ಇಂದಿರಾ ಮೋಟೆಬೆನ್ನೂರ ಅವರ ಗಜಲ್

ಹಿಡಿದ ಕೈಯನು ಕೊಡವಿ ನಡೆವುದು ನಿನಗೇನು ಹೊಸದಲ್ಲ ಬಿಡು
ಮಿಡಿದ ಹೃದಯವ ತೊರೆದು ಬಿಡುವುದು ನಿನಗೇನು ಹೊಸದಲ್ಲ ಬಿಡು

ಮುಡಿದ ಮಲ್ಲಿಗೆಯ ಹೊಸಕಿ ಹಾಕುವುದು ನಿನಗೇನು ಹೊಸದಲ್ಲ ಬಿಡು
ತುಡಿದ ಭಾವಗಳನು ಅಳಿಸಿ ನಗುವುದು ನಿನಗೇನು ಹೊಸದಲ್ಲ ಬಿಡು

ಕಂಗಳ ಕನಸುಗಳ  ಕಸಿದು ಕರಗಿಸುವುದು ನಿನಗೇನು ಹೊಸದಲ್ಲ ಬಿಡು
ತಿಂಗಳ ಎದೆಯಂಗಳ ಕುದಿಸಿ ಎಸರಾಗಿಸುವುದು ನಿನಗೇನು ಹೊಸದಲ್ಲ ಬಿಡು

ಬಿತ್ತಿದ ಭಾವಗಳ ವ್ಯಾಪಾರ ಮಾಡುವುದು ನಿನಗೇನು ಹೊಸದಲ್ಲ ಬಿಡು
ಮುತ್ತಿದ ನೆನಪುಗಳ ಕಿತ್ತೆಸೆಯವುದು ನಿನಗೇನು ಹೊಸದಲ್ಲ ಬಿಡು

ಅರಿತು ಇಂದುವನು ಆಪಾದನೆ ಹೊರಿಸುವುದು ನಿನಗೇನು ಹೊಸದಲ್ಲ ಬಿಡು
ಬೆರೆತು ಭಾವಗಳ ಜೊತೆಗೆ ಶಶಿ ಆಟವಾಡುವುದು ನಿನಗೇನುಹೊಸದಲ್ಲ ಬಿಡು


7 thoughts on “ಇಂದಿರಾ ಮೋಟೆಬೆನ್ನೂರ ಅವರ ಗಜಲ್

Leave a Reply

Back To Top