ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಸಿಲ್ಕ್ ಸ್ಮಿತಾ ಜನ್ಮದಿನಕ್ಕೆ ಸಂಗಾತಿ ಶುಭಾಶಯ ಹಾಗೂ ಚಿರ ನೆನಪು

ಭಾರತೀಯ ಸಿನಿಮಾ ರಂಗದ ಅಪ್ರತಿಮ ಪ್ರತಿಭಾವಂತ ನಟಿಯಲ್ಲೊಬ್ಬರಾದ
ಸಿಲ್ಕ್ ಸ್ಮಿತಾ ಬದುಕಿದ್ದಿದ್ದರೆ ಇವತ್ತಿಗೆ ಅರವತ್ತೊಂದು ವರ್ಷಗಳಾಗುತ್ತಿದ್ದವು.

ತೆರೆಯ ಮೇಲೆ ಪುರುಷ ಪ್ರಧಾನ ವ್ಯವಸ್ಥೆಯ ಉಗ್ರ ಸಮರ್ಥಕ ಸ್ತ್ರೀ ಪಾತ್ರಗಳ ಕೋಪ, ದ್ವೇಷವನ್ನು ಸಹಿಸಿಕೊಂಡು ಅವಮಾನದಿಂದ ಏಕಾಂಗಿಯಾಗಿ ಮರೆಯಾಗುತ್ತಿದ್ದ ಸ್ಮಿತ ನಿಜ ಜೀವನದಲ್ಲೂ ಅದೇ ರೀತಿಯ ಏಕಾಂಗಿತನಕ್ಕೆ ಬಲಿಯಾದವರು.

ಈ ಅಪ್ರತಿಮ ಪ್ರತಿಭಾವಂತೆ, ಸುಂದರಿ, ಹೃದಯವಂತ ಕಲಾವಿದೆಯನ್ನು ಭಾರತದ ಚಿತ್ರರಂಗ stereotypical characters ಗಳಲ್ಲೆ ಕಳೆದು ಹಾಕಿತು. ಒಂಟಿಯಾಗಿಸಿತು.

ಬೇರೆ ಜನಪ್ರಿಯ ನಟಿಯರಾಗಿದ್ದರೆ ಅರವತ್ತು ತುಂಬಿದ ಕಾರಣಕ್ಕೆ ಶುಭಾಶಯಗಳ ಹೊಳೆಯೆ ಹರಿದಿರುತ್ತಿತ್ತು.
ಸಿಲ್ಕ್ ಸ್ಮಿತಾ ಅವರಿಗೆ ಶುಭಾಶಯಗಳನ್ನು ಹೇಳುವುದಕ್ಕೂ ಹಿಂದು ಮುಂದು ನೋಡುವ ಮಡಿವಂತ ಸಮಾಜದಲ್ಲಿ ಇವತ್ತಿಗೂ ನಾವಿದ್ದೇವೆ.

ಆದರೆ ಆಕೆ ಇವೆಲ್ಲವನ್ನು ಮೀರಿ ಹೋಗಿ ಅಮರರಾಗಿದ್ದಾರೆ.


ಎಲ್.ಎಚ್.ಲಕ್ಷ್ಮಿನಾರಾಯಣ

ಸಿಲ್ಕ್ ಸ್ಮಿತಾ ಜನ್ಮದಿನಕ್ಕೆ ಸಂಗಾತಿ ಶುಭಾಶಯ ಹಾಗೂ ಚಿರ ನೆನಪು Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-45 ಡಾ. ನರಹರಿಯು ಗೋಪಾಲನನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಅಲ್ಲಿಂದ ಹೊರಟ ಸುಮಿತ್ರಮ್ಮನ ತಲೆಯಲ್ಲಿ ತಮ್ಮ ಮನೆಯ ದಾರಿಯುದ್ದಕ್ಕೂ ನರಹರಿಯ ಮಾತುಗಳೇ ತಿರುಗುತ್ತಿದ್ದವು. ಯಾವುದನ್ನು ನಂಬಬೇಕು? ಯಾರನ್ನು ನಂಬಬೇಕು? ಈ ನರಹರಿ ಹೇಳುವ ಮಾತಿನಲ್ಲೂ ಸತ್ಯವಿದೆ ಎಂದುಕೊಂಡರೆ ಗುರೂಜಿಯವರ ವೇದಾಂತವು ಬೇರೊಂದು ಕಥೆಯನ್ನು ಹೇಳುತ್ತದೆಯಲ್ಲ! ಇವುಗಳಲ್ಲಿ ಯಾವುದು ಸರಿ, ಯಾವುದು ಸತ್ಯ? ಇಂಥ ಹತ್ತು ಹಲವು ನಂಬಿಕೆಗಳು ಹಾಗು ಪೂಜೆ, ಪುನಸ್ಕಾರಗಳ ವಿಚಾರಗಳಲ್ಲಾಗಲೀ ಅಥವಾ ಕುಟುಂಬದ, ಸಾಮಾಜದ ಯಾವುದೇ ವಿಷಯಗಳಲ್ಲಾಗಲೀ ಗಂಡಸರಿಗಿಂತ ಹೆಂಗಸರೇ ಯಾಕೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ? ಇಂಥ ಸಂಗತಿಗಳ ಬಗ್ಗೆ ಗಂಡಸರಲ್ಲಿ ಇರುವಷ್ಟು ಧೈರ್ಯ ಮತ್ತು ಉದಾಸೀನದ ಬುದ್ಧಿಯು ನಾವು ಹೆಂಗಸರಲ್ಲಿ ಯಾಕಿಲ್ಲ…? ಅಥವಾ ಇದ್ದರೂ ಆ ಮನಸ್ಥಿತಿಯನ್ನು ತೋರಿಸಿಕೊಳ್ಳಲು ನಾವೇ ಹೆದರುತ್ತಿದ್ದೇವೋ ಹೇಗೇ…? ನನ್ನ ಹಿರಿಯರ ಕಾಲದಿಂದಲೂ ನಾನು ನೋಡುತ್ತ ಬಂದಿದ್ದೇನೆ, ತಮ್ಮ ಕುಟುಂಬದ ಯಾವುದೇ ತೊಂದರೆ, ತಾಪತ್ರಯಗಳಿರಲಿ ಅಥವಾ ಜಾತಿ ಮತ ಧರ್ಮಕ್ಕೆ ಸಂಬಂಧಿಸಿದ ಆಚಾರ ವಿಚಾರಗಳೇ ಇರಲಿ ಎಲ್ಲದಕ್ಕೂ ನನ್ನಂಥ ಹೆಂಗಸರೇ ಹೆಚ್ಚುಹೆಚ್ಚಾಗಿ ಬಲಿಯಾಗುತ್ತ ಒದ್ದಾಡುತ್ತಾರೆ. ಯಾವುದೇ ಒಂದು ನಂಬಿಕೆ ಅಥವಾ ಮೂಢ ವಿಚಾರಗಳನ್ನೇ ಆಗಲಿ ಯಾರಾದರೂ ನಮ್ಮ ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಮುಟ್ಟುವಂತೆ ವಿವರಿಸುತ್ತ ಹೋದರೆಂದರೆ ಅವರಾಡುವ ಸಂಗತಿಯ ಸತ್ಯಾಸತ್ಯತೆಯನ್ನು ಚೂರೂ ತರ್ಕಿಸಲು, ಸ್ವಂತ ಬುದ್ಧಿಯಿಂದ ನಿರ್ಧರಿಸಲು ಹೋಗದೆ ಅಂಥವರನ್ನು ನಾವು ಕಣ್ಣುಮುಚ್ಚಿ ನಂಬುತ್ತ ಅವರ ಬಲೆಗೆ ಬೀಳುತ್ತೇವೆ ಯಾಕೆ? ಅಂದರೆ ನನ್ನಂಥವರಿಗೆ ಸ್ವತಂತ್ರವಾಗಿ ಯೋಚಿಸುವ, ನಿರ್ಧರಿಸುವ ಶಕ್ತಿಯೇ ಇಲ್ಲವೆಂದಾ ಈ ಜನರ ಯೋಚನೆ…?- ಎಂದೆಲ್ಲ ಅಶಾಂತಿಯಿಂದ ಚಿಂತಿಸುತ್ತ ನಡೆಯುತ್ತಿದ್ದ ಸುಮಿತ್ರಮ್ಮನ ಒಳಮನಸ್ಸಿನಲ್ಲಿ ಕೊನೆಗೆ ನರಹರಿಯ ವಿಚಾರಗಳೇ ಸ್ವಲ್ಪ ಮಟ್ಟಿಗೆ ಗೆಲುವು ಸಾಧಿಸಿದಂತೆ ತೋರುತ್ತಿತ್ತು.    ಹೌದು, ಹೌದು. ನರಹರಿ ನನಗಿಂತ ಕಿರಿಯ ವಯಸ್ಸಿನವನು ಎನ್ನುವುದೇನೋ ಸರಿ. ಆದರೆ ಅವನು ಹೇಳಿದ್ದರಲ್ಲಿ ಬಹಳ ಅರ್ಥವೂ ಇದೆ ಎಂದೆನ್ನಿಸುತ್ತದೆ. ಅದನ್ನೆಲ್ಲ ತಾಳ್ಮೆಯಿಂದ ವಿಚಾರ ಮಾಡುವಾಗ ಗೊಂದಲ ಕಳೆದು ಮನಸ್ಸು ಹಗುರವಾಗುತ್ತದೆ. ಹಾಗಾದರೆ ಆ ನಾಗರಹಾವಿನ ವಿಷಯದಲ್ಲಿ ತಾವು ಈವರೆಗೆ ಅಂದುಕೊಂಡಿದ್ದೆಲ್ಲ ಬರೇ ಭ್ರಮೆಯಾ…? ತಮ್ಮ ಮುತ್ತಜ್ಜನ ಕಾಲದಿಂದಲೂ ಅವರೆಲ್ಲ ನಂಬಿಕೊಂಡು ಬಂದಿದ್ದು, ‘ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ನಾಗರಹಾವು ಮಾತ್ರವೇ!’ ಎಂದಲ್ಲವಾ! ಹಾಗಾದರೆ ನನ್ನ ಮನೆಯೊಳಗೆ ಬಂದ ಆ ಹಾವು ನರಹರಿಯ ಪ್ರಕಾರ ಕೇವಲ ಒಂದು ಸರೀಸೃಪವೆಂದಾದರೆ ನಮ್ಮ ಹಿರಿಯರು ನಂಬಿ, ಪೂಜಿಸಿಕೊಂಡು ಬಂದಂಥ ಆ ನಾಗನೆಂಬ ಶಕ್ತಿ ಯಾವುದು…? ಎಂದು ಆಳವಾಗಿ ಮತ್ತು ಧೈರ್ಯವಾಗಿ ಯೋಚಿಸಿದರು. ಆದರೆ ತಟ್ಟನೆ ಅವರಿಗೆ ಉತ್ತರ ಸಿಗದಿದ್ದಾಗ ಮತ್ತೆ ಪೂರ್ವಾಗ್ರಹಿತ ಗೊಂದಲಕ್ಕೇ ಬಿದ್ದರು. ಅದೇ ತಳಮಳದಿಂದ ಮನೆಗೆ ಬಂದು ಬಾಗಿಲು ತೆಗೆದು ಇನ್ನೇನು ಒಳಗಯಿಡಬೇಕು ಎಂಬಷ್ಟರಲ್ಲಿ ಮತ್ತೊಂದು ಆಘಾತ ಅವರನ್ನಪ್ಪಳಿಸಿತು!   ಈ ಹಿಂದೆ ಎರಡು ಬಾರಿ ಮನೆಯೊಳಗೆ ಬಂದು ಸುಮಿತ್ರಮ್ಮನನ್ನು ನಖಶಿಕಾಂತ ಬೆದರಿಸಿ ಹೋಗಿದ್ದ ಅದೇ ಸರ್ಪವು ಇವತ್ತು ಅವರ ಮನೆಯೊಳಗೆ, ಮುಖ್ಯ ದ್ವಾರದ ಗೋಡೆಯ ಮೂಲೆಯಲ್ಲಿ ಮೈಯೊಡ್ಡಿ ಮಲಗಿತ್ತು. ಆದರೆ ಸುಮಿತ್ರಮ್ಮನ ಆಕಸ್ಮಿಕ ಪ್ರವೇಶದಿಂದ ಬೆಚ್ಚಿಬಿದ್ದು ಎದ್ದ ಹಾವು ಇಂದು ಕೂಡಾ ತನ್ನ ಅತೀ ಸಮೀಪದಲ್ಲಿ ಅವರನ್ನು ಕಂಡದ್ದು ದಿಕ್ಕು ತೋಚದೆ ಭೀಕರವಾಗಿ ಬುಸುಗುಟ್ಟುತ್ತ ಹೆಡೆಯೆತ್ತಿ ನಿಂತುಬಿಟ್ಟಿತು. ಹಾವನ್ನು ಕಂಡ ಸುಮಿತ್ರಮ್ಮನಿಗೆ ಕಣ್ಣು ಕತ್ತಲಿಟ್ಟಿತು. ಜೋರಾಗಿ ಚೀರಿ ಅಂಗಳಕ್ಕೆ ಜಿಗಿದರು. ಅದನ್ನು ಕಂಡ ಹಾವು ಇನ್ನಷ್ಟು ಕಂಗಾಲಾಗಿ ಸರ್ರನೇ ಹೆಡೆಯನ್ನು ಮಡಚಿ ಉಸಿರುಗಟ್ಟುವಂತಿದ್ದ ತನ್ನ ಉಬ್ಬಿದ ಹೊಟ್ಟೆಯನ್ನು ಕಷ್ಟಪಟ್ಟು ಎಳೆದುಕೊಂಡು ಸರಸರನೇ ಹೊರಗೆ ಹರಿದು ಕಣ್ಮರೆಯಾಯಿತು. ಹಾವು ಹೊರಟು ಹೋದುದನ್ನು ಕಂಡ ಸುಮಿತ್ರಮ್ಮ ತೆಂಗಿನ ಕಟ್ಟೆಯ ಮೇಲೆ ಕುಸಿದು ಕುಳಿತು ಅಳತೊಡಗಿದರು. ಸ್ವಲ್ಪಹೊತ್ತಲ್ಲಿ ಸಮಾಧಾನಗೊಂಡವರಿಗೆ ಆ ಹಾವಿನ ಹೊಟ್ಟೆಯು ಉಬ್ಬಿದ್ದುದು ಕಣ್ಣ ಮುಂದೆ ಸುಳಿಯಿತು. ತಟ್ಟನೆ ಏನೋ ಅನುಮಾನ ಬಂದು ಗಡಿಬಿಡಿಯಿಂದೆದ್ದು ಒಳಗೆ ಧಾವಿಸಿದರು. ಆದರೆ ಅಲ್ಲಿನ ದೃಶ್ಯವನ್ನು ಕಂಡು ಕಂಗಾಲಾದರು!    ‘ವಯಸ್ಸಾದ ಅಪ್ಪ ಅಮ್ಮನಿಂದ ತಾನೂ, ತಮ್ಮನೂ ಸಂಸಾರ, ದುಡಿಮೆ ಅಂತ ಯಾವಾಗಲೂ ದೂರವೇ ಇರುತ್ತೇವೆ. ಆದ್ದರಿಂದ ಅವರಿಗೆ ನಮ್ಮ ನೆನಪು ಬಂದಾಗಲೆಲ್ಲ ಈ ಬೆಕ್ಕಿನ ಮೂಲಕವಾದರೂ ಸ್ವಲ್ಪ ನೆಮ್ಮದಿ ಕಾಣಲಿ!’ ಎಂದುಕೊಂಡು, ಮುಂಬೈಯಲ್ಲಿದ್ದ ಸುಮಿತ್ರಮ್ಮನ ಮಗಳು ಹೊರ ದೇಶದ ತಳಿಯೊಂದರ ಮರಿಯನ್ನು ಹದಿನೈದು ಸಾವಿರ ರೂಪಾಯಿ ಕೊಟ್ಟು ತಂದು ಹೆತ್ತವರಿಗೆ ಪ್ರೀತಿಯಿಂದ ಉಡುಗೊರೆ ನೀಡಿದ್ದಳು. ಸುಮಿತ್ರಮ್ಮನೂ ಅದನ್ನು ಬಹಳ ಅಕ್ಕರೆಯಿಂದ ಸಾಕಿ ಬೆಳೆಸಿದ್ದರು. ಅಂಥ ಬೆಕ್ಕು ಇವತ್ತು ಅವರ ಕಣ್ಣಮುಂದೆಯೇ ಮಲಮೂತ್ರ ವಿಸರ್ಜನೆ ಮಾಡಿಕೊಂಡು ಸತ್ತುಬಿದ್ದಿತ್ತು! ಅದಕ್ಕೆ ಹಾವು ಕಚ್ಚಿರುವುದು ಖಚಿತವಾಗಿ ದುಃಖದಿಂದ ಅವರ ಕರುಳು ಹಿಂಡಿದಂತಾಗಿ ಅದನ್ನು ಪ್ರೀತಿಯಿಂದ ಎತ್ತಿಕೊಳ್ಳಲು ಮನಸ್ಸು ತುಡಿಯಿತು. ಆದರೆ ಹಾವು ಕಚ್ಚಿದ್ದನ್ನು ನೆನೆದವರಿಗೆ ಅದನ್ನು ಮುಟ್ಟಲೇ ಭಯವಾಯಿತು. ರಪ್ಪನೆ ಬೆಕ್ಕಿನ ಕಳೇಬರದ ಪಕ್ಕ ಕುಸಿದು ಕುಳಿತು, ‘ಅಯ್ಯಯ್ಯೋ ದೇವರೇ…!’ ಎಂದು ಗೋಳಿಟ್ಟರು. ಅಷ್ಟರಲ್ಲಿ ಬೆಕ್ಕಿನ ಮರಿಗಳ ನೆನಪಾಯಿತು. ಅಳುತ್ತಲೇ ಅವುಗಳ ಕೋಣೆಗೆ ಓಡಿದರು. ಅಲ್ಲಿ ಎರಡು ದಿನಗಳ ಹಿಂದಷ್ಟೇ ಕಣ್ಣು ಬಿಟ್ಟಿದ್ದ ಮೂರು ಮರಿಗಳಲ್ಲಿ ಎರಡು ಮರಿಗಳು ಕಾಣೆಯಾಗಿದ್ದವು! ಒಂದು ಮರಿ ಮಾತ್ರ ಯಾವುದರ ಪರಿವೆಯೂ ಇಲ್ಲದೆ ಗಾಢ ನಿದ್ದೆಯಲ್ಲಿತ್ತು. ಅದನ್ನು ಕಂಡು ಮತ್ತೊಮ್ಮೆ ರೋಧಿಸಿದರು. ಮರುಕ್ಷಣ ಅವರಿಗೆ ಆ ಹಾವನ್ನು ಬೆನ್ನಟ್ಟಿ ಹೋಗಿ ಹಿಡಿದು ಚಚ್ಚಿ ಕೊಲ್ಲುವಷ್ಟು ಕೋಪ ಉಕ್ಕಿತು. ಆದರೆ ಅದು ಸಾಧ್ಯವಿರಲಿಲ್ಲವಾದ್ದರಿಂದ, ‘ಆ ಹಾವಿನ ಸಂತಾನವೂ ನಿಸ್ಸಂತಾನವಾಗಿ ಹೋಗಲಿ…!’ ಎಂದು ಶಪಿಸಿದರು. ಅಷ್ಟರಲ್ಲಿ ಅವರಿಗೊಂದು ಸಂಗತಿ ಹೊಳೆಯಿತು. ಅಂದರೆ, ಇಷ್ಟು ದಿನಗಳಿಂದ ಆ ಹಾವು ನನ್ನ ಬೆಕ್ಕಿನ ಮರಿಗಳನ್ನು ತಿನ್ನುವುದಕ್ಕಾಗಿಯೇ ಹಠ ಹಿಡಿದು ಒಳಗೆ ಬರುತ್ತಿದ್ದುದಾ…? ಎಂದು ಯೋಚಿಸಿದವರಿಗೆ ಒಮ್ಮೆಲೇ ಆಘಾತವಾಯಿತು! ಅಯ್ಯೋ, ಪರಮಾತ್ಮಾ…! ಇಂಥದ್ದೊಂದು ಹಾಳು ಸರೀಸೃಪವನ್ನೂ ತಾನು ದೇವರು ದಿಂಡರು ಅಂತ ಅಂದುಕೊಂಡಿದ್ದಲ್ಲದೇ ಅದನ್ನೇ ಊರಿಡೀ ಜಾಗಟೆ ಬಾರಿಸಿಕೊಂಡು ತಿರುಗಾಡಿದೆನಲ್ಲಾ…? ಎಂದೆನ್ನಿಸಿ ನಾಚಿಕೆ, ಅವಮಾನದಿಂದ ಹಿಡಿಯಾದರು. ಆದರೆ ಮರುಕ್ಷಣ, ‘ಛೇ, ಛೇ! ತಪ್ಪು ತಪ್ಪು! ಅಷ್ಟು ಬೇಗ ಯಾವ ನಿರ್ಧಾರಕ್ಕೂ ಬರಬೇಡ ಸುಮಿತ್ರಾ!’ ಎಂದು ಅವರೊಳಗೆ ಯಾರೋ ಜೋರಾಗಿ ಗದರಿಸಿದಂತಾಯಿತು. ಹಾಗಾಗಿ ಮರಳಿ ಭಯವೋ, ಪಶ್ಚಾತ್ತಾಪವೋ ತಿಳಿಯದೆ ನೊಂದುಕೊಂಡರು. ಬಳಿಕ ಮತ್ತೆ, ಯಾಕೆ, ಯಾಕೆ ಅಂದುಕೊಳ್ಳಬಾರದು? ಆ ಹಾವು ನಿಜಕ್ಕೂ ದೇವರ ಹಾವೇ ಆಗಿದ್ದಿದ್ದರೆ ತಾನು ತನ್ನ ಮಗುವಿಂತೆ ಸಾಕಿ ಬೆಳೆಸಿದ ಬೆಕ್ಕನ್ನು ಕಚ್ಚಿ ಸಾಯಿಸಿ ಅದರ ಮರಿಗಳನ್ನೂ ಕೊಂದು ತಿಂದು ಹೋಗುತ್ತಿತ್ತಾ…? ಎಂದು ಕೋಪದಿಂದ ಅವುಡುಗಚ್ಚಿದರು.    ಮತ್ತೆ ಯೋಚನೆ ಬಂತು. ಅಯ್ಯೋ ಭಗವಂತಾ…! ನಮ್ಮ ಹಿರಿಯರು ಅನಾದಿಕಾಲದಿಂದಲೂ ನಾಗದೇವರು ಎಂದು ಪೂಜಿಸುತ್ತ ಬಂದಿರುವ ಹಾವೊಂದು ಬೆಕ್ಕಿನ ಮರಿಗಳನ್ನೂ ತಿನ್ನುತ್ತದಾ…!? ಥೂ, ಥೂ, ಏನಿದು ಅಸಹ್ಯ! ಇಂಥ ಹಾವಿನ ಬಗ್ಗೆಯೂ ತಾನು ಬೇಡದಿದ್ದನ್ನೆಲ್ಲ ಊಹಿಸಿಕೊಂಡು ಅದೇ ಸಂಶಯವನ್ನು ನಿವಾರಿಸಿಕೊಳ್ಳಲು ಆ ಕಳ್ಳ ಗುರೂಜಿಯಲ್ಲಿಗೂ ಹೋಗಿ ಬಂದೆನಲ್ಲ…! ಆ ಮನುಷ್ಯನಾದರೂ ಏನು ಮಾಡಿದ? ಬಣ್ಣಬಣ್ಣದ ಮಾತಾಡಿ ನಮ್ಮಿಂದ ಲಕ್ಷಗಟ್ಟಲೆ ಸುಲಿದವನು ಈಗ ಮತ್ತೆ ನಾಗಬನ ಜೀರ್ಣೋದ್ಧಾರದ ಹೆಸರಿನಲ್ಲೂ ಊರಿನವರನ್ನೆಲ್ಲ ನುಣ್ಣಗೆ ಬೋಳಿಸಲು ಹೊರಟಿದ್ದಾನೆ ಅವಿವೇಕಿ! ಎಂದು ಗುರೂಜಿಯ ಮೇಲೂ ಕಿಡಿಕಾರಿದರು. ಆದರೆ ಬಳಿಕ, ಥೂ! ತಾನಾದರೂ ಮಾಡಿದ್ದೇನು? ಹಾವು ಮನೆಯೊಳಗೆ ಹೊಕ್ಕಿದ್ದನ್ನು ವಠಾರವಿಡೀ ಟಾಂ! ಟಾಂ! ಮಾಡಿಕೊಂಡು ಬಂದೆನಲ್ಲದೇ ಅದೇ ವಿಚಾರವಾಗಿ ಆ ಬಡಪಾಯಿ ರಾಧಾಳ ಕುಟುಂಬವನ್ನೂ ಅನಾವಶ್ಯಕವಾಗಿ ನೋಯಿಸಿಬಿಟ್ಟೆ. ಪಾಪ ಅವರು ಯಾರಿಗೇನು ಅನ್ಯಾಯ ಮಾಡಿದ್ದರು!’ ಎಂದು  ತೊಳಲಾಡುತ್ತ ಕಣ್ಣೀರಿಟ್ಟರು.     ಆದರೂ ವಯಸ್ಸಾದ ಅವರ ಮನಸ್ಸು ಅಷ್ಟುಬೇಗನೇ ತಮ್ಮ ಪೂರ್ವಿಕರ ನಂಬಿಕೆ ಮತ್ತು ಸಂಪ್ರದಾಯಗಳನ್ನು ನಿರಾಕರಿಸಲು ಒಪ್ಪಲಿಲ್ಲ. ಆದ್ದರಿಂದ ಈ ಸರೀಸೃಪಜೀವಿಯು ನಾಗನಲ್ಲದಿದ್ದರೇನಾಯ್ತು? ನಮ್ಮವರು ತಲೆತಲಾಂತರದಿಂದ ಪೂಜಿಸಿಕೊಂಡು ಬಂದಂಥ ಆ ನಾಗಶಕ್ತಿಯೊಂದನ್ನು ಮನುಷ್ಯ ಮಾತ್ರನಿಂದ, ‘ಇಲ್ಲ!’ ಎನ್ನಲು ಸಾಧ್ಯವಿದೆಯಾ? ಆ ದೈವಶಕ್ತಿಯು ಖಂಡಿತಾ ಇದೆ. ಅಷ್ಟು ತಿಳಿಯದೆ ನಮ್ಮ ಹಿರಿಯರು ಅವನನ್ನು ನಂಬಿ ಪೂಜಿಸಿಕೊಂಡು ಬಂದಿದ್ದಾರಾ…? ಏನೇ ಇರಲಿ. ನಮ್ಮ ಸನಾತನ ಸಂಪ್ರದಾಯವನ್ನು ನಾವು ಎಂದಿಗೂ ಮರೆಯಬಾರದು ಮತ್ತು ಬಿಟ್ಟುಕೊಡಲೂಬಾರದು. ಇನ್ನು ಮುಂದೆ ತಾನು ಆಚರಿಸುವ ಪೂಜೆ ಪುನಸ್ಕಾರಗಳೇನಿದ್ದರೂ ಆ ಅವ್ಯಕ್ತಶಕ್ತಿ ನಾಗದೇವನಿಗೆಂದೇ ಭಾವಿಸಿದರಾಯ್ತು ಎಂದು ಯೋಚಿಸಿ ಸ್ವಲ್ಪ ಸಮಾಧಾನಚಿತ್ತರಾದ ಸುಮಿತ್ರಮ್ಮ ಕೂಡಲೇ ಗಂಡನಿಗೆ ಕರೆ ಮಾಡಿ ಅಳುತ್ತ ವಿಷಯ ತಿಳಿಸಿದರು. (ಮುಂದುವರೆಯುವುದು) ಗುರುರಾಜ್ ಸನಿಲ್

