ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾಗ- ಒಂಬತ್ತು
ಜಯದೇವಿ ತಾಯಿಯ ಜೀವನ ವೃತ್ತಾಂತ

  ಜಯದೇವಿ ತಾಯಿಯವರ ಒಂದು ಅಪೂರ್ಣ ಕನಸು ……ನನಸಾಗಿತ್ತು…!!
ಕಷ್ಟ ಕಾರ್ಪಣ್ಯಗಳನ್ನು ಮೌನವಾಗಿ ಸಹಿಸುತ
ಮನದಾಳದ ಕಿಚ್ಚಿನಲಿ ಮಂಥನಗೊಂಡು ಉಲ್ಬಣಗೋಳ್ಳುತ್ತಿದ್ದ ಭಾವನೆಗಳನ್ನು ಮೊದಲ ಬಾರಿಗೆ ಕನ್ನಡ ಭಾಷೆಲ್ಲಿ ಬರೆದಾಗ ಆದ ಆನಂದ ಹೇಳತಿರದಾಗಿತ್ತು…..,!!.

 ಕನ್ನಡ ನುಡಿಗಳು ಅವರಿಗೊಂದು ಹೊಸ ಲೋಕದ ಬಾಗಿಲು ತೆರೆದವು. ವರ್ಷಗಳ ಕಾಲ ಮನದೊಳಗೆ ಸಂಗ್ರಹವಾಗಿದ್ದ ನಿಶ್ಶಬ್ದ ನೋವುಗಳು,  ಪ್ರಾರ್ಥನೆಗಳು,ಮಾತನಾಡಲಾಗದ ಮಾತುಗಳು  ಪದಗಳಾಗಿ ಹರಿಯಲಾರಂಭೀಸಿದವು….!!

ಅವರು ಕನ್ನಡವನ್ನು ಅಪ್ಪಿಕೊಂಡದ್ದು ಕೇವಲ ಕಲಿಕೆಯ ಕಥೆಯಲ್ಲ,ಇದು ಸಾಹಿತ್ಯ ಲೋಕದ ವಿಜಯಗಾಥೆ! ಹೊಸ ಬೆಳಗಿನ ಉದಯ ಗಾಥೆ..!!

 ಕನ್ನಡ ಭಾಷೆಯನು ಗಾಢವಾಗಿ ಪ್ರೀತಿಸುತ್ತ….
ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಮಹಿಳಾ ಅಧ್ಯಕ್ಷರಾಗಿ ನಡೆದರು
 ಕರ್ನಾಟಕ ವಿಶ್ವವಿದ್ಯಾಲಯವೇ ಅವರ ಬಳಿ ಬಂದು ಡಾಕ್ಟರೇಟ್ ಪದವಿಯನ್ನು ಕೊಡಮಾಡಿತು. ಸರ್ವಜ್ಞ ನಂತರ ಪ್ರಥಮ ಬಾರಿಗೆ ತ್ರಿಪದಿಯಲ್ಲಿ ಪುರಾಣವನ್ನು ನಿರ್ಮಿಸಿದರು… ಕನ್ನಡ ಸರಸ್ವತ ಲೋಕದ ಅನಘ್ನ ರತ್ನರಾಗಿ ಖ್ಯಾತಿ ಪಡೆದುಕೊಂಡವರು.

ಕನ್ನಡ ಭಾಷೆಯನ್ನು ಕಲಿತ ಜಯದೇವಿ ತಾಯಿಯವರು ಅತ್ಯಂತ ವೇದಾವಿ ಭಾಷಣಕಾರ್ತಿಯಾಗಿ ಹೊರಹೊಮ್ಮಿದರು. ನಾಡಿನ ಮೂಲೆ ಮೂಲೆಗಳಿಂದ ಸುತ್ತಮುತ್ತಲು ಹಳ್ಳಿಗಳಿಂದ ಅವರಿಗೆ ಅವ್ಹಾನ ಬರಲು ಆರಂಭಿಸಿತು . ತಮ್ಮ ಮಾತುಗಳಿಂದ ಜನರ ಮನವನ್ನು ಪರಿವರ್ತಿಸಲಾರಂಭಿಸಿದರು. ಜೊತೆ ಜೊತೆಗೆ
ಪತಿ ಮತ್ತು ಅತ್ತೆ ಸಂತಸದಿಂದ ಸಹಕರಿಸಲಾರಂಭಿಸಿದರು.

 ಸರಸ್ವತಿ ಮಂದಿರ ಸ್ಥಾಪನೆಯೊಂದಿಗೆ ಸ್ತ್ರೀಯರಿಗೆ ಶಿಕ್ಷಣ ಕೊಡಲು ಸೊಲ್ಲಾಪುರದಲ್ಲಿ ಪ್ರಾರಂಭಿಸಿದ್ದು.. ಅದು ಮಂದಗತಿಯಲ್ಲಿ ನಡೆದಿತ್ತು….ಆದರೆ ಜಯದೇವಿ ತಾಯಿಯವರು ಅಧ್ಯಕ್ಷತೆಯನ್ನು ವಹಿಸಿದ ಮೇಲೆ ಮೊದಲು ಸ್ತ್ರೀ ಶಿಕ್ಷಣದ ಅವಶ್ಯಕತೆಯನ್ನು ಹೆಚ್ಚು ಒತ್ತು  ಕೊಡಲಾರಂಭಿಸಿದರು.

