ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಮನೆಯಲ್ಲೇ ಉಳಿದರು ಜನರು

ಮೂಲ: ಕ್ಯಾಥಲೀನ್ ಓ ಮಿಯರಾ ಕನ್ನಡಕ್ಕೆ: ನಂದಿನಿ ವಿಶ್ವನಾಥ್ ಹೆದ್ದುರ್ಗ ನಂದಿನಿ ವಿಶ್ವನಾಥ್ ಹೆದ್ದುರ್ಗ ಆಗ…ಮನೆಯಲ್ಲೇ ಉಳಿದರು ಜನರುಓದಿದರುಕೇಳಿದರುಪದ ಕಟ್ಟಿ ಹಾಡಿಒಟ್ಟಾಗಿ ಉಂಡುವಿರಮಿಸಿ,ಹೊಸದೆಂಬಂತೆ ರಮಿಸಿದುಡಿದು ಬೆವರಿಗೋಡೆಗೊಂದು ಕಲಾಕೃತಿ ಮಾಡಿ ಕಣ್ತುಂಬಿಕೊಂಡು.. ಮರೆತ ಹಳೆಯ ಆಟಗಳ ಆಡಿಮನೆಯಲ್ಲೇ ಉಳಿದುಹೊಸತುಗಳ ಅನ್ವೇಷಣೆ ಹೂಡಿಹೊರಗಡಿಯಿಡುವುದರ ತಮ್ಮಷ್ಟಕ್ಕೇ ತಡೆದುತಮ್ಮೊಳಗಿನ ಧ್ವನಿಯ ತದೇಕ ಕೇಳಿ..ಕೆಲವರು ಧ್ಯಾನಿಸಿಕೆಲವರು ಪ್ರಾರ್ಥಿಸಿಕೆಲವರು ನರ್ತಿಸಿತಮ್ಮ ನೆರಳನ್ನೇ ಮುಖಾಮುಖಿಯಾಗಿಸಿ ಮಾತಾಡಿ..ಬೇರೆಯದೇ ಬಗೆಯಲ್ಲಿ ಬದುಕ ಅರ್ಥೈಸಿಆರಾಮಾದರು ಅವರ ಪಾಡಿಗೆ ಅವರು.. ನಿರ್ಲಕ್ಷದಲಿ ಬದುಕಿದವರ ಗೈರಿನಲ್ಲಿ.,ಹೃದಯವಿಲ್ಲದವರ,ಅರ್ಥವಿಲ್ಲದವರಅಪಾಯಕಾರಿಗಳಹಾಜಾರಾತಿಯ ಕುಂದಿನಲ್ಲಿಧರಣಿಯೂ ಕ್ರಮೇಣ ಕಳೆಕಳೆಯಾಗಿಜಗವನ್ನಾವರಿಸಿದ್ದ ಬೇಗೆ ಅಂತೂ ಮುಗಿಯಲೂ., ಜಗದ ಅದದೇ ಜನರು ಹೊಸದಾಗಿ ಪರಿಚಯಿಸಿಕೊಂಡರು ಒಬ್ಬರಿಗೊಬ್ಬರು..ತೀರಿಕೊಂಡವರಿಗಾಗಿ ಕಣ್ಣೀರು ಮಿಡಿದರು..ಕೈಗೊಂಡರು ಬದುಕಿಗೆ ಹೊಸದಾದ ಆಯ್ಕೆಹೊಸ ದೃಷ್ಟಿಕೋನಹೊಸದಾದ ಬದುಕುವ ವಿಧಾನ.. ನೋಡನೋಡುತ್ತಲೇಹೊಸ ಜನ್ಮ ಪಡೆದು ಸಂಭ್ರಮಿಸಿದರು ಮಂದಿ…!ಹೊಸ ಹುಟ್ಟು ಪಡೆದಳು ನೆಲದಾಯಿ…!! *************************

ಮನೆಯಲ್ಲೇ ಉಳಿದರು ಜನರು Read Post »

ಅನುವಾದ

ಅನುವಾದ ಸಂಗಾತಿ

ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದು ಮೂಲ: ನೋಷಿ ಗಿಲ್ಲಾನಿ(ಉರ್ದು) ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದುನಿನ್ನೊಡನೆ ಸ್ನೇಹ ಕುದುರಿಸುವಷ್ಟೇ! ಸ೦ಪೂರ್ಣ ಹೊಸ ಕಥೆಯೆ ಇರಬಹುದುದಯವಿಟ್ಟು ವಿಷಯಕ್ಕೆ ಬಾ. ಈ ನೆರಳುಗಳಲ್ಲಿ ನಾ ಮುಳುಗಬಹುದುದಯವಿಟ್ಟು ಬೆಳಗು ನಿನ್ನ ಕಣ್ಣ ದೀವಿಗೆಯ! ನಿನ್ನ ದುಃಖವನ್ನರಿಯದೇ ಇದ್ದರೂನೀ ದುಃಖಿಯಾದರೆ ಹೇಗನಿಸಬಹುದೆ೦ಬ ಕುತೂಹಲ ನನಗೆ. ಹೃದಯ ಹಿ೦ಡಿ ಕೊಡ ಬೇಕು ರಕ್ತ!ನೋಡು, ಬರೆಯ ಬೇಡ ಪದ್ಯ! ಈ ಎಲ್ಲ ಅರ್ಥಗಳನ್ನುನಿರಾಕರಿಸುವುದುಎಷ್ಟು ಕಷ್ಟ ಗೊತ್ತ, ಈ ಆತ್ಮಕ್ಕೆ! *********** ಮೇಗರವಳ್ಳಿ ರಮೇಶ್