Read Post »

ಇತರೆ

ಸಿರಿವೆನ್ನಲ ಸೀತಾರಾಮ ಶಾಸ್ತ್ರಿ ನೆನಪಿಗೆ.

ಶ್ರೀಸಿರಿವೆನ್ನಲ‌ ಸೀತಾರಾಮಶಾಸ್ತ್ರಿಯವರುತೆಲುಗಿನಖ್ಯಾತಚಲನಚಿತ್ರಗೀತೆರಚನಾಕಾರರು. ಇವರು೩೦-೧೧-೨೦೨೧ರಂದುಮರಣಿಸಿದರು. ಈಸಂತಾಪದಸಂದರ್ಭದಲ್ಲಿಅವರಿಗೆಅವರದೇಗೀತೆಯಅನುವಾದದಮೂಲಕಸಂಗಾತಿ ಪತ್ರಿಕೆಶ್ರದ್ಧಾಂಜಲಿಅರ್ಪಿಸುತ್ತದೆ

ಸಿರಿವೆನ್ನಲ ಸೀತಾರಾಮ ಶಾಸ್ತ್ರಿ ನೆನಪಿಗೆ. Read Post »

ಇತರೆ

ಶಿಶುಗೀತೆ

ಶಿಶುಗೀತೆ ಚೈತ್ರಾ ತಿಪ್ಪೇಸ್ವಾಮಿ ಗಾಳಿ ಬೇಕಣ್ಣ ನಮಗೆ ಗಾಳಿಯು ಬೇಕಣ್ಣಬದುಕಲು ನಮಗೆ ಗಾಳಿಯು ಬೇಕಣ್ಣ||ಪ|| ಗಾಳಿಯಿಲ್ಲದೆ ಯಾರು ಉಳಿಯರುಅದುವೆ ನಮ್ಮ ಪ್ರಾಣವಾಯುವುಕ್ಷಣವೂ ತೊರೆದು ಉಳಿಯಲಾರೆವು.||ಗಾಳಿಯು|| ಶುದ್ಧ ಗಾಳಿಯು ದೇಹಕೆ ಉತ್ತಮಪರಿಸರದಿಂದಲೆ ಗಾಳಿಯ ಹರಿವುಚೆಂದದಿ ಗಿಡಮರ ಬೆಳೆಸಬೇಕಣ್ಣ.|| ಗಾಳಿಯು|| ಮೀರಿದ ಜನಸಂಖ್ಯೆ ಭೂಮಿ ಮೇಲೆಹೆಚ್ಚಿದೆ ವಾಹನ ರಸ್ತೆಯ ತುಂಬಾಕೆಟ್ಟಿದೆ ಗಾಳಿ ವಿಷಾನಿಲ ಸೇರುತ.||ಗಾಳಿಯು|| ಮಲಿನಗೊಂಡ ಗಾಳಿಯ ಸೇವಿಸಿಶ್ವಾಸ ರೋಗಗಳು ಬಂದವು ನೋಡಿಮಲಿನ ತಡೆದರ ನಮಗೆ ಉಳಿವು.‌‌‌‌ ||ಗಾಳಿಯು||

ಶಿಶುಗೀತೆ Read Post »

ಇತರೆ

ಸರಣಿ ಬರಹ ಅಂಬೇಡ್ಕರ್ ಓದು ಭಾಗ-4 ಬಾಲ್ಯ ಉನ್ನತ ವ್ಯಾಸಂಗ  ತಂದೆಯ ಸಾವು ಅಂಬೇಡ್ಕರರಿಗೆ ಮರೆಯಲಾಗದ ದು:ಖವನ್ನುಂಟು ಮಾಡಿತು. ತಂದೆಯ ನೆನಪು ಮರುಕಳಿಸುತಿತ್ತು. ಆದರೂ ಅವರಲ್ಲಿ ಉನ್ನತ ವ್ಯಾಸಂಗದ ಮಹತ್ಪಾಕಾಂಕ್ಷೆ ಉತ್ಕಟಗೊಂಡಿತು. ಅದೇ ಸಂದರ್ಭದಲ್ಲಿ ಬರೋಡಾದ ಮಹಾರಾಜರು ನಾಲ್ಕು ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಕಳುಹಿಸಿ ಕೊಡುವುದಾಗಿ ಪ್ರಕಟಣೆ ಹೊರಡಿಸಿದ್ದರು. ಪ್ರಕಟಣೆಯಲ್ಲಿ ಕರಾರೊಂದನ್ನು ಹಾಕಿದ್ದರು ಅದೇನೆಂದರೆ ಮಹಾರಾಜರು ಕೊಡುವ ಶಿಷ್ಯವೇತನವನ್ನು ವಿದ್ಯಾಭ್ಯಾಸಕ್ಕಾಗಿ ಮಾತ್ರ ಉಪಯೋಗಿಸಿಕೊಳ್ಳಬೇಕು, ಬೇರೆಯದಕ್ಕೆ ಹಣ ಬಳಸಿಕೊಳ್ಳುವಂತಿಲ್ಲಅಲ್ಲದೆ ವಿದ್ಯಾರ್ಜನೆ ಪೂರ್ಣಗೊಳಿಸಿ ಬಂದನಂತರ ಬರೋಡಾ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸುವುದಾಗಿ ಕರಾರು ಪತ್ರ ಬರೆದು ಕೊಡುವುದಾಗಿತ್ತು. ಮಹಾರಾಜರು ಮುಂಬಯಿಗೆ ಬಂದಾಗ ಅಂಬೇಡ್ಕರರು ಅವರನ್ನುಭೇಟಿಯಾಗಿ ಮನವಿ ಅರ್ಜಿ ಕೊಡುವರು, ಆಯ್ಕೆ ಪಟ್ಟಿ ಪ್ರಕಟಿಸಿದಾಗ ನಾಲ್ಕು ವಿದ್ಯಾರ್ಥಿಗಳಲ್ಲಿ ಅಂಬೇಡ್ಕರರ ಹೆಸರು ಆಯ್ಕೆ ಪಟ್ಟಿಯಲ್ಲಿತ್ತು. ಇದು ಅವರಿಗೆ ಎಲ್ಲಿಲ್ಲದ ಹರ್ಷ ತಂದುಕೊಟ್ಟಿತು. ಇದು ಅಂಬೇಡ್ಕರರ ಅದೃಷ್ಟವಾಗಿರದೆ ಭಾರತದ ಜನರ ಅದೃಷ್ಟವಾಗಿತ್ತು, ಪ್ರಜಾಪ್ರಭುತ್ವದ ಅದೃಷ್ಟವಾಗಿತ್ತು ಏಕೆಂದರೆ ಶ್ರೇಷ್ಠ ಸಂವಿಧಾನ     ರಾಜಕೀಯ ಪರಿಣತರೊಬ್ಬರನ್ನು ದೇಶ ಪಡೆಯುವಂತಾಯಿತು.ಆದ್ದರಿಂದ ಬರೋಡಾದ ಮಹಾರಾಜ ಮೂರನೆ ಸಯ್ಯಾಜಿ ಗಾಯಕವಾಡರವರು ಪ್ರಾತ:ಸ್ಮರಣೀಯರಾಗಿದ್ದಾರೆ.            1913 ರ ಜೂನ 4 ರಂದು ಅಂಬೇಡ್ಕರರು ಬರೋಡಾ ಸಂಸ್ಥಾನಕ್ಕೆ ಹೋಗಿ ಕರಾರು ಒಪ್ಪಂದ ಪತ್ರಕ್ಕೆ ಸಹಿಹಾಕಿ ಬಂದು ಅಮೇರಿಕ್ಕಾಕೆ ಹೋಗಲು ಸಿದ್ದರಾದರು. ರಮಾಬಾಯಿ, ಅಮೇರಿಕಾ ಎಷ್ಟು ದೂರ ಇದೆ ಎಂದು ಪ್ರಶ್ನಿಸಿದಾಗ ಅಂಬೇಡ್ಕರರು ಮಡದಿಯ ಮುಗ್ದ ಪ್ರಶ್ನೆಗೆ ಅದೇನು ನಿನ್ನ ತವರುಮನೆ ದಾಪೊಲಿಯಷ್ಟು ದೂರ ಅಂತಾ ತಿಳಿದು ಕೊಂಡಿದ್ದಿಯಾ, ಅಮೇರಿಕಾಗೆ ಹೋಗಿ ತಲುಪ ಬೇಕಾದರೆ ತಿಂಗಳು ಗಟ್ಟಲೆ ಹಡಗು ಪ್ರಯಾಣ ಮಾಡಬೇಕು ಎಂದರು. ಅಷ್ಟು ದೂರ ಹೋಗಬೇಕೆ? ಇಲ್ಲಿಯೇ ಓದಬಾರದೆ? ಎಂದು ರಮಾಬಾಯಿ ಮತ್ತೆ ಕೇಳಿದಾಗ, ರಮಾ ಇಲ್ಲಿನ ಜಾತಿ ವ್ಯವಸ್ಥೆ ನನಗೆ ಸಾಧನೆ ಮಾಡಲು ಬಿಡುವುದಿಲ್ಲ. ನಾನು ಜ್ಞಾನಿಯಾದರೆ ಮಾತ್ರ ಜನರು ನನ್ನ ಮಾತು ಕೇಳುತ್ತಾರೆ ,ಸಮಾಜ ಸುಧಾರಣೆ ಮಾಡಲು ಸಾಧ್ಯವಾಗುವುದು ಪ್ರತಿಯೋಬ್ಬ ವ್ಯಕ್ತಿಯ ಜೀವನದಲ್ಲಿ ಅವಕಾಶವೆನ್ನುವುದು ಒಮ್ಮೆ ಮನೆಬಾಗಿಲನ್ನು ತಟ್ಟುತ್ತದೆ. ಆಗಲೆ ಅಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬರೋಡಾ ಮಹಾರಾಜರು ನನಗೆ ಅಂತಹ  ಒಂದು ಅವಕಾಶ ಕಲ್ಪಿಸಿ ಶಿಷ್ಯವೇತನ ಮಂಜೂರಿಸಿದ್ದಾರೆ. ಎಲ್ಲವು ಒಳ್ಳೆಯದಾಗುತ್ತದೆ ಎಂದು ರಮಾಬಾಯಿಗೆ ಧೈರ್ಯ ತುಂಬಿ ಅಮೇರಿಕಾಕ್ಕೆ ಹೊರಡುವರು. ಯಶವಂತ ಹಿರಿಯ ಮಗ ಇನ್ನು ಚಿಕ್ಕವನು, ಎರಡನೆ ಮಗು ಹೊಟ್ಟೆಯಲ್ಲಿ ಬೆಳೆಯುತಿತ್ತು, ರಮಾಬಾಯಿ ಯಾವುದಕ್ಕೂ ಎದೆಗುಂದದೆ ಪತಿಯನ್ನು ಉನ್ನತ ವ್ಯಾಸಂಗ ಮಾಡಲು ಅಮೇರಿಕಾಗೆ ಕಳುಹಿಸಿಕೊಟ್ಟರು.           ಅಂಬೇಡ್ಕರರು 1913 ರ ಕೊನೆಯ ವಾರದಲ್ಲಿ ಅಮೇರಿಕಾದ ನ್ಯೂಯಾರ್ಕ ನಗರ ತಲುಪಿದರು. ಮೊದಮೊದಲು ಒಂದೆರಡು ಕಡೆ ಹಾಸ್ಟೆಲ್ ನೋಡಿಕೊಂಡರು, ಅಲ್ಲಿ ಅವರಿಗೆ ಊಟ ಒಗ್ಗದೆ ಇದ್ದುದರಿಂದ ಕೊನೆಗೆ ಲಿವಿಂಗ್ ಸ್ಟನ್ ಎಂಬಲ್ಲಿ ಬಂದು ಉಳಿದುಕೊಂಡರು. ಅಲ್ಲಿಯೇ ನಾವೆಲ್ ಬಾತೆನಾ ಎಂಬ ಪಾರ್ಸಿಯೊಬ್ಬನ ಪರಿಚಯವಾಯಿತು. ನಾವೆಲ್ ಬಾತೆನಾ ಕೊನೆಯವರೆಗೂ ಅಂಬೇಡ್ಕರರ ಆತ್ಮೀಯ ಸ್ನೇಹಿತರಾಗಿ ಉಳಿದರು. ಕೊಲಂಬಿಯಾ ವಿಶ್ವವಿದ್ಯಾಲಯವು ಅಂದು ಜಗತ್ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಒಂದು. ಅಂಬೇಡ್ಕರರಿಗೆ ಕೊಲಂಬಿಯಾ ವಿಶ್ವವಿದ್ಯಾಲಯವು ಹೊಸ ಪ್ರಪಂಚವನ್ನು ತೆರೆದಿಟ್ಟಿತು. ಅಸ್ಪೃಶ್ಯತೆಯ ಕರಾಳತೆ ಅಲ್ಲಿರಲಿಲ್ಲ, ಎಲ್ಲಿ ಬೇಕಾದಲ್ಲಿ ತಿರುಗಾಡಬಹುದು, ಕೂಡ್ರಬಹುದು, ಮುಟ್ಟಬಹುದು,ಮೇಲು-ಕೀಳು, ಉಚ್ಚ-ನೀಚ ಭೇದ ಭಾವ ಇಲ್ಲದ ಹೊಸ ಜಗತ್ತನ್ನು ಕಂಡರು. ಬಟ್ಟೆ ಹಾಸಿದ ಡೈನಿಂಗ ಟೇಬಲ್ ಕುರ್ಚಿ ಮೇಲೆ ಕುಳಿತು ಊಟ ಮಾಡುವುದು ಅವರಿಗೆ ಬಹಳ ಇಷ್ಟವಾಯಿತು. ನೀನು ಅಸ್ಪೃಶ್ಯ ಮುಟ್ಟಬೇಡ ಮೈಲೀಗೆಯಾಗುತ್ತದೆ ಎಂಬ ತೆಗಳಿಕೆಯ ಮಾತುಗಳು ಅಲ್ಲಿರಲಿಲ್ಲ. ಸ್ವತಂತ್ರ ವಾತಾವರಣ ಅಂಬೇಡ್ಕರರಿಗೆ ಹೊಸ ಬದುಕನ್ನು ತಂದುಕೊಟ್ಟಿತು.             ಶಿಷ್ಯವೇತನ ಅವಧಿ ಮುಗಿಯುವುದರೊಳಗೆ ಓದು ಪೂರ್ಣಗೊಳಿಸಬೆಕೆಂಬ  ಗುರಿಯೊಂದಿಗೆ  ಅಂಬೇಡ್ಕರರು ದಿನಕ್ಕೆ 18 ಗಂಟೆಗಳ ಕಾಲ ಕಷ್ಟಪಟ್ಟು ಅಧ್ಯಯನ ಮಾಡತೊಡಗಿದರು. ಹೊಸ ಪುಸ್ತಕ ಕೈಗೆ ಸಿಕ್ಕಿತೆಂದರೆ ಸಾಕು ಅನ್ನ ನೀರು ಮರೆತು ಓದಿ ಪೂರ್ಣಗೊಳಿಸುತ್ತಿದ್ದರು. ಅಲ್ಲಿನ ಬೃಹತ ಗ್ರಂಥಾಲಯದ ಬಹುತೇಕ ಪುಸ್ತಕಗಳನ್ನು ಓದಿ ಮುಗಿಸುತ್ತಾರೆ. ಲಾಲ ಲಜಪತರಾಯರು ಭಾರತದ ಸ್ವಾತಂತ್ರದ ಹೋರಾಟದ ಅಗ್ರ ನಾಯಕರು. ಅವರು ಅಮೇರಿಕದಲ್ಲಿ ಇದ್ದುದರಿಂದ ದಿನಾಲು ಗ್ರಂಥಾಲಯಕ್ಕೆ ಬರುತ್ತಿದ್ದರು.  ಲಾಲ ಲಜಪತರಾಯರು ತದೇಕ ಚಿತ್ತದಿಂದ ಓದುತ್ತ ಕುಳಿತಿರುತ್ತಿದ್ದ ಯುವಕನ ಹತ್ತೀರ ಒಂದು ದಿನ ಬಂದು ಎಷ್ಟೊಂದು ಗಹನವಾಗಿ ಅಧ್ಯಯನ ಮಾಡುತ್ತಿದ್ದಿಯಾ, ಯಾರು ನೀನು ಎಂದು ವಿಚಾರಿಸಿದರು. ಅಂಬೇಡ್ಕರರು ತಮ್ಮ ಪರಿಚಯ ಮಾಡಿಕೊಂಡರು. ಲಾಲ ಲಜಪತರಾಯರು ಅಂಬೇಡ್ಕರರ ಅಧ್ಯಯನ ಕಂಡು ಹೆಮ್ಮೆ ಪಡುತ್ತಾ ಲಾಲ ಹರದಯಾಳರ ಮುಖಂಡತ್ವದಲ್ಲಿ ನಡೆಯುತ್ತಿರುವ ಗದ್ಧಾರ ಪಕ್ಷಕ್ಕೆ ಸೇರಿಕೊಂಡು ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಲು ಕರೆ ಕೊಡುತ್ತಾರೆ . ಅಂಬೇಡ್ಕರರು ಉತ್ತರಿಸುತ್ತಾ ತಾನು ಬರೋಡಾ ಮಹಾರಾಜರ ಶಿಷ್ಯವೇತನದಲ್ಲಿ ಓದಲು ಬಂದಿದ್ದು ಕಲಿಯುವುದನ್ನು ಬಿಟ್ಟು ಅವರಿಗೆ ದ್ರೋಹ ಮಾಡುವುದಿಲ್ಲ, ಓದು ಮುಗಿದ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವುದಾಗಿ ತಿಳಿಸಿ ಓದಲು ಮಗ್ನನಾದರು.    ಈಷ್ಟ ಇಂಡಿಯಾ ಕಂಪನಿಯ ಆಡಳಿತ ಮತ್ತು ಅರ್ಥ ವ್ಯವಸ್ಥೆ ಕುರಿತು ಆಳವಾಗಿ ಅಧ್ಯಯನಮಾಡಿ, ಸತತ ಪರಿಶ್ರಮದಿಂದ 1915 ರಲ್ಲಿ “ಪ್ರಾಚೀನ ಭಾರತದ ವಾಣಿಜ್ಯ” (Ancient Indian commerce)  ಎಂಬ ಪ್ರಬಂಧವನ್ನು ಬರೆದು ಮಂಡಿಸಿದರು. ವಿಶ್ವವಿದ್ಯಾಲಯವು  ಅಂಬೇಡ್ಕರರಿಗೆ ಎಂ.ಎ ಪದವಿಯನ್ನು ನೀಡಿತು. ನಿಮ್ನವರ್ಗದ ವಿದ್ಯಾರ್ಥಿಯೊಬ್ಬ ಹೊರದೇಶದಲ್ಲಿ ಪಡೆದ ಎಂ.ಎ ಪದವಿ ಮಹಾನ್             ಸಾಧನೆಯಾಯಿತು. ಭಾರತದ ವಾಣಿಜ್ಯ ಸಂಬಂಧಗಳು ಪ್ರಾಚೀನ ಕಾಲದಲ್ಲಿ, ಮಧ್ಯಯುಗದಲ್ಲಿ ಹಾಗೂ ಬ್ರಿಟೀಷ ಅರಸೊತ್ತಿಗೆಯ ಮುಂಚಿನ ಕಾಲದಲ್ಲಿ ಹೇಗೆ ವ್ಯಾಪಿಸಿತು ಎಂಬುದನ್ನು ಎಳೆ ಎಳೆಯಾಗಿ ಪ್ರಬಂಧದಲ್ಲಿ ಬಿಚ್ಚಿಟ್ಟಿದ್ದಾರೆ. ಬ್ರಿಟೀಷರು ಈಷ್ಟ ಇಂಡಿಯಾ ಕಂಪನಿಯ ಮೂಲಕ ವ್ಯಾಪಾರಕ್ಕಾಗಿ ಆಗಮಿಸಿ ಸಂಪದ್ಭರಿತ ಭಾರತವನ್ನು ಲೂಟಿ ಮಾಡುತ್ತಾ ತನ್ನ ಸಾಮ್ರಾಜ್ಯ ಶಾಹಿ ಅರಸೋತ್ತಿಗೆಯ ನೀತಿಯಿಂದ ದೇಶ ಕಬಳಿಸಿದ್ದನ್ನು ವಿವರಿಸುತ್ತಾರೆ.       ಉದಾಹರಣೆ ಸಹಿತವಾಗಿ ಬ್ರಿಟೀಷರ ಆಡಳಿತ ಡಕಾಯಿತರ ಮತ್ತು ಕ್ರೂರ ದೊರೆಗಳ ಆಡಳಿತವಾಗಿದೆ ಎನ್ನುತ್ತಾ ಛಾಟಿ ಭೀಸುತ್ತಾ ತೆರಿಗೆಯನ್ನು ಹೇರಿದರು, ಹೇಗೆ ಯುದ್ದಗಳ ಕರ್ಚುವೆಚ್ಚ ಹೇರುತ್ತಾ, ಸೈನ್ಯ ಸ್ಥಾಪಿಸಿ ಸಂಪದ್ಭರಿತ ಭಾರತವನ್ನು ಹೇಗೆ ದೋಚಿದರೆಂಬುವುದನ್ನು ಸ್ಪಷ್ಟವಾಗಿ ಬರೆಯುತ್ತಾರೆ. ಇದು ಅಂದಿನ ಯಾವ ಸ್ವಾತಂತ್ರ್ಯ ಹೋರಾಟಗಾರರಿಗಿಂತಲೂ  ಕಡಿಮೆಯಾಗಲಾರದು. ಅವರ ದೇಶ ಪ್ರೇಮದ ಸಾಕ್ಷಿಯಾಗಿ ಈ ಕೃತಿನಿಲ್ಲುತ್ತದೆ.                 ಸೋಮಲಿಂಗ ಗೆಣ್ಣೂರ                                 

