ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಅದು 1983ರ ಸಮಯವಾಗಿತ್ತು.ಸ್ಟೀವ ಜಾಬ್ಸ್ ಅತ್ಯಂತ ಗಟ್ಟಿಯಾದ ನಿರ್ಧಾರಕ್ಕೆ ಬಂದಿದ್ದರು. ಟೇಬಲ್ ನ ಮತ್ತೊಂದು ಅಂಚಿಗೆ ಕುಳಿತಿದ್ದ ಪೆಪ್ಸಿ ಕಂಪನಿಯ ಅಧ್ಯಕ್ಷರಾದ ಜಾನ್ ಸ್ಕೂಲಿಯವರನ್ನು ಕುರಿತು ನೀನು ನಿನ್ನ ಬದುಕಿನ ಉಳಿದ ದಿನಗಳನ್ನು ಕೂಡ ಹೀಗೆಯೇ ಸಕ್ಕರೆ ಬೆರೆಸಿದ ನೀರನ್ನು ಮಾರಾಟ ಮಾಡುತ್ತಾ ಬದುಕಬೇಕು ಎಂದುಕೊಳ್ಳುವೆಯಾ? ಅಥವಾ  ಜಗತ್ತನ್ನು ಬದಲಾಯಿಸುವ ಇಚ್ಛೆ ಇದ್ದರೆ ನನ್ನೊಂದಿಗೆ ಬಂದು ಸೇರಿಕೊಳ್ಳುವಿರಾ? ಎಂದು ಗಟ್ಟಿಯಾಗಿ ಹೇಳಿದರು.

ಎರಡನೇ ಮಾತಿಲ್ಲದೆ ಸ್ಕೂಲಿ ಅವರೊಂದಿಗೆ ಕೈಜೋಡಿಸಿದರು. ಅದೊಂದು ಅತ್ಯಂತ ದೃಢ ಮತ್ತು ಸಾಹಸಮಯವಾದ ನಿರ್ಧಾರವಾಗಿತ್ತು.. ಓರ್ವ ಸಣ್ಣ ವಯಸ್ಸಿನ ಯುವಕ ಪೆಪ್ಸಿ ಕಂಪನಿಯ ಮಾಲೀಕ ಮತ್ತು ಸಿಇಒ ಆದ ವ್ಯಕ್ತಿಯನ್ನು ಒಪ್ಪಿಸಿ ಇಂಥದೊಂದು ನಿರ್ಧಾರಕ್ಕೆ ತರುವುದು ಎಂದರೆ ಅಂತಿಂಥ ಮಾತಲ್ಲ? ಈಗಾಗಲೇ ಯಶಸ್ಸಿನ ಉತ್ತುಂಗದಲ್ಲಿರುವ, ಒಂದು ಕಂಪನಿಯನ್ನು ಬಿಟ್ಟು ಆಗತಾನೆ ಆರಂಭವಾದ ತನ್ನ ಸ್ಟಾರ್ಟ್ ಅಪ್ ಕಂಪನಿಗೆ ಕರೆತರುವುದು. ಕೇವಲ 28 ವರ್ಷದ ಜಾಬ್ಸ್ ತನಗಿಂತ 16 ವರ್ಷ ಹಿರಿಯರಾದ 44ರ ಹರೆಯದ ಸ್ಕೂಲಿ ಅವರೊಂದಿಗೆ ಮಾತನಾಡಿ ಅವರನ್ನು ತಮ್ಮ ಕಂಪನಿಗೆ ಕರೆತಂದದ್ದು ಅದ್ಭುತವೇ ಸರಿ.

