ಪುಸ್ತಕ ಸಂಗಾತಿ
ದಿ 29ರಂದು ಕವಿ ಮಕಾನದಾರರ
ದರ್ವೇಶಿ ಪದ್ಯ ಜನಾರ್ಪಣೆ


ಕನ್ನಡ ಪುಸ್ತಕ ಪ್ರಾಧಿಕಾರದ ಗ್ರಂಥಾಲಯ ಅನುಷ್ಠಾನ ಯೋಜನೆಯ ಜಿಲ್ಲಾ ಸಂಚಾಲಕ, ಹಿರಿಯ ಕವಿ ಎ.ಎಸ್.ಮಕಾನದಾರ ಅವರ ದರ್ವೇಶಿ ಪದ್ಯ ಕವನ ಸಂಕಲನ ದಿ 29 ರ ರವಿವಾರ ದಂದು ಹೂವಿನಹಡಗಲಿಯ ಸರ್ಕಾರಿ ನೌಕರರ ಭವನದಲ್ಲಿ ಜನಾರ್ಪಣೆ ಗೊಳ್ಳಲಿದೆ. ಹೂವಿನ ಹಡಗಲಿಯ ಸಿಂಚನ ಪ್ರಕಾಶನ ಮತ್ತು ಮೇ ಸಾಹಿತ್ಯ ಮೇಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ
ಕುವೆಂಪು ವಿಶ್ವ ವಿದ್ಯಾಲಯ ಮತ್ತು ವಿಜಯನಗರ ಜಿಲ್ಲೆಯ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯಗಳ ವಿವಿಧ ಪದವಿ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆ ಯಾದ ಕವಿತೆಗಳುಳ್ಳ ದರ್ವೇಶಿ ಪದ್ಯ ಕವನ ಸಂಕಲನವನ್ನು ಕವಿ ಇಸ್ಮಾಯಿಲ್ ಯಲಿಗಾರರವರು ಲೋಕಾರ್ಪಣೆಗೊಳಿಸುವರು.
ಹಾವೇರಿ ಜಿಲ್ಲೆ ಹಾನಗಲ್ ನ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥೆ ಡಾ. ಪುಷ್ಪ ವತಿ ಶೆಲವಡಿಮಠ ಅವರು ಕೃತಿ ಅವಲೋಕನ ಮಾಡುವರು.
2023ನೇ ಸಾಲಿನ ಸಿಂಚನ ಕಾವ್ಯ ಪ್ರಶಸ್ತಿ ಬೀಳಗಿಯ ಸೋಮಲಿಂಗ ಬೇಡರ ಆಳೂರ ಅವರ ಗೋರಿ ಮತ್ತು ಧರ್ಮ, 2024ನೇ ಸಾಲಿನ ಕಾವ್ಯ ಪ್ರಶಸ್ತಿ ಗೆ ಬಾಚಿಗೊಂಡನ ಹಳ್ಳಿಯ ಹಿರಿಯ ಸಾಹಿತಿ ಹುರಕಡ್ಲಿ ಶಿವಕುಮಾರ್ ಅವರ ಕನ್ನಡ ಮಾನಿಪ್ಪಾ ನಾಡು ಕೃತಿಗಳು ಆಯ್ಕೆ ಆಗಿದ್ದು ಪ್ರತಿ ಪುರಸ್ಕಾರವೂ 5ಸಾವಿರ ನಗದು ಎರಡು ಸಾವಿರ ಮುಖ ಬೆಲೆಯ ಪುಸ್ತಕ, ಸ್ಮರಣಿಕೆ ನೀಡಿ ಸನ್ಮಾನಿಸಲಾಗುವದು
ಹಿರಿಯ ಸಾಹಿತಿ ರಾಮಪ್ಪ ಕೋಟಿಹಾಳ್ ಪುರಸ್ಕೃತ ಕೃತಿಗಳ ಪರಿಚಯ ಮಾಡಲಿದ್ದು ತೊ ಮ ಶಂಕ್ರಯ್ಯ ಸಮಾರಂಭ ದ ಅಧ್ಯಕ್ಷ ತೆ ವಹಿಸುವರು
ಇದೆ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಲಗುವದೆಂದು ಪ್ರಕಾಶಕಿ ಸವಿತಾ ಅಂಗಡಿ, ಸಂಚಾಲಕ ಸುರೇಶ್ ಅಂಗಡಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ





ಧನ್ಯವಾದಗಳು ಸರ್ ಸುದ್ದಿ ಪ್ರಕಟಣೆ ಮಾಡಿದ್ದಕ್ಕೆ