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

.ಕಠೋರ ಕಣ್ಣುಗಳು ಮೂಲ:ವಿಲಿಯಂ ಬ್ಲೇಕ್ ವಿ.ಗಣೇಶ್ ಕರಾಳ ರಾತ್ರಿಯಲಂದು ಕಾನನದ ಗರ್ಭದಲಿ ಉರಿಯುತಿಹ ನಿನ್ನ ಆ ಕಣ್ಣುಗಳ ಕಂಡು ಗಡಗಡ ನಡುಗುತ್ತ ನಿನ್ನ ಎದುರಿಸಲಾಗದೆ ಬೆದರುತ್ತ ನಾ ತೆವಳಿದೆ ಅಡಗು ತಾಣಕೆ ಆ ಉರಿಗಣ್ಣುಗಳ ಕ್ರೌರ್ಯವನು ನೋಡುತ ಕಾರ್ಗತ್ತಲಲಿ ನಾನಂದು ಕಳೆದು ಹೋಗಿದ್ದೆ. ನಿನ್ನ ಆ ಕಠೋರ ಕಣ್ಣುಗಳ ಕೆತ್ತಿದವರಾರು? ನಿನ್ನ  ವಿವಿಧಾಂಗಗಳ ಸೃಷ್ಟಿಸಿದವರಾರು? ತಾರೆಗಳ ನಾಚಿಸುವ  ತಾರಾಮಂಡಳದ ಕಳೆಯ ಕುಲುಮೆಯನೆ ತುಂಬಿಹನೆ ನಿನ್ನ ಕಣ್ಣುಗಳಲಿ? ಈ ಪರಿಯ ಉರಿಯನ್ನು ಬಡಿಬಡಿದು ಕೆತ್ತಲು ಆ ಧೈರ್ಯವೆಂತಹದು? ಅ ಶಕ್ತಿಯೆಂತಹದು? ಎಂಥ ಸಲಿಕೆ ಅದು? ಎಂಥ ಸರಪಳಿ ಅದು? ಆ ಮೆದುಳ ಕಡೆದ ಕುಲುಮೆ ಅದಾವುದು? ಎಂಥ ಅಡಿಗಲ್ಲು? ಎಂಥ ಬಿಗಿ ಹಿಡಿತವದು? ಎಂಥ ಎದೆಗಾರಿಕೆಯದು, ನಿನ್ನ ಸೃಷ್ಟಿಸಲು? ತಾರೆಗಳೆಲ್ಲವೂ ತಮ್ಮ  ಗುರಾಣಿಗಳನೆಸೆದು ತಮಗಾಗುತಿರುವ ನೋವನು ಹತ್ತಿಕ್ಕಲಾರದೆ ಸ್ವರ್ಗಕ್ಕೆ ಮುತ್ತಿಡಲು ಕಣ್ಣೀರ ಸುರಿಸುತಲಿ ನಸುನಗುತ ನಿಂತಿಹನೆ ತನ್ನ ಸೃಷ್ಟಿಯ ನೋಡಿ? ಕುರಿಮರಿಯ ಸೃಷ್ಟಿಸಿದ ಆ ಅವನ ಕೈಗಳು ನಿನ್ನನೂ ಸೃಷ್ಟಿಸಿ ಮುದದಿ ಬೀಗುತಲಿಹವೆ? Tiger Tiger Burning Bright By:William Blake

