ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀ ತಾಳಿದ ಮೌನವು ಮಾತಿಗಿಂತ ಆಳವಾದ ಭಾಷೆ ನನಗಾಗಿದೆ
ನನ್ನದೆ ಆಗಿದೆ ಸಖ ಅದನರಿವ ಆಸೆ

ಅದು ಈ ಮನದೊಳಗೆ ಎದ್ದಿಹ ಸಾಗರದಲೆಗಳ
ಶಾಂತಗೊಳಿಸುತ್ತಿದೆ ಶಬ್ದಕೆ ನಿಶ್ಯಬ್ಧವ ಕಲಿಸುತ್ತಿದೆ

ಶಬ್ದಗಳು ನಿಂತಾಗ ಮೌನದೊಳಡಗಿದ ಅರ್ಥಗಳು
ಉಸಿರಾಡುತ್ತಿವೆ ಎಣಿಸಲು ತಪ್ಪುತ್ತಿಹ ಸಾಲುಗಳು

ನಿನ್ನ ಕಣ್ಣಿನ ನೋಟವೇ ಕಥೆಯಾಗಿ ಹರಡುತ್ತದೆ
ಎಂದೂ ಮಾಸದ ನೋವಿಗೆ ಆ ಮೌನವು ಮದ್ದಾಗಿದೆ

ನನ್ನ ಸಂತೋಷಕ್ಕೂ ಸೌಮ್ಯ ವಸಂತವೂ ಹೌದು
ಗದ್ದಲದ ನಡುವೆ ಮೌನ ದೀಪದಂತೆ ಹೊಳೆವುದು

ಹೃದಯದ ಸ್ಪಂದನಗಳನ್ನು ಕೇಳಲು ಕಲಿಸುತ್ತಿದೆ
ಪ್ರಕೃತಿಯ ಪಾಠ ಮೌನದಲ್ಲೇ ಬರೆಯಲ್ಪಟ್ಟಿದೆ

ಮರಗಳು ನದಿಗಳು ಸಹ ಅದನ್ನೇ ಜಪಿಸುತ್ತಿವೆ
ಮೌನದಲ್ಲಿ ಆತ್ಮ ತನ್ನನ್ನು ತಾನು ಕಂಡುಕೊಳ್ಳುತ್ತಿದೆ

ಅಹಂಕಾರ ಕರಗುವ ಕ್ಷಣವೂ ಅದೇ ಆಗಿದೆ
ಮಾತುಗಳು ತಪ್ಪಿದಾಗ ಮೌನ ಸತ್ಯವ ಹೇಳುತ್ತಿದೆ

ಕೋಪವ ಶಮನಗೊಳಿಸಿ ಬುದ್ಧಿಯ ಬೆಳಗಿಸುತ್ತಿದೆ
ಮೌನವೇ ಶಕ್ತಿ ಮೌನವೇ ಶಾಂತಿ ಮೌನದಲೆ ಹೇಳಿದೆ

ಮೌನದಲ್ಲಿ ಜೀವನ ತನ್ನ ಅರ್ಥವನ್ನು ಪತ್ತೆಹಚ್ಚುತ್ತಿದೆ
ಆ ಜೀವನದ ಜೀವ ಸಖ ನೀನಾಗಿಹೆ ಎಂದೆ


About The Author

Leave a Reply

You cannot copy content of this page

Scroll to Top