ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೃಷಿ ನಮ್ಮ ನೆಲದ ಉದ್ಯೋಗ. ಭಾರತಕ್ಕೆ ಎಷ್ಟೇ ವಿವಿಧ ವಲಯಗಳಿಂದ ಆದಾಯ ಬಂದರೂ ಸಹ ಈಗಲೂ ದೇಶಕ್ಕೆ ಅತಿ ಹೆಚ್ಚು ಆದಾಯ ತಂದು ಕೊಡುತ್ತಿರುವ ವಲಯವೆಂದರೆ ಅದು ಕೃಷಿ. ಪ್ರಸ್ತುತ ಕೃಷಿ ಕೇವಲ ಬೆಳೆ ಬೆಳೆಯುವ ಕ್ರಮವಾಗಿ ಮಾತ್ರ ಉಳಿಯದೆ, ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಅವೇ ಇಂದು ಕೃಷಿಯೇತರ ಚಟುವಟಿಕೆಗಳು ಎಂದು ಕರೆಯಲ್ಪಟ್ಟಿವೆ. ಇದರಲ್ಲಿ ಪ್ರಮುಖವಾದದ್ದು ಪಶುಸಂಗೋಪನೆ. ತಾನು ಬೆಳೆದ ಬೆಳೆಯ ಕಠಾವಿನ ನಂತರ ಉಳಿದ ಕಡ್ಡಿ, ಹುಲ್ಲು, ತೌಡು ಮುಂತಾದ ಪದಾರ್ಥಗಳನ್ನು ವ್ಯರ್ಥ ಮಾಡುವ ಬದಲಿಗೆ ರೈತರು ಅವೆಲ್ಲವನ್ನು ಪಶುಸಂಗೋಪನೆಯ ಆಹಾರ ಪದಾರ್ಥಗಳಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಆರ್ಥಿಕವಾಗಿಯೂ ಸಬಲರಾಗುತ್ತಿದ್ದಾರೆ. ಈ ಪಶುಸಂಗೋಪನೆಗೆ ಸರ್ಕಾರವು ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಅಡಿಯಲ್ಲಿ ಹಲವು ಪೂರಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಅವು ರೈತರಿಗೆ ಸಹಾಯಧನ, ಸಲಹೆ ಹಾಗೂ ಬೆನ್ನೆಲುಬಾಗಿ ನಿಂತು ಅವರ ಆರ್ಥಿಕತೆಯನ್ನು ಹೆಚ್ಚಿಸಲು ಮತ್ತಷ್ಟು ಸಹಾಯ ಮಾಡುತ್ತಿವೆ. ಇಂತಹ ಯೋಜನೆಗಳು ಎಲ್ಲಾ ರೈತರಿಗೆ ತಿಳಿಯುವುದು ಅತ್ಯಗತ್ಯ.

1. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪಶುಭಾಗ್ಯ ಯೋಜನೆ

ಯೋಜನೆಯ ಉದ್ದೇಶ

ರೈತರ ಆರ್ಥಿಕ ಪರಿಸ್ಥಿತ ಸುಧಾರಿಸುವುದು

ಯೋಜನೆಯಿಂದ ದೊರೆಯುವ ಸೌಲಭ್ಯಗಳು

ಹೈನು ರಾಸು/ಕುರಿ/ಮೇಕೆ /ಹಂದಿ/ಕೋಳಿ ಖರೀದಿಸಲು ಬ್ಯಾಂಕಿನಿಂದ ಸಾಲ ಮತ್ತು ಇಲಾಖೆಯಿಂದ ಸಹಾಯಧನವನ್ನು ಫಲಾನುಭವಿಗಳಿಗೆ ನೀಡುವುದು.

ಜಾನುವಾರು ಉತ್ಪನ್ನಗಳಾದ ಹಾಲು, ಮಾಂಸ ಹಾಗೂ ಮೊಟ್ಟೆ ಉತ್ಪಾದನೆ ಹೆಚ್ಚು ಮಾಡಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.

ಯೋಜನೆಯಿಂದ ದೊರೆಯುವ ರಿಯಾಯಿತಿಗಳು

ಎರಡು ಹಸು, ಎಮ್ಮೆ ಹೈನುಗಾರಿಕೆ ಘಟಕ ಸ್ಥಾಪನೆಗೆ

ಕುರಿ/ಮೇಕೆ ಘಟಕ/ ಹಂದಿ ಘಟಕ

500 ಮಾಂಸದ ಕೋಳಿ ಘಟಕ

250 ಮೊಟ್ಟೆ ಕೋಳಿ ಘಟಕ

2. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೇವು ಕತ್ತರಿಸುವ ಯಂತ್ರಗಳ ವಿತರಣೆ

ಯೋಜನೆಯ ಉದ್ದೇಶ

ಒಣ/ಹಸಿರು ಮೇವನ್ನು ಕತ್ತರಿಸಿ ಜಾನುವಾರುಗಳಿಗೆ ನೀಡುವುದರಿಂದ ಮೇವಿನ ಉಳಿತಾಯವಾಗುವುದು.

ಜಾನುವಾರುಗಳು ಹೆಚ್ಚು ಮೇವು ಸೇವಿಸಲು ಅನುಕೂಲವಾಗುವುದು.

ಯೋಜನೆಯಿಂದ ದೊರೆಯುವ ಸೌಲಭ್ಯಗಳು

ಎಲ್ಲಾ ರೈತರಿಗೆ ಶೇ.50ರಷ್ಟು ಸಹಾಯಧನದಲ್ಲಿ ಮೇವು ಕತ್ತರಿಸುವ ಯಂತ್ರಗಳ ವಿತರಣೆ

ಯೋಜನೆಯಿಂದ ದೊರೆಯುವ ರಿಯಾಯಿತಿಗಳು

ಶೇ. 50 ರಷ್ಟು ಸಹಾಯಧನದಲ್ಲಿ ಮೇವು ಕತ್ತರಿಸುವ ಯಂತ್ರಗಳ ವಿತರಣೆ

HP-Rs. 16200

HP-Rs: 21870

HP-Rs: 27540

3. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೇವು ಮಿನಿಕಿಟ್ ವಿತರಣೆ/ಮೇವಿನ ಬೀಜದ ಕಿರು ಪೊಟ್ಟಣ ವಿತರಣೆ

ಯೋಜನೆಯ ಉದ್ದೇಶ

ಜಾನುವಾರುಗಳಿಗೆ ಪೌಷ್ಟಿಕವುಳ್ಳ ಹಸಿರು ಮೇವು ಒದಗಿಸುವುದು

ಯೋಜನೆಯಿಂದ ದೊರೆಯುವ ಸೌಲಭ್ಯಗಳು

ಜಮೀನು ಹಾಗೂ ಜಾನುವಾರು ಹೊಂದಿದ ರೈತರಿಗೆ ವಿವಿಧ ತಳಿಯ ಮೇವಿನ ಬೀಜಗಳಾದ ಗೋವಿನ ಜೋಳ, ಜೋಳ, ಸಜ್ಜೆ ಮತ್ತು ಕುದುರೆಮೆಂತೆ ಉಚಿತವಾಗಿ ಹಂಚುವುದು.

4. ಮಹಿಳೆಯರಿಗಾಗಿ ಹೈನುಗಾರಿಕೆ ಯೋಜನೆ

ಯೋಜನೆಯ ಉದ್ದೇಶ

ನಿರಾಶ್ರಿತ ವಿಧವೆಯರ ಮತ್ತು ನಿರಾಶ್ರಿತ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆ ಈ ಯೋಜನೆಯ ಉದ್ದೇಶ.

ಯೋಜನೆಯಿಂದ ದೊರೆಯುವ ಸೌಲಭ್ಯಗಳು

ರಾಜ್ಯದಲ್ಲಿ ವಿಧವೆಯರ ಮತ್ತು ನಿರಾಶ್ರಿತ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಶೇ75ರಷ್ಟು ಸಹಾಯಧನದೊಂದಿಗೆ ಮೂರು ಕುರಿಗಳ ಅಥವಾ ಮೂರು ಮೇಕೆಗಳ ಘಟಕಗಳನ್ನು ನೀಡಲಾಗುವುದು.

