ಶಾಂತಲಿಂಗ ಪಾಟೀಲ ಅವರ ಕವಿತೆ-ʼಪಯಣʼ

ಪಯಣ

ದೂರದ ಬೆಳಕಿನೆಡೆಗೆ
ಸಾಗಬೇಕಿದೆ,ನಾವೆಯೋ, ದೋಣಿಯೋ, ನೆಚ್ಚ ಬೇಕಿದೆ.
ದಾರಿ ಬಹುದೂರ, ಹೆದ್ದೆರೆ ಭೋರ್ಗೆರೆ ಕೆಚ್ಚೆದೆ ಬೇಕಿದೆ.
ಸುಳಿಯೋ, ಶಾರ್ಕೋ, ಜೈಸ ಬೇಕಿದೆ.
ದೂರ ದೂರದ ಬೆಳಕಿನೆಡೆಗೆ ಸಾಗಬೇಕಿದೆ!

ಕತ್ತಲೆ ದಾಟಿ, ಮೆತ್ತಗೆ ಸಾಗಬೇಕಿದೆ
ಹೊತ್ತು ಮುಳುಗುವ ಮುನ್ನ ತಟ್ಟ ಬೇಕಿದೆ ತಟ,
ಹರುಷ ಹುಡುಕುತ್ತಾ ವರುಷ ವರುಷಗಳು ನೂಕಿ ನಿಲ್ಲಬೇಕಿದೆ
ಗೆಲ್ಲಬೇಕಿದೆ!

ಸುಖವು, ಸಾಪೇಕ್ಷವೋ? ಅಪೇಕ್ಪವೋ? ,
ಸಿಗುವುದೋ?,ಸಿಗದೋ? ಅಂತೂ ಹವಣಿಕೆ ಹೊಂದಿ
ದೂರದ ಬೆಳಕಿನೆಡೆಗೆ ಸಾಗಬೇಕಿದೆ!



Leave a Reply

Back To Top