ಅವರ ದೃಷ್ಟಿಯಲ್ಲಿ ಶಿಕ್ಷಣವೆಂದರೆ
 *ಒಂದೆರಡು ಭಾಷೆಗಳನ್ನು ಮಾತನಾಡಲು ಕಲಿಯುವುದು ಮಾತ್ರವಲ್ಲ ನಿತ್ಯ ಜೀವನದಲ್ಲಿ ಉಪಯೋಗವಾಗುವಂತಹ ಗೃಹ ಜ್ಞಾನ..ಸಾಯನ್ಯಕಲಿಕಯೊಂದಿಗೆ …,ಉಚ್ಚ ಶಿಕ್ಷಣವು ಮಹಿಳೆಗೆ ಸಿಗಬೇಕು.
 ಇಂಗ್ಲೀಷರು ತಮ್ಮ ಅನುಕುಲಕ್ಕೆ ಹಾಕಿದ ಗಿಳಿ ಪಾಠದ ಪದ್ಧತಿಯ ಶಾಲೆ ಬದಲಾಗಬೇಕು. ಸುಸಂಸ್ಕೃತ ಜೀವನ ನಡೆಸುವಂತಹ  ಶಿಕ್ಷಣ ಸಿಗಬೇಕು. ಜೀವನದ ಎಲ್ಲಾ ಹಂತಗಳ ಅಧ಼ಃಪತನಕ್ಕೆ ಕಾರಣವಾದ ಅಜ್ಞಾನವನ್ನು ಹೊಡೆದು ಓಡಿಸಲು …..ಸಾಕ್ಷರತೆಯ ಅಸ್ತ್ರದಿಂದಲೇ  ಸಾಧ್ಯ. ಹಸಿರು ಕ್ರಾಂತಿ ಹೊಟ್ಟೆಯ ಹಸಿವನ್ನು ಹಿಂಗಿಸಿದರೆ ಅಕ್ಷರದ ಕ್ರಾಂತಿಯು ಬುದ್ಧಿ ಹಸಿವನ್ನು ಅಡಗಿಸುವದೆಂದು*
ಅಭಿಪ್ರಾಯ ಪಡುತ್ತಿದ್ದರು.

1930ರ ಸಮಯದಲ್ಲಿ ಸೊಲ್ಲಾಪುರದ ಕೋರ್ಟ್ ಮಾರ್ಷಲ್ ನಡೆದಿತ್ತು… ಹಲವಾರು ಜನರು ಬ್ರಿಟಿಷರ ಗುಂಡಿಗೆ ಬಲಿಯಾಗಿದ್ದರು. ಇದರಲ್ಲಿ ಮಹಿಳೆಯರು ಸೇರಿದ್ದರು. ಎಲ್ಲಿ ನೋಡಿದರಲ್ಲಿ ಅಸಹಕಾರ ಚಳುವಳಿಗೆ ಸಂಬಂಧಿಸಿದ ಗಲಭೆ ನಡೆದಿದ್ದವು ‌.

ಇಬ್ಬರು ಪೊಲೀಸರು ಹತರಾಗಿದ್ದರೆಂದರೆ ಕೇಳಬೇಕೆ.,… ಬ್ರಿಟಿಷರ ಕ್ರೌರ್ಯವೂ  ಹೇಳತೀರದಾಗಿತ್ತು . ಧನಶೆಟ್ಟಿ ಹಾಗೂ ಇನ್ನು ಮೂರು ಜನರ ಮೇಲೆ ಮೊಕದಮೆ ಹುಡಿ ಗಲ್ಲಿಗೆರಿಸಲಾಗಿತ್ತು.
ಈ ಶಿಕ್ಷೆಯನ್ನು ವಿರೋಧಿಸಿ ಪುಣೆ ಮುಂಬೈ, ಕನ್ನಡ ನಾಡಿನಲ್ಲಿಯೂ ಪ್ರತಿಭಟನೆಗಳು, ಉಪವಾಸ ಸತ್ಯಾಗ್ರಹಗಳು ನಡೆದಿದ್ದವು. ಈ ಹೋರಾಟಗಳಲ್ಲಿ ಜಯದೇವಿ ತಾಯಿಯವರ ತಾಯಿ ಸಂಗವ್ವನ ಜೊತೆ  ತಾಯಿಯವರು ಬೆಂಬಲಿಸಿ ಉಗ್ರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

1932 ರಲ್ಲಿ ಬ್ರಿಟಿಷ್ ಸೈನಿಕರು ರಾಷ್ಟ್ರಧ್ವಜವನ್ನು ಅಪಮಾನಿಸಿದ್ದರಿಂದ ದ್ವಜ ಸತ್ಯಾಗ್ರಹ ನಡೆದು ಅಲ್ಲಿ ದೇಶದ ವಿವಿಧ ಪ್ರಾಂತಗಳ ಜನರು ಸೇರಿದ್ದರು ಅಲ್ಲಿ ನಡೆದ ಗಲಿಬಿಯಲ್ಲಿ ನೂರಾರು ಜನ ಕನ್ನಡಿಗರು ಬಂದಿತ್ತರಾಗಿದ್ದರು.