 ಇದು ಏನೇ ಆಗಿರಲಿ…ಮುಂದಿನ ಎರಡು ವರ್ಷಗಳಲ್ಲಿ
 ಉದ್ದಿಮೆಯ ಇತಿಹಾಸದಲ್ಲಿಯೇ ಅತಿ ದೊಡ್ಡ ಮೋಸ
ಸ್ಟೀವ ಜಾಬ್ಸ್ ಗೆ ಆಯ್ತು. ತನ್ನದೇ ಕಂಪನಿಯಿಂದ ಆತ ಹೊರಹಾಕಲ್ಪಟ್ಟ…. ಅದೂ ತಾನೇ ಕರೆ ತಂದು ತನ್ನ ಕಂಪನಿಯಲ್ಲಿ ಅವಕಾಶ ಮಾಡಿಕೊಟ್ಟ ಸ್ಕೂಲಿಯಿಂದ.
 ಸ್ಟೀವ ಜಾಬ್ಸ್ ನನ್ನು ಆತನದ್ದೆ ಕಂಪನಿಯಿಂದ ಹೊರಹಾಕಲು ಕಾರಣವಾದ ಸ್ಕೂಲಿ ಬೋರ್ಡ್ ರೂಮ್ ನ ಅತಿಹೆಚ್ಚಿನ ಓಟುಗಳನ್ನು ಪಡೆದುಕೊಂಡನು.

 ಇದನ್ನು ನೀವು ನಂಬಲೇಬೇಕು. ಸ್ಟೀವ್ ಜಾಬ್ ತನ್ನದೇ ಆಪಲ್ ಕಂಪನಿಯಿಂದ ಹೊರ ಬಂದ..
 ಆದರೆ ನಿಜವಾದ ಕಥೆ ಏನು? ಇದು ಕೇವಲ ಅಹಂ ಭಾವದ ಪ್ರಶ್ನೆ ಅಲ್ಲ. ಇಲ್ಲಿ ಪ್ರಶ್ನೆ ಇದ್ದದ್ದು ದೂರ ದೃಷ್ಟಿ ಮತ್ತು ಇಬ್ಬರು ನಾಯಕರು ಕಂಡುಕೊಂಡ ಎರಡು ವಿಭಿನ್ನ ಭವಿಷ್ಯಗಳಲ್ಲಿ.

 ಮತ್ತೊಮ್ಮೆ ಹಿಂತಿರುಗಿ ನೋಡಿದಾಗ…… ಆಪಲ್ ಕಂಪನಿಯು ಅತ್ಯಂತ ವೇಗವಾಗಿ ಬೆಳೆಯುತ್ತಿತ್ತು. ಕಡು ಮೇಧಾವಿಯಾಗಿದ್ದ ಸ್ಟೀವ್ ಜಾಬ್ಸ್ ಕ್ರಿಯಾಶೀಲತೆಯ ಜೊತೆಗೆ ಅಸ್ತವ್ಯಸ್ತತೆಯನ್ನು ಮೈಗೂಡಿಸಿಕೊಂಡಿದ್ದ.
 ಆತ ಜನರನ್ನು ಪ್ರಭಾವಿಸಿದ್ದ… ಜನರು ತನ್ನ ಮೇಲೆ ಮುಗಿ ಬೀಳುವಂತೆ ಮಾಡುತ್ತಿದ್ದ.
 ಆಪಲ್ ಕಂಪನಿಗೆ ಆಗ ಬೇಕಾಗಿದ್ದುದು ಒಂದು ರಚನಾತ್ಮಕ ಭವಿಷ್ಯ, ಆದರೆ ಅದನ್ನು ಜಾಬ್ಸ್ ನಿಂದ ಕೊಡಲು ಸಾಧ್ಯವಾಗಲಿಲ್ಲ.. ಕ್ರಿಯಾಶೀಲ ವ್ಯಕ್ತಿಗಳಲ್ಲಿ ಶಿಸ್ತಿನ ಕೊರತೆ ಇರುತ್ತದೆ. ಆಪಲ್ ಕಂಪನಿಯ ಹೂಡಿಕೆದಾರರಿಗೆ ಓರ್ವ ಜವಾಬ್ದಾರಿಯುತ ಹಿರಿಯ ವ್ಯಕ್ತಿಯ ಅವಶ್ಯಕತೆ ಇತ್ತು. ಜಾಬ್ಸ್  ಹಿರಿಯನನ್ನೇನೋ ತಂದಿದ್ದ. ಸ್ಕೂಲಿ ನುರಿತ ಕಾರ್ಯನಿರ್ವಾಹಕ ಮತ್ತು ಅತ್ಯಂತ ಚುರುಕಾದ ವ್ಯವಹಾರ ಪ್ರಜ್ಞೆಯುಳ್ಳ ವ್ಯಕ್ತಿ. ತನ್ನ ಮಾರ್ಕೆಟಿಂಗ್ ತಂತ್ರದಿಂದಲೇ ಪೆಪ್ಸಿ ಕಂಪನಿಯನ್ನು ಅತ್ಯುನ್ನತ ಸ್ಥಿತಿಗೆ ಸ್ಕೂಲಿ ಕೊಂಡೊಯ್ದಿದ್ದ. ತನ್ನ ವ್ಯವಹಾರವನ್ನು ಕೂಡ ಸ್ಕೂಲಿ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಾನೆ ಎಂಬ ಆಶಯದಿಂದ ಸಂಪೂರ್ಣ ವ್ಯವಹಾರವನ್ನು ಆತನ ಕೈಗಿಟ್ಟು, ಜಾಬ್ಸ್ ತಾನು ಜಗತ್ತನ್ನು ಬದಲಿಸುವೆಡೆ ತನ್ನ ಗಮನವನ್ನು ಹರಿಸಿದ್ದ.

