ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್


ನಾವೆಲ್ಲರೂ ದೇವರ ಹತ್ತಿರ
ಬೇಡಲು ಬಂದವರಲ್ಲವೇ,
ಆ ದೇವರಿಗೂ ದೇಣಿಗೆಯ
ನೀಡಲು ಬಂದವರಲ್ಲವೇ
ಇದ್ದ ಭಾರವೆಲ್ಲ ಎದ್ದು ಬರ-
ದಂತೆ ದೇವರ ಮೇಲಿಟ್ಟು
ಇಷ್ಟಾರ್ಥ ಸಿದ್ಧಿಗೆ ಅಷ್ಟಿಷ್ಟು
ಕೊಡಲು ಬಂದವರಲ್ಲವೇ
ಗುಡಿಯ ಮುಂದಿರುವ ಹೂ,
ಹಣ್ಣು,ಕಾಯಿ,ಕರ್ಪೂರ
ನೈವೇದ್ಯವಿಟ್ಟು ಪ್ರಾರ್ಥನೆ
ಹಾಡಲು ಬಂದವರಲ್ಲವೇ
ಕಂಡ ಕಂಡ ದೇವರುಗಳ ಕೈ
ಮುಗಿದದ್ದಂತೂ ಆಗಿದೆ
ಇದ್ದೆಲ್ಲ ವೃತಗೈದು ಮಂತ್ರ
ಪಾಡಲು ಬಂದವರಲ್ಲವೇ
ಕುಂಬಾರನ ಆತ್ಮಕುಂಭದಿ
ದೇವರು ನೆಲೆಗೊಂಡಿರುವ
ಕಲ್ಲು,ಮಣ್ಣಿನ ಗುಡಿಯಲಿ
ನೋಡಲು ಬಂದವರಲ್ಲವೇ
ಎಮ್ಮಾರ್ಕೆ