 ಈ ಸಂಘಟನೆಯು ಆರಂಭದಲ್ಲಿ ಹೆಚ್ಚಾಗಿ ಪುರುಷರೇ ಪಾಲ್ಗೊಳ್ಳುತ್ತಿದ್ದು ರಾಷ್ಟ್ರದ ಹಿತಕ್ಕಾಗಿ ಹೋರಾಡುವ ಮಹಿಳೆಯರಿಗೆ ಒಂದು ನಿರ್ದಿಷ್ಟವಾದ ಸಂಘಟನೆ ಇರ್ಲಿಲ್ಲ ನಂತರ ಮಹಿಳೆಯರನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳಲು ಜಯದೇವಿತಾಯಿ ಹಾಗೂ ಇನ್ನಿತರರು ರಾಷ್ಟ್ರೀಯ ಚಳುವಳಿ ತರಬೇತಿ ನೀಡುವ ಗುರಿಯನ್ನು ವಿಸ್ತರಿಸಿದರು .

1934ರಲ್ಲಿ ವೀರಶೈವ ಸಾಹಿತ್ಯ ಸಭೆಯ ಅಧ್ಯಕ್ಷಣೆಯಾಗಿ ಹೋದರು.

1939 ರಲ್ಲಿ ಜಯದೇವಿ ತಾಯಿಯವರು ವೀರಶೈವ ಮಹಾಸಭೆಯ ಮಹಿಳಾ ಪರಿಷತ್ತಿನ ಅಧ್ಯಕ್ಷರಾದರು

1938 ರಲ್ಲಿ ಜಯದೇವಿ ತಾಯಿಯವರು ಸೊಲ್ಲಾಪುರ .
ಹುಬ್ಬಳ್ಳಿ ಧಾರವಾಡಗಳಲ್ಲಿ ಅಕ್ಕನ ಬಳಗವನ್ನು ಸ್ಥಾಪಿಸಿದರು ಆ ಮೂಲಕ ಶರಣರ  ವಿಚಾರಧಾರೆಯನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಪ್ರಾರಂಭಿಸಿದರು. ಶರಣರ ಸಾಹಿತ್ಯಕ್ಕೆ ತಮ್ಮನ್ನು ತಾವು  ಅರ್ಪಿಸಿಕೊಳ್ಳುತ್ತಾ ಸಮಾಜದವರೊಂದಿಗೆ ಅದನ್ನು ತಿಳಿಹೇಳುತ್ತ ಅನುಭವ ಪಥದಲ್ಲಿ ಸಾಗಿದ್ದರು.

ಈ ಹಿನ್ನೆಲೆಯಲ್ಲಿ ಮಹಿಳೆಯರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಅವರಿಗೆ ರಾಷ್ಟ್ರದ ಆಗು-ಹೋಗುಗಳ ಅರಿವು ಮೂಡಿಸಿ  ರಾಷ್ಟ್ರೀಯತೆಯನ್ನು ಉತ್ತೇಜಿಸಲು ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡವು.
 ಜಯದೇವಿಯವರು ಮಹಿಳೆಯರ ಹೋರಾಟಕ್ಕೆ ಬೆಂಬಲಿಸಲು 1947ರಲ್ಲಿ ತಮ್ಮ ಮನೆಯಾದ ಜಯನಿಕೀತನದಲ್ಲಿ ಸೇವಾ ದಳದ ಪ್ರೌಢ ಶಾಖೆಯನ್ನು ಆರಂಭಿಸಿದರು.

 ಎರಡನೆ ಮಹಾ ಯುಧ್ಧದ ಸಂದರ್ಭದಲ್ಲಿ ಬ್ರಿಟಿಷರಿಗೆ ಸೈನಿಕರ ಅವಶ್ಯಕತೆ ಎದುರಾದಾಗ ದೇಶದಾದ್ಯಂತ ಬೆಟಾಲಿಯನ್ ಕಟ್ಟಲು ಜನರನ್ನು ಮತ್ತು ಪ್ರಮುಖರನ್ನು ಪ್ರೋತ್ಸಾಹಿಸುತ್ತಿದ್ದರು.