 ಮನುಷ್ಯರಂತೆ ವರ್ತಿಸುವ ಮತ್ತು ವ್ಯವಹರಿಸುವ ಮಿಸಿಂತೋಷ್ ಎಂಬ ಕಂಪ್ಯೂಟರ್ ಮಾನವನನ್ನು ತಯಾರಿಸುವ ಕಾರ್ಯದಲ್ಲಿ ಜಾಬ್ಸ್ ನಿರತನಾಗಿದ್ದ.
 ನಿದ್ದೆ ಇಲ್ಲದ ರಾತ್ರಿಗಳು ಅತಿ ದೊಡ್ಡ ಪ್ರಮಾಣದಲ್ಲಿ ಹಣಕಾಸು ಮತ್ತು ವಿಪರೀತ ಪರಿಪೂರ್ಣತೆಯನ್ನು ಬೇಡುವ ಈ ಕೆಲಸದಲ್ಲಿ ಆತನ ತಂಡದಲ್ಲಿದ್ದ ಎಲ್ಲಾ ಸದಸ್ಯರು ಬಸವಳಿದರು. 1984 ರಲ್ಲಿ ಮಿಸಿಂತೋಷ್
 ಯಂತ್ರ ಮಾನವನನ್ನು ಬಿಡುಗಡೆ ಮಾಡಲಾಯಿತಾದರೂ ಅದು ದೊಡ್ಡ ಮಟ್ಟದಲ್ಲಿ ವಿಫಲವಾಯಿತು.

 ಅದೊಂದು ಅದ್ಭುತವಾದ ಯಂತ್ರವಾಗಿತ್ತು ಕ್ರಾಂತಿಕಾರಕ ಬದಲಾವಣೆಯನ್ನು ತರಬಲ್ಲ ಈ ಯಂತ್ರವು ಅತ್ಯಂತ ದುಬಾರಿಯಾಗಿದ್ದು ತನ್ನ ಕಾರ್ಯ ನಿರ್ವಹಣೆಯಲ್ಲಿ ನಿಧಾನ ಗತಿಯನ್ನು ತೋರುತ್ತಿತ್ತು.

 ಆಪಲ್ ಕಂಪನಿಯಲ್ಲಿದ್ದ ಹಣ ನಿಧಾನವಾಗಿ ಕರಗತೊಡಗಿತು ಮತ್ತು ಸಂಸ್ಥೆಯಲ್ಲಿ ಕಳವಳ ಹೆಚ್ಚಾಗ ತೊಡಗಿತು.

