ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ತಣ್ಣನೆಯ ಮಾಗಿಯ ಚಳಿ ಮೈ ಸೋಕಿರಲು
ನಿನ್ನದೇ ಸವಿ ನೆನಪು ಕಾಡಿರಲು
ಮನಸು ಹೃದಯ ಮುದವೇರಲು
ಸೊಗಸಾಗಿ ಹಳೆ ನೆನಪು ಸೋಕಿರಲು

ಸೆಳೆಯುತಿದೆ ಮನ ನಿನ್ನೆಡೆಗೆ ವಾಲಿ
ಹೃದಯವನು ಇರಿಸಿರುವೆ ನಿನಗಾಗಿ ಖಾಲಿ
ಒಂದಾಗಿ ಆಡೋಣ ಬಾ ಜೀವನ ಜೋಕಾಲಿ
ಸೇರಿ ಜೀವನದ ಪಾಠವ ಕಲಿ

ನೀನಿಲ್ಲದ ಬದುಕು ಬರೀ ನೀರಸ
ನೀನಿರೆ ಜೊತೆಯಲ್ಲಿ ಮನ ಉಲ್ಲಾಸ
ನಿನ್ನೊಲವು ಬೇಕಿದೆ ಬಾಳಿಗೆ ಸಂತಸ
 ಅರಿತುಕೊ ನನ್ನೆದೆಯ ಕೂಗಿನ ಮನಸ

ಹೊಸಬಾಳಿನ ನೂತನ ಸಂಭ್ರಮ ನಿಶ್ಚಿತ
ಹೂ ಚೆಲ್ಲಿ ಕೋರುವೆ ನಿನಗೆ ಸ್ವಾಗತ
ಹಾರಾಡಿ ಕುಣಿದಿರುವೆ ನವಿಲಂತೆ ನಲಿಯುತ
ನೀನೆಂದೆಂದು ನನ್ನವನೇ ಬಾಳಲ್ಲಿ ಶಾಶ್ವತ.


About The Author

Leave a Reply

You cannot copy content of this page

Scroll to Top