ಅನುವಾದಿತ ಕವಿತೆ ಕನ್ನಡ ಮೂಲ: ಸುನೀತ ಕುಶಾಲನಗರ ಇಂಗ್ಲೀಷಿಗೆ:ಸಮತಾ ಆರ್. ಬೇಲಿ ಬೇಲಿ ಹಾಕಲೇಬೇಕೆಂಬುದು ಬಹುದಿನದ ಕನಸು ಹಾಗೆ,ಹೀಗೆ ಬೇಕಾದ ಸರಕು ಜೋಡಣೆ, ಭರದ ಸಿದ್ಧತೆ ನಮ್ಮದೇ ಭದ್ರತೆಯ ಕೋಟೆಗೆ ಅದೆಂತ ಉತ್ಸಾಹ ಸಂಧಿ,ಗೊಂಧಿಗಳಲೂ ಹಾವು,ಜಂತೂ ನುಸುಳದಂತೆ ಗಿಡ ನೆಟ್ಟು ಬೇಲಿಯಲೂ ಹೂಗಳ ನಿರೀಕ್ಷೆ. ಕನಸಿನಂತೆ ಮೊಗ್ಗು ಬಿರಿದೇ ಇಲ್ಲವೆಂದಲ್ಲ ಅವು ಆರಂಭ ಶೂರತ್ವ ಗಿಡವಿರಬೇಕು ಅರಳಿ ಉದುರಿದ ಬೀಜ ಚಿಗುರಲೇಕೋ ಆಕಳಿಸಿ ಎದುರಿದ್ದ ಬೇಲಿಯಲಿ ನಳ ನಳಿಸಿದ ನೀಲಿ ಹೂವಲಿ ಬಿದ್ದ ಕಣ್ಣ ಕೀಳಲಾಗದೆ ಝೇಂಕರಿಸುವ ಹುನ್ನಾರ ಕನಸಿನ ಬೇಲಿ ಸೊರಗಿ ಕೊರಡಾಗುವುದನೊಪ್ಪದೆ ಕೊನರಿಸಲೇಬೇಕೆಂಬ ಹಠಕ್ಕೆ ಬಿದ್ದು ಹನಿಸಿದಷ್ಟೂ ಕಣ್ಣು ಕೊಳವಲ್ಲ ಕಡಲು. ಬೇಲಿ ತುಂಬಾ ಅಂತರದ ಬಿರುಕು ಸಲಗ ಪಳಗಿಸುವಂತೆ ಕಾಷ್ಠ ಪಲ್ಲವಿಸಲು ಹೈರಾಣು. ಮಳೆ ಹೊಯ್ಯುತ್ತಿದೆ ಈಗ ಹೊಸ ಭರವಸೆಯ ಬೀಜ ತಂದಿರಿಸಿರುವೆ ತಡ ಮಾಡದೆ ಬೇಲಿಗುಂಟ ಬಿತ್ತಬೇಕಿದೆ. . A FENCE Since ages,Dreamt of building a fence,Around our own castle.Desparately collected,This and that andWhatever needed,With suchA vigour and speed. Even the smallest of gapsWere filled with plants,For not to let any snakeOr a tiny worm to creep in. The buds did bloom,As I had dreamt,Every plant at firstBlossomed,Like a new knight,Ready to fight.But the seed from the pod,Yawned to sprout. Then could notTake the eyes offA beaming blue flowerOn the opposite fenceA plot started to buzz. As my fence of dreamsCan’t be seen so dried.Eyes shed to fillNot only pondsBut oceans.Then determinedTo bringBack to life All the sprigs dried. Struggling off to fillThe gaps of fence,Like fighting to tameA wild elephant. Now, it has startedTo rain again,Have bought someSeeds of hope,To sow along the line Of the fence of mine. *****