ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತೊಯ್ದು ತೊಪ್ಪೆಯಾಗಿ
ಸ್ಥಬ್ದವಾದವು ಭಾವಗಳು
ಬಳಲಿದವು ಒಳಗೊಳಗೆ
ಅಭಿವ್ಯಕ್ತಿಗೊಳಿಸಲಾರದೆ
ಏರಿಳಿತಗಳ ವಿಚಾರವಿಲ್ಲದೆ

ಸುಮ್ಮನಾದವು ಭಾವಗಳು
ಹೊರಗಣ ಜಗದ
ಕೊಂಡಿಯ ಕಳಚಿಕೊಂಡು
ಉಳಿದುಬಿಟ್ಟವು
ತನ್ನಷ್ಟಕ್ಕೆ  ತಾನೇ
ಯಾವುದೇ ಉಮೇದಿಯಿಲ್ಲದೆ

ತಟಸ್ಥವಾದವು ಭಾವಗಳು
ಹಿಂಜರಿಕೆಯ ಮೇಳದಲಿ
ಗಟ್ಟಿ ನಗಾರಿಯ ಸದ್ದಿನಲಿ
ಅಡಗಿದವು ತನ್ನಿಂದ ತಾನೇ
ನಡೆದವು ಹಿಮ್ಮುಖವಾಗಿ
ಜನನಿಬಿಢ ರಸ್ತೆಯಲಿ

ಕೊರಗಿದವು ಭಾವಗಳು
ಯಾರೂ ಕೇಳುವವರಿಲ್ಲದೆ
ಉಪಚರಿಸುವರಿಲ್ಲದೆ
ತನ್ನಲ್ಲೇ ಮಾತಾಡಿಕೊಂಡವು
ಯಾವುದರ  ಅರಿವಿಲ್ಲದೆ
ಮಿತಿಮೀರಿದ  ಅಸಹಾಯಕತೆಯಿಂದ


About The Author

2 thoughts on “ಸುಧಾ ಪಾಟೀಲ ಅವರ ಕವಿತೆʼಸುಮ್ಮನಾದ ಭಾವಗಳುʼ”

Leave a Reply

You cannot copy content of this page

Scroll to Top