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಸೇಡಿನ ಫಲ ಮೂಲ: ವಿಲಿಯಂ ಬ್ಲೇಕ್(ಇಂಗ್ಲೀಷ್) ಕನ್ನಡಕ್ಕೆ: ವಿ.ಗಣೇಶ್ ನನ್ನ ಗೆಳೆಯನ ಮೇಲೆ ಬಂದ ಮುನಿಸಿಗೆ ನಾನು    ತಾಳ್ಮೆಯಿಂದಲೆ ಅಂದೆ, ‘ಸುಮ್ಮನಿರು’  ಎಂದು    ಮಾಯವಾಗಿಯೆ ಹೋಯ್ತು ಕೋಪವಂದು.    ನನ್ನ ವೈರಿಯ ಮೇಲೆ ಬಂದ ಮುನಿಸಿಗೆ ನಾನು    ಕೋಪದಿಂದಲೆ ನುಡಿದೆ, ‘ಚೆಂಡಾಡು’ ಎಂದು    ಮನದೊಳಗೆ ಬೆಳೆಯಿತದು ನನಗರಿವಿಲ್ಲದೆಲೆ    ಹಗೆತನದ ಬೀಜವದು ಮೊಳಕೆಯೊಡೆಯುತ್ತ    ಸಸಿಯಾಗಿ ಬೆಳೆದು ಮರವಾಗಿ ನಿಂತಿತ್ತು    ಭಯವೆಂಬ ಕಣ್ಣೀರ, ನಗುವೆಂಬ ಎಳೆ ಬಿಸಿಲ    ನೀಡುತ್ತ ಬೆಳೆಸಿದೆನು ಹಗಲು ರಾತ್ರಿಯೆನ್ನದೆಲೆ    ವಂಚನೆಯ ತಂತ್ರಗಳ ನಡುನಡುವೆ ತುರುಕುತ್ತ    ಮರವಾಗಿ ಬೆಳೆಸಿದೆನು ಸೇಡಿನಾ ಗಿಡವನ್ನು    ಮರ ಬೆಳೆದು ಹೂವಾಯ್ತು, ಹೂವರಳಿ ಹಣ್ಣಾಯ್ತು    ನನ್ನ ಅರಿ ನೋಡಿದನು ಥಳಥಳಿಪ ಹಣ್ಣನ್ನು    ಕಿಂಚಿತ್ತು ಯೋಚಿಸಿದಲೆ ನನ್ನ ಹಣ್ಣೆಂದರಿತು    ಕಳಿತ ಹಣ್ಣನು ಕದ್ದು ತಿಂದು ಮುಗಿಸಿದನು    ಕತ್ತಲಿನ ಆವರಣ ಅವನ ಕಣ್ಣನು ಮುಚ್ಚಿ    ನನ್ನ ಖೆಡ್ಡದಲಿ ಅವನ ಎಳೆದು ಕೆಡವಿತ್ತು     ಬೆಳಗಿನಾ ಬೆಳಕಲ್ಲಿ ಸಂತಸದಿ ನೋಡಿದೆನು     ನನ್ನ ಮರದಡಿಯಲ್ಲಿ ಸೆಟೆದು ಬಿದ್ದಾ ವೈರಿಯನು   A Poisonous Tree: By William Blake ******** ವಿ.ಗಣೇಶ್

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಕೊಡಬಲ್ಲಿರಾ ಯಾರಾದರೂ ನನಗೆ ನನ್ನ ಸ೦ಪೂರ್ಣ ಅಸ್ತಿತ್ವವನ್ನ? ಮೂಲ: ನೋಷಿ ಗಿಲ್ಲಾನಿ(ಉರ್ದು) ಕೊಡಬಲ್ಲಿರಾ ಯಾರಾದರೂ ನನಗೆ ನನ್ನ ಸ೦ಪೂರ್ಣ ಅಸ್ತಿತ್ವವನ್ನನನ್ನ ತೋಳುಗಳನ್ನ, ನನ್ನ ಕಣ್ಣುಗಳನ್ನ, ನನ್ನ ಮುಖವನ್ನ? ನಾನೊ೦ದು ನದಿ, ಹರಿದು ಬೆರೆಯುತ್ತಿದ್ದೇನೆ ಮತ್ತದೇ ಕಡಲೊಳಗೆ.ಯಾರಾದರೂ ಹರಿಸ ಬಲ್ಲಿರಾ ನನ್ನನ್ನು ಮರುಭೂಮಿಯಲ್ಲಿ? ಸಾಗುತ್ತಿದೆ ಬದುಕು, ಆದರೆ ನನ್ನ ಬಾಲ್ಯ, ನನ್ನ ಮಿಣುಕು ಹುಳು,ನನ್ನ ಗೊ೦ಬೆ ಗಳನಲ್ಲದೇ ಮತ್ತೇನನ್ನೂ ಬೇಡಲಾರೆ ಈ ಬದುಕಿ೦ದ! ಈ ಹೊಸ ಋತು ಯಾಕೋ ಒಗ್ಗುತ್ತಿಲ್ಲ ನನಗೆ.ನನ್ನನ್ನು ಕರೆದೊಯ್ಯಿರಿ ಹಿ೦ದಕ್ಕೆ ನಗರದ ಹಲವು ಮುಖಗಳಲ್ಲಿ ನನ್ನೊಳಗಿನೊಳಗನ್ನು ಓದಬಲ್ಲಮುಖವೊ೦ದನ್ನು ಪಡೆವ ಹ೦ಬಲದ ನನ್ನ ಹಳೆಯ ಕನಸುಗಳಿಗೆ! ಸುದೀರ್ಘ ಕಾಲದಿ೦ದ ನನ್ನ ಬದುಕೊ೦ದು ಸುಳಿಗೆ ಸಿಕ್ಕ ನಾವೆ!ಓ ದೇವರೇ, ಮುಳುಗಿಸು ಅದನ್ನು ಇಲ್ಲವೇ ಮರಳಿಸು ಮರುಭೂಮಿಗೆ! ******** ಮೇಗರವಳ್ಳಿ ರಮೇಶ್