 ಸ್ಕೂಲಿಯ ಸಾಕಷ್ಟು ಪ್ರಯತ್ನದ ನಂತರವೂ ಜಾಬ್ಸ್
 ಯಾವುದೇ ರೀತಿಯ ಹೊಂದಾಣಿಕೆಗೆ ತಯಾರಾಗಲಿಲ್ಲ… ಪಾಲುಗಾರಿಕೆಯಲ್ಲಿ ಆರಂಭವಾದ ವ್ಯವಹಾರ ಇದೀಗ ಅಧಿಕಾರಶಾಹಿಯ ಜಗಳಕ್ಕೆ ನಾಂದಿ ಹಾಡಿತು. ಅಜಾಗರೂಕತೆಯಿಂದ ವರ್ತಿಸುವ ಸ್ಟೀವ್ ಜಾಬ್ಸ್ ಇನ್ನು ಮುಂದೆ ಕಂಪನಿಯನ್ನು ನಡೆಸಲಾರ ಎಂದು ಸ್ಕೂಲಿ ನಿರ್ಣಯ ಮಾಡಿದ…. ಆತ ಬೋರ್ಡ್ ನ ಎಲ್ಲ ಸದಸ್ಯರ ಬಳಿ ತನ್ನ ಈ ಅಹವಾಲನ್ನು ಕೊಂಡೊಯ್ದ….. ಮತ್ತು ಆತನ ಮಾತಿಗೆ ಬೋರ್ಡ್ ನ ಎಲ್ಲ ಸದಸ್ಯರು ಸಮ್ಮತಿಸಿದರು.

 ಅಂತಿಮವಾಗಿ 1985ರಲ್ಲಿ ಆತನೇ ಆರಿಸಿದ, ಆತನೇ ನೌಕರಿಗೆ ಇಟ್ಟುಕೊಂಡ ಜನರು ಜಾಬ್ಸ್ ನನ್ನು ಆತನದ್ದೆ ಕಂಪನಿಯಿಂದ ಹೊರ ಹಾಕಿ ಕಂಪನಿಯಲ್ಲಿನ ಆತನ ಎಲ್ಲಾ ವ್ಯವಹಾರಿಕ ಜವಾಬ್ದಾರಿಗಳನ್ನು ಮೊಟಕುಗೊಳಿಸಿದರು. ಆತನ ಎಲ್ಲ ವ್ಯವಹಾರಿಕ ಶಕ್ತಿಯನ್ನು ಆತನಿಂದ ಕಸಿದುಕೊಳ್ಳಲಾಯಿತು.

 ಪುಟ್ಟ ಗ್ಯಾರೇಜ್ ಒಂದರಲ್ಲಿ ಆರಂಭಿಸಿದ ಕಂಪನಿ ಇಂದು ಆತನ ಕೈ ಬಿಟ್ಟು ಹೋಗಿತ್ತು. ತನ್ನ 30ನೆಯ ವರ್ಷದಲ್ಲಿ ಆತ ಆರಂಭಿಸಿ ತನ್ನದೆಲ್ಲವನ್ನು ಅರ್ಪಿಸಿದ ಸಂಸ್ಥೆಯಿಂದ ಆತ ಇಂದು ತಾನೇ ಹೊರ ಹಾಕಲ್ಪಟ್ಟ.
 ಅದೊಂದು ವಿಷಯವೇ ಸಾಕಿತ್ತು ಒಬ್ಬ ವ್ಯಕ್ತಿಯ  ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡಲು, ಆದರೆ ಜಾಬ್ಸ್ ಅಸಾಧ್ಯ ವ್ಯಕ್ತಿ

 ಹೃದಯ ಛಿದ್ರಗೊಂಡಂತಹ ವೇದನೆಯನ್ನು ಅನುಭವಿಸಿ ಆಪಲ್ ನಿಂದ ಹೊರ ಬಿದ್ದ ಜಾಬ್ಸ್ ನ ಆತ್ಮಸ್ಥೈರ್ಯ ಮಾತ್ರ ಕುಸಿಯಲಿಲ್ಲ.. ಆತ ತನ್ನ  ಕ್ರಿಯಾಶೀಲತೆ ಮತ್ತು ಅಪ್ರತಿಮ ಜಾಣ್ಮೆಯನ್ನು  ಮತ್ತೊಂದು ಎತ್ತರಕ್ಕೆ ಕೊಂಡೊಯ್ದ.

 ಆತ ಮತ್ತೆ ಎರಡು ಹೊಸ ಸಂಸ್ಥೆಗಳನ್ನು ಆರಂಭಿಸಿದ….
 ನೆಕ್ಸ್ಟ್  NeXT — ಎ ಪವರ ಫುಲ್ ಕಂಪ್ಯೂಟರ್ ಪ್ಲಾಟ್ ಫಾರ್ಮ್  
 ಪಿಕ್ಸರ್….ಟಾಯ ಸ್ಟೋರಿಗಳನ್ನು ತಯಾರಿಸುವ ಅನಿಮೇಷನ್ ಸ್ಟುಡಿಯೋವನ್ನು ಆರಂಭಿಸಿದ ಇವೆರಡು ಅತಿ ಹೆಚ್ಚಿನ ಯಶಸ್ಸನ್ನು ಗಳಿಸಿದವು.

 1997ರಲ್ಲಿ ಆಪಲ್ ಕಂಪನಿಯು ಮುಗ್ಗಟ್ಟಿಗೆ ಸಿಲುಕಿತು ಮತ್ತು ಇನ್ನೇನು ಮುಚ್ಚಿ ಹೋಗುವ ಹಂತದಲ್ಲಿತ್ತು… ಆಗ ಮತ್ತೆ ಅದನ್ನು ಕೈಹಿಡಿದು ಮೇಲೆತ್ತಿದಾತ ಸ್ಟೀವ ಜಾಬ್ಸ್… ಯಾವುದೇ ರೀತಿಯ ಕಿರಿಕಿರಿ ಮತ್ತು ಮುಜುಗರಗಳಿಗೆ ಅವಕಾಶವಿಲ್ಲದಂತೆ ಆತ ಮತ್ತೆ ಹಿಂತಿರುಗಿದ.

 ಮುಂದಿನ 10 ವರ್ಷಗಳಲ್ಲಿ ಆತ ಆಪಲ್ ಸಂಸ್ಥೆಯ ಐ ಫೋನ್, ಐ ಪ್ಯಾಡ್ ಮತ್ತು ಐ ಪಾಡ್ ಗಳನ್ನು
 ಮಾರುಕಟ್ಟೆಗೆ ಬಿಟ್ಟ.

ತಾನು ನಡೆಸಿದ ಸಂಸ್ಥೆಯಲ್ಲಿ ತನ್ನನ್ನೇ ಹೊರಹಾಕಲ್ಪಟ್ಟರೂ ಮತ್ತೆ ಅದೇ ಸಂಸ್ಥೆಯಲ್ಲಿ ಸೇರಿಕೊಂಡು ಅತ್ಯದ್ಭುತವಾಗಿ ಕಾರ್ಯನಿರ್ವಹಿಸಿ ಔದ್ಯಮಿಕ ಇತಿಹಾಸದ ಪುಟಗಳಲ್ಲಿ ಸೇರಿದ.

