ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ನೀವು ಅಪಿ೯ಸುವ
ಪ್ರೀತಿಯ ‘ಹೂವು’ಗಳು
ಬಾಡಿ ಹೋಗಿರಬಹುದು…..!

ನುಡಿಯುವ ಮಾತುಗಳು
ಹಳೆಯದ್ದು ಆಗಿರಬಹುದು… !

ಹಿಡಿದುಕೊಳ್ಳುವ ”ಕೈ’
ತಂಪಾಗಿರಬಹುದು…!

ನೀವು ತೋರಿಸುತ್ತಿರುವು ನ್ಯಾಯವು
ಅನ್ಯಾಯಕ್ಕಿಂತ ಹೆಚ್ಚು
ಕೊಳೆದು ಸಹ ಹೋಗಿರಬಹುದು….!!

ನೀವು ಬದುಕಿರುವಾಗ
ನೀಡದೇ ಅವಿತು ಇಟ್ಟು,…..
ಮರಣದ ನಂತರ
ನೀಡುವ ಯಾವುದೇ
ವಸ್ತುಗಳಿಗೂ……,
ಸಾವಿನ ವಾಸನೆ…
ಅಪರಾಧ ಭಾವನೆಯ
ಸಂಕಟವು ಮಾತ್ರ ಇರುತ್ತದೆ…!!!.


ಮಲಯಾಳಂ ಮೂಲ: ಸೋಮನ್ ಕಡಲೂರು.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.

About The Author

Leave a Reply

You cannot copy content of this page

Scroll to Top