Read Post »

ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-44 ಏಕನಾಥರು ಒಂದು ಕಾಲದಲ್ಲಿ ತಮ್ಮನ್ನು ಕಾಡುತ್ತಿದ್ದಂಥ ದಟ್ಟದಾರಿದ್ರ್ಯವನ್ನು ಮೀರಿ ಬೆಳೆದಿದ್ದರು. ಹಾಗಾಗಿ ಅಂದು, ‘ಹೊಟ್ಟೆಪಾಡಿಗೊಂದು ಉದ್ಯೋಗ!’ ಎಂದಿದ್ದ ಅವರ ಆ ಬೀಜಮಂತ್ರದ ಅರ್ಥವು ಈಗ ಸಂಪೂರ್ಣ ಬದಲಾಗಿ, ‘ಆಗರ್ಭ ಶ್ರೀಮಂತಿಕೆ ಮತ್ತು ಸಾಮಾಜಿಕ ಪ್ರತಿಷ್ಠೆಯೇ ತಮ್ಮ ಜೀವನದ ಪರಮೋಚ್ಛ ಗುರಿ!’ ಎಂದಾಗಿತ್ತು. ಆದ್ದರಿಂದ ತಮ್ಮ ಹಠಯೋಗದಂಥ ಜೀವನಶೈಲಿಯಿಂದ ತಾವು ಅಂದುಕೊಂಡಂತೆಯೇ ಭರ್ಜರಿ ಯಶಸ್ಸು ಗಳಿಸಿದ್ದರು. ಆವತ್ತು ಒಂದು ಹೊತ್ತಿನ ತುತ್ತಿಗೂ ಗತಿಯಿಲ್ಲದ ಕಾಲದಲ್ಲಿ ಏನೇನು ಬಯಸಿದ್ದರೋ ಅವೆಲ್ಲವೂ ಇಂದು ಅವರ ಪಾದಗಳ ಬಳಿ ಬಂದು ಬಿದ್ದಿದ್ದವು. ಮುಖ್ಯವಾಗಿ ಲಕ್ಷ್ಮಿದೇವಿಯ ಕಟಾಕ್ಷವು ಅವರ ಮೇಲೆ ಇನ್ನಿಲ್ಲದಂತೆ ಆಗಿತ್ತು! ಹಾಗಾಗಿ ಈಗ ಅವರ ಬಳಿ ಲೆಕ್ಕವಿಲ್ಲದಷ್ಟು ಹಣವಿದೆ. ಅಳತೆಗೆ ಮೀರಿದಷ್ಟು ಆಸ್ತಿಯಿದೆ. ಎರಡೋ ಮೂರೋ ವಿದೇಶಿ ಕಾರುಗಳಿವೆ. ಶಂಕರನದಕ್ಕಿಂತಲೂ ದೊಡ್ಡ ಬಂಗಲೆಯಿದೆ. ಊರಿನ ಕೆಲವಾರು ಕಡೆ ಎಕರೆಗಟ್ಟಲೆ ಜಮೀನು ಕೊಂಡಿದ್ದಾರೆ. ಸಮಾಜ ಮತ್ತು ಸರಕಾರದ ಮಾನ್ಯತೆ ಪಡೆಯಲೆಂಬಂತೆ ಉಗ್ರಾಣಿಬೆಟ್ಟಿನಲ್ಲಿ ಕೊಂಡಿದ್ದ ಒಂದೂವರೆ ಎಕರೆ ತೋಟವನ್ನು ಕೋಮಲದೇವಿ ಎಂಬ ಸಮಾಜ ಸೇವಕಿಯ ‘ಕರುಣಾಳು ಬಾ ಬೆಳಕೇ!’ ಎಂಬ ವೃದ್ಧಾಶ್ರಮಕ್ಕೆ ಬಾಡಿಗೆಯಿಲ್ಲದೆ ಕೊಟ್ಟಿದ್ದಾರೆ. ಊರ ಪರವೂರ ಜನಾಭಿವೃದ್ಧಿ ಮತ್ತು ಧಾರ್ಮಿಕಾಭಿವೃದ್ಧಿ ಚಟುವಟಿಕೆಗಳಿಗೆ ಮನಸೋಇಚ್ಛೆ ದಾನಧರ್ಮಗಳನ್ನು ಮಾಡುತ್ತ ಬಂದಿದ್ದಾರೆ. ಅಂದು ತಮ್ಮ ಪುಟಗೋಸಿ ಗೆಳೆಯ ಶಂಕರ, ‘ಗುರೂಜೀ!’ ಎಂದು ಕರೆದ ಹೆಸರಿಗೆ ತಕ್ಕಂತೆ ನಾಡಿನಾದ್ಯಂತ ಜನರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಹೀಗಿದ್ದ ಗುರೂಜಿಯವರ ಈ ಎಲ್ಲಾ ಚಟುವಟಿಕೆ ಮತ್ತು ಕಾರ್ಯಸಾಧನೆಗಳನ್ನು ಅಂತರ್ಜಾಲದ ಮೂಲಕವೇ ಕಣ್ಗಾವಲಿಟ್ಟು ಅಧ್ಯಯನ ಮಾಡುತ್ತ ಬಂದಿರುವ ಉತ್ತರ ಭಾರತದಾಚೆಗಿನ ಯಾವುದೋ ಅನಾಮಧೇಯ ವಿಶ್ವವಿದ್ಯಾಲಯವೊಂದು ತಮ್ಮ ವಿದ್ಯಾ ಸಂಸ್ಥೆಗೆ ಗುರೂಜಿಯವರು ಪ್ರೀತಿಯಿಂದ ನೀಡಿದ ಎರಡು ಲಕ್ಷ ರೂಪಾಯಿಗಳ ಉದಾರ ದೇಣಿಗೆಯ ಕೃತಜ್ಞಾರ್ಥವಾಗಿ ಅವರಿಗೆ ‘ಗೌರವ ಡಾಕ್ಟರೇಟ್’ ಪದವಿಯನ್ನೂ ನೀಡಿ ಗೌರವಿಸಿದೆ. ಹಾಗಾಗಿ ಈಗ ಜನರು ಅವರನ್ನು, ‘ಡಾಕ್ಟರ್ ಏಕನಾಥ ಗುರೂಜಿ!’ ಎಂದೂ ಕರೆಯುತ್ತಾರೆ. ಜನರ ಬಾಯಿಯಿಂದ ತಮ್ಮ ಹೆಸರನ್ನು ಆ ಮಾದರಿಯಲ್ಲಿ ಕೇಳುವಾಗ ಗುರೂಜಿಯವರಿಗೆ ತಮ್ಮ ಜನ್ಮ ಸಾರ್ಥಕವಾದಂತೆನ್ನಿಸುತ್ತದೆ. ತಾವೆಂದಾದರೂ ಈ ಮಟ್ಟದ ಯಶಸ್ಸಿನ ಶಿಖರವೇರುತ್ತೇವೆ ಎಂದು ಕನಸು ಮನಸಿನಲ್ಲಾದರೂ ಅಂದುಕೊಂಡಿದ್ದುಂಟಾ? ಇದೆಲ್ಲ ನಾವು ನಂಬಿದ ನಾಗ ಪರಿವಾರ ದೈವಗಳ ಅನುಗ್ರಹವಲ್ಲದೆ ಮತ್ತೇನು? ಎಂದು ತಮ್ಮ ಬಿಡುವಿನ ಸಮಯದಲ್ಲೆಲ್ಲ ಯೋಚಿಸುತ್ತ ಖುಷಿಯಿಂದ ತನ್ಮಯರಾಗುತ್ತಾರೆ. ಗುರೂಜಿಯವರ ಇಂಥ ಯಶಸ್ಸಿಗೆ ಶಂಕರನಂಥ ಅನೇಕ ಬಿಲ್ಡರ್‍ಗಳು, ಗುತ್ತಿಗೆದಾರರು, ಸಾಫ್ಟ್‍ವೇರ್ ಇಂಜಿನೀಯರ್‍ಗಳು, ವಿವಿಧ ಉದ್ಯಮಿಗಳು, ಒಂದಷ್ಟು ಪ್ರಸಿದ್ಧ ವೈದ್ಯರು, ಮನೋದುರ್ಬಲರು, ಕೊಲೆಗಡುಕರು, ವಂಚಕರು ಮತ್ತು ಅಮಾಯಕ ಬಡ ಜನರಿಂದ ಹಿಡಿದು ನಾಡಿನ ಕೆಲವಾರು ಸಚಿವರು ಹಾಗೂ ಶಾಸಕರವರೆಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಿರಂತರ ಸಹಕಾರ ನೀಡುತ್ತಲೇ ಬಂದಿದ್ದಾರೆ. ಹಾಗಾಗಿ ಗುರೂಜಿಯವರಿಗೆ ಇವರೆಲ್ಲರ ಮೇಲೂ ಅಪಾರ ಅಭಿಮಾನವಿದೆ. ಆದರೆ ಆವತ್ತು ತಾವು ಪೆದುಮಾಳರಿಗೆ ವಿದಾಯ ಹೇಳಿ ಮುಂಬೈಯಿಂದ ಹಿಂದಿರುಗುವಾಗ, ‘ಇಂದಲ್ಲ ನಾಳೆ ನಿಮ್ಮ ಕಣ್ಣ ಮುಂದೆ ನಿಮಗಿಂತಲೂ ಎತ್ತರಕ್ಕೆ ಬೆಳೆದು ತೋರಿಸದಿದ್ದರೆ ನನ್ನ ಹೆಸರು ಏಕನಾಥನೇ ಅಲ್ಲ. ಆ ದಿನವನ್ನು ಎಣಿಸುತ್ತಿರಿ!’ ಎಂದು ನೋವಿನಿಂದ ಶಪಥ ಮಾಡಿ ಬಂದಿದ್ದು ಇವತ್ತಿಗೂ ಅವರನ್ನು ಕಾಡುತ್ತದೆ. ಅದೇ ಕಾರಣಕ್ಕೋ ಏನೋ ಎಂಬಂತೆ ಅವರ ಹೆಸರು ಬಹಳ ಬೇಗನೇ ಮುಂಬೈ ನಗರಕ್ಕೂ ಹಬ್ಬಿತ್ತು. ಮುಂಬೈಯ ಖ್ಯಾತ ಉದ್ಯಮಿ ಯಶಪಾಲರ ಬಂಗಲೆಯಲ್ಲಿ ಕೆಲವು ವಿಶೇಷ ಹೋಮ ಹವನಗಳನ್ನು ನಡೆಸಿಕೊಡಲು ಗುರೂಜಿಯವರಿಗೆ ಆಹ್ವಾನ ಬಂದಿತು. ಅಂದು ಬೆಳಿಗ್ಗೆ ತಮ್ಮ ಕಛೇರಿಗೆ ಆಗಮಿಸಿದ ಯಶಪಾಲರನ್ನು ಕುಳ್ಳಿರಿಸಿಕೊಂಡ ಗುರೂಜಿಯವರು ನಿಧಾನವಾಗಿ ತಮ್ಮ ಪಂಚಾಂಗ ಮತ್ತು ಜ್ಯೋತಿಷ್ಯ ಪುಸ್ತಕಗಳನ್ನು ತಿರುವಿ ಹಾಕುತ್ತ ಮುಂಬೈ ಕಾರ್ಯಕ್ರಮಕ್ಕೆ ದಿನ ಗೊತ್ತುಪಡಿಸಲೂ ಮತ್ತು ಹಣಕಾಸಿನ ಚೌಕಾಶಿಗೂ ಒಂದು ಗಂಟೆ ಸಮಯವನ್ನು ವಿನಿಯೋಗಿಸಿಕೊಂಡರು. ಬಳಿಕ ಅವರನ್ನು ತೃಪ್ತಿಪಡಿಸಿ ಕಳುಹಿಸಿಕೊಟ್ಟವರು ತಮ್ಮೊಳಗೆ ಸುಪ್ತವಾಗಿ ಹೊಗೆಯಾಡುತ್ತಿರುವ ಪೆದುಮಾಳರ ಮೇಲಿನ ಸೇಡನ್ನು ಇನ್ನು ಕೆಲವೇ ದಿನಗಳಲ್ಲಿ ತೀರಿಸಿಕೊಳ್ಳಲಿಕ್ಕಿದೆ! ಎಂದುಕೊಂಡು ವಿಲಕ್ಷಣ ಖುಷಿಪಟ್ಟು ಉದ್ವೇಗಗೊಂಡರು. ಆ ದಿನವೂ ಬಂದದುಬಿಟ್ಟಿತು. ಆವತ್ತು ಅತಿಯಾದ ಚಡಪಡಿಕೆಯಲ್ಲಿದ್ದ ಗುರೂಜಿಯವರು ವಿಮಾನದ ಮೂಲಕ ಮುಂಬೈಗೆ ಹಾರಿದರು. ಯಶಪಾಲರ ಪೂಜೆಗಳನ್ನು ತರಾತುರಿಯಲ್ಲಿ ಮುಗಿಸಿಕೊಟ್ಟರು. ಅಲ್ಲೇ ಸ್ವಲ್ಪ ಕಾಲ ವಿಶ್ರಾಂತಿ ಪಡೆದು ಕೂಡಲೇ ಪೆದುಮಾಳ ಗುರುಗಳ ಮನೆಗೆ ಧಾವಿಸಿದರು. ಅಂದು ನಿರ್ಗತಿಕ ಹುಡುಗನಿಂದ ಪ್ರಾಣಿಯಂತೆ ದುಡಿಸಿಕೊಂಡು ಉಟ್ಟ ಬಟ್ಟೆಯಲ್ಲೇ ಹೊರಗೆ ದಬ್ಬಿದ ವಂಚಕ ಗುರುವಿಗೆ ಇವತ್ತು ತಮ್ಮ ಸಾಧನೆ ಮತ್ತು ಶ್ರೀಮಂತಿಕೆ ಎಂಥದ್ದೆಂಬುವುದನ್ನು ತೋರಿಸಬೇಕು. ಅದನ್ನು ನೋಡಿ ಆ ಮುದುಕ ಹಾರ್ಟ್ ಅಟ್ಯಾಕ್ ಆಗಿ ನರಳುವುದನ್ನು ತಾವು ಕಣ್ಣಾರೆ ಕಂಡು ಒಳಗೆ ಧಗಧಗಿಸುವ ಸೇಡಿನ ಜ್ವಾಲೆಯನ್ನು ತಣಿಸಿಕೊಳ್ಳಬೇಕು ಎಂದು ಯೋಚಿಸುತ್ತ ಪೆದುಮಾಳರ ಮನೆಯ ಬಾಗಿಲಿಗೆ ಬಂದು ನಿಂತು ಕರೆಗಂಟೆ ಬಾರಿಸಿದರು. ತುಸುಹೊತ್ತಿನ ನಂತರ ಮುದುಕಿಯೊಬ್ಬಳು ಮೆಲ್ಲನೆ ಬಂದು ಬಾಗಿಲು ತೆರೆದಳು. ಗುರೂಜಿಯವರನ್ನು ಪ್ರಶ್ನಾರ್ಥಕವಾಗಿ ದಿಟ್ಟಿದಳು. ಆದರೆ ಗುರೂಜಿಯವರಿಗೆ ಆಕೆ ಪೆದುಮಾಳರ ಪತ್ನಿ ಅನಸೂಯಮ್ಮ ಎಂದು ತಟ್ಟನೆ ಗುರುತು ಸಿಕ್ಕಿತು. ಆದರೆ ಆಕೆ, ‘ಯಾರು ಬೇಕಾಗಿತ್ತು… ಎಲ್ಲಿಂದ ಬಂದಿರಿ…?’ ಎಂದು ಗುರೂಜಿಯ ಗುರುತು ಹತ್ತದೆ ಪ್ರಶ್ನಿಸಿದಳು. ಆಗ ಗುರೂಜಿಯವರ ಮುಖದಲ್ಲಿ ವ್ಯಂಗ್ಯ ನಗುವೊಂದು ಹೊಮ್ಮಿತು. ಆವತ್ತು ತನ್ನ ಗಂಡನೊಂದಿಗೆ ಸೇರಿ ಈ ಮುದುಕಿಯೂ ತಮ್ಮನ್ನು ಎಷ್ಟೊಂದು ಬಗೆಯಲ್ಲಿ ಹಿಂಸಿಸುತ್ತಿದ್ದಳು! ತಮ್ಮನ್ನು ಆಜನ್ಮ ಗುಲಾಮನಂತೆ ನಡೆಸಿಕೊಂಡು ಹೊಟ್ಟೆಬಟ್ಟೆಗೂ ಸರಿಯಾಗಿ ಕೊಡದೆ ನೋಯಿಸುತ್ತಿದ್ದಳಲ್ಲ ಇವಳು! ಎಂದುಕೊಂಡವರ ಮನಸ್ಸು ಕಹಿಯಾಯಿತು. ‘ಹೌದೌದು. ನಿಮಗೆ ಹೇಗೆ ಗುರುತು ಹತ್ತೀತು ಹೇಳಿ…? ನಮ್ಮ ಏಳಿಗೆಯೇ ಆ ಮಟ್ಟಕ್ಕಾಗಿಬಿಟ್ಟಿದೆಯಲ್ಲ! ಹಾಗಾಗಿ ಯಾರೀಗೂ ಪಕ್ಕನೆ ನಮ್ಮ ಪರಿಚಯವಾಗಲಿಕ್ಕಿಲ್ಲ ಬಿಡಿ. ನಮ್ಮ ಗುರುತನ್ನು ನಾವೇ ಹೇಳಿಕೊಳ್ಳುತ್ತೇವೆ ಕೇಳಿ!’ ಎಂದು ಅಸಡ್ಡೆಯಿಂದ ಅನ್ನುತ್ತ ಅನಸೂಯಮ್ಮನ ಹಿಂದೆಯೇ ಒಳಗೆ ನಡೆದರು. ಅಷ್ಟು ಕೇಳಿದ ಆಕೆ ತಟ್ಟನೆ ಹಿಂದಿರುಗಿ ಗುರೂಜಿಯವರನ್ನು ಅವಕ್ಕಾಗಿ ದಿಟ್ಟಿಸಿದರು. ಆಗ ಗುರೂಜಿ ಮರಳಿ ಹಮ್ಮಿನಿಂದ ನಕ್ಕವರು, ‘ಅರೆರೇ, ಗಾಬರಿಯಾಗಬೇಡಿ ಅನಸೂಯಮ್ಮಾ… ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಏಕನಾಥ ಎನ್ನುವ ಒಬ್ಬ ನತದೃಷ್ಟ ಹುಡುಗ ನಿಮ್ಮ ಈ ಮನೆಯಲ್ಲಿ ಚಾಕರಿಗಿದ್ದ ನೆನಪುಂಟಾ…?’ ಎಂದು ಅವರನ್ನು ಇರಿಯುವಂತೆ ದಿಟ್ಟಿಸುತ್ತ ಕೇಳಿದರು. ಆಗ ಗುರುಪತ್ನಿಗೆ ತಟ್ಟನೆ ನೆನಪಾಯಿತು. ಆದರೆ ಮರುಕ್ಷಣ ಗುರೂಜಿಯವರ ವೇಷಭೂಷಣವನ್ನೂ ಅವರ ಮೈಕೈಯಲ್ಲಿ ನೇತಾಡುತ್ತಿದ್ದ ಚಿನ್ನಾಭರಣವನ್ನೂ ಕಂಡ ಅನಸೂಯಮ್ಮನಿಗೆ ದಿಗಿಲಾಗಿಬಿಟ್ಟಿತು! ‘ಓ ದೇವ, ದೇವಾ…, ನೀನಾ ಮಾರಾಯಾ…! ನನಗೆ ಮೊದಲು ಗುರುತೇ ಸಿಕ್ಕಲಿಲ್ಲ ನೋಡು. ನೀನೆಂಥದು ಮಾರಾಯಾ ಇಷ್ಟೊಂದು ಬದಲಾಗಿದ್ದು! ಅದೆಂಥದು ವ್ಯವಹಾರ ನಿನ್ನದು…?’ ಎಂದು ಬೊಚ್ಚು ಬಾಯಿ ಬಿಟ್ಟುಕೊಂಡು ಪ್ರಶ್ನಿಸಿದರು. ‘ವ್ಯವಹಾರವೆಂಥದು, ನಾವು ಕಲಿತ ವಿದ್ಯೆಯೇ ನಮ್ಮನ್ನು ಈ ಮಟ್ಟಕ್ಕೇರಿಸಿತು. ಹ್ಞಾಂ! ಆದರೆ ನಿಮ್ಮ ಗಂಡನಿಂದ ಕಲಿತ ಆ ಪೊಟ್ಟು ಶಾಸ್ತ್ರವಲ್ಲ. ನಾವೇ ನಮ್ಮೂರಿನಲ್ಲಿ ಅನೇಕ ವರ್ಷಗಳ ಕಾಲ ಹಠ ಹಿಡಿದು ಕಲಿತ ವಿದ್ಯೆಯಿಂದಲೇ ಇಷ್ಟೆಲ್ಲ ಆದುದು! ಅದೇನು ನಿಮ್ಮ ಗಂಡನಿಗೆ ಮಾತ್ರ ದೇವರು ದಿಂಡರ ವೈಹಿವಾಟು ಮಾಡಲು ಬರುವುದಾ? ನಮಗೆ ಸಾಧ್ಯವಿಲ್ಲವಾ… ಎಲ್ಲಿದ್ದಾರೆ ಅವರು…? ಒಮ್ಮೆ ನೋಡಬೇಕಲ್ಲ ಅವರನ್ನು. ಹೊರಗೆ ಕರೆಯಿರಿ ನೋಡುವ!’ ಎಂದು ನಂಜು ಕಾರುತ್ತ ಹೇಳಿದರು. ಗುರೂಜಿಯವರ ಅಂಥ ಅಹಂಕಾರದ ಮಾತುಗಳನ್ನು ಕೇಳಿದ ಅನಸೂಯಮ್ಮನ ಜೋಲು ಮೋರೆ ತಟ್ಟನೆ ಕಳೆಗುಂದಿತು. ಆದರೂ ಸಂಭಾಳಿಸಿಕೊಂಡು, ‘ಅಯ್ಯೋ ಮಾರಾಯಾ…ಅವರ ಕಥೆ ಏನು ಹೇಳುವುದು. ಅವರು ಚಾಪೆ ಹಿಡಿದು ಐದು ವರ್ಷವಾಗುತ್ತ ಬಂತು…!’ ಎಂದರು ದುಃಖದಿಂದ. ಅಷ್ಟು ಕೇಳಿದ ಗುರೂಜಿಯವರಿಗೆ ಒಮ್ಮೆಲೇ ನಿರಾಶೆಯಾಯಿತು. ‘ಹೌದಾ,… ಏನಾಯ್ತು, ಯಾವುದಾದ್ರೂ ಕಾಯಿಲೆಯಾ…?’ ‘ಕಾಯಿಲೆಯೋ ಕಸಾಲೆಯೋ ದೇವರೇ ಬಲ್ಲ. ಅದೊಂದು ದೊಡ್ಡ ಕಥೆ. ಹೇಳುತ್ತೇನೆ ಕುಳಿತುಕೋ. ಬಾಯಾರಿಕೆ ತಗೊಳ್ಳುತ್ತೀಯಾ…?’ ‘ಸದ್ಯಕ್ಕೇನೂ ಬೇಡ. ಗುರುಗಳಿಗೇನಾಯ್ತು ಹೇಳಿ!’ ‘ಹೇಳುತ್ತೇನೆ…’ ಎಂದ ಅನಸೂಯಮ್ಮ ಗುರೂಜಿಯೆರೆದುರು ಕುಳಿತುಕೊಳ್ಳುತ್ತ ವಿಷಯ ಆರಂಭಿಸಿದರು. ‘ಕೆಲವು ವರ್ಷಗಳ ಹಿಂದೆ ಬಾಂದ್ರಾದ ಲೇಡಿಸ್ ಬಾರೊಂದರಲ್ಲಿ ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆ ನಡೆಯಿತಲ್ಲ ಗೊತ್ತುಂಟಾ ನಿನಗೆ?’ ‘ಹೌದಾ…? ಇಲ್ವಲ್ಲಾ. ಯಾರು ಮಾಡಿದ್ದು…?’ ‘ಯಾರೂಂತ ಗೊತ್ತಿಲ್ಲ. ಅದನ್ನು ಮಾಡಿಸಿದ್ದು ಮಾತ್ರ ಅದೇ ಹೊಟೇಲು ಮಾಲಿಕ ಎಂಬ ಸುದ್ದಿ ಹಬ್ಬಿತ್ತು. ಅದು ಆ ಹೆಣ್ಣುಮಕ್ಕಳ ಹೆತ್ತವರಿಗೆ ತಿಳಿಯಿತು. ಅವರು ಅವನ ಮೇಲೆ ಕೇಸು ಹಾಕಿದರು. ಆದರೆ ಹೊಟೇಲು ಶೇಟಿನ ದುಡ್ಡಿನ ಬಲತ್ಕಾರದ ಮುಂದೆ ಅವರ ಕೇಸು ಪುಸ್ಕಾಯಿತು. ಅದರಿಂದ ಆ ಜನರು ಹತಾಶರಾದರು. ಆದರೂ ಹಠ ಬಿಡದೆ ಅವನನ್ನು ಯಾವುದಾದರೂ ರೀತಿಯಲ್ಲಿ ಸರ್ವನಾಶ ಮಾಡಲು ಹೊರಟವರು ಇಲ್ಲಿನ ಒಬ್ಬ ದೊಡ್ಡ ಮಂತ್ರವಾದಿಯನ್ನು ಹಿಡಿದು ಅವನಿಗೆ ಭಯಂಕರ ಮಾಟ ಮಾಡಿಸಿದರಂತೆ! ಅದು ಹೊಟೇಲು ಶೇಟಿಗೂ ಗೊತ್ತಾಯಿತು. ಅವನು ಕೂಡಲೇ ಇವರ ಹತ್ತಿರ ಓಡಿ ಬಂದು ದುಃಖವನ್ನು ತೋಡಿಕೊಂಡ. ಇವರಿಗೆ ಮೊದಲೇ ಆ ಮಂತ್ರವಾದಿಯ ಮೇಲೆ ಅಸಮಾಧಾನವಿತ್ತು. ಅದೇ ನೆಪದಿಂದ ಇವರು ಕೂಡಾ ಯಾವುದೋ ಭೀಕರ ತಾಂತ್ರಿಕವಿಧಿಯೊಂದನ್ನು ಆಚರಿಸಿ, ಆ ಹೆಣ್ಣು ಹೆತ್ತವರು ಹೊಟೇಲು ಮಾಲಿಕನ ಮೇಲೆ ಪ್ರಯೋಗಿಸಿದ್ದ ಕೃತ್ರಿಮವನ್ನು ಉಚ್ಛಾಟಿಸಿಬಿಟ್ಟರು! ಆದರೆ ಈ ವಿಷಯವೂ ಅದು ಹೇಗೋ ಆ ಹೆಣ್ಣುಮಕ್ಕಳ ಹೆತ್ತವರಿಗೆ ತಿಳಿದುಬಿಟ್ಟಿತು. ಆದ್ದರಿಂದ ಆವತ್ತೊಮ್ಮೆ ಸೂರ್ಯ ಕಂತುವ ಹೊತ್ತಿನಲ್ಲಿ ಅವರು ಐದಾರು ಮಂದಿ ತಲೆಕೂದಲು ಕೆದರಿಸಿಕೊಂಡು ಮನೆಗೆ ಬಂದವರು ಅಂಗಳದಲ್ಲಿ ನಿಂತುಕೊಂಡು ನಮ್ಮನ್ನು ಹೊರಗೆ ಕರೆದು ಅಸಭ್ಯವಾಗಿ ಬೈಯ್ಯುತ್ತ ಬೊಬ್ಬೆಯಿಟ್ಟು ಅಳುತ್ತ, ‘ನಮ್ಮ ಮಕ್ಕಳ ಶೀಲವನ್ನೂ, ಅವರ ಬದುಕನ್ನೂ ಹಾಳು ಮಾಡಿದ ಆ ರಾಕ್ಷಸನೂ, ನೀನೂ ಸರ್ವನಾಶವಾಗಿ ಹೋಗುತ್ತಿರಾ ನೋಡುತ್ತಿರಿ!’ ಎಂದು ನೆಲಕ್ಕೆ ಕೈ ಅಪ್ಪಳಿಸಿ ಶಪಿಸುತ್ತ ಅಂಗಳವಿಡೀ ಹೊರಳಾಡಿ ಗಲಾಟೆಯೆಬ್ಬಿಸಿ ಹೊರಟು ಹೋದರು. ಆವತ್ತಿನಿಂದ ಇವರಿಗೇನಾಯಿತೋ? ಎಲ್ಲರೊಂದಿಗೂ ಮಾತುಕಥೆಯನ್ನು ನಿಲ್ಲಿಸಿಬಿಟ್ಟರು. ಇದಾದ ಮೇಲೆ ಸ್ವಲ್ಪ ಸಮಯದ ನಂತರ ದಿನವಿಡೀ ಮಲಗಿಕೊಂಡೇ ಇರತೊಡಗಿದರು. ಹಾಗೆ ಒಮ್ಮೆ ಮಲಗಿದವರು ಮುಂದೆ ಮಲಗಿಯೇಬಿಟ್ಟರು. ಸುಮಾರು ಬಗೆಯ ಔಷಧಿ ಉಪಚಾರಗಳನ್ನೆಲ್ಲ ಮಾಡಿಸಿದ್ದಾಯಿತು. ಏನೂ ಪ್ರಯೋಜನವಾಗಲಿಲ್ಲ!’ ಎಂದು ಅನಸೂಯಮ್ಮ ನಿಟ್ಟುಸಿರುಬಿಟ್ಟರು. ಪೆದುಮಾಳರ ಕಥೆಯನ್ನು ಕೇಳಿದ ಗುರೂಜಿಯವರ ಮನಸ್ಸಿಗೇನೋ ಒಂಥರಾ ಹಿಂಸೆಯಾಯಿತು. ಅದರ ಬೆನ್ನಿಗೆ ಆವತ್ತು ಬುಕ್ಕಿಗುಡ್ಡೆಯ ದೇವರಕಾಡಿನಲ್ಲಿ ನಂದಿಮರದ ಕೊಂಬೆಯೊಂದು ತಲೆಯ ಮೇಲೆ ಮುರಿದು ಬೀಳಲಿದ್ದಾಗ ಕಾಣಿಸಿಕೊಂಡಂಥ ಹೆದರಿಕೆಯೂ ಮತ್ತದೇ ರೀತಿಯ ಎದೆ ತಿವಿದಂಥ ನೋವೂ ಮರಳಿ ಕಾಣಿಸಿಕೊಂಡಿದ್ದರೊಂದಿಗೆ ಮೈಕೈಯೆಲ್ಲ ತಣ್ಣಗೆ ಬೆವರಿ ಉಸಿರುಗಟ್ಟಿದಂತಾಯಿತು. ಆಗ ಮತ್ತಷ್ಟು ಭಯಪಟ್ಟರು. ಆದರೆ ಮರುಕ್ಷಣ, ‘ಅರೇರೇ, ನಾವೇನು ಇವರಂತೆ ಅಮಾಯಕರ ಮೇಲೆಲ್ಲ ಮಾಟಮಂತ್ರ ಪ್ರಯೋಗಿಸಿ ಮೇಲೆ ಬಂದವರಾ…? ಅಂಥದ್ದು ಒಂದೆರಡು ಘಟನೆಗಳು ನಮ್ಮಿಂದಲೂ ನಡೆದಿರಬಹುದಾದರೂ ಅದರ ಹತ್ತು ಪಟ್ಟು ದಾನಧರ್ಮಗಳನ್ನು ಮಾಡುತ್ತ ಬಂದಿದ್ದೇವೆ. ಮತ್ತ್ಯಾಕೆ ಹೆದರಬೇಕು!’ ಎಂದು ಧೈರ್ಯ ತಂದುಕೊಂಡರು. ಆಗ ಅವರ ಹೃದಯವು ಯಥಾಸ್ಥಿತಿಗೆ ಬಂತು. ‘ಅವರೀಗ ಎಲ್ಲಿದ್ದಾರೆ…?’ ಎಂದು ಅನಸೂಯಮ್ಮನನ್ನು ಕೇಳಿದರು. ‘ಒಳಗೆ ಮಲಗಿದ್ದಾರೆ ಮಾರಾಯಾ. ನೋಡುತ್ತೀಯಾ ಬಾ. ಆದರೆ ಅವರಿಗೆ ಪಕ್ಕನೆ ಯಾರ ಗುರುತೂ ಹತ್ತುವುದಿಲ್ಲ. ಹತ್ತಿದರೂ ಮಾತಾಡುವುದಿಲ್ಲ!’ ಎಂದು ಹತಾಶೆಯಿಂದ ಹೇಳಿದ ಅನಸೂಯಮ್ಮ ಎದ್ದು ಒಳಗೆ ನಡೆದರು. ‘ಮಾತನಾಡದಿದ್ದರೆ ತೊಂದರೆಯಿಲ್ಲ. ಅವರನ್ನು ನೋಡಲೇಬೇಕೆಂಬ ದೊಡ್ಡ ಆಸೆಯಿಂದ ಬಂದಿದ್ದೇವೆ!’ ಎನ್ನುತ್ತ ಗುರೂಜಿಯವರು ಅವರನ್ನು ಹಿಂಬಾಲಿಸಿದರು. ಅಲ್ಲಿ ಒಳಕೋಣೆಯಲ್ಲಿ ಹಳೆಯ ಮಂಚದ ಮೇಲೆ ಮಲಗಿದ್ದ ಪೆದುಮಾಳರು ಎಲುಬಿನ ಚಕ್ಕಳವಾಗಿದ್ದರು. ಅವರ ಅವಸ್ಥೆಯನ್ನು ಕಂಡ ಗುರೂಜಿಯವರಿಗೆ ತೀವ್ರ ನಿರಾಶೆಯಾಯಿತು. ಏಕೆಂದರೆ ಅವರ ಯಶಸ್ಸು ಮತ್ತು ಶ್ರೀಮಂತಿಕೆಯನ್ನು ನೋಡಿ ಗುರುಗಳು ಹೊಟ್ಟೆ ಉರಿದುಕೊಂಡು ಕೊರಗಬೇಕು

Read Post »

ಇತರೆ

ಸರಣಿ ಬರಹ ಅಂಬೇಡ್ಕರ್ ಓದು ಭಾಗ-3 ಬಾಲ್ಯ [1:03 pm, 24/11/2021] ಸಂಗಾತಿ ಸಾಹಿತ್ಯ ಪತ್ರಿಕೆ: ರಾಮಜಿ ಸಕ್ಪಾಲರು ಮಗನನ್ನು ಹೆಚ್ಚು ಹೆಚ್ಚು ಓದಿಸಬೇಕು, ಸಮಾಜಕ್ಕೆ ಬೆಳಕು ನೀಡುವಂತ ದೊಡ್ಡ ವ್ಯಕ್ತಿಯನ್ನಾಗಿ ಮಾಡಬೇಕೆಂಬ ಮಹಾದಾಶೆಯೊಂದಿಗೆ ಕಷ್ಟ ಪಟ್ಟು ಕಲಿಸಿದರು. “ಬೆಳೆವ ಸಿರಿ ಮೊಳಕೆಯಲ್ಲಿಯೇ ಕಾಣು”ವಂತೆ ಭೀಮನು ಶ್ರಮ ಪಟ್ಟು ಓದಿ 1907 ರಲ್ಲಿ ಮ್ಯಾಟ್ರಿಕ್ ಪರೀಕ್ಷೆ ಪಾಸು ಮಾಡಿದನು. ನಿಮ್ನ ವರ್ಗದ ಹುಡುಗನೊಬ್ಬ ಮಾಡಿದ ಮೊದಲ ಮಹಾಸಾಧನೆ ಇದಾಗಿತ್ತು. ಅಸ್ಪೃಶ್ಯ ಬಾಲಕನು ಆ ಕಾಲದಲ್ಲಿ ಮ್ಯಾಟ್ರಿಕ್ ಪರೀಕ್ಷೆ ಪಾಸು ಮಾಡಿದ್ದು ದೊಡ್ಡ ಸುದ್ದಿಯಾಗಿದ್ದಲ್ಲದೆ. ಈ ಸಾಧನೆ ಭೀಮನಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತು. ಎಸ್.ಕೆ.ಬೊಳೆಯವರ ಅಧ್ಯಕ್ಷತೆಯಲ್ಲಿ ಅಭಿನಂದನಾ ಸಮಾರಂಭ ನಡೆಸಿ ಭೀಮನನ್ನು ಸನ್ಮಾನಿಸಿದರು. ತಂದೆಯ ಸ್ನೇಹಿತರಾದ ಕೃಷ್ಣಾಜಿ ಅರ್ಜುನ ಕೇಳುಸ್ಕರ್ ಅವರು ಸಮಾರಂಭದಲ್ಲಿ ಮಾತನಾಡುತ್ತಾ  ಭೀಮನನ್ನು ಗುಣಗಾಣ ಮಾಡಿದರು. ಚಾರ್ನಿ ರಸ್ತೆಯ ಉಧ್ಯಾನದಲ್ಲಿ ಭೀಮನನ್ನು ಆಗಾಗ ಭೇಟಿ ಮಾಡಿ ಓದಲು             ಪುಸ್ತಕ ತಂದುಕೊಟ್ಟಿದ್ದನ್ನು ಸ್ಮರಿಸಿದರು. ಅದೇ ಸಂದರ್ಭದಲ್ಲಿ ತಾವೇ ಬರೆದ “ಬುದ್ದನ ಜಿವನ ಚರಿತ್ರೆ” ಪುಸ್ತಕವನ್ನು ಪ್ರಶಸ್ತಿಯಾಗಿ ಭೀಮನಿಗೆ ಕೊಟ್ಟರು, ಭಗವಾನ ಬುದ್ದನ ಜೀವನ ಚರಿತ್ರೆ ಭೀಮನು ಭವ್ಯ ಭಾರತಕ್ಕೆ ಸಮಾನತೆಯ ಬೆಳಕಾಗುವ ಸೂರ್ಯನುದಯದ ಸಂಕೇತವಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೆ ಭೀಮನು ಗಣ್ಯ ವ್ಯಕ್ತಿಗಳ ಜೊತೆ ವೇದಿಕೆ ಹಂಚಿಕೊಂಡಿದ್ದನ್ನು ರಾಮಜಿ ನೋಡುತ್ತಾ ಆನಂದಿತರಾದರು. ಮಗನ ಈ ಸಾಧನೆ ಕಂಡು ಕಣ್ಣಂಚಿನಲ್ಲಿ ಆನಂದ ಬಾಷ್ಪ ತುಂಬಿ ಬಂತು ಅವರು ಪಟ್ಟ ಶ್ರಮ ಸಾರ್ಥಕವಾಗಿತ್ತು.          ಬಾಲ್ಯ ವಿವಾಹ ಪದ್ದತಿ ಅಂದು ಪ್ರಚಲಿತದಲ್ಲಿತ್ತು. ಭೀಮನಿಗೆ ಹದಿನೇಳು ವರ್ಷ ತುಂಬಿದ್ದರಿಂದ ಮಗನ ಮದುವೆ ಮಾಡಲು ರಾಮಜಿ ನಿರ್ಧರಿಸಿದರು, ದಾಪೋಲಿಯಲ್ಲಿ ವಾಸವಿದ್ದ ಬಿಕುವಾಲಂಗಕರ್ ಮನೆಗೆ ಪರಿಚಿತರೊಬ್ಬರ ಮೂಲಕ ಹೋಗಿ, ಅವರ ಸಾಕು ಮಗಳಾದ ರಮಾಬಾಯಿಯನ್ನು ಭೀಮನಿಗೆ ತಂದು ಕೊಳ್ಳಲು ನೋಡಿಕೊಂಡು ಬರುತ್ತಾರೆ. ರಮಾಬಾಯಿ ಸರಳ ಸಜ್ಜನಿಕೆಯ ಒಂಬತ್ತು ವರ್ಷ ತುಂಬಿದ ಹೆಣ್ಣು ಮಗಳು ಬಡತನದಲ್ಲಿ ಹುಟ್ಟಿ ಬಡತನದಲ್ಲಿಯೆ ಬೆಳೆದು ಬಂದವಳು. ತಂದೆ – ತಾಯಿ ಆಗಲೆ ತೀರಿ ಹೋಗಿದ್ದರು. ಅನಾಥ ಮಗಳನ್ನು ತನ್ನ ಮನೆಗೆ ಸೊಸೆಯನ್ನಾಗಿ ತಂದುಕೊಳ್ಳಲು ನಿಶ್ಚಯಿಸಲಾಗಿತ್ತು. ಅಸ್ಪೃಶ್ಯರಿಗೆ  ಮದುವೆ ಮಾಡಿಕೊಳ್ಳಲು ಸವರ್ಣಿಯರು ಅಂದು ಮದುವೆ ಮಂಟಪಗಳನ್ನು ಕೊಡುತ್ತಿರಲಿಲ್ಲ. ಬೈಕುಳ ಎಂಬ ಸ್ಥಳದಲ್ಲಿ ಸ್ಥಳ ಹಗಲಿನಲ್ಲಿಮೀನುಮಾರಾಟದ ಸಂತೆ ನಡೆಯುತ್ತಿತ್ತು. ರಾತ್ರಿ ವೇಳೆ ಬೇಕುಳದ ಶೆಡ್ ಒಂದರಲ್ಲಿ ಭೀಮರಾವ ಅಂಬೇಡ್ಕರ್ರ ಮದುವೆ ರಮಾಬಾಯಿಯೊಂದಿಗೆ ನೆರವೇರಿತು. ಮೀನಿನ ಕೊಳಚೆ ವಾಸನೆಯಲ್ಲಿಯೆ  ಗತ್ಯಂತರವಿಲ್ಲದೆ ಬೆಳಕು ಮೂಡುವುದರೊಳಗೆ ಆರತಕ್ಷತೆಯ ಕಾರ್ಯ ಮುಗಿಸಲಾಯಿತು.       ಮಕ್ಕಳ ಮದುವೆ ನಂತರ ಪರೇಳ ಡಾಬಕ ಚಾಳದಿಂದ  ಪರೇಳದ ನಗರಾಭೀವೃದ್ಧಿ ಮಂಡಳಿ ವಠಾರದ ಮಹಡಿಯೊಂದರಲ್ಲಿ ಎದುರುಬದರು ಇರುವ ಎರಡು ಕೋಣೆಗಳನ್ನು ಬಾಡಿಗೆ ಹಿಡಿದು ರಾಮಜಿ ಸ್ಥಳಾಂತರ ಗೊಂಡರು. ಇನ್ನು ಹೆಚ್ಚು ಹೆಚ್ಚು ಓದಬೇಕೆಂಬ ಅಂಬೇಡ್ಕರ್ರ ಮಹತ್ವಾಕಾಂಕ್ಷೆಗೆ ಮದುವೆ ಅಡ್ಡಿಯಾಗುವುದಿಲ್ಲ. ಎಲ್ಪಿನ್ ಸ್ಟನ್ ಕಾಲೇಜು ವಿಭಾಗದಲ್ಲಿ ಇಂಟರ್ ಮಿಡಿಯೇಟ್ ತರಗತಿಗೆ ಸೇರಿ ಅಂಬೇಡ್ಕರರು ಓದು ಮುಂದುವರೆಸಿದರು. ಭೀಮನ ವಿಧ್ಯಾಭ್ಯಾಸಕ್ಕೆ ರಾಮಜೀ ಬೆನ್ನೆಲುಬಾಗಿ ನಿಂತರು. ಅಣ್ಣಂದಿಯರಿಬ್ಬರೂ ಕಲಿಯುದನ್ನು ಬಿಟ್ಟು ಕೆಲಸಕ್ಕೆ ತೊಡಗಿ ತಮ್ಮನ  ವಿಧ್ಯಾಭ್ಯಾಸಕ್ಕೆ ಕುಟುಂಬ ನಿರ್ವಹಣೆಗೆ ಆಸರೆಯಾದರು. ಅಂಬೇಡ್ಕರ್ ರ ಆರೋಗ್ಯ ಹದಗೆಟ್ಟಿದ್ದರಿಂದ ಒಂದು ವರ್ಷ ಅವರ ಶಿಕ್ಷಣ ಕುಂಠಿತಗೊಂಡಿತು, ಆದರೂ ಊಟ ತಿಂಡಿ, ಅನಾರೋಗ್ಯ, ಬಡತನ ಯಾವುದನ್ನು ಲೆಕ್ಕಿಸದೇ ಕಠಿಣ ಪರಿಶ್ರಮ ಪಟ್ಟು ಓದಿ ಇಂಟರ್ ಮಿಡಿಯೇಟ್ ಶಿಕ್ಷಣ ಪೂರ್ಣಗೊಳಿಸುತ್ತಾರೆ. ರಾಮಜಿ ಸಕ್ಪಾಲರಿಗೆ ವಯಸ್ಸಾಗುತ್ತಾ ಬಂದಿದ್ದರಿಂದ ದುಡಿಯುವ ಶಕ್ತಿ ಇಲ್ಲದಂತಾಗಿ ಆದಾಯವು ಕಡಿಮೆಯಾಗುತ್ತ ಆರ್ಥಿಕ ಮುಗ್ಗಟ್ಟು ಹೆಚ್ಚಿತು. ಭೀಮನ ಬುದ್ದಿ ಮತ್ತು ಅಪಾರ ಜ್ಞಾನದಾಹ, ಕಲಿಯುವ ಆಸಕ್ತಿ ಗಮನಿಸಿದ ರಾಮಜಿ ಸಕ್ಪಾಲರು ಹೇಗಾದರೂ ಮಾಡಿ ಭೀಮನಿಗೆ ಪದವಿ ಶಿಕ್ಷಣ ಕೊಡಿಸಬೇಕೆಂದು ತಿರ್ಮಾನಿಸಿ, ಗೆಳೆಯ ಕೇಳುಸ್ಕರವರನ್ನು ಭೇಟಿಮಾಡಿ ಮಗನ ವಿಧ್ಯಾಭ್ಯಾಸದ ಕುರಿತು ಚರ್ಚಿಸಿದರು. ರೋಗಿ ಬಯಸಿದ್ದು ಅದೇ ವೈದ್ಯ ಹೇಳಿದ್ದು ಅದೇ ಎಂಬಂತೆ ಬರೋಡಾದ ಮಹಾರಾಜರು ನಿಮ್ನ ವರ್ಗದ ವಿಧ್ಯಾರ್ಥಿಗಳಿಗೆ ಕಲಿಯಲು ಧನ ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ದರು, ಇದನ್ನು ಸದುಪಯೋಗ ಪಡಿಸಿಕೊಂಡು ಕೇಳುಸ್ಕರರು ಬರೋಡದ ಮಹಾರಾಜರು ಮುಂಬಯಿಗೆ ಬಂದಾಗ ಅವರನ್ನು ಸಂಪರ್ಕಿಸಿ ಅಂಬೇಡ್ಕರರನ್ನು ಕರೆದುಕೊಂಡು ಹೋಗಿ ಭೇಟಿಮಾಡಿಸಿದರು. ಸಂದರ್ಶನದಲ್ಲಿ ಬರೋಡಾ ಮಹಾರಾಜರು ಕೇಳಿದ  ಎಲ್ಲ ಪ್ರಶ್ನೆಗಳಿಗೆ ಅಂಬೇಡ್ಕರರು ಸಮರ್ಪಕವಾಗಿ ಉತ್ತರಿಸಿದ್ದರಿಂದ ಮಹಾರಜರು ಸಂತೃಪ್ತರಗೊಂಡು ಅಂಬೇಡ್ಕರ್ ಅವರಿಗೆ  ಮಾಸಿಕ 25 ರೂಪಾಯಿ ಶಿಷ್ಯವೇತನ ಮಂಜೂರು ಮಾಡಿದರು. ಅವರು ವಿಧ್ಯಾಭ್ಯಾಸ ಮುಂದುವರೆಸಲು ಸಹಾಯ ಮಾಡಿದ ಬರೋಡದ ಮಹಾರಾಜರು ಅಂಭೇಡ್ಕರ್ ರಿಗೆ ಎಂದೆಂದಿಗೂ ಆಪದ್ಬಾಂಧವರಾದರು.     ಭಾರತದ ಸ್ವಾತಂತ್ರ್ಯ ಚಳವಳಿ ತೀವೃಗೊಂಡಿತು, ಬ್ರಿಟೀಷರ ದಬ್ಬಾಳಿಕೆ ಹೆಚ್ಚುತ್ತಾ ಸಾಗಿತು, ಬ್ರಟೀಷ ಸರ್ಕಾರ ಟಿಳಕರನ್ನು ಮಾಂಡಲೆ ಸೆರೆಮನೆಯಲ್ಲಿ,ಸಾವರ್ಕರ ಸಹೋದರರನ್ನು ಅಂಡಮಾನ್ ಜೈಲಿನಲ್ಲಿ ಬಂಧನಕ್ಕೊಳಪಡಿಸಿದ್ದರು.  ಯುವ ಅಂಬೇಡ್ಕರರ ಮನಸ್ಸಿನ ಮೇಲೆ ಸ್ವಾತಂತ್ರ್ಯ ಚಳುವಳಿ ಮತ್ತು ಅಸ್ಪೃಶ್ಯತೆಯ ಕರಾಳ ಅವಮಾನಗಳು ಪರಿಣಾಮ ಬೀರಿದವು.ಅತ್ತ್ಯೂನ್ನತ ಶಿಕ್ಷಣ ಪಡೆದು, ಅಪಾರ ಜ್ಞಾನ ಸಂಪಾದಿಸಿದಾಗ ಮಾತ್ರ ಜನರು ತನ್ನ ಮಾತು ಕೇಳುತ್ತಾರೆ.  ಆಗ ಸಮಾಜ ಬದಲಾವಣೆ ಮಾಡಲು, ದೇಶದ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂಬುದನ್ನು ಅರಿತುಕೊಂಡರು. ಅಂಬೇಡ್ಕರರು ಜೀವನದ ಹಂಗು ತೊರೆದು ಓದತೊಡಗಿದರು.  ಇಂಗ್ಲೀಷ್, ಪರ್ಷಿಯನ್ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ಪರಿಶ್ರಮ ಪಟ್ಟು 1912ರಲ್ಲಿ ಬಿ.ಎ. ಪದವಿ ಪಾಸು ಮಾಡಿದರು.  ಅಂಬೇಡ್ಕರರು ಓದುವ ವಿದ್ಯಾರ್ಥಿಗಳಿಗೆ ಆದರ್ಶರಾಗಿದ್ದಾರೆ.  ನಿಮ್ನ ವರ್ಗದ ವಿದ್ಯಾರ್ಥಿಯೊಬ್ಬ ಮೊದಲ ಬಾರಿಗೆ ಬಿ.ಎ. ಪದವಿ ಪಡೆದಿದ್ದು, ಅಸಾಮಾನ್ಯ ಸಾಧನೆಯಾಯಿತು.        ಶಿಷ್ಯವೇತನ ಪಡೆದ ವಿದ್ಯಾರ್ಥಿ ಬರೋಡಾ ಮಹಾರಾಜರಲ್ಲಿ ಕೆಲಸ ನಿರ್ವಹಿಸಬೇಕೆಂಬ ಒಪ್ಪಂದದಂತೆ ಬಿ.ಎ. ಪಧವೀಧರರಾಗಿದ್ದ ಅಂಬೇಡ್ಕರರು ಬರೋಡಾ ಸಂಸ್ಥಾನದಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾದರು.  ರಾಮಜೀ ಸಕ್ಪಾಲ್ ರಿಗೆ ನೌಕರಿಗೆ ಹೋಗುವುದು ಇಷ್ಟವಿರುವುದಿಲ್ಲ. ಭಿಮನು ಇನ್ನೂ ಹೆಚ್ಚಿಗೆ ಓದಬೇಕು ಎಂಬುದು ಅವರ ಬಯಕೆಯಾಗಿತ್ತು.  ಆದರೆ, ಅಂಬೇಡ್ಕರರು ಬರೋಡಾಗೆ ಹೋಗಲು ಸಿದ್ದರಾದರು . ವಯೋವೃದ್ಧ ರಾಮಜೀ ಸಕ್ಪಾಲರಿಗೆ ಮಗ ತಮ್ಮನ್ನು ಬಿಟ್ಟು ನೌಕರಿಗೆ ದೂರ ಹೋಗುತ್ತಿದ್ದಾನೆಂದು ದು:ಖಿತರಾದರು. ಇತ್ತ ಅಂಬೇಡ್ಕರರಿಗೂ ಮೊದಲಬಾರಿಗೆ ವಯಸ್ಸಾದ ತಂದೆಯನ್ನು, ಮಡದಿಯನ್ನು, ಬಂದು-ಬಳಗವನ್ನು ಅಗಲಿ ದೂರದ ಊರಿಗೆ ಹೋಗುತ್ತಿರುವುದು ದು:ಖ ತುಂಬಿ ಕಣ್ಣಲ್ಲಿ ನೀರು ತಂದುಕೊಂಡು ಹೊರಟರು. ರಾಮಜೀ ಸಕ್ಪಾಲರು ಹೃದಯಭಾರದಿಂದ ಅಂತಿಮವಾಗಿ ಏನೋ ಅನ್ನುವಂತೆ ಕೈ ಎತ್ತಿ ಮಗನನ್ನು ಬಿಳ್ಕೋಟ್ಟರು.     ಅಂಬೇಡ್ಕರರ ಮೇಲಿನ ಅಪಾರ ಪ್ರೀತಿ ಮಗನನ್ನು ಬರೋಡಕ್ಕೆ ಕಳುಹಿಸಿ ಕೊಟ್ಟನಂತರ ರಾಮಜೀ ಸಕ್ಪಾಲ್ ರಿಗೆ ಹೆಚ್ಚಿನ ಚಿಂತೆಗೀಡುಮಾಡಿತು. ಅದೇ ಚಿಂತೆಯಲ್ಲಿ ಅವರು ಹಾಸಿಗೆ ಹಿಡಿದರು ಅತ್ತ ಬರೋಡಾಕ್ಕೆ ಹೋದ  ಅಂಬೇಡ್ಕರರು ಪದೆಪದೆ ತಂದೆಯ ನೆನಪನ್ನು ತಂದುಕೊಂಡು ಅವರ ತಂದೆಯ ಆರೋಗ್ಯದ ಬಗ್ಗೆ ಚಿಂತಿಸತೊಡಗಿದರು. ಅಂಬೇಡ್ಕರರು ಬರೋಡಕ್ಕೆ ಬಂದು ಹದಿನೈದು ದಿನಗಳು ಉರುಳಿದ್ದವು, ಆಗಲೇ ತಂದೆಯ ಆರೋಗ್ಯ ಹದಗೆಟ್ಟಿದೆ ಕೂಡಲೇ ಅಲ್ಲಿಂದ ಹೊರಟು ಬರಬೇಕೆಂದು ತಂತಿ ಸಂದೇಶ ಬಂದಿತು. ಇದರಿಂದ ವ್ಯಾಕುಲಗೊಂಡ ಅಂಬೇಡ್ಕರರು ತಂದೆಯನ್ನು ಕಾಣುವ ಕಾತುರದಿಂದ ಆತುರಾತುರವಾಗಿ ಬಂದು ರೈಲು ಹತ್ತಿ ಕುಳಿತರು. ಅನಾರೋಗ್ಯದಿಂದ ಹಾಸಿಗೆ ಹಿಡಿದ ತಂದೆಯನ್ನು ಕಾಣಲು ಹೊರಟಿದ್ದ ಅಂಬೇಡ್ಕರರು ದಾರಿಮಧ್ಯ ಸೂರತ್ ರೈಲು ನಿಲ್ದಾಣದಲ್ಲಿ ಹಣ್ಣು ಹಂಪಲು ಕೊಂಡುಕೊಳ್ಳಲು ರೈಲಿನಿಂದ ಕೆಳಗಿಳಿದು ಹಣ್ಣು ಹಂಪಲು ಮಾರುವ ಅಂಗಡಿಯೊಂದರ ಬಳಿ ಬರುತ್ತಾರೆ. ಇನ್ನೇನು ಅಂಗಡಿಯವನು ಹಣ್ಣು ಹಂಪಲು ಕಟ್ಟಿಕೊಡುವುದರೊಳಗೆ ರೈಲು ಹೊರಟುಬಿಟ್ಟಿತು. ಸ್ವಲ್ಪದರಲ್ಲಿಯೆ ರೈಲು ತಪ್ಪಿಸಿಕೊಂಡು ನಂತರದ ರೈಲು ಹಿಡಿದು ಮುಂಬಯಿಗೆ ಮರುದಿನ ಬೆಳಿಗ್ಗೆ ಮನೆಗೆ ಬಂದು ತಲುಪಿದರು.       ಮಗ ಮನೆಗೆ ಬಂದ ಸುದ್ದಿ ಕೇಳಿ ಮಲಗಿದ್ದ ಹಾಸಿಗೆಯಿಂದಲೆ ಕಣ್ಣರಳಿಸಿ ಭೀಮನತ್ತ ರಾಮಜೀ ಸಕ್ಪಾಲರು ನೋಡಿದರು. ಹಾಸಿಗೆಯಿಂದ ಮೇಲೆಳಲು ಪ್ರಯತ್ನಿಸಿದರು ಆದರೆ ತೀರ ನಿತ್ರಾಣಗೊಂಡಿದ್ದರು ಮೇಲೆ ಎದ್ದು ಕೂಡ್ರಲು ಆಗಲಿಲ್ಲ.ಅವರ ಹಾಸಿಗೆ ಪಕ್ಕದಲ್ಲಿಯೆ ಬಂದು ಕುಳಿತ ಭೀಮನನ್ನು ಕಣ್ ತುಂಬಾ ನೋಡಿ ಏನೋ ಹೇಳಬೇಕು,ಏನೋ ಮಾತಾಡಬೇಕು ಅಂತಾ ಪ್ರಯತ್ನಿಸಿದರು, ಆದರೆ ಮಾತನಾಡಲು ಅವರಿಗೆ ಆಗಲಿಲ್ಲ. ಆರೋಗ್ಯ ತೀರ ಹದಗೆಟ್ಟಿತು ಬಹಳ ಪ್ರಯತ್ನಮಾಡಿ ಕೈ ಮೇಲೆತ್ತಿ ಅಂಬೇಡ್ಕರರನ್ನು ನೋಡುತ್ತಾ, ತಲೆ ಸವರುತ್ತಾ, ಬೆಣ್ಣು ಸವರುತ್ತಾ ಜಗಕ್ಕೆ ಬೆಳಕಾಗು ಎಂಬಂತೆ ಆಶೀರ್ವಾದ ಮಾಡಿದರು.ಸ್ವಲ್ಪ ಸಮಯದಲ್ಲಿಯೆ ಅವರ ಪ್ರಾಣಪಕ್ಷಿ ಹಾರಿಹೊಯಿತು. ರಾಮಜೀ ಸಕ್ಪಾಲರು 1913 ರ ಪೇಬ್ರುವರಿ 2 ರಂದು ಕೊನೆಯುಸಿರು ಎಳೆದರು. ತಂದೆಯ ಸಾವು ಅಂಬೇಡ್ಕರರಿಗೆ ಆಘಾತವನ್ನುಂಟುಮಾಡಿತು. ಬಿಕ್ಕಿ ಬಿಕ್ಕಿ ಅತ್ತರು. ತಂದೆಯ ಸಾವು ಅವರಿಗೆ ಆಕಾಶವೆ ಕಳಚಿ ಬಿದ್ದಂತೆಯಾಯಿತು.ಜೀವನ ಪೂರ್ತಿ ಬೆನ್ನೆಲುಬಾಗಿ ನಿಂತ ಏಕೈಕ ಜೀವ ಎಂದರೆ ರಾಮಜೀ ಸಕ್ಪಾಲರಾಗಿದ್ದರು. ತಂದೆಯ ಆಸರೆ ಮಾರ್ಗದರ್ಶನ ಇನ್ನಿಲ್ಲವಾಯಿತು. ಸೂರ್ಯಚಂದ್ರರಿರುವರೆಗೂ ಹೆಸರನ್ನುಳಿಸುವ ಮಹಾಪುರುಷ ಮಗನೊಬ್ಬನನ್ನು ಈ ಪ್ರಪಂಚಕ್ಕೆ ಕೊಟ್ಟ ರಾಮಜೀ ಸಕ್ಪಾಲರ ಹೆಸರು ಅಜರಾಮರವಾಯಿತು.                                                  (ಮುಂದುವರೆಯುವುದು)              ……….           —————————          ಸೋಮಲಿಂಗ ಗೆಣ್ಣೂರ               

Read Post »

