ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್
ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ಬೆಳೆವ ಭಾವವು ಮರೆತು ಬೀಗಲುಎದೆಯು ನೋಯುತಿದೆ ನೋಡುಕಳೆದ ಕ್ಷಣವು ಬೆಂಬಿಡದೆ ಕಾಡಲುಚಿಂತೆಯು ಬೇಯುತಿದೆ ನೋಡು ಬದುಕ ಪಯಣವು ಕಲ್ಲು ಮುಳ್ಳಿನಬೇಲಿಯ ತಂತಿಯಲ್ಲವೇಮದಿರೆ ನಿಶೆಯಲಿ ನಿದಿರೆ ಕಾಣದೆ ಮನವು ಕಾಯುತಿದೆ ನೋಡು ಬೇಗುದಿ ತುಂಬಿರೆ ತಿಳಿಸಿ ಹೇಳುವಪರಿಯ ಅರಿಯೆನು ನಾನುನೀಗದ ಹಸಿವು ದಾಹದಿ ಬರಿದೆಕನಸು ಸಾಯುತಿದೆ ನೋಡು ಕತ್ತಲೆ ತುಂಬಿದೆ ದಾರಿಯು ಕಾಣದೆಕುಸಿದು ಬಿದ್ದಿರೆ ಪಾತಾಳಕೆಸುತ್ತುತ ಜೇಡವು ಮರಳಿ ಯತ್ನದಿಬಲೆಯ ನೇಯುತಿದೆ ನೋಡು ಕಂಗಳ ನೋಟಕೆ ರಾಧೆಯ ಒಲುಮೆಗೆಲ್ಲುವ ಭರವಸೆ ಮೂಡಿದೆತಿಂಗಳ ಬೆಳಕಿನ ಶೀತಲ ತಂಪಲಿಪ್ರೇಮದಿ ಮೀಯುತಿದೆ ನೋಡು ಅನುರಾಧಾ ರಾಜೀವ್ ಸುರತ್ಕಲ್
ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »









