ಕಾವ್ಯ ಸಂಗಾತಿ
ಡಾ. ಗೀತಾ ದಾನಶೆಟ್ಟಿ ಬಾಗಲಕೋಟ
“ನೀ ನನ್ನ ಕವಿತೆ”

ದೇಹಕ್ಕೆ ಉಸಿರಾದೆ
ಭಾವಕ್ಕೆ ಬೆಸುಗೆ
ಮೌನಕ್ಕೆ ಮಾತಾದೆ
ಮಾತಿಗೆ ಮುತ್ತಾದೆ
ನೀ ನನ್ನ ಕವಿತೆ
ಸ್ನೇಹಕ್ಕೆ ಗೆಳೆಯ
ಪ್ರೇಮಕ್ಕೆ ಇನಿಯ
ಹೃದಯಕ್ಕೆ ಸನಿಹ
ಪ್ರೀತಿಗೆ ನೀ ಪ್ರಾಣ
ನೀ ನನ್ನ ಕವಿತೆ
ಅರಿವಿಗೆ ಗುರು ನೀನು
ಸಾಧನೆಗೆ ಸ್ಪೂರ್ತಿ
ಜ್ಞಾನದ ದೇಗಲವು
ಬಾಳಿಗೆ ನೀ ಬೆಳಕು
ನೀ ನನ್ನ ಕವಿತೆ
ಮಮತೆಗೆ ತಾಯ್ಮಡಿಲು
ಮುಗ್ದತೆಗೆ ನೀ ಮಗವು
ಭೇದವಿಲ್ಲದ ಒಲವು
ಸಂಬAಧಕ್ಕೆ ಜೀವ ಸೆಲೆ
ನೀ ನನ್ನ ಕವಿತೆ
ರಾಗಕ್ಕೆ ಸ್ವರ ನೀನು
ನೆರಳಿಗೆ ನೀ ಮರವು
ನೋವಿಗೆ ನಲಿವು
ಮನಸಿಗೆ ಮುದವು
ನೀ ನನ್ನ ಕವಿತೆ
ಬರಹಕ್ಕೆ ಮುಣ್ಣುಡಿಯು
ನುಡಿಗೆ ನೀ ಜೀವನಾಡಿ
ಬದುಕಿಗೆ ಬರವಸೆ
ಬಾಳಸಂಗಾತಿ ನೀನು
ನೀ ನನ್ನ ಕವಿತೆ
ಡಾ. ಗೀತಾ ದಾನಶೆಟ್ಟಿ