ನೋಡಿದಿರಾ ಸ್ನೇಹಿತರೆ…. ನಮ್ಮ ಶಕ್ತಿ ಮತ್ತು ಸಾಮರ್ಥ್ಯಗಳು ನಮ್ಮ ಬದುಕಿನ ಅತಿ ದೊಡ್ಡ ಆಸ್ತಿಗಳು. ಭೌತಿಕವಾಗಿ ನಾವು ಬಹಳಷ್ಟು  ವಸ್ತುಗಳನ್ನು ಕಳೆದುಕೊಳ್ಳುತ್ತೇವೆ ಆದರೆ ನಮ್ಮಲ್ಲಿರುವ ಮಾನಸಿಕ ಶಕ್ತಿಯನ್ನು, ದೈಹಿಕ ಸಾಮರ್ಥ್ಯವನ್ನು ನಮ್ಮಿಂದ ಯಾರೂ ಕಸಿಯಲಾರರು.

 ಸ್ನೇಹಿತರೆ ಸ್ಟೀವ್ ಜಾಬ್ ನಂತಹ ಮೇಧಾವಿಗಳಿಂದ  ನಾವು ಕಲಿಯಬಹುದಾದ ಪಾಠವೆಂದರೆ ದೂರದರ್ಶಿತ್ವ ವನ್ನು ಹೊಂದಿರುವ ವ್ಯಕ್ತಿಗಳನ್ನು ನಿರ್ವಹಿಸುವುದು ಕಷ್ಟವಾಗಬಹುದು ಆದರೆ ‘ರವಿ ಕಾಣದ್ದನ್ನು ಕವಿ ಕಾಣುವ’ ಎಂಬಂತೆ ಸಾಮಾನ್ಯ ಜನರಿಗೆ ಕಾಣದೆ ಹೋಗುವ ವಿಷಯಗಳನ್ನು ಇಂತಹ ಅಸಾಮಾನ್ಯರು ಕಂಡುಕೊಂಡಿರುತ್ತಾರೆ. ವ್ಯವಸ್ಥೆಗೆ ಅವರು ಹೊಂದಿಕೊಳ್ಳುವುದಿಲ್ಲ ಎಂಬುದಕ್ಕಾಗಿ ಅವರನ್ನು ದೂರವಿಡುವವರು ಅವರೇ ಒಂದು ವ್ಯವಸ್ಥೆಯನ್ನು ಸೃಷ್ಟಿಸುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು.

 ನಾಯಕತ್ವ ಎಂಬುದು ಕೇವಲ ಇತರರನ್ನು ಹಿಡಿತದಲ್ಲಿ ಇಡುವುದು ಖಂಡಿತವಾಗಿಯೂ ಅಲ್ಲ…. ಇದೊಂದು ನಿರ್ದೇಶಕನ ಕೆಲಸ. ಆಪಲ್ ಕಂಪನಿಯು ನಿಯತವಾಗಿ ನಡೆಯಲು ಸ್ಕೂಲಿ ಸಹಾಯ ಮಾಡಿದರೆ
 ಆಪಲ್ ಕಂಪನಿಗೆ ಆತ್ಮವನ್ನು ನೀಡಿದವನು ಸ್ಟೀವ ಜಾಬ್ಸ್.

 ಸೋಲು ಬದುಕಿನ ಮುಕ್ತಾಯವಲ್ಲ… ಸೋಲೆಂಬುದು ಅಂತ್ಯವಲ್ಲ… ಅದು ಹೊಸ ಬದುಕಿಗೆ ಆರಂಭ. ಕನಸುಗಳು ಎಂದೂ ಸಾಯುವುದಿಲ್ಲ… ಅವು ನಮ್ಮನ್ನು ಬದುಕಲು ಪ್ರೇರೇಪಿಸುತ್ತವೆ.

 ನಿಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಡಿ…. ಇಡೀ ಜಗತ್ತು ನಿಮ್ಮನ್ನು ವಿರೋಧಿಸಿದರೂ ನೀವು ಕೈಗೊಂಡಿರುವ ಕೆಲಸವನ್ನು ಕೈ ಬಿಡಬೇಡಿ

 ಆರಾಮದಾಯಕ ಜೀವನ ಶೈಲಿಯಲ್ಲಿ ದಂತ ಕಥೆಗಳು ಹುಟ್ಟುವುದಿಲ್ಲ… ದಂತ ಕಥೆಗಳು ಹುಟ್ಟುವುದು ತಿರಸ್ಕಾರ, ಅಪಾಯ ಮತ್ತು ತೀವ್ರ ಸಂಶೋಧನೆಗಳ ಮೂಲಕ ಹುಟ್ಟುತ್ತವೆ.

 ಜಾಬ್ಸ್ ಕೇವಲ ಆಪಲ್ ಕಂಪನಿಯನ್ನು ನಿರ್ಮಿಸಲಿಲ್ಲ..  ಆತ ಒಂದು ಹೊಸ ಸಂಸ್ಕೃತಿಗೆ ನಾಂದಿ ಹಾಡಿದ. ತಂತ್ರಜ್ಞಾನಕ್ಕೆ ಮಾನವತೆಯ ಸ್ಪರ್ಶ ನೀಡಿದ. ತನ್ನನ್ನು ಸಂಸ್ಥೆಯಿಂದ ಹೊರ ಹಾಕಿದರೂ ಕೂಡ ಅದೇ ಸಂಸ್ಥೆಯನ್ನು ಮತ್ತೆ ಸೇರಿ ಜಾಗತಿಕ ಪರಿವರ್ತನೆಗೆ ಒಳ್ಳೆಯ ಹಾದಿಯನ್ನು ತೋರಿದ.

 ನೋಡಿದಿರಾ ಸ್ನೇಹಿತರೆ…. ಪ್ರತಿ ಯಶಸ್ಸು ಕೂಡ ತನ್ನ ಹಿಂದೆ ನೂರಾರು ಅಪಮಾನಗಳು, ತಿರಸ್ಕಾರಗಳು ಮತ್ತು ನಿದ್ರೆ ಇಲ್ಲದ ರಾತ್ರಿಗಳನ್ನು ಕಂಡಿರುತ್ತದೆ. ಹಸಿವು, ಬಡತನಗಳ ಜೊತೆ ಜೊತೆಗೆ ಅವಹೇಳನ ಮತ್ತು ಕೀಳರಿಮೆಗಳು ಕೂಡ ಕಾಡಿರುತ್ತದೆ.

 ಆದರೆ ನೆನಪಿಡಬೇಕಾದ ಒಂದು ಸತ್ಯ ಹೇಗಿದೆ , ಯಾವ ಕ್ಷಣದಲ್ಲಿ ನಾವು ಸೋತು ಇನ್ನೇನು ನಮ್ಮ ಬದುಕಿನಲ್ಲಿ ಏನು ಸಾಧಿಸಲು ಸಾಧ್ಯವಿಲ್ಲ ಎಂದು ನಾವು ಸೋತು ಶರಣಾಗುತ್ತೇವೆಯೋ ಅಲ್ಲಿಂದಲೇ ನಮ್ಮ ಸಾಧನೆಯ ಹಾದಿ ಆರಂಭವಾಗುತ್ತದೆ. ಅವಡುಗಚ್ಚಿ, ಬೆವರಿಗಿಂತ ಹೆಚ್ಚು ರಕ್ತ ಸುರಿಸಿ, ತಹತಹಿಸುತ್ತ ಸಾಧನೆಯ ಒಂದೊಂದೇ ಮೆಟ್ಟಿಲನ್ನು ಏರಲು ಮುನ್ನುಡಿಯಾಗುತ್ತದೆ.
 ಅಂತಹವರು ಕೇವಲ ಇತಿಹಾಸವನ್ನು ನಿರ್ಮಿಸುವುದಿಲ್ಲ ಬದಲಾಗಿ ತಾವೇ ಇತಿಹಾಸವಾಗುತ್ತಾರೆ. ಏನಂತೀರಾ?


About The Author

Leave a Reply

You cannot copy content of this page

Scroll to Top