ಕಾವ್ಯ ಸಂಗಾತಿ
ಹನಿ ಗುಬ್ಬಿ
ʼಮಲ್ಲಿಗೆ ನಗೆಯ ರವಿʼ

ಬೆಳ್ಳಂ ಬೆಳಗೆ ಅಂಗಾನೆದ್ದು
ಅಂಗೆ ಬಂದವನೇ
ಸೂರ್ಯ ಹಂಗೆ ಬಂದವ್ನೆ
ಮೇಘರಾಜನ ಮರೆಯಲಿ ನಿಂತು
ಪಳಪಳ ಹೊಳೆದವ್ನೇ
ಹೆಣ್ಣಿನ ಹಣೆಯ ಕುಂಕುಮದಂಗೆ ಕೆಂಪಾಗವ್ನೆ
ಮಂಜಿನ ಇಬ್ಬನಿ ಕರಗಿಸುವ ಮನ್ಮಥ ಇವನೇ
ಮುಗಿಲಿಗೆ ರಂಗಿನ ಬಣ್ಣವ ಚೆಲ್ಲಿ ಮೆಲ್ಲಗೆ ಬರುತ್ತವನೇ
ಪ್ರಕೃತಿಗೆ ಚೈತನ್ಯ ತಂದವನೇ
ಜೀವಸಂಕುಲಕ್ಕೆ ಬೆಳಕಾಗಿ ಬೆಳಗವನೇ
ಸೂರ್ಯ ಬಂದಾನೆ ಸೂರ್ಯ ಬಂದಾನೆ
ನೇಸರನ ರಥವನೇರಿ ಸೂರ್ಯ ಬಂದಾನೆ
ಮೆಲ್ಲಗೆ ಮೆಲ್ಲಗೆ ಮಲ್ಲಿಗೆ ನಗೆಯ ರವಿಯು ಬಂದಾನೆ
ಹನಿ ಗುಬ್ಬಿ

ಬಹಳ ಉತ್ತಮವಾದ ಕವನವಿದೆ ಸರ್
Tumba Chanagide bro