ಕಾವ್ಯ ಸಂಗಾತಿ
ಸಂಜುಕುಮಾರ್ ಎಸ್ ಜಟ್ಟೆನೋರ್
ಮಲ್ಲಿಗೆ

ಮನೆಯ ಅಂಗಳದಲ್ಲಿ
ಧವಳದ ಬೆಳಕು ಚೆಲ್ಲಿ
ಮಕರಂದ ಬಿರುತಿವೆ
ಮಳೆಗೆ ತಾ ಮೈ ಚೆಲ್ಲಿ
ಸುಳಿ ಗಾಳಿಗೆ ನಲಿದಾಡಿ
ಹೂ ಹಂದರ ಹಾಕಿದೆ
ಚಿಗುರೋಡೆದ ಹಸಿರೆಲೆ
ಉಸಿರು ಗಾಳಿ ನಿಡುತಲೆ
ಮೈ ಮನ ತಣಿಸಿದೆ
ಸುಂದರ ನೀಳ ಕಾಂಡ
ಸೆಟೆದು ಬೆಳೆದು ನಿಂತು
ತಾ ಆಧಾರವಾಗಿದೆ
ಭೂ ಮಡಿಲಲ್ಲಿ ಬಿಳಿಲು
ಬೇರು ತಾ ಗಟ್ಟಿಯಾಗಿ
ಜೀವಧಾರೆ ಎನಿಸಿದೆ
ಚಿಗುರೋಡೆದ ಎಲೆಗಳೆ
ಈ ಜೀವ ಸಂಕುಲಕ್ಕೆ
ಉಸಿರಿನ ಹಸಿರೇ ನಿನಾದೆ
ನಿನು ಬಿರಿದ ಸುವಾಸನೆ
ಸೆಳೆದಿದೆ ಜಾಗವನ್ನು ನಿನ್ನ ಕಡೆ
ಮಾತುಗಳಿಲ್ಲದೆ ಹೊಗಳಿಕೆ ಎಲ್ಲಾ ಕಡೆ
ಯಾರಿಲ್ಲ ನಿನ್ನ ಸರಿಸಾಟಿ
ಹೋಗಿರುವೆ ನೀ ಎಲ್ಲರೂ ಮೇಟಿ
ಪರಿಮಳ ಬಿರುವುದೆ ನಿನ್ನ ಧಾಟಿ
ಸಂಜುಕುಮಾರ ಎಸ್ ಜಟ್ಟೆನೋರ