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಹೂವಿನ ಹೃದಯ ಚೂರಾಗಿದೆ ಮೂಲ: ನೋಷಿ ಗಿಲ್ಲಾನಿ(ಪಾಕಿಸ್ತಾನಿಕವಿಯಿತ್ರಿ) ಕನ್ನಡೆ: ಮೇಗರವಳ್ಳಿರಮೇಶ್ ಮೇಗರವಳ್ಳಿ ರಮೇಶ್ ಹೂವಿನ ಹೃದಯ ಚೂರಾಗಿದೆಅದರ ಸುಗ೦ಧ ತ೦ಗಾಳಿಯೊಡನೆ ಸ್ನೇಹ ಬೆಸೆದಿದೆ. ಯಾರು ಹೇಳಬಲ್ಲರು ಹಾಳುಗೆಡವಿದವರಾರೆ೦ದು ಹೂವನ್ನು?ದ೦ಡನೆಯ ತೀರ್ಪಿನಡಿಯಲ್ಲಿ ಕಳೆಯುತ್ತಿದ್ದೇವೆ ನಾವು ಈ ಸ೦ಜೆಯನ್ನು! ಯಾರೂ ಈಗ ಪಯಣ ಕೈಗೊಳ್ಳುವ೦ತಿಲ್ಲಆದರೂ ನೀ ಇಚ್ಛಿಸಿದರೆ ನಾ ಬರಬಲ್ಲೆ. ಈ ನಗರದ ಎಲ್ಲ ಬೀದಿಗಳೂ ಮಲಗಿವೆಎಚ್ಚರವಾಗಿರುವುದೀಗ ನನ್ನ ಪಾಳಿ. ಈ ಸ೦ಜೆಯ ಅನಿಶ್ಚತೆಯಲ್ಲಿಎಲ್ಲವೂ ಕ೦ಪಿಸುತ್ತಿವೆ. ನಮ್ಮ ಮಿಲನವನ್ನು ನಾವು ಹೇಗೆ ತಾನೇ ಸ೦ಭ್ರಮಿಸ ಬಲ್ಲೆವುನನ್ನ ಹೃದಯ ಅಗಲಿಕೆಯ ಹೆದರಿಕೆಯಲ್ಲಿ ತೊಳಲುತ್ತಲಿರುವಾಗ? ಎಲ್ಲವನ್ನೂ ಮೀರಿ ಆಶಿಸುತ್ತಿದೆ ನನ್ನ ಹೃದಯಈ ಸ೦ಜೆಯನ್ನು ನಾವು ನಮ್ಮದಾಗಿಸಿಕೊಳ್ಳೋಣ **********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಸ್ವಾಮಿ ಭಕ್ತಿ ಮೂಲ:ವಿಲಿಯಂ ವರ್ಡ್ ವರ್ತ್ ಕನ್ನಡಕ್ಕೆ: ವಿ.ಗಣೇಶ್ ಬೊಗಳುವ ಸಪ್ಪಳವು ಕುರುಬನಿಗೆ ಕೇಳಿಸಿತು ನರಿಯದೋ ನಾಯಿಯದೋ ಕೂಗಿರಬೇಕೆಂದು ಅರೆ ಕ್ಷಣ ನಿಂತು ಹುಡುಕಾಡಿದನು ದಶದಿಕ್ಕುಗಳಲಿ. ಹರಿದು ಹಾಸಿದ್ದ ಕಲ್ಲುಬಂಡೆಗಳ sಸುತ್ತಲೂ ಹುಡುಕಾಡಿದಾಗ ತುದಿಯ ಗಿಡಗಂಟೆಗಳ ಮಡಿಲಲ್ಲಿ ಅಲುಗಾಡುತ್ತಿರುವ ಹಸಿರು ಪೆÇದೆಯೊಂದು ಕಾಣಿಸಿತು. ಅದರ ಅಡಿಯಲಿ ಕಣ್ಣೀರಿಡುತಿರುವ ಶುನಕವೊಂದು ಪೊದೆಯ ಕಡೆಗೇ ವೀಕ್ಷಿಸುತ ಅಳುವುದ ಕಾಣಿಸಿತು.   ಅತಿ ಸೂಕ್ಷ್ಮಮತಿಯಾದ ಆ ಶುನಕವ ನೋಡಿದರೆ ಕಾಡಿನಲಿ ಹುಟ್ಟಿ ಬೆಳೆದ ಶುನಕವಲ್ಲವೆನಿಸಿತು. ಅದರ ಅಳುವಿನಲೇನೋ ಘೋರ ದುಃಖವಿಹುದೆಂದು ಭಾವಿಸಿದ  ಕುರುಬನದರ ಚಲನವ ಗಮನಿಸಿದಾಗ ಅದರ ಸನಿಯದಲಾರ ಸುಳಿವು ಗೋಚರಿಸಲಿಲ್ಲ. ‘ಕಲ್ಲುಬಂಡೆಗಳಿಂದಾವರಿಸಿದ ಆ ಭಯಾನಕ ಸ್ಥಳದಲಿ ಸದ್ದುಗದ್ದಲಗಳಿನಿತು ಕಿವಿಗೆ ಅಪ್ಪಳಿಸದಿರುವಾಗ ಆ ಮೂಕ ಪ್ರಾಣಿ ಕುಳಿತೇನು ಮಾಡತಿದೆಯಲ್ಲಿ? ಎಂದು ಚಿಂತಿಸುತಿದ್ದನು ಆ ಕುರುಬನಲ್ಲಿ   ಸುತ್ತಲೂ ಜಲಾವೃತವಾದ ಆ ಏಕಾಂತ ಸ್ಥಳವು ಜೂನ್ ಮಾಹೆಯಲೂ ಮಂಜಿನಿಂದಲಿ ಮಸುಕಾಗಿತ್ತು ಎದುರಿನಲಿ ದೊಡ್ಡ ಇಳಿಜಾರು ಬಂಡೆ ಜೊತೆ ಕೆಳಗೆ ಕಾಣುತಿದೆ ತುಂಬಿದ ಕೆರೆಯೊಂದು. ಬೆಟ್ಟದ ತಳದಲ್ಲಿ ಅನತಿ ದೂರದ ಅಂಚಿನಲಿ ಹೆದ್ದಾರಿಯೊಂದು ಹಾದು ಹೋಗುತಲಿದೆ. ಅಲ್ಲೊಂದು ಇಲ್ಲೊಂದು ಗುಡಿಸಿಲುಗಳ ನಡುವೆ ಬಿತ್ತಿ ಬೆಳೆದಂತ ಹಸಿರಾದ ಹೊಲಗಳ ಜೊತೆ ಕಾಲು ಹಾದಿಗಳ  ಕುರುಹು ಕಾಣುತಿವೆ ಸುತ್ತಲು.   ನೆಗೆ ನೆಗೆದು ಈಜಾಡುತಿರುವ ಕೊಳದ ಮೀನುಗಳು ಚೀತ್ಕರಿಸುವ ಕೂಗು ಎಲ್ಲೆಡೆಗು ಹರಡುತಿದೆ. ಬಂಡೆಗಳ ತಳದಲಿ ವಟಗುಟ್ಟುವಾ  ಕಪ್ಪೆಗಳ ಗದ್ದಲವು ಇತ್ತ  ತಾ ಕೇಳಿ ಬರುತಲಿದೆ. ಆ ಬನದ ಸಿರಿಯನ್ನು ಹೆಚ್ಚಿಸಲೋ ಎಂಬಂತೆ ಕಾಮನ ಬಿಲ್ಲು ಉದಯಿಸಿದೆ ಬಾನಿನಂಚಿನಲಿ. ಚಲಿಸುತಿಹ ಮೋಡಗಳ ಗುಡುಗು ಸಿಡಿಲಿನಾರ್ಭಟವ ತಡೆಯಲೆಂಬಂತೆ ತಿಳಿಯಾದ ರವಿಕಿರಣಗಳು ಅವುಗಳ ಮಾರ್ಗದಿ ಬಂದು ಬೆಳಕ ಚೆಲ್ಲುತಿವೆ.   ಈ ಎಲ್ಲ ಯೋಚನೆಗಳಿಂದ ಹೊರಬರಲಾಗದೆ ಕುರುಬ ನಿಂತಿದ್ದ ಮಾರ್ಗ ಮಧ್ಯದಿ ಅಂದು ಬೆಟ್ಟದ ಮೇಲಿರುವ ಕಲ್ಲುಬಂಡೆಗಳ ದಾಟಿದವ ಶುನಕವನು ಅನುಸರಿಸಿ ಹುಡುಕಾಡುತಿರುವಾಗ ಭಯಭೀತನಾಗಿ ಬೆದರಿ ನಿಂತನಾ ಕಣಿವೆಯಲಿ. ಬಿದ್ದ ಮಾನವ ಅಸ್ಥಿಪಂಜರವೊಂದನು ಕಂಡು. ಆಶ್ಚರ್ಯಚಕಿತನಾಗಿ ಬೆದರಿದ ಕುರುಬನು ಅದರ ಚರಿತೆಯನರಿಯಲು ಸುತ್ತಲೂ ದಿಟ್ಟಿಸಿದ.     ಆ ಭಯಾನಕವಾದ  ಬಂಡೆಗಳ ಮೇಲಿಂದ ಭಯದಿಂದ ಆ ವ್ಯಕ್ತಿ ಉರುಳಿ ಬಿದ್ದಿರಬಹುದು ಮೇಲಕೇರಲಾಗದೆಯೆ ಉಸಿರು ನಿಂತಿರಬಹುದು ನಡೆದ ಘಟನೆಯ ಬಗ್ಗೆ ಹೀಗೆ ಊಹಿಸಿದನು. ಅವನ ಹೆಸರೇನು? ಎಲ್ಲಿಂದ ಬಂದಿಹನು? ಅಲ್ಲಿಗೆ ಬರುವ ಕಾರಣವೇನಿರಬಹುದೆನ್ನುತ ಮನದೊಳಗೇ ಯೋಚಿಸುತ ನಿಂತ ಬೆರಗಾಗಿ   ದಟ್ಟ ಕಾನನದ ಕಲ್ಲು ಬಂಡೆಗಳ ನಡುವಿಂದ ಶುನಕ ಪರಿತಪಿಸುತಿರಬೇಕು ಬಹುದಿನಗಳಿಂದ ಅಳುವಿನ ಮೂಲಕವೇ  ತರ್ಪಣವ ಕೊಡುತಿರುವ ಅದರ ನೋವಿನ ಆಳವನು ಬಣ್ಣಿಸಲಸದಳವು ಆ ದುಃಖದ ಕಡಲಿಂದ ಹೊರಬರಲಾಗದೆಲೆ ರೋದಿಸುತಿದೆ ಈ ಶುನಕ ಮೂರು ತಿಂಗಳುಗಳಿಂದ ದಿಕ್ಕುಕಾಣದ ಆ ದಟ್ಟ ಅಡವಿಯ ಗರ್ಭಭಾಗದಲಿ, ಆದರ ಮಾರ್ಮಿಕ ಕತೆಯ ಊಹಿಸಿದನಿಂತು.   ನತದೃಷ್ಟ ಪಯಣಿಗನು ಮರಣಿಸಿದ  ದಿನದಿಂದ ಆ ಸ್ಥಳವನು ಕಾಯುತಿದೆ ಹಗಲು ರಾತ್ರಿಯೆುನ್ನದೆಲೆ ಅಳುತಲಿದೆ ಸನಿಹದಿ ಕುಳಿತು ಅವನನೇ ನೋಡುತ ಮೂರು ತಿಂಗಳ ಕಾಲ ಹೇಗೆ ಕಳೆಯಿತೋ ಸಮಯವ ಅನ್ನಾಹಾರಗಳಿಲ್ಲದೆ ಹಸಿವಿನಲಿ ಬಳಲುತ ಮಾನವನ ಮನಕಿಂತ ಮಿಗಿಲಾದ ಹೃದಯವನು ದಯಪಾಲಿಸಿದವನಾರೋ ಆ ಮುಗ್ದ ಪ್ರಾಣಿಗೆ? ಎನುತ ಚಿಂತಿಸುತಲಿದ್ದ ಆ ಮೂಕಪ್ರಾಣಿಯ ನೋಡುತ. ******   Fedility By William Wordsworth