ಇದರ ಪರಿಣಾಮವಾಗಿ ವಾರದ ಮಲ್ಲಪ್ಪನವರಿಗೆ ರಾವ್ ಬಹದ್ದೂರ್ ಪದವಿ ಕೊಟ್ಟರೆ….ಮಡಿಕೆ ಚನ್ನಬಸಪ್ಪನವರಿಗೆ ಮ್ಯಾಜಿಸ್ಟ್ರೇಟ್ ಪದವಿಯನ್ನು ಕೊಟ್ಟರು.
 ಸೊಲ್ಲಾಪುರದಲ್ಲಿ ಲಿಂಗಾಯತರು ಹೆಚ್ಚು ಇರುವುದರಿಂದ ಲಿಂಗಾಯತ ಬೆಟಾಲಿಯನ್ ಕಟ್ಟಲು ಪ್ರೇರೇಪಿಸಿದರು ಬ್ರಿಟಿಷರು .ಅಲ್ಲಿಯ ಸ್ಥಳೀಯ ಮುಖಂಡರಾದ ವಾರದ, ಮಡಕಿ ಲಿಗಾಡೆ,ತಂಬಾಕಿ ಮನೆತನಗಳ ಮೇಲೆ ಒತ್ತಾಯ ಬೀರಲು ಪ್ರಯತ್ನಿಸಿದರು.

 ಅದೇ ರೀತಿಯಾಗಿ ಲಿಗಾಡೆ ಅವರ ಆಸ್ತಿಯ ಮೇಲೆ ಋಣ ಭಾರ ಹೇರಿದ್ದೇವೆಂದು ಇದಕ್ಕಾಗಿ ಜಯದೇವಿ ತಾಯಿಯವರು ತಮ್ಮ ಕೆಲಸಕ್ಕೆ ಸಹಕರಿಸಬೇಕೆಂದು ಕೇಳಿಕೊಂಡರು.ಅಂದಿನ ದಿನಗಳಲ್ಲಿ ಪ್ರಭಾವಿ ಭಾಷಣ ಕಾರ್ತಿ ,ಪ್ರಸಿದ್ಧ‌ಸಮಾಜ ಸೇವೆವಕಿಯಾದ ತಾಯಿಯವರು ಲಿಂಗಾಯತರನ್ನು ಇಂಗ್ಲಿಷ್ ಸೇನಾ ಪಡೆಗೆ ಸೇರಿಸಲು ಹುರಿದುಂಬಿಸುವಂತೆ ಭಾಷಣ ಮಾಡಲು ಕೇಳಿಕೊಂಡರು……

ಬ್ರಿಟಿಷ್ ಸರ್ಕಾರವು ಪತಿ ಚೆನ್ನಮಲ್ಲಪ್ಪ ಲಿಗಾಡೆ ಅವರಿಗೆ ವ್ಯಾಪಾರದ ಋಣಭಾರ ಕಡಿಮೆ ಮಾಡುವುದಾಗಿ  ಆಮಿಷೆ ಒಡ್ಡಿತು….  ಪತ್ನಿ ಜಯದೇವಿ ತಾಯಿಯವರು ಲಿಂಗಾಯೆತರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರುವಂತೆ ಪ್ರಯತ್ನಿಸುವಂತೆ ಕೇಳಿಕೊಂಡರು….. ಕೊನೆಗೆ ಲಿಂಗಾಯೆತರನ್ನು ಸಂಘಟಿಸಲೇಬೇಕೆನ್ನುವ   ಆದೇಶವಿತ್ತರು ..!!!!

 ಚನ್ನಮಲ್ಲಪ್ಪನವರಿಗೆ ಚೆನ್ನಾಗಿ ಗೊತ್ತಿತ್ತು ….. ಬಲಾಡ್ಯ ಬ್ರಿಟಿಷರ ವಿರುದ್ಧ ಹಾಕಿಕೊಳ್ಳುವುದರಲ್ಲಿ ಅರ್ಥವಿಲ್ಲ … ದೇಶಪ್ರೇಮವೆನೋ ನಿಜ…..ದೇಶ ಸ್ವಾಭಿಮಾನ ,ದೇಶಮಾತೆಗಾಗಿ ಬಲಿದಾನ-ತ್ಯಾಗ ಇವೆಲ್ಲ ದುಷ್ಟ ಬ್ರಿಟಿಷರ ಎದುರು ನಿರರ್ಥಕ … ಬ್ರಿಟಿಷರ ಬಲದ ಎದುರು ನಾವು ತೃಣ ಸಮಾನರು  ವಿವೇಕತನವೆಂದರೆ ನಮ್ಮ ವ್ಯಾಪಾರವನ್ನು ನಮ್ಮ ಮನೆತನವನ್ನು ಉಳಿಸಿಕೊಳ್ಳುವುದರಲ್ಲಿ ಜಾಣತನವಿರುವದು ಇಲ್ಲದ್ದಿದರೆ ಹೇಳು ಹೆಸರಿಲ್ಲದಂತೆ ನಾಶವಾಗಿ ಹೋಗುವುದು ಖಚಿತ ಅನ್ನೋದು ದೃಢವಾಗಿ ನಂಬಿದವರು….ಹೀಗಾಗಿ  ವೈಯಕ್ತಿಕ ಹಿತಾಸಕ್ತಿಯುತರಾಗಿದ್ದರು, ತನ್ನ ವ್ಯಾಪಾರದತ್ತ ಹೆಚ್ಚು ಗಮನವನ್ನು ಕೊಡುತ್ತಿದ್ದರು.

