ಮಹಿಳಾದಿನದ ವಿಶೇಷ
ಲತಾ ಎ ಆರ್ ಬಾಳೆಹೊನ್ನೂರು
ದಿಟ್ಟ ಮಹಿಳೆ


ತಂದೆ ತಾಯಿಯರ ಮುದ್ದಿನ ಮಗಳಿವಳು
ಅಣ್ಣಾ ಅಕ್ಕಾ ರ ಮುದ್ದಿನ ತಂಗಿಯಿವಳು
ಎಲ್ಲರ ಜೊತೆ ಸಮನಾಗಿ ಬೆರೆತವಳು
ಸಂತಸದ ಸೆಲೆ ಕುಟುಂಬಕ್ಕೆ ಕೊಟ್ಟವಳು
ವಿದ್ಯೆಯನು ಚಂದದಿ ಶಾಲೆಯಲಿ ಕಲಿತವಳು
ಬದುಕಿಗೆ ಬಾಳಿನ ಬೆಳಕು ತಂದುಕೊಂಡವಳು
ದಿಟ್ಟ ಮಹಿಳೆಯಾಗಿ ಬದುಕು ಕಟ್ಟಿದವಳು
ಸಮಾಜಕ್ಕೆ ಸುಖದ ಹೊನಲು ಹರಿಸಿದವಳು
ಏಳು ಬೀಳುಗಳ ಜೊತೆ ಸಾಗಿದವಳು
ಸುಖ ಸಂಸಾರದ ಸವಿ ಕಂಡವಳು
ಬಂದ ನೋವುಗಳ ಮೌನದಿ ಸಹಿಸಿದವಳು
ಮನೆ ಬೆಳಗುವ ಸಾತ್ವಿಕ ಮನದವಳು
ಎಲ್ಲಾ ರಂಗದಲಿ ಸೈ ಎನಿಸಿದವಳು
ಲೋಕದ ಸೃಷ್ಟಿಗೆ ಕಾರಣ ಆದವಳು
ಎಲ್ಲರ ಮನ ಗೆದ್ದ ವಿನಯವಂತಳು
ಸೌಹೃದಯದ ಕರುಣಾಳು ಸಾಹಸಿ ಗುಣದವಳು

ಡಾ.ಲತಾ ಎ.ಆರ್ ಬಾಳೆಹೊನ್ನೂರು