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಗ್ರಂಥಾಲಯದಲ್ಲಿ ಮೂಲ ಮಲಯಾಲಂ:ರವೀಂದ್ರನ್ ಪಾಡಿ ಕನ್ನಡಕ್ಕೆ:ಚೇತನಾ ಕುಂಬ್ಳೆ ಗ್ರಂಥಾಲಯದಲ್ಲಿ ಎಲ್ಲವೂಬಂಧನಕ್ಕೊಳಗಾಗಿವೆ.ಕಪಾಟಿನ ತುಂಬಪುಸ್ತಕಗಳು ಎಷ್ಟೊಂದು ಬದುಕುಗಳುಎಷ್ಟೊಂದು ಕಾಲ,ಎಷ್ಟೊಂದು ಜ್ಞಾನಗಳುಪೆಟ್ಟಿಗೆಯೊಳಗೆ ಅದರಲ್ಲಿ ಕೆಲವುಮಮ್ಮಿಗಳ ಹಾಗೆನಿತ್ಯ ವಿಶ್ರಾಂತಿ ಪಡೆಯುತ್ತಿವೆಗಾಜಿನ ಮನೆಯೊಳಗೆ ಒಂದಿಷ್ಟು ಉಸಿರುಮತ್ತೊಂದಿಷ್ಟು ಬೆಳಕುಹಂಬಲಿಸಿತುಅವುಗಳನ್ನು ತಲುಪಲು ಒಂದು ಪ್ರಪಂಚವೇ ಅಲ್ಲವೇಎಲ್ಲ ಕೃತಿಗಳೂನಾನಂದುಕೊಂಡೆಮನದೊಳಗೆ ತೆರೆದಿಡಬೇಕು ನಿತ್ಯವೂಗ್ರಂಥಾಲಯಗಳ ಬಾಗಿಲುಗಳನ್ನುಜೊತೆಗೆ ಕಪಾಟುಗಳಬಾಗಿಲುಗಳನ್ನೂ ಹಾಳೆಗಳನ್ನೊಮ್ಮೆ ತಿರುವಿ ಹಾಕಿಗಂಧವನ್ನು ಆಘ್ರಾಣಿಸಬೇಕುಪುನಃ ಸ್ಥಾನ ಬದಲಿಸಿಇಡಬೇಕಿದೆ ಅವುಗಳನ್ನೂ ತಲುಪಿ ಬಿಡಲಿವರ್ತಮಾನದ ವಿಚಾರಗಳುಹೊಸ ಬೆಳಕು,ಹೊಸ ಗಾಳಿ ***********

ಅನುವಾದ ಸಂಗಾತಿ Read Post »

ಅನುವಾದ

ದ್ವೇಷ

ಇಂಗ್ಲೀಷ್ ಮೂಲ: ಸ್ಟೀಪನ್ಸ್ ಕನ್ನಡಕ್ಕೆ: ವಿ.ಗಣೇಶ್ ವಿ.ಗಣೇಶ್ ಕಗ್ಗತ್ತಲ ಆ  ಕರಾಳ ರಾತ್ರಿಯಲಿ ಬಂದುಎದುರಿಗೆ ನಿಂತ ಆ ನನ್ನ ಕಡುವೈರಿದುರುದುರುಗುಟ್ಟಿ ನನ್ನ ನೋಡುತ್ತಿದ್ದಾಗತುಟಿಯದುರುತ್ತಿತ್ತು, ತನು ನಡುಗುತ್ತಿತ್ತು. ಹರಿದು ತಿನ್ನುವ ತೆರದಿ ವೈರಿಯ ನೋಡುತದೂರ್ವಾಸನಂತೆ ಉರಿಗಣ್ಣು ಬಿಟ್ಟಾಗನನ್ನ ಎರಡು ಕಣ್ಣುಗಳು ಕಾದ ಕಬ್ಬಿಣದಂತೆಕೆಂಪಾಗಿ ಕೆಂಡ ಕಾರುತ್ತಾ ಉರಿಯುತ್ತಲಿದ್ದವು ಶಾಂತಿಸಹನೆಯ ಮೂರ್ತಿಯಾದ ನನ್ನ ವೈರಿನಸುನಗುತ “ಗೆಳೆಯಾ, ಏಕಿಷ್ಟು ಉಗ್ರನಾಗಿರುವೆ?ಬಾಲ್ಯದಿಂದಲೂ ಕೂಡಿ ಕಳೆದ ಆ ಸಿಹಿ ದಿನಗಳನ್ನುಅದಾಗಲೇ ಮರೆತುಬಿಟ್ಟೆಯಾ?” ಎನ್ನ ಬೇಕೇ? “ಏನೋ ನಡೆಯ ಬಾರದ ಕಹಿ ಘಟನೆ ನಡೆದುನಮ್ಮಿಬ್ಬರ ಹಾದಿಯಲ್ಲಿ ಒಡಕಾದ ಮಾತ್ರಕ್ಕೆನಮ್ಮಿಬ್ಬರ ಪ್ರೀತಿಯ ತೊರೆ ಬತ್ತಿ ಬರಡಾಗಿಬದುಕು ಇಲ್ಲಿಗೇ ಮುಗಿದು ಹೋಯಿತೆನ್ನುವೆಯಾ?” “ನಿನ್ನ ಬತ್ತಳಿಕೆಯ ವಿಷಪೂರಿತ ಮೊನಚಾದಬಾಣಗಳೆಲ್ಲಾ ಬರಿದಾದಾಗ, ‘ನಾವೇಕೆ ಹೀಗೆದ್ವೇಷಿಸುತ್ತಿದ್ದೆವು?’ ಎಂಬುದಕ್ಕೆ ಉತ್ತರಿಸಬಲ್ಲೆಯಾ?ಅರ್ಥವಿಲ್ಲದ ಈ ದ್ವೇಷಕ್ಕೆ ಕೊನೆಯಿಲ್ಲವೇ?” ಎಂದಾಗ ಆ ವೈರಿಯ ಮುಂದೆ ತುಂಬಾ ಚಿಕ್ಕವನಾಗಿಮಾತೇ ಹೊರಡದೆ ಮೂಕನಾಗಿಬಿಟ್ಟೆತಗ್ಗಿಸಿದ ತಲೆಯನಾಗ ಮೇಲೆತ್ತಲಾರದೇಅದಾಗಲೇ  ತಣ್ಣಗಾಗಿ ಕುಸಿಯ ತೊಡಗಿದೆ ಪ್ರೀತಿಯ ಸಿಹಿ ಕೋಪದ ಕಹಿಯ ಕರಗಿಸಿದಾಗನಾಚಿ ನೀರಾಗುತ್ತ ಅವನತ್ತ ನೋಡಿದೆನಮ್ಮಿಬ್ಬರ ದೃಷ್ಟಿ ಮತ್ತೆ ಕಲೆತಾಗ, ಬಾಲ್ಯದನೆನಪು ಮನದಾಳದಿಂದ ಚಿಮ್ಮತೊಡಗಿತು ಆಗ ನಾನೇನು ಹೇಳುವೆನೋ ಎಂದು ಕಾತರದಿನನ್ನೆಡೆಗೆ ನೋಡುತ್ತಿದ್ದವನ ಎದುರಿಸಲಾಗದೇಎಲ್ಲಿ ಹಿಡಿದು ಮುತ್ತಿಡುವೆನೋ ಏನೋ ಎಂದುಮುಖನೋಡಲಾಗದೇ ಹಾಗೇ ಒಳಕ್ಕೆ ಓಡಿದೆ. ಬಾಡಿ ಮುದುಡಿದ  ಗೆಳೆತನದ ಸಸಿ ಅಂದುಚಿಗುರೊಡೆದು ಹಸಿರಾಗಿ ಬೆಳೆಯತೊಡಗಿದಾಗನನ್ನ ಕೋಪದ ಬಂಡೆ ಅದಾಗಲೇ ಕರಗಿ ನೀರಾಗಿಚಿಗುರುತಿಹ ಆ ಸಸಿಗೆ ನೀರೆರೆಯತೊಡಗಿತ್ತು. Hate: By Stephans ********