ಯೋಜನೆಯಿಂದ ದೊರೆಯುವ ರಿಯಾಯಿತಿಗಳು

ಹೈನು ಘಟಕ ಸ್ಥಾಪನೆ: 2 ಹಸು ಅಥವಾ 2 ಎಮ್ಮೆ ಹೈನುಗಾರಿಕೆ ಘಟಕಕ್ಕೆ

ರೂ.1,20,000/-ಗಳ ಸಹಾಯಧನ

ಆಡು/ಮೇಕೆ ಘಟಕ : 3 ಕುರಿ ಅಥವಾ 3 ಮೇಕೆ ಘಟಕಕ್ಕೆ :10,000/- ಸಹಾಯಧನ

5. ಜಾನುವಾರು ವಿಮಾ ಯೋಜನೆ

ಯೋಜನೆಯ ಉದ್ದೇಶ

ರೈತ ಫಲಾನುಭವಿಗಳ ಜಾನುವಾರುಗಳನ್ನು 1 ವರ್ಷ/ 2 ವರ್ಷ/ 3ವರ್ಷದ ಅವಧಿಗೆ ವಿಮೆಗೆ ಒಳಪಡಿಸುವುದು

ಯೋಜನೆಯಿಂದ ದೊರೆಯುವ ಸೌಲಭ್ಯಗಳು

ಪ್ರತಿ ಫಲಾನುಭವಿಯ ಗರಿಷ್ಠ 5 ದೊಡ್ಡ ಜಾನುವಾರುಗಳು (ಹಸು/ ಎಮ್ಮೆ/ಎತ್ತು/ಹೋರಿ/ಕುದುರೆ ಇತರೆ) ಅಥವಾ 50 ಸಣ್ಣ ಜಾನುವಾರುಗಳನ್ನು ಹುರಿ/ ಮೇಕೆ/ ಹಂದಿ/ ಮೊಲ/ ಇತ್ಯಾದಿ) ವಿಮೆಗೆ ಒಳಪಡಿಸಲು ಅವಕಾಶವಿದೆ.

ಯೋಜನೆಯಿಂದ ದೊರೆಯುವ ರಿಯಾಯಿತಿಗಳು

ಒಟ್ಟು ವಿಮಾ ಪ್ರಿಮಿಯಂ ಮೊತ್ತದಲ್ಲಿ ಶೇ. 60% ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಾಯಧನ ಹಾಗೂ ಶೇ.40% ಫಲಾನುಭವಿ ಪಾಲಿನೊಂದಿಗೆ ಅನ್ವಯವಾಗುವ ಸೇವಾ ತೆರಿಗೆಯನ್ನು ಫಲಾನುಭವಿ ಭರಿಸಬೇಕು

ಜಾನುವಾರುಗಳ ಮೌಲ್ಯ ನಿಗದಿಯನ್ನು ಪ್ರತಿ ದಿನದ ಪ್ರತಿ ಲೀಟರ್ ಹಾಲು ಉತ್ಪಾದನೆ ಅನುಸಾರ ನಿಗದಿಪಡಿಸಲಾಗುವುದು.

ದನಗಳಲ್ಲಿ- ರೂ.3000/ಪ್ರತಿ ಲೀಟರ್/ ಪ್ರತಿ ದಿನ ಅನುಸಾರ. ಎಮ್ಮೆಗಳಲ್ಲಿ- ರೂ.4000/ಪ್ರತಿ ಲೀಟರ್/ ಪ್ರತಿ ದಿನ ಅನುಸಾರ.

ಇತರೆ ಜಾನುವಾರುಗಳ ಮೌಲ್ಯವನ್ನು ಮಾರುಕಟ್ಟೆ ಮೌಲ್ಯದನುಸಾರ ನಿಗದಿಪಡಿಸಲಾಗುವುದು.

