ಕಾವ್ಯ ಸಂಗಾತಿ
ಅಶ್ವಿತಾ ಶೆಟ್ಟಿ ಇನೋಳಿ (ಮುಂಬೈ)
ʼಕಡಲ ತೀರದ ಪ್ರತಿಫಲನʼ


ಅರಬ್ಬಿ ಸಮುದ್ರದ ಮೆತ್ತನೆಯ
ಮಡಿಲಲ್ಲಿದೆ ಗಿರ್ಗಾಂವ್ ಚೌಪಾಟಿ
ತನ್ನ ಸೌಂದರ್ಯದ ಹೊದಿಕೆ ಹಾಸಿ
ಶಾಶ್ವತ ಮೋಡಿಯೊಂದಿಗೆ ತೆಕ್ಕೆಗೆ
ಬಾಚಿಕೊಂಡಿದೆ ದಕ್ಷಿಣ ಮುಂಬಯಿ !!
ಪ್ರಕೃತಿಯ ವೈಭವ! ಆಹಾ!
ಪ್ರವಾಸಿಗರಿಗೊಂದು ಸ್ವರ್ಗ
ಮೃದುವಾದ ಮರಳ ರಾಶಿ ಮೇಲೆ
ಹಗಲು ರಾತ್ರಿ ಅಪ್ಪಳಿಸುವ ಅಲೆಗಳ ಬಲೆ !!
ಸಂಜೆಯ ತಂಗಾಳಿ
ಬಾನಲಿ ಹಕ್ಕಿಗಳ ದಾಳಿ
ಸೂರ್ಯಸ್ತದ ಪ್ರಣಯದ ಸಮಯ
ಯುವ ಜೋಡಿಗಳ ಖಾಸಗಿ ವಲಯ
ಪ್ರಶಾಂತತೆಯ ಬಸಿರು
ವೃದ್ಧರ ನಿಟ್ಟುಸಿರು !!!
ಈ ನೈಸರ್ಗಿಕ ತಾಣದ ಎಡೆ
ಮಾನವನ ಕೈಗಳ ಅಡೆ.

ಚರಂಡಿಯ ಕೊಳಚೆ ನೀರು
ಪ್ಲಾಸ್ಟಿಕ್ ಅವಶೇಷಗಳು
ತೈಲ ಸೋರಿಕೆಯ ರಾಸಾಯನಿಕಗಳು
ದೇವರ ಹೆಸರಿನ ವಿಗ್ರಹಗಳು
ಕೋಸ್ಟಲ್ ರೋಡೋ
ಬೇರೆ ಏನೋ ಯೋಜನೆಗಳು !!
ಬನ್ನಿ ಆನಂದಿಸೋಣ
ದೈವಿಕ ಉಡುಗೊರೆಯನ್ನ
ಕಾಪಾಡೋಣ ಅದರ ಸೌಂದರ್ಯವನ್ನ
ನಲಿವ ಅಲೆಗಳಲ್ಲಿ
ಕಾಣೋಣ ಆತ್ಮ ಶಾಂತಿಯನ್ನ !!
ಅಶ್ವಿತಾ ಶೆಟ್ಟಿ ಇನೋಳಿ (ಮುಂಬೈ)