ಹಾಗೆ ಜಯದೇವಿತಾಯಿಯವರಿಗೆ ಸೈನ್ಯ ಕಟ್ಟುವುದಕ್ಕಾಗಿ ಕೇಳಿಕೊಂಡಿದ್ದರು ಕೂಡಾ ಪತಿ ಚೆನ್ನಲ್ಲಪ್ಪನವರು.
 ಬ್ರಿಟಿಷರು ಜಯದೇವಿ ತಾಯಿಯವರಿಗೆ ಕೇಸರಿ-ಇ- ಹಿಂದ್ ಪದವಿಯನ್ನು ಕೊಡುವುದಾಗಿ ಮುಂದೆ ಬಂದರು. ಇದ್ಯಾವದಕ್ಕೂ ಅವರು ವಿಚಲಿತರಾಗಲಿಲ್ಲ. ಅದಕ್ಕಾಗಿ ದೊಡ್ಡ ಮೊತ್ತದ *ವಾರ್ ಫಂಡ*ನ್ನು ಕಟ್ಟಬೇಕಾಯಿತು. ಮನೆಯವರ ಯಾವ ಒತ್ತಡಕ್ಕೂ ಮಣಿಯದ  ತಾಯಿಯವರು ರಾಷ್ಟ್ರೀಯ ಪ್ರೇಮ ಅಚಲವಾಗಿತು..

ಬ್ರಿಟಿಷರ  ಆಮಿಷದ ಪ್ರಸ್ತಾವನೆ, ಹೊರಗೆ ನೋಡಲು ಗೌರವದ ಹೊದಿಕೆ ಹೊದ್ದಿದ್ದರೂ, ಒಳಗೆ ದೇಶದ ಏಕತೆಯನ್ನು ಕುಗ್ಗಿಸುವ ಕುಯುಕ್ತಿಯೇ ಆಗಿತ್ತು…!!
ಆ ಕ್ಷಣದಲ್ಲಿ ಜಯದೇವಿ ತಾಯಿಯವರು ಮೌನವಾಗಿರಲಿಲ್ಲ.
ಅವರಲ್ಲಿ ಹೊತ್ತಿ ಉರಿದದ್ದು   ರಾಷ್ಟ್ರಪ್ರೇಮದ ಜ್ವಾಲೆ.
“ಕೇಸರಿ-ಇ -ಹಿಂದ್” ಎಂಬ ಹೆಸರಿನಲ್ಲಿ ಅವರ ಗುಲಾಮರನ್ನಾಗಿ ಮಾಡಿಕೊಳ್ಳುವ ಹುನ್ನಾರ ಕುತಂತ್ರ ಅರಿತವರಾಗಿದ್ದರು.

ದೇಶದ ಧ್ವಜಕ್ಕೆ ತೋರುವ ಆದರವು‌  ತ್ಯಾಗದ ಸಂಕೇತ, ಧೈರ್ಯದ ಪ್ರತೀಕ, ತಾಯ್ನಾಡಿನ ಗೌರವ.
ಬ್ರಿಟಿಷರು ಅಧಿಕಾರದ ಸಿಂಹಾಸನವನ್ನು ತೋರಿಸಿದರು,ಸ್ಥಾನಮಾನಗಳ ಸಿಹಿ ಮಾತುಗಳನ್ನು ಹೇಳಿದರೂ ತಾಯಿಯ ಹೃದಯಕ್ಕೆ ಕೇಳಿಸಿಕೊಂಡದ್ದು ಒಂದೇ ಶಬ್ದ —
“ಭಾರತಮಾತೆಯ ಹಿತಾಸಕ್ತಿ….
“ನನ್ನ ದೇಶದ ಏಕತೆಯನ್ನು ಮಸುಕುಗೊಳಿಸುವ ಯಾವ ಒಪ್ಪಂದಕ್ಕೂ ನಾನು ಸಮ್ಮತಿಸುವುದಿಲ್ಲ,”
ಎಂದು ಅವರು ಅಟಲ ಧೈರ್ಯದಿಂದ ಹೇಳಿದರು.

ಆ ನಿರಾಕರಣೆ ಸಾಮಾನ್ಯ ಪದವಿರೋಧವಲ್ಲ —
ಅದು ಮಣ್ಣಿನ ಮಗಳು ತನ್ನ ತಾಯ್ನಾಡಿಗೆ ಕೊಟ್ಟ ಶಪಥ.ಆ ದಿನ ಅವರು ಆಮಿಷವನ್ನು ತಳ್ಳಿಹಾಕಿದಾಗ,
ದೇಶಪ್ರೇಮಿಗಳು ಸಾಕ್ಷಿಯಾಗಿ ನಿಂದರು.

