ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸುಳ್ಳಿನ ಬಾಯಿಗೆ
ಸಿಗಬಾರದು
ಯಾಕೆಂದರೆ ಸುಳ್ಳು
ಮೆರವಣಿಗೆಯಲ್ಲಿ
ರಾಜಾರೋಷವಾಗಿ
ಹೊರಡುವುದು.
ಸತ್ಯದ ಬಟ್ಟೆಯುಟ್ಟು
ಸುಳ್ಳನ್ನು ಮೂಲೆಗೆ ಸರಿಸಿ
ಮುನ್ನೆಯುವುದು,,,
ಆದರೆ
ಸತ್ಯ ಒಂಟಿಯಾಗಿ
ನಿಲ್ಲುವುದು.
ಸತ್ಯದ ಬೆಳಕಲ್ಲಿ ಇರಲಿ
ನಮ್ಮ ಜೀವನ ಪಥ
ಮೋಸದ ನೆರಳಿಗೆ
ಮನ ಸಾಯಬಾರದು,
ನಂಬಿಕೆಯ ಹೂವಿಗೆ
ಸುಳ್ಳಿನ ಮುಳ್ಳು
ತಾಗಬಾರದು
ಸುಳ್ಳು ಸಿಹಿ ಮಾತು
ಹೊದಿಸಿ ಬರುವುದು
ಕೆಲವೊಮ್ಮೆ,
ಸತ್ಯದ ಕಾಠಿಣ್ಯ
ಕಲ್ಲಿನಂತೆ ತೋರುವುದು
ಕೆಲವೊಮ್ಮೆ.
ಆದರೂ ಸತ್ಯವೇ
ದೀಪವಾಗಿ ದಾರಿ
ತೋರಿಸಬೇಕು
ಆದರೆ
ಸುಳ್ಳು ಮುಖವಾಡ
ಧರಿಸಿ ಕೇಕೆ ಹಾಕುವುದು
ಅಸತ್ಯದ ಅಂಧಕಾರ
ನಮ್ಮ ಹಾದಿ
ಕೊನೆಯಾಗಬಾರದು
ಸುಳ್ಳಿನ ನಗುವಿಗೆ
ಮನವು
ಮರುಳಾಗಬಾರದು,
ಸ್ವಾರ್ಥದ ಸುಳಿಯಲ್ಲಿ
ಸತ್ಯ ಮುಳುಗಬಾರದು.
ನಿಷ್ಕಳಂಕ ಹೃದಯದ
ಶುದ್ಧ ಶಪಥ ಇರಲಿ,
ನೀತಿಯ ನಾದವು
ನಿತ್ಯ ನಮ್ಮೊಳಗೆ ಹರಡಲಿ.
ಸುಳ್ಳು ಕ್ಷಣಿಕ ಮೋಡ,
ಸತ್ಯ ಚಿರಂತನ ಆಕಾಶ,
ಅದು  ಮುಸುಕಿದ  ಮರೆ
ಸತ್ಯವೇ ಕೊನೆಯ ಪ್ರಕಾಶ.
ಆದ್ದರಿಂದ ಜೀವದ
ಪ್ರತಿಯೊಂದು ಹೆಜ್ಜೆ
ಸುಳ್ಳಿನ ಬಾಯಿಗೆ
ಸಿಗದಿರಲಿ ನಮ್ಮ  ಮಾತು
ಸತ್ಯ ಮೇವ ಜಯತೆ.
ಸುಳ್ಳು ಸರಿಯಲಿ
ಹಿಂದೆ ಹಿಂದೆ ಹಿಂದೆ…



ಡಾ ತಾರಾ ಬಿ ಎನ್ ಧಾರವಾಡ

About The Author

Leave a Reply

You cannot copy content of this page

Scroll to Top