ವಾಣಿ ಯಡಹಳ್ಳಿಮಠ ಅವರ ಗಜಲ್

ಸುಮ್ಮನೆ ಮುಗುಳ್ನಗುತ ನೋಡಿ ನಾಚಿಕೊಂಡರೇನನ್ನದೇನು ತಪ್ಪಿದೆ
ಎದೆಯು ಧಾಟಿ ಬದಲಿಸುತ ಬಡಿದುಕೊಂಡರೇನನ್ನದೇನು ತಪ್ಪಿದೆ

ಪ್ರೀತಿಯೂರಿನ ಹಾದಿಯೆಡೆಗೆ ನಾನೆಂದೂ ಪಯಣಿಸಿಯೇ ಇರಲಿಲ್ಲ
ಒಂದೊಲವಿನ ನಿನ್ನ ನೋಟಕೆ ಮನವು ಕಳೆದುಕೊಂಡರೇ ನನ್ನದೇನು ತಪ್ಪಿದೆ

ಕೇಳಿ ದೂರದಿಂದಲೇ ನಿನ್ನ ದನಿಯ ನಾಚಿ ಅರಳುತಿದ್ದೆ ನಾ
ಬಳಿ ನಿಂತು ನನ್ಹೆಸರೇ ಉಸುರಿಕೊಂಡರೇ ನನ್ನದೇನು ತಪ್ಪಿದೆ

ಹಾಡು ಗುನುಗುತಾ ನಿನ್ನ ನೆನೆಯುವ ಗೀಳು ನನಗೆ ಸಾಕಿ
ನೀ ಪ್ರತಿ ಹಾಡಲೂ ಭಾವವಾಗಿ ನುಸುಳಿಕೊಂಡರೇ ನನ್ನದೇನು ತಪ್ಪಿದೆ

ಉಡಿಯ ತುಂಬಾ ಒಲವಿನ ಕನಸುಗಳನೇ ಕಟ್ಟಿಕೊಂಡಿದ್ದಳು ವಾಣಿ
ನನಸಾಗಿ ನೀ ಬಂದು ನನ್ನೆದುರೇ ನಿಂತುಕೊಂಡರೇನನ್ನದೇನು ತಪ್ಪಿದೆ

2 thoughts on “ವಾಣಿ ಯಡಹಳ್ಳಿಮಠ ಅವರ ಗಜಲ್

Leave a Reply

Back To Top