ಅವರ ಎತ್ತಿದ ಧ್ವನಿಯಲ್ಲಿ ರಾಷ್ಟ್ರಪ್ರೇಮವು ಘೋಷವಾಗಿ ಪ್ರತಿಧ್ವನಿಸಿತು.
ಅವರು ತೋರಿಸಿದ ಧೈರ್ಯ  —
ನಿಜವಾದ ದೇಶಭಕ್ತಿ ….ಹೃದಯದ ಆಳದಿಂದ ಹೊರಹೊಮ್ಮುವ ನಿಷ್ಠೆ; ಧೇಶಮಾತೆಗೆ ತೋರಿದ ಗೌರವ. .

*ಬ್ರಿಟಿಷರ ಇಂಥ ಆಸೆ ಆಮಿಷಕ್ಕೆ ಒಳಗಾಗದೆ ಜಾತಿಯ ಹೆಸರಿನಲ್ಲಿ ಸೇನೆ ಕಟ್ಟುವುದು ದೇಶದ ಅಹಿತಕ್ಕೆ ಕಾರಣವಾಗುವುದೆಂದು…ಯಾವುದೇ ಭೀತಿಗೂ ತಲೆಬಾಗಲಿಲ್ಲ. ಬ್ರಿಟಿಷರ ಪ್ರತ್ತಸ್ಸಾವನೆಯನ್ನು ಖಡಾಖಂಡಿತವಾಗಿ ನಿರಾಕರಿಸಿದರು .

*ನಡೆಯಣ್ಣ ಇಡು ಹೆಜ್ಜೆ ಮುಂದೆ ದೃಢತನದಿಂದೆ!!

ಕದಳಿಯ ಬನಹೊಕ್ಕು ಚಣ ಮಜಗಜದ ತಾಣ
ಎದುರಿಗೆ ಬರುವದು ಕಾಡಕೋಣ ತೆಗೆಯಲು ಪ್ರಾಣ ಕದಡಿಯ ಎಂಟು ದಿಕ್ಕು ಎಂಟಾನೇಗಳ ಸೊಕ್ಕು ಕಾನನದೊಳಗೆ ಪಕ್ಕು ಮುರಿಯಬೇಕಾದರೆ ಸೊಕ್ಕು
ಹೀಗೆ ಬ್ರಿಟಿಷರ ಸೊಕ್ಕನ್ನು ಮುರಿಯಬೇಕು ಅನ್ನುವ ಕರೆಯನ್ನು ಸಾರ್ವಜನಿಕರಿಗೆ ಕೊಡುತ್ತಿದ್ದರು

*ನಡೆದಾರಿಗೆ ಅಡ್ಡ ಬಂದಿತಣ್ಣ ಹೆಡೆ ತೆಗೆದಾಚಣ ಬಿಡುವದು ತನ್ನು ಕೆಂಪುಗಣ್ಣ ಅದುವೆ ನಾಗಣ್ಣ ನಂಜೀನ ಅಂಜಿಕೆ ಹೊಲ್ಲ ಕೆಂಜೆಡೆಯವನ ಚಲ್ವ ಸಂಜೀವನಿ ಮದ್ದು ಬಲ್ಲ ಹಿಂಜರಿಯುವುದೇಕೆ ಇನ್ನು

ಹಸಿದು ಹುಲಿ ಬರುವ ದಲ್ಲಿ ತಾಯಿ, ಪಸರಿಸಿ ಬಾಯಿ ವಸುಧೆ ನಡುಗುವ ಗುಡುಗಿನ ಛಾಯೆ ಅದುವೆ ಮಹಾಮಾಯಿ ಜಯ ಸಿದ್ದರಾಮನ ಸಿದ್ದಿ ಮಂತ್ರದ ಧ್ಯಾನ ಶುದ್ಧ ಮನದಿಂದಲೇ ಸಾಧನ ಇದ್ದುಗೆದೆ ಕದಳಿಯ ಬನ*

ಹಸಿದು ಬರುವ ಬ್ರಿಟಿಷರನ್ನು ಬಗ್ಗು ಬಡಿಯಲೆಂದೆ ಅಂಜದೇ ಅಳುಕದೇ ಕೆಂಜಡಿಯವನ ಸಂಜೀವಿನಿ ಮದಿನ ಮೇಲೆ ನಂಬಿಕೆ ಇಟ್ಟು ಮುಂದೆ ನಡೆ ಅಂತ ಜನರಿಗೆ ಕರೆ ಕೊಡುತ್ತಿದ್ದರು.

