ಕಾವ್ಯಸಂಗಾತಿ
ಹಮೀದಾಬೇಗಂ ದೇಸಾಯಿ
ಜಡಿಮಳೆ

ಬಿಳಿ ಮುಗಿಲ ನೋಡ ಸರದೈತಿ
ಕರಿ ಮೋಡ ಇಳಿದು ಬಂದೈತಿ
ಬಾನೊಳಗ ಗಡಿಗೆ ಒಡದೈತಿ
ಜಡಿ ಮಳೆ ನೋಡ ಸುರದೈತಿ
ಹೊತ್ತ ಗಪ್ಪ ಅಡಗಿ ನಿಂದೈತಿ
ಮಿಂಚೊಂದ ಮಿಂಚಿ ಸುಳಿದೈತಿ
ಗುಡಗುಡಿಸಿ ಗುಡುಗು ಗುಡುಗೈತಿ
ಗಾಳಿ ಬೀಸಿ ಬೀಸಿ ಹೊಡದೈತಿ
ಬೆಳೀ ಎಲ್ಲ ಜೋಲಿ ಹೊಡದೈತಿ
ಬಾಗಿ ನೆಲಕ ಒರಗಿ ನಿಂದೈತಿ
ಭೂತಾಯಿಗೆ ಹರುಷ ತಂದೈತಿ
ಮೈತುಂಬ ಹಸಿರು ಚಂದೈತಿ

ಸಂತಸದಿ ತನುವು ತಣಿದೈತಿ
ಅದ ನೋಡಿ ಮನಸು ನಲಿದೈತಿ
ಮಳೆ ಇದ್ರ ಬದುಕು ನಮದೈತಿ
ಬೆಳೆಯಿಂದ ಲೋಕ ಉಳಿದೈತಿ…
ಹಮೀದಾಬೇಗಂ ದೇಸಾಯಿ

ತುಂಬ ಚೆನ್ನಾಗಿ ಬರೆದಿದ್ದೀರಾ ಮೇಡಂ
ಚೆನ್ನಾಗಿದೆ