6. ಹಿತ್ತಲ ಕೋಳಿ ಸಾಕಾಣಿಕೆಗೆ ಮರಿಗಳ ಉತ್ಪಾದನೆ

ಯೋಜನೆಯ ಉದ್ದೇಶ

ಗ್ರಾಮೀಣ ಭಾಗದ ಜನರ ಅಪೌಷ್ಟಿಕತೆಯ ನಿವಾರಣೆ ಗ್ರಾಮೀಣ ಭಾಗದಲ್ಲಿ ಮೊಟ್ಟೆ ಮತ್ತು ಮಾಂಸದ ಪ್ರಮಾಣದ ಸೇವನೆಯ ಪ್ರಮಾಣದಲ್ಲಿ ಹೆಚ್ಚಳ, ಗ್ರಾಮೀಣ ಭಾಗದ ಬಡ ಜನರ ಕುಟುಂಬಕ್ಕೆ ಆದಾಯ ಒದಗಿಸುವುದು.

ಯೋಜನೆಯಿಂದ ದೊರೆಯುವ ಸೌಲಭ್ಯಗಳು

ರಾಜ್ಯದಲ್ಲಿ ಹಿತ್ತಲಕೋಳಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಗಿರಿರಾಜ ಮತ್ತು ಇತರೆ ಕೋಳಿಮರಿಗಳನ್ನು ಪ್ರಾದೇಶಿಕ ಕೇಂದ್ರ, ಧಾರವಾಡದಲ್ಲಿ ಉತ್ಪಾದಿಸಿ, ಇಲಾಖೆಯ ಸಾಕಾಣಿಕೆ ಕೇಂದ್ರಗಳಿಗೆ ಸರಬರಾಜು ಮಾಡಲಾಗುವುದು.

ಸಾಕಾಣಿಕೆ ಕೇಂದ್ರಗಳು ಸದರಿ ಮರಿಗಳನ್ನು 6ನೇ ವಾರದವರೆಗೆ ಬೆಳೆಸಿ ಆಸಕ್ತ ಗ್ರಾಮೀಣ ಪ್ರದೇಶದ ಜನರಿಗೆ ವಿತರಿಸುವುದು

7. ಗ್ರಾಮೀಣ ನಿರುದ್ಯೋಗಿ ಯುವಕ/ಯುವತಿಯರಿಗೆ ಸಣ್ಣ ಪ್ರಮಾಣದ ಮಾಂಸದ ಕೋಳಿ ಘಟಕಗಳನ್ನು ಸ್ಥಾಪಿಸಲು ಸಹಾಯ

ಯೋಜನೆಯ ಉದ್ದೇಶ

ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿವತಿಯಿಂದ ಈ 500 ಮಾಂಸದ ಕೋಳಿ ಘಟಕಗಳನ್ನು ಸ್ಥಾಪಿಸಲು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ/ಯುವತಿಯರಿಗೆ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸುವುದು,

ಯೋಜನೆಯಿಂದ ದೊರೆಯುವ ಸೌಲಭ್ಯಗಳು

ಮಾಂಸದ ಕೋಳಿ ಘಟಕಗಳನ್ನು ಸ್ಥಾಪಿಸಲು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ/ ಯುವತಿಯರಿಗೆ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸುವುದು.

ಯೋಜನೆಯಿಂದ ದೊರೆಯುವ ರಿಯಾಯಿತಿಗಳು

ಮಾಂಸದ ಕೋಳಿ ಘಟಕಗಳನ್ನು ಸ್ಥಾಪಿಸಲು:

