ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅತಿಯಾದ ನಂಬಿಕೆಗೆ *ದ್ರೋಹವಾಗಿದೆ* ಸಖ
 ನನ್ನವರಿಂದ ನನಗೀಗ *ಮೋಸವಾಗಿದೆ* ಸಖ
 
ಅತಿಯಾದರೆ ಅಮೃತವು ವಿಷವಾಗುವುದಲ್ಲವೇ
ಬಣ್ಣದ ಮಾತುಗಳಿಗೆ ಬೆಲೆ *ಹೆಚ್ಚಾಗಿದೆ* ಸಖ

ಕಣ್ಣೀರ ಹನಿಗಳು ಜಾರುತಿವೆ ಪ್ರತಿದಿನ ನೊಂದು
ಪ್ರಖರ ಸೂರ್ಯಂಗೀಗ ಗ್ರಹಣ *ಹಿಡಿದಿದೆ* ಸಖ

 ಬೆನ್ನಿಗೆ ಚೂರಿ ಹಾಕುವವರೇ ಕಾಣುತಿಹರು ಇಲ್ಲಿ
ನಂಬಿಕೆಯ ಗೋಪುರವು *ಕುಸಿಯುತಿದೆ* ಸಖ

 ಈ ರೇಖೂ ಎದೆಗುಂದದೆ ಮುಂದೆ  ಸಾಗುತಿಹಳು
ನಮ್ರ ನಡೆಯ ಅಗ್ನಿ ಪರೀಕ್ಷೆ *ನಡೆಯುತ್ತಿದೆ* ಸಖ


About The Author

Leave a Reply

You cannot copy content of this page

Scroll to Top