  ಭಾರತೀಯ ಸ್ವಾತಂತ್ರ ಹೋರಾಟ ಹಾಗೂ ಇನ್ನಿತರ ಚಳುವಳಿಗಳಲ್ಲಿ ಪುರುಷರೇ ಮುಖ್ಯ ಎದುರಿಸುತ್ತ ಬಂದಿದ್ದರು .ಅವರಿಗೆ ಭೌತಿಕವಾಗಿ ಮಹಿಳೆಯರ ಬೆಂಬಲವೂ ಇದ್ದಿತು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಮಹಿಳೆಯರು ಅದಾಗಲೇ ಸಾಮಾಜಿಕ ಸುಧಾರಣೆ ಸ್ವಾತಂತ್ರ ಹೋರಾಟ ಶೈಕ್ಷಣಿಕ ಬೆಳವಣಿಗೆ ಹಾಗೂ ಮಹಿಳಾ ದಿನಾಚರಣೆ ಅಂತ ಕ್ಷೇತ್ರಗಳಲ್ಲಿ ಮುಖ್ಯ ವಾಹಿನಿಯಲ್ಲಿ ಬಂದಿದ್ದರು.

ಇದರೊಂದಿಗೆ ಗ್ರಾಮೀಣ ಭಾಗದ ಮಹಿಳೆಯರು ಸಹ ತಮ್ಮ ಮನೆಯ ಪುರುಷರಿಗೆ  ರಾಷ್ಟ್ರೀಯ ಹೋರಾಟದಲ್ಲಿ ಪಾಲ್ಗೊಳ್ಳಲು ನೈತಿಕ ಹಾಗೂ ಭೌತಿಕ ಬೆಂಬಲವನ್ನು ನೀಡುತ್ತಿದ್ದರು.  ತಮ್ಮ ಮನೆಯವರ ಬೆಂಬಲದಿಂದ ರಾಷ್ಟ್ರೀಯ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡಿದ್ದರು .
ಸ್ವಾತಂತ್ರ ಹೋರಾಟದಲ್ಲಿ ಎಲ್ಲ ವರ್ಗದ ಜನರು ಪಾಲ್ಗೊಳ್ಳಬೇಕೆಂಬುದೇ ಬಹು ಮುಖ್ಯ ಉದ್ದೇಶ ವಾಗಿತ್ತು.
.
ಪುರುಷರು ಸೆರೆವಾಸವನ್ನು ಅನುಭವಿಸಿದಾಗ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಹೊಣೆ ಮಹಿಳೆಯರ ಮೇಲಿತ್ತು .ಸತ್ಯಾಗ್ರಹ ರಚನಾತ್ಮಕ ಕಾರ್ಯಕ್ರಮಗಳು…ಚಳುವಳಿಯ ರೂಪರೇಷೆಗಳು ಮಹಿಳೆಯರ ಮನೋಬಲಕ್ಕೆ ಸೂಕ್ತವಾಗಿದ್ದು ಎಂದು ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಸಭೆಗಳನ್ನು ಕರೆಯಲು ಹೇಳುತ್ತಿದ್ದರು .
ಅಂತಹ ಸಮಿತಿಗಳಲಿ ಜಯದೇವಿ ತಾಯಿಯವರು ಮುಂಚೂಣಿಯಲ್ಲಿ ಇರುತ್ತಿದ್ದರು

ಈ ಚಳುವಳಿಯ ಸಂದರ್ಭದಲ್ಲಿ ಮಹಿಳೆಯರು ಗೋಖಲೆ ,ಮಾರ್ಗರೇಟ್ ಕಸಿನ್ಸ ಹಾಗೂ ಅನಿಬೆಸೆಂಟರ ಪ್ರಭಾವಕ್ಕೆ ಒಳಗಾಗಿದ್ದನ್ನು ನಾವು ಗಮನಿಸಬಹುದಾಗಿದೆ.
ಬಹು ವರ್ಷಗಳಿಂದ ಮಹಿಳೆಯರು ತಮ್ಮ ಆರಂಭದ ಹೋರಾಟವನ್ನು ರಚನಾತ್ಮಕ ಕಾರ್ಯಗಳಿಗೆ ಸೀಮಿತಗೊಳಿಸಿಕೊಂಡಿದ್ದರು ನಂತರ ತಮ್ಮ ಕಾರ್ಯ ವ್ಯಾಪ್ತಿಯನ್ನು ಉಪ್ಪಿನ ಸತ್ಯಾಗ್ರಹ ಸ್ವದೇಶಿ ಚಳುವಳಿ ಮಧ್ಯಪಾನ ನಿಷೇಧ ದಂತ ಚಟುವಟಿಕೆ ವಿಸ್ತರಿಸಿದರು. ಕಾನೂನು ಭಂಗ ಚಳುವಳಿಯಲ್ಲಿ ಮಹಿಳೆಯರು ಪಾಲ್ಗೊಳ್ಳದ ಕುರಿತು ರಾಷ್ಟ್ರೀಯ ನಾಯಕ ಯೋಚಿಸುವಂತಾಯಿತು.