ಘಟಕದ ವೆಚ್ಚ ರೂ 1,50,000/-

8. ಕುರಿ ಮತ್ತು ಕುರಿಗಾರರಿಗೆ ವಿಮಾ ಯೋಜನೆ

ಯೋಜನೆಯ ಉದ್ದೇಶ

ಪ್ರಕೃತಿ ವಿಕೋಪ ಪರಿಹಾರ ವ್ಯಾಪ್ತಿಯಲ್ಲಿ ಬರುವ ಹಾಗೂ ವಿಮೆ ಮಾಡಿಸಿದ ಪ್ರಕರಣಗಳನ್ನು ಹೊರತುಪಡಿಸಿ ಇನ್ನುಳಿದ ಸಂದರ್ಭಗಳಲ್ಲಿ 6 ತಿಂಗಳು ಮೇಲ್ಪಟ್ಟ ಕುರಿ ಮತ್ತು ಮೇಕೆ ಆಕಸ್ಮಿಕ ಅಥವಾ ದೃಢಿಕೃತ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದಿದ ಪ್ರಕರಣಗಳಲ್ಲಿ ಕುರಿ ಮೇಕೆಗೆ ಪರಿಹಾರ ಧನ ಒದಗಿಸಲಾಗುವುದು ಈ ಯೋಜನೆಯ ಉದ್ದೇಶ.

ಯೋಜನೆಯಿಂದ ದೊರೆಯುವ ಸೌಲಭ್ಯಗಳು

ರಾಜ್ಯಾದ್ಯಂತ ಕುರಿಗಾರರಿಗೆ ಈ ಯೋಜನೆಯಡಿ ಮರಣಿಸಿದ ಕುರಿಗಳಿಗೆ ರೂ.5000-00 ಪರಿಹಾರಧನ ನೀಡುವುದು.

ಯೋಜನೆಯಿಂದ ದೊರೆಯುವ ರಿಯಾಯಿತಿಗಳು

ಮರಣ ಹೊಂದಿದ ಪ್ರಕರಣಗಳಲ್ಲಿ ಕುರಿ ಮೇಕೆಗೆ ರೂ.5000/- ಪರಿಹಾರ ಧನ ಒದಗಿಸಲಾಗುವುದು.

9. ಜಾನುವಾರು ಆರೋಗ್ಯ ಶಿಬಿರ

ಯೋಜನೆಯ ಉದ್ದೇಶ

ಜಾನುವಾರುಗಳಲ್ಲಿನ ವಿವಿಧ ಕಾಯಿಲೆಗಳಿಗೆ ಉಚಿತವಾಗಿ ತಜ್ಞವೈದ್ಯರಿಂದ ಆರೋಗ್ಯ ಶಿಬಿರ ಏರ್ಪಡಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು

ಹಸು/ಎಮ್ಮೆಗಳಲ್ಲಿ ಭಂಜೆತನ ನಿವಾರಣೆಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು

ಜಾನುವಾರುಗಳಲ್ಲಿ ಕಂಡು ಬರುವ ಹೊರ ಮತ್ತು ಒಳ ಪರೋಪ ಜೀವಿಗಳಿಗೆ ಔಷಧಿ ನೀಡುವುದು

ಯೋಜನೆಯಿಂದ ದೊರೆಯುವ ಸೌಲಭ್ಯಗಳು

ಗ್ರಾಮಗಳಲ್ಲಿ ಪಶು ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗುವುದು.

ಯೋಜನೆಯಿಂದ ದೊರೆಯುವ ರಿಯಾಯಿತಿಗಳು

ಗ್ರಾಮಗಳಲ್ಲಿ ಪಶು ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗುವುದು.

ಈ ಎಲ್ಲಾ ಯೋಜನೆಗಳು ರೈತರನ್ನು ಸ್ವಾವಲಂಬಿಯಾಗಿ ಬದುಕಲು ಬೆಂಬಲಿಸುತ್ತವೆ. ಸರ್ಕಾರ ಯೋಜನೆಗಳನ್ನು ರೂಪಿಸುವುದು ಸುಲಭ ಆದರೆ ಆ ಯೋಜನೆಗಳು ನಿಜವಾಗಿಯೂ ಸಾಕಾರಗೊಳ್ಳುವುದು ಅವುಗಳನ್ನು ಫಲಾನುಭವಿಗಳು ಬಳಸಿಕೊಂಡಾಗ ಮಾತ್ರ. ಆದ್ದರಿಂದ ಈ ಎಲ್ಲಾ ಯೋಜನೆಗಳನ್ನು ರೈತರು ಬಳಸಿಕೊಂಡು ಬೆಳೆಯುವುದು ಮುಖ್ಯವಾಗಿದೆ.



About The Author

Leave a Reply

You cannot copy content of this page

Scroll to Top