ದ್ವೇಷ Read Post »

ಅನುವಾದ

ಹೂವಿನ ಹಾಡು

ಖಲೀಲ್ ಗಿಬ್ರಾನ್ ನ ಆಂಗ್ಲ ಕವಿತೆಯಾದ “Song of Flower”ನ ಭಾವಾನುವಾದ. ಚೈತ್ರಾ ಶಿವಯೋಗಿಮಠ ಸೃಷ್ಟಿ ಉಲಿದು ಪುನರುಚ್ಛರಿಸಿದ ಮೆಲುದನಿಯು ನಾನು  ನೀಲ ನಭದಿಂದುದುರಿ, ಹಸಿರ ಹಾಸಿನ ಮೇಲೆ  ಬಿದ್ದ ನಕ್ಷತ್ರ ನಾನು ಪಂಚಭೂತಗಳೊಂದಿಗಿನ  ಸಮಾಗಮದಿಂದ   ಮಾಗಿಯು ಗರ್ಭಧರಿಸಿ,  ಚೈತ್ರ ಹಡೆದು, ವೈಶಾಖದ ಮಡಿಲಲಿ ಆಡಿ ಬೆಳೆದು, ಶರದ್ ಶಯ್ಯೆಯ ಮೇಲೆ  ಚಿರನಿದ್ರೆಗೆ ಜಾರುವ ಮಗಳು ನಾನು  ಅರುಣೋದಯದಿ ತಂಗಾಳಿಯೊಂದಿಗೆ  ಸಂಘಟಿಸಿ ಬೆಳಕಿನಾಗಮನವ ಸಾರುವೆನು . ಸಂಧ್ಯಾಕಾಲದಿ  ಹಕ್ಕಿಗಳೊಡಗೂಡಿ,  ನಿರ್ಗಮಿಸುವ ಬೆಳಕ ಬೀಳ್ಕೊಡುವೆನು . ಬಯಲುಗಳು ನನ್ನ ಸುಂದರ ಬಣ್ಣಗಳಿಂದ  ವರ್ಣರಂಜಿತವಾಗಿ ಸಿಂಗರಿಸಿಕೊಂಡಿವೆ , ಗಾಳಿ ನನ್ನ ನಸುಗಂಪಿನಿಂದ ಸುವಾಸಿತ. ನಿಶೆಯ ಕಂಗಳು ನಾನು ಸುಖನಿದ್ರೆಗೆ  ಜಾರುತ್ತಿದಂತೆ ನನ್ನ ಕಾವಲು ಕಾಯುವವು. ಬೆಳಕ ಏಕೈಕ ಕಣ್ಣಾದ  ದಿನಮಣಿಯ ಏಳುತಲಿ ದಿಟ್ಟಿಸುವೆನು . ಮದಿರೆಗೆ ಇಬ್ಬನಿಯ ಸೇವಿಸುವೆ, ಹಕ್ಕಿಗಳ ಚಿಲಿಪಿಲಿಯ ಆಲಿಸಿ, ಲಯಬದ್ಧವಾಗಿ ತೊನೆದಾಡುವ ಹುಲ್ಲಿನ  ತಾಳಕೆ ನಾ ಕುಣಿಯುವೆ. ಪ್ರೇಮಿಯ ಪ್ರೇಮ ಕಾಣಿಕೆ ನಾ,  ಮದುವೆಗೆ ಹೂಮಾಲೆ ನಾ, ಸಂತಸದ ಕ್ಷಣಗಳ ಸವಿನೆನಪು ನಾ,  ಮಡಿದ ಜೀವಕೆ ಕೊನೆಯ ಕಾಣಿಕೆ ನಾ, ಸುಖ-ದುಃಖಗಳ ಅವಿಭಾಜ್ಯ ಅಂಗ ನಾ. ಮನುಜ ಅರಿಯಬೇಕಾದ್ದು ಇದು ಕೇಳು  ಸದಾ ನಲಿವಿನ ಬೆಳಕ ತಲೆ ಎತ್ತಿ ನೋಡುವೆ. ನೋವಿನ ನೆರಳ ಎಂದಿಗೂ ತಲೆಬಾಗಿ ನೋಡೆನು, **********

ಹೂವಿನ ಹಾಡು Read Post »

You cannot copy content of this page

Scroll to Top