ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿನಗಾಗಿ ನಿನ್ನನು ಬಿಟ್ಟಿರುವೆನೀ ಖುಷಿಯಿಂದಿರು
ನನ್ನಗುವನು ನಾ ನಗುತ ಕೊಂದಿರುವೆ  ನೀ ಸಂತಸದಿಂದಿರು

ನೀ ಕೇಳುವುದು ಹೆಚ್ಚೋ  , ನಾ ಕೊಡುವುದು ಹೆಚ್ಚೋ ಹೇಳು ಗೆಳೆಯ
ಅನುನಯಿಸಿ ಬೇಡಿದ ಅಂತರವನು, ಅನುರಾಗದಿ ನೀಡಿರುವೆ ನೀ ಆನಂದದಿಂದಿರು

ನಾ ಕೇಳದಿದ್ದರೂ ನಗುತ , ನೀ ನಲಿವು ನೀಡಿದಕೆ ಎಂದೆಂದಿಗೂ ಆಭಾರಿ
ನೀ ಕಾಣಿಕೆಯಾಗಿ ಕೇಳಿರುವೆಯೆಂದು ದೂರಾಗಿರುವೆ ನೀ ಸುಖದಿಂದಿರು

ಭಾರವಿಳಿಸುವವು  ನಿನ್ನ ಮಾತುಗಳೆನ್ನುತಾ,  ಭಾರವಾಗುತಿರುವಂತೆ ಬದಲಾಗುತ ನಡೆದೆ
ನಿನ್ನನು ಹಗುರಾಗಿಸಲೆಂದೇ ಮೌನವಾಗಿರುವೆ ನೀ ನೆಮ್ಮದಿಯಿಂದಿರು

 ಬಯಸದ ಸ್ನೇಹವನು , ಬಯಸಿ ಬಯಸಿ ನೀಡಿ ಬೇಡವಾದಳು ವಾಣಿ
  ಅಭಿಮಾನ ಉಳಿಯಲೆಂದು ಅಭಿನಂದಿಸುತ ಬದಲಾಗಿರುವೆ ನೀ ನಿಷ್ಚಿಂತೆಯಿಂದಿರು


About The Author

Leave a Reply

You cannot copy content of this page

Scroll to Top