ಕಾವ್ಯ ಸಂಗಾತಿ
ಕಲ್ಪನಾ ಎಸ್ ಪಾಟೀಲ
“ಗೆಳತಿ”


ಮರೆತಿಲ್ಲ ಗೆಳತಿ ನಿನಗೆ ಕೊಟ್ಟ ಮಾತ
ಅರಿತಿರುವೆ ನಿನ್ನ ಮನವ ನಾ ಏನಂತ!
ಸರಿದು ಸಾಗದಿರು ಕೇಳಿ ನೀ ಯಾರಂತ.!
ಜನುಮದ ಬಂಧಕೆ ಸಾಕ್ಷಿ ಬೇಕಿಲ್ಲ
ಅನುದಿನವು ಜೊತೆ ಇದ್ದರೆ ಸಾಕಲ್ಲ!
ನಾನು ನೀನು ಇಬ್ಬರಾದ್ರು ಆತ್ಮ ಒಂದಲ್ಲ.!
ಬೆನ್ನ ಮೇಲೆ ಹೊತ್ತು ಆಡಿದ ಆಟಾನ
ಇನ್ನ ಮರಿಯದಂತೆ ನಕ್ಕು ನಲಿದ ಎಳೆತನ!
ನನ್ನ ನಿನ್ನ ಬೆಸೆದ ಆ ಗೆಳೆತನ.!
ಚೆಂದಕಿಂತ ಚೆಂದಿತ್ತು ಮುಗ್ಧತೆಯು ಕೂಡಿತ್ತು
ಅಂದದ ಹಂಗು ತೊರೆದಿತ್ತು !
ನಂದು ನಿಂದೆನ್ನುವ ಭೇದ ನಮ್ಮಿಂದ ದೂರಿತ್ತು.!
ಕಲ್ಪನಾ ಎಸ್ ಪಾಟೀಲ