 ಕರ್ನಾಟಕದಲ್ಲಿ  ರಾಷ್ಟ್ರೀಯ ಚಳುವಳಿಯಲ್ಲಿ ಪಾಲ್ಗೊಂಡ ಪ್ರಮುಖ ಮಹಿಳೆಯರಲ್ಲಿ ಜಯದೇವಿತಾಯಿ ಲಿಗಾಡೆಯವರು ಒಬ್ಬರು ಇವರೊಂದಿಗೆ ಹಲವು ಮಹಿಳೆಯರು ಪಾಲ್ಗೊಂಡಿದ್ದರು…… ಮುಖ್ಯವಾಗಿ ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಕುಂದಾಪುರ, ಕೃಷ್ಣ ಬಾಯಿ ಪಣಜಿ ಕರ್, ಅವರಂಥ ಮಹಿಳೆಯರು ತಮ್ಮ ಚಟುವಟಿಕೆಗಳನ್ನು ಪ್ರೆಸಿಡೆನ್ಸಿಯಾಚೆ ವ್ಯಾಪಕಗೊಳಿಸಿದರು.

ಇದರಿಂದಾಗಿ ಕರ್ನಾಟಕದ ಪ್ರತಿ ಭಾಗಗಳಿಂದಲೂ ಮಹಿಳೆಯರು ಚಳುವಳಿಯಲ್ಲಿ ಭಾಗವಹಿಸಹತ್ತಿದರು ಬಳ್ಳಾರಿ ಸಿದ್ದಮ್ಮ, ನಾಗಮ್ಮ ಪಾಟೀಲ, ಸುಬ್ಬಮ್ಮಾ ಜೋಯಿಸ್, ಟಿ. ಸುನಂದಮ್ಮ, ಯಶೋದಮ್ಮ ದಾಸಪ್ಪ, ನಾಗರತ್ನಮ್ಮ ಹಿರೇಮಠ, ಪದ್ಮಾವತಿ ಬಿದರಿ, ಜಯದೇವಿತಾಯಿ ಲಿಗಾಡಿ ಶಕುಂತಲಾ ಕುರ್ತುಕೋಟಿ, ಚೆನ್ನಮ್ಮ ಹಳ್ಳಿಕೇರಿ ಇನ್ನೂ ಅನೇಕ ಮಹಿಳೆಯರು ರಾಜಕೀಯ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡದ್ದು ಗಮನಹರ್ಯವಾಗಿದೆ
.
 ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಯಲ್ಲಿ ಮಹಿಳೆಯರು ಸಂಘಟಿತಗೊಂಡು ಹೋರಾಡಲು ಮುಂದಾಗಿದ್ದ  ರೈತರ ಮೇಲೆ ವಿಧಿಸಿದ ಹೆಚ್ಚಿನ ತೆರಿಗೆಯನ್ನು ಖಂಡಿಸಿದ ಪುರುಷರನ್ನು ಜೈಲಿಗೆ ತಳ್ಳಿ ಅವರ ಮನೆಗಳನ್ನು ಜಪ್ತಿ ಮಾಡಿದರು.

 ಆಗ ಇದನ್ನು ವಿರೋಧಿಸಿದ ಮಹಿಳೆಯರು  ಚಳುವಳಿಯಲ್ಲಿ ತೊಡಗಿದರು .ಮನೆ ಹೊಲ ಹರಾಜನ್ನು ವಿರೋಧಿಸಿದ ಮಹಿಳೆಯರಿಗೆ ಏನು ಕಡಿಮೆ ಇರಲಿಲ್ಲ ಅಂಥವರಲ್ಲಿ ಗ್ರಾಮೀಣ ಮಹಿಳೆಯರು ಗೌರಮ್ಮ, ಕಾವ್ಯರಮ್ಮ, ಲಕ್ಷಮ್ಮ, ದುಕಮ್ಮ ಅಕ್ಕುಂಜಿ ,ಸುಬ್ಬಮ್ಮರು ಪುರುಷರ ಸಮಾನವಾಗಿ ಹೋರಾಡಿದ್ದರು.

“ಅಂಜುವರಿಗಳಿಸುವದು|ಪಂಜರದೊಳಗಿಡುವೂದು
ಅಂಜದೆ ಮುಂದಕ ನಡೆದರು- ಈ ಲೋಕ
ಅಂಜಿತಾ ಒಂದನೇ ಮಾಡುವುದು||”

  ಭಾರತೀಯ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ಜಯದೇವಿತಾಯಿವರ ಸಮಕಾಲಿನ ಮಹಿಳೆಯರ  ಧೈರ್ಯ ಸ್ಥೈರ್ಯ ಬುದ್ಧಿವಂತಿಕೆ ಪ್ರತಿಭೆಯಿಂದ ಕೂಡಿದವ ರಾಗಿದ್ದಾರೆ.


About The Author

Leave a Reply

You cannot copy content of this page

Scroll to Top