ಇತರೆ

ಕಂಪೆನಿ ಸರಕಾರವೂ ಹಾಗೂ ರೈತರ ದಂಗೆಯೂ

ಲೇಖನ ಕಂಪೆನಿ ಸರಕಾರವೂ ಹಾಗೂ ರೈತರ ದಂಗೆಯೂ ಹಾರೋಹಳ್ಳಿ ರವೀಂದ್ರ ರೈತ ಚಳವಳಿಯು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸಮಕಾಲೀನ ವ್ಯವಸ್ಥೆಯ ಪ್ರತಿಭಟನೆಯೊಡನೆ ಹುಟ್ಟಿಕೊಂಡ ಒಂದು ಸಂಘಟನೆ.  ಭಾರತದಲ್ಲಿ ಇಲ್ಲಿಯವರೆವಿಗೂ ಸುಮಾರು ನೂರಾರು ರೈತ ಚಳವಳಿಗಳು ನಡೆದಿವೆ. ಮೊಘಲರ ಕಾಲದಿಂದ ಈವರೆವಿಗೂ ಭಾರತದಲ್ಲಿ 77 ರೈತ ಹೋರಾಟಗಳ ದಾಖಲೆಯನ್ನು  ಕ್ಯಾಥಲೀನ್ ಗಾಫೆ ಎಂಬಾಕೆ ಕೊಟ್ಟಿದ್ದಾಳೆ.  ಇಂತಹ  ಚಳವಳಿಗಳನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ, 1. ಪುನರುತ್ಥಾಪನ ದಂಗೆಗಳು 2. ಧಾರ್ಮಿಕ ಚಳವಳಿಗಳು 3. ಸಮಾಜನಿಷ್ಠ ದರೋಡೆಗಳು 4. ಭಯೋತ್ಪಾದಕ ಪ್ರತಿಕಾರಗಳು 5. ಸುಧಾರಣಾವಾದಿ ಚಳವಳಿಗಳು 6. ಜನತಾ ಚಳವಳಿಗಳು ಸ್ವಾತಂತ್ರ್ಯ ಪೂರ್ವ ರೈತ ಚಳವಳಿಗಳು ಹೆಚ್ಚಾಗಿ ಪರಕೀಯರ ವಿರುದ್ಧ ನಡೆದವು. ಭೂ ಸಂಬಂಧವುಳ್ಳ ಎಲ್ಲಾ ವರ್ಗದ ರೈತರೂ ಇಂತಹ ಚಳವಳಿಗಳಲ್ಲಿ ಭಾಗವಹಿಸಿದ್ದರು. ಮೊದಲ ಹಂತದ ಚಳವಳಿಗಳಲ್ಲಿ ಪರಕೀಯರಿಂದಾಗಿ ಭೂಮಿ ಕಳೆದುಕೊಂಡ ಪಾಳೆಯಗಾರರು, ಹಳೆಯ ಪ್ರಭುಗಳು, ಆಡಳಿತಗಾರರು, ದಿವಾಳಿ ಎದ್ದ ರೈತರು, ಕೈ ಕಸುಬುಗಳನ್ನು ಕಳೆದುಕೊಂಡವರು, ಕೂಲಿ ಕಾರ್ಮಿಕರು, ಧರ್ಮ ಗುರುಗಳು ಹಾಗೂ ಆದಿವಾಸಿ ಮುಖಂಡರು ಒಳಗೊಂಡಿದ್ದರು. ಬಂಡವಾಳಶಾಹಿಗಳು ಹಾಗೂ ಪ್ರಬಲ ಭೂ ಮಾಲೀಕರ ಕಿರುಕುಳದಿಂದ ಹತಾಸೆಗೊಂಡ ಶಕ್ತಿಶಾಲಿಗುಂಪು ಅವರ ವಿರುದ್ಧ ನಿಂತು, ಅವರ ಆಸ್ತಿ ಪಾಸ್ತಿಗಳನ್ನೆಲ್ಲಾ ಲೂಟಿ ಮಾಡಿದರು. ಲೂಟಿ ಮಾಡಿದ ಆಸ್ತಿಯಲ್ಲಿ ಬಹುಪಾಲು ನೊಂದವರಿಗೆ ಹಂಚುತ್ತಿದ್ದರು. ಈ ಕಾರಣಕ್ಕಾಗಿ ಇವರ ಲೂಟಿ ಮತ್ತು ದರೋಡೆಗಳನ್ನು ಸಮಾಜನಿಷ್ಠವಾದವು ಎನ್ನಬಹುದು. 17 ಮತ್ತು 18ನೇಯ ಶತಮಾನದಲ್ಲಿ ಮಧ್ಯಭಾರತದ ಠಕ್ಕರು, ಮದರಾಸು ಪ್ರಾಂತ್ಯದ ಕಳ್ಳರ್, ಕೇರಳಾದ ಸನ್ಯಾಸಿ ಫಕೀರರು ಈ ಕ್ರಿಯೆಯಲ್ಲಿ ತೊಡಗಿದ್ದರು. ಭಯೋತ್ಪಾದಕ ಪ್ರತಿಕಾರದ ಹಲವು ಹೋರಾಟಗಳು ನಡೆದಿವೆ. ಶ್ರೀಮಂತರು, ಭೂ ಮಾಲೀಕರು, ಸರ್ಕಾರಿ ಅಧಿಕಾರಿಗಳಿಂದ ಒಕ್ಕಲೆಬ್ಬಿಸುವಿಕೆ, ಅಧಿಕ ಕಂದಾಯ, ಬಿಟ್ಟಿ ಕೆಲಸಗಳಂತಹ ಹಿಂಸಾತ್ಮಕ ಒತ್ತಡಗಳಿಂದ ಈ ಹೋರಾಟಗಳು ಹುಟ್ಟಿಕೊಂಡಿವೆ. ತೀವ್ರಗಾಮಿ ಎಡಪಂಥೀಯ ಹೋರಾಟಗಳು ಈ ಗುಂಪಿನಲ್ಲಿ ಬರುತ್ತವೆ. ಸ್ವಾತಂತ್ರ್ಯ ಹೋರಾಟ ಸಂದರ್ಭದ ರೈತ ಚಳವಳಿಗಳು ಜನತಾ ಆಂದೋಲನದೊಳಗೆ ಸೇರಿಕೊಂಡು ಬಂದವು. ಸ್ವಾತಂತ್ರ್ಯ ಪೂರ್ವ ಹಾಗೂ ಅನಂತರದಲ್ಲಿ ಸುಧಾರಣಾ ನೆಲೆಯ ಚಳವಳಿಗಳೂ ನಡೆದಿವೆ. ಬಹುಶಃ ಮೊಘಲ್ ಸಾಮ್ರಾಜ್ಯದ ಬೆಳವಣಿಗೆಯ ಆರಂಭ ಭಾರತದ ರೈತ ಹೋರಾಟಗಳಿಗೆ ನೆಲೆ ಕಲ್ಪಿಸಿಕೊಟ್ಟಂತೆ ಕಾಣುತ್ತದೆ. ಹೊಸ ರೀತಿಯ ಭೂ ವಿಂಗಡನೆ, ಹಂಚಿಕೆ ಹಾಗೂ ಕಂದಾಯ ನಿಗದಿ ಕ್ರಮ ಭಾರತದ ಭೂ ಒಡೆತನದ ನೆಲೆಯನ್ನು ಅಲ್ಲಾಡಿಸಿತು. ಅದರ ಪರಿಣಾಮವಾಗಿ ಬೇರೆ ಬೇರೆ ರೀತಿಯಲ್ಲಿ ರೈತರು ಸಂಘಟಿತರಾದರು. ಕೆಲ ಮಟ್ಟಿಗೆ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಿದರು. ಕೈಗಾರಿಕಾ ಕ್ರಾಂತಿಗೆ ಮೊದಲು ಭೂಒಡೆತನದಲ್ಲಿ ಆದ ಬದಲಾವಣೆಗಳು ರಾಜ್ಯಗಳ ನಾಶ ಹಾಗೂ ಉದಯದ ಕಥೆಗಳಾಗಿವೆ. ಇವು ರೈತರ ಭೂಮಿಯನ್ನು ಕುರಿತ ನಿಜ ಕಥೆಗಳು. ಮೊಘಲರು ಈ ದೇಶದ ಪ್ರಜೆಗಳೇ ಆಗಿ ಕರಗಿ ಹೋದ ಕಾರಣದಿಂದ ಆ ಕಾಲದ ರೈತರ ಪ್ರತಿಭಟನೆಗಳು ಹೆಚ್ಚು ಸಾಮೂಹಿಕ ಸ್ವರೂಪ ಪಡೆದುಕೊಂಡಂತೆ ಕಾಣುವುದಿಲ್ಲ. ಬ್ರಿಟೀಷರು ಕೂಡ ಹೊರಗಿನಿಂದ ಬಂದವರಾದರೂ ಇಲ್ಲಿಯವರಾಗಲು ಪ್ರಯತ್ನಿಸಲಿಲ್ಲ. ಅವರು ಇಲ್ಲಿಂದ ಸಂಪತ್ತನ್ನು ಒಯ್ಯುವ ವ್ಯಾಪಾರಿ ರಾಜಪ್ರಭುಗಳಾಗಿದ್ದರು. ವ್ಯವಸಾಯ ಜೀವನಕ್ಕೆ ಸ್ಪರ್ಧಿಯಾಗಿ ಕೈಗಾರಿಕಾ ಸಂಸ್ಕೃತಿಯನ್ನು ಬೆಳೆಸತೊಡಗಿದರು. ಭಾರತದ ವ್ಯವಸಾಯಿಕ ಉತ್ಪನ್ನಗಳು ಇಂಗ್ಲೆಂಡಿನ ಕೈಗಾರೀಕರಣವನ್ನು ಅಭಿವೃದ್ಧಿಗೊಳಿಸುವ ಸಾಧನವಾದವು. ಸರ್ಕಾರದ ಬೊಕ್ಕಸಕ್ಕೆ ತುಂಬಲು ಹಾಗೂ ತಮ್ಮ ಯುದ್ಧ ವೆಚ್ಚವನ್ನು ಭರಿಸಲು ಇರುವ ಭಾರತದ ವ್ಯವಸಾಯಗಾರರ ಮೇಲೆ ಹೆಚ್ಚು ಕಂದಾಯ ವಿಧಿಸಿದರು. ನೇರ ಕಂದಾಯ ವಸೂಲಿಯಾಗಲು ಕೃಷಿಕರ ಮಧ್ಯೆ ಅನೇಕ ಬಗೆಯ ಮಧ್ಯವರ್ತಿಗಳನ್ನು ತಂದರು. ಹೊಸ ಭೂಮಾಲೀಕರು, ಜಹಗೀರುದಾರರು, ಇನಾಂದಾರರು, ವ್ಯಾಪಾರಿಗಳು, ಅಧಿಕಾರಿಗಳು ಹೀಗೆ ಅನೇಕ ಬಗೆಯಲ್ಲಿ ಸ್ಥಾಪಿತರಾದರು. ಇದರಿಂದ ಅನೇಕ ರೈತರು ಭೂಒಡೆತನ ಕಳೆದುಕೊಂಡು ಕೂಲಿಯಾಳುಗಳಾದರು. ಇದು ಆದಿವಾಸಿಗಳು ಮತ್ತು ರೈತಾಪಿ ವರ್ಗದ ಮೇಲೆ ಗಂಭೀರ ಪರಿಣಾಮ ಬೀರಿತು. ಸ್ವಯಂ ಭೂಒಡೆತನ ಹೊಂದಿದ್ದ ರೈತ ಕಾರ್ಮಿಕನಾಗಿ ಇನ್ನೊಬ್ಬನ ಕೈಕೆಳಗೆ ಬರುವಂತಾಯಿತು. ಸ್ಥಳೀಯ ಗುಡಿ ಕೈಕಾರಿಕೆಗಳು ನಾಶವಾದವು. ಬಟ್ಟೆಗಳನ್ನು ಕೂಡ ಕಂಪನಿಯಿಂದಲೇ ಕೊಂಡುಕೊಳ್ಳುವಂತಾಯಿತು. ವಾಣಿಜ್ಯ ಬೆಳೆಗಳನ್ನು ಬೆಳೆಯಲು ರೈತರ ಮೇಲೆ ಹಿಂಸಾತ್ಮಕ ಒತ್ತಡ ತರಲಾಯಿತು. ಆಹಾರ ಬೆಳೆಗಳು ಹಂತಹಂತವಾಗಿ ಕಡಿಮೆಯಾಗುತ್ತ ಹೋದವು. ಸಾಮಾನ್ಯರ ಜೀವನ ತೀರ ಕುಗ್ಗಿ ಹೋಯಿತು. ತೆರಿಗೆ ಕಟ್ಟಿ ಉಳಿದುದುರಲ್ಲಿ ಅವರ ಜೀವನ ಸಾಗಿಸುವುದು ದುಸ್ತರವಾಯಿತು. ಈ ಕಾರಣದ ಮೇಲೆ ಆದಿವಾಸಿ ಕೃಷಿಕರು, ಬೇರೆ ಬೇರೆ ನೆಲೆಯಲ್ಲಿ ಕೃಷಿ ಮಾಡುತ್ತಿದ್ದ ರೈತರು ಸ್ಥಳೀಯ ನೆಲೆಯಲ್ಲಿ ಸಂಘಟನೆಗೊಂಡು ಪ್ರತ್ಯಕ್ಷವಾಗಿ ಬಂಡವಾಳಶಾಹಿ ಭೂಮಾಲೀಕರನ್ನು ಹಾಗೂ ಪರೋಕ್ಷವಾಗಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯನ್ನು ವಿರೋಧಿಸುವುದು ಅನಿವಾರ್ಯವಾಯಿತು. ಸ್ವಾತಂತ್ರ್ಯ ಪೂರ್ವ ರೈತ ಹೋರಾಟಗಳು ಪ್ರಾದೇಶಿಕವಾದವು. ಅವುಗಳ ಉದ್ದೇಶ ಕೂಡ ಸೀಮಿತವಾಗಿತ್ತು. ಸದ್ಯದ ನೋವಿಗೆ ಪರಿಹಾರ ಕಂಡುಕೊಳ್ಳುವುದಷ್ಟೇ ಅವರ ಮುಖ್ಯ ಅಪೇಕ್ಷೆಯಾಗಿತ್ತು. ಶತ್ರುಗಳನ್ನು ಹಾಗೂ ಸಮಸ್ಯೆಗಳನ್ನು ಸ್ಪಷ್ಟವಾಗಿ ಗುರುತಿಸಿ ಹೋರಾಡುವ ಭೂಮಿಕೆ ಇನ್ನೂ ಸಿದ್ಧವಾಗಿರಲಿಲ್ಲ. ಬಹಳ ಮುಖ್ಯವಾಗಿ ಈ ಹೋರಾಟಗಳು ತಮ್ಮ ಪೂರ್ವಾಶ್ರಮ ಜೀವತತ್ವ ಹಾಗೂ ವರ್ಗಗಳಿಂದ ಹೊರಗೆ ಬರಲು ಇಚ್ಚಿಸಲಿಲ್ಲ. ಆದುದರಿಂದಲೇ ಈ ರೈತ ಹೋರಟಗಳ ಜೊತೆಗೆ ಮತ, ಧರ್ಮ ಮುಂತಾದ ನಿರ್ಬಂಧಗಳು ಹೇರಿಕೊಂಡಿದ್ದವು. ಈ ಸನ್ನಿವೇಶದಲ್ಲಿ ಕಂಡುಬಂದ ಮುಖ್ಯ ಹೋರಾಟಗಳೆಂದರೆ, 1. 1772-80 ಸನ್ಯಾಸಿ-ಫಕೀರರ ದಂಗೆಗಳು 2. 1855ರ ಸಂತಾಲ ದಂಗೆ 3. 1860ರ ನೀಲಿ ಬೆಳೆಗಾರರ ಚಳವಳಿ 4. 1836-1931ರ ಮಾಪಿಳ್ಳೆ ದಂಗೆ 5. 1928ರ ಬಾರ್ಡೋಲಿಯ ರೈತ ಸತ್ಯಾಗ್ರಹ 6. 1945-46ರ ವಾರಲಿ ಆದಿವಾಸಿಗಳ ಹೋರಾಟ 7. 1946-47ರ ತೇಭಾಗ ಚಳವಳಿ ರೈತರು ತಮ್ಮ ಹಿಂಸೆಗೆ ಸನ್ಯಾಸಿ, ಫಕೀರರ ವೇಷದಲ್ಲಿ ಸಂಘಟನೆಗೊಂಡು ಪ್ರತಿಕ್ರಿಯಿಸಿದ ರೀತಿಯೇ ಸನ್ಯಾಸಿ ಫಕೀರರ ದಂಗೆ. ಇವು ರೈತಾಪಿ ಜನರ ಪ್ರಥಮ ಪ್ರತಿಭಟನೆಗಳು. ಬ್ರಿಟೀಷರ ವಿರುದ್ಧದ ಮೊದಲ ಯುದ್ಧಗಳು. ಬ್ರಿಟೀಷರ ಆಡಳಿತ ಹಾಗೂ ಕಂದಾಯ ನೀತಿಯನ್ನು ಪ್ರತಿಭಟಿಸಿದಾಗ ಬ್ರಿಟೀಷ್ ಸೈನ್ಯ ಹಳ್ಳಿ ಹಳ್ಳಿಗಳನ್ನೆ ನಾಶಮಾಡುತಿತ್ತು. ಈ ಘಟನೆಯಿಂದ ನೆಲೆ ಕಳೆದುಕೊಂಡವರು ಸಂಘಟಿತರಾಗಿ ಬ್ರಿಟೀಷರ ಪರವಾಗಿದ್ದ ಭೂಮಾಲೀಕರನ್ನು, ಆಡಳಿತಗಾರರನ್ನೂ, ಸೇವಕರನ್ನೂ ಹಿಡಿದು ಬಡಿಯುತ್ತಿದ್ದರು. ಬ್ರಿಟಿಷ್ ಸಕರ್ಾರಕ್ಕೆ ಸೇರಬೇಕಾದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದರು. ಬಿಹಾರ, ಬಂಗಾಲ ಹಾಗೂ ಪೂರ್ವ ಈಶಾನ್ಯ ಭಾರತದ ಹಲವು ಪ್ರದೇಶಗಳಿಗೆ ಈ ದಂಗೆಗಳು ಹರಡಿದ್ದವು. ಸಂತಾಲರ ದಂಗೆ ಭಾರತದ ಆರ್ಥಿಕ ಹಾಗೂ ಸಾಂಸ್ಕೃತಿಕ ಇತಿಹಾಸದ ಮೇಲೆ ಬ್ರಿಟೀಷರು ಹಾಕಿದ ದೊಡ್ಡ ಬರೆ. ಸಂತಾಲರು ನಿಜವಾದ ಬೇಸಾಯಗಾರರು. ಇವರದು ಬೇಸಾಯವನ್ನು ಆಧರಿಸಿದ ರಾಜ್ಯ ಪದ್ಧತಿ ಹಾಗೂ ಸಾಂಸ್ಕೃತಿಕ ಜೀವನ. ಬ್ರಿಟೀಷರ ಹೊಸ ಭೂ ಹಂಚಿಕೆ ಹಾಗೂ ಬಡತನದ ಕಾರಣವಾಗಿ ಇವರು ಹೊಸ ಭೂ ಮಾಲೀಕರಿಗೆ ತಮ್ಮ ಜಮೀನಿನ ಒಡೆತನ ಬಿಟ್ಟುಕೊಟ್ಟು ಅವರಲ್ಲಿ ಕನಿಷ್ಠ ಕೂಲಿಗಾಗಿ ದುಡಿಯುವ ವರ್ಗವಾಯಿತು. ನೆಲಬಿಡಿ ಇಲ್ಲವೆ ಗೇಣಿ ಕೊಡಿ ಎಂದು ಹೊಸ ಮಾಲೀಕರು ಇವರಿಗೆ ತಾಕೀತು ಮಾಡಿದರು. ಜಮೀನುದಾರರ, ಪೊಲೀಸರ ಅಧಿಕಾರಿಗಳ ಮತ್ತು ಸಾಲಗಾರರ ಹಿಂಸೆ, ಹೆಂಡತಿ ಮಕ್ಕಳ ಮೇಲಿನ ದೌರ್ಜನ್ಯ , ತೂಕ ಮತ್ತು ಮಾರಾಟದಲ್ಲಿ ಮೋಸ. ಈ ಕಾರಣದಿಂದಾಗಿ ರೈತಾಪಿ ವರ್ಗ ತತ್ತರಿಸಿ ಹೋಯಿತು. ಬದುಕುವ ಕೊನೆಯ ಆಸೆಯಾಗಿ ಹೋರಾಟಕ್ಕೆ ನಿಂತರು. ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂಸೆಯ ಮಾರ್ಗ ಹಿಡಿದು ತಮ್ಮ ಅಸ್ಥಿತ್ವ ಸ್ಥಾಪಿಸಿಕೊಳ್ಳಲು ಹೊರಟರು. ಬ್ರಿಟೀಷ್ ಸೈನ್ಯ ಸಂತಾಲ ಸಮುದಾಯವನ್ನು ಸೆದೆ ಬಡಿಯಿತು. ಸಂತಾಲರು ತಮ್ಮ  ಬಿಲ್ಲು ಬಾಣ ಮತ್ತು ದೈಹಿಕ ಶಕ್ತಿಗಳಿಂದಲೇ ನೈತಿಕ ಹೋರಾಟವನ್ನು ಮುಂದುವರಿಸಿದರು. ಈ ಹೋರಾಟದಲ್ಲಿ ಸುಮಾರು 25 ಸಾವಿರ ಸಂತಾಲ ರೈತರು ಮೃತಪಟ್ಟರು. ಬಂಗಾಲ, ಬಿಹಾರ ಪ್ರದೇಶದ ಬೆಳೆಗಾರರೆಂದರೆ ಅದು ನೀಲಿ ಬೆಳೆಗಾರರು. ಬ್ರಿಟೀಷ್ ಕಾಲದಲ್ಲಿ ಭೂಮಾಲೀಕರು ಸಂಪೂರ್ಣವಾಗಿ ಕಂಪನಿಯ ಗುಲಾಮರಾಗಿದ್ದರು. ಅಲ್ಲಿ ನೀಲಿ ಬೆಳೆಗಾರರು ತಮ್ಮ ಹೊಟ್ಟೆಗೆ ಅನ್ನ ಬೆಳೆದುಕೊಳ್ಳುವುದಕ್ಕೆ ಅವಕಾಶವಿಲ್ಲದೆ ಆಳುವ ಪ್ರಭುಗಳ ಬಟ್ಟೆಗೆ ಬೇಕಾದ ನೀಲಿ ಬಣ್ಣಕೊಡುವ ಬೆಳೆ ಬೆಳೆದು ಕೊಡುವ ಕೈದಿಗಳಂತೆ ಇವರು ದುಡಿಯುತಿದ್ದರು. ಇವರ ಮೇಲಿನ ಹಿಂಸೆ ಮತ್ತು ದೌರ್ಜನ್ಯ ಹೇಳತೀರದು. ದಖನ್ ದಂಗೆಯ ಮೂಲಸ್ಥಾನ ಮುಂಬಯಿ ಪ್ರಾಂತ್ಯದ ಪುಣೆ ಮತ್ತು ಅಲಹಬಾದ್ ನಗರ ಪ್ರದೇಶಗಳು ರೈತವಾರಿ ಜಿಲ್ಲೆಗಳಾಗಿದ್ದು ಮುಂಬಾಯಿ ಸಕರ್ಾರ ಕಂದಾಯ ಹೆಚ್ಚಿಸುತ್ತಾ ಹೋಯಿತು. ಸ್ಥಳೀಯ ಬಂಡವಾಳಶಾಹಿಗಳ ಬಡ್ಡಿ ವ್ಯವಹಾರ ಮೈಮೇಲೆ ಆವರಿಸಿಕೊಂಡಿತು. ಇದರಿಂದಾಗಿ ಚಿಕ್ಕ ಪುಟ್ಟ ರೈತರೆಲ್ಲ ಜಮೀನು ಕಳೆದುಕೊಳ್ಳುತ್ತಾ ಹೋದರು. ಸಿಟ್ಟುಗೊಂಡ ಅವರು ಸಂಘಟಿತರಾಗಿ ಬಡ್ಡಿ ವ್ಯವಹಾರಗಳಿಗೆ ಮುತ್ತಿಗೆ ಹಾಕಿದರು. ಸಾಲ ಪತ್ರಗಳನ್ನು ಕಿತ್ತು ಸುಟ್ಟು ಹಾಕಿದರು. ದಂಗೆ ಅಡಗಿಸಲು ಸೈನ್ಯ ಬಂತು. ಸೆರೆಸಿಕ್ಕವರಿಗೆ ಹಿಂಸೆಯ ಜೊತೆಗೆ ಪುಂಡುಗಂದಾಯ ಹಾಕಲಾಯಿತು. ಮಾಪಿಳ್ಳೆ ದಂಗೆ ಆರ್ಥಿಕ ಸ್ವರೂಪದಲ್ಲಿ ಕಾಣಿಸಿಕೊಂಡರು ಅದರ ಅಂತರಂಗ ಅವರ ಧಾರ್ಮಿಕ ಅಸ್ಥಿತ್ವದಲ್ಲಿದೆ. ಅರಬ್ ದೇಶಗಳಿಂದ ಬಂದ ವ್ಯಾಪಾರಿಗಳು ಹಾಗೂ ಕೇರಳಾದ ಸ್ಥಳೀಯ ಹೆಣ್ಣುಗಳ ವೈವಾಹಿಕ ಸಂಬಂಧದಿಂದ ಹುಟ್ಟಿದವರು ಮಾಪಿಳ್ಳೆಗಳು. ಇವರು ಕೇರಳಾದ ಆ ಕಾಲದ ಭೂಒಡೆಯರಾದ ನಂಬೂದರಿಗಳು ಹಾಗೂ ಅವರ ಸಹವಾಸಿಗಳಾದ ನಾಯರ್ ಗಳಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು. ಇವರು ಹೆಚ್ಚಿನ ಗೇಣಿ ಕೊಡಬೇಕಿತ್ತು, ಕೊಡದಿದ್ದಲ್ಲಿ ಒಕ್ಕಲೆಬ್ಬಿಸುತ್ತಿದ್ದರು. ಸಾಮಾಜಿಕವಾಗಿ ಹೀನಾಯವಾಗಿ ನೋಡುಕೊಳ್ಳುತ್ತಿದ್ದರು. ಬಹಳಕಾಲದ ಈ ಹಿಂಸೆಯಿಂದಾಗಿ ಅವರು ಸಿಡಿದೆದ್ದರು. 1863 ರಿಂದ 1921 ರವರೆಗೆ ಸುಮಾರು ಐವತ್ತು ದಂಗೆಗಳಾದವು. ಅನೇಕ ಹಿಂಸಾಕೃತ್ಯಗಳು ನಡೆದವು. ಸಾವಿರಾರು ಮಾಪಿಳ್ಳೆಗಳು ಸತ್ತರು. ಗಾಂಧೀಯವರ ಸತ್ಯಾಗ್ರಹ ಪರಿಕಲ್ಪನೆ ರೂಪುಗೊಳ್ಳುವವರೆಗಿನ ರೈತ ಹೋರಾಟಗಳು ದೈಹಿಕ ಹಿಂಸೆಗಳಾಗಿದ್ದವು. ಸತ್ಯಾಗ್ರಹ ರೈತ ಹೋರಾಟದ ಅಸ್ತ್ರವಾದ ಮೇಲೆ ಅವು ಮಾನಸಿಕ ಹಿಂಸೆ- ಪ್ರತಿ ಹಿಂಸೆಯ ಸ್ವರೂಪ ಪಡೆದವು. ಕೆಲಮಟ್ಟಿಗೆ ರೈತರ ಸಮಸ್ಯೆಗಳ ಪರವಾಗಿ ಹೋರಾಡಲು ಕಾಂಗ್ರೇಸ್ ನಿರ್ಧರಿಸಿತು. 1928ರ ಬಾರ್ಡೋಲಿಯ ರೈತ ಸತ್ಯಾಗ್ರಹ ಇದಕ್ಕೊಂದು ನಿದರ್ಶನ. ಈ ಹೋರಾಟ ಎರಡು ಹಂತದಲ್ಲಿ ನಡೆಯಿತು. ಇದರ ನೇತೃತ್ವವನ್ನು ಗಾಂಧೀಯವರ ಸಮ್ಮತಿಯಂತೆ ಸರ್ದಾರ್ ವಲ್ಲಭಾಯಿ ಪಟೇಲ್ ವಹಿಸಿದ್ದರು. ಅವರನ್ನು ಬಾರ್ಡೋಲಿಯ ವೀರ ಎಂದು ಕರೆಯಲಾಯಿತು. ಸೂರತ್ ಪ್ರಾಂತ್ಯದ ಭೂ ಮಾಲೀಕರು ಮತ್ತು ಅವರ ಗೇಣಿದಾರರ ಮಧ್ಯೆ ವೈಮನಸ್ಸು ಉಂಟಾಯಿತು. ದೂಬ್ಸಾ ನಾಯಿಕ, ಚೋಧ್ರಾ, ದೂಧಿಯಾ, ಗಾಮಿಟಿ ಮುಂತಾದ ಕೂಲಿಕಾರ ಜನ ಪಾಟಿದಾರ ಭೂಮಾಲೀಕ-ವ್ಯಾಪಾರಿಗಳ ವಿರುದ್ಧ ತಿರುಗಿ ಬಿದ್ದರು. ಪಾಟಿದಾರರಿಂದ ಪಡೆದ ಸಾಲಕ್ಕೆ ತಮ್ಮ ಚಿಕ್ಕ ಪುಟ್ಟ ಭೂಮಿಯನ್ನು ಕಳೆದುಕೊಂಡರು. ಜೊತೆಗೆ ಮುಂಬಾಯಿ ಸರ್ಕಾರ ಶೇ.22ರಷ್ಟು ಕಂದಾಯ ಏರಿಸಿತು. ಇದರ ಹೊರೆ ಗೇಣಿದಾರ ಕೂಲಿಕಾರ್ಮಿಕರ ಮೇಲೆ ಬಿತ್ತು. ಸಾಯುವವನ ಮೇಲೆ ಕಲ್ಲು ಎತ್ತಿಕ್ಕಿದಂತಾಯಿತು. ಇದನ್ನು ಎಲ್ಲಾ ರೈತರು ವಿರೋಧಿಸಿ ಒಂದಾದರು. ಚಳವಳಿ ಸರ್ಕಾರದ ವಿರುದ್ಧವಾಯಿತು. ಸರ್ಕಾರ ಇವರನ್ನು ಹತ್ತಿಕ್ಕಲು ಅನಾಗರೀಕ ಕ್ರಮಗಳನ್ನು ಅನುಸರಿಸಿತು. ವಲ್ಲಭಾಯಿ ಪಟೇಲ್ ಹಾಗೂ ಇತರ ಕಾಂಗ್ರೇಸ್ ನಾಯಕರ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಸತ್ಯಾಗ್ರಹ ನಡೆಯಿತು. ಶೇ,22ರಷ್ಟು ಕಂದಾಯ 61/4ಕ್ಕೆ ಇಳಿಸುವ ಮೂಲಕ ಸತ್ಯಾಗ್ರಹ ಯಶಸ್ವಿಕಂಡಿತು. ವಾರಲಿ ಆದಿವಾಸಿಗಳ ಹೋರಾಟ ಸಂತಾಲ ದಂಗೆಯ ರೀತಿಯಾದರು ಕಮ್ಯುನಿಷ್ಟ್ ಪಕ್ಷದ ಬೆಂಬಲದೊಂದಿಗೆ ವ್ಯವಸ್ಥಿತವಾಗಿ ನಡೆಯಿತು. ಒಂದು ಕಾಲಕ್ಕೆ ಭೂಮಿ ಹೊಂದಿ ಉತ್ತಮ ಸ್ಥಿತಿಯಲ್ಲಿದ್ದ ಇವರನ್ನು ಮುಂಬಯಿಯ ವಿವಿಧ ವರ್ಗದ ಜನ ಶೋಷಣೆ ಮಾಡುತ್ತಿದ್ದರು. ಕೊನೆಗೆ ಅತ್ಯಂತ ದೀನಸ್ಥಿತಿಯ ಕೂಲಿಕಾಮರ್ಿಕರನ್ನಾಗಿ ಮಾಡಿದರು. ಸರ್ಕಾರ, ಸಾಹುಕಾರ, ಅಧಿಕಾರಿ, ದಲ್ಲಾಳಿಗಳು ಸೇರಿಕೊಂಡು ಇವರ ಬದುಕನ್ನು ನರಕ ಮಾಡಿದರು. ಕಮ್ಯುನಿಷ್ಟ್ ಪಕ್ಷದ ತಾತ್ವಿಕತೆಯ ಅಡಿಯಲ್ಲಿ ಒಂದಾಗಿ ತಮ್ಮ ದಾಸ್ಯದ ವಿರುದ್ಧ ಇವರು ತೀವ್ರ ಹೋರಾಟ ನಡೆಸಿದರು. ಭಾರತ್ ಕಿಸಾನ್ ಸಭಾ ನಾಯಕತ್ವದ ಈ ಹೋರಾಟ

