಲ ಮೇಲಿರುವಾಗ,ಬಾಲ್ಯದ ಆ ನಿಶ್ಚಿಂತೆಯ ದಿನಗಳು ಕಾಡುತ್ತಿವೆನಿನ್ನ ಸೆರಗಿನ ನೆರಳಲ್ಲಿ ಹಾಯಾಗಿ ಮಲಗುವ ಆಸೆ ಹೆಚ್ಚುತ್ತಿದೆ. ​ಮನಸಿಗೆ ಬೇಜಾರಾದಾಗಲೆಲ್ಲ,ಸಂತೈಸಲು ಸಾವಿರ ಜನರಿದ್ದರೂಅವರ ಮಾತುಗಳಲ್ಲಿ ಸಿಗದ ಆ ನೆಮ್ಮದಿ,ನಿನ್ನ ಮಡಿಲಲ್ಲಿ ತಲೆ ಇಟ್ಟು ಮಲಗಿದಾಗ ಸಿಗುತ್ತಿತ್ತು. ​ಕಣ್ಣೀರು ಸುರಿಸಿದರೆ ಪದೇ ಪದೇ ಕೇಳದೆ,ತಲೆ ಸವರಿ ಸಮಾಧಾನ ಪಡಿಸುತ್ತಿದ್ದ ಆ ನಿನ್ನ ಕೈಗಳು..ಮತ್ತೆ ಬೇಕೆನಿಸುತ್ತಿದೆ ಅವ್ವ,ನಿನ್ನ ಮಡಿಲಲ್ಲಿ ಮಗುವಾಗಿ ಕರಗುವ ಹಂಬಲವಾಗುತ್ತಿದೆ. ​ಯಾರೇ ಏನೇ ಅಂದರೂ, ಎಷ್ಟೇ ಬೆಳೆದರೂ,ನನಗೆ ನೀನೇ ಸಾಟಿಯಿಲ್ಲದ ದೇವತೆ..ನಿನ್ನ ಮಡಿಲ ಆ ಬೆಚ್ಚಗಿನ ಅಪ್ಪುಗೆಯೇ,ನನ್ನ ಬದುಕಿನ ಅತಿ ದೊಡ್ಡ ಆಸ್ತಿ. ಡಾ ವಿಜಯಲಕ್ಷ್ಮಿ ಪುಟ್ಟಿ

“ಅವ್ವನ ಮಡಿಲು”ಡಾ ವಿಜಯಲಕ್ಷ್ಮಿ ಪುಟ್ಟಿ Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ”

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ” ಊರ ಮುಂದಿನ ತ್ವಾಟ ಐತಿ ಬಾಳ ಮಾಟಬರ್ತೀ ಏನ ನೀ ಊಟಕ್ಕ//ಪ// ನೀ ಬರ್ತೀ ಅಂದ್ರ ಸಜ್ಜಿ ರೊಟ್ಟಿಹಿಟ್ಟಿನ ಚಕ್ಳಿ ಶೇಂಗಾ ಗುರೆಳ್ಳು ಚಟ್ನಿಹುಳಿಬಾಣ ಮಾದೇಲಿ ಮಾಡಿಬುತ್ತಿ ಕಟ್ಟಿಕೊಂಡ ಬರ್ತೀನಿತೋಪ್ ಸೆರಿಗಿನ ಕಡ್ಡಿ ಸೀರಿ ಉಟ್ಕೊಂಡಗಾಡಿ ನತ್ತ ಇಟ್ಕೊಂಡ ಬರ್ತೀನಿ// ಎತ್ತಿಗೆ ಸಿಂಗಾರ ಮಾಡ್ಕೊಂಡಕೊರಳಿಗೆ ಹುರಿಗೆಜ್ಜೆ ಕಟ್ಟಿಬಂಡಿಗೆ ಕೊಲಾರಿ ಕಟ್ಟಿಕೊಂಡಸಜ್ಜ ಮಾಡಿಕೊಂಡ ಬಿಡಹೊತ್ತಾರೆ ಎದ್ದ ಹೋಗೋಣಉಂಡ  ತಿಂದ ಸುತ್ತಾಡಿ ಬರೋಣ // ನನ್ನವ್ವನ ಹೊಲದಾಗ ಏನಿಲ್ಲ ಏನ ಐತಿ  ಕೇಳ್ತಿ ಏನ ನೀ ಕಿವಿಗೊಟ್ಟಎಳೆನೀರ ಬೇಕಾದ ಹಣ್ಣ ಹಂಪಲಗೋದಿ ಕಡ್ಲಿ ಹುಣಸಿ ಮಾವುಉಳ್ಳಾಗಡ್ಡಿ ಮೆಂತ್ಯೆ ಮೂಲಂಗಿನೆರಳಿಗೆ ಕೊಂಡ್ರಾಕ ಅಲ್ಲಲ್ಲಿ ಬೇವಿನ ಗಿಡ// ಬಾಜು ಜುಳು ಜುಳು ಹರಿಯೋ ಹಳ್ಳಮೂಲಿಗೊಂದ ಭಾವಿ ಸುತ್ತೆಲ್ಲಾ ಬೇಲಿಹೋಗಾಕೈತಿ ಎನ್ ಹೆಚ್ ಫೋರ್ ರಸ್ತಾನಮ್ಮೂರಾಗ ಏನ ಕೊಂಡ್ರು ಸಸ್ತಾಎಲ್ಲಾ ಮಸ್ತ್ ಮಸ್ತ್ ಹಂಗಂತಬಾಳ ಸುತ್ತಿ ಆಗಬ್ಯಾಡ ನೀ ಸುಸ್ತ// ಗಾಣಿಗ್ಯಾರ ಹೊಲ್ದಾಗ ಸಿಹಿ ಕಬ್ಬಹಳಬರ ಹೊಲ್ದಾಗ ಪ್ಯಾರಲ ಹಣ್ಣಮತ್ತಿಕೊಪ್ಪದಾರಲ್ಲೇ ಸವಿಜೇನ ಐತಿಸಾವಕಾರ ಹೊಲ್ದಾಗ ನೋರೊಂದ ದಿನಸಎಲ್ಲಿಲ್ಲ ನೋಡ ನಮ್ಮ ಹಳ್ಳಿ ಅಂತ ಹಳ್ಳಿನಮ್ಮಣ್ಣನ ಪಾಲಿಗೆ ಇದ ಕನ್ನಡದ ಕಾಶ್ಮೀರ// ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ” Read Post »

You cannot copy content of this page

Scroll to Top