ಕಾವ್ಯ ಸಂಗಾತಿ
ಪೂರ್ಣಿಮಾ ಸಾಲೆತ್ತೂರು
ʼನಿರಾಳʼ

ಮನಸಿಗಿಂದು ಭಯ ಆತಂಕಗಳಿಲ್ಲ
ಹಸನ್ಮುಖ ಮುಗುಳ್ನಗೆಯೊಂದಿಗೆ ನಿರಾಳ
ಧನ್ಯತೆಯಿಂದ ಜೀವ ಬಾಗಿತು
ಅನುಭವದೀ ಚೇತನ ಮಾಗಿತು
ಜನನ ಮರಣಗಳ ಚಕ್ರ ಕಳಚುತ
ನೌಕೆ ಕಂಡಿತು ಭವಸಾಗರವ ದಾಟುತ
ತಲ್ಲಣಗೊಂಡ ಮನದಿ ನಿರಾಳ
ಸಂಸಾರ ಸಾಗರದಿ ದಾಟುವ ಕಾಲ
ಬೆಸೆವ ಆತುರದೀ ಮನ
ಕಂಬನಿಯಾಗಿಸಿತು ನಿನ್ನ
ಮೊರೆವ ಎದೆಯ ಗಾನ
ಮರೆತು ನಿರಾಳ ಮಧುರ ಮೌನ
ಪೂರ್ಣಿಮಾ ಸಾಲೆತ್ತೂರು