ಕಂಪೆನಿ ಸರಕಾರವೂ ಹಾಗೂ ರೈತರ ದಂಗೆಯೂ Read Post »

ಇತರೆ, ಪ್ರಬಂದ

ಮತ್ತೆಮಳೆ ಹೊಯ್ಯುತ್ತಿದೆ

ತಳಮಳ ಎಬ್ಬಿಸುವ  ಒಳ ಮನಸನ್ನು ಯಾವ ರೀತಿಯಲ್ಲಿ ಸಂತೈಸುವುದು? ಕಳೆದು ಹೋದ ಮಳೆಯ ಪರಿಮಳವನ್ನು ಮತ್ತೊಮ್ಮೆ ಹೇಗೆ ಆಗ್ರಾಣಿಸುವುದು?

ಮತ್ತೆಮಳೆ ಹೊಯ್ಯುತ್ತಿದೆ Read Post »

ಇತರೆ

ಧಾರಾವಾಹಿ ಆವರ್ತನ ಅದ್ಯಾಯ-43 ಗುರೂಜಿಯವರ ಧಾರ್ಮಿಕ ಕಾರ್ಯಕ್ಕೆ ಸುಂದರವಾಗಿ ರಂಗೋಲಿಯಿಟ್ಟು ಶೃಂಗಾರಗೊಂಡ ಜಾಗದಲ್ಲಿದ್ದ ದೈತ್ಯ ಮರಗಳು ತಂತಮ್ಮ ಅಂತ್ಯ ಕಾಲ ಸಮೀಪಿಸಿತೆಂಬುದನ್ನು ನೆನೆದು ಭಯ, ದುಃಖದಿಂದ ತರತರ ಕಂಪಿಸುತ್ತ ಕೆಲವುಕ್ಷಣ ಆಮ್ಲಜನಕವನ್ನು ಸ್ರವಿಸುವುದನ್ನೇ ಮರೆತು ಇಂಗಾಲವನ್ನು ಕಕ್ಕುತ್ತಿವೆಯೇನೋ ಎಂಬಂತೆ ಅಲ್ಲಿನ ಪರಿಸರವು ಒಮ್ಮೆಲೇ ಮಲೀನಗೊಂಡಿತು. ಅದರೊಂದಿಗೆ ಕಾಡಿನ ಸೆರಗಿನಲ್ಲಿದ್ದ ಸರೋವರವೂ ತಲ್ಲಣಿಸುತ್ತ, ಸ್ಫಟಿಕದಂಥ ಜಲರಾಶಿಯು ಮಂದವಾಗಿ ಮೇಲ್ಪದರದಲ್ಲಿ ಹಳದಿಮಿಶ್ರಿತ ಕೆಂಬಣ್ಣದ ದಟ್ಟ ಪದರವೊಂದು ಸೃಷ್ಟಿಯಾಗಿ ಸೇವಿಸಲಯೋಗ್ಯವಾಗಿಬಿಟ್ಟಿತು. ಗುರೂಜಿಯವರ ಚಟುವಟಿಕೆ ನಡೆಯಲಿದ್ದ ಸ್ಥಳದ ಒಂದು ಮೂಲೆಯಲ್ಲಿ ನಿಂತುಕೊಂಡು ಅವರನ್ನು ಕಾಯುತ್ತಿದ್ದ ಭೂಮಾಲಕರ ಮತ್ತು ಊರ ಭಕ್ತಾದಿಗಳ ಗುಂಪು ಅಲ್ಲಿ ಸೃಷ್ಟಿಯಾದ ವಿಷಮ ವಾತಾವರಣವನ್ನು ಕಂಡು ತೀವ್ರ ಗಾಬರಿಗೊಂಡಿತು. ಕೆಲವರಿಗೆ ಕಾಡಿಗೆ ಕಾಡೇ ನೊಂದು ರೋಧಿಸುವಂತೆಯೂ ಭಾಸವಾಗಿ ಭಯವಾಯಿತು.      ಇತ್ತ ಹುಚ್ಚೆದ್ದು ಧಾವಿಸುತ್ತಿದ್ದ ಬಿರುಗಾಳಿಯು ರಪ್ಪನೆ ಜನರ ಗುಂಪಿನತ್ತ ನುಗ್ಗಿತು. ತಾನು ಬಾಚಿ ಹೊತ್ತು ತಂದಿದ್ದ ಕಸಕಡ್ಡಿ ಕಶ್ಮಲಗಳನ್ನೆಲ್ಲ ಕ್ರೋಧವೆತ್ತಂತೆ ರಪರಪನೇ ನೆರೆದವರ ಮೇಲಪ್ಪಳಿಸುತ್ತ ಸುಳಿಯಿತು. ಆ ಜನರು ಭೀತಿಯಿಂದ ದಿಕ್ಕುದೆಸೆ ತಪ್ಪಿ ಓಡುತ್ತ ಸಿಕ್ಕಸಿಕ್ಕ ಮರಗಿಡಗಳ ಮರೆಗೆ ಸರಿದು ಅಡಗಿಕೊಳ್ಳತೊಡಗಿದರು. ಅಷ್ಟರಲ್ಲಿ ಗುರೂಜಿಯವರ ತಂಡವೂ ಕಾಡಿನೊಳಗೆ ಅಡಿಯಿಟ್ಟಿತು. ಅವರನ್ನು ಕಂಡ ಬಿರುಗಾಳಿಯ ರಭಸವು ದುಪ್ಪಟ್ಟಾಗುವುದಕ್ಕೂ ನಂದಿಮರದ ದೊಡ್ಡ ಒಣ ರೆಂಬೆಯೊಂದು ಗುರೂಜಿಯವರ ನೆತ್ತಿಯ ನೇರಕ್ಕೆ ಮುರಿದು ಬೀಳುವುದಕ್ಕೂ ಸರಿಹೋಯಿತು. ಆದರೆ ಅದನ್ನು ತಟ್ಟನೆ ಗಮನಿಸಿದ ಗುರೂಜಿಯವರು ಹೌಹಾರಿ ಒಂದೇ ಉಸಿರಿಗೆ ಹಿಂದೆ ನೆಗೆದು ಅದೇ ವೇಗದಲ್ಲಿ ಹಿಂದಿರುಗಿ ಓಡಲಿದ್ದರು. ಆದರೆ ಅದು ಹೇಗೋ ಕಷ್ಟಪಟ್ಟು ಸಂಭಾಳಿಸಿಕೊಂಡು ನಿಂತರು. ಆದರೆ ಆಕ್ಷಣ ಅವರ ಗಟ್ಟಿ ಹೃದಯವನ್ನು ಯಾರೋ ಬಿರುಸಾಗಿ ತಿವಿದಂಥ ನೋವೊಂದು ಕಾಣಿಸಿಕೊಂಡಿತು. ಎದೆಯ ಭಾಗನ್ನು ರಪ್ಪನೆ ಅಮುಕಿ ಹಿಡಿದುಕೊಂಡು ಅವುಡುಗಚ್ಚಿ ನೋವು ನುಂಗಿದರು. ಬಿರುಗಾಳಿಯ ರೌದ್ರ ನರ್ತನ ತಣ್ಣಗಾಗುವವರೆಗೆ ಮರವೊಂದನ್ನು ಬಿಗಿಯಾಗಿ ಹಿಡಿದು ನಿಂತು ಸುಧಾರಿಸಿಕೊಂಡರು.    ಅತ್ತ ಅಲ್ಲೊಂದು ತಮಾಷೆಯೂ ನಡೆದಿತ್ತು. ರಾಘವ ಉಟ್ಟಿದ್ದ ಬಿಳಿಯ ಪಂಚೆಯೂ ಹೆಗಲ ಮೇಲೆ ಹೆಮ್ಮೆಯಿಂದ ನೇತಾಡಿಸಿಕೊಂಡಿದ್ದ ಉತ್ತರೀಯವೂ ಬಿರುಗಾಳಿಗೆ ಸಿಲುಕಿ ಹಾರಿ ಹೋಗಿ ಮರದ ಎತ್ತರದ ಕೊಂಬೆಯೊಂದಲ್ಲಿ ನೇತಾಡುತ್ತಿದ್ದವು. ಅವನ ಅವಸ್ಥೆಯನ್ನು ಕಂಡ ಕೆಲವರಿಗೆ ಅಂಥ ಸ್ಥಿತಿಯಲ್ಲೂ ನಗು ಉಕ್ಕಿತು.  ಅವರೆಲ್ಲ ಮುಸಿಮುಸಿ ನಕ್ಕಾಗ ಉಳಿದವರೂ ಜೋರಾಗಿ ನಗತೊಡಗಿದರು. ಆಗ ರಾಘವನಿಗೆ ತೀರಾ ಅವಮಾನವೆನಿಸಿತು. ಆತ ಕೂಡಲೇ ಪಂಚೆಯಿದ್ದ ಮರವೇರಲು ಮುಂದಾದ. ಆದರೆ ಮತ್ತೇನೋ ಹೊಳೆದು ಕಾರಿನತ್ತ ಓಡಿದ. ಅಲ್ಲಿದ್ದ ಹಳೆಯ ಪಂಚೆಯೊಂದನ್ನು ಉಟ್ಟುಕೊಂಡು ಹಿಂದಿರುಗಿದ.                                                                                *** ದೇವರಕಾಡಿನಲ್ಲಿ ಭುಗಿಲೆದ್ದ ಬಿರುಗಾಳಿಯು ಸ್ವಲ್ಪಹೊತ್ತಿನಲ್ಲಿ ನಿಧಾನಕ್ಕೆ ಬಿಸಿಯೇರಿ ಕಾಡಿನೊಳಗಿನ ಮನುಷ್ಯ ಕ್ರಿಮಿಗಳನ್ನೆಲ್ಲ ಉಸಿರುಗಟ್ಟಿಸಿ ಹೊರಗೋಡಿಸಲೆತ್ನಿಸಿತು. ಆದರೆ ಅಷ್ಟರಲ್ಲಿ ಗೂರೂಜಿಯವರ ಮಹತ್ವಾಕಾಂಕ್ಷೆಯೂ ಜಾಗ್ರತಗೊಂಡಿದ್ದರಿಂದ ಬಿರುಗಾಳಿಯು ಮೆಲ್ಲನೆ ತನ್ನ ತೀಕ್ಷ್ಣತೆಯನ್ನು ಕಳೆದುಕೊಂಡು ಕಣ್ಮರೆಯಾಯಿತು. ಪರಿಸ್ಥಿತಿ ಶಾಂತವಾಗುತ್ತಲೇ ಗುರೂಜಿಯವರು ಜೀರ್ಣೋದ್ಧಾರದ ನಾಂದಿಗೆ ಬಂದು ಸೇರಿದ್ದ ಭಕ್ತಾದಿಗಳನ್ನುದ್ದೇಶಿಸಿ ಮಾತಾಡಲಿಚ್ಛಿಸಿದರು. ‘ಉಙಂ…ಉಙಂ…!’ ಎಂದು ಗಂಟಲು ಸರಿಪಡಿಸಿಕೊಳ್ಳುತ್ತ ಎಲ್ಲರನ್ನೂ ಎಚ್ಚರಿಸಿದರು. ಆಗ ಜನರೂ ಅಷ್ಟರವರೆಗೆ ತಮ್ಮನ್ನು ಕಾಡುತ್ತಿದ್ದ ಆತಂಕವನ್ನು ಬದಿಗೊತ್ತಿ ಗುರೂಜಿಯವರ ಮಾತುಗಳನ್ನು ಆಲಿಸತೊಡಗಿದರು. ‘ನೋಡಿ ಭಕ್ತಾದಿಗಳೇ… ಈಗ ಸ್ವಲ್ಪಹೊತ್ತಿನ ಮುಂಚೆ ಈ ಪವಿತ್ರ ಸನ್ನಿಧಿಯಲ್ಲಿ ನಡೆದ ವಿಚಿತ್ರ ಘಟನೆಗೆ ನೀವೆಲ್ಲ ಸಾಕ್ಷಿಯಾಗಿದ್ದೀರಿ ಅಂತ ಹೇಳಲು ನಮಗೆ ಸಂತೋಷವಾಗುತ್ತಿದೆ. ಯಾವ ಮಹಾಶಕ್ತಿಯನ್ನು ನಾವು ಶ್ರದ್ಧಾಭಕ್ತಿಯಿಂದ ಪೂಜಿಸಿಕೊಂಡು ಬರಲು ಇಚ್ಛಿಸಿದ್ದೇವೋ ಅದೇ ಶಕ್ತಿಯು ಇವತ್ತು ನಮಗೆಲ್ಲರಿಗೂ ಎಂಥ ವಿಶೇಷ ಸ್ವಾಗತವನ್ನು ನೀಡಿತು ಎನ್ನುವುದನ್ನು ನೀವೆಲ್ಲ ಕಣ್ಣಾರೆ ನೋಡಿರುವಿರಿ. ಆದರೂ ನಿಮಗೆ ನಾವದನ್ನು ಸ್ವಲ್ಪ ವಿವರಿಸಿ ಹೇಳಬೇಕು. ನಮ್ಮೆಲ್ಲರ ಈ ನಿರ್ಧಾರದಿಂದ ನಾಗದೇವನಿಗೆ ಆದಂಥ ಅಪರಿಮಿತ ಸಂತೋಷವು ಬಿರುಗಾಳಿಯ ರೂಪದಲ್ಲಿ ಕಾಣಿಸಿಕೊಂಡರೆ ನಂದಿಮರದ ಒಣ ಗೆಲ್ಲೊಂದು…!’ ಎಂದು ಮಾತು ನಿಲ್ಲಿಸಿದವರು, ‘ಭಕ್ತಾದಿಗಳೇ ಗಮನವಿಟ್ಟು ಕೇಳಿಸಿಕೊಳ್ಳಿ! ನಾವು ಹೇಳುತ್ತಿರುವುದು ಗಟ್ಟಿಮುಟ್ಟಾದ ಹಸಿ ಗೆಲ್ಲಿನ ಬಗ್ಗೆ ಅಲ್ಲ…, ಒಣಗಿ ಕುಂಬಾದ ಗೆಲ್ಲು! ಅದು ಒಂದುವೇಳೆ ನಾಡಿದ್ದು ಜೀರ್ಣೋದ್ಧಾರದ ಸಮಯದಲ್ಲೆಲ್ಲಾದರೂ ಮುರಿದು ಬೀಳುತ್ತಿದ್ದರೆ ಎಂಥ ಅನಾಹುತವಾಗುತ್ತಿತ್ತು ಅಂತ ನೀವೇ ಊಹಿಸಿಕೊಳ್ಳಿ! ಅಂಥ ಕುಂಬು ರೆಂಬೆಯೊಂದು ನಮ್ಮೆಲ್ಲರ ಕಣ್ಣಮುಂದೆಯೇ ಮುರಿದು ಬಿದ್ದಿರುವುದು ಇಲ್ಲಿನ ದೈವಭೂತಗಳೂ ನಮ್ಮೆಲ್ಲರ ಮೇಲೆ ಇಟ್ಟಿರುವ ಕೃಪಾಕಟಾಕ್ಷಕ್ಕೆ ಸಣ್ಣದೊಂದು ಉದಾಹರಣೆ ಎಂದೇ ತಿಳಿಯಬೇಕು. ಆದ್ದರಿಂದ ಮುಂದೆ ನಡೆಯಲಿರುವ ಮಹತ್ಕಾರ್ಯಕ್ಕೆ ಇಲ್ಲಿನ ಸರ್ವಶಕ್ತಿಗಳ ಸಂಪೂರ್ಣ ಸಹಕಾರ ನಮಗಿದೆ ಎನ್ನುವುದೇ ಈ ಘಟನೆಯ ಒಳಾರ್ಥ. ಹಾಗಾಗಿ ನಮ್ಮ ಪಾಲಿಗೆ ಇದಕ್ಕಿಂತ ಶುಭಗಳಿಗೆ ಇನ್ನೊಂದು ಬರಲಾರದು. ಆದಷ್ಟು ಬೇಗ ಕೆಲಸ ಆರಂಭಿಸುವ ಬನ್ನಿ…!’ ಎಂದು ನಗುತ್ತ ಹೇಳಿದವರು ರಾಘವನತ್ತ ತಿರುಗಿ ಮುಂದಿನ ಕಾರ್ಯಕ್ಕೆ ಅಣಿ ಮಾಡುವಂತೆ ಸಂಜ್ಞೆ ಮಾಡಿದರು.    ರಾಘವನು ಕೂಡಲೇ ಜಾಗದ ಹಿರಿಯನೊಬ್ಬನನ್ನು ಕರೆದುಕೊಂಡು ನೀರು ತರಲು ಸಮೀಪದ ಮದಗದತ್ತ ಹೋದ. ಆದರೆ ಆ ಸರೋವರದ ನೀರು ಹಳದಿ ಬಣ್ಣಕ್ಕೆ ತಿರುಗಿತ್ತು. ಅಷ್ಟಲ್ಲದೇ ಯಾವುದೋ ಪ್ರಾಣಿಯೊಂದು ಸತ್ತು ಕೊಳೆತ ದುರ್ವಾಸನೆ ಬೀರುತ್ತಿದ್ದ ನೀರಿನ ಮೇಲೆ ಹಿಂಡುಹಿಂಡು ನೊಣಗಳು ಗುಂಯ್ಯಿಗುಟ್ಟುತ್ತಿದ್ದವು. ಅದನ್ನು ಕಂಡ ಆ ಹಿರಿಯನಿಗೆ ಆತಂಕವಾಯಿತು. ಎಂದೂ ಹೀಗೆ ಮಲೀನವಾಗದಿದ್ದ ನಿರ್ಮಲ ಸರೋವರಕ್ಕೆ ಇಂದೇನಾಯಿತು? ಎಂದು ಚಿಂತಿಸಿದವನು ರಾಘವನನ್ನು ತಡೆದು ಗುರೂಜಿಯವರಿಗೆ ವಿಷಯ ತಿಳಿಸಿ ಬರಲು ಸೂಚಿಸಿದ. ರಾಘವ ತಕ್ಷಣ ಹೋಗಿ ಗುರೂಜಿಯ ಕಿವಿಯಲ್ಲಿ ವಿಷಯವನ್ನರುಹಿದ. ಅದನ್ನು ಕೇಳಿದ ಗುರೂಜಿಯವರ ಮುಖವು ವಿವರ್ಣವಾಯಿತು. ಆದ್ದರಿಂದ ಅವರು ಕ್ಷಣಹೊತ್ತು ಧ್ಯಾನಮಗ್ನರಾಗಿಬಿಟ್ಟರು. ಬಳಿಕ ತಮ್ಮ ಚೀಲದಿಂದ ಮಣ್ಣಿನ ಸಣ್ಣ ಪೊಟ್ಟಣವೊಂದನ್ನು ತೆಗೆದು ಅವನ ಕೈಗಿತ್ತು,‘ಇದು ಮೂಲ ನಾಗನ ಹುತ್ತದ ಪ್ರಸಾದ. ಭಕ್ತಿಯಿಂದ ಪ್ರಾರ್ಥಿಸಿಕೊಂಡು ಮದಗಕ್ಕೆ ಚೆಲ್ಲಿ ಅದೇ ಜಾಗದ ನೀರನ್ನು ತೆಗೆದುಕೊಂಡು ಬಾ!’ ಎಂದು ಆಜ್ಞಾಪಿಸಿದರು. ರಾಘವ ಆ ಪ್ರಸಾದವನ್ನು ಕೊಂಡೊಯ್ದು ಹಾಗೆಯೇ ಮಾಡಿದ. ಆಶ್ಚರ್ಯ! ಆ ಮಣ್ಣಿನ ಪ್ರಸಾದ ಬಿದ್ದ ಜಾಗದಷ್ಟು ನೀರು ತಕ್ಷಣ ಶುದ್ಧವಾದಂತೆ ತೋರಿತು! ಇಬ್ಬರಿಗೂ ವಿಸ್ಮಯವಾಯಿತು. ಅವರು ಗುರೂಜಿಯವರ ಮಹಿಮೆಯನ್ನು ಕೊಂಡಾಡುತ್ತ ನೀರು ಹೊತ್ತುಕೊಂಡು ಹಿಂದಿರುಗಿದರು.   ಹಿಂದಿರುಗಿ ಬಂದ ಹಿರಿಯ ತಾನು ಕಂಡ ವಿಚಿತ್ರವನ್ನು ಉಳಿದ ಭಕ್ತಾದಿಗಳಿಗೂ ವಿವರಿಸಿದ. ಅವರೂ ಅಚ್ಚರಿಗೊಂಡು ಭಯಭಕ್ತಿಯಿಂದ ಪುಳಕಿತರಾದರು. ಗುರೂಜಿಯವರು ಭಕ್ತಾದಿಗಳ ಸಮ್ಮುಖದಲ್ಲಿ ತಮ್ಮ ಮುಂದಿನ ಚಮತ್ಕಾರವನ್ನು ತೋರಿಸಲು ಸಿದ್ಧರಾದರು. ಕಾಡಿನ ನಡುವೆ ಪ್ರಶಸ್ತ ಸ್ಥಳವೊಂದರಲ್ಲಿ ಹೋಮ ಕುಂಡವನ್ನು ಸ್ಥಾಪಿಸಲಾಯಿತು. ಗುರೂಜಿಯವರು ತಮ್ಮೊಂದಿಗೆ ಕರೆದು ತಂದಿದ್ದ ಏಳು ಮಂದಿ ಸಹಾಯಕರೊಂದಿಗೆ ಹೋಮ ಕುಂಡದೆದುರು ಪದ್ಮಾಸೀನರಾಗಿ ಕುಳಿತು ಮಂತ್ರೋಚ್ಛರಣೆಯಲ್ಲಿ ತೊಡಗಿದರು. ಸುಮಾರು ಅರ್ಧ ಗಂಟೆಯ ಕಾಲ ವಿಶೇಷ ಹೋಮವೊಂದು ನಡೆದು ಪೂರ್ಣಾಹುತಿ ಕೊಟ್ಟು ಎದ್ದು ನಿಂತ ಗುರೂಜಿಯವರು ತಮ್ಮ ಮೈತುಂಬಾ ಇಳಿಯುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರು. ಬಳಿಕ ಮುಂದಿನ ವಿಶೇಷ ವಿಧಿಗೆ ಮುಂದಾದರು.    ಗುರೂಜಿಯವರ ಸಹಾಯಕರು ಅವರ ಇಂಗಿತವನ್ನು ಅರ್ಥೈಸಿಕೊಂಡು ಮುಂದೆ ಬಂದು ಅವರ ಅಕ್ಕಪಕ್ಕ ಕೈಮುಗಿದು ನಿಂತುಕೊಂಡರು. ಮುಂದಿನಕ್ಷಣ ಗುರೂಜಿಯವರು ನಾಗದೇವನೇ ಮೈಮೇಲೆ ಬಂದಂತೆ ಆವೇಶಭರಿತರಾಗಿ ನಡುಗತೊಡಗಿದರು. ಹತ್ತಾರು ಕಪ್ಪು ಮಚ್ಚೆಗಳಿಂದ ಕೂಡಿದ ಅವರ ಕೆನ್ನಾಲಿಗೆಯು ಕ್ಷಣಕ್ಷಣಕ್ಕೂ ಹೊರ ಒಳಗೆ ಹರಿದಾಡುತ್ತ ಭಯ ಹುಟ್ಟಿಸುವಂಥ ಹಾವಿನ ವರ್ತನೆಯಂತೆಯೇ ಭಕ್ತಾದಿಗಳಿಗೆ ಭಾಸವಾಯಿತು. ಎಲ್ಲರೂ ಭೀತರಾಗಿ ನೋಡುತ್ತಿದ್ದರು. ಅಷ್ಟರಲ್ಲಿ ಗುರೂಜಿಯವರ ಆವೇಶವು ಸ್ವಲ್ಪ ತಗ್ಗಿತು. ರಾಘವ ಅದನ್ನೇ ಕಾಯುತ್ತಿದ್ದವನಂತೆ ರಪ್ಪನೆ ಸಿಪ್ಪೆ ಸುಲಿದ ಕಾಯಿಯೊಂದನ್ನೂ, ಕತ್ತಿಯನ್ನೂ ತಂದು ಅವರ ಕೈಗಿತ್ತು ಗೋಣು ಬಗ್ಗಿಸಿ ಹಿಂದೆ ಸರಿದು ಕೈಕಟ್ಟಿ ನಿಂತುಕೊಂಡ. ಗುರೂಜಿಯವರು ಕಣ್ಣುಮುಚ್ಚಿ ವಿಚಿತ್ರ ಮಂತ್ರವೊಂದನ್ನು ತಾರಕಸ್ವರದಲ್ಲಿ ಪಠಿಸುತ್ತ ಕಾಯಿಯನ್ನು ಒಂದೇ ಏಟಿಗೆ ಎರಡು ಹೋಳಾಗಿ ಒಡೆದರು. ಬಳಿಕ ಊರ ಗುರಿಕಾರನತ್ತಲೂ ಜಾಗದ ವಾರಸುದಾರರತ್ತಲೂ ಮತ್ತು ಭಕ್ತಾದಿಗಳತ್ತಲೂ ಗಂಭೀರವಾಗಿ ದಿಟ್ಟಿಸುತ್ತ ಕಣ್ಣಸನ್ನೆಯಿಂದಲೇ ಅವರೆಲ್ಲರ ಅಪ್ಪಣೆ ಕೋರಿದರು. ಆಗ ಎಲ್ಲರೂ ಭಕ್ತಿಯಿಂದ ಅನುಮತಿ ಸೂಚಿಸಿದರು. ಗುರೂಜಿಯವರು ಅದೇ ಮಂತ್ರವನ್ನು ಮರಳಿ ಉಚ್ಛರಿಸುತ್ತ ಕಾಯಿಯ ಹೋಳುಗಳನ್ನು ಬೀಸಿ ಎದುರಿನ ಒಂದಷ್ಟು ದೂರಕ್ಕೆಸೆದರು. ಅದರಲ್ಲೊಂದು ಜುಟ್ಟಿನ ಹೋಳು ರುಮ್ಮನೆ ಹಾರಿ ಹೋಗಿ ರೆಂಜೆ ಮರದ ಬುಡಕ್ಕೆ ಬಡಿದು ಅಂಗಾತ ಬಿದ್ದಿತು.     ನೆರೆದ ಭಕ್ತಾದಿಗಳು ಮುಂದೆ ನಡೆಯಲಿದ್ದ ಸೋಜಿಗವನ್ನು ಕಾಣಲು ಉಸಿರು ಬಿಗಿದು ಹಿಡಿದು ನಿಂತಿದ್ದರು. ಗುರೂಜಿಯವರು ನಿಧಾನವಾಗಿ ಕಣ್ಣು ತೆರೆದರು. ಜಾಗಕ್ಕೆ ಸಂಬಂಧಿಸಿದ ಒಂದಿಬ್ಬರು ಮಧ್ಯ ವಯಸ್ಕರನ್ನು ತೀಕ್ಷ್ಣವಾಗಿ ದಿಟ್ಟಿಸಿದರು. ಗುರೂಜಿಯವರ ನೋಟಕ್ಕೆ ಆ ಬಡಪಾಯಿಗಳ ಹೃದಯಗಳು ಜೋರಾಗಿ ಬಡಿದುಕೊಳ್ಳಲಾರಂಭಿಸಿದವು. ಅಷ್ಟರಲ್ಲಿ ಗುರೂಜಿಯವರು, ‘ಭಯಪಡಬೇಡಿ ಭಕ್ತಾದಿಗಳೇ ಮುಂದೆ ಬನ್ನಿ…!’ ಎಂದು ಅವರಿಗೆ ಆಜ್ಞಾಪಿಸಿದರು. ಅವರು ಅಳುಕುತ್ತ ಮುಂದೆ ಬಂದರು. ‘ಓ ಅಲ್ಲಿಗೆ ಹೋಗಿ ಆ ರೆಂಜೆಮರದ ಕೆಳಗೆ ನಾಗನು ಎಸೆದ ಪ್ರಸಾದ ಬಿದ್ದಿದೆಯಲ್ಲಾ ಆ ಸ್ಥಳವನ್ನು ಪೂರ್ಣ ಭಕ್ತಿಯಿಂದ ಅಗೆಯಿರಿ. ಹ್ಞೂಂ, ಹೊರಡಿ!’ ಎಂದು ಒರಟಾಗಿ ಸೂಚಿಸಿದರು. ಅವರಿಬ್ಬರೂ ಗುರೂಜಿಯ ಸಾಕು ಪ್ರಾಣಿಗಳಂತೆ ತಲೆಯಲ್ಲಾಡಿಸಿ ಕೈಮುಗಿದು ಹೋಗಿ ಅಗೆಯತೊಡಗಿದರು. ಉಳಿದ ಭಕ್ತಾದಿಗಳು ಅವರ ಕ್ರಿಯೆಯನ್ನು ಭಯಾಸಕ್ತಿಯಿಂದ ನೋಡತೊಡಗಿದರು. ಕೆಲಹೊತ್ತಲ್ಲಿ, ಅಗೆಯುವವರ ಪಿಕ್ಕಾಸಿಗೆ ಕಲ್ಲಿನಂಥ ವಸ್ತುವೊಂದು ಟಣ್ಣೆಂದು ತಗುಲಿತು. ಅವರು ತಟ್ಟನೆ ಕೆಲಸ ನಿಲ್ಲಿಸಿ, ‘ಮುಂದೇನು…?’ ಎಂಬಂತೆ ಗುರೂಜಿಯವರನ್ನು ದಿಟ್ಟಿಸಿದರು. ಗುರೂಜಿಯವರು ಕೆಲಸ ಮುಂದುವರೆಸುವಂತೆ ಸನ್ನೆ ಮಾಡಿದರು. ಅವರು ಮರಳಿ ಅಗೆಯತೊಡಗಿದರು. ಸ್ವಲ್ಪಹೊತ್ತಿನಲ್ಲಿ ಹೊಂಡದಲ್ಲಿದ್ದ ನಾಗನಕಲ್ಲುಗಳೂ ಮತ್ತು ದೈವದ ಕುರುಹುಗಳೂ ಒಂದೊಂದಾಗಿ ಕಾಣಿಸಿಕೊಂಡವು. ಆಕೂಡಲೇ ಗುರೂಜಿಯವರು ಮುಂದೆ ಬಂದು ಅವರನ್ನು ತಡೆದು, ‘ಹ್ಞೂಂ ಹ್ಞೂಂ…! ನೀವು ಮುಟ್ಟಬೇಡಿ. ಇನ್ನು ನಿಮ್ಮ ಕೆಲಸವಾಯಿತು. ಮೇಲೆ ಬನ್ನಿ!’ ಎಂದು ಹೇಳಿ ರಾಘವನನ್ನು ಕರೆದು ಆ ಕಲ್ಲುಗಳನ್ನು ಹೊರಗೆ ತೆಗೆದಿರಿಸಿದರು. ಆಗ ಊರ ಜನರೂ ಜಾಗದ ಮಾಲಕ ತಂಡವೂ ವಿಸ್ಮಯದಿಂದ ಮೂಕರಾಗಿ ಆ ಕಲ್ಲುಗಳಿಗೂ, ಗುರೂಜಿಯವರ ಪಾದಗಳಿಗೂ ದಡಬಡನೇ ಸಾಷ್ಟಾಂಗ ಬಿದ್ದರು. ‘ಹ್ಞೂಂ! ಇಲ್ಲಿಗೆ ನಮ್ಮ ಕೆಲಸ ಮುಗಿಯಿತು. ದೇವರು ದೊಡ್ಡವನು. ಎಲ್ಲರಿಗೂ ಕಾರಣಿಕವನ್ನು ತೋರಿಸಿಕೊಟ್ಟ! ಇನ್ನು ಈ ಸ್ಥಳದಲ್ಲಿ ಅವನನ್ನು ಮತ್ತು ಅವನ ಪರಿವಾರವನ್ನು ನಂಬುವುದು, ಬಿಡುವುದು ನಿಮಗೆ ಸೇರಿದ್ದು!’ ಎಂದ ಗುರೂಜಿಯವರು ಹೊರಡಲನುವಾದರು. ಆಗ ಜಾಗ ವಾರಿಸುದಾರರಿಗೂ ಭಕ್ತಾದಿಗಳಿಗೂ ಆತಂಕವೆದ್ದಿತು. ಅವರೆಲ್ಲ ಕೆಲಹೊತ್ತು ತಂತಮ್ಮೊಳಗೆ ಚರ್ಚಿಸಿಕೊಂಡರು. ಕೊನೆಯಲ್ಲಿ ಗುರಿಕಾರನು ಮುಂದೆ ಬಂದು ಗುರೂಜಿಯವರನ್ನು ಕುಳಿತುಕೊಳ್ಳಲು ವಿನಂತಿಸಿ, ಜೀರ್ಣೋದ್ಧಾರದ ಮಾತುಕತೆಗೆ ಬೇಡಿಕೊಂಡ. ಅದರಿಂದ ಗುರೂಜಿಯವರು ಒಳಗೊಳಗೇ ಆನಂದಪಟ್ಟರು. ಎಲ್ಲರನ್ನೂ ಕರೆದು ತಮ್ಮೆದುರು ಕುಳ್ಳಿರಿಸಿಕೊಂಡರು. ಅವರಲ್ಲಿ ಅನೇಕರನ್ನು ಆಯ್ದು, ‘ಭಾಗಿವನ ನಾಗಬನ ಜೀರ್ಣೋದ್ಧಾರ ಸಮಿತಿ!’ ಎಂಬ ತಂಡವನ್ನು ರಚಿಸಿದರು. ಅದರಲ್ಲೂ ಮೂರು ಪಂಗಡವನ್ನು ಮಾಡಿದರು. ಒಂದನ್ನು ಹಣಕಾಸು ಹೊಂದಿಸಲು ಮತ್ತೊಂದನ್ನು ವ್ಯವಹಾರ ನಿರ್ವಹಿಸಲು ನೇಮಿಸಿದರು. ನಾಗಬನ ಜೀರ್ಣೋದ್ಧಾರದ ಉಸ್ತುವಾರಿಯನ್ನು ಉಳಿದೊಂದು ತಂಡಕ್ಕೊಪ್ಪಿಸಿದರು. ಮುಂದಿನ ಕೆಲಸಕ್ಕೆ ಸದ್ಯದಲ್ಲೇ ‘ಕೆಸರುಗಲ್ಲು ಹಾಕುವ ಭರವಸೆಕೊಟ್ಟು ಎಲ್ಲರಿಗೂ ಆಶೀರ್ವಚನ ನೀಡಿ ಹಿಂದಿರುಗಿದರು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾ

Read Post »

You cannot copy content of this